Tag: ಸಂಬಿತ್ ಪಾತ್ರಾ

  • ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

    ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

    ಭುವನೇಶ್ವರ: ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra) ಅವರು ಉರಿಯುತ್ತಿರುವ ಕೆಂಡದ ಮೇಲೆ ನಡೆದು ದೇವರ ಸೇವೆ ಮಾಡಿದ್ದಾರೆ.

    ಘಟನೆ ಒಡಿಶಾದ ಪುರಿ ಜಿಲ್ಲೆಯ ಝಮು ಜಾತ್ರೆಯಲ್ಲಿ (Jhamu Jatra) ಸುಮಾರು 10 ಮೀಟರ್ ಉದ್ದದ ಉರಿಯುತ್ತಿರುವ ಕೆಂಡದ ಹಾಸಿನ ಮೇಲೆ ಅವರು ನಡೆದಾಡಿದ್ದಾರೆ. ಇದನ್ನೂ ಓದಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ ಬಾವುಟ ಇರಬೇಕು: ರಘುಪತಿ ಭಟ್

    ಬೆಂಕಿಯ ಮೇಲೆ ನಡೆದ ದೃಶ್ಯವನ್ನು ಟ್ವಟ್ಟರ್‍ನಲ್ಲಿ ಹಂಚಿಕೊಂಡಿರುವ ಅವರು, ರೆಬಾಟಿ ರಾಮನ್ (Rebati Raman) ಗ್ರಾಮದ ಜಾತ್ರೆಯಲ್ಲಿ ಭಾಗವಹಿಸಿದ್ದೇನೆ. ನನ್ನ ತಾಯಿಗೆ ಬೆಂಕಿಯ ಮೇಲೆ ನಡೆಯುವ ಮೂಲಕ ಪೂಜೆ ಸಲ್ಲಿಸಿದ್ದೇನೆ. ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಗ್ರಾಮಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, ಜನರ ಕಲ್ಯಾಣ ಮತ್ತು ಕ್ಷೇತ್ರದಲ್ಲಿ ಶಾಂತಿಗಾಗಿ ಬೆಂಕಿಯ ಮೇಲೆ ನಡೆಯುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಝಮು ಜಾತ್ರೆಯ ಸಂಪ್ರದಾಯದ ಪ್ರಕಾರ, ಮಾತೃ ದೇವತೆ ದುಲನ್ (Maa Dulan) ದೇವಿಗೆ ಬೆಂಕಿಯ ಮೇಲೆ ನಡೆಯುವುದು ಹಾಗೂ ಉಗುರುಗಳಿಂದ ತಮ್ಮ ದೇಹಕ್ಕೆ ಚುಚ್ಚುವ ಮೂಲಕ ಭಕ್ತರು ವಿಶಿಷ್ಟವಾಗಿ ಪ್ರಾರ್ಥಿಸುತ್ತಾರೆ ಎಂದಿದ್ದಾರೆ.

    ಸಂಬಿತ್ ಪಾತ್ರಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರು ಬಿಜೆಡಿಯ (BJD) ಪಿನಾಕಿ ಮಿಶ್ರಾ ವಿರುದ್ಧ 10,000 ಮತಗಳಿಂದ ಸೋತಿದ್ದರು. ಇದನ್ನೂ ಓದಿ: ನನಗೆ ಟಿಕೆಟ್ ಮಿಸ್ ಆಗಿದ್ರಿಂದ ಇಲ್ಲಿವರೆಗೆ ಬೆಂಬಲಿಗರು ಊಟನೂ ಮಾಡಿಲ್ಲ: ದೊಡ್ಡಪ್ಪಗೌಡ ನರಿಬೋಳ್

  • WHO ಡೇಟಾ, ಕಾಂಗ್ರೆಸ್ ಬೇಟಾ ಎರಡೂ ತಪ್ಪು: ಬಿಜೆಪಿ ಆರೋಪ

    WHO ಡೇಟಾ, ಕಾಂಗ್ರೆಸ್ ಬೇಟಾ ಎರಡೂ ತಪ್ಪು: ಬಿಜೆಪಿ ಆರೋಪ

    ನವದೆಹಲಿ: WHO ಡೇಟಾ ಮತ್ತು ಕಾಂಗ್ರೆಸ್ ಬೇಟಾ ಎರಡು ತಪ್ಪು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ಬಿಜೆಪಿ ವ್ಯಂಗ್ಯವಾಗಿ ಮಾತನಾಡಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ WHO ಡೇಟಾ ತೋರಿಸಿ ಕೋವಿಡ್-19ನಿಂದ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಬಿಜೆಪಿ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ ಎಂದು ದಾಖಲೆ ತೋರಿಸಿ ಟೀಕಿಸಿದ್ದರು. ಈ ಹಿನ್ನೆಲೆ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದು, WHO ದ ಡೇಟಾ ಮತ್ತು ಕಾಂಗ್ರೆಸ್‍ನ ಬೇಟಾ(ಮಗ) ತಪ್ಪಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ COVID-19 ಸಾವುಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವೈರಸ್‍ನಿಂದ ಭಾರತದಲ್ಲಿ ಅಂದಾಜು ಸಾವುಗಳನ್ನು ಲೆಕ್ಕಾಚಾರ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‍ಒ) ವಿಧಾನವು ‘ದೋಷಪೂರಿತ’ ಮತ್ತು ಕಾಲ್ಪನಿಕವಾಗಿದೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ಅನ್ನು ಕಡಿಮೆ ಮಾಡಲು ರಾಹುಲ್ ಪದೇ ಪದೇ ಪ್ರಯತ್ನಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತದ ಇಮೇಜ್ ಕಡಿಮೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಭಾರತದ ರಿಜಿಸ್ಟ್ರಾರ್ ಜನರಲ್ ಅಡಿಯಲ್ಲಿ ಜನನ ಮತ್ತು ಮರಣ ನೋಂದಣಿಗಾಗಿ ಭಾರತವು ದೃಢವಾದ ಕಾರ್ಯವಿಧಾನವನ್ನು ಹೊಂದಿದೆ. ‘WHO ಡೇಟಾ ಮತ್ತು ಕಾಂಗ್ರೆಸ್‍ನ ಬೇಟಾ ತಪ್ಪಾಗಿದೆ’ ಎಂದು ಆರೋಪಿಸಿದರು. ರಾಹುಲ್ ಅವರು ಭಾರತವನ್ನು ‘ಧೈರ್ಯಹೀನಗೊಳಿಸಬಾರದು’ ಎಂದು ಸಲಹೆ ಕೊಟ್ಟರು.

    ಭಾರತದಲ್ಲಿ 4.7 ಮಿಲಿಯನ್ ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಹೇಳಿರುವ WHO ವರದಿಯ ಮೇಲೆ ರಾಹುಲ್ ಅವರು ಈ ಹಿಂದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಜ್ಞಾನವು ಸುಳ್ಳು ಹೇಳುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ಎಂದು ವಾಗ್ದಾನ ಮಾಡಿದ್ದರು. ಈ ಹೇಳಿಕೆಗೆ ಬಿಜೆಪಿ ಮುಖಂಡರು ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ದೈಹಿಕ ಆರೋಗ್ಯದಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ನೀಡಬೇಕು: ಕೆ.ಸುಧಾಕರ್ 

  • M-ಮಸೂದ್, O-ಒಸಾಮಾ, D-ದಾವೂದ್, I-ಐಎಸ್‍ಐ: ಮೋದಿ ಹೆಸರಿಗೆ ಕಾಂಗ್ರೆಸ್ ವ್ಯಾಖ್ಯಾನ

    M-ಮಸೂದ್, O-ಒಸಾಮಾ, D-ದಾವೂದ್, I-ಐಎಸ್‍ಐ: ಮೋದಿ ಹೆಸರಿಗೆ ಕಾಂಗ್ರೆಸ್ ವ್ಯಾಖ್ಯಾನ

    ನವದೆಹಲಿ: ಮೋದಿ ಅಂದ್ರೆ ಮಸೂದ್ ಅಜರ್, ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಐಎಸ್‍ಐ ಎಂದು ಕಾಂಗ್ರೆಸ್ ಹೊಸ ವ್ಯಾಖ್ಯಾನವನ್ನು ನೀಡಿದೆ.

    ಖಾಸಗಿ ಸುದ್ದಿವಾಹಿನಿ ನಡೆಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ವಿವಾದಾತ್ಮಕ ವ್ಯಾಖ್ಯಾನವನ್ನು ನೀಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಗ್ರರ ಜೊತೆಗೆ ಹೊಲಿಕೆ ಮಾಡಿದ್ದು ಅಪರಾಧವಾಗಿದೆ. ಪವನ್ ಖೆರಾ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ವಾದವನ್ನು ಮುಂದುವರಿಸಿದ ಸಂಬಿತ್ ಪಾತ್ರಾ ಅವರು, ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಮಸೂದ್ ಅಜರ್, ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಐಎಸ್‍ಐ ಹೌದಾ ಎಂದು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಪ್ರಶ್ನಿಸಿದರು. ತಕ್ಷಣವೇ ಸಭಿಕರು ಅಲ್ಲ..ಅಲ್ಲ.. ಎಂದು ಧ್ವನಿಗೂಡಿಸಿದರು. ಹಾಗಾದರೆ ಈ ಹೇಳಿಕೆಯನ್ನು ಖಂಡಿಸುವುದಾದರೆ ಒಮ್ಮೆ ಎದ್ದು ನಿಂತು ‘ಶೇಮ್ ಶೇಮ್’ ಅಂತ ಹೇಳಿ ಎಂದು ಸಂಬಿತ್ ಪಾತ್ರಾ ಮನವಿ ಮಾಡಿದರು. ಇದನ್ನು ಓದಿ: ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?

    ಸಂಬಿತ್ ಪಾತ್ರಾ ಅವರು ಹೇಳುತ್ತಿದ್ದಂತೆ ಅನೇಕ ಸಭಿಕರು ಎದ್ದು ನಿಂತು ‘ಶೇಮ್ ಶೇಮ್’ ಎಂದು ಆಕ್ರೋಶ ಹೊರ ಹಾಕಿದರು. ಜನರ ಗದ್ದಲದಲ್ಲಿಯೇ ವಾಗ್ದಾಳಿ ನಡೆಸಿದ ಸಂಬಿತ್ ಪಾತ್ರಾ ಅವರು, ದೇಶದ ಒಬ್ಬ ಪ್ರಧಾನಿಯನ್ನು ಉಗ್ರರ ಜೊತೆಗೆ ಹೋಲಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಈ ಹೇಳಿಕೆಗೆ ಸಹೋದರ ಪವನ್ ಖೆರಾ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

    ಆದರೆ ಪವನ್ ಖೇರಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಲು ಹಿಂದೇಟು ಹಾಕಿದರು. ಬಿಜೆಪಿ ನಾಯಕರು ಪವನ್ ಖೇರಾ ಹೇಳಿಕೆಯನ್ನು ಖಂಡಿಸಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ. ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕಪಡಿಸುತ್ತಿದ್ದಾರೆ.

    ಪಾಠ ಕಲಿಯದ ಕಾಂಗ್ರೆಸ್:
    ಚುನಾವಣೆಯ ಸಮಯದಲ್ಲಿ ಮೋದಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿದ ಉದಾಹರಣೆಗಳು ಸಾಕಷ್ಟಿದೆ. ಆದರೂ ತಾವು ಮಾಡಿದ ತಪ್ಪಿನಿಂದ ಪಾಠ ಕಲಿಯದ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಮೋದಿಯನ್ನು ಲೇವಡಿ ಮಾಡಿದ್ದಾರೆ.

    2007 ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಯೂಥ್ ಕಾಂಗ್ರೆಸ್ ರೀತಿಯಲ್ಲೇ ಮೋದಿಯನ್ನ ‘ಚಾಯ್ ವಾಲಾ’ ಅಂತಾ ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಅಂತಾ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಯಿತು.

    2017ರ ಗುಜರಾತ್ ಚುನವಣೆಯ ಸಮಯದಲ್ಲಿ ತಾನೊಬ್ಬ ಶಿವಭಕ್ತ ಎನ್ನುತ್ತಿರುವ ಕಾಂಗ್ರೆಸ್‍ನವರಿಗೆ ಈಗ ಬಾಬಾ ಸಾಹೇಬ್‍ಗಿಂತ ಬಾಬಾ ಬೋಲೆ ಅಂದ್ರೆ ಶಿವನ ನೆನಪು ಆಗುತ್ತಿದೆ ಎಂದು ಹೇಳಿ ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡುವ ಯತ್ನದಲ್ಲಿ ಮೋದಿಯೊಬ್ಬ `ನೀಚ ಮನುಷ್ಯ’, ಅವರಿಗೆ ಮೌಲ್ಯಗಳೇ ಇಲ್ಲ. ಅಂಥವರ ಬಗ್ಗೆ ಏನು ಹೇಳಲಿಕ್ಕೆ ಆಗುತ್ತೆ ಎಂದು ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ನಾಲಿಗೆಯನ್ನು ಹರಿಯಬಿಟ್ಟಿದ್ದರು.

    https://twitter.com/ShobhaBJP/status/1107134987587850240

    ಈ ಹೇಳಿಕೆಗೆ ಸೂರತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಇದು `ಗುಜರಾತ್ ಜನರಿಗೆ ಮಾಡಿದ ಅವಮಾನ’ ಎಂದು ಹೇಳಿ ತಿರುಗೇಟು ನೀಡಿದ್ದರು. ಅಯ್ಯರ್ ಹೇಳಿಕೆಯನ್ನು ಗುಜರಾತ್ ಬಿಜೆಪಿ ತನ್ನ ಪ್ರಚಾರದ ವೇಳೆ ಬಳಸಿಕೊಂಡಿತ್ತು.