ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು.
ಈ ಸಂಬಂಧ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಚಂಡೀಗಢ: ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಅನ್ಮೋಲ್ ರತ್ತನ್ ಸಿಧು ಸಂದರ್ಶನವೊಂದರಲ್ಲಿ, ನನ್ನ ಕೆಲಸಕ್ಕೆ ಕೇವಲ 1 ರೂ. ಸಂಬಳವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವಾಗ ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸವನ್ನು ನಿರ್ವಹಿಸುವುದರೊಂದಿಗೆ ರಾಜ್ಯದ ವೆಚ್ಚಗಳಿಗೆ ಹೊರೆಯಾಗುವುದಿಲ್ಲ. ಇದಕ್ಕಾಗಿ ಕಾನೂನು ವೇತನವಾಗಿ ಕೇವಲ 1 ರೂ. ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್ ರತ್ತನ್ ಸಿಧು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದಿದವರು. ಬಳಿಕ ಚಂಡೀಗಢಕ್ಕೆ ಸ್ಥಳಾಂತರಗೊಂಡು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಪೂರೈಸಿದರು. ಕಾಲೇಜು ಜೀವನದಲ್ಲಿ ಒಬ್ಬ ಕ್ರಿಯಾಶೀಲ, ಸಾಮಾಜಿಕ, ರಾಜಕೀಯ ವಿದ್ಯಾರ್ಥಿಯಾಗಿ ಉಳಿದಿದ್ದ ಸಿಧು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಇದನ್ನೂ ಓದಿ: ಕುಶಾಲನಗರ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ
1985ರಲ್ಲಿ ವಕೀಲ ವೃತ್ತಿಯನ್ನು ಪ್ರವೇಶಿಸಿ, 1993ರಲ್ಲಿ ಪಂಜಾಬ್‌ನ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿ ಸೇರಿಕೊಂಡರು. 2007ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡ ಸಿಧು ಬಳಿಕ 2014ರ ವರೆಗೆ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪುನೀತ್ ಜೀವನ ಕಥನ
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಇದ್ದ ಸಿಧು, ಎಂಟು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಯಾವುದೇ ಹೈಕೋರ್ಟ್ನಲ್ಲಿ ಇಲ್ಲಿಯವರೆಗೆ ಇಷ್ಟೊಂದು ಬಾರಿ ಆಯ್ಕೆಯಾದವರೇ ಇಲ್ಲ.
ಇದೀಗ ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಆಗಿ ಅನ್ಮೋಲ್ ರತ್ತನ್ ಸಿಧು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರು: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. 5ದಿನ ಕಲಾಪ ವ್ಯರ್ಥ ಆಯಿತು. ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಮಾತ್ರ ಹೆಚ್ಚಾಗಬೇಕು. ಇವತ್ತು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಎರಡು ವಿಧೇಯಕಗಳು ಮಂಡನೆಯಾಗಿ ಅಂಗೀಕಾರವೂ ಆಯಿತು. ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಹೆಚ್ಚಳ ಆಗಿದೆ. ಬರೋಬ್ಬರಿ ಶೇಕಡಾ 50%ರಷ್ಟು ಸಂಬಳ, ಭತ್ಯೆ ಹೆಚ್ಚಳ ಆಗಿದೆ.
ವೇತನ ಹೆಚ್ಚಳದ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಚಿವ ಮಾಧುಸ್ವಾಮಿ ಬಿಲ್ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ. 50%ರಷ್ಟು ಹೆಚ್ಚಳಕ್ಕೆ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ
ಕೋವಿಡ್ ಕಾರಣಕ್ಕಾಗಿ ಹಲವು ಇಲಾಖೆಗಳಲ್ಲಿ ಹಣ ಕಡಿತ ಮಾಡಿದ್ದ ಸರ್ಕಾರ, ಕೆಲ ಯೋಜನೆಗಳ ಅನುದಾನವನ್ನೂ ಕೂಡ ಕಡಿತಗೊಳಿಸಿತ್ತು. ದುಂದು ವೆಚ್ಚ ಮಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಘೋಷಣೆ ಮಾಡಿದ್ದರು. ಆದರೆ ಈಗ ಸಚಿವರು, ಮುಖ್ಯಮಂತ್ರಿಗಳ ಸಂಬಳ ಹೆಚ್ಚಳಕ್ಕೆ ಬಿಲ್ ತಂದು ಅಂಗೀಕಾರ ಪಡೆದುಕೊಂಡ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕ್ತೀವಿ: ಆರ್. ಅಶೋಕ್
* ಮುಖ್ಯಮಂತ್ರಿ, ಸಚಿವರಿಗೆ ಸಂಬಳ ಹೆಚ್ಚಾಗಿದ್ದೆಷ್ಟು..?
> ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50%ರಷ್ಟು ಹೆಚ್ಚಳ
> ಸಿಎಂಗೆ ಪ್ರತಿ ತಿಂಗಳು ಇದ್ದ 50ಸಾವಿರ ಸಂಬಳ 75 ಸಾವಿರಕ್ಕೆ ಹೆಚ್ಚಳ
> ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ 40ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ
> ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ 3ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ
>ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ
> ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ
> ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ಲೀಟರ್ ನಿಂದ 2ಸಾವಿರ ಲೀಟರ್ ಪೆಟ್ರೋಲ್ ಗೆ ಹೆಚ್ಚಳ
* ಸಭಾಧ್ಯಕ್ಷರು/ ಸಭಾಪತಿ ವೇತನ, ಭತ್ಯೆ
> ಸಂಬಳ: 50,000ರೂ. ದಿಂದ 75,000ರೂ.
> ಆತಿಥ್ಯ ವೇತನ ವಾರ್ಷಿಕ: 3,00,000ರೂ. ದಿಂದ 4,00,000 ರೂ.
> ಮನೆ ಬಾಡಿಗೆ: 80,000 ರೂ. ದಿಂದ 1,60,000ರೂ.
> ಇಂಧನ: 1000 ಲೀಟರ್‍ರಿಂದ 2000 ಲೀಟರ್
> ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿಂದ 40ರೂ.
> ದಿನ ಭತ್ಯೆ(ಪ್ರಯಾಣ): ದಿನಕ್ಕೆ2000ರೂ. ದಿಂದ 3000ರೂ.
> ಹೊರ ರಾಜ್ಯ ಪ್ರವಾಸ: ದಿನಕ್ಕೆ 2500ರೂ. +5000ರೂ. ದಿಂದ 3000ರೂ.+7000ರೂ.
* ವಿಪಕ್ಷ ನಾಯಕರ ವೇತನ, ಭತ್ಯೆ
> ಸಂಬಳ:40,000ರೂ. ದಿಂದ ? 60,000ರೂ.
> ವಿಪಕ್ಷ ನಾಯಕರ ಆತಿಥ್ಯ ವೇತನ ವಾರ್ಷಿಕ: 2,00,000ರೂ. ದಿಂದ 2,50,000ರೂ.
> ಇಂಧನ: 1000 ಲೀಟರ್ ರಿಂದ 2000 ಲೀಟರ್
> ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ.
> ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 3000ರೂ.
> ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.
* ಶಾಸಕರ ವೇತನ, ಭತ್ಯೆ
> ಸಂಬಳ: 20,000ರೂ. ದಿಂದ 40,000ರೂ.
> ಕ್ಷೇತ್ರ ಭತ್ಯೆ: 40,000ರೂ. ರಿಂದ 60000ರೂ.
> ಆತಿಥ್ಯ ವೇತನ (ವಾರ್ಷಿಕ): 2,00,000ರೂ. ದಿಂದ 2,50,000ರೂ.
> ಇಂಧನ: 1000 ಲೀಟರ್ ರಿಂದ 2000 ಲೀಟರ್
> ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರೂ. ದಿಂದ 30ರೂ.
> ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 2500ರೂ.
> ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.
> ದೂರವಾಣಿ ವೆಚ್ಚ: ಯಥಾಸ್ಥಿತಿ ತಿಂಗಳಿಗೆ 20,000ರೂ. ಕಾಯ್ದಿರಿಸಲಾಗಿದೆ
> ಶಾಸಕರ ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000ರೂ. ರಿಂದ 20,000ರೂ. ಹೆಚ್ಚಳ
ಹೈದರಾಬಾದ್: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಸಾಫ್ಟ್ ವೇರ್ ಉದ್ಯೋಗಿ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಸ್ವಾರ್ತಿ ಕುಸುಮಾ (32)ಮೃತಳಾಗಿದ್ದಾಳೆ. ಈಕೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ಆರ್ಥಿಕ ಸಂಕಷ್ಟಕ್ಕೆ ಬೇಸತ್ತು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಸಾಯಿಕುಮಾರ್‌ಗೆ ಬರುತ್ತಿದ್ದ ಸಂಬಳ ಮಕ್ಕಳ ಫೀಸಿಗೂ ಸಾಕಾಗುತ್ತಿಲ್ಲವೆಂದು ಸ್ವಾತಿ ಚಿಂತಿತರಾಗಿದ್ದರು ಎನ್ನಲಾಗಿದೆ. ಸಾಯಿಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ ಬೆಡ್ ರೂಮಿನಲ್ಲಿ ಆತ್ಮಹತ್ಯೆ ನೋಟ್ ಬರೆದು ಸ್ವಾತಿ 5 ವರ್ಷದ ಮಗ ಮಗು 3 ವರ್ಷದ ಮಗಳನ್ನು ಕೊಂದು ತಾವೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ
ವಾಷಿಂಗ್ಟನ್: ಟ್ವಿಟ್ಟರ್ ಸಿಇಒ ಹುದ್ದೆಗೆ ಜ್ಯಾಕ್ ಡಾರ್ಸಿ ರಾಜೀನಾಮೆ ನೀಡಿದ್ದು ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ನೇಮಕವಾಗಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದ ಕಂಪನಿಯಾದ ಕಾರಣ ಪರಾಗ್ ಅವರ ಸಂಬಳ ಎಷ್ಟಿರಬಹುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಪರಾಗ್ ಅವರಿಗೆ ಟ್ವಿಟರ್ ವಾರ್ಷಿಕವಾಗಿ 1 ದಶಲಕ್ಷ ಡಾಲರ್( ಅಂದಾಜು 7.50 ಕೋಟಿ ರೂ.)ಜೊತೆಗೆ ಬೋನಸ್ ನೀಡುತ್ತದೆ. ಅಂದರೆ ತಿಂಗಳಿಗೆ ಅಂದಾಜು 62.56 ಲಕ್ಷ ರೂ. ಹಣವನ್ನು ಕಂಪನಿ ಪಾವತಿಸುತ್ತದೆ.
Deep gratitude for @jack and our entire team, and so much excitement for the future. Here’s the note I sent to the company. Thank you all for your trust and support ???? https://t.co/eNatG1dqH6pic.twitter.com/liJmTbpYs1
ಟ್ವಿಟ್ಟರ್ ಕಂಪನಿಯು ಯುಎಸ್ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸೆಂಜ್‌ಗೆ (ಎಸ್‌ಇಸಿ) ಸಲ್ಲಿಸಿದ ದಾಖಲೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಇಷ್ಟೇ ಅಲ್ಲದೇ ಪರಾಗ್ ಅವರು 12.5 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ನಿಯಂತ್ರಿತ ಷೇರುಗಳನ್ನು (ಆರ್‌ಎಸ್‌ಯು) ಕಂಪನಿ ಕಡೆಯಿಂದ ಸ್ವೀಕರಿಸಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಡೋರ್ಸೆ ಡಿಜಿಟಲ್ ಪಾವತಿ ಸಂಸ್ಥೆ ಸ್ಕ್ವೇರ್‌ನಲ್ಲಿದ್ದ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 2009ರಲ್ಲಿ ಸ್ಕ್ವೇರ್ ಸ್ಥಾಪಿಸಿದ್ದು ಸಹ ಸಂಸ್ಥಾಪಕರೂ ಆಗಿದ್ದರು. ಪ್ರಸ್ತುತ ಸ್ಕ್ವೇರ್ ಮಾರುಕಟ್ಟೆ ಮೌಲ್ಯ 98.2 ಶತಕೋಟಿ ಡಾಲರ್(ಅಂದಾಜು 7 ಸಾವಿರ ಕೋಟಿ ರೂ. ರೂ.) ಮೌಲ್ಯವನ್ನು ಹೊಂದಿದ್ದರೆ ಟ್ವಿಟ್ಟರ್ 37 ಶತಕೋಟಿ( ಅಂದಾಜು 2 ಸಾವಿರ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದನ್ನೂ ಓದಿ: ಡಿಕೆಶಿ ಭಂಡಾಸುರ, ಸಿದ್ದರಾಮಯ್ಯ ಮಂಡಾಸುರ: ಶ್ರೀರಾಮುಲು ವ್ಯಂಗ್ಯ
2009ರಲ್ಲಿ ಡಾರ್ಸಿ ಹಣಕಾಸು ಪಾವತಿ ಸಂಸ್ಥೆ ʼಸ್ಕ್ವೇರ್ʼ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಡಾರ್ಸಿ ಮುಖ್ಯ ಕಾರ್ಯನಿರ್ವಹಕರಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ಹೂಡಿಕೆದಾರರು ಡಾರ್ಸಿ ಅವರು ಎರಡು ಕಂಪನಿಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.
ಮುಂಬೈ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪರಾಗ್ ಅವರು, ಅಮೆರಿಕದ ಸ್ಟ್ಯಾನ್‌ಪೋರ್ಡ್ ಯುನಿವರ್ಸಿಟಿಯಿಂದ ಪಿಎಚ್‌ಡಿ ಪಡೆದಿದ್ದಾರೆ. 2011 ರಲ್ಲಿ ಟ್ವಿಟರ್ ಸೇರಿದ್ದ ಪರಾಗ್, ಆ ಕಂಪನಿಯ ಕೃತಕ ಬುದ್ದಿಮತ್ತೆ ಹಾಗೂ ಜಾಗತಿಕ ಮಾರುಕಟ್ಟೆ ಬೆಳೆಸಲು ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ಮೂಲದ ಪರಾಗ್ ಅವರ ತಾಯಿ ಶಿಕ್ಷಕಿಯಾಗಿದ್ದು, ಅವರ ತಂದೆ ಪರಮಾಣು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಾಗ್ ಪತ್ನಿ ವಿನೀತಾ ಅಗರ್‌ವಾಲ್ ವೆಂಚರ್ ಕ್ಯಾಪಿಟಲ್‌ನಲ್ಲಿ ಹೂಡಿಕೆದಾರರಾಗಿದ್ದಾರೆ. ಪರಾಗ್–ವಿನೀತಾ ದಂಪತಿಗೆ ಗಂಡು ಮಗುವಿದೆ.
ಅಗರ್‌ವಾಲ್ ನವೆಂಬರ್ 29 ರಂದು ಟ್ವಿಟ್ಟರ್ ಸಿಇಒ ಆಗಿ ನೇಮಕಗೊಂಡಿದ್ದು, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಅಲ್ಫಾಬೆಟ್‍ನ ಸುಂದರ್ ಪಿಚೈ, ಐಬಿಎಮ್‍ನ ಅರವಿಂದ್ ಕೃಷ್ಣ, ಅಡೋಬ್‍ನ ಶಂತನು ನಾರಾಯಣ್ ಹೀಗೆ ಭಾರತೀಯ ಟೆಕ್ ಸಿಇಒಗಳಂತಹ ಗಣ್ಯರ ಸಾಲಿಗೆ ಸೇರಿಕೊಂಡಿದ್ದಾರೆ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಳೆದ 28 ತಿಂಗಳಿನಿಂದ ಕಾರ್ಮಿಕರ ಸಂಬಳ ಆಗಿಲ್ಲ. ಹೀಗಾಗಿ ಪೌರಕಾರ್ಮಿಕರು, ಸಿಬ್ಬಂದಿ, ಪಟ್ಟಣ ಪಂಚಾಯತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸಂಬಳಕ್ಕಾಗಿ ಒತ್ತಾಯಿಸಿದರು.
ಪಟ್ಟಣ ಪಂಚಾಯತಿಯಲ್ಲಿ 27 ಜನ ಖಾಯಂ ಪೌರಕಾರ್ಮಿಕರು, 22 ಜನ ದಿನಗೂಲಿ ನೌಕರರಿದ್ದಾರೆ. ಇದರಲ್ಲಿ 2019ರ ಏಪ್ರಿಲ್ ನಿಂದ 22 ಜನ ದಿನಗೂಲಿ ನೌಕರರ ವೇತನ ಆಗಿಲ್ಲ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೂ ಸಹ ವೇತನವಾಗಿಲ್ಲ. ಆದರೂ ಎಲ್ಲಾ ಸಿಬ್ಬಂದಿ ಕೋವಿಡ್‍ನಂತಹ ಕಠಿಣ ಸಮಯದಲ್ಲೂ ಸಂಬಳವಿಲ್ಲದೆ ಕೆಲಸ ಮಾಡಿದ್ದಾರೆ.
ಸಂಬಳ ಇಲ್ಲದೆ ಈಗ ಪರಸ್ಥಿತಿ ಮಿತಿಮೀರಿದ್ದರಿಂದ ಎಂಟು ದಿನದಿಂದ ಕೆಲಸ ಮಾಡುತ್ತಿಲ್ಲ. ಸಂಬಳ ನೀಡುವವರೆಗೆ ಕೆಲಸ ಮಾಡುವುದಿಲ್ಲ ಅಂತ ಪೌರಕಾರ್ಮಿಕರು ಪಟ್ಟುಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಳ ಬಿಡುಗಡೆ ಮಾಡಿಸಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಒತ್ತಾಯ: ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಪ್ರತಿಭಟನೆ
– ವೇತನವಿಲ್ಲದೇ ದುಡಿಯುತ್ತಿರುವ ಗಾಂಧಿ ಮ್ಯೂಸಿಯಮ್ ಸಿಬ್ಬಂದಿ – ಹಾಳು ಕೊಂಪೆಯಾದ ಗಾಂಧಿ ಸ್ವಾತಂತ್ರ್ಯ ಸ್ಮಾರಕ ಭವನ
ಕಾರವಾರ: ಟಾಯ್ಲೆಟ್ ನಲ್ಲಿ ಬಿದ್ದ ಪುಸ್ತಕಗಳು, ಪಾಳು ಬಿದ್ದ ಗಾಂಧಿ ವಸ್ತುಸಂಗ್ರಹಾಲಯದ ಕಟ್ಟಡ, ಮೂಲೆ ಸೇರಿದ ಗಾಂಧಿ ಪ್ರತಿಮೆ. ಒಂದು ವರ್ಷದಿಂದ ಸಂಬಳ ಇಲ್ಲದೇ ದುಡಿಯುವ ಕೆಲಸಗಾರರು. ಇಂತದ್ದೊಂದು ಸ್ಥಿತಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿದೆ. ಅಲ್ಲಿನ ಸ್ಥಿತಿ ನೋಡಿದರೆ ಎಂತವರೂ ತಲೆತಗ್ಗಿಸುವಂತಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಸ್ವತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಹಾಗೂ ವಸ್ತು ಸಂಗ್ರಹಾಲಯ ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಹೀಗಿದೆ ಅಲ್ಲಿನ ಸ್ಥಿತಿ
ಎಲ್ಲಿ ನೋಡಿದರಲ್ಲಿ ಕಸದ ರಾಶಿ ,ಮುರಿದು ಬಿದ್ದ ಕಿಟಕಿ, ಮೂಲೆ ಸೇರಿದ ಗಾಂಧಿ ಪ್ರತಿಮೆ, ಟಾಯ್ಲೆಟ್ ನಲ್ಲಿ ಸಂಗ್ರಹಿಸಿಟ್ಟ ಪುಸ್ತಕ. ವಿದ್ಯುತ್ ಇಲ್ಲದ ಬಲ್ಪುಗಳು, ಮುರಿದ ಫ್ಯಾನ್ ಗಳು ಹೀಗೆ ಎದುರು ನೋಡುತ್ತಿದ್ದಂತೆ ಹಳೆಯ ಸಿನಿಮಾದಲ್ಲಿ ಬರುವ ಭೂತ ಬಂಗಲೆಯಂತೆ ಭಾಸವಾಗುತ್ತದೆ.
2017ರಲ್ಲಿ ಕೋಟಿ ಮೊತ್ತದ ಅನುದಾನದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅಂಕೋಲದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಸ್ಮಾರಕ ಭವನ ಹಾಗೂ ಗಾಂಧಿಜೀ ವಸ್ತು ಸಂಗ್ರಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಿದ್ದರು.
ಇದನ್ನು ನೋಡಿಕೊಳ್ಳಲು ಕಂದಾಯ ಇಲಾಖೆಯಿಂದ ಇಬ್ಬರು ಹಾಗೂ ಪುರಸಭೆ ಯಿಂದ ಓರ್ವ ನೌಕರನನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಯಿತು. ಕಳೆದ ಒಂದು ವರ್ಷದ ವರೆಗೆ ಚೆನ್ನಾಗಿಯೇ ಇದ್ದ ಈ ಭವನ ಇದೀಗ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದ ಹಾಳು ಕೊಂಪೆಯಾಗಿದೆ.
ವಸ್ತು ಸಂಹ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಇರುವ ವಸ್ತುಗಳನ್ನು ಇರಿಸಲು ವ್ಯವಸ್ತೆ ಇಲ್ಲದೇ ಬೇಕಾಬಿಟ್ಟಿ ಇಡಲಾಗಿದೆ. ಓದುಗರ ಕೈಯಲ್ಲಿ ಇರಬೇಕಾದ ಪುಸ್ತಕಗಳು ಟಾಯ್ಲೆಟ್ ಸೇರಿದೆ. ಇನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿರ್ಮಿಸಿದ ಕಟ್ಟಡ ಹೊಸದಾಗಿದ್ದರೂ ಯಾರೂ ಒಳಗೆ ಹೋಗದಷ್ಟು ಕೆಟ್ಟದಾಗಿದ್ದು ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ಇಲಿ ಹೆಗ್ಗಣದ ಗೂಡಾಗಿದೆ. ಇದನ್ನೂ ಓದಿ: ಮೈಸೂರು ಕೇಸಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!
ಇನ್ನು ಇಲ್ಲಿನ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಗೊಂಡ ಲೈಬ್ರರಿಯನ್ ಗೆ ಐದು ಸಾವಿರ ಕನಿಷ್ಟ ಕೂಲಿ ಹಾಗೂ ಇಲ್ಲಿನ ಕೆಲಸಗಾರನಿಗೆ 2500 ರೂ.ಗಳ ಕನಿಷ್ಟ ವೇತನ ನಿಗದಿ ಮಾಡಿದ್ದು ಕಾರ್ಮಿಕ ನಿಯಮಗಳ ಪ್ರಕಾರ ಇವರಿಗೆ ಸಿಗಬೇಕಾದ ಯಾವ ಸೌಲಭ್ಯವೂ ಈವರೆಗೂ ದೊರೆತಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿನ ಇಬ್ಬರು ನೌಕರರಿಗೆ ಸಂಬಳ ಸಹ ಸಿಗದೇ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್
ಕೋಟಿಗಟ್ಟಲೇ ಗಾಂಧೀಜಿ ಹೆಸರಲ್ಲಿ ಸ್ವಾತಂತ್ರ್ಯ ಚಳುವಳಿಗಾರರ ನೆನಪಿಗೆ ನಿರ್ಮಿಸಿದ ಈ ಭವನ ಈಗ ಹಾಳು ಕೊಂಪೆಯಾಗಿದೆ. ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವ ಪುಸ್ತಕಗಳು ಸಿಗದಂತ ಸ್ಥಿತಿ ಇದೆ. ಪ್ರತಿ ದಿನ ಗ್ರಂಥಾಲಯಕ್ಕೆ ಬರುವವರಿಗೆ ಮೂಲ ಸೌಕರ್ಯ ಸಹ ಇಲ್ಲ. ಇದನ್ನೂ ಓದಿ: ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!
ಇಲ್ಲಿನ ನೌಕರರು ಕೊರೊನಾ ಸಂದರ್ಭದಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದರೂ ಒಂದು ವರ್ಷದಿಂದ ಸಂಬಳ ಸಹ ನೀಡಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಪುಸ್ತಕಗಳನ್ನು ಓದಲು ಬರುವ ಜನರು ಪುಸ್ತಕಗಳು ಸಿಗದೇ ಮರಳಿ ಹೋಗುವಂತಾಗಿದೆ. ಹೀಗಿರುವಾಗ ಅಧಿಕಾರಿಗಳು ಮಾತ್ರ ಎಲ್ಲಾ ಸರಿಮಾಡುತ್ತೇವೆ ಎನ್ನುವ ಭರವಸೆಗೆ ಸೀಮಿತವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊಂಚ ಇಳಿಕೆಯಾದ ಕೊರೊನಾ – ಇಂದು 1,229 ಹೊಸ ಪ್ರಕರಣ
ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂಕೋಲ ತಾಲೂಕಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ ತೀವ್ರಗೊಂಡಿತ್ತು. ಹಲವರು ಬ್ರಿಟೀಷರ ಚಡಿಏಟು ತಿಂದು ಪ್ರಾಣವನ್ನು ಕಳೆದುಕೊಂಡಿದ್ದರು. ಕರ ಅಸಹಕಾರ ಚಳುವಳಿಯಿಂದ ಹಿಡಿದು ಉಪ್ಪಿನ ಸತ್ಯಾಗ್ರಹದವರೆಗೂ ಇಲ್ಲಿನ ಜನರು ಗಾಂಧೀಜಿಯವರ ಆದರ್ಶದೊಂದಿಗೆ ಜೊತೆಯಾಗಿದ್ದರು. ಅವರ ಹೋರಾಟದ ಫಲ ಇಂದು ನಾವು ಅನುಭವಿಸುತಿದ್ದೇವೆ. ಇಂತವರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಇದೀಗ ಗಾಂಧೀಜಿಯವರ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಮಾತ್ರ ಎಂತವರಲ್ಲೂ ಹೇಸಿಗೆ ಹುಟ್ಟಿಸುತ್ತದೆ. ಇನ್ನಾದರೂ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಇದರ ಸೌಲಭ್ಯ ದೊರಕುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ
ಮಡಿಕೇರಿ: ಇಂದಿನ ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಯಾರೋ ನೀಡಿದ ದವಸ, ಧಾನ್ಯಗಳನ್ನು ತಾವೇ ನೀಡಿದಂತೆ ಫೋಟೋಗಳಲ್ಲಿ ಮಿಂಚಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುವ ಮಂದಿಗಳೇ ಹೆಚ್ಚು ಕಾಣಸಿಗುತ್ತಾರೆ. ಸ್ವಂತ ದುಡಿಮೆಯ ಆದಾಯವನ್ನು ಸಮಾಜ ಸೇವೆಗೆ ಮೀಸಲಿಡುವ ಮಾದರಿ ಜನ ವಿರಳವಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ಯುವಕ ತನ್ನ ಪ್ರಥಮ ಸಂಬಳವನ್ನೇ ಬಡವರ ಹಸಿವು ನೀಗಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ.
ಕೋವಿಡ್ ಲಾಕ್‍ಡೌನ್ ನಿಂದಾಗಿ ಎಲ್ಲರಂತೆ ಮಂಗಳಮುಖಿಯರು ಕೂಡ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ವಾಸವಿರುವ ಮಂಗಳಮುಖಿ ದೀಕ್ಷಾ ಎಂಬವರ ಸಂಕಷ್ಟವನ್ನು ಅರಿತ ಸೋಮವಾರಪೇಟೆಯ ಯುವಕ ಎಸ್.ಎಂ ಧನುಷ್ ತಮ್ಮ ಮೊದಲ ಸಂಬಳದಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ.
ಎಂಜಿನಿಯರಿಂಗ್ ಮಾಡಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇನ್ನು ಮುಂದೆಯೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವನ ನಡೆಸಲು ಕೆಲಸದಿಂದ ಸಿಗುವ ಸಂಬಳ ಸಾಕಾಗುತ್ತಿಲ್ಲ ಎಂದು ಮನನೊಂದ ಕಾರ್ಮಿಕನೋರ್ವ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಶಿವರಾಜ್(28) ಆತ್ಮಹತ್ಯೆಗೆ ಶರಣಾದ ಕಾರ್ಮಿಕ. ಶಿವರಾಜ್ ದಾವಣಗೆರೆಯ ಮೂಲದವನಾಗಿದ್ದು, ಸ್ಯಾಲರಿ ಹೈಕ್ ಆಗಿಲ್ಲದೆ ಕಡಿಮೆ ಸಂಬಳದಲ್ಲಿ ಮನೆ ಸಂಭಾಳಿಸುವುದು ಕಷ್ಟವಾಗಿದೆ. ಇದರ ಜೊತೆ ಕಂಪನಿ ಮ್ಯಾನೇಜ್ಮೆಂಟ್ ಕಿರುಕುಳಕ್ಕೆ ಬೇಸತ್ತು ಡೆತ್‍ನೋಟ್ ಬರೆದು ಬೆಂಗಳೂರು ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮಗಳ ಜೊತೆ ಅಕ್ರಮ ಸಂಬಂಧ ಶಂಕೆ – ಯುವಕನ ಕೊಲೆಗೆ ಯತ್ನ
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್, ತನ್ನ ಸಂಬಳ ಕೇವಲ 18,000 ರೂ.ಗಳಾಗಿದ್ದು ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕಂಪನಿಯ ವೆಂಕಟರಾಮು, ಬಾಲು ಮತ್ತು ರಾಮು ಎಂಬುವರು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಬರೆದಿದ್ದಾನೆ. ಇದರ ಜೊತೆಗೆ ತನ್ನ ಕುಟುಂಬ ಬಗ್ಗೆ ಬರೆದಿರುವ ಆತ ಕಂಪನಿಯಲ್ಲಿ ಸಿಗುವ ಇನ್ಸೂರೆನ್ಸ್ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸ್ವಾರಿ ಎಂದು ಪತ್ರದಲ್ಲಿ ಬರೆದಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ನನ್ನನ್ನು ಮ್ಯಾನೇಜರ್ ಕೂಡಿ ಹಾಕಿ ಕೆಲಸ ಮಾಡಿಸ್ತಿದ್ದಾರೆ – ರೆಡ್ಡಿ – ಮೆಕ್ಯಾನಿಕ್ ರೆಡ್ಡಿ ಪ್ರಚಾರ ಪಡೆಯಲು ಗಿಮಿಕ್ ಮಾಡ್ತಿದ್ದಾನೆ – ಶೆಟ್ಟಿ
ಉಡುಪಿ: ಸರಕಾರಿ ಬಸ್ ಸಿಬ್ಬಂದಿ ಮುಷ್ಕರ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಕೆಲವೆಡೆ ಸಿಬ್ಬಂದಿ ಹಾಗೂ ಡಿಪೋ ಮ್ಯಾನೇಜರ್ ನಡುವೆ ಜಟಾಪಟಿ ನಡೆದಿದೆ. ನನ್ನನ್ನು ಕೂಡಿಹಾಕಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಉಡುಪಿಯ ಮೆಕ್ಯಾನಿಕ್ ಆರೋಪಿಸಿದ್ರೆ, ಇದು ಶುದ್ಧ ಸುಳ್ಳು, ಪ್ರಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಅಂತ ಮ್ಯಾನೇಜರ್ ವೀಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಾದ್ಯಂತ ಸರಕಾರಿ ಬಸ್ ಗಳು ರಸ್ತೆಗಿಳಿಯದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸರಕಾರ ಮತ್ತು ಯೂನಿಯನ್ ಜೊತೆ ಒಂದೆಡೆ ಜಟಾಪಟಿ ನಡೆಯುತ್ತಿದ್ದರೆ, ಉಡುಪಿ ಡಿಪೋದಲ್ಲಿ ಮೆಕ್ಯಾನಿಕ್ ಶ್ರೀಕಾಂತ್ ಕೊಟ್ಟ ಹೇಳಿಕೆ ಭಾರಿ ಚರ್ಚೆ ಮತ್ತು ವಿವಾದ ಸೃಷ್ಟಿ ಮಾಡಿತು.
ಶ್ರೀಕಾಂತ್ ರೆಡ್ಡಿ ಹೇಳಿದ್ದೇನು?
ಕಳೆದ ರಾತ್ರಿಯಿಂದ ನನ್ನನ್ನ ಡಿಪೋದಲ್ಲಿ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಪ್ರತಿಭಟನೆ ಮಾಡುತ್ತೇನೆ ಎಂದರೂ ಬಿಡುತ್ತಿಲ್ಲ. ಪ್ರತಿಭಟನಾರ್ಥವಾಗಿ ನಾನು ಬೆಳಗ್ಗೆನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಉಡುಪಿಯ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಶ್ರೀಕಾಂತ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಆಕ್ರೋಶದ ಕಣ್ಣೀರು ಹಾಕಿದ್ದಾರೆ.
ನಿನ್ನ ಕೇಸು ಕ್ಲಿಯರ್ ಆಗಬೇಕಾದರೆ ನೀನು ಕೆಲಸ ಮಾಡಲೇಬೇಕು ಎಂದು ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ್ದಾರೆ. ನಾನು ಬಡವ ಅದಕ್ಕೆ ಕೆಲಸ ಮಾಡುತ್ತಿದ್ದೇನೆ. ನನ್ನತ್ರ ದುಡ್ಡಿದ್ರೆ ನಾನು ಎಂಎಲ್‍ಎ ಆಗುತ್ತಿದ್ದೆ. ನಾವು ಅರ್ಚಕರಗಿಂತ ಕೀಳಾಗಿ ಬಿಟ್ಟೆವಾ? ಕೆಎಸ್‍ಆರ್‍ಟಿಸಿ ಅನ್ನ ತಿನ್ನುವುದರಿಂದ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ನಿಯತ್ತಿನ ಕೆಲಸಕ್ಕೆ ಸೂಕ್ತ ಸಂಬಳ ಕೊಡಿ. ನಾನು ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ತರ ಎಸಿ ಕಾರಿನಲ್ಲಿ ಕೂತು ಎಸಿ ಆಫೀಸಲ್ಲಿ ಕೂತು ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬ್ಲಾಕ್ ಮಾಡಿ ಡ್ಯೂಟಿ:
ಸ್ಟ್ರೈಕ್ ದಿನವೂ ನಾನು ಯಾಕೆ ಡ್ಯೂಟಿ ಮಾಡುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ. ನಾನು ಅನಾರೋಗ್ಯ ಇದ್ದಾಗ ರಜೆ ಮಾಡಿದ್ದೆ. ಆ ಕೇಸ್ ಕ್ಲಿಯರ್ ಆಗೋವರೆಗೆ ಡ್ಯೂಟಿ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ. ನಾನೊಬ್ಬ ಬಡವ ಕೆಎಸ್‍ಆರ್ಟಿಸಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ನನಗೆ ಭಯ ಹುಟ್ಟಿಸಿದ್ದರಿಂದ ನಾನು ಇಲ್ಲಿ ಡ್ಯೂಟಿ ಮಾಡುತ್ತಿದ್ದೇನೆ. ನನಗೆ ಈ ಸಂಸ್ಥೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಶ್ರೀಕಾಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಆರನೇ ವೇತನ ಆಯೋಗದ ಸೌಲಭ್ಯ ಯಾಕೆ ಬೇಕು ಗೊತ್ತಾ? ನಿಮ್ಮ ಬಳಿ ಹಣವಿದೆ. ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿ ಸಂಬಳ ಏರಿಕೆ ಕೇಳುತ್ತಿದ್ದೇವೆ. ಶ್ರೀಮಂತ ರಾಜಕಾರಣಿಗಳಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ. ನಾವು ಮತ ಹಾಕಿರುವುದರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಚಕರಿಗೆ ಆರನೇ ವೇತನ ಆಯೋಗದ ಸಂಬಳ ಕೊಡುತ್ತಾರೆ. ನಾವೇನು ಸತ್ತಿದ್ದೀವಾ? ನಿಮ್ಮ ಸ್ವಂತಕ್ಕೆ ನೀವು ರಾಜಕಾರಣ ಮಾಡುವುದಲ್ಲ, ಜನರ ಸೇವೆ ಮಾಡಿ. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವವರು ನೀವು ಎಂಎಲ್‍ಎಗಳು. ನಿಮ್ಮ ಜಾತಿ ರಾಜಕೀಯ ಸುಡುಗಾಡು ಸೇರಲಿ ಎಂದು ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸವದಿ ಮತ್ತಿತರ ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಿ, ಸಂಬಳ ಕೊಡಿ. ನಾನು ಬಡವ ಎಂದು ಉಡುಪಿ ಕೆಎಸ್ ಆರ್ ಟಿಸಿ ಡಿಪೋ ಮೆಕ್ಯಾನಿಕ್ ಕಣ್ಣೀರಿಟ್ಟ ಘಟನೆಗೆ ಸಂಬಂಧಿಸಿದಂತೆ, ಸಿಬ್ಬಂದಿ ಶ್ರೀಕಾಂತ್ ರೆಡ್ಡಿ ಆರೋಪಕ್ಕೆ ಕೆಎಸ್‍ಆರ್ಟಿಸಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಶ್ರೀಕಾಂತ್ ರೆಡ್ಡಿ ಇವತ್ತು ಸ್ವ ಇಚ್ಛೆಯಿಂದ ಕೆಲಸಕ್ಕೆ ಬಂದಿದ್ದ. ಆತ ಒಬ್ಬ ಮದ್ಯವ್ಯಸನಿ. ಅವನನ್ನು ನಾವು ಕಚೇರಿಯಿಂದ ಕೆಲಸಕ್ಕೆ ಕರೆದಿಲ್ಲ. ಇವತ್ತು ನಮ್ಮ ಘಟಕದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಿಬ್ಬಂದಿಗಳು ವರದಿ ಮಾಡಿಲ್ಲ. ಚಾಲನಾ ಸಿಬ್ಬಂದಿ ಕೂಡ ಇವತ್ತು ಕರ್ತವ್ಯಕ್ಕೆ ಬಂದಿಲ್ಲ. ಹಾಗಿದ್ದರೂ ಆತ ಒಬ್ಬನೇ ಬಂದು ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾನೆ ಎಂದು ಉಡುಪಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಹೇಳಿದ್ದಾರೆ.
ಪದೇಪದೇ ಕರ್ತವ್ಯಕ್ಕೆ ಗೈರು ಹಾಜರಾಗುವ ಪ್ರವೃತ್ತಿ ಉಳ್ಳವರಾಗಿದ್ದಾನೆ. ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಆತ ಹೇಳಿದ್ದಾನೆ. ಸಂಸ್ಥೆಯ ಇಮೇಜ್ ಹಾಳು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾನೆ. ನಾನು ಆತನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಉದಯ್ ಶೆಟ್ಟಿ ವೀಡಿಯೋ ರಿಲೀಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.