Tag: ಸಂಯುಕ್ತಾ ಹೆಗ್ಡೆ

  • ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

    ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

    ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಜೊತೆ ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದರು. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ತರಾಟೆಗೆ ತೆಗೆದುಕೊಂಡಿದ್ದರು. ನೆಟ್ಟಿಗರ ಕಾಮೆಂಟ್ಸ್‌ಗೆ ಮತ್ತು ಟ್ರೋಲ್‌ಗೆ ಇದೀಗ ಕಿಶನ್ ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಮಗಳು ಅಗಲಿ 9 ದಿನಗಳ ಬಳಿಕ ಸಿನಿಮಾ ಪ್ರಚಾರಕ್ಕೆ ಮರಳಿದ ವಿಜಯ್ ಆಂಥೋನಿ

    ಕಿರಿಕ್‌ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ- ಕಿಶನ್ ಬಿಳಗಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಜಂಗ್ಲಿ ಸಿನಿಮಾದ ‘ನೀನೆಂದರೆ ನನ್ನೊಳಗೆ’ ಎಂಬ ಹಾಡಿಗೆ ಕಿಶನ್ ಜೊತೆ ನಟಿ ಸೊಂಟ ಬಳುಕಿಸಿದ್ದರು. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಹೈಲೆಟ್ ಆಗಿದ್ದರು. ವಿಡಿಯೋ ಶೇರ್ ಮಾಡಿ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಪಡೆದಿತ್ತು. ಸಂಯುಕ್ತಾ ಧರಿಸಿದ ಅರೆಬರೆ ಬಟ್ಟೆಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್‌ ಹರಿದು ಬಂದಿತ್ತು. ಸಹನಟಿಗೆ ಟ್ರೋಲ್‌ ಮಾಡಿದ್ದಕ್ಕೆ ಕಿಶನ್‌ ತಿರುಗೇಟ್‌ ನೀಡಿದ್ದಾರೆ. ಮೊದಲು ಕಲೆಯನ್ನು ಗೌರವಿಸಿ ಎಂದಿದ್ದಾರೆ.

    ಮೊದಲಿಗೆ ನಾನು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಬಾರದು ಎಂದು ಭಾವಿಸಿದ್ದೆ, ಆದರೆ ಬಂದಿರುವ ಕಾಮೆಂಟ್ಸ್ ನೋಡಿ ರಿಯಾಕ್ಟ್ ಮಾಡಬೇಕು ಅನಿಸಿತು. ನೀವು ಟಿವಿ, ಚಲನಚಿತ್ರಗಳು, ರೊಮ್ಯಾಂಟಿಕ್ ಸಿನಿಮಾಗಳನ್ನ ನೋಡುವುದಿಲ್ಲವೇ? ಅದಕ್ಕಿಂತ ಇದು ಹೇಗೆ ಭಿನ್ನವಾಗಿದೆ. ನೀವು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಿನಿಮಾಗಳನ್ನ ನೋಡುತ್ತಿದ್ದೀರಿ, ಅಲ್ಲಿ ರೂಪದರ್ಶಿಗಳು ಬೀಚ್‌ಗಳಿಂದ ಹೊರಬರುತ್ತಾರೆ ಅಲ್ಲವೇ?

    ನೀವು ಕಲೆಯನ್ನು ಗೌರವಿಸದೆ, ಡ್ರೆಸ್ಸಿಂಗ್‌ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಮಾಡುವುದು ಅದೆಷ್ಟು ಸರಿ. ನರ್ತಕಿಯರು ಬ್ಯಾಲೆ ಡ್ಯಾನ್ಸ್ ಮಾಡುವಾಗ ಈ ರೀತಿಯ ಬಟ್ಟೆಗಳನ್ನ ಧರಿಸುತ್ತಾರೆ. ಈ ರೀತಿಯ ಬಟ್ಟೆಗಳು ಅವರ ಕಂಫರ್ಟ್ ಜೋನ್‌ಗೆ ಬಿಟ್ಟಿದ್ದು ಎಂದು ನಟ ಕಿಶನ್ ಹೇಳಿದ್ದಾರೆ. ದಯವಿಟ್ಟು ಗೂಗಲ್ ಮಾಡಿ ಬ್ಯಾಲೆ ಬಟ್ಟೆಗಳನ್ನು ಮತ್ತು ನರ್ತಕಿಯಾಗಿ ನೃತ್ಯ ಮಾಡುವರ ಬಗ್ಗೆ ತಿಳಿದುಕೊಳ್ಳಿ ಎಂದು ಟ್ರೋಲ್ ಮಾಡುವವರಿಗೆ ನಟ ರಿಯಾಕ್ಟ್ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಶನ್ ಜೊತೆ ಸೊಂಟ ಬಳುಕಿಸಿದ ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು

    ಕಿಶನ್ ಜೊತೆ ಸೊಂಟ ಬಳುಕಿಸಿದ ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು

    ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ (Samyuktha Hegde) ಜೊತೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಈಗ ಕಿಶನ್ ಬಿಳಗಲಿ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಜಂಗ್ಲಿ (Junglee) ಸಿನಿಮಾದ ನೀನೆಂದರೆ ನನ್ನೊಳಗೆ ಎಂಬ ಹಾಡಿಗೆ ಕಿಶನ್ ಜೊತೆ ನಟಿ ಸೊಂಟ ಬಳುಕಿಸಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಹೈಲೆಟ್‌ ಆಗಿದ್ದಾರೆ.

    ಈ ರೊಮ್ಯಾಂಟಿಕ್ ವಿಡಿಯೋ ನೋಡಿ, ಸರಿಯಾಗಿ ಬಟ್ಟೆ ಹಾಕಮ್ಮ ಇದೆಲ್ಲಾ ನಿನಗೆ ಬೇಕಾ? ಎಂದು ನಟಿಗೆ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:Animal: ರಣ್‌ಬೀರ್ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ರಶ್ಮಿಕಾ

    ರಿಯಾಲಿಟಿ ಶೋಗಳಲ್ಲಿನ ಡ್ಯಾನ್ಸ್ ಮೂಲಕ ಮೋಡಿ ಮಾಡಿರುವ ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಡ್ಯಾನ್ಸ್, ಫೋಟೋಶೂಟ್, ದಿನಚರಿಯ ಬಗ್ಗೆ ಅಪ್‌ಡೇಟ್ ನೀಡುತ್ತಾ ಸಕ್ರಿಯರಾಗಿದ್ದಾರೆ. ಸಂಯುಕ್ತಾ ಜೊತೆಗಿನ ಕಿಶನ್ ಡ್ಯಾನ್ಸ್ ಮೆಚ್ಚುಗೆಯ ಜೊತೆ ನೆಗೆಟಿವ್ ಕಾಮೆಂಟ್ಸ್‌ ಕೂಡ ಹರಿದು ಬರುತ್ತಿವೆ.‌ ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿಯ ಬೋಲ್ಡ್ ಫೋಟೋಗೆ ಫೈರ್ ಇಂಜಿನ್ ಎಂದ ನೆಟ್ಟಿಗರು

    ‘ಕ್ರೀಮ್’ ಎಂಬ ಸಿನಿಮಾದ ಚಿತ್ರೀಕರಣವನ್ನ ಸಂಯುಕ್ತಾ ಮುಗಿಸಿಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ನ್ನಡದ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ (Samyuktha Hegde) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಟ್ರಾವೆಲಿಂಗ್ ಇಷ್ಟ ಪಡೋ ಸಂಯುಕ್ತಾ ಈ ಬಾರಿ ಮಾಲ್ಡೀವ್ಸ್‌ಗೆ (Maldives) ಹಾರಿದ್ದಾರೆ. ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ:ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್

    ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಳಿಕ ಸಂಯುಕ್ತಾ ಹೆಗ್ಡೆ ಮಾಲ್ಡೀವ್ಸ್ ಡೇಸ್ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಸೋನು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಅವರ ಬಿಕಿನಿ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಈಗ ಕಿರಿಕ್ ನಟಿ ಸಂಯುಕ್ತಾ, ನಾನೇನು ಕಮ್ಮಿ ಎಂಬಂತೆ ಬಿಕಿನಿ ಅವತಾರದಲ್ಲಿ ಪಡ್ಡೆಹುಡುಗರಿಗೆ ದರ್ಶನ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಬಿಕಿನಿ ಲುಕ್‌ನಲ್ಲಿ ಇದೇ ಮೊದಲೇನಲ್ಲ, ಈ ಹಿಂದೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸುದ್ದಿಯಾಗಿದ್ದರು. ಒಟ್ನಲ್ಲಿ ಸ್ಯಾಂಡಲ್‌ವುಡ್ ನಟಿಯರ ಬಿಕಿನಿ ಫೋಟೋಸ್ ನೋಡಿ, ಪಡ್ಡೆಹುಡುಗರ ಪಾಲಿಗೆ ಇಷ್ಟದೇವತೆಗಳಾಗಿದ್ದಾರೆ.

    ರಕ್ಷಿತ್ ಶೆಟ್ಟಿ(Rakshit Shetty), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ (Samyuktha Hegde) ಕೂಡ ನಾಯಕಿಯಾಗಿ ನಟಿಸಿ ಗಮನ ಸೆಳೆದಿದ್ದರು. ಬಳಿಕ ಸೌತ್ ಸಿನಿಮಾದಲ್ಲಿ ಸಂಯುಕ್ತಾ ಗುರುತಿಸಿಕೊಂಡರು. ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಗಲಿಲ್ಲ.

    ಜಯಂರವಿ, ಪ್ರಭುದೇವ, ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ಸಂಯುಕ್ತಾ ನಟಿಸಿದ್ದರು. ಈಗ ಕನ್ನಡದ ‘ಕ್ರೀಮ್’ (Cream) ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರಿಲೀಸ್ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮ ದೇಹ ನಿಮ್ಮ ಆಸ್ತಿ ಎಂದು ದೇಹ ಪ್ರದರ್ಶಿಸಿದ ಸಂಯುಕ್ತಾ ಹೆಗ್ಡೆ

    ನಿಮ್ಮ ದೇಹ ನಿಮ್ಮ ಆಸ್ತಿ ಎಂದು ದೇಹ ಪ್ರದರ್ಶಿಸಿದ ಸಂಯುಕ್ತಾ ಹೆಗ್ಡೆ

    ಸ್ಯಾಂಡಲ್‌ವುಡ್‌ನ ‘ಕಿರಿಕ್ ಪಾರ್ಟಿ’ಯ (Kirik Party) ಕಿರಿಕ್ ಸುಂದರಿ ಸಂಯುಕ್ತಾ ಹೆಗ್ಡೆ (Samyuktha Hegde) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದಾರೆ.

    ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. ೫ ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಕಿರಿಕ್ ಬೆಡಗಿ ಸಂಯುಕ್ತಾ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

    ನಿಮ್ಮ ದೇಹ, ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲಿಕತ್ವ ಹೊಂದಿಲ್ಲ. ಮಹಿಳೆಯರು ಫ್ರಿಡಮ್, ಆತ್ಮವಿಶ್ವಾಸಕ್ಕೆ ಅವಕಾಶವಿದೆ. ಶಕ್ತಿ ಎನ್ನುವುದು ಪುರುಷ ಮತ್ತು ಸ್ತ್ರಿ ಎನ್ನುವುದು ಅಲ್ಲ ಎಂದು ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ನಟಿ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲ. ‘ಕ್ರೀಮ್’ (Cream) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಸಂಯುಕ್ತಾ ಒಂದೇ ಸಿನಿಮಾದಿಂದ ಲಾಂಚ್ ಆದ್ರೂ ಕೂಡ ರಶ್ಮಿಕಾ ಅವರಿಗೆ ಸಿಕ್ಕಂತಹ ಯಶಸ್ಸು ಸಂಯುಕ್ತಾಗೆ ಸಿಗಲಿಲ್ಲ. ಒಳ್ಳೆಯ ಕಥೆಗಾಗಿ ನಟಿ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಸಂಯುಕ್ತಾ ಹೆಗ್ಡೆ

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಸಂಯುಕ್ತಾ ಹೆಗ್ಡೆ

    ನ್ನಡದ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ (Samyuktha Hegde) ಅವರು ಸದ್ಯ ಮಾಲ್ಡೀವ್ಸ್ ಪ್ರವಾಸ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸಂಯುಕ್ತಾ ಬಿಕಿನಿ ಸಖತ್ ಹಾಟ್ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ಸಂಯುಕ್ತಾ, ರಕ್ಷಿತ್ ಶೆಟ್ಟಿ (Rakshit Shetty) ನಾಯಕಿಯಾಗುವ ಮೂಲಕ ಮೋಡಿ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗದೇ ಇದ್ದಾಗ, ತಮಿಳು (Tamil) ಚಿತ್ರರಂಗದತ್ತ ಮುಖ ಮಾಡಿದ್ದರು.

    ಜಯಂರವಿ (Jayamravi) ನಟನೆಯ ‘ಕೋಮಲಿ’ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಅಭಿನಯಿಸಿದ್ದರು. ಈ ಮೂಲಕ ಕಾಲಿವುಡ್‌ಗೆ ನಟಿ ಎಂಟ್ರಿ ಕೊಟ್ಟರು. ಬಳಿಕ ತಮಿಳಿನ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಕನ್ನಡ- ತಮಿಳು ಚಿತ್ರಗಳಲ್ಲಿ ಸಂಯುಕ್ತಾ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ನಾನೇಕೆ ಡಿವೋರ್ಸ್ ಫೋಟೋಶೂಟ್ ಮಾಡಿಸಿದೆ?: ನಟಿ ಶಾಲಿನಿ ಬಿಚ್ಚಿಟ್ಟ ರಹಸ್ಯ

     

    View this post on Instagram

     

    A post shared by Samyuktha Hegde (@samyuktha_hegde)

    ಸದ್ಯ ಕಿರಿಕ್ ಚೆಲುವೆ ಸಂಯುಕ್ತಾ, ಮಾಲ್ಡೀವ್ಸ್ನ ಸುಂದರ ತಾಣದಲ್ಲಿ ನೀಲಿ ಬಣ್ಣದ ಬಿಕಿನಿ ಧರಿಸಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಶೇರ್ ಮಾಡಿರುವ ಬಿಕಿನಿ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  • ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆ ಹಿಂದಿನ ಕಥನವೇ ‘ಕ್ರೀಮ್’ ಚಿತ್ರ

    ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆ ಹಿಂದಿನ ಕಥನವೇ ‘ಕ್ರೀಮ್’ ಚಿತ್ರ

    ಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾ ಪ್ರಧಾನ ಚಿತ್ರ  ‘ಕ್ರೀಮ್’ (Kreem). ಸಂಯುಕ್ತಾ ಹೆಗ್ಡೆ (Samyuktha Hegde) ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣಸಾಗರ್  (Arun Sagar) ಪ್ರಮುಖ ಪಾತ್ರಗಳಲ್ಲಿದ್ದಾರೆ.  ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.

    ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡದ ಸದಸ್ಯರು ಕ್ರೀಮ್ ಚಿತ್ರದ ಕುರಿತು ಮಾತನಾಡಿದರು.  ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್‌ ಅವರು ಸೇರಿದಂತೆ ಸಾಕಷ್ಟು ಜನ ಸಹಕಾರ ನೀಡಿದ್ದಾರೆ.    ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ.  ನಮ್ಮ ಚಿತ್ರಕ್ಕೆ  ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

    ಕ್ರೀಮ್ ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ.  ದೇಶದಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ, ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ?  ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ.   ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಈ ಸಿನಿಮಾಗಾಗಿ ನಾನು 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು.  ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ. ಚಿತ್ರ ಚೆನ್ನಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕ ದೇವೇಂದ್ರ ಧನ್ಯವಾದ ತಿಳಿಸಿದರು. ನಟ ರೋಷನ್ ಸೇರಿದಂತೆ ಚಿತ್ರತಂಡ ಹಲವು ಸದಸ್ಯರು ಹಾಜರಿದ್ದರು.

  • ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ

    ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ

    ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಇದೀಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ತಮ್ಮ 28ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಿನದಿಂದ ದಿನಕ್ಕೆ ಚಿತ್ರತಂಡ ಪಾತ್ರವರ್ಗ ಹಿರಿದಾಗುತ್ತಿದೆ. ಈಗ ಮಹೇಶ್ ಬಾಬು ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ರೇಖಾ ಆಗಮನವಾಗಿದೆ.

    `ಸರ್ಕಾರು ವಾರಿ ಪಾಟ’ ಚಿತ್ರದ ಗೆಲುವಿನ ನಂತರ ನಿರ್ದೇಶಕ ತ್ರಿವಿಕ್ರಮ್ ಜೊತೆ ಪ್ರಿನ್ಸ್ ಮಹೇಶ್ ಬಾಬು ಕೈಜೋಡಿಸಿದ್ದಾರೆ. ಹೊಸ ಬಗೆಯ ಪಾತ್ರದಲ್ಲಿ ಬರಲು ನಟ ರೆಡಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಚಿತ್ರಕ್ಕೆ ಸಾಥ್ ನೀಡಲು ನಟಿ ರೇಖಾ ಎಂಟ್ರಿಯಾಗಿದೆ.

    ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿ ರೇಖಾ ನಟಿಸುತ್ತಿದ್ದಾರೆ. ರೇಖಾ ಪಾತ್ರ ಈ ಸಿನಿಮಾದಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದು, ಕಥೆ ಕೇಳ್ತಿದ್ದಂತೆ ಖುಷಿಯಿಂದ ಸೌತ್ ಸಿನಿಮಾದಲ್ಲಿ ನಟಿಸಲು ನಟಿ ಓಕೆ ಎಂದಿದ್ದಾರೆ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

    ಇನ್ನೂ ಮಹೇಶ್ ಬಾಬು ನಾಯಕಿಯರಾಗಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಮತ್ತು `ಗಾಳಿಪಟ 2′ ನಾಯಕಿ ಸಂಯುಕ್ತಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಎಸ್. ರಾಧಾಕೃಷ್ಣ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.

  • ಚಿತ್ರೀಕರಣದ ವೇಳೆ ಸಂಯುಕ್ತಾ ಹೆಗ್ಡೆಗೆ ಭಾರಿ ಪೆಟ್ಟು

    ಚಿತ್ರೀಕರಣದ ವೇಳೆ ಸಂಯುಕ್ತಾ ಹೆಗ್ಡೆಗೆ ಭಾರಿ ಪೆಟ್ಟು

    ಸ್ಯಾಂಡಲ್‌ವುಡ್‌ಗೆ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಸಂಯುಕ್ತಾ ಹೆಗ್ಡೆಗೆ, ಸಿನಿಮಾ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಮಾಡುವ ಸಂದರ್ಭದಲ್ಲಿ ನಟಿ ಸಂಯುಕ್ತಾಗೆ ಈ ಅವಘಡ ನಡೆದಿದೆ.

    ಕನ್ನಡ ಮತ್ತು ಸೌತ್ ಸಿನಿಮಾರಂಗದಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆಗೆ `ಕ್ರೀಮ್’ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಈ ಅವಘಡ ನಡೆದಿದೆ. ಡ್ಯೂಪ್ ಬಳಸಿ ಚಿತ್ರೀಕರಣ ಮಾಡೋಣ ಎಂದು ಚಿತ್ರತಂಡ ಒತ್ತಾಯಿಸಿದರೂ ಸಂಯುಕ್ತಾ ಒಪ್ಪದಿದ್ದ ಕಾರಣ ಚಿತ್ರೀಕರಣ ವೇಳೆ ನಟಿಗೆ ಪೆಟ್ಟಾಗಿದೆ. ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಇದೀಗ ನಟಿಗೆ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಒಪ್ಪಲಿಲ್ಲ ಇದರ ಪರಿಣಾಮ ನಾಯಕಿ ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಈ ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೈಕಿನಲ್ಲಿ ಹೋಗ್ತಿದ್ದಾಗಲೇ ಸಂಯುಕ್ತಾ ಹೆಗ್ಡೆ ಲಿಪ್ ಲಾಕ್

    ಬೈಕಿನಲ್ಲಿ ಹೋಗ್ತಿದ್ದಾಗಲೇ ಸಂಯುಕ್ತಾ ಹೆಗ್ಡೆ ಲಿಪ್ ಲಾಕ್

    ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಅವರು ಲಿಪ್‍ಲಾಕ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಂಯುಕ್ತಾ ತಮಿಳಿನಲ್ಲಿ ನಟಿಸಿರುವ ‘ಪಪ್ಪಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಟ್ರೈಲರ್ ನಲ್ಲಿ ಸಂಯುಕ್ತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಲಿಪ್‍ಲಾಕ್ ದೃಶ್ಯಗಳಲ್ಲಿ ಅಭಿನಯಿಸಿದ್ದು, ಜೊತೆಗೆ ಕೆಲವು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಪ್ಪಿ ಚಿತ್ರದಲ್ಲಿ ಸಂಯುಕ್ತಾ, ಹೀರೋ ವರುಣ್ ಜೊತೆ ಬೈಕಿನಲ್ಲಿ ಹೋಗುವಾಗ ಲಿಪ್‍ಲಾಕ್ ಮಾಡುವ ದೃಶ್ಯಗಳು ವೈರಲ್ ಆಗಿವೆ.

    ಮೊರಟ್ಟು ಸಿಂಗಲ್ `ಪಪ್ಪಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಯುಕ್ತಾ ಇದೀಗ ತಮಿಳಿನಲ್ಲಿ ಲಿಪ್‍ಲಾಕ್ ಮಾಡಿದ್ದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಈ ಹಿಂದೆ ಕನ್ನಡದ `ಮೈ ನೇಮ್ ಈಸ್ ರಾಜ್’ ಸಿನಿಮಾದಲ್ಲಿ ಸಂಯುಕ್ತಾ ಅಭಿನಯಿಸಬೇಕಿತ್ತು. ಆದರೆ ಚಿತ್ರದಲ್ಲಿ ಲಿಪ್‍ಲಾಕ್ ದೃಶ್ಯಗಳು ಇವೆ ಎಂದು ಚಿತ್ರವನ್ನು ರಿಜೆಕ್ಟ್ ಮಾಡಿದ್ದರು ಎಂದು ಚಿತ್ರತಂಡ ತಿಳಿಸಿತ್ತು.

    ಸಂಯುಕ್ತಾ ಈ ಹಿಂದೆ ತಮಿಳಿನ ‘ಕೋಮಲಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ಈ ಸಿನಿಮಾ ಬಿಡುಗಡೆಯಾಗಿದ್ದು, ಸಂಯುಕ್ತಾ ಶಾಲಾ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಂಯುಕ್ತಾ ಸಾಮಾಜಿಕ ಜಾಲತಾಣದಲ್ಲೂ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಆದರೆ ಈಗ ಬೈಕ್ ಮೇಲೆ ಲಿಪ್‍ಲಾಕ್ ಮಾಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ.

  • ಚುಮು ಚುಮು ಚಳಿಯಲ್ಲಿ ಮತ್ತೆ ಬಿಕಿನಿ ತೊಟ್ಟ ಸಂಯುಕ್ತ ಹೆಗ್ಡೆ

    ಚುಮು ಚುಮು ಚಳಿಯಲ್ಲಿ ಮತ್ತೆ ಬಿಕಿನಿ ತೊಟ್ಟ ಸಂಯುಕ್ತ ಹೆಗ್ಡೆ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಮತ್ತೆ ಬಿಕಿನಿ ತೊಟ್ಟು ಮಿಂಚಿದ್ದು, ಚುಮು ಚುಮು ಚಳಿಯಲ್ಲಿ ಸ್ವಿಮ್ಮಿಂಗ್ ಪೂಲ್‍ನಿಂದ ಬ್ಲಕ್ ಬಿಕಿನಿ ತೊಟ್ಟು ಪೋಸ್ ನೀಡಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆಯೂ ಬಿಕಿನಿ ತೊಟ್ಟು ಪಡ್ಡೆ ಹುಡುಗದ ಮನಸೆಳೆದಿದ್ದ ಸಂಯುಕ್ತ ಹೆಗ್ಡೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ರು. ಆದರೆ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋ ಹಾಕುವ ಮೂಲಕ ಟಾಂಗ್ ನೀಡಿದ್ದಾರೆ. ಜನರು ನಿಮ್ಮನ್ನು ದ್ವೇಷಿಸಬಹುದು, ರೇಟ್ ಮಾಡಬಹುದು, ನಿಮ್ಮನ್ನು ಅಲುಗಾಡಿಸಲು ಬಹುದು. ಆದರೆ ನೀವು ಎಷ್ಟು ಗಟ್ಟಿಯಾಗಿ ನಿಂತು ಎದುರಿಸಿದ್ದೀರಾ ಎಂಬುವುದು ನಿಮ್ಮನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BtQRdiwl7qG/

    ನೀವು ತುಂಬಾ ಕಪ್ಪಗಿದ್ದಿರಾ? ಅಥವಾ ಫೇರ್ ಆಗಿದ್ದಿರಾ? ದಪ್ಪವಾಗಿದ್ದಿರಾ? ಸಣ್ಣಗಿದ್ದಿರಾ? ಎತ್ತವಾಗಿದ್ದಿರಾ? ಕುಳ್ಳರಾಗಿದ್ದೀರಾ? ಎಂಬುವುದನ್ನು ಬಿಡಿ. ನಮ್ಮಲ್ಲಿ ಯಾವಾಗಲೂ ಏನೋ ಒಂದು ಕೊರತೆ ಇರುತ್ತದೆ. ಆದ್ದರಿಂದ ಜಗತ್ತಿನ ಬಗ್ಗೆ ಕೇರ್ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ನಿಮ್ಮ ಬಗ್ಗೆ ಜಗತ್ತು ಯೋಚಿಸುವುದಿಲ್ಲ. ನಿಮಗಾಗಿ ಜೀವಿಸಿ, ನಿಮ್ಮನ್ನು ನೀವು ಪ್ರೀತಿಸಿ ಎಂದು ಮತ್ತೊಂದು ಫೋಟೋದಲ್ಲಿ ಬರೆದುಕೊಂಡಿದ್ದಾರೆ.

    ಸಂಯುಕ್ತ ಹೆಗ್ಡೆ ಸದ್ಯ ಎಂಟಿವಿಯ ‘ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಇತರೇ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಮತ್ತೊಮ್ಮೆ ಕಿರಿಕ್ ಹುಡ್ಗಿ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಕನ್ನಡ ಬಿಗ್‍ಬಾಸ್ 5ನೇ ಆವೃತ್ತಿಯಲ್ಲಿ ಸಂಯುಕ್ತಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಪ್ರವೇಶಿಸಿದ್ದರು. ಅಲ್ಲೂ ಕೂಡ ಪ್ರತಿ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

    https://www.instagram.com/p/BtKrgw5lRnL/

    https://www.instagram.com/p/BtInQCnF0uh/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv