Tag: ಸಂಭಾಜಿ ಮಹಾರಾಜ

  • ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ನವದೆಹಲಿ: ಇದೇ ಮಾ.27 ರಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿ (PM Modi) ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ (Vicky Kaushal)  ನಟನೆಯ `ಛಾವಾ’ (Chhaava) ಸಿನಿಮಾ ವೀಕ್ಷಿಸಲಿದ್ದಾರೆ.

    ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ (Sambhaji Maharaj) ಜೀವನಾಧಾರಿತ `ಛಾವಾ’ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ಛಾವಾ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್  (Amit Shah) ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಹಾಗೂ ಇಡೀ ಸಿನಿಮಾ ತಂಡವು ಹಾಜರಾಗುವ ನಿರೀಕ್ಷೆಯಿದೆ.

    ಇದೇ ಫೆ.14 ರಂದು ಲಕ್ಷ್ಮಣ್‌ ಉಟೇಕರ್ (Laxman Utekar) ನಿರ್ದೇಶನದ ಛಾವಾ ಸಿನಿಮಾ ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಅವರ ಧೈರ್ಯ ಮತ್ತು ಔರಂಗಜೇಬನಿಂದಾಗಿ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ.

    ದೇಶ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾ ಕುರಿತು ಕಳೆದ ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ (Akhila Bharatiya Marathi Sahitya Sammelana) ಭಾಷಣದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇದನ್ನೂ ಓದಿ:ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ

  • ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ: ದೇವೇಂದ್ರ ಫಡ್ನವೀಸ್

    ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ: ದೇವೇಂದ್ರ ಫಡ್ನವೀಸ್

    ಬೆಳಗಾವಿ: ಸತೀಶ್ ಜಾರಕಿಹೊಳಿ ಭಾಷಣದ ವೇಳೆ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ.

    ನವೆಂಬರ್ 6ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಡಿ ನಡೆದಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿದ್ದ 42 ಸೆಕೆಂಡುಗಳ ಭಾಷಣದ ತುಣುಕನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಧರ್ಮವೀರ ಸಂಭಾಜಿ ಮಹಾರಾಜರಿಗೆ ಧರ್ಮವೀರ ಹೆಸರು ಬಂದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಲ್ಲದೇ ಛತ್ರಪತಿ ಶಿವಾಜಿ ಮಹಾರಾಜರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಆರೋಪವನ್ನು ಮಾಡಿದ್ದಾರೆ.

    ಧರ್ಮವೀರ ಸಂಭಾಜಿ ಮಹಾರಾಜರ ಬಗ್ಗೆ ಅಸಂಬದ್ಧ, ದಾರಿತಪ್ಪಿಸುವ, ಅವಮಾನಿಸುವ ಸುಳ್ಳು ಹೇಳಿಕೆಯನ್ನು ಒಪ್ಪುತ್ತೀರಾ? ಎಂದು ರಾಹುಲ್ ಗಾಂಧಿಗೆ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯಾ? ಮಹಾರಾಷ್ಟ್ರ ಇದನ್ನು ಸಹಿಸುವುದಿಲ್ಲ ಎಂದು ಫಡ್ನವೀಸ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

    ವೀಡಿಯೋದಲ್ಲಿ ಏನಿದೆ?
    ಸಂಭಾಜಿ ಮಹಾರಾಜರನ್ನು ಬ್ರಿಟಿಷರು ಹಿಡಿದು ಹತ್ಯೆ ಮಾಡಿದರು. ಏಕೆ ಹತ್ಯೆ ಮಾಡಿದರು? ಯಾವಾಗ ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಹಾಕಲಾಗಿತ್ತು ಈ ವೇಳೆ ಸಂಭಾಜಿ ಮಹಾರಾಜರನ್ನು ಹಿಡಿದಿದ್ದರು. ಈ ಸಿಟ್ಟಿನಲ್ಲಿ ಅವರನ್ನು ಬ್ರಿಟಿಷರ ವಶಕ್ಕೆ ನೀಡಲಾಯಿತು. ಬಳಿಕ ಅವರಿಗೆ ಧರ್ಮವೀರ ಸಂಭಾಜಿ ಮಹಾರಾಜ ಎಂದು ಹೆಸರಿಟ್ಟರು. ಅದೊಂದು ಇತಿಹಾಸ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದೆ. ಇದನ್ನು ತಿಳಿದುಕೊಳ್ಳಲು ಬಹಳ ಸಮಯ ಬೇಕು. ಈ ಬಗ್ಗೆ ಬಹಳ ಅಧ್ಯಯನ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವ 42 ಸೆಕೆಂಡ್‌ನ ವೀಡಿಯೋವನ್ನು ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಟಿಪ್ಪು ಮಾತ್ರ ಮನೆದೇವರಾ?: ಕಟೀಲ್ ಕಿಡಿ

    Live Tv
    [brid partner=56869869 player=32851 video=960834 autoplay=true]