Tag: ಸಂಭಾಪೂರ ಕ್ರಾಸ್

  • ಗದಗ: ರಸ್ತೆ ಪಕ್ಕ ಮಲಗಿದ್ದವರ ಮೇಲೆ ಹರಿದ ವಾಹನ – ಮೂವರು ಸ್ಥಳದಲ್ಲೇ ಸಾವು

    ಗದಗ: ರಸ್ತೆ ಪಕ್ಕ ಮಲಗಿದ್ದವರ ಮೇಲೆ ಹರಿದ ವಾಹನ – ಮೂವರು ಸ್ಥಳದಲ್ಲೇ ಸಾವು

    ಗದಗ: ರಸ್ತೆ ಪಕ್ಕದಲ್ಲಿ ಮೂವರು ಸಂಶಯಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಗದಗ ತಾಲೂಕಿನ ಸಂಭಾಪೂರ ಕ್ರಾಸ್ ಬಳಿ ನಡೆದಿದೆ.

    ಮೂವರು ರಸ್ತೆ ಪಕ್ಕದಲ್ಲಿ ಮಲಗಿದಂತೆ ವ್ಯಕ್ತವಾಗಿದ್ದು, ತಲೆ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಮತ್ತು ಭದ್ರಾಪೂರ ಗ್ರಾಮದವರು ಎನ್ನಲಾಗಿದೆ. ಮೃತರನ್ನು ಅಮೀನ್, ರಾಜೇಸಾಬ್ ಹಾಗೂ ಮಂಜು ಎಂದು ಗುರುತಿಸಲಾಗಿದೆ.

    ಅಮಿನ್ ಹಾಗೂ ರಾಜೇಸಾಬ್ ಇಬ್ಬರೂ ಸಹೋದರರಾಗಿದ್ದು, ಇವರು ಲಾರಿ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ರಸ್ತೆ ಪಕ್ಕ ಮಲಗಿದ್ದ ವೇಳೆ ತಲೆ ಮೇಲೆ ಅಪರಿಚಿತ ವಾಹನ ಹರಿದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಗದಗ ಡಿವೈಎಸ್‍ಪಿ ವಿಜಯಕುಮಾರ್ ತಳವಾರ, ಗ್ರಾಮೀಣ ಸಿಪಿಐ ಸೋಮಶೇಖರ ಜುಟ್ಟಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.