Tag: ಸಂಯುಕ್ತಾ ಹೆಗಡೆ

  • ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ- ಸಂಯುಕ್ತಾ ಹಾಟ್ ಫೋಟೋ ವೈರಲ್

    ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ- ಸಂಯುಕ್ತಾ ಹಾಟ್ ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಯುಕ್ತಾ ಹೆಗಡೆ ಸದಾ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಅವರು ಹಾಟ್ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ದೇಹದ ಕುರಿತಾಗಿ ಬರೆದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಸಾಕಷ್ಟು ನೆಗೆಟಿವ್ ಕಾಮೆಂಟ್ಸ್, ಟ್ರೋಲ್ಸ್‍ಗಳನ್ನು ಎದುರಿಸಿದ್ದಾರೆ. ಅವರ ದೇಹದ ಬಗ್ಗೆಯೂ ಕೂಡ ಕಾಮೆಂಟ್ ಮಾಡಲಾಗಿದೆಯಂತೆ. ಹೀಗಾಗಿ ಸಂಯುಕ್ತಾ ವಿಶೇಷವಾದ ಪೋಸ್ಟ್‌ನೊಂದಿಗೆ ಅವರ ಬೇಸರವನ್ನು ಹೊರಹಾಕಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

     

    View this post on Instagram

     

    A post shared by Samyuktha Hegde (@samyuktha_hegde)

    ನಾನು ತೆಳ್ಳಗಿರುವುದು ಎಷ್ಟು ಅದೃಷ್ಟ ಎಂದು ನಿರಂತರವಾಗಿ ತಿಳಿಸಿಕೊಟ್ಟಿದ್ದಕ್ಕೆ, ನನ್ನ ದೇಹದ ಪ್ರಕೃತಿಯ ಬಗ್ಗೆ ಗಮನಹರಿಸದಿರುವುದಕ್ಕೆ, ನಾನು ಫಿಟ್ ಆಗಿರಲು ಮಾಡುವ ಎಲ್ಲ ಪ್ರಯತ್ನಗಳನ್ನು ತಿರಸ್ಕರಿಸಿ ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತಿರುವುದಕ್ಕೆ, 45 ಕೆಜಿಯಿಂದ 50ಕೆಜಿ ಆಗುವವರೆಗೆ ನಾನು ಮಾಡಿದ ಪ್ರಯತ್ನಗಳನ್ನು ತಿರಸ್ಕರಿಸುವುದಕ್ಕೆ, ನೀನು ಏನು ಬೇಕಾದರೂ ತಿನ್ನು, ಅದು ನಿನ್ನ ದೇಹ ತೋರಿಸಲ್ಲ ಎಂದು ಹೇಳಿದ್ದಕ್ಕೆ, ತೆಳ್ಳಗಿರುವವರು ಫಿಟ್ ಆಗಿರೋದು ಲೆಕ್ಕಕ್ಕೆ ಬರೋದಿಲ್ಲ, ದಪ್ಪಗಿರುವವರು ಫಿಟ್ ಆಗಿರೋದು ಮಾತ್ರ ಲೆಕ್ಕಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

    Samyuktha Hegde

    ಶಾಂತಿಯಿಂದ ಪ್ರತಿಯೊಬ್ಬರು ಒಂದೊಂದು ಹೋರಾಟ ಮಾಡುತ್ತಿರುತ್ತಾರೆ. ನೀವು ಏನು ನೋಡುತ್ತೀರೋ ಅದರ ಆಧಾರದ ಮೇಲೆ ನಿರ್ಣಯಕ್ಕೆ ಬರಬೇಡಿ. ಕೆಲವರು ತೂಕ ಕಳೆದುಕೊಳ್ಳಲು ಹೋರಾಟ ಮಾಡಿದರೆ, ಕೆಲವರು ತೂಕ ಹೆಚ್ಚಿಸಿಕೊಳ್ಳಲು ಹೋರಾಟ ಮಾಡುತ್ತಿರುತ್ತಾರೆ. ಕೆಲವರು ಫಿಟ್ ಆಗಿರಲು ನಿರಂತರ ಅವರ ಪ್ರಯತ್ನ ಹಾಕುತ್ತಿರುತ್ತಾರೆ. ಯಾರೂ ಅದೃಷ್ಟವಂತರಲ್ಲ. ಎಲ್ಲರೂ ಹುಟ್ಟಿನಿಂದ ಪರ್ಫೆಕ್ಟ್ ಅಲ್ಲ, ಪರಿಪೂರ್ಣತೆಯನ್ನು ಪಡೆಯಲು ಯಾವುದೇ ಪ್ರಯಾಣವಿಲ್ಲ ಏಕೆಂದರೆ ಅದು ಅಸ್ತಿತ್ವದಲ್ಲಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ. ನಿಮ್ಮ ದೇಹವನ್ನು ಪೋಷಿಸುವುದು, ತರಬೇತಿ ನೀಡುವುದು ಮುಖ್ಯ ಎಂದು ಸಂಯುಕ್ತಾ ಇನ್‍ಸ್ಟಾಗ್ರಮ್‍ನಲ್ಲಿ ಬರೆದುಕೊಂಡು ಹಾಟ್ ಆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

  • ವಿದೇಶಿ ಯುವಕನ ಜೊತೆ ಸಂಯುಕ್ತಾ ಪ್ರೇಮ್ ಕಹಾನಿ

    ವಿದೇಶಿ ಯುವಕನ ಜೊತೆ ಸಂಯುಕ್ತಾ ಪ್ರೇಮ್ ಕಹಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆ ವಿದೇಶಿ ಯುವಕನನ್ನು ಪ್ರೀತಿಸುತ್ತಿದ್ದಾರೆ. ಅಲ್ಲದೆ ಆ ಯುವಕನ ಜೊತೆ ಇರುವ ಫೋಟೋವನ್ನು ಸಂಯುಕ್ತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸಂಯುಕ್ತಾ ವಿದೇಶಿ ಯುವಕ ಕ್ರಿಸ್ ಸಾವರ್ ರನ್ನು ಪ್ರೀತಿಸುತ್ತಿದ್ದಾರೆ. ತನ್ನ ಇನ್‍ಸ್ಟಾಗ್ರಾಂನಲ್ಲಿ ಕ್ರಿಸ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ ಹೊರತು ಆ ಫೋಟೋ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

     

    View this post on Instagram

     

    Chocolate and vanilla are better together #travel #travelphotography #travelislife #travelholic #germany #europe #thebarefeetchronicles

    A post shared by Samyuktha Hegde (@samyuktha_hegde) on

    ಕ್ರಿಸ್ ಜೊತೆಯಿರುವ ಫೋಟೋ ಹಾಕಿರುವ ಸಂಯುಕ್ತಾ, `ನೀನು ಎಂದಿಗಿಂತಲೂ ನನಗೆ ಹೆಚ್ಚು ಕಿರಿಕಿರಿ ಮಾಡುತ್ತೀಯಾ. ನಾನು ಮೊದಲೇ ಕ್ರೇಜಿ ಆಗಿದ್ದೇನೆ. ಆದರೆ ನೀನು ನನಗೆ ಇನ್ನಷ್ಟು ಕ್ರೇಜಿ ಆಗಿ ಇರುವಂತೆ ಮಾಡುತ್ತೀಯಾ. ನಾವು 5 ವರ್ಷದ ಮಕ್ಕಳಂತೆ ಜಗಳವಾಡುತ್ತೇವೆ. ಕಿರಿಕಿರಿ ಮಾಡುವ ಪ್ರತಿಯೊಂದು ಕ್ಷಣವನ್ನು ನಾನು ನಿನ್ನ ಜೊತೆ ಬದುಕಬೇಕು’ ಎಂದು ಬರೆದುಕೊಂಡಿದ್ದಾರೆ.

    ಸಂಯುಕ್ತಾ ಹಾಗೂ ಕ್ರಿಸ್ ಒಟ್ಟಿಗೆ ಯೂರೋಪ್, ಬ್ಯಾಂಕಾಕ್, ಜರ್ಮನಿ ಹೀಗೆ ಹಲವು ದೇಶಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಂಯುಕ್ತಾ ತನ್ನ ಗೆಳೆಯ ಕ್ರಿಸ್ ಜೊತೆ ಕ್ಲೋಸ್ ಆಗಿ ಇರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • ಆಚಾರ್ಯರ ಕೆನ್ನೆಗೆ ಬಾರಿಸಿದ್ದ ಕಿರಿಕ್ ರಾಣಿಗೆ ಕಿಚ್ಚ ಸುದೀಪ್ ಕ್ಲಾಸ್

    ಆಚಾರ್ಯರ ಕೆನ್ನೆಗೆ ಬಾರಿಸಿದ್ದ ಕಿರಿಕ್ ರಾಣಿಗೆ ಕಿಚ್ಚ ಸುದೀಪ್ ಕ್ಲಾಸ್

    ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚಿನ ನೋಡುಗರನ್ನು ಹೊಂದಿದ ಪವರ್ ಫುಲ್ ರಿಯಾಲಿಟಿ ಶೋ. ಆದರೆ ಈ ಬಾರಿ ಬಿಗ್‍ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿದ್ದ ನಟಿ ಸಂಯುಕ್ತಾ ಹೆಗಡೆ ಸ್ಪರ್ಧಿಯಾಗಿರುವ ಸಮೀರ್ ಆಚಾರ್ಯರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಔಟ್ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶನಿವಾರ ಸುದೀಪ್ ಈ ವಿಷಯದ ಕುರಿತು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

    ಎಲ್ಲಾ ವಿಚಾರಗಳಿಗೂ ದೃಷ್ಟಿ ಬೊಟ್ಟು ಇಡುವಂತಹ ಘಟನೆ ನಡೆಯುತ್ತದೆ. ಆ ಘಟನೆ ನಡೆಯಬಾರದಿತ್ತು, ಆದ್ರೆ ನಡೆದು ಹೋಯ್ತು. ಸಂಯುಕ್ತಾ ಅತಿಥಿಯಾಗಿ ಬಂದಿದ್ರೂ ಸಮೀರ್ ಆಚಾರ್ಯರ ಮೇಲೆ ಅನಿವಾರ್ಯ ಕಾರಣಗಳಿಂದಾಗಿ ಅಥವಾ ಅನಿವಾರ್ಯದಿಂದಾಗಲೀ ಕೈ ಮಾಡಿದ್ದು ತಪ್ಪು ಮತ್ತು ನೋವಿನ ಸಂಗತಿ. ಹೊಡೆದಿದ್ದು ಬೇರೆ ಆ ನಂತರ ಬಿಗ್ ಬಾಸ್ ಗೆ ಕೊಟ್ಟಂತಹ ಕಾರಣಗಳು ಮತ್ತು ವಿವರಣೆಗಳು ಯಾವುದು ಒಪ್ಪುವ ಹಾಗಿರಲಿಲ್ಲ. ಹಾಗಾಗಿ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಮನೆಯಿಂದ ಹೊರ ಹೋದರು. ಆದ್ರೆ ಸಂಯುಕ್ತಾ ಇದು ಸರಿ ಅಲ್ಲ(ನಾಟ್ ರೈಟ್) ಮುಂದಿನದು ನಿಮಗೆ ಬಿಟ್ಟಂತಹ ವಿಚಾರ ಎಂದು ಪರೋಕ್ಷವಾಗಿ ತಿಳಿ ಹೇಳಿದರು.

    ಅಂದು ಮನೆಯಲ್ಲಿ ನಡೆದಿದ್ದೇನು?: ಬುಧವಾರ ಬಿಗ್ ಮನೆಯಲ್ಲಿ ಪುರುಷ ಮತ್ತು ಮಹಿಳಾ ಎಂಬ ಎರಡು ತಂಡಗಳನ್ನು ವಿಂಗಡಿಸಲಾಗಿತ್ತು. ನಂತರ ಎರಡೂ ತಂಡಕ್ಕೂ ಒಂದೊಂದು ದಾರಗಳ ಗೋಪುರವನ್ನು ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಎದುರಾಳಿ ತಂಡದ ಗೋಪುರದ ದಾರಗಳನ್ನು ಕತ್ತರಿ ಮೂಲಕ ಕತ್ತರಿಸಬೇಕು. ಹೀಗೆ ಹೆಚ್ಚಿನ ದಾರಗಳನ್ನು ಕಟ್ ಮಾಡಿದ ತಂಡವನ್ನು ವಿಜಯಶಾಲಿ ತಂಡವಾಗಿ ಘೋಷಿಸಲಾಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದ್ದರು. ಇದನ್ನೂ ಓದಿ: ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ: ಪ್ರಥಮ್ 

    ಈ ಟಾಸ್ಕ್ ನಡೆಯುವಾಗ ಸಂಯುಕ್ತಾ ಎದುರಾಳಿ ತಂಡದ ಸಹಸ್ಪರ್ಧಿ ಚಂದನ್ ಶೆಟ್ಟಿ ಬಳಿಯಿರುವ ಕತ್ತರಿ ಪಡೆದುಕೊಳ್ಳಲು ಅವರ ಮೇಲೆಯೇ ಎರಗಿದ್ದರು. ಸ್ಥಳದಲ್ಲಿದ್ದ ಸಮೀರ್ ಆಚಾರ್ಯ, ಚಂದನ್ ನೆರವಿಗೆ ಧಾವಿಸಿದ್ದರು. ಇದರಿಂದ ಕೋಪಗೊಂಡ ಸಂಯುಕ್ತಾ ಎಲ್ಲೆಲ್ಲೊ ಮುಟ್ತೀರಾ ಎಂದು ಕಪಾಳಕ್ಕೆ ಬಾರಿಸಿದ್ದರು. ಘಟನೆ ಬಳಿಕ ಬಿಗ್ ಬಾಸ್ ಸಂಯುಕ್ತಾರನ್ನು ಮನೆಯಿಂದ ಕಿಕ್ ಔಟ್ ಮಾಡಲಾಗಿತ್ತು. ಇದನ್ನೂ ಓದಿ: ಕಿರಿಕ್ ಸಂಯುಕ್ತಾಗೆ ಜಗ್ಗೇಶ್ ಕ್ಲಾಸ್

    ಬಿಗ್ ಬಾಸ್ ಮನೆಯಿಂದ ಹೊರಬಂದ ಸಂಯುಕ್ತಾ ಇದೂವರೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಈ ಹಿಂದೆ ತೆರೆ ಕಂಡಿದ್ದ `ಕಾಲೇಜ್ ಕುಮಾರ್’ ಸಿನಿಮಾ ವಿಚಾರವಾಗಿ ಸಂಯುಕ್ತಾ ಚಿತ್ರತಂಡದೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿದ ಬಳಿಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತ ನಡೆಯನ್ನು ಈ ಟೀಕಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

  • ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

    ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್ ಔಟ್ ಆಗಿದ್ದು, ಈ ಕುರಿತು ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಸಂಯುಕ್ತಾ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯರಿಗೆ ಕಪಾಳಕ್ಕೆ ಹೊಡೆದಿರುವ ವಿಚಾರ ನನ್ನ ಗಮನಕ್ಕೆ ಬಂತು. ಬಿಗ್ ಬಾಸ್ ಜೀವನದ ಪಾಠವನ್ನು ಕಲಿಸುತ್ತದೆ. ಹೇಗಂದ್ರೆ ನಾವು ಅಲ್ಲಿದ್ದಾಗ ನಮ್ಮ ತಂಡದ ಮೇಲೆ ಅಭಿಮಾನ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಂಯುಕ್ತಾ ಹೆಗಡೆ ತಾವು ಥ್ರಿಲ್ಲರ್ ಮಂಜು ತಂಗಿ ತರನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಸಮೀರ್ ಅವರ ಮೇಲೆ ಕೈ ಮಾಡಿದ್ದು ನನಗ್ಯಾಕೋ ಅದು ಸರಿ ಅನ್ನಿಸುತ್ತಿಲ್ಲ ಅಂತಾ ಪ್ರಥಮ್ ತಿಳಿಸಿದ್ದಾರೆ.

    ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಒಂದು ಮಾತನ್ನು ಹೇಳಿ ಕೊಡುತ್ತಾರೆ. ಅದೇನೆಂದರೆ ನೀವು ಮನೆಗೆ ಹೋಗುವ ಮುಂಚೆ ನೀವು ನೀವಾಗಿರಿ. ನಿಮ್ಮತನ ಒಂದೇ ನಿಮ್ಮನ್ನು ಕಡೆವರೆಗೂ ಕರೆದುಕೊಂಡು ಹೋಗುತ್ತದೆ ಎಂದು ಕಲಿಸಿಕೊಡ್ತಾರೆ. ಬಿಗ್ ಬಾಸ್ ಮನೆಯಲ್ಲಿ ಬಿಗ್‍ಬಾಸ್ ಸಂವಿಧಾನ ಇರುತ್ತೆ. ಆ ಸಂವಿಧಾನದಂತೆ ಯಾರ ಮೇಲೆಯೂ ಕೈ ಮಾಡುವ ಹಾಗಿಲ್ಲ. ನಾಮಿನೇಷನ್ ಬಗ್ಗೆ ಮಾತನಾಡುವ ಹಾಗಿಲ್ಲ. ಮನೆಯಲ್ಲಿ ಯಾರಿಗೂ ಪ್ರಚೋದನೆ ಮಾಡಬಾರದು. ಇಂತಹದೆಲ್ಲವನ್ನು ಹೇಳಿ ಕೊಡುತ್ತಾರೆ. ಈ ಶಿಸ್ತುಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆಟವನ್ನು ನೀವು ಹೇಗಾದರೂ ಆಡಿದರೆ ಅದಕ್ಕೆ ಬಿಗ್ ಬಾಸ್ ಅಭ್ಯಂತರವಿಲ್ಲ.

    ನೀವು ಸಹ ಸ್ಪರ್ಧಿಗಳೊಂದಿಗೆ ಜಗಳ ಆಡ್ತೀರಾ, ಕೋಪಗೊಂಡು ಊಟ ಬಿಡ್ತೀರಾ, ಅವರಿಗೆ ಹೆದರಿಸ್ತೀರಾ ಅದು ವೈಯಕ್ತಿಕ. ಮನೆಯಲ್ಲಿ ಆಟದ ವೈಖರಿ ಮತ್ತು ನಡವಳಿಕೆ ಮಾತ್ರ ಅಲ್ಲಿ ನಮ್ಮನ್ನು ಉಳಿಸುತ್ತದೆಯೇ ಹೊರತು ಬೇರೆ ಯಾವುದು ಅಲ್ಲ ಎಂದು ಬಿಗ್ ಮನೆಯ ನಿಯಮಗಳ ಬಗ್ಗೆ ಪ್ರಥಮ್ ಸ್ಪಷ್ಟಪಡಿಸಿದರು.

    ಸಮೀರ್ ಆಚಾರ್ಯ ಹೊರಗಡೆ ಅಡುಗೆ ಮಾಡಿಕೊಂಡು ತುಂಬಾ ಶಿಸ್ತಿನಿಂದ ಆ ಮನೆಯಲ್ಲಿದ್ದಾರೆ. ಸಮೀರ್ ಅವ್ರಿಗೆ ಮದುವೆಯಾಗಿದ್ದು, ಅಂತಹ ದೊಡ್ಡ ವ್ಯಕ್ತಿಯ ಮೇಲೆ ಚಿಕ್ಕ ಹುಡುಗಿ ಸಂಯುಕ್ತಾ ತುಂಬಾ ಆತುರ ಮಾಡಿಕೊಂಡರೇನೋ ಅಂತಾ ಅನ್ನಿಸಿತು. ಜನರು ಸಂಯುಕ್ತಾರನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಅಂತಾ ಪ್ರಥಮ್ ಮನವಿ ಮಾಡಿಕೊಂಡರು.

  • ಬಿಗ್‍ ಬಾಸ್ ಮನೆಯಲ್ಲಿ ಸಂಯುಕ್ತ ಹೆಗಡೆ ಕಿರಿಕ್ – ಸಮೀರ್ ಕೆನ್ನೆಗೆ ಹೊಡೆದು ದೊಡ್ಮನೆಯಿಂದ ಕಿಕ್‍ ಔಟ್

    ಬಿಗ್‍ ಬಾಸ್ ಮನೆಯಲ್ಲಿ ಸಂಯುಕ್ತ ಹೆಗಡೆ ಕಿರಿಕ್ – ಸಮೀರ್ ಕೆನ್ನೆಗೆ ಹೊಡೆದು ದೊಡ್ಮನೆಯಿಂದ ಕಿಕ್‍ ಔಟ್

    ಬೆಂಗಳೂರು: ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದ್ದರು. ಬಂದು 15 ದಿನ ಕಳೆದಿರಲಿಲ್ಲ, ಆಗಲೇ ಭಾರೀ ರಂಪಾಟ ಮಾಡಿ ಹೊರಹೋಗಿದ್ದಾರೆ. ಕಾಲೇಜು ಕುಮಾರ ಸಿನಿಮಾ ವಿಚಾರದಲ್ಲೂ ಈ ನಟಿ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

    ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ಮುಟ್ಟಿದ್ರೆ ತಟ್ಬೀಡ್ತಿನಿ ಅಂದವರು ತೇಟ್ ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್‍ ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ.

    ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ ನಿಂತಿತು. ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು. ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು ಮನೆಯಿಂದ ಬೀಳ್ಕೊಟ್ಟರು.