Tag: ಸಂಯುಕ್ತ ಹೆಗಡೆ

  • ಕಿರಿಕ್ ಹುಡುಗಿಯ ‘ಕ್ರೀಂ’ ಚಿತ್ರದ ಟ್ರೈಲರ್ ರಿಲೀಸ್

    ಕಿರಿಕ್ ಹುಡುಗಿಯ ‘ಕ್ರೀಂ’ ಚಿತ್ರದ ಟ್ರೈಲರ್ ರಿಲೀಸ್

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಸಂಯುಕ್ತ ಹೆಗಡೆ (Samyuktha Hegde) ಪ್ರಮುಖಪಾತ್ರದಲ್ಲಿ ನಟಿಸಿರುವ ‘ಕ್ರೀಂ’ (Cream) ಚಿತ್ರದ ವಿಷುಯಲ್ ಟ್ರೈಲರ್ (Trailer) ಇತ್ತೀಚೆಗೆ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಈ ಚಿತ್ರದ ವಿಷುಯಲ್ ಟ್ರೈಲರ್ ಬಿಡುಗಡೆ ಮಾಡಿದರು. ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ.

    ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿಟ್ಟುಕೊಂಡಿದ್ದೇನೆ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ಎಲ್ಲಾ ಊರುಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದೆ. ಸಿನಿಮಾ ಮಾಡಲು ಆಗಿರಲಿಲ್ಲ. ನಿರ್ಮಾಪಕ ದೇವೇಂದ್ರ ಅವರು ಸಿನಿಮಾ ಮಾಡಲೇಬೇಕು ಎಂದು ನನ್ನ ಒತ್ತಾಯಿಸಿದಾಗ ಈ ಚಿತ್ರದ ಕಥೆ ಹೇಳಿದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು.‌ ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ?  ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ. ಇನ್ನೂ ಸಂಯುಕ್ತ ಹೆಗಡೆ ಈ ಚಿತ್ರಕ್ಕಾಗಿ ತನ್ನ ಜೀವವನ್ನೇ ಕೊಟ್ಟು ಬಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ. ನಿರ್ದೇಶಕ ಅಭಿಷೇಕ್ ಬಸಂತ್ ನನ್ನ ತಮ್ಮನ ಮಗ.‌ ಆತ ಬಹಳ ಬುದ್ದಿವಂತ. ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾನೆ. ಶಿವು ಅವರ ಕಲಾ ನಿರ್ದೇಶನ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

    ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.‌ ಇಂದು ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ನಿಮ್ಮ ಮುಂದೆ ಚಿತ್ರ ಬರಲಿದೆ‌ ಎಂದರು ನಿರ್ದೇಶಕ ಅಭಿಷೇಕ್ ಬಸಂತ್. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ಆಕ್ಷನ್ ಕೂಡ ಮಾಡಿದ್ದೇನೆ. ಕಾಲು ಕೂಡ ಮುರಿದಿತ್ತು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ “ಕ್ರೀಂ” ಚಿತ್ರ ಚೆನ್ನಾಗಿ ಬಂದಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸುಂದರವಾಗಿದೆ. ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ವಿಶೇಷವಾಗಿ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಂಯುಕ್ತ ಹೆಗಡೆ.

    ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇಡೀ ತಂಡದ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಡಿ.ಕೆ.ದೇವೇಂದ್ರ ತಿಳಿಸಿದರು. ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ರೋಷನ್‌ ಅಗ್ನಿ ಶ್ರೀಧರ್ ಬಚ್ಚನ್, ಇಫ್ರಾನ್ ಮುಂತಾದವರು “ಕ್ರೀಂ” ಚಿತ್ರದ ಕುರಿತು ಮಾತನಾಡಿದರು.

    ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ  ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

  • ಸಂಯುಕ್ತ ಹೆಗಡೆ ನಟನೆಯ ‘ಕ್ರೀಮ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಸಂಯುಕ್ತ ಹೆಗಡೆ ನಟನೆಯ ‘ಕ್ರೀಮ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದ ‘ಕ್ರೀಮ್’ (Cream) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಬಹು ನಿರೀಕ್ಷಿತ ಈ ಚಿತ್ರದ ನಾಯಕಿಯಾಗಿ ಸಂಯುಕ್ತ ಹೆಗಡೆ (Samyukta Hegde) ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್ (Achyut Kumar), ಅರುಣ್ ಸಾಗರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಕಳೆದವರ್ಷ ಈ ಚಿತ್ರ ಆರಂಭವಾಗಿದ್ದು,  ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂತರ ಚಿತ್ರತಂಡದಿಂದ ಈ ಚಿತ್ರದ ಕುರಿತು ಯಾವುದೇ ವಿಷಯ ಹೊರಬಂದಿರಲಿಲ್ಲ. ಅಂತಹ ವಿಷಯ ಚಿತ್ರದಲ್ಲಿ ಏನಿರಬಹುದು? ಎಂಬ ಕೌತುಕ ಎಲ್ಲರಲ್ಲೂ ಇದೆ. ಬೆಂಗಳೂರಿನಲ್ಲಿ ನಡೆದ ನೈಜಘಟನೆ ಆಧರಿಸಿದ‌ ಚಿತ್ರವೆಂಬ ಮಾಹಿತಿ ಇದೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗಡೆ ಅವರಿಗೆ ಭಾರಿ ಪೆಟ್ಟು ಬಿದ್ದ ವಿಷಯ ಮಾತ್ರ ತಿಳಿದಿತ್ತು. ಸಂಯುಕ್ತ ಅವರು ಚೇತರಿಸಿಕೊಂಡ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ.  ಸುನೋಜ್ ವೇಲಾಯುಧನ್ ಛಾಯಾಗ್ರಹಣ, ಶಿವು (ಕೆಜಿಎಫ್) ಕಲಾ ನಿರ್ದೇಶನ, ಆರ್ಯನ್ ಸಂಕಲನ ಹಾಗೂ ಪ್ರಭು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಂದೆ, ತಾಯಿ ನಂತ್ರ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ

    ತಂದೆ, ತಾಯಿ ನಂತ್ರ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ ಸೋಂಕಾಗಿದೆ. ಕೋವಿಡ್ ಪಾಸಿಟಿವ್ ಬಂದಿರುವ ಕುರಿತಾಗಿ ಸಂಯುಕ್ತಾ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಬರೆದುಕೊಂಡಿದ್ದಾರೆ.

    ಮನೆಯಲ್ಲಿ ಅಪ್ಪ-ಅಮ್ಮನ ನಂತರ ಈಗ ನಟಿ ಸಂಯುಕ್ತಾ ಹೆಗಡೆ ಅವರಿಗೂ ಸೋಂಕಾಗಿದೆ. ಮೊದಲು ಸಂಯುಕ್ತಾ ಅವರ ಅಪ್ಪನಿಗೆ ನಂತರ ಅಮ್ಮನಿಗೆ ಕೊರೊನಾ ಸೋಂಕಾಗಿತ್ತು. ತಮಗೆ ಪಾಸಿಟಿವ್ ಆಗಿರುವ ಕುರಿತು ಸಂಯುಕ್ತಾ ಹೆಗಡೆ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Samyuktha Hegde (@samyuktha_hegde)

    25 ದಿನಗಳ ಹಿಂದೆ ಅಪ್ಪ-ಅಮ್ಮನಿಗೆ ಕೊರೊನಾ ಸೋಂಕಾದಾಗ ಬಿಬಿಎಂಪಿ ಅವರು 11 ದಿನಗಳ ನಂತರ ಕರೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನನಗೆ ಪಾಸಿಟಿವ್ ರಿಪೋರ್ಟ್ ಬಂದ ಒಂದು ಗಂಟೆಯ ನಂತರವೇ ಬಿಬಿಎಂಪಿ ಅವರಿಂದ ಕರೆ ಬಂದಿದೆ. ಜೊತೆಗೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ತಂದೆ, ತಾಯಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

    ನಿತ್ಯ ಚಿಕ್ಕ-ಪುಟ್ಟ ವ್ಯಾಯಾಮ ಮಾಡುತ್ತಿರುವುದಾಗಿಯೂ ವೀಡಿಯೋ ಹಂಚಿಕೊಂಡಿದ್ದಾರೆ. ಸಂಯುಕ್ತಾ ಹೆಗಡೆ ಆರೋಗ್ಯ ಆದಷ್ಟು ಬೇಗ ಚೇತರಿಕೆಯಾಗಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

  • ಬೀಚ್‍ನಲ್ಲಿ ಸಂಯುಕ್ತ ಹೆಗ್ಡೆ ಹಾಟ್ ಕಸರತ್ತು

    ಬೀಚ್‍ನಲ್ಲಿ ಸಂಯುಕ್ತ ಹೆಗ್ಡೆ ಹಾಟ್ ಕಸರತ್ತು

    ಸ್ಯಾಂಡಲ್‍ವುಡ್ ಕಿರಿಕ್ ನಟಿ ಸಂಯುಕ್ತ ಹೆಗಡೆ ಬೀಚ್‍ನಲ್ಲಿ ತನ್ನ ವಿದೇಶಿ ಗೆಳೆಯನ ಜೊತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಸಂಯುಕ್ತ ಹೆಗಡೆ ವಿದೇಶಿ ಗೆಳೆಯ ಜೊತೆ ಸಮುದ್ರದ ದಡದಲ್ಲಿ ತಲೆ ಕೆಳಗಾಗಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    Auf Reisen trifft man die besten Menschen. @chris.1803 #thailand #germany #thebarefeetchronicles #travel #phiphi

    A post shared by Samyuktha Hegde (@samyuktha_hegde) on

    ಈ ಫೋಟೋದಲ್ಲಿ ಸಂಯುಕ್ತ ಬಿಕಿನಿ ಧರಿಸಿದ್ದಾರೆ. ಅಲ್ಲದೆ ತಲೆ ಕೆಳಗೆ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನು ಅವರ ಗೆಳೆಯ ತಲೆ ಕೆಳಗಾಗಿರುವ ಗೆಳತಿ ಸಂಯುಕ್ತರ ಕಾಲನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಕಲವರು ಸಂಯುಕ್ತ ಫೋಟೋ ನೋಡಿ ವಾಟ್ ಎ ಫಿಟ್ನೆಸ್, ಸೂಪರ್ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಸಂಯುಕ್ತ ಕನ್ನಡ ಚಿತ್ರರಂಗದ ಮಾನ ಮಾರ್ಯದೆ ತೆಗೆಯುತ್ತಿದ್ದಾರೆ ಎಂದು ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ಮತ್ತೆ ಕಾಲೇಜ್ ಕುಮಾರ್ ಕಿರಿಕ್: ನಿರ್ಮಾಪಕರಿಂದ ನಟಿ ಸಂಯುಕ್ತ ವಿರುದ್ಧ ದೂರು

    ಮತ್ತೆ ಕಾಲೇಜ್ ಕುಮಾರ್ ಕಿರಿಕ್: ನಿರ್ಮಾಪಕರಿಂದ ನಟಿ ಸಂಯುಕ್ತ ವಿರುದ್ಧ ದೂರು

    ಬೆಂಗಳೂರು: ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ನಟಿ ಸಂಯುಕ್ತ ಹೆಗಡೆ ಮೇಲೆ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ದೂರು ನೀಡಲು ಮುಂದಾಗಿದ್ದಾರೆ.

    ಕಾಲೇಜ್ ಕುಮಾರ ಸಿನಿಮಾದ ಬಗ್ಗೆ ಮಾತನಾಡೋಕ್ಕೆ ಚಿತ್ರತಂಡ ಚಾಲುಕ್ಯ ಹೋಟೆಲ್ ನಲ್ಲಿ ಇಂದು ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಿನಿಮಾ ಚಿತ್ರೀಕರಣ ಶುರುವಾದಗಿನಿಂದ ನಟಿ ಸಂಯುಕ್ತ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇದ್ದರು. ಸಿನಿಮಾ ರಿಲೀಸಾದ ಮೇಲೆ ಯಾವುದೇ ಪ್ರಚಾರಕ್ಕೂ ಕೈ ಜೋಡಿಸಿಲ್ಲ ಎಂದು ನಿರ್ಮಾಪಕ ಪದ್ಮನಾಭ ಶೆಟ್ಟಿ ಆರೋಪಿಸಿದ್ದಾರೆ.

    ನನಗಾದ ತೊಂದರೆ ಬೇರೆ ನಿರ್ಮಾಪಕನಿಗೆ ಆಗಬಾರದು. ಅಂತಹ ಹೆಣ್ಣು ಮಕ್ಕಳಿಗೆ ಖಂಡಿತವಾಗಲೂ ಪಬ್ಲಿಸಿಟಿ ಕೊಡಬೇಡಿ ಎಂದು ನಟಿ ಸಂಯುಕ್ತಾ ಹೆಗ್ಡೆ ಮೇಲೆ ನಿರ್ಮಾಪಕ ಪದ್ಮನಾಭ ಶೆಟ್ಟಿ ಗರಂ ಆಗಿ ಮಾತನಾಡಿದ್ದಾರೆ.

    ಇನ್ನೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಶೃತಿ ಕಲಾವಿದರಾಗಿ ಸಿನಿಮಾದಲ್ಲಿ ನಟಸಿದ ಮಾತ್ರಕ್ಕೆ ಮುಗಿಯೋಲ್ಲ. ಸಿನಿಮಾ ಮುಗಿದ ನಂತರ ಪ್ರಚಾರಕ್ಕೂ ಕೈ ಜೋಡಿಸಬೇಕು. ಈ ಜವಾಬ್ದಾರಿಯನ್ನು ಸಂಯುಕ್ತಾ ನಿಭಾಯಿಸಿಲ್ಲ ಎಂದು ತಿಳಿಸಿದರು.

    https://www.youtube.com/watch?v=4pHYE9HDv2s