Tag: ಸಂಬಳ

  • ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

    ಚಿಕ್ಕಮಗಳೂರು: ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದಕ್ಕೆ ಆಶಾ ಕಾರ್ಯಕರ್ತೆಯರ ಸಂಬಳ ತಡೆ ಹಿಡಿಯಲಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಂಟು ಆಶಾ ಕಾರ್ಯಕರ್ತೆಯರು ಮಳೆಯಿಂದಾಗಿ ಬಸ್ ಸೌಕರ್ಯವಿಲ್ಲದೇ ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದರು. ಇದೇ ಕಾರಣ ನೀಡಿ ಆರೋಗ್ಯಾಧಿಕಾರಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ. ಗೈರಾಗಿದ್ದಕ್ಕೆ ವಿಷಾದ ಪತ್ರವನ್ನ ನೀಡಿದ್ರೂ ವೈದ್ಯಾಧಿಕಾರಿ ಮನೋಜ್ ತಮ್ಮ ಸಂಬಳ ತಡೆ ಹಿಡಿದಿದ್ದಾರೆ. ನೀವು ಕೆಲಸವನ್ನೇ ಮಾಡಿಲ್ಲ ನಿಮಗೇಕೆ ಸಂಬಳ ನೀಡಬೇಕು ಎಂದು ಹೇಳುತ್ತಾರೆ. ವೈದ್ಯರು ಸಹಿ ಹಾಕಿದ್ರೆ, ನರ್ಸ್ ಗಳು ಹಾಕಲ್ಲ, ನರ್ಸ್ ಗಳು ಸಹಿ ಹಾಕಿದ್ರೆ ವೈದ್ಯರು ಹಾಕಲ್ಲ ಎಂದು ಆಶಾ ಕಾರ್ಯಕರ್ತೆ ರತ್ನ ಹೇಳುತ್ತಾರೆ.

    ಕೊರೊನಾ ಸಮಯದಲ್ಲಿ ಸಂಬಳ ಆಗೋದು ತಡವಾದ್ರೂ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಕೇವಲ ಮೂರು ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ತಡೆ ಹಿಡಿಯೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಸಾರಿಗೆ ಇಲಾಖೆ ನೌಕರರ ವೇತನಕ್ಕೆ ಸರ್ಕಾರದಿಂದ ಹಣ ಬಿಡುಗಡೆ

    ಸಾರಿಗೆ ಇಲಾಖೆ ನೌಕರರ ವೇತನಕ್ಕೆ ಸರ್ಕಾರದಿಂದ ಹಣ ಬಿಡುಗಡೆ

    ಬೆಂಗಳೂರು: ಕೊರೊನಾ ನಡುವೆ ಭಯದಲ್ಲೇ ಕೆಲಸ ಮಾಡುತ್ತಿರುವ ಸಾರಿಗೆ ಇಲಾಖೆ ಸಿಬ್ಬಂದಿಗೆ ಕಳೆದೆರಡು ತಿಂಗಳಿಂದ ವೇತನ ಆಗಿರಲಿಲ್ಲ. ಇದೀಗ ಸಾರಿಗೆ ಇಲಾಖೆ ನೌಕರರಿಗೆ ಸರ್ಕಾರ ವೇತನದ ಹಣವನ್ನು ಬಿಡುಗಡೆ ಮಾಡಿದೆ.

    ಒಟ್ಟು 961 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, 4 ತಿಂಗಳ ವೇತನಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಜೂನ್ ಮತ್ತು ಜುಲೈ ತಿಂಗಳ ವೇತನಕ್ಕೆ ಈಗಾಗಲೇ 426 ಕೋಟಿ, ಉಳಿದ ಹಣ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕೆ ಬಿಡುಗಡೆ ಮಾಡಲಾಗಿದೆ.

    ಹಣ ಬಿಡುಗಡೆ ಮಾಡಿದ್ದಕ್ಕೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಎಂ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾಸ್ಯ ಸಾರಿಗೆ ಸಿಬ್ಬಂದಿಗೆ ಸಂಬಳ ಭರಿಸಲು 961 ಕೋಟಿ ರೂ.ಬಿಡುಗಡೆ ಮಾಡಿದೆ. ಇದರಿಂದ ಒಟ್ಟು ನಾಲ್ಕು ತಿಂಗಳುಗಳ ಸಂಬಳ ಭರಿಸಲು ಅನುಕೂಲವಾಗಲಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಧನ್ಯವಾದ ತಿಳಿಸಿದ್ದಾರೆ.

  • ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಬಳವಿಲ್ಲ- ಕೆಲಸಕ್ಕೆ ಬಂದರೂ ರಜೆ ಹಾಕಲೇಬೇಕಂತೆ

    ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಬಳವಿಲ್ಲ- ಕೆಲಸಕ್ಕೆ ಬಂದರೂ ರಜೆ ಹಾಕಲೇಬೇಕಂತೆ

    ರಾಯಚೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ರಾಯಚೂರು ಸೇರಿದಂತೆ ಎಲ್ಲೆಡೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೊಸ ಹೊಸ ತೊಂದರೆಗಳು ಶುರುವಾಗಿವೆ. ಒಂದೆಡೆ ಸಂಬಳವಿಲ್ಲ, ಇನ್ನೊಂದೆಡೆ ರಜೆಗಳ ಹರಣ, ಮತ್ತೊಂದೆಡೆ ಕೆಲಸವೂ ಇಲ್ಲಾ. ಒಟ್ಟಿನಲ್ಲಿ ಎಲ್ಲರದ್ದೂ ಒಂದು ತರದ ಕಷ್ಟ. ಆದ್ರೆ ಸಾರಿಗೆ ಸಿಬ್ಬಂದಿ ಬೇರೆ ತೆರನಾದ ಕಷ್ಟ ಎದುರಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವತಃ ಸಾರಿಗೆ ಸಚಿವರಾಗಿದ್ದರೂ ಸಿಬ್ಬಂದಿ ಕಷ್ಟ ಕೇಳುವವರಿಲ್ಲದಂತಾಗಿದೆ ಅಂತ ಸಾರಿಗೆ ಇಲಾಖೆ ನೌಕರರು ಅಸಮಧಾನಗೊಂಡಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೊದಲ ಲಾಕ್ ಡೌನ್ ಆರಂಭವಾದಾಗಿನಿಂದ ರಾಯಚೂರಿನ ಕೆಎಸ್ ಆರ್ ಟಿ ಸಿ ಸಿಬ್ಬಂದಿ ಎಲ್ಲರಂತೆ ಒಂದಿಲ್ಲೊಂದು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಆದ್ರೆ ಈಗ ಸಾರಿಗೆ ಇಲಾಖೆಯ ಚಾಲಕ ಹಾಗೂ ನಿರ್ವಾಹಕರು ಹೊಸ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಿಲ್ಲ. ಕೆಲಸಕ್ಕೆ ಹೋದರು ರಜೆ ಹಾಕಬೇಕಾಗಿದೆ. ಪ್ರತಿ ಮಾರ್ಗದ ಸಿಬ್ಬಂದಿಗೆ ಆರು ದಿನ ಕೆಲಸ ಆರು ದಿನ ರಜೆ ನೀಡಲಾಗುತ್ತಿದೆ. ಆದ್ರೆ ಬಸ್ ಗಳನ್ನ ಓಡಿಸದ ದಿನಗಳ ರಜೆಯನ್ನು ರಜೆಯಂದು ಪರಿಗಣಿಸಲು ಸಿಬ್ಬಂದಿಯ ಸಾಮಾನ್ಯ ರಜೆ, ಗಳಿಕೆ ರಜೆ , ವೈದ್ಯಕೀಯ ರಜೆಗಳನ್ನ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ರಜೆಗೆ ಮುಂದಿನ ಅವಧಿಯ ರಜೆಯನ್ನು ಮಂಜೂರು ಮಾಡಲಾಗುತ್ತಿದೆ. ಇದರಿಂದ ಕೆಲಸಕ್ಕೆ ಬಂದರೂ ಸಿಬ್ಬಂದಿ ತಮ್ಮ ರಜೆಯನ್ನ ಕಳೆದುಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಬಳಿಕ ಬೇಕಾಗಿರುವ ರಜೆಗಳಿಗೆ ತಮ್ಮ ವೇತನವನ್ನು ಸಿಬ್ಬಂದಿ ಕಳೆದುಕೊಳ್ಳಬೇಕಾಗಿದೆ. ಇನ್ನೊಂದೆಡೆ ಸಂಬಳವೇ ಸರಿಯಾಗಿ ಬರುತ್ತಿಲ್ಲ.

    ಕೊರೊನಾ ಲಾಕ್‍ಡೌನ್ ಆರಂಭವಾದಾಗಿನಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ. ಒಂದು ತಿಂಗಳು, ಎರಡು ತಿಂಗಳು ವಿಳಂಬ ಮಾಡುತ್ತಿದ್ದಾರೆ. ಜೂನ್ ತಿಂಗಳ ಸಂಬಳವನ್ನೇ ನೀಡಿಲ್ಲ. ನಮ್ಮ ರಜೆಗಳನ್ನು ಸಹ ಹಾಳು ಮಾಡುತ್ತಿದ್ದಾರೆ ಜೀವನ ನಡೆಸುವುದೇ ಕಷ್ಟವಾಗಿದೆ. ಇದರಿಂದ ನಮ್ಮ ಬದುಕು ಕೂಲಿ ಕೆಲಸ ಮಾಡುವವರಿಗಿಂತಲೂ ಕಷ್ಟವಾಗಿದೆ. ಮನೆ ಸಂಸಾರ ನಡೆಸಲು ಕಷ್ಟ, ಬಾಡಿಗೆ ಕಟ್ಟಲು ಕಷ್ಟವಿದೆ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

    ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದರಿದ್ದರೂ ಕೊರೊನಾ ಹಿನ್ನೆಲೆ ಬಸ್ ಓಡಾಟ ಕಡಿತವಾಗಿದ್ದು, ಸಿಬ್ಬಂದಿ ಸಂಬಳ ಹಾಗೂ ರಜೆ ಎರಡಕ್ಕೂ ಕತ್ತರಿ ಬಿದ್ದಿದೆ. ಬಸ್ ಓಡಾಟ ಇಲ್ಲದೆ ಸಾರಿಗೆ ಸಂಸ್ಥೆಗಳು ಭಾರೀ ನಷ್ಟದಲ್ಲಿ ಇರುವುದೇನೋ ನಿಜ ಆದ್ರೆ ಸಿಬ್ಬಂದಿಗಳ ಸಂಕಷ್ಟಕ್ಕೆ ಸರ್ಕಾರ ಹಾಗೂ ಸಾರಿಗೆ ಸಚಿವರು ಸ್ಪಂದಿಸಬೇಕಿದೆ.

  • ಕೊರೊನಾ ವಾರಿಯರ್ಸ್‍ಗೆ ಸಂಬಳ ಕೊರತೆ: ಸಚಿವರ ಎದುರೇ ಸಿಬ್ಬಂದಿ ಆಕ್ರೋಶ

    ಕೊರೊನಾ ವಾರಿಯರ್ಸ್‍ಗೆ ಸಂಬಳ ಕೊರತೆ: ಸಚಿವರ ಎದುರೇ ಸಿಬ್ಬಂದಿ ಆಕ್ರೋಶ

    ರಾಯಚೂರು: ನಗರದ ರಿಮ್ಸ್ ಹಾಗೂ ಓಪೆಕ್ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ತಮ್ಮ ಅಳಲು ತೋಡಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಕುರಿತ ಸಭೆ ಹಾಗೂ ರಿಮ್ಸ್ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿದ್ದ ಸಚಿವ ಡಾ.ಸುಧಾಕರ್ ರನ್ನ ತಡೆದು ರಿಮ್ಸ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರು ಸಂಬಳ ನೀಡುವಂತೆ ಆಗ್ರಹಿಸಿದರು. ವೈದ್ಯಕೀಯ ವಿಜ್ಞಾನಗಳ ಭೋದಕ ಆಸ್ಪತ್ರೆ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಅಂತ ಆರೋಪಿಸಿದರು.

    ನಗರದ ಕೋವಿಡ್ ಆಸ್ಪತ್ರೆ ಓಪೆಕ್‍ನ ಸಿಬ್ಬಂದಿಗಳಿಗೂ ಸಂಬಳ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಪ್ರತೀ ಬಾರಿಯೂ ಸರ್ಕಾರದಿಂದ ಹಣ ಬಂದಿಲ್ಲ ಅಂತ ಕಾರಣ ಹೇಳಲಾಗುತ್ತಿದೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದೆ ಸಿಬ್ಬಂದಿ ಅಳಲು ತೋಡಿಕೊಂಡರು. ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಸಂಬಳ ನೀಡುವಂತೆ ಒತ್ತಾಯಿಸಿದರು. ಪ್ರತೀ ತಿಂಗಳು ನೀಡಬೇಕಾದ ಸಂಬಳವನ್ನ ವರ್ಷಕ್ಕೆ ಎರಡು ಮೂರು ಬಾರಿ ನೀಡಲಾಗುತ್ತೆ ಅಂತ ಆರೋಪಿಸಿದರು.

    ಕೇವಲ ಘೋಷಣೆ ಕೂಗಿದ್ರೆ ನಿಮಗೆ ಸಂಬಳ ಸಿಗುವುದಿಲ್ಲ. ಮನವಿ ಪತ್ರಗಳನ್ನು ನೀಡಿದರೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತೇನೆ ಎಂದ ಸಚಿವ ಡಾ.ಸುಧಾಕರ್ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರೆಗೆ ಸೂಚನೆ ನೀಡಿದರು.

  • ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಮಂಗಳೂರು: ವೈದ್ಯರು ಹಾಗೂ ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೊರೊನಾ ಸಂದರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‍ಗೆ ಸಂಬಳ ನೀಡದೆ ಸರ್ಕಾರ ನಿರ್ಲಕ್ಷಿಸಿದೆ. ವಾರಿಯರ್‍ಗಳಿಗೇ ಸಂಬಳ ನೀಡಿಲ್ಲ ಎಂದಮೇಲೆ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ತಕ್ಷಣ ಸಂಬಳ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಗೂ ಸಂಬಳ ಆಗಿಲ್ಲ. ಅಂದರೆ ರಾಜ್ಯದಲ್ಲಿ ಒಟ್ಟು 26 ಸಾವಿರ ಮಂದಿಗೆ ಸರ್ಕಾರ ಸಂಬಳ ನೀಡಿಲ್ಲ. ಎರಡು ತಿಂಗಳು ಬಿಡುವಿಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್ ನಲ್ಲಿ ಸಂಗ್ರಹವಾದ ಹಣವನ್ನು ಕೊಡಲಿ. ಜೊತೆಗೆ ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

  • ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?

    ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?

    ಬೆಂಗಳೂರು: ಕೋವಿಡ್ 19 ನಿಂದಾಗಿ ಶಾಸಕರ ಸಂಬಳಕ್ಕೂ ಈಗ ಸರ್ಕಾರ ಕತ್ತರಿ ಹಾಕಿದೆ. ಸಂಬಳ ಕಡಿತದ ಬಗ್ಗೆ ಅಧಿಕೃತವಾಗಿ ಇಂದು ಸ್ಪಷ್ಟೀಕರಣ ನೀಡಿದೆ.

    ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗೆ ಶೇ.30ರಷ್ಟು ಶಾಸಕರ ಸಂಬಳ ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತ ಮಾಡಲಾಗಿದೆ.

     

    ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಭೆಗೆ ಹಾಜರಾಗಲು ದಿನ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ ಇವುಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಶೇ.30% ಕಡಿತ ಮಾಡಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಆದೇಶ ನೀಡಿದೆ.

    ಮುಖ್ಯಮಂತ್ರಿಗಳಿಗೆ ಸಂಬಳ ಎಷ್ಟಿದೆ?
    ಸಂಬಳ – 50 ಸಾವಿರ ರೂ.ಮಾಸಿಕ
    ಅತಿಥ್ಯ ಭತ್ಯೆ – 3 ಲಕ್ಷ ಸಾವಿರ ರೂ.
    ವಾಹನ ಭತ್ಯೆ – 1 ಸಾವಿರ ಲೀಟರ್
    ಮನೆ ಬಾಡಿಗೆ – 80 ಸಾವಿರ

    ಸಂಪುಟ ದರ್ಜೆ ಸಚಿವರು
    ಸಂಬಳ – 40 ಸಾವಿರ ರೂ.
    ಅತಿಥ್ಯ ಭತ್ಯೆ – 3 ಲಕ್ಷ ರೂ.
    ವಾಹನ ಭತ್ಯೆ – 1 ಸಾವಿರ ಲೀಟರ್
    ಮನೆ ಬಾಡಿಗೆ – 80 ಸಾವಿರ ರೂ.

    ಶಾಸಕರು
    ಸಂಬಳ – 25 ಸಾವಿರ ರೂ.
    ಕ್ಷೇತ್ರ ಪ್ರಯಾಣ ಭತ್ಯೆ – 40 ಸಾವಿರ ರೂ.
    ದೂರವಾಣಿ ವೆಚ್ಚ – 20 ಸಾವಿರ ರೂ.
    ಕ್ಷೇತ್ರ ಭತ್ಯೆ – 40 ಸಾವಿರ ರೂ.
    ಪ್ರಯಾಣ ಭತ್ಯೆ ಪ್ರತಿ ಕಿ.ಮೀ.25 ರೂ. ಹೆಚ್ಚಳ
    ಹೊರ ರಾಜ್ಯ ಭತ್ಯೆ – 2 ಸಾವಿರ ರೂ
    ಔಷಧಿ ಭತ್ಯೆ – 5 ಸಾವಿರ ರೂ.

  • ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

    ನವದೆಹಲಿ: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ನೇರ ಮಾತುಗಳ ಮೂಲಕವೇ ಅವರು ಚಿರಪರಿಚಿತರಾಗಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ಆರ್ಥಿಕತೆಯೇ ಬುಡಮೇಲಾಗಿದ್ದು, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಕಂಪನಿಗಳಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ. ಇನ್ನು ಸಿನಿಮಾ ರಂಗದ ಸಂಬಳದ ಕುರಿತು ಸಹ ಚರ್ಚೆ ನಡೆಯುತ್ತಿದ್ದು, ಈ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ತಾಪ್ಸಿ ಬಾಲಿವುಡ್‍ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, ತಮ್ಮ ವಿಶಿಷ್ಠ ಸಿನಿಮಾಗಳ ಮೂಲಕವೇ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ತುಂಬಾ ವಿಭಿನ್ನ, ವಿಶೇಷ ಸಿನಿಮಾಗಳನ್ನು ಮಾತ್ರ ತಾಪ್ಸಿ ಒಪ್ಪಿಕೊಳ್ಳುತ್ತಾರೆ. ಬದ್ಲಾ, ಗೇಮ್ ಓವರ್, ಮಿಷನ್ ಮಂಗಳ್, ಸಾಂದ್ ಕಿ ಆಂಕ್ ಹಾಗೂ ತಪ್ಪಡ್ ನಂತರ ವಿಶಿಷ್ಠ ಸಿನಿಮಾಗಳಲ್ಲಿ ತಾಪ್ಸಿ ಪಾತ್ರ ನಿಭಾಯಿಸಿದ್ದಾರೆ. ತಪ್ಪಡ್ ಸಿನಿಮಾ ಮೂಲಕ ಮಹಿಳೆಯರ ಮೇಲಿನ ಶೋಷಣೆ ಕುರಿತು ಬೆಳಕು ಚೆಲ್ಲಿದ್ದಾರೆ.

    ಹೀಗಿರುವಾಗಲೇ ಸಿನಿಮಾ ತಾರೆಯರ ಸಂಬಳದ ಕುರಿತ ಪ್ರಶ್ನೆಗೂ ಉತ್ತರಿಸಿರುವ ಅವರು, ಇಂತಹ ಸಂದರ್ಭದಲ್ಲಿ ನಾನು ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಸಂಬಳ ಸಿಗುತ್ತಿಲ್ಲ. ಮುಂದೆ ಸಂಬಳ ಕಟ್ ಮಾಡುವುದಾದರೆ ಮಾಡಲಿ. ನಾನು ಅದಕ್ಕೆ ಸಿದ್ಧಳಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹಲವರು ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಈ ಕುರಿತು ಹಲವು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಹ ಉತ್ತರಿಸಿರುವ ತಾಪ್ಸಿ, ಅವರು ಸಿಟ್ಟಾಗಿರುವುದರಲ್ಲಿ ಅರ್ಥವಿದೆ. ನಿರ್ಮಾಪಕರು ಸಿಟ್ಟಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಿನಿಮಾ ಬಿಡುಗಡೆಗೆ ಆತರ ಪಡಬಾರದು, ಸ್ವಲ್ಪ ಕಾಯಬೇಕು ಎಂದಿದ್ದಾರೆ. ಅಲ್ಲದೆ ದೇಶದಲ್ಲಿ ಚಿತ್ರಮಂದಿರಗಳು ನಶಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

    ತಾಪ್ಸಿ ಪನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹಸೀನ್ ದಿಲ್ರುಬಾ, ಲೂಪ್ ಲಪೇಟಾ, ಜನ ಗಣ ಮನ, ಶಹಬ್ಬಾಷ್ ಮಿತು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

  • ಪೂರ್ಣ ಪ್ರಮಾಣದ ವೇತನ ನೀಡದ ಕಂಪನಿಗಳ ವಿರುದ್ಧ ಕ್ರಮ – ಕೇಂದ್ರದ ಆದೇಶಕ್ಕೆ ತಡೆ

    ಪೂರ್ಣ ಪ್ರಮಾಣದ ವೇತನ ನೀಡದ ಕಂಪನಿಗಳ ವಿರುದ್ಧ ಕ್ರಮ – ಕೇಂದ್ರದ ಆದೇಶಕ್ಕೆ ತಡೆ

    ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಪೂರ್ಣ ಪ್ರಮಾಣದ ವೇತನ ನೀಡದ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಸುತ್ತೋಲೆ ಹೊರಡಿಸಿದ್ದ ಕೇಂದ್ರ ಗೃಹ ಇಲಾಖೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

    ಗೃಹ ಇಲಾಖೆ ಸುತ್ತೋಲೆ ಪ್ರಶ್ನಿಸಿ ಖಾಸಗಿ ಕಂಪನಿಗಳು, ಕಾರ್ಖಾನೆ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಲ್. ನಾಗೇಶ್ವರ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ತಡೆ ನೀಡಿ ಗೃಹ ಇಲಾಖೆಗೆ ನೋಟಿಸ್ ಜಾರಿ ಮಾಡಿ ಮತ್ತಷ್ಟು ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

    ಏನಿದು ಪ್ರಕರಣ?
    ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿತ್ತು. ಆರ್ಥಿಕ ಸಂಕಷ್ಟದ ಕಾರಣ ನೀಡಿ ಹಲವು ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದ ಸಂಬಳವನ್ನು ಪಾವತಿ ಮಾಡಿರಲಿಲ್ಲ.

    ಕಾರ್ಮಿಕ ಇಲಾಖೆಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸರ್ಕಾರ ಮಾರ್ಚ್ 29 ರಂದು ಕಂಪನಿಗಳು, ಕಾರ್ಖಾನೆಗಳು ಪೂರ್ಣ ಪ್ರಮಾಣದ ಸಂಬಳವನ್ನು ಪಾವತಿ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ ಆ ಕಂಪನಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿತ್ತು.

     

    “ಸಮಾನ ಕೆಲಸಕ್ಕೆ ಸಮಾನ ವೇತನ” ಹೇಗೆ ಸರಿಯಾಗುತ್ತದೋ ಅದೇ ರೀತಿ “ಯಾವುದೇ ಕೆಲಸ ಇಲ್ಲ. ಯಾವುದೇ ಸಂಬಳವಿಲ್ಲ” ಎನ್ನುವ ನೀತಿಯೂ ಸರಿಯಾಗುತ್ತದೆ. ಲಾಕ್‍ಡೌನ್ ಅವಧಿಯಲ್ಲಿ ಉತ್ಪಾದನೆ ನಿಂತಿದೆ. ಕಾರ್ಖಾನೆಗಳು, ಉತ್ಪಾದನೆ ಘಟಕಗಳ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಪೂರ್ಣ ಪ್ರಮಾಣ ವೇತನ ನೀಡಲು ಸಾಧ್ಯವಿಲ್ಲದ ಕಾರಣ ಗೃಹ ಇಲಾಖೆ ಸುತ್ತೋಲೆಗೆ ತಡೆ ನೀಡುವಂತೆ ಕಂಪನಿಗಳು ಅರ್ಜಿಯಲ್ಲಿ ಮನವಿ ಮಾಡಿದ್ದವು.

    ಕೇಂದ್ರದ ಈ ಆದೇಶವನ್ನು 52 ಕಂಪನಿಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದವು. ಲಾಕ್‍ಡೌನ್ ಘೋಷಣೆಯಾದ ಬಳಿಕ ವ್ಯವಹಾರ ಸ್ಥಗಿತಗೊಂಡಿದೆ. ಮನೆಯಿಂದಲೇ ಉದ್ಯೋಗ ನಡೆಸಿಯೂ ಸಂಬಳ ಪಾವತಿಸದಿದ್ದರೆ ಬೇರೆ ವಿಚಾರ. ಆದರೆ ಕಂಪನಿಯಲ್ಲಿ ಯಾವುದೇ ಕೆಲಸ ನಡೆಯದ ಕಾರಣ ಉತ್ಪಾದನೆ ಇಲ್ಲ. ಉತ್ಪಾದನೆ ಇಲ್ಲದ ಕಾರಣ ಸಂಬಳ ನೀಡುವುದು ಹೇಗೆ ಎಂದು ಪ್ರಶ್ನಿಸಿತ್ತು.

    ಅರ್ಜಿ ವಿಚಾರಣೆ ವೇಳೆ ಪೀಠ ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಕಂಪನಿಗಳು ಸಂಕಷ್ಟ ಎದುರಿಸುತ್ತಿದೆ. ಗೃಹ ಇಲಾಖೆ ಆದೇಶ ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟು ಗೃಹ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

  • ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಕೊರೊನಾ ನೆಪದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸಂಬಳ ಕೊಡದ ಕಾಲೇಜು!

    ಬೆಂಗಳೂರು: ಕೊರೊನಾ ಸೃಷ್ಟಿಸಿದ ಅವಾಂತರಗಳಿಂದ ಒಂದೆಡೆ ಜನಸಾಮಾನ್ಯರು ಕೆಲಸವಿಲ್ಲದೇ ಪರದಾಡುತ್ತಿದ್ದರೆ, ಮತ್ತೊಂದೆಡೆ ದುಡಿದ ಕೆಲಸಕ್ಕೂ ಸಂಬಳ ಸಿಗದೇ ಕೆಲ ಜನ ಒದ್ದಾಡುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಸೆಕ್ಯೂರಿಟಿ ಗಾರ್ಡ್. ಖಾಸಗಿ ಕಾಲೇಜೊಂದು ಸೆಕ್ಯೂರಿಟಿ ಗಾರ್ಡ್ ಗಳಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ.

    ಹೌದು. ಕೊರೊನಾದಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಲಾಕ್ ಡೌನ್ ಆದ್ರೂ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಎಂಎಸ್ ಪಾಳ್ಯದ ಸಂಭ್ರಮ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೊನಾ ನೆಪವೊಡ್ಡಿ ಮೂರು ತಿಂಗಳ ಸಂಬಳವನ್ನೇ ಹಾಕಿಲ್ಲ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳ ಸಂಬಳವನ್ನು ಒಬ್ಬರಿಗೆ 10 ಸಾವಿರದಂತೆ ನೀಡಿಲ್ಲವೆಂದು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪ್ರಶ್ನಿಸಲು ಹೋದ ಪಬ್ಲಿಕ್ ಟಿವಿ ವರದಿಗಾರರಿಗೆ ಕಾಲೇಜಿನ ಪ್ರಿನ್ಸಿಪಾಲ್, ಯಾವುದಕ್ಕೂ ಉತ್ತರ ಕೊಡದೇ ಮೊಂಡುತನ ಪ್ರದರ್ಶಿಸಿದ್ದಾರೆ. ನಮಗೆನೂ ಗೊತ್ತಿಲ್ಲ, ಮ್ಯಾನೆಜ್ಮೆಂಟ್, ಏಜೆನ್ಸಿಯವ್ರನ್ನು ಕೇಳಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಿದ ಖಾಸಗಿ ಏಜೆನ್ಸಿ, ಕಾಲೇಜು ಮ್ಯಾನೆಜ್ಮೆಂಟ್ ಕೊಟ್ಟಿಲ್ಲ ನಾವು ಸಂಬಂಳ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದುಡಿದ ಬಡ ಜೀವಗಳು ಸಂಬಳವಿಲ್ಲದೇ ಕಷ್ಟಪಡುತ್ತಿವೆ. ಪ್ರತಿಷ್ಠಿತ ಕಾಲೇಜಿಗೆ ತಿಂಗಳಿಗೆ 10 ಸಾವಿರ ಕೊಡೋದು ಭಾರವಾಯಿತೇ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ.

    ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಏಪ್ರಿಲ್ ಸಂಬಳ ಹಾಕುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಪ್ರಕ್ರಿಯೆ ಪ್ರಾರಂಭಿಸಿದೆ. ಸಂಬಳ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಸ್ವತಃ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಈ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ನೀಡುವುದೇ ಕಷ್ಟಕರವಾಗಿದೆ. ನೌಕರರು ಯಾವುದಕ್ಕೂ ಸಿದ್ಧರಾಗಿರಬೇಕು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಸರ್ಕಾರ ಏಪ್ರಿಲ್ ತಿಂಗಳ ಸಂಬಳಕ್ಕೆ ಅನುಮತಿ ನೀಡಿದ್ದು, ಈ ಮೂಲಕ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿದೆ.