Tag: ಸಂವಾದ

  • Special- ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಾದದಲ್ಲಿ ಪಾಲ್ಗೊಂಡ ನಟ-ನಟಿಯರು ಯಾರು?

    Special- ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಾದದಲ್ಲಿ ಪಾಲ್ಗೊಂಡ ನಟ-ನಟಿಯರು ಯಾರು?

    ನಿನ್ನೆ ಬೆಂಗಳೂರಿನಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆಗಿನ ಸಂವಾದದಲ್ಲಿ ಕನ್ನಡ ಸಿನಿಮಾ ರಂಗದ ಕೆಲ ಗಣ್ಯರು ಭಾಗಿಯಾಗಿದ್ದರು. ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ರಂಗದ ಸಿಲೆಬ್ರಿಟಿಗಳು ಭಾಗಿಯಾಗಿದ್ದಲ್ಲದೇ, ಅಮಿತ್ ಶಾ ಜೊತೆಗೆ ಹಲವು ವಿಷಯಗಳ ಬಗ್ಗೆ ಸಂವಾದಿಸಿದ್ದಾರೆ. ದೇಶದ ನಾನಾ ವಿಷಯಗಳ ಬಗ್ಗೆ ಚರ್ಚೆ ಕೂಡ ಮಾಡಿದ್ದಾರೆ. ನಂತರ ತಮ್ಮ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ.

    ಅಮಿತ್ ಶಾ ಜೊತೆಗಿನ ಸಂವಾದದಲ್ಲಿ ನಿರ್ದೇಶಕ ಟಿ.ಎಸ್. ನಾಗಾಭರಣ (Nagabharana), ಸೇತುರಾಮ್, ನಟ ಸುನೀಲ್ ಪುರಾಣಿಕ್, ಪ್ರಕಾಶ್ ಬೆಳವಾಡಿ (Prakash Belawadi), ನಟಿಯರಾದ ಸಂಯುಕ್ತ ಹೊರನಾಡು (Samyukta Horanadu), ಸುಧಾ ಬೆಳವಾಡಿ, ಶ್ವೇತಾ ಶ್ರೀವಾತ್ಸವ್ (Shweta Srivatsav), ಕಾರುಣ್ಯ ರಾಮ್, ಸಿರಿ ಪ್ರಹ್ಲಾದ್, ಅನಿತಾ ಭಟ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಂವಾದದ ನಂತರ ಪ್ರತಿಯೊಬ್ಬರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

    ನಟ, ನಿರ್ದೇಶಕ, ಸಂವಾದ ಕಾರ್ಯಕ್ರಮದ ನಿರೂಪಕ ಪ್ರಕಾಶ್ ಬೆಳವಾಡಿ ಮಾತನಾಡಿ, ‘ದೇಶದ ಗೃಹ ಸಚಿವರ ಜೊತೆ ಮುಕ್ತ ಸಂವಾದ ನಡೆಸೋಕೆ ಅವಕಾಶ ಸಿಗೋದು ಅಪರೂಪ. ಗೃಹ ಸಚಿವರು ಯಾವುದೇ ಪ್ರಶ್ನೆ ಕೇಳೋಕೆ ಅಡ್ಡ ಬರಲಿಲ್ಲ. ನಾನು ಬೆಂಗಳೂರಿನ ಪರವಾಗಿ ಪ್ರಶ್ನೆ ಕೇಳಿದೆ. ಎರಡು ದಿನ ನಿದ್ದೆಗೆಟ್ಟು ಪ್ರಶ್ನೆ ತಯಾರಿಸಿದ್ದೆ. ಅಮಿತ್ ಷಾ ಹೇಳಿದೆಲ್ಲ ನಡೆದರೆ ಬೆಂಗಳೂರು ಅಭಿವೃದ್ಧಿ ಆಗುತ್ತೆ. ಇಲ್ಲಿನ ಸಿಎಂ ಅರ್ಬನ್ ಡೆವೆಲಪ್ಮೆಂಟ್ ಬಗ್ಗೆ ಯೋಜನೆ ಕೊಟ್ಟಿದ್ದಾರೆ ನಾವು ಅದನ್ನು ಮತ್ತೊಮ್ಮೆ ಗೆದ್ದರೆ ತರತ್ತೇವೆ ಅಂದರು’ ಎಂದರು.

    ಸಂಯುಕ್ತಾ ಹೊರನಾಡು ಮಾತನಾಡಿ, ‘ಬೆಂಗಳೂರಿಗೆ ಕೇಳಬೇಕಾದ ಪ್ರಶ್ನೆಗಳನ್ನು ಪ್ರಕಾಶ್ ಬೆಳವಾಡಿ ಕೇಳಿದ್ರು. ಬೆಂಗಳೂರಿನ ಪಾಥ್ ಹೋಲ್, ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು. ಅಮಿತ್ ಷಾ ತುಂಬಾ ಚೆನ್ನಾಗಿ ಉತ್ತರ ಕೊಟ್ಟರು. ಮುಂದೆ ಬರುವ ಎಲೆಕ್ಷನ್ ಬಗ್ಗೆಯೂ ಉತ್ತರ ಸಿಕ್ಕಿದೆ. ನನಗೂ ತುಂಬಾ ಗೊಂದಲಗಳಿದ್ದವು. ಜಿಎಸ್ ಟಿ ಬಗ್ಗೆ, ಹಿಂದೆ ಹೇರಿಕೆ ಬಗ್ಗೆ, ಕನ್ನಡದ ಬಗ್ಗೆ ಈ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟರು’ ಎಂದರು.

    ‘ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿದವರಿಗೆ ಧನ್ಯವಾದಗಳು. ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಯಿತು. ಕರ್ನಾಟಕದ ಪರವಾಗಿ ಸಾಕಷ್ಟು ಪ್ರಶ್ನೆಗಳು ಕೇಳಿದರು. ಎಲ್ಲದಕ್ಕೂ ಉತ್ತರ ಸಿಕ್ಕಿತ್ತು.’ ಎಂದಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    12 ಸಾವಿರ ಕ್ರೀಡಾ ವೈದ್ಯರೊಂದಿಗೆ ಕ್ರಿಕೆಟ್ ದಂತಕಥೆ ಸಂವಾದ

    – ವೈದ್ಯ ಸಮುದಾಯದ ಸೇವೆಗೆ ಕೃತಜ್ಞರಾಗಿರುವೆ: ಸಚಿನ್

    ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆರೋಗ್ಯ ಹಾಗೂ ಫಿಟ್‍ಸೆಸ್ ಕುರಿತು ಯುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರು ಕ್ರೀಡಾ ಗಾಯಗಳ ಕುರಿತು ಲೈವ್ ವೆಬ್‌ನಾರ್‌ನಲ್ಲಿ ಶನಿವಾರ ಭಾಗವಹಿಸಿದರು. ಈ ವೇಳೆ ಅವರು ದೇಶಾದ್ಯಂತದ 12 ಸಾವಿರ ಯುವ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಸಚಿನ್ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆ, ಗಾಯಗಳಿಂದ ಬಳಲುತ್ತಿದ್ದರು. ಅದರಲ್ಲಿ ಪ್ರಮುಖವಾದುದು ಮೊಣಕೈ ಗಾಯ ಕೂಡ ಒಂದು.

    ಈ ಕುರಿತು ಮಾಹಿತಿ ನೀಡಿರುವ ಮೂಳೆ ತಜ್ಞ ಸುಧೀರ್ ವಾರಿಯರ್ ಅವರು, ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತದ ಅನೇಕ ಯುವ ವೈದ್ಯರು ಸಚಿನ್ ಅವರೊಂದಿಗೆ ಕ್ರೀಡಾ ಸಂಬಂಧಿತ ಗಾಯಗಳ ಬಗ್ಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಕ್ರೀಡಾ ಗಾಯಗಳಿಗೆ ಸಂಬಂಧಿಸಿದಂತೆ ಶನಿವಾರ ಸಂವಾದ ನಡೆಸಲಾಗಿದ್ದು, ಸಚಿನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತದ ಮಾಜಿ ಬ್ಯಾಟ್ಸ್‍ಮನ್, ನಿಮ್ಮ ಸೇವೆಗಾಗಿ ವೈದ್ಯ ಸಮುದಾಯಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ. ಕಾರ್ಯಕ್ರಮವು ಯುವ ವೈದ್ಯರಿಗೆ ಕಲಿಯಲು ಸಹಾಯ ಮಾಡುತ್ತದೆ ಎಂದು ಸುಧೀರ್ ವಾರಿಯರ್ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ತಂಡದ ಫಿಸಿಯೋ ನಿತಿನ್ ಪಟೇಲ್ ಅವರೊಂದಿಗೆ ಸುಧೀರ್ ವಾರಿಯರ್ ಸಂವಹನ ನಡೆಸಿದರು. ಪಟೇಲ್ ಅವರು ಈ ಹಿಂದೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಜೊತೆ ಕೆಲಸ ಮಾಡಿದ್ದರು.

  • ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ದಗಂಗಾ ಶ್ರೀ

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಕುರಿತಾಗಿ ಪ್ಲಾಸ್ಟಿಕ್ ನಿಷೇಧ, ಬಯಲು ಶೌಚ ಮುಕ್ತ, ಜಲ ಸಂರಕ್ಷಣೆ ಕುರಿತು ಮಾತನಾಡಿದ್ದು ತುಂಬಾ ಉಪಯುಕ್ತವಾಗಿದೆ ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ ಪ್ರತಿಕ್ರಿಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುವಾರ ಮಠದಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಧಾನಿಯವರೇ ಸ್ವಪ್ರೇರಣೆಯಿಂದ ಬಂದು ಪೂಜ್ಯರ ಗದ್ದುಗೆ ದರ್ಶನ ಪಡೆದಿದ್ದಾರೆ. ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು, ಜಲಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಜೊತೆಗೆ ನಾಡಿನ ಸಂತರು ಮೂರು ಸಂಕಲ್ಪ ತೊಟ್ಟು ದೇಶದ ಬದಲಾವಣೆಗೆ ಶ್ರಮಿಶಬೇಕು ಎಂದು ಕರೆ ಕೊಟ್ಟಿದ್ದಾರೆ ಎಂದರು.

    ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಇತ್ತು ಎಂದು ಮಾಧ್ಯಮದಲ್ಲಿ ತಪ್ಪಾಗಿ ಪ್ರಸಾರವಾಗಿತ್ತು. ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲಾಗಲಿ, ಮಠದ ವತಿಯಿಂದಾಗಲಿ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ಮಕ್ಕಳೊಂದಿಗೆ ಮಾತಾಡಿಲ್ಲ ಎಂಬ ವಿಚಾರ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಸಮಯದ ಅಭಾವ ಇತ್ತು. ಹಾಗಾಗಿ ಚುಟುಕಾಗಿ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಮಾತನಾಡುವವರಿದ್ದರು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೇಬಿ ಶ್ರೀ ಎಂಬ ಬಾಲನಟಿ ಪ್ರಧಾನಿಯವರಿಗೆ ಪ್ರಶ್ನೆ ಕೇಳುವ ಇಂಗಿತ ವ್ಯಕ್ತಡಿಸಿದ್ದು ನಿಜ. ಆದರೆ ನಾವು ಅವರಿಗೆ ಅವಕಾಶ ನೀಡುತ್ತೆವೆ ಎನ್ನುವುದನ್ನು ಖಾತ್ರಿ ಮಾಡಿರಲಿಲ್ಲ. ಪ್ರಶ್ನೆ ಕೇಳುವ ಸಂದರ್ಭ ಬಂದರೇ ಚೀಟಿ ಕೊಟ್ಟರೆ ಅನುಕೂಲ ಮಾಡಿಕೊಡುತ್ತೆ ಎಂದಿದ್ದೆ ಅಷ್ಟೇ ಹೊರತು ಪ್ರತ್ಯೇಕವಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಿರಲಿಲ್ಲ ಎಂದು ಒತ್ತಿ ಹೇಳಿದರು.

  • ಯಾವ ನದಿಯಲ್ಲಿ ಮುಳುಗೆದ್ರೂ ನಿಮ್ಮ ಮನಸ್ಥಿತಿ ಬದಲಾಗಲ್ಲ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಯಾವ ನದಿಯಲ್ಲಿ ಮುಳುಗೆದ್ರೂ ನಿಮ್ಮ ಮನಸ್ಥಿತಿ ಬದಲಾಗಲ್ಲ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಬೆಂಗಳೂರು: ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡಿದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

    ಸಿದ್ದರಾಮಯ್ಯ ತಮ್ಮ ಟ್ವಿಟ್ಟರಿನಲ್ಲಿ, “ಈಗ ತಾನೇ ಪ್ರಧಾನಿ ಮೋದಿ ಅವರು ಡೈಲೆಕ್ಸಿಕ್ ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ ಬಳಕೆ ಮಾಡಿರುವುದು ಗಮನಿಸಿದೆ. ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗಬೇಕು. ಇದಕ್ಕಿಂತ ಕೆಳಮಟ್ಟಕ್ಕೆ ನೀವು ಇಳಿಯಲು ಸಾಧ್ಯನೇ ಇಲ್ಲ. ಯಾವ ನದಿಯಲ್ಲಿ ಮುಳುಗೆದ್ರೂ ನಿಮ್ಮ ಮನಸ್ಥಿತಿ ಬದಲಾಗಲ್ಲ. ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿಧಾನ ಇರಬಹುದು. ಆದರೆ ನಿಮ್ಮಂತೆ ಹೃದಯ ಹೀನರಲ್ಲ. ವಿದ್ಯಾರ್ಥಿಗಳ ಕಲಿಕೆಯ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿದ ನಿಮಗೆ ನಾಚಿಕೆ ಆಗಬೇಕು” ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಕಾಲೆಳೆದ ಮೋದಿ!

    ಮೋದಿ ಹೇಳಿದ್ದೇನು?
    ಶನಿವಾರ ರಾತ್ರಿ ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್‍ನಲ್ಲಿ ಪ್ರಧಾನಿ ಜೊತೆಗಿನ ಸಂವಾದದ ವೇಳೆ ಡೆಹ್ರಾಡೂನ್‍ನ ವಿದ್ಯಾರ್ಥಿನಿಯೊಬ್ಬಳು ಡೈಲೆಕ್ಸಿಕ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಅಂದರೆ ಓದು-ಬರಹದ ಕಲಿಕೆ ನಿಧಾನಗತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಾರೇ ಜಮೀನ್ ಪರ್ ಸಿನಿಮಾದಲ್ಲಿ ನೋಡಿದಂತೆ ಈ ಮಕ್ಕಳು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲರು ಆಗಿರುತ್ತಾರೆ ಎಂದು ಹೇಳಿದಳು.

    ಈ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ 40-50 ವರ್ಷದ ಮಕ್ಕಳಿಗೂ ಈ ಕಾರ್ಯಕ್ರಮ ಉಪಯೋಗ ಆಗುತ್ತಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದರು. ಮೋದಿ ಅವರ ಈ ಉತ್ತರ ಕೇಳಿ ಅಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಬಳಿಕ “ಆಗುತ್ತೆ ಸರ್” ಎಂದು ವಿದ್ಯಾರ್ಥಿನಿ ಮೋದಿ ಅವರಿಗೆ ಉತ್ತರಿಸಿದ್ದಳು. ವಿದ್ಯಾರ್ಥಿನಿಯಿಂದ ಈ ಉತ್ತರ ಬಂದ ಕೂಡಲೇ “ಅಂಥ ಮಕ್ಕಳ ತಾಯಂದಿರು ತುಂಬಾ ಖುಷಿ ಆಗಬಹುದು” ಎಂದು ಹೇಳಿದರು. ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಮೋದಿ ಎಷ್ಟು ಸರಿ ಎಂದು ಪ್ರಶ್ನಿಸಿ ನೆಟ್ಟಿಗರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಕಾಲೆಳೆದ ಮೋದಿ!

    ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಕಾಲೆಳೆದ ಮೋದಿ!

    ನವದೆಹಲಿ: ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

    ಶನಿವಾರ ರಾತ್ರಿ ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್‍ನಲ್ಲಿ ಪ್ರಧಾನಿ ಜೊತೆಗಿನ ಸಂವಾದದ ವೇಳೆ ಡೆಹ್ರಾಡೂನ್‍ನ ವಿದ್ಯಾರ್ಥಿನಿಯೊಬ್ಬಳು ಡೈಲೆಕ್ಸಿಕ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಅಂದರೆ ಓದು-ಬರಹದ ಕಲಿಕೆ ನಿಧಾನಗತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಾರೇ ಜಮೀನ್ ಪರ್ ಸಿನಿಮಾದಲ್ಲಿ ನೋಡಿದಂತೆ ಈ ಮಕ್ಕಳು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲರು ಆಗಿರುತ್ತಾರೆ ಎಂದು ಹೇಳಿದಳು.

    ಈ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ 40-50 ವರ್ಷದ ಮಕ್ಕಳಿಗೂ ಈ ಕಾರ್ಯಕ್ರಮ ಉಪಯೋಗ ಆಗುತ್ತಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದರು. ಮೋದಿ ಅವರ ಈ ಉತ್ತರ ಕೇಳಿ ಅಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಬಳಿಕ “ಆಗುತ್ತೆ ಸರ್” ಎಂದು ವಿದ್ಯಾರ್ಥಿನಿ ಮೋದಿ ಅವರಿಗೆ ಉತ್ತರಿಸಿದ್ದಳು.

    ವಿದ್ಯಾರ್ಥಿನಿಯಿಂದ ಈ ಉತ್ತರ ಬಂದ ಕೂಡಲೇ “ಅಂಥ ಮಕ್ಕಳ ತಾಯಂದಿರು ತುಂಬಾ ಖುಷಿ ಆಗಬಹುದು” ಎಂದು ಹೇಳಿದರು. ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಮೋದಿ ಎಷ್ಟು ಸರಿ ಎಂದು ಪ್ರಶ್ನಿಸಿ ನೆಟ್ಟಿಗರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    – ಈ ಬಾರಿ ಬಹುಮತದಿಂದ ಗೆದ್ದರೆ 50 ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಖಚಿತ
    – ಕಾಂಗ್ರೆಸ್ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು

    ಬೆಂಗಳೂರು: ರಾಜಾಜಿನಗರದ ಕೆಎಲ್‍ಇ ಸೊಸೈಟಿ ಸ್ಕೂಲ್‍ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರು ವಿದ್ಯಾರ್ಥಿಗಳ ಜೊತೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಸಿದರು. ಚೈನಾ ವಸ್ತುಗಳ ಮೇಲೆ ನಿಷೇಧ ಹೇರುವುದು, ಪುಲ್ವಾಮಾ ದಾಳಿ ಸೇರಿದಂತೆ ಅನೇಕ ವಿಚಾರವಾಗಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು.

    ಪಾಕಿಸ್ತಾನ ಬಗ್ಗೆ ತಲೆಕೆಡಿಸಿಕೊಂಡಿರುವ ನಾವು ಚೀನಾವನ್ನ ಮರೆತಿರುವುದೇಕೆ? ಚೈನಾ ಉತ್ಪನ್ನಗಳ ಮೇಲೆ ನಿಷೇಧ ಏಕೆ ಹೇರುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು, ಚೈನಾ ವಸ್ತುಗಳಿಗೆ ನಿಷೇಧ ಹೇರುವುದು ಅಷ್ಟು ಸುಲಭವಲ್ಲ. ಒಂದು ವೇಳೆ ನಿಷೇಧ ಹೇರಿದರೆ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಪೆಟ್ಟು ಬೀಳುತ್ತದೆ. ಚೀನಾದಿಂದ ಬರುತ್ತಿರುವ ಕಡಿಮೆ ದರದ ವಸ್ತುಗಳಿಂದಲೇ ಅನೇಕ ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ. ಚೈನಾದ ವಸ್ತುಗಳನ್ನ ನಿಷೇಧಿಸಿದರೆ ಅದು ನಮ್ಮ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಕಡಿಮೆ ದರದ ವಸ್ತುಗಳು ಗಗನಕ್ಕೇರಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಮೂಲಕ ಉತ್ತರ ನೀಡಿದರು.

    ಅಮೆರಿಕವು ಒಸಮಾ ಬಿನ್ ಲ್ಯಾಡನ್ ಹತ್ಯೆ ಮಾಡಿದಂತೆ ಪುಲ್ವಾಮಾದಲ್ಲಿ ದಾಳಿ ಮಾಡಿದ ಉಗ್ರರಿಗೆ ತಿರುಗೇಟು ನೀಡಲು ಸಾಧ್ಯವಿಲ್ಲವೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 40 ಹುತಾತ್ಮ ಯೋಧರ ಬಲಿದಾನ ನೀರಿನಲ್ಲಿ ಹೋಮವಾಗಲು ಬಿಡುವುದಿಲ್ಲ. 2014ರ ನಂತರ ಉಗ್ರರ ಉಪಟಳ ಕಡಿಮೆಯಾಗಿದೆ ಎಂದು ಉತ್ತರಿಸುವ ಮೂಲಕ ಪ್ರತಿಕಾರದ ಸುಳಿವು ಬಿಟ್ಟುಕೊಟ್ಟರು.

    ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಚುನಾವಣೆ ಬಿಜೆಪಿಯನ್ನು ಗೆಲ್ಲಿಸಿದ್ದು ಮುಖ್ಯವಲ್ಲ. ಈ ಬಾರಿ ಬಹುಮತದಿಂದ ಜಯಗಳಿಸುವಂತೆ ಮಾಡುವುದು ನಮಗೆ ಮುಖ್ಯವಾಗಿದೆ. ಒಂದು ವೇಳೆ 2019ರ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿದರೆ ಮುಂದಿನ 50 ವರ್ಷಗಳ ಕಾಲ ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಪ್ರಸ್ತಾಪಿಸಿದ ಸಚಿವರು, ದಿನದ ಇಪ್ಪತ್ತು ನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ. ಒಂದೇ ಒಂದು ರೂಪಾಯಿ ವ್ಯರ್ಥವಾಗದಂತೆ ದೇಶದ ಖಜಾನೆಯನ್ನು ಉಪಯೋಗಿಸಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬರುತ್ತೆಂದು ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ ಎಂದರು.

    ವೇದಿಕೆಯಲ್ಲಿ ಒಂದಾಂದ ನಂತರ ಒಂದು ಯೋಜನೆಗಳನ್ನು ಗಂಟೆಗಟ್ಟಲೆ ಹೇಳಿಕೊಂಡು ಹೋಗಬಹುದು. 2014ರಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು, ನಿರ್ಧಾರಗಳು ಬೆಳೆಯುತ್ತ ಬಂದಿವೆ. ನಿಮ್ಮ ನಿರ್ದಿಷ್ಟ ಪ್ರಶ್ನೆಗಳಿಗೆ ನಾನು ಖುಷಿಯಿಂದ ಉತ್ತರಿಸುವೆ. ಆಹಾರ ಭದ್ರತೆ, ಅಗತ್ಯ ವಸ್ತುಗಳ ಬೆಲೆ ಇನ್ನಿತರ ವಿಚಾರಗಳು ಹಿಂದೆ ಹೇಗಿದ್ದವು ಈಗ ಹೇಗಿದೆ ಅನ್ನುವ ವ್ಯತ್ಯಾಸ ನಿಮಗೆ ತಿಳಿದಿರಲಿ. ಜಿಎಸ್‍ಟಿ, ಕಪ್ಪು ಹಣ ವಿಚಾರಗಳು ಜಾರಿಗೆ ಬರುತ್ತಾ ಎನ್ನುವುದು ಪ್ರಶ್ನೆಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಭಾರತದ ಜೊತೆ ವಿಶ್ವದ ಅನೇಕ ದೇಶಗಳು ಉತ್ತಮ ಆಂತರಿಕ ಸಂಬಂಧ ಹೊಂದಿವೆ. ಇದು ಪ್ರಧಾನಿ ಅವರಿಂದ ಸಾಧ್ಯವಾಗಿದೆ. ಪ್ರಗತಿ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಜೊತೆ ಮೋದಿ ನೇರವಾಗಿ ಚರ್ಚಿಸುತ್ತಾರೆ. ಇದು ಅವರ ಗುಣ ಎಂದರು.

    ಕಾಂಗ್ರೆಸ್ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಯುಪಿಎ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು. ಸೈನಿಕರಿಗೆ ಬಂದೂಕು ಇದ್ದರೆ ಬುಲೆಟ್ ಇರುತ್ತಿರಲಿಲ್ಲ. ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಮಾರ್ಗದರ್ಶನದಲ್ಲಿ ಸಮಸ್ಯೆಗಳನ್ನು ನಾನು ನಿವಾರಿಸಿದ್ದೇನೆ. ಒಂದು ವರ್ಷದಲ್ಲಿ ಭಾರತೀಯ ರಕ್ಷಣಾ ವಲಯವನ್ನು ಬಲಗೊಳಿಸಲಾಗಿದೆ. ಒಂದೊಂದು ರೂಪಾಯಿಯನ್ನು ರಕ್ಷಣಾ ವಲಯಕ್ಕೆ ಸದ್ಬಳಕೆ ಆಗಿದೆ. ರಕ್ಷಣಾ ವಲಯಕ್ಕೆ ಮೀಸಲಿಟ್ಟ ಪ್ರತಿ ಅನುದಾನವನ್ನು ಒಂದೇ ವರ್ಷದಲ್ಲಿ ಸದ್ಬಳಕೆ ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಬರುವ ಅನುದಾನ ಎಲ್ಲೂ ದುರ್ಬಳಕೆಯಾಗದಿದ್ದರೆ ರಕ್ಷಣಾ ವಲಯ ಎಷ್ಟು ಬಲಗೊಳ್ಳುತ್ತದೆಂದು ನೀವೇ ಯೋಚಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನಧಿಕೃತ ಸಂವಾದದ ಮೂಲಕ ಗೊಂದಲ ನಿರ್ಮಾಣ: ರಾಹುಲ್ ವಿರುದ್ಧ ಶೋಭಾ ವಾಗ್ದಾಳಿ

    ಅನಧಿಕೃತ ಸಂವಾದದ ಮೂಲಕ ಗೊಂದಲ ನಿರ್ಮಾಣ: ರಾಹುಲ್ ವಿರುದ್ಧ ಶೋಭಾ ವಾಗ್ದಾಳಿ

    ಬೆಂಗಳೂರು: ನಗರದ ಹೆಚ್‍ಎಎಲ್ ನೌಕಕರೊಂದಿಗೆ ರಾಹುಲ್ ಗಾಂಧಿ ನಡೆಸುತ್ತಿರುವ ಸಭೆ, ಸಂವಾದ ಅನಧಿಕೃತವಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಗೊಂದಲ ನಿರ್ಮಾಣ ಮಾಡಲು ಆಗಮಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಅಷ್ಟೇ. ಆದರೆ ಇಂದು ನಡೆಯುವ ಸಭೆ ಅನಧಿಕೃತ ಎಂದು ಹೆಚ್‍ಎಎಲ್ ನೌಕರರೇ ಹೇಳಿದ್ದಾರೆ. ಅಲ್ಲದೇ ನಿಷೇಧಿತ ಪ್ರದೇಶದಲ್ಲಿ ಅವರು ಸಂವಾದ ನಡೆಸುತ್ತಿದ್ದು, ಮೀನ್ಸ್ ಸ್ಕ್ವೈಯರ್ ನಿಷೇಧಿತ ಪ್ರದೇಶ. ಇಲ್ಲಿ ಯಾವುದೇ ಪ್ರತಿಭಟನೆ, ಸಭೆ, ಸಂವಾದಗಳನ್ನ ನಡೆಸುವಂತಿಲ್ಲ ಎಂದು ಹೇಳಿದರು.

    ರಾಹುಲ್ ಗಾಂಧಿ ರಫೇಲ್ ಒಪ್ಪಂದವನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಂವಾದ ನಡೆಸ್ತಿದ್ದಾರೆ? ಹೆಚ್‍ಎಎಲ್ ನೌಕರರ ಸಭೆ ಕರೆಯುವ ಅಧಿಕಾರ ರಾಹುಲ್ ಗಾಂಧಿಗೆ ಎಲ್ಲಿದೆ? ಈ ಸಂವಾದ ಮೂಲಕ ಭಾರತೀಯ ಸೈನ್ಯದ ಮಾನಸಿಕಯನ್ನು ಕುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳು ನಮ್ಮಲ್ಲಿ ಕಳೆದ 70 ವರ್ಷಗಳಲ್ಲಿ ಸರಿಯಾಗಿ ಪೂರೈಕೆ ಮಾಡಿಲ್ಲ. ಆದರೆ ಈಗ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿಸಿದರೆ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ತಡೆದವರು ಯಾರು? ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವಾರು ಕಂಪನಿಗಳು ಮುಚ್ಚಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲಬೇಕು ಎಂದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಆರೋಪ ಮಾಡಿದ ಸಂಸದೆ, ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ತಮ್ಮ ಆಡಳಿತದ ಅರ್ಧದಷ್ಟು ಸಮಯ ದೇವಸ್ಥಾನಗಳಲ್ಲಿ ಕಳೆದಿದ್ದಾರೆ. ಬಾಕಿ ಅರ್ಧದಷ್ಟು ಸಮಯ ಕೇವಲ ಭರವಸೆ ನೀಡುವಲ್ಲಿ ಸರ್ಕಾರ ಕಳೆದಿದೆ. ಮೈತ್ರಿ ಸರ್ಕಾರದಲ್ಲಿ ಯಾವ ಮಂತ್ರಿ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಎನ್ ಮಹೇಶ್ ರಾಜೀನಾಮೆ ನೀಡುವ ಪರಿಸ್ಥಿತಿ ಏಕೆ ನಿರ್ಮಾಣ ಆಯ್ತು? ಅಪವಿತ್ರ ಮೈತ್ರಿ ಎಂದು ಮಹೇಶ್ ರಾಜೀನಾಮೆ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. ಮಹಾಘಟಬಂಧನ ಕರ್ನಾಟಕದಲ್ಲಿಯೇ ಹುಟ್ಟಿ ಕರ್ನಾಟಕದಲ್ಲಿಯೇ ಅಂತ್ಯ ಕಂಡಿದೆ. ರಾಹುಲ್ ಗಾಂಧಿ ತಮ್ಮ ಸಂವಾದದಲ್ಲಿ ಕರ್ನಾಟಕದಲ್ಲಿ ಏನು ಪ್ರಗತಿ ಆಗಿದೆ ಆಗಿದೆ ಎಂಬ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ಬೆಳಗಾವಿ: ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೇ ಬಿಜೆಪಿ ಯಾಕೆ ವಯಸ್ಸಾದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಎಂದು ಯುವತಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ನಗರದ ಕೆಎಲ್‍ಇ ಜಿರಿಗೆ ಭವವನದಲ್ಲಿ ನಡೆದ ಕರುನಾಡ ಜಾಗೃತಿ ಮಹಿಳಾ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇಂತಹದೊಂದು ಪ್ರಶ್ನೆಯನ್ನು ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಉದಾಹರಣೆ ನೀಡಿ ವಯಸ್ಸಿಗಿಂತ ಅನುಭವ ಮುಖ್ಯ ಅಂದ್ರು.

    ಇದೇ ಸಂವಾದ ಕಾರ್ಯಕ್ರಮದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತೀರಿ ಆದರೇ ಎಂಟಿಎಂ ನಲ್ಲಿ ಹಣ ಕೊರತೆ ಉಂಟಾಗಿದೆ ಅಲ್ಲ ಇದಕ್ಕೆ ಎನಂತಿರಿ ಅಂತಾ ಪ್ರಶ್ನೆ ಕೇಳಲಾಯಿತು. ಎಟಿಎಂಗಳಲ್ಲಿ ಹಣವಿದ್ದು, ನೋಟ್ ಅಮಾನೀಕರಣದ ವೇಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇನ್ನೂ ಕೆಲವರು ಕೃತಕ ಅಭಾವ ಸೃಷ್ಠಿಸಲು ಹೊರಟ್ಟಿದ್ದಾರೆ. ರಾಜಕಾರಣಿಗಳು ಹಣ ಹಂಚಿಕೆ ಮಾಡಲು ಹಣ ಸಂಗ್ರಹ ಮಾಡಿರುವ ಅನುಮಾನವಿದೆ ಅಂತಾ ತಿಳಿಸಿದ್ರು.

  • ಪ್ರಧಾನಿ ಜೊತೆ ಮಾತನಾಡಿ ಪುಳಕಿತನಾಗಿದ್ದೇನೆ- ಶಾಸಕ ಸುನಿಲ್ ಕುಮಾರ್

    ಪ್ರಧಾನಿ ಜೊತೆ ಮಾತನಾಡಿ ಪುಳಕಿತನಾಗಿದ್ದೇನೆ- ಶಾಸಕ ಸುನಿಲ್ ಕುಮಾರ್

    ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮಾತನಾಡುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಅಪರೂಪ ಘಟನೆ ಅಂತ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

    ಇಂದು ಬಿಜೆಪಿ ನಾಯಕ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಆಪ್ ಮೂಲಕ ಸಂವಾದ ನಡೆಸಿದ್ದರು. ಸಂವಾದದ ಬಳಿಕ ಮಾತನಾಡಿದ ಸುನಿಲ್ ಕುಮಾರ್, ಮೋದಿ ಅವರ ಜೊತೆ ನೇರ ಮಾತುಕತೆ ನಡೆಸುತ್ತೇವೆ ಅಂತ ಕನಸಲ್ಲೂ ಊಹಿಸಿರಲಿಲ್ಲ. ಆದ್ರೆ ಇವತ್ತು ಅವರ ಜೊತೆ ಮಾತಾಡುವ ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಅಂದ್ರು. ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

    ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ 15-20 ದಿನಗಳಿಂದ ನಿರಂತರವಾಗಿ ಓಡಾಟ ಮಾಡುತ್ತಿರುವ ನಮಗೆ ಅವರ ಜೊತೆ ಮಾತಾಡಿದ ನಂತರ ಒಂದು ಹೊಸ ಉತ್ಸಾಹ, ಪುಳಕಿತವಾದಂತಹ ಅನುಭವವಾಗಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

    ಯಾವ ರೀತಿಯಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂತ ಅವರು ಹೇಳಿದ್ದಾರೆ. ಹೀಗಾಗಿ ಅವರು ಕೊಟ್ಟ ಸೂಚನೆಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಪ್ರಧಾನಿ ಜೊತೆ ಒಬ್ಬ ಸಾಮಾನ್ಯ ಕಾರ್ಯಕರ್ತ ಈ ರೀತಿ ಮಾತುಕತೆ ಮಾಡಿರುವಂತದ್ದು, ನನ್ನ ಜೀವನದ ಅತ್ಯಂತ ಅಮೂಲ್ಯವಾದ ಘಟನೆ ಅಂದ್ರು.

  • ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

    ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

    ಮಂಡ್ಯ: ಸಂವಾದ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಿಲ್ಲ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಈ ಮೂಲಕ ನೆರೆದ ಜನರ ಮೆಚ್ಚುಗೆಗೆ ಪಾತ್ರರಾದ್ರು.

    ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ನಗರದ ವಿಶ್ವೇಶರಯ್ಯ ಕ್ರೀಡಾಂಗಣದಲ್ಲಿ ಸಾವಯವ ಕೃಷಿಕರು, ರೈತ ಮಹಿಳೆಯರ ಜೊತೆ ಅಮಿತ್ ಶಾ ಅವರ ಸಂವಾದವನ್ನು ಏರ್ಪಡಿಸಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ಶಾ ತಡವಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ಲಿ ಕ್ಷಮೆ ಕೇಳಿದ್ದಾರೆ.

    ಸಾವಯವ ಕೃಷಿಗೆ ಮೋದಿ ಸರ್ಕಾರ ಸಾಕಷ್ಟು ಹಣ ಮೀಸಲಿಟ್ಟಿದೆ. ಯುಪಿಎ ಸರ್ಕಾರಕ್ಕಿಂತ 75% ರಷ್ಟು ಹೆಚ್ಚು ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡುತ್ತಿದೆ. ಜಗತ್ತಿನಲ್ಲಿಯೇ ಜೈವಿಕ ಕೃಷಿಕರ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬೇಕು. ಸಾವಿರಾರು ವರ್ಷದಿಂದ ದೇಶದಲ್ಲಿ ಅವೈಜ್ಞಾನಿಕವಾಗಿ ಸಾವಯವ ಕೃಷಿ ಮಾಡಲಾಗುತ್ತಿದೆ ಅಂತ ವಿದೇಶಿಗರು ಹೇಳ್ತಾರೆ. ಆದ್ರೆ ವೈಜ್ಞಾನಿಕವಾಗಿ ದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಮೂರೂವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಪರಂಪರಾಗತ ಕೃಷಿ ಯೋಜನೆಯಡಿ 7.50 ಲಕ್ಷ ಹೆಕ್ಟೆರ್ ಅಭಿವೃದ್ಧಿಗೊಳಿಸಿದೆ. ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿಯೂ ಸಾವಯವ ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಸಿಕ್ಕಿಂನ್ನು ಸಂಪೂರ್ಣವಾಗಿ ಸಾವಯವ ಕೃಷಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂತ ಅಮಿತ್ ಶಾ ಸಂವಾದದಲ್ಲಿ ತಿಳಿಸಿದ್ರು.

    ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ರೈತರಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು. ಮಾದರಿ ರೈತರನ್ನು ಇಸ್ರೇಲ್ ಗೆ ಕಳುಹಿಸ್ತೇವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ರೀತಿ ನಾವು ಮಾಡ್ತೇವೆ. ಸಿದ್ದರಾಮಯ್ಯ ಏನೂ ಮಾಡಿಲ್ಲ, ಸಾವಯವ ಕೃಷಿ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಗೋ ಹತ್ಯೆಯನ್ನು ನಿಲ್ಲಿಸಬೇಕಿದೆ. ಗೋವುಗಳಿಂದ ಬರುವ ಉತ್ಪನ್ನಗಳ ಬಳಕೆ ಸೂಕ್ತ ರೀತಿಯಲ್ಲಿ ನಡೆಯಬೇಕಿದೆ. ಈಗಾಗಲೇ ಕೇಂದ್ರ ಸರ್ಕಾರ ಗೋವಿಗೆ ವಿಮೆ ಸೌಲಭ್ಯ ನೀಡಿದೆ ಅಂತ ಹೇಳಿದ್ರು.

    ಕಾರ್ಯಕ್ರಮದ ಬಳಿಕ ಅಮಿತ್ ಶಾ, ರೈತ ಮಹಿಳೆಯರೊಂದಿಗೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಸಂವಾದ ಕಾರ್ಯಕ್ರಮದ ಮುಂಭಾಗದಲ್ಲಿ ಸಾಕಷ್ಟು ಖುರ್ಚಿಗಳು ಖಾಲಿ ಇದ್ದಿದ್ದು, ನಾಯಕರಿಗೆ ಮುಜುಗರವನ್ನು ತರಿಸಿದ ಘಟನೆಯೂ ನಡೆಯಿತು.