Tag: ಸಂಯುಕ್ತಾ ಹೊರನಾಡ್

  • ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ಲೈಫು ಇಷ್ಟೇನೆ, ಟೋಬಿ ಸಿನಿಮಾ ಖ್ಯಾತಿಯ ಸಂಯುಕ್ತಾ ಹೊರನಾಡ್ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದು, ಚಿತ್ರೀಕರಣ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ಸಂಯುಕ್ತಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ, ಕಾವ್ಯಾ ಥಾಪರ್

    ನಾನು ಸುದೀಪ್ ಸರ್ ಅವರ ದೊಡ್ಡ ಅಭಿಮಾನಿ. ನಾನು ಈ ಹಿಂದೆ ‘ಜಿಗರ್‌ಥಂಡ’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ಸರ್ ಕೆಲಸ ಮಾಡುವಾಗ ಸಿನಿಮಾ ಮೇಕಿಂಗ್‌ನಲ್ಲೂ ಭಾಗಿಯಾಗುತ್ತಿದ್ದರು. ಅವರ ಎನರ್ಜಿ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ ಮಾತ್ರ ಅದ್ಭುತ. ಅವರ ಜೊತೆ ನಾನು ತೆರೆಹಂಚಿಕೊಂಡಿರೋದಕ್ಕೆ ಖುಷಿಯಿದೆ ಎಂದು ಸಂಯುಕ್ತಾ ಹೊರನಾಡ್ (Samyukta Hornad) ಸಂತಸ ವ್ಯಕ್ತಪಡಿಸಿದ್ದಾರೆ.

    ‘ಮ್ಯಾಕ್ಸ್’ ಸಿನಿಮಾ ಈಗೀನ ಕಾಲಕ್ಕೆ ತಕ್ಕಂತೆ ಇದೆ. ಚಿತ್ರದಲ್ಲಿ ದೊಡ್ಡ ಮಟ್ಟದ ಸ್ಟಂಟ್ಸ್ ಕೂಡ ಇದೆ. ಬಾಡಿ ಡಬಲ್ ಬಳಸದೆ ಸುದೀಪ್‌ ಸರ್ ತಾವೇ ಸ್ಟಂಟ್ಸ್ ಮಾಡಿದ್ದಾರೆ. ಈ ಚಿತ್ರ ಫ್ಯಾನ್ಸ್‌ಗೆ ಪೈಸಾ ವಸೂಲ್ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿಜಕ್ಕೂ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ‘ಮ್ಯಾಕ್ಸ್’ (Max Film) ಸಿನಿಮಾದಲ್ಲಿ ಸುದೀಪ್ (Sudeep) ಜೊತೆ ಸಂಯುಕ್ತಾ ಹೊರನಾಡ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸುದೀಪ್ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ‘ಲೈಫು ಇಷ್ಟೇನೆ’ ಎಂದು ಹೇಳುತ್ತ ಸ್ಯಾಂಡಲ್‌ವುಡ್‌ಗೆ(Sandalwood) ಪಾದಾರ್ಪಣೆ ಮಾಡಿದ್ದ ಚೆಂದುಳ್ಳಿ ಚೆಲುವೆ ಸಂಯುಕ್ತಾ ಹೊರನಾಡ್ (Samyukta Hornad) ಈಗ ಕಿಚ್ಚನ ಬಳಗಕ್ಕೆ ಜಾಯಿನ್ ಆಗಿದ್ದಾರೆ. ಕಿಚ್ಚ 46ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಕಿಚ್ಚ ಸುದೀಪ್ (Kiccha Sudeep) ನಟನೆಯ ‘K 46’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸಿನಿಮಾದ ಮೊದಲ ಟೀಸರ್‌ಗೆ ಕಿಚ್ಚನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗ ಕಿಚ್ಚ 46ನಲ್ಲಿ ಸಂಯುಕ್ತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ.

    ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಜನ್ಮದಿನವಾಗಿದ್ದು, ಅಂದು ಸುದೀಪ್ ನಟನೆಯ 46ನೇ ಸಿನಿಮಾದ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಚಿಸಿದೆ. ಸಿನಿಮಾ ಬಗೆಗಿನ ಇನ್ನಿತರ ಮಾಹಿತಿ ಹಂಚಿಕೊಳ್ಳುತ್ತಾರಾ ಕಾದುನೋಡಬೇಕಿದೆ.

    ಈ ವರ್ಷ ಹೊಂದಿಸಿ ಬರೆಯಿರಿ, ಕ್ರಾಂತಿ, ಲವ್ ಬರ್ಡ್ಸ್ (Love Birds) ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಕಿಚ್ಚನ ಟೀಮ್‌ ಕಡೆಯಿಂದ ಸಂಯುಕ್ತಾ ರೋಲ್ ಕುರಿತು ಅಫಿಷಿಯಲ್ ಅಪ್‌ಡೇಟ್ ಸಿಗದೇ ಇದ್ದರೂ, ಸದ್ಯದ ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಟ್ ಅವತಾರದಲ್ಲಿ ಸಂಯುಕ್ತಾ ಹೊರನಾಡ್

    ಹಾಟ್ ಅವತಾರದಲ್ಲಿ ಸಂಯುಕ್ತಾ ಹೊರನಾಡ್

    ಸ್ಯಾಂಡಲ್‌ವುಡ್ ಲೈಫು ಇಷ್ಟೇನೆ, ಬರ್ಫಿ, ಒಗ್ಗರಣೆ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸಂಯುಕ್ತಾ ಹೊರನಾಡ್ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಲೈಫು ಇಷ್ಟೇನೆ ನಟಿಯ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯೂಸಿಯಿರೋ ನಟಿ ಸಂಯುಕ್ತಾ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಜಾಲಿ ಮೂಡ್‌ನಲ್ಲಿದ್ದಾರೆ. ಬ್ರೇಕ್‌ನ ನಂತರ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳಿದ್ದಾರೆ. ರೆಡ್ ಕಲರ್ ಡ್ರೆಸ್‌ನಲ್ಲಿ ಮಿಂಚುತ್ತಾ, ಬೀಚ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಫೋಟೊ ಸದ್ಯ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ರಾಖಿ ಸಾವಂತ್- ಉರ್ಫಿ ಜಾವೇದ್ ಮಸ್ತ್ ಡ್ಯಾನ್ಸ್‌ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

    ನಟಿ ಸಂಯುಕ್ತಾ ಮನೋಜ್ಞ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಕನ್ನಡ ಮತ್ತು ತಮಿಳಿನ ಒಂದಿಷ್ಟು ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.