Tag: ಸಂಭಾವನೆ

  • ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ಳಪತಿ ವಿಜಯ್ (Dalpati Vijay) ಕೊನೆಯ ಚಿತ್ರ ಎನ್ನಲಾದ `ದಳಪತಿ 69′ ಘೋಷಣೆಯ ವೀಡಿಯೋ ವೈರಲ್ ಆಗಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಸಿನಿಮಾ ಕರಿಯರ್‌ನ ಕೊನೆಯ ಚಿತ್ರ ಎನ್ನಲಾಗುತ್ತೆ. ಯಾಕೆಂದರೆ ರಾಜಕೀಯ ಪ್ರವೇಶಿಸಿರುವ ವಿಜಯ್ ಮುಂದಿನ ದಿನಗಳಲ್ಲಿ ಅದರತ್ತ ಸಂಪೂರ್ಣ ಗಮನ ಕೊಡಲಿದ್ದಾರಂತೆ. ಇದೀಗ ದಳಪತಿ 69 ಚಿತ್ರ ಸ್ಯಾಂಡಲ್‌ವುಡ್‌ಗೂ ಕನೆಕ್ಟ್ ಆಗಿದ್ದು ಈ ಚಿತ್ರವನ್ನ ಕನ್ನಡದ `ಕೆವಿಎನ್ ಸಂಸ್ಥೆ’ ನಿರ್ಮಿಸಲಿದೆ.

    `ದಳಪತಿ 69′ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್‌ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ರೆಮನ್ಯುರೇಶನ್.

    ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ `ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

     

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ದಳಪತಿ 69 ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡುಮಾಡಿದೆ.

  • ವಿಜಯ್ ಗೆ ‘ದಿ ಗೋಟ್’ ಕೊಟ್ಟ ಸಂಭಾವನೆ 200 ಕೋಟಿ ರೂ.!

    ವಿಜಯ್ ಗೆ ‘ದಿ ಗೋಟ್’ ಕೊಟ್ಟ ಸಂಭಾವನೆ 200 ಕೋಟಿ ರೂ.!

    ಳಪತಿ ವಿಜಯ್ (Vijay) ಸಿನಿಮಾ ಕರಿಯರ್‌ಗೆ ಗುಡ್‌ಬೈ ಹೇಳ್ತಾರೆ ಅಂತಾ ಭಾರೀ ಸುದ್ದಿಯಾಗಿತ್ತು ಅದು ನಿಜವಾಗಿದೆ ಕೂಡಾ. ಸಿನಿಮಾ ರಂಗಕ್ಕೆ ಟಾಟಾ ಬಾಯ್ ಬಾಯ್ ಮಾಡಿ ರಾಜಕೀಯದಲ್ಲೇ ತೊಡಗಿಸಿಕೊಳ್ಳೋಕೆ ಭಾರೀ ಸಿದ್ಧತೆ ನಡೆದಿದೆ. ಈಗಾಗಲೇ ಪಕ್ಷದ ಚಿಹ್ನೆ ಹಾಗೂ ಗೀತೆಯನ್ನ ಬಿಡುಗಡೆ ಮಾಡಿದ್ದಾರೆ ವಿಜಯ್. ಇನ್ನು ವಿಜಯ್ ನಟನೆಯ `ದಿ ಗೋಟ್’ (The Goat)  ಸಿನಿಮಾ ಇದೇ ಸೆಪ್ಟಂಬರ್ 5ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಆದ್ರೆ ಅಸಲಿ ಮ್ಯಾಟರ್ ಇದಲ್ಲ.

    ಹೌದು, ದಳಪತಿ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ `ದಿ ಗೋಟ್’ಗೆ ಚಿತ್ರಕ್ಕಾಗಿ ದಳಪತಿ ಭರ್ತಿ 200 ಕೋಟಿ ಸಂಭಾವನೆ (Remuneration) ಪಡೆದಿದ್ದಾರಂತೆ. ಹೀಗಂತಾ  `ದಿ ಗೋಟ್’ ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪತಿ ಹೇಳಿದ್ದಾರೆ. ಅಂದಹಾಗೆ ಪ್ರಭಾಸ್ ಒಂದು ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಕೂಡಾ 125 ಕೋಟಿ ಸಂಭಾವನೆಯನ್ನ ಪಡೆಯವ ಸ್ಟಾರ್ ನಟರಾಗಿದ್ದರು. ಸದ್ಯ 200 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಸಲ್ಮಾನ್ ಖಾನ್, ಶಾರುಖ್ ಹಾಗೂ ಪ್ರಭಾಸ್‌ರ ಸಂಭಾವನೆಯನ್ನ ಮೀರಿಸಿದ್ದಾರೆ.

    `ದಿ ಗೋಟ್’ ಚಿತ್ರದ ರಿಲೀಸ್ ನಂತರ ಇದೇ ತಿಂಗಳು ಕೊನೆಯಲ್ಲಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇನ್ನು ಹೆಸರಿಡದ `ದಳಪತಿ 69′ ವರ್ಕಿಂಗ್ ಟೈಟಲ್‌ನ ಸಿನಿಮಾದ ನಂತರ ಚಿತ್ರರಂಗದಿಂದ ಕಂಪ್ಲೀಟ್ ಆಗಿ ದಳಪತಿ ಅಂತರ ಕಾಯ್ದುಕೊಳ್ಳಲಿದ್ದಾರೆ. ಸದ್ಯ ಅವ್ರು `ದಿ ಗೋಟ್’ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮುಂದಿನ ಸಿನಿಮಾಗೆ ಅದೆಷ್ಟು ಸಂಭಾವನೆ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

  • ‘ಕಲ್ಕಿ’ ಸಿನಿಮಾದ ಕಲಾವಿದರ ಸಂಭಾವನೆಯೇ 250 ಕೋಟಿ ರೂಪಾಯಿ

    ‘ಕಲ್ಕಿ’ ಸಿನಿಮಾದ ಕಲಾವಿದರ ಸಂಭಾವನೆಯೇ 250 ಕೋಟಿ ರೂಪಾಯಿ

    ಹುಭಾಷೆಯಲ್ಲಿ ಮೂಡಿ ಬರುತ್ತಿರುವ ಕಲ್ಕಿ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

    ಹೌದು, ಕಳೆದ ವರ್ಷಅಮಿತಾಭ್ (Amitabh Bachchan)  ಅವರ ಬರ್ತ್‌ಡೇ ದಿನದಂದು ಕಲ್ಕಿ ಚಿತ್ರದಲ್ಲಿನ ಅವರ ಲುಕ್‌ ಹೇಗಿರಲಿದೆ ಎಂಬ ಸಣ್ಣ ಝಲಕ್‌ ರಿಲೀಸ್‌ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಭ್ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕವನ್ನು ತಣಿದಿದೆ. ಅಂದರೆ, ಕಲ್ಕಿ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‌ ಪಾತ್ರದ ಝಲಕ್‌ ಹೊರಬಿದ್ದಿದೆ.

     

    ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಲ್ಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅಶ್ವತ್ಥಾಮನಾಗಿ ಅಮಿತಾಭ್ ಬಚ್ಚನ್‌ ಕಾಣಿಸಿಕೊಳ್ಳಲಿದ್ದಾರೆ. ಒಂದು ನಿಮಿಷದ ಝಲಕ್‌ನಲ್ಲಿ ಎಲ್ಲ ಭಾಷೆಯನ್ನೂ ಬೆರೆಸಿ ಟೀಸರ್‌ ಬಿಡುಗಡೆ ಮಾಡಲಾಗಿದೆ.  ಪುಟಾಣಿಯೊಬ್ಬ ನೀವ್ಯಾರು, ನಿಮ್ಮ ಜತೆ ನಾನು ಯಾವ ಭಾಷೆಯಲ್ಲಿ ಮಾತನಾಡಲಿ? ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ಆಗ, ಈಗ ನನ್ನ ಸಮಯ ಬಂದಿದೆ. ನನ್ನ ಕೊನೆಯ ಯುದ್ಧಕ್ಕೆ ಸಮಯ ಬಂದಿದೆ. ನಾನು ದ್ರೋಣಾಚಾರ್ಯರ ಮಗ ಅಶ್ವತ್ಥಾಮ (Ashwatthama) ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ ಅಮಿತಾಭ್ ಬಚ್ಚನ್.‌  ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ‘ರಾಮಾಯಣ’ ಚಿತ್ರದ ಲೆಕ್ಕಾಚಾರ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

    ‘ರಾಮಾಯಣ’ ಚಿತ್ರದ ಲೆಕ್ಕಾಚಾರ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

    ಬಾಲಿವುಡ್ ಸಿನಿಮಾ ರಂಗದಲ್ಲಿ ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ (Remuneration) ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.

    ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.

    ಈ ನಡುವೆ ಸಿನಿಮಾಗಾಗಿ ರಣ್‌ಬೀರ್ (Ranbir Kapoor) ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್‌’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ (Ramayana) ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ (Adipurush Film) ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.

    ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಫಿಟ್ ಆಗಿರಬೇಕು. ಅಲ್ಲದೇ ಗೆಟಪ್ ಸಹ ಬದಲಾಯಿಸಿಕೊಳ್ಳಬೇಕು. ಅದಕ್ಕಾಗಿ ರಣಬೀರ್ ಕಪೂರ್ ಅವರು ತಮ್ಮ ಟ್ರೇನರ್ ಜೊತೆ ಹಳ್ಳಿಗೆ ಹೋಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

     

    ‘ಅನಿಮಲ್’ ಚಿತ್ರದ ಸಕ್ಸಸ್ ನಂತರ ರಾಮನಾಗಿ ಬರುತ್ತಿರುವ ರಣ್‌ಬೀರ್ ಕಪೂರ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಮನಾಗಿ ಕೂಡ ಆಲಿಯಾ ಪತಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.

  • ‘ಬಿಗ್ ಬಾಸ್’ ಎಂಟ್ರಿಗೆ ಪ್ರದೀಪ್ ಈಶ್ವರ್ ಪಡೆದ ಹಣವೆಷ್ಟು? ಭರ್ಜರಿ ಲೆಕ್ಕಾಚಾರ

    ‘ಬಿಗ್ ಬಾಸ್’ ಎಂಟ್ರಿಗೆ ಪ್ರದೀಪ್ ಈಶ್ವರ್ ಪಡೆದ ಹಣವೆಷ್ಟು? ಭರ್ಜರಿ ಲೆಕ್ಕಾಚಾರ

    ಬಿಗ್ ಬಾಸ್ (Bigg Boss Kannada) ಮನೆಗೆ ಹೋಗಲು ಕಂಟೆಸ್ಟೆಂಟ್ ಎಷ್ಟೆಲ್ಲ ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಪ್ರತಿ ಸೀಸನ್ ನಲ್ಲೂ ಚರ್ಚೆ ಆಗುತ್ತದೆ. ಅದರಲ್ಲೂ ಹೆಸರಾಂತ ಸಿಲೆಬ್ರಟಿಗಳು ದೊಡ್ಮನೆಗೆ ಕಾಲಿಡುತ್ತಾರೆ ಎಂದಾಗ ಭಾರೀ ಸಂಭಾವನೆಯನ್ನು ಪಡೆದಿರುತ್ತಾರೆ ಎನ್ನುವುದು ಗುಟ್ಟಿನ ಸಂಗತಿ ಏನೂ ಅಲ್ಲ. ದಿನವೊಂದಕ್ಕೆ ಸಾವಿರ ಲೆಕ್ಕದಲ್ಲಿ ಸಂಭಾವನೆ ಪಡೆಯುವವರ ಸಂಖ್ಯೆ ತೀರಾ ಕಡಿಮೆ ಅಂತಾನೇ ಅಂದಾಜಿಸಬಹುದು. ಹಾಗಾಗಿ ಬಿಗ್ ಬಾಸ್ ಮನೆಗೆ ಹೋಗುವವರು ಲಕ್ಷದಲ್ಲೇ ಹಣ ಎಣಿಸುತ್ತಾರೆ. ಹಾಗಾಗಿ ಒಂದೇ ಒಂದು ದಿನ ಬಿಗ್ ಬಾಸ್ ಮನೆಗೆ ಹೋಗಿದ್ದ ಶಾಸಕ ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ.

    ಹೌದು, ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ, ಜನಪ್ರಿಯ ಮಾತುಗಾರ ಪ್ರದೀಪ್ ಈಶ್ವರ್ (Pradeep Eshwar) ನಿನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದರು. ‍ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಮನೆಗೆ ವಾತಾವರಣವೇ ಬದಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆ ಪ್ರದೀಪ್ ಈಶ್ವರ್ ಕುಣಿದು ಕುಪ್ಪಳಿಸಿದರೆ, ಇತ್ತ ಬಿಗ್ ಬಾಸ್ ಮನೆ ಹೊರಗೆ ಅವರ ಎಂಟ್ರಿ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಒಬ್ಬ ಜನಪ್ರತಿನಿಧಿಯಾಗಿ ಹೀಗೆ ಶೋನಲ್ಲಿ ಭಾಗಿ ಆಗಬಹುದಾ ಎಂದು ಹಲವರು ಪ್ರಶ್ನೆ ಕೇಳಿದರು. ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದು, ಒಂದೊಳ್ಳೆ ಕಾರ್ಯಕ್ಕೆ ಎನ್ನುವಂತೆ ಬಿಂಬಿಸಲಾಯಿತು. ಈ ಶೋನಿಂದ ಬರುವ ಹಣವನ್ನು ಅವರು ಅನಾಥರಿಗೆ ನೀಡಲಿದ್ದಾರೆ ಎಂದೂ ಸುದ್ದಿ ಆಯಿತು.

    ಬಿಗ್ ಬಾಸ್ ಶೋನಿಂದ ಬರುವ ಹಣವನ್ನು ಅಪ್ಪ ಅಮ್ಮ ಇಲ್ಲದ ಮಕ್ಕಳಿಗೆ ಪ್ರದೀಪ್ ಈಶ್ವರ್ ಹಂಚುತ್ತಾರೆ ಎಂದು ಸುದ್ದಿ ಆಗುತ್ತಿದ್ದಂತೆಯೇ ಪ್ರದೀಪ್ ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ? ಮತ್ತು ಅವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಪ್ರದೀಪ್ ಈಶ್ವರ್ ಭಾರೀ ಹೆಸರೇ ಮಾಡಿರುವುದರಿಂದ ದೊಡ್ಡ ಮೊತ್ತಕ್ಕೆ ಅವರು ಬಿಗ್ ಬಾಸ್ ಮನೆಗೆ ಹೋಗಲು ಒಪ್ಪಿರುತ್ತಾರೆ ಎಂದು ಅವರ ಆಪ್ತವಲಯ ಹೇಳಿಕೊಂಡಿತ್ತು. ಆ ಮೊತ್ತ ಎಷ್ಟು ಎಂದು ಯಾರೂ ಹೇಳಿರಲಿಲ್ಲ.

    ಪ್ರದೀಪ್ ಈಶ್ವರ್ ಪಡೆದುಕೊಂಡ ಸಂಭಾವನೆ ಬಗ್ಗೆ ಇದೀಗ ಒಂದಷ್ಟು ಮಾಹಿತಿಗಳು ಹರಿದಾಡುತ್ತಿವೆ. ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ವಾಹಿನಿ ಜೊತೆಗೆ ಮಾತುಕತೆ ಆಗಿದ್ದೇ ಕೇವಲ ಮೂರೇ ಮೂರು ತಾಸು ಅಲ್ಲಿ ಇರುವುದಕ್ಕೆ. ಹಾಗಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ ಎನ್ನುವುದು ಸಿಕ್ಕಿರುವ ಮಾಹಿತಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಚಿತ್ರಕ್ಕೆ 15 ಕೋಟಿ ಅಲ್ಲ,  1 ರೂಪಾಯಿನೂ ಪಡೆದಿಲ್ಲ : ದೀಪಿಕಾ ಪಡುಕೋಣೆ

    ‘ಜವಾನ್’ ಚಿತ್ರಕ್ಕೆ 15 ಕೋಟಿ ಅಲ್ಲ, 1 ರೂಪಾಯಿನೂ ಪಡೆದಿಲ್ಲ : ದೀಪಿಕಾ ಪಡುಕೋಣೆ

    ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ (Deepika Padukone) ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅತಿಥಿ ಪಾತ್ರಕ್ಕೆ ಅಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ಅಚ್ಚರಿಯನ್ನೂ ಹಲವರು ವ್ಯಕ್ತ ಪಡಿಸಿದ್ದರು. ಆ ಪ್ರಮಾಣದಲ್ಲಿ ಸಂಭಾವನೆ (Remuneration) ಪಡೆದ ವಿಚಾರ ವೈರಲ್ ಕೂಡ ಆಗಿತ್ತು. ಈ ವಿಷಯ ದೀಪಿಕಾ ಪಡುಕೋಣೆಗೂ ತಲುಪಿದೆ.

    ಜವಾನ್ ಸಿನಿಮಾಗಾಗಿ ದೀಪಿಕಾ ಪಡುಕೋಣೆ 15 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ದೀಪಿಕಾ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಜವಾನ್ ಚಿತ್ರಕ್ಕಾಗಿ ತಾವು ಒಂದು ಪೈಸೆಯನ್ನೂ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗಾಗಿ ನಾನು ಉಚಿತವಾಗಿ ನಟಿಸಿದ್ದೇನೆ ಎಂದಿದ್ದಾರೆ. ಈ ಹಿಂದೆಯೂ ತಾವು ಹಲವು ಸಿನಿಮಾಗಳಲ್ಲಿ ಈ ರೀತಿ ಉಚಿತವಾಗಿ ನಟಿಸಿದ್ದನ್ನು ಸ್ಮರಿಸಿದ್ದಾರೆ.

    ಒಂದು ಕಡೆ ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ಕಮಾಲ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಚಿತ್ರಕ್ಕೆ ಪೈರಸಿ (Piracy) ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಥಿಯೇಟರ್ ನಲ್ಲಿ ಶೂಟ್ ಮಾಡಲಾದ ಜವಾನ್ ಸಿನಿಮಾವನ್ನು ದುರುಳರು ರಿಲೀಸ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿದೆ. ಈ ಲಿಂಕ್ ಅನ್ನು ಹಂಚಿಕೊಳ್ಳುವವರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ ಶಾರುಖ್ ಖಾನ್.

    ಸ್ವತಃ ಶಾರುಖ್ ಖಾನ್ (Shah Rukh Khan) ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇವರ ಪತ್ನಿ ಗೌರಿ ಖಾನ್ ಇದರ ನಿರ್ಮಾಪಕರು. ಹಾಗಾಗಿ ಪೈರಸಿ ಮಾಡುವವರ ವಿರುದ‍್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಾಗಿ ಈಗಾಗಲೇ ಅವರು ಮುಂಬೈನ ಸಾಂತಾಕ್ರೂಜ್ ವೆಸ್ಟ್ ಪೊಲೀಸ್ ಠಾಣೆಗೆ ದೂರು (Police Complaint) ನೀಡಿದ್ದಾರೆ. ಜೊತೆಗೆ ಪೈರಸಿ ಪತ್ತೆ ಹಚ್ಚುವಂತಹ ಏಜೆನ್ಸಿಗಳನ್ನೂ ಅವರು ನೇಮಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ಮುಂದೆ ನಿಲ್ಲಲು ದುಬಾರಿ ಸಂಭಾವನೆ ಪಡೆದ ದಕ್ಷಿಣದ ನಟ

    ಶಾರುಖ್ ಮುಂದೆ ನಿಲ್ಲಲು ದುಬಾರಿ ಸಂಭಾವನೆ ಪಡೆದ ದಕ್ಷಿಣದ ನಟ

    ಬಾಲಿವುಡ್ ನಲ್ಲಿ ‘ಜವಾನ್’ (Jawan) ಹವಾ ಜೋರಾಗಿದೆ. ಒಂದರ ಮೇಲೊಂದು ಪೋಸ್ಟರ್, ಫಸ್ಟ್ ಪ್ರಿವ್ಯು ಹೀಗೆ ನಾನಾ ಪ್ರಚಾರದಲ್ಲಿ ತೊಡಗಿದ್ದಾರೆ ಶಾರುಖ್ ಖಾನ್ (Shah Rukh Khan, ). ಭಾರತೀಯ ಸಿನಿಮಾ ರಂಗದ ದಿ ಬೆಸ್ಟ್ ಕಲಾವಿದರು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಅಷ್ಟೇ ಕುತೂಹಲ ಅಲ್ಲಿನ ಕಲಾವಿದರು ತೆಗೆದುಕೊಂಡ ಸಂಭಾವನೆಯ  (Remuneration) ಮೇಲೆಯೂ ಇದೆ.

    ಈ ಹಿಂದೆ ಶಾರುಖ್ ಖಾನ್ ಜೊತೆ ನಟಿಸಲು ದಕ್ಷಿಣದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಸಂಭಾವನೆಯನ್ನೇ ಪಡೆಯುತ್ತಿಲ್ಲ ಎನ್ನುವ ಸುದ್ದಿ ಹರಡಿತ್ತು. ನಿರ್ದೇಶಕ ಅಟ್ಲಿ ಹಾಗೂ ಶಾರುಖ್ ಮೇಲಿನ ಪ್ರೀತಿಗಾಗಿ ಅವರು ಉಚಿತವಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಸುದ್ದಿ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ

    ಈ ಸಿನಿಮಾದಲ್ಲಿ ಸೇತುಪತಿ ನಡೆಸಲು ಬರೋಬ್ಬರಿ 21 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರಂತೆ. ಮೊದ ಮೊದಲು ವಿಜಯ್ ಸೇತುಪತಿ 15 ರಿಂದ 18 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರೆ ಎನ್ನುವುದು ಲೆಕ್ಕಾಚಾರವಾಗಿತ್ತು. ಕಮಲ್ ಹಾಸನ್ ಜೊತೆ ವಿಕ್ರಮ್ ಸಿನಿಮಾದಲ್ಲಿ ನಟಿಸಿದ ನಂತರ ಅವರ ಸಂಭಾವನೆ 20 ಕೋಟಿಗೂ ಅಧಿಕವಾಗಿದೆಯಂತೆ.

    ಸೇತುಪತಿ ಅದ್ಭುತ ನಟ. ಅದರಲ್ಲಿ ಎರಡು ಮಾತಿಲ್ಲ. ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ತಕರಾರು ತೆಗೆಯುವಂಥದ್ದು ಅಲ್ಲ. ಆದರೆ, ಶಾರುಖ್ ಜೊತೆ ನಟಿಸಲು ಅಷ್ಟೊಂದು ಸಂಭಾವನೆ ಪಡೆದಿದ್ದಾರಾ ಎನ್ನುವುದು ಪ್ರಶ್ನೆ. ಈ ಸಿನಿಮಾದಲ್ಲಿ ನಯನತಾರಾ, ಪ್ರಿಯಾಮಣಿ ಹೀಗೆ ದುಬಾರಿ ತಾರೆಯರೇ ಇದ್ದಾರೆ. ಅಲ್ಲದೇ ಸೇತುಪತಿ ಈ ಸಿನಿಮಾದಲ್ಲಿ ವಿಲನ್ ರೀತಿಯ ಪಾತ್ರ ಮಾಡಿದ್ದಾರಂತೆ. ಈ ಎಲ್ಲ ಲೆಕ್ಕಾಚಾರಗಳು ಗಿರಿಕಿ ಹೊಡೆಯುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ಜೊತೆ ನಟಿಸೋಕೆ ಕಮಲ್ ಪಡೆದ ಸಂಭಾವನೆ 100 ಕೋಟಿ ರೂ

    ಪ್ರಭಾಸ್ ಜೊತೆ ನಟಿಸೋಕೆ ಕಮಲ್ ಪಡೆದ ಸಂಭಾವನೆ 100 ಕೋಟಿ ರೂ

    ನಿನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ಕಮಲ್ ಹಾಸನ್ ನಟಿಸುತ್ತಿರುವ ವಿಷಯ ಅಧಿಕೃತವಾಗಿಯೇ ಬಹಿರಂಗವಾಗಿತ್ತು. ತಮ್ಮ  ಸಿನಿಮಾದಲ್ಲಿ ಕಮಲ್ ನಟಿಸುತ್ತಿರುವ ಕುರಿತು ಅಧಿಕೃತ ಮಾಹಿತಿಯನ್ನೇ ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು.

    ಪ್ರಾಜೆಕ್ಟ್ ಕೆ (Project K)  ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದು, ‘ಇವರು ಲೆಜೆಂಡ್. ಈ ಪಾತ್ರವು ಯಾರನ್ನು ನಿರೀಕ್ಷೆ ಮಾಡುತ್ತಿತ್ತೋ ಅವರು ನಮಗೆ ಸಿಕ್ಕಿದ್ದಾರೆ. ಕಮಲ್ ಹಾಸನ್ (Kamal Haasan) ಅವರಿಂದ ನಾನು ಸಾಕಷ್ಟು ಕಲಿಯಬಹುದು. ಆ ಕ್ಷಣಕ್ಕಾಗಿ ನಾನಂತೂ ಕಾಯುತ್ತಿದ್ದೇನೆ’ ಎಂದು ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಹೇಳಿಕೊಂಡಿದ್ದರು. ಇದನ್ನೂ ಓದಿ: ಕಿಚ್ಚ ಸುದೀಪ್ ಕುಟುಂಬದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ

    ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಅವರು ಆ ಸಿನಿಮಾಗಾಗಿ ಎಷ್ಟು ಸಂಭಾವನೆ (Remuneration) ಪಡೆದಿದ್ದಾರೆ ಎನ್ನುವ ವಿಚಾರವೂ ಚರ್ಚೆಯಾಗುತ್ತಿದೆ. ಕಮಲ್ ಹಾಸನ್ ಅವರ ಆಪ್ತರು ಹೇಳುವ ಪ್ರಕಾರ ಈ ಚಿತ್ರಕ್ಕಾಗಿ ಕಮಲ್ ಬರೋಬ್ಬರಿ 100 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಅಧಿಕೃತ ಮಾಹಿತಿ ಅಲ್ಲ.

    ಒಂದು ಕಡೆ ಕಮಲ್ ಹಾಸನ್ ರಂಥ ದಿಗ್ಗಜರು ಈ ಸಿನಿಮಾದಲ್ಲಿದ್ದರೆ ಮತ್ತೊಂದು ಕಡೆ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ ನಂತರ ದೀಪಿಕಾ ಅವರು ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ.

    ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

     

    ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಭಾರೀ ತಾರಾಗಣದ ಕಾರಣದಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ.

  • ಮತ್ತೆ ಮದುವೆಗೆ 10 ಕೋಟಿ ಸಂಭಾವನೆ ಪಡೆದ ಪವಿತ್ರಾ ಲೋಕೇಶ್

    ಮತ್ತೆ ಮದುವೆಗೆ 10 ಕೋಟಿ ಸಂಭಾವನೆ ಪಡೆದ ಪವಿತ್ರಾ ಲೋಕೇಶ್

    ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಕಾಂಬಿನೇಷನ್ ನ ಮಳ್ಳಿ ಪೆಳ್ಳಿ ಸಿನಿಮಾ ರಿಲೀಸ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಸಿನಿಮಾಗಾಗಿ ಪವಿತ್ರಾ ಲೋಕೇಶ್ ಪಡೆದಿದ್ದಾರೆ ಎನ್ನಲಾದ ಸಂಭಾವನೆ ಮಾತ್ರ ಬಲು ಜೋರಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾಗಾಗಿ ಅವರು ಈವರೆಗೂ ಪಡೆಯದೇ ಇರುವಂತಹ ದುಬಾರಿ ಸಂಭಾವನೆ (Salary) ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ಪವಿತ್ರಾ ಲೋಕೇಶ್ ಒಂದು ದಿನಕ್ಕೆ 50 ರಿಂದ 60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಆದರೆ, ಮಳ್ಳಿ ಪೆಳ್ಳಿ ಚಿತ್ರಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ನಿಜವೇ ಆಗಿದ್ದರೆ, ಈ ಚಿತ್ರಕ್ಕಾಗಿ ಅವರು ಎಷ್ಟು ದಿನ ಕೆಲಸ ಮಾಡಿರಬಹುದು ಮತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

    ಈಗಾಗಲೇ ಅವರೇ ಘೋಷಣೆ ಮಾಡಿಕೊಂಡಂತೆ ಇಬ್ಬರೂ ಸಹಜೀವನ ನಡೆಸುತ್ತಿದ್ದಾರಂತೆ. ಒಂದು ರೀತಿಯಲ್ಲಿ ಗಂಡ ಹೆಂಡತಿ ರೀತಿಯಲ್ಲೇ ಬದುಕುತ್ತಿದ್ದಾರಂತೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸ್ವತಃ ನರೇಶ್ (Naresh) ಅವರೆ. ಹಾಗಾಗಿ ಈ ಪ್ರಮಾಣದಲ್ಲಿ ಸಂಭಾವನೆ ಹರಿದು ಬಂತಾ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ.

    ರಿಲೇಷನ್ ಶಿಪ್, ಮದುವೆ, ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಮಾತನಾಡಿದ್ದಾರೆ. ಆದರೆ, ಸಂಭಾವನೆ ವಿಚಾರ ಈವರೆಗೂ ಇಬ್ಬರೂ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

  • ಪಠಾಣ್ ಸಿನಿಮಾದಲ್ಲಿ ನಟಿಸಲು ಭಾರೀ ಮೊತ್ತದ ಸಂಭಾವನೆ ಪಡೆದ ಶಾರುಖ್ ಖಾನ್

    ಪಠಾಣ್ ಸಿನಿಮಾದಲ್ಲಿ ನಟಿಸಲು ಭಾರೀ ಮೊತ್ತದ ಸಂಭಾವನೆ ಪಡೆದ ಶಾರುಖ್ ಖಾನ್

    ಬಾಲಿವುಡ್ (Bollywood) ಸಿನಿಮಾ ರಂಗವನ್ನು ಐಸಿಯುನಿಂದ ಆಚೆ ತಂದ ಹೆಗ್ಗಳಿಕೆ ಪಠಾಣ್ (Pathan) ಸಿನಿಮಾಗೆ ಸಲ್ಲುತ್ತದೆ. ದಕ್ಷಿಣದ ಸಿನಿಮಾಗಳ ಹಾವಳಿಗೆ ತತ್ತರಿಸಿ ಹೋಗಿದ್ದ ಬಾಲಿವುಡ್, ಒಂದು ಗೆಲುವಿಗಾಗಿ ಕಾಯುತ್ತಿತ್ತು. ಆ ಗೆಲುವನ್ನು ಪಠಾಣ್ ಸಿನಿಮಾ ತಂದುಕೊಟ್ಟಿತು. ಜೊತೆಗೆ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಕೂಡ ಮಾಡಿತು. ಇದರ ಬೆನ್ನಲ್ಲೇ ಶಾರುಖ್ ಖಾನ್ (Shah Rukh Khan) ಪಡೆದ ಮೊತ್ತದ ಬಗ್ಗೆ ಚರ್ಚೆ ಶುರುವಾಗಿದೆ. ಭಾರೀ ಮೊತ್ತದ ಸಂಭಾವನೆಯನ್ನೇ (Remuneration) ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಾಕ್ಸ್ ಆಫೀಸಿನ ಅನೇಕ ದಾಖಲೆಗಳನ್ನು ಪಠಾಣ್ ಮುರಿದಿದೆ. ಅತೀ ಕಡಿಮೆ ಸಮಯದಲ್ಲೇ ಸಾವಿರ ಕೋಟಿ ಸಂಪಾದನೆ ಮಾಡಿದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ ಅದು ಪಾತ್ರವಾಗಿದೆ. ಅಲ್ಲದೇ, ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಮೂಲಕ ಏಕಕಾಲದಲ್ಲಿ ದೇಶ ವಿದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಚಿತ್ರಕಂಡಿದೆ. ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 603 ಕೋಟಿ ಲಾಭವನ್ನು ತಂದುಕೊಟ್ಟಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    ಈ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಖರ್ಚು ಮಾಡಿದ್ದು 270 ಕೋಟಿ. ಥಿಯೇಟರ್ ನಿಂದಲೇ 941 ಕೋಟಿ ರೂಪಾಯಿ ಬಂದಿದೆ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳ ರೂಪದಲ್ಲಿ 150 ಕೋಟಿ ಬಾಚಿಕೊಂಡಿತ್ತು. ಹೀಗಾಗಿ ಭಾರೀ ಮೊತ್ತದ ವ್ಯಾಪಾರವನ್ನೇ ಈ ಸಿನಿಮಾ ಮಾಡಿತ್ತು. ಈ ಎಲ್ಲ ವ್ಯಾಪಾರದ ನಂತರ ಶೇರ್ ರೂಪದಲ್ಲಿ ಶಾರುಖ್ ಖಾನ್ ಗೆ 200 ಕೋಟಿ ರೂಪಾಯಿ ಸಂಭಾವನೆ ಹೋಗಿದೆಯಂತೆ.

    ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ಟೀಕೆಗೆ ಪಠಾಣ್ ಗುರಿ ಆಯಿತು. ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ಕೂಡ ನಡೆಯಿತು. ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡುವ ವಿಚಾರ ಮುನ್ನೆಲೆಗೆ ಬಂತು. ಈ ಸಿನಿಮಾದ ಬಗ್ಗೆ ಏನೂ ಮಾತನಾಡಬಾರದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆಕೊಟ್ಟಿದ್ದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಸಿನಿಮಾ ಗೆಲ್ಲುವುದು ಮಾತ್ರ ಬಿಡಲಿಲ್ಲ.