Tag: ಸಂಯುಕ್ತಾ ಹೆಗ್ಡೆ

  • ಮತ್ತೆ ಬಿಕಿನಿ ತೊಟ್ಟು ಕಿರಿಕ್ ಹುಡುಗಿಯಿಂದ ಹಾಟ್ ಸಂದೇಶ..!

    ಮತ್ತೆ ಬಿಕಿನಿ ತೊಟ್ಟು ಕಿರಿಕ್ ಹುಡುಗಿಯಿಂದ ಹಾಟ್ ಸಂದೇಶ..!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಸದ್ದು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಬ್ಯಾಂಕಾಕ್‍ನಲ್ಲಿ ಗೆಳೆಯನ ಜೊತೆಗೆ ಬಿಕಿನಿ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಬಿಕಿನಿ ಫೋಟೋ ಹಾಕಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ.

    ನಟಿ ಸಂಯುಕ್ತಾ ಹೆಗ್ಡೆ ಕಳೆದ ಕೆಲವು ದಿನಗಳಿಂದ ಬ್ಯಾಂಕಾಕ್ ರಸ್ತೆ, ಬೀಚ್‍ನಲ್ಲಿ ನಿಂತು ಹಾಟ್ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಅವುಗಳನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈಗ ಹೊಸದಾಗಿ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತಿರುವ ಫೋಟೋ ಹಾಗೂ ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/BrUM-bNFNMY/

    ಸಂಯುಕ್ತಾ ಫೋಟೋ ಜೊತೆಗೆ, “ಜನರ ಅಭಿಪ್ರಾಯವನ್ನು ಬದಲಾಯಿಸಲು ಹೋಗಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿ. ಅದನ್ನು ಬೇರೆಯವರು ಇಷ್ಟಪಡುತ್ತಾರೋ ಇಲ್ಲವಾ ಎನ್ನುವುದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನಿಮಗಾಗಿ ನೀವು ಬದುಕಿ” ಎಂದು ಬರೆದುಕೊಂಡಿದ್ದಾರೆ. ಸಂಯುಕ್ತಾ ಹೆಗ್ಡೆ ತನ್ನ ಬಿಕಿನಿ ಫೋಟೋ ಪೋಸ್ಟ್ ಮಾಡುತ್ತಿದ್ದಂತೆಯೇ ಪರ ವಿರೊಧ ಕಮೆಂಟ್ ಗಳು ಬರುತ್ತಿವೆ.

    ಈ ಹಿಂದೆ ಇದು ಬ್ಯಾಂಕಾಕ್ ಪ್ರವಾಸದ ಮೊದಲನೇ ದಿನ. ಪ್ರವಾಸದಲ್ಲಿನ ಸಂತೋಷ (ಹ್ಯಾಪಿನೆಸ್ ಇನ್ ಟ್ರಾವೆಲಿಂಗ್) ಎಂದು ಬರೆದು ಬ್ಯಾಂಕಾಕ್ ಪ್ರವಾಸದ ಮೊದಲ ಫೋಟೋ ಹಂಚಿಕೊಂಡಿದ್ದರು. ಮಾರನೇ ದಿನ ಸಮುದ್ರದ ಉಪ್ಪು ನೀರಿನಿಂದಾಗಿ ಸೌಂದರ್ಯ ಹಾಳಾಗಿದ್ದಕ್ಕೆ `ಇಟ್ಸ್ ಎಫೆಕ್ಟ್ ಆಫ್ ಬೀಚ್’ ಅಂತಾ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಯುವಕನೊಂದಿಗೆ ಬೋಟ್‍ನಲ್ಲಿ ಕುಳಿತಿರುವ ಫೋಟೋ ಕೂಡ್ ಅಪ್ಲೋಡ್ ಮಾಡಿದ್ದರು.

    https://www.instagram.com/p/BrXC1hqF3Iw/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬ್ಯಾಂಕಾಕ್ ಬೀಚ್‍ನಲ್ಲಿ ಗೆಳೆಯನ ಜೊತೆ ಬಿಕಿನಿಯಲ್ಲಿ ಕಾಣಿಸಿಕೊಂಡ ಸಂಯುಕ್ತಾ

    ಬ್ಯಾಂಕಾಕ್ ಬೀಚ್‍ನಲ್ಲಿ ಗೆಳೆಯನ ಜೊತೆ ಬಿಕಿನಿಯಲ್ಲಿ ಕಾಣಿಸಿಕೊಂಡ ಸಂಯುಕ್ತಾ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಸದ್ದು ಮಾಡುತ್ತಲೇ ಇರುತ್ತಾರೆ. ಈ ಬಾರಿ ಬ್ಯಾಂಕಾಕ್‍ನಲ್ಲಿ ಸ್ಪ್ಲಿಟ್ಸ್ ವಿಲ್ಲಾದಲ್ಲಿ ಪರಿಚಯವಾದ ಗೆಳೆಯನ ಜೊತೆಗೆ ಬಿಕಿನಿ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಕಳೆದ ಆರು ದಿನಗಳಿಂದ ಬ್ಯಾಂಕಾಕ್ ರಸ್ತೆ, ಬೀಚ್‍ನಲ್ಲಿ ನಿಂತು ಸಂಯುಕ್ತಾ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಅವುಗಳನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹಂಗೆ – ಯುವನಿರ್ದೇಶಕ ಕೀರ್ತನ್ ಶೆಟ್ಟಿ

    ಇದು ಬ್ಯಾಂಕಾಕ್ ಪ್ರವಾಸದ ಮೊದಲನೇ ದಿನ. ಪ್ರವಾಸದಲ್ಲಿನ ಸಂತೋಷ (ಹ್ಯಾಪಿನೆಸ್ ಇನ್ ಟ್ರಾವೆಲಿಂಗ್) ಎಂದು ಬರೆದು ಬ್ಯಾಂಕಾಕ್ ಪ್ರವಾಸದ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ಮಾರನೇ ದಿನ ಸಮುದ್ರದ ಉಪ್ಪು ನೀರಿನಿಂದಾಗಿ ಸೌಂದರ್ಯ ಹಾಳಾಗಿದ್ದಕ್ಕೆ ‘ಇಟ್ಸ್ ಎಫೆಕ್ಟ್ ಆಫ್ ಬೀಚ್’ ಅಂತಾ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಯುವಕನೊಂದಿಗೆ ಬೋಟ್‍ನಲ್ಲಿ ಕುಳಿತಿರುವ ಫೋಟೋ ಕೂಡ್ ಅಪ್ಲೋಡ್ ಮಾಡಿದ್ದಾರೆ.

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಸಂಯುಕ್ತಾ ಮಾದಕ ನಗೆ ಬೀರಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, ನಾನು ಏತಕ್ಕೆ ನಗುತ್ತಿರುವೇ ಎನ್ನುವುದು ಗೊತ್ತಿಲ್ಲ. ಈ ದೃಶ್ಯವನ್ನು ಒಂದೇ ಸಮಯದಲ್ಲಿ ಇಬ್ಬರು ತಮ್ಮ ಮೊಬೈಲ್‍ನಲ್ಲಿ ಕ್ಲಿಕ್ಕಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    https://www.instagram.com/p/Bq9G6iCF2bV/

    https://www.instagram.com/p/Bq93nqclm8E/

    https://www.instagram.com/p/BmqEuFilBlV/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರ್ಜುನ್ ಸರ್ಜಾ ಬಳಿ ದುಡ್ಡು, ಹೆಸರಿದೆ- ಶೃತಿ ಹರಿಹರನ್ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ

    ಅರ್ಜುನ್ ಸರ್ಜಾ ಬಳಿ ದುಡ್ಡು, ಹೆಸರಿದೆ- ಶೃತಿ ಹರಿಹರನ್ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ

    ಬೆಂಗಳೂರು: ಮೀ ಟೂ ಅಭಿಯಾನ ಶುರುವಾದ ಮೇಲೆ ಸ್ಯಾಂಡಲ್‍ವುಡ್ ನಟಿಯರೂ ಸಿಡಿದೆದ್ದಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಂಯುಕ್ತಾ ಹೆಗ್ಡೆ, ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಯಾರು ಅಧಿಕಾರ ಕೊಟ್ಟವರು ಅಂತ ಕಿಡಿಕಾರಿದ್ದಾರೆ.

    ನಟಿಯರು ತಮಗಾದ ನೋವನ್ನು ಹಂಚಿಕೊಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ನಮಗಂತೂ ನಟರಷ್ಟು ಸಂಬಳ ಕೊಡಲ್ಲ. ದಯವಿಟ್ಟು ಕನಿಷ್ಠ ಗೌರವವನ್ನಾದರೂ ಕೊಡಿ. ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಇಂಡಸ್ಟ್ರಿಗೆ ತರುತ್ತಾರೆ. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ.

    ಇತ್ತ ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೊಬ್ಬ ತಮಿಳು ಸ್ಟಾರ್ ಜೊತೆ ಸಂಯುಕ್ತಾ ಹೆಗ್ಡೆ ಅಭಿನಯ

    ಮತ್ತೊಬ್ಬ ತಮಿಳು ಸ್ಟಾರ್ ಜೊತೆ ಸಂಯುಕ್ತಾ ಹೆಗ್ಡೆ ಅಭಿನಯ

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಹೆಗ್ಡೆ ಈಗಾಗಲೇ ತಮಿಳಿನಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಮತ್ತೊಬ್ಬ ತಮಿಳು ನಟನ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ.

    ತಮಿಳು ನಟ ಜಯಂ ರವಿ ಜೊತೆ ಈಗ ಸಂಯುಕ್ತಾ ಹೆಗ್ದೆ ಅಭಿನಯಿಸಲಿದ್ದಾರೆ. ಜಯಂ ರವಿ ಅವರು ಅಭಿನಯಿಸುತ್ತಿರುವ ಸಿನಿಮಾ ಕಾಮಿಡಿ ಎಂಟರ್ ಟೈನ್ ಮೆಂಟ್ ಕಥೆಯಾಗಿದ್ದು, ಈ ಸಿನಿಮಾದ ಪಾತ್ರವೊಂದಕ್ಕೆ ಸಂಯುಕ್ತಾ ಹೆಗ್ದೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಂಯುಕ್ತಾ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಜಯಂ ರವಿ ಅವರ ಸಿನಿಮಾಗೆ ಈಗಾಗಲೇ ನಟಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಜಯಂ ರವಿ ಮತ್ತು ಕಾಜಲ್ ಇವರಿಬ್ಬರು ಒಟ್ಟಿಗೆ ಅಭಿನಯಿಸುತ್ತಿರುವ ಮೊದಲು ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸಂಯುಕ್ತಾ ಕೂಡ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ಪ್ರದೀಪ್ ರಂಗನಾಥನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

    ಸಂಯುಕ್ತಾ ಅಭಿನಯಿಸುತ್ತಿರುವ ತಮಿಳಿ ಎರಡನೇ ಸಿನಿಮಾವಾಗಿದೆ. ಈಗಾಗಲೇ ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ `ಪಪ್ಪಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಪಪ್ಪಿ’ ಚಿತ್ರದಲ್ಲಿ ಕಥೆ ಅದ್ಭುತವಾಗಿರುವ ಕಾರಣದಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿದ್ದರು.


    ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿರುವುದರಿಂದ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ಸದ್ಯಕ್ಕೆ ಪಪ್ಪಿ ಸಿನಿಮಾದ ಶೂಟಿಂಗ್ ನಲ್ಲಿ ಸಂಯುಕ್ತಾ ಹೆಗ್ಡೆ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದವರು ಸಂಯುಕ್ತಾ ಹೆಗ್ಡೆ. ಆ ನಂತರ ಕಾಲೇಜು ಕುಮಾರ ಚಿತ್ರದಲ್ಲಿಯೂ ನಟಿಸಿದ್ದ ಸಂಯುಕ್ತಾ ಬಿಗ್‍ಬಾಸ್ ಶೋ ಸ್ಪರ್ಧಿಯಾದ ನಂತರದ ವಿದ್ಯಮಾನದ ಬಳಿಕ ದೂರ ಉಳಿದಿದ್ದರು. ಆ ನಂತರದಲ್ಲಿ ಅವರು ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ!

    ಬಹು ಹಿಂದಿನಿಂದಲೇ ಸಂಯುಕ್ತಾಗೆ ತಮಿಳು ಚಿತ್ರರಂಗದಿಂದ ಆಫರುಗಳು ಬರಲಾರಂಭಿಸಿದ್ದವಂತೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ ನಟಿಸಲಿರೋ ಈ ಚಿತ್ರ ‘ಪಪ್ಪಿ’.

    ಒಂದು ಪ್ರೇಮ ಕಥನ, ಪ್ರಾಣಿ ಪ್ರೀತಿ ಹಾಗೂ ಡಾಗ್ ಬ್ರೀಡಿಂಗ್ ಸುತ್ತ ಹೆಣೆದಿರೋ ಮಾನವೀಯ ಅಂಶಗಳ ಥ್ರಿಲ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಸವಕಲಾಗುತ್ತಿವೆ. ಈ ಜನರೇಷನ್ನಿನ ಕಣ್ಣಿನಲ್ಲಿ ಸಂಬಂಧಗಳು ಬೇರೆಯದ್ದೇ ಛಾಯೆಯಲ್ಲಿ ಕಾಣಿಸಲಾರಂಭಿಸಿವೆ. ಈ ಸೂಕ್ಷ್ಮ ಸಂಗತಿಯ ನೆಲೆಗಟ್ಟಿನಲ್ಲಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆಯಂತೆ.

    ಈ ಚಿತ್ರದ ಬಗ್ಗೆ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಈ ಚಿತ್ರದಲ್ಲಿ ಕಥೆ ಅದ್ಭುತವಾಗಿರೋ ಕಾರಣದಿಂದ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿರುವ ಸಂಯುಕ್ತಾ ತಮಿಳಿನಲ್ಲಿ ನೆಲೆಗೊಳ್ಳುವ ಆಸೆ ಹೊಂದಿರುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv