Tag: ಸಂಬಳ

  • ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ: ರಾಮಲಿಂಗಾರೆಡ್ಡಿ

    ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ: ರಾಮಲಿಂಗಾರೆಡ್ಡಿ

    ಬೆಂಗಳೂರು: ಸಾರಿಗೆ ಇಲಾಖೆ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಸ್ಪಷ್ಟಪಡಿಸಿದ್ದಾರೆ.

    ಸರ್ಕಾರ ಹಣ ಕೊಡದೇ ಹೋದರೆ ಮುಂದಿನ ತಿಂಗಳು ಸಾರಿಗೆ ಇಲಾಖೆಯಲ್ಲಿ ಸಂಬಳ ಕೊಡಲು ಹಣವಿಲ್ಲ ಎಂಬ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಸಂಬಳ ಕೊಡದೇ ಇದ್ದಾಗ ಕೊಡೊಲ್ಲ ಅಂತ ಹೇಳಿ. ನಾವು ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ತಿಳಿಸಿದರು.

    ಸರ್ಕಾರದಿಂದ ನಮಗೆ ಹಣ ಕೊಡುತ್ತಾರೆ. ನಮ್ಮ ಸಂಪನ್ಮೂಲಗಳಿಂದಲೂ ಹಣ ಸಂಗ್ರಹ ಆಗುತ್ತಿದೆ. 4 ನಿಗಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸಂಬಳ ಕೊಡಲ್ಲ ಎಂದು ಊಹೆ ಮಾಡಿಕೊಂಡು ಹೇಳಲು ಆಗಲ್ಲ. ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದುಬಾರಿಯಾಯ್ತು ಚಿಕನ್- ಒಂದು ಮೊಟ್ಟೆಗೆ ಬರೋಬ್ಬರಿ 7 ರೂ.

    ಶಕ್ತಿ ಯೋಜನೆಯಿಂದ ನಿಗಮಕ್ಕೆ ಲಾಭ ಆಗುತ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರಲ್ಲ. ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಾರೆ ಎಂಬುದೇ ಮುಖ್ಯ. ಸಾರಿಗೆ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ. ಸರ್ಕಾರ ಹಣ ಕೊಡುತ್ತದೆ. ನಮಗೆ ಯಾವುದೇ ಲಾಸ್ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇನ್ಮುಂದೆ ಖಾಸಗಿ ಶಾಲಾ ಶಿಕ್ಷಕರಿಗೂ ರಾಷ್ಟ್ರೀಯ ಪ್ರಶಸ್ತಿ ನೀಡಲು ಕೇಂದ್ರ ನಿರ್ಧಾರ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – 15 ಸಾವಿರ ಮಂದಿಗೆ ಇನ್ನೂ ಪಾವತಿಯಾಗಿಲ್ಲ ಸಂಬಳ

    ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – 15 ಸಾವಿರ ಮಂದಿಗೆ ಇನ್ನೂ ಪಾವತಿಯಾಗಿಲ್ಲ ಸಂಬಳ

    ನವದೆಹಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಕನಿಷ್ಠ 15 ಸಾವಿರ ಸರ್ಕಾರಿ ನೌಕರರಿಗೆ ಇನ್ನೂ ಮಾಸಿಕ ವೇತನ (Monthly Salary) ಪಾವತಿಯಾಗಿಲ್ಲ ಎಂದು ವರದಿಯಾಗಿದೆ.

    ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಸಂಬಳ ಪಾವತಿಯಾಗುತ್ತಿತ್ತು. ಆದರೆ ಅರ್ಧ ತಿಂಗಳು ಕಳೆದರೂ ವೇತನ ಪಾವತಿಯಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ರಾಜ್ಯ ಸಾರಿಗೆ ಇಲಾಖೆ, ವೈದ್ಯಕೀಯ ಕಾಲೇಜುಗಳು, ನೀರು ನಿರ್ವಹಣೆ, ಅರಣ್ಯ ಇಲಾಖೆಯ ಸಾವಿರಾರು ಸರ್ಕಾರಿ ನೌಕರರಿಗೆ ಇನ್ನೂ ಸಂಬಳ ಪಾವತಿಯಾಗಿಲ್ಲ. 15 ಸಾವಿರ ಸಿಬ್ಬಂದಿ ಪೈಕಿ ಹಿಮಾಚಲ ಪ್ರದೇಶ ಸಾರಿಗೆಯೊಂದರಲ್ಲೇ 13 ಸಾವಿರ ಸಿಬ್ಬಂದಿಗೆ ಸಂಬಳ ಪಾವತಿಸಬೇಕಿದೆ.  ಇದನ್ನೂ ಓದಿ: ಬರಿದಾಗುತ್ತಿದೆ ಕಬಿನಿ ಒಡಲು: ಮೈಸೂರು, ಬೆಂಗ್ಳೂರಿಗೆ ಶುರುವಾಗಲಿದೆ ಕುಡಿಯುವ ನೀರಿನ ಸಮಸ್ಯೆ

    ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಭರಪೂರ ಭರವಸೆಗಳನ್ನು ಪ್ರಕಟಿಸಿತ್ತು. ಈ ಭರವಸೆಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆರ್ಥಿಕ ಸಮಸ್ಯೆಯಲ್ಲಿರುವ ಸಿಎಂ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಸರ್ಕಾರ 1,000 ಕೋಟಿ ರೂಪಾಯಿಗಳ ಓವರ್‌ಡ್ರಾಫ್ಟ್ ಪಡೆಯಲು ಮುಂದಾಗಿದೆ. ಇದಕ್ಕಾಗಿ 800 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

     

    ಬಿಜೆಪಿ ಕಿಡಿ: ಹಿಮಾಚಲದ ಸುಖು ಸರ್ಕಾರವು ಆರ್ಥಿಕವಾಗಿ ತತ್ತರಿಸಲಾರಂಭಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ, ರಾಜ್ಯದ 15,000 ಕ್ಕೂ ಹೆಚ್ಚು ಉದ್ಯೋಗಿಗಳು ಮೇ ತಿಂಗಳ ಸಂಬಳವನ್ನು ಪಡೆಯಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಮೊದಲ ದಿನವೇ ಸಂಬಳವನ್ನು ನೀಡಲಾಗುತ್ತದೆ. ಮುಂದೆ ಕರ್ನಾಟಕದಲ್ಲೂ ಇದೇ ರೀತಿ ಆಗಲಿದೆ ಎಂದು ಬರೆದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ಹಿಂದಿಯಲ್ಲಿ ಟ್ವೀಟ್ ಮಾಡಿ ಸರ್ಕಾರವನ್ನು ಕುಟುಕಿದ್ದಾರೆ.

  • ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

    ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಸಕರ (MLA) ವೇತನವನ್ನು ಭಾರೀ ಹೆಚ್ಚಳ (Salary Hike) ಮಾಡಲಾಗಿದೆ. ದೆಹಲಿ ಶಾಸಕರ ವೇತನ ಭತ್ಯೆ, ಪಿಂಚಣಿ ತಿದ್ದುಪಡಿಗೆ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.

    ಕಾಯಿದೆ ಅಂಗೀಕಾರದ ಬಳಿಕ ದೆಹಲಿ ವಿಧಾನಸಭೆಯ ಶಾಸಕರು ತಮ್ಮ ಮಾಸಿಕ ವೇತನ ಹಾಗೂ ಭತ್ಯೆಗಳಲ್ಲಿ ಶೇ.66.7 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದರ ಪ್ರಕಾರ ತಿಂಗಳಿಗೆ ಸುಮಾರು 54,000 ರೂ. ಯಿಂದ 90,000 ರೂ. ವರೆಗೆ ವೇತನದಲ್ಲಿ ಹೆಚ್ಚಳವನ್ನು ಪಡೆಯಲಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡಲು ಮೋದಿಯವರಿಗೆ ಸಬ್ಜೆಕ್ಟ್ ಇಲ್ಲ: ಹೆಚ್‍ಡಿಕೆ

    ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.

    ದೆಹಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಿದೆ. 2011ರ ಬಳಿಕ ದೆಹಲಿ ಶಾಸಕರ ವೇತನದಲ್ಲಿ ಮಾಡಲಾಗಿರುವ ಮೊದಲ ಪರಿಷ್ಕರಣೆ ಇದಾಗಿದೆ. ಈ ಕ್ರಮಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬಂದಿದೆ. ಇದನ್ನೂ ಓದಿ: ತುರ್ತು ವೈದ್ಯಕೀಯ ಚಿಕಿತ್ಸೆ- ಕರಾಚಿಯಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಪ್ರಯಾಣಿಕ ಸಾವು

  • ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್‌ ತೆಗೆದುಕೊಂಡ ಡಿಕೆಶಿ

    ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್‌ ತೆಗೆದುಕೊಂಡ ಡಿಕೆಶಿ

    ಬೆಂಗಳೂರು: ನಾವು ಸರ್ಕಾರಿ ನೌಕರರಿಗೆ ಸಂಬಳ (Salary) ಜಾಸ್ತಿ ಮಾಡುತ್ತೇವೆ ಎಂದು ಹೇಳಿದ ಮೇಲೆ ಬೊಮ್ಮಾಯಿ ಸರ್ಕಾರ 17% ವೇತನ ಹೆಚ್ಚಳ ಮಾಡಿದೆ ಅಂತ ‌ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಸರ್ಕಾರಿ ನೌಕರರ ಸಂಬಳ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಯಾತ್ರೆಗೆ ದೊಡ್ಡ ಬೆಂಬಲ ಸಿಕ್ಕಿದೆ. ಸಿದ್ದರಾಮಯ್ಯ ಯಾತ್ರೆಯನ್ನು ನೋಡಿದ್ದೀರಿ. ಜೆಪಿ ನಡ್ಡಾ ಯಾತ್ರೆಗೂ ನೋಡಿದ್ದೀರಾ. ಜನ ನಮ್ಮ ಪರ ಇದ್ದಾರೆ. ನಮ್ಮ ಕೆಲಸ, ನಮ್ಮ ಮಾತು, ನಮ್ಮ ನುಡಿ ನಮ್ಮ ಗ್ಯಾರಂಟಿ ಜನ ಒಪ್ಪುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದರು.

    ಸರ್ಕಾರ ಏನೇ ಗ್ಯಾರಂಟಿ ಕೊಡಲಿ. ಕೆಪಿಸಿಸಿ‌ ಅಧ್ಯಕ್ಷ ಡಿಕೆ ಶಿವಕುಮಾರ್ ನಾನು ಸರ್ಕಾರಿ ನೌಕರರಿಗೆ ವೇತನ ಕೊಡ್ತೀನಿ ಅಂತ ಹೇಳಿದೆ. ನಾನು ಹೇಳಿದ ಮೇಲೆ ಸಿಎಂ 17% ಹೆಚ್ಚಳ ಮಾಡಿದ್ದಾರೆ. ನಾನು ಮಾತು ಕೊಟ್ಟ ಮೇಲೆ ಮಧ್ಯಂತರ ಪರಿಹಾರ ಸರ್ಕಾರ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಒಂದು ದಾರಿ ಕೊಟ್ಟಿತ್ತು. ನಾವು ಹೇಳಿದ ಬಳಿಕ ಸರ್ಕಾರ ಘೋಷಣೆ ಮಾಡಿತು ಅಂತ ವೇತನ ಹೆಚ್ಚಳ ಕ್ರೆಡಿಟ್ ತೆಗೆದುಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ATM ಮಾಡಿಕೊಳ್ಳುತ್ತೆ: ಅಶೋಕ್

    ಸರ್ಕಾರಿ ನೌಕರರ ಬೇಡಿಕೆ ಸರಿ ಇದೆ. ಬೆಲೆ ಏರಿಕೆಯಿಂದ ಅವರಿಗೂ ಸಮಸ್ಯೆ ಆಗಿದೆ. ಅದಕ್ಕೆ ವೇತನ ಹೆಚ್ಚಳ ಕೇಳಿದ್ದಾರೆ. ನಿನ್ನೆಯೂ ಗ್ಯಾಸ್ ಜಾಸ್ತಿ ಆಗಿದೆ. ಮೊದಲು ಸರ್ಕಾರ ಜಾಸ್ತಿ ಮಾಡುವುದಿಲ್ಲ ಎಂದು ಹೇಳಿತ್ತು. ನಾವು ಹೇಳಿದ ಮೇಲೆ ಸಿಎಂ ಸಂಬಳ ಜಾಸ್ತಿ ಮಾಡಿದ್ದು ಸರ್ಕಾರಿ ನೌಕರರು ದಡ್ಡರಲ್ಲ ಎಂದರು.

    OPS-NPS ವಿಚಾರದಲ್ಲಿ ನಮ್ಮ ನಿಲುವು ಹೇಳಿದ್ದೇವೆ. ಎಲ್ಲರೂ ಬಂದು ನಮ್ಮ ಬಳಿ ಚರ್ಚೆ ಮಾಡಿದ್ದಾರೆ. ಈಗಾಗಲೇ OPS ವಿಚಾರವಾಗಿ ಮಾತು ಕೊಟ್ಟಿದ್ದೇವೆ.ನಮ್ಮ ಮೇಲೆ ಸರ್ಕಾರಿ ನೌಕರರಿಗೆ ಭರವಸೆ ಇದೆ. ಅವರ ಮೇಲೆ ನಮಗೆ ಭರವಸೆ ಇದೆ ಎಂದು ಹೇಳಿದರು.

  • ಸರ್ಕಾರಿ ನೌಕರರಿಗೆ ಮಧ್ಯಂತರ  ರಿಲೀಫ್‌ – ಷರತ್ತು ಏನು?

    ಸರ್ಕಾರಿ ನೌಕರರಿಗೆ ಮಧ್ಯಂತರ ರಿಲೀಫ್‌ – ಷರತ್ತು ಏನು?

    ಬೆಂಗಳೂರು: ಚುನಾವಣೆ (Election) ಸಮೀಪಿಸುತ್ತಿರುವ ಈ ಹೊತ್ತಲ್ಲಿ ವೇತನ (Salary) ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಆರಂಭಿಸಿದ್ದ ಮುಷ್ಕರಕ್ಕೆ (Strike) ಬೆಚ್ಚಿದ ರಾಜ್ಯ ಸರ್ಕಾರ ಮಧ್ಯಾಹ್ನ ಮಧ್ಯಂತರ ಪರಿಹಾರ ಕಂಡುಕೊಂಡಿದೆ. ಸರ್ಕಾರ ತನ್ನ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಕೈಬಿಟ್ಟಿದ್ದಾರೆ.

    ಸಿಎಂ ಬೊಮ್ಮಾಯಿ (CM Bommai) ಜೊತೆಗಿನ ಹಲವು ಸುತ್ತುಗಳ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ನಮ್ಮ ಹೋರಾಟ ಯಶಸ್ವಿಯಾಗಿದೆ. ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದರು. ಏಳನೇ ವೇತನ ಆಯೋಗ ಇನ್ನೂ ವರದಿ ನೀಡಿಲ್ಲ. ಹೀಗಾಗಿ ಅಂತಿಮ ವರದಿಯನ್ನು ಕಾಯ್ದಿರಿಸಿರುವ ರಾಜ್ಯ ಸರ್ಕಾರ, ನೌಕರರಿಗೆ ಮಧ್ಯಂತರ ಪರಿಹಾರದ ರೂಪವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಜೊತೆಗೆ ಹಲವು ಷರತ್ತುಗಳನ್ನೂ ವಿಧಿಸಿದೆ.

    ಷರತ್ತುಗಳು ಅನ್ವಯ
    ಈ ವರ್ಷದ ಏಪ್ರಿಲ್‌ 1 ರಿಂದ ಮೂಲ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. 2018ರ ಪರಿಷ್ಕೃತ ವೇತನ ಶ್ರೇಣಿ ಆಧರಿಸಿ ಮಧ್ಯಂತರ ಪರಿಹಾರ ಸಿಗಲಿದೆ.

    ಇದು ತಾತ್ಕಾಲಿಕ ಪರಿಹಾರ ಮೊತ್ತವಾಗಿದೆ. ಇದು ವಿಶಿಷ್ಟ ಸಂಭಾವನೆಯಾಗಿದ್ದು ನಿವೃತ್ತಿ ಸೌಲಭ್ಯ/ತುಟ್ಟಿ ಭತ್ಯೆ ನಿರ್ಧರಿಸುವಾಗ ಇದನ್ನು ಪರಿಗಣಿಸಲ್ಲ. ಮೂಲ ವೇತನಕ್ಕೆ ಬೇರೆ ಯಾವುದೇ ಉಪಲಬ್ಧ ಸೇರಿಸುವುದಿಲ್ಲ. ರಾಜ್ಯ ಸರ್ಕಾರಿ, ಸ್ಥಳೀಯ ಸಂಸ್ಥೆ, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿಗಳ ಬೋಧಕೇತರ ಸಿಬ್ಬಂದಿಗೆ ಅನ್ವಯವಾಗಲಿದೆ.

    ರಾಜ್ಯ ಸರ್ಕಾರದ ನಿವೃತ್ತ ನೌಕರರು/ಕುಟುಂಬ ನಿವೃತ್ತಿದಾರರಿಗೆ ಮೂಲ ನಿವೃತ್ತಿ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. ಯುಜಿಸಿ/ಎಐಸಿಟಿಇ/ಎನ್‍ಜೆಪಿಸಿ ವೇತನ ಶ್ರೇಣಿಯ ನೌಕರರಿಗೆ ಈ ವೇತನ ಹೆಚ್ಚಳ ಅನ್ವಯವಾಗುವುದಿಲ್ಲ.

    ವೇತನ ಹೆಚ್ಚಳ – ಮುಂದೇನು?
    ಶೇ.17ರಷ್ಟು ಸಂಬಳ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 12 ಸಾವಿರ ಕೋಟಿ ರೂ. ಹೊರೆಯಾಗಲಿದೆ. 7ನೇ ವೇತನ ಆಯೋಗದ ಪೂರ್ಣ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಬೇಕು. ಈಗ ಮಧ್ಯಂತರ ಪರಿಹಾರದ ಕಾರಣ ಪೂರ್ಣ ವರದಿ ಸಲ್ಲಿಕೆಗೆ ಕಾಲಾವಕಾಶ ಸಿಗಲಿದೆ. ಹೊಸ ಸರ್ಕಾರ ಬಂದ ಮೇಲೆಯೇ 7ನೇ ವೇತನ ಆಯೋಗದ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಆ ಬಳಿಕವೇ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬಹುದು. ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಠ ಸಂಭಾವನೆಯಾಗಿರುತ್ತದೆ. ಮಾರ್ಚ್‍ನಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

    ಒಂದು ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಪೈಸೆ ಖರ್ಚು?
    ಸರ್ಕಾರದ ಖರ್ಚು ವೆಚ್ಚ ಯಾವುದಕ್ಕೆ ಎಷ್ಟೆಷ್ಟು?
    ಸಾಲ ತೀರಿಸಲು – 19 ಪೈಸೆ
    ನೌಕರರ ಸಂಬಳ/ ಪಿಂಚಣಿ – 18 ಪೈಸೆ
    ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ – 17 ಪೈಸೆ
    ಇತರೆ ಆರ್ಥಿಕ ಸೇವೆ – 15 ಪೈಸೆ
    ಶಿಕ್ಷಣ – 11 ಪೈಸೆ
    ಸಮಾಜ ಕಲ್ಯಾಣ – 8 ಪೈಸೆ
    ಆರೋಗ್ಯ – 5 ಪೈಸೆ
    ನೀರು ಪೂರೈಕೆ, ನೈರ್ಮಲ್ಯ – 3 ಪೈಸೆ
    ಇತರೆ ಸಾಮಾಜಿಕ ಸೇವೆ – 4 ಪೈಸೆ

    ಬಜೆಟ್; ಸರ್ಕಾರದ ಖರ್ಚು ವೆಚ್ಚ
    ಯೋಜನೇತರ ಅಂದಾಜು ವೆಚ್ಚ
    ವೇತನ – 68,491 ಕೋಟಿ ರೂ.
    ಪಿಂಚಣಿ – 26,980 ಕೋಟಿ ರೂ.
    ಬಡ್ಡಿ – 34,023 ಕೋಟಿ ರೂ.
    ಆಡಳಿತ ವೆಚ್ಚ – 5,382 ಕೋಟಿ ರೂ.
    ವೇತನ, ಪಿಂಚಣಿ, ಬಡ್ಡಿಗೆ 1,34,875 ಕೋಟಿ ರೂ.

    ಮಧ್ಯಂತರ ಪರಿಹಾರದಿಂದ ವೆಚ್ಚ ಹೇಗೆ ಬದಲಾಗುತ್ತೆ?
    7ನೇ ವೇತನ ಆಯೋಗದ ವರದಿ ಜಾರಿಗೆ 12 ಸಾವಿರದಿಂದ 18 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಶೇ.17ರಷ್ಟು ಮಧ್ಯಂತರ ಪರಿಹಾರದಿಂದಾಗಿ ಅಂದಾಜು 12 ಸಾವಿರ ಕೋಟಿ ಅವಶ್ಯಕತೆಯಿದೆ. ಹೆಚ್ಚುವರಿ ವೇತನ, ಪಿಂಚಣಿಗಾಗಿ ಬಜೆಟ್‍ನಲ್ಲಿ 6ಸಾವಿರ ಕೋಟಿ ರೂ. ಈಗಾಗಲೇ ಇಡಲಾಗಿದೆ. ಉಳಿದ 6 ಸಾವಿರ ಕೋಟಿ ರೂ. ಈಗ ಇತರೆ ಹಂಚಿಕೆಗಳಲ್ಲಿ ಮರು ಹೊಂದಾಣಿಕೆ ಮಾಡಬೇಕಿದೆ. ಸರ್ಕಾರಿ ನೌಕರರ ಸಂಬಳ ಪಿಂಚಣಿಗೆ ಇಟ್ಟಿದ್ದ 18 ಪೈಸೆಗೆ ಈಗ ಹೆಚ್ಚುವರಿ 2 ಪೈಸೆ ಅಗತ್ಯವಿದೆ. ಒಟ್ಟಾರೆ ಮಧ್ಯಂತರ ಪರಿಹಾರದಿಂದ ಸರ್ಕಾರಿ ನೌಕರರ ಸಂಬಳ/ಪಿಂಚಣಿಗೆ ಒಟ್ಟು 20 ಪೈಸೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

  • ಮಾ. 1ರಿಂದ ಸರ್ಕಾರಿ ನೌಕರರ ಮುಷ್ಕರ

    ಮಾ. 1ರಿಂದ ಸರ್ಕಾರಿ ನೌಕರರ ಮುಷ್ಕರ

    ಬೆಂಗಳೂರು: ಮಾ. 1ರಿಂದ ಸರ್ಕಾರಿ ನೌಕರರು (Government Employees) ಮುಷ್ಕರ (Indefinite Strike) ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರ ನೀಡಿದ್ದಾರೆ.

    ಸಿಎಂ ಬೊಮ್ಮಾಯಿ (CM Basavaraj Bommai) ವಿಧಾನಸಭೆಯಲ್ಲಿ ಮಾತನಾಡುತ್ತಾ, ಏಳನೇ ವೇತನ ಆಯೋಗ (7th Pay Commission) ನೀಡುವ ಮಧ್ಯಂತರ ವರದಿ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡುವುದಾಗಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯನ್ನು ಸರ್ಕಾರಿ ನೌಕರರು ನಂಬುವ ಸ್ಥಿತಿಯಲ್ಲಿ ಇಲ್ಲ. ಅಧಿಕೃತ ಆದೇಶಕ್ಕೆ ಪಟ್ಟು ಹಿಡಿದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ನಿಗದಿಯಂತೆ ಮಾರ್ಚ್ ಒಂದರಿಂದ ಮುಷ್ಕರ ಆರಂಭಿಸಲು ಮುಂದಾಗಿದೆ.

    ಇಂದು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ನಿಗಮ,ಪ್ರಾಧಿಕಾರ ಸೇರಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಈಗಾಗಲೇ ಒಂಭತ್ತು ತಿಂಗಳು ತಡವಾಗಿದೆ. ನಮ್ಮ ಬೇಡಿಕೆ ಈಡೇರಲೇ ಬೇಕು.. ಅಲ್ಲಿಯವರೆಗೂ ವಿರಮಿಸಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸ್ಪಷ್ಟಪಡಿಸಿದೆ.

    ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದಂತೆಯೇ ಮಾಡಿದರೆ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ. ರಾಜ್ಯದ ಜನ ನಾನಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈಗ ಸರ್ಕಾರದ ಬಳಿ ಒಂದೇ ದಿನದ ಸಮಯ ಉಳಿದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

    ಯಾವ ಯಾವ ಇಲಾಖೆ ಬಂದ್?
    * ವಿಧಾನಸೌಧದ ಎಲ್ಲಾ ಕಚೇರಿ
    * ಸಚಿವಾಲಯದ ಎಲ್ಲಾ ಕಚೇರಿ
    * ಬಿಬಿಎಂಪಿ/ಪುರಸಭೆ/ನಗರಸಭೆ
    * ಡಿಸಿ ಕಚೇರಿ/ತಾಲೂಕು ಕಚೇರಿ
    * ಗ್ರಾಮ ಪಂಚಾಯಿತಿ
    * ಸರ್ಕಾರಿ ಶಾಲೆ-ಕಾಲೇಜು, ಹಾಸ್ಟೆಲ್
    * ಕಂದಾಯ ಇಲಾಖೆ
    * ಜಲಮಂಡಳಿ

  • 6 ತಿಂಗಳಾದ್ರೂ ಪತ್ನಿಗೆ ಸಂಬಳ ಬಂದಿಲ್ಲ ಎಂದ ವ್ಯಕ್ತಿಗೆ ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಸಚಿವ

    6 ತಿಂಗಳಾದ್ರೂ ಪತ್ನಿಗೆ ಸಂಬಳ ಬಂದಿಲ್ಲ ಎಂದ ವ್ಯಕ್ತಿಗೆ ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಸಚಿವ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆಗೆ ರಾಜ್ಯ ಅರಣ್ಯ ಸಚಿವರೊಬ್ಬರು ಗರಂ ಆಗಿ, ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.

    ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ (Vijay Shah) ಅವರು ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಖಾಂಡ್ವಾ ಜಿಲ್ಲೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಾರ್ಯಕ್ರಮದ ವೇಳೆ ಇದ್ದಕ್ಕಿದ್ದಂತೆ ಎದ್ದು ನಿಂತು ಪ್ರಶ್ನೆ ಕೇಳಿದ್ದಾನೆ. ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತ್ನಿಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಆರೋಪಿಸಿದ್ದಾನೆ.

    ಇದರಿಂದಾಗಿ ಗರಂ ಆದ ಶಾಸಕರು ಆ ವ್ಯಕ್ತಿಯನ್ನು ಕುಡುಕನೆಂದು ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಆತನಿಗೆ ಸೊಂಟ ಮುರಿಯುವುದಾಗಿ ಎಚ್ಚರಿಕೆಯನ್ನು ನೀಡಿದ್ದು, ನಂತರ ಪೊಲೀಸರನ್ನು ಕರೆಸಿ ಆತನನ್ನು ಕಾರ್ಯಕ್ರಮದಿಂದ ಹೊರಹಾಕಿದ್ದಾರೆ.

    ಘಟನೆಗೆ ಸಂಬಂಧಿಸಿ ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ ಸಚಿವರು, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೇ ವಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಆ ವ್ಯಕ್ತಿಯನ್ನು ಕಾಂಗ್ರೆಸ್‍ನವರು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು- ಹಗ್ಗ ಹಿಡಿದು ನದಿ ದಾಟಿ ಬರುತ್ತಿರೋ ಜನ

    ಮಧ್ಯಪ್ರದೇಶದಲ್ಲಿ ಅಭಿವೃದ್ಧಿಯ ಯುಗವನ್ನು ಪ್ರಾರಂಭಿಸುತ್ತಿದ್ದೇವೆ. ಆದರೆ ಇದಕ್ಕೆ ಅಡ್ಡಿ ಪಡಿಸುವರು ಯಾರೇ ಇದ್ದರೂ ಅವರ ಸೊಂಟವನ್ನು ಪೊಲೀಸರು ಮುರಿಯುತ್ತಾರೆ ಎಂದು ತಿಳಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅರಣ್ಯ ಸಚಿವರ ದರ್ಪಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ – ಇಬ್ಬರು ಅರೆಸ್ಟ್, ವಿಲ್ಸನ್ ಗಾರ್ಡನ್ ನಾಗ ಪರಾರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

    ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

    ಕ್ಯಾಲಿಫೋರ್ನಿಯಾ: ಆಪಲ್‌(Apple) ಕಂಪನಿಯ ಸಿಇಒ ಟಿಮ್‌ ಕುಕ್‌ (Tim Cook) ಸಂಬಳ ಭಾರೀ ಕಡಿತವಾಗಿದೆ.

    ಅಚ್ಚರಿಯ ವಿಷಯ ಏನೆಂದರೆ ಕಂಪನಿ ಸಂಬಳವನ್ನು (Salary) ಕಡಿತ ಮಾಡಿಲ್ಲ. ಸ್ವತ: ಟಿಮ್‌ ಕುಕ್‌ ತನ್ನ ಸಂಬಳ ಬಹಳ ಹೆಚ್ಚಾಗಿದೆ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

    ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ಗೆ ಮಾಹಿತಿ ನೀಡಿದ ಆಪಲ್‌ ಟಿಮ್‌ ಕುಕ್‌ ಅವರ ಸಂಬಳವನ್ನು 49 ದಶಲಕ್ಷ ಡಾಲರ್‌ಗೆ (ಅಂದಾಜು 398 ಕೋಟಿ ರೂ.) ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.

    ಕುಕ್‌ 2022ರಲ್ಲಿ 99.4 ದಶಲಕ್ಷ ಡಾಲರ್‌(ಅಂದಾಜು 808 ಕೋಟಿ ರೂ.) ಪಡೆಯುತ್ತಿದ್ದರು. ಈ ವರ್ಷದ ಪರಿಷ್ಕರಣೆಯಿಂದ ಅರ್ಧಕ್ಕರ್ಧ ಸಂಬಳ ಇಳಿಕೆಯಾಗಿದೆ.  ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಕಳದ ವರ್ಷ ನಡೆದ ವಾರ್ಷಿಕ ಷೇರುದಾರರ ಸಭೆಯಲ್ಲಿ ಟಿಮ್‌ ಕುಕ್‌ ಸಂಬಳದ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಬಹುಸಂಖ್ಯೆ ಷೇರುದಾರರು ಕುಕ್‌ ಸಂಬಳದ ಪರವಾಗಿಯೇ ಮತ ಹಾಕಿದ್ದರು. ಹೀಗಾಗಿ ಟಿಮ್‌ ಕುಕ್‌ ಸಂಬಳ ಪರಿಷ್ಕರಣೆಯಾಗಿರಲಿಲ್ಲ.

    ಕುಕ್  1998 ರಲ್ಲಿ ಆಪಲ್‌ ಕಂಪನಿ ಸೇರಿದ್ದರು. ಸ್ವೀವ್‌ ಜಾಬ್ಸ್‌ ನಿಧನದ ಬಳಿಕ 2011ರಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಕುಕ್‌ ಅಧಿಕಾರದ ಅವಧಿಯಲ್ಲಿ ಆಪಲ್‌ ಕಂಪನಿಯ ಮಾರುಕಟ್ಟೆಯ ಮೌಲ್ಯ ಭಾರೀ ಏರಿಕೆಯಾಗಿದೆ. 2011ರಲ್ಲಿ 348 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದ್ದ ಆಪಲ್‌ ಕಂಪನಿ ಈಗ 2.12 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ಕುಕ್‌ ಶ್ರಮ  ಬಹಳಷ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಸಂಬಳ ಕೇಳಿದ ದಲಿತ ವ್ಯಕ್ತಿಯನ್ನು ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿ ವಿಕೃತಿ

    ಜೈಪುರ: ದಲಿತ (Dalit) ವ್ಯಕ್ತಿಯೊಬ್ಬರು ತಾನು ಮಾಡಿದ ಕೆಲಸಕ್ಕೆ ಸಂಬಳ (Payment) ನೀಡುವಂತೆ ಕೇಳಿದ್ದಕ್ಕೆ ಕೆಲ ಕಿಡಿಗೇಡಿಗಳು ಅವರನ್ನು ಥಳಿಸಿ (Assault), ಚಪ್ಪಲಿಯ ಮಾಲೆ ಹಾಕಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ವಿಕೃತ ಘಟನೆ ರಾಜಸ್ಥಾನದ (rajasthan) ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ದಲಿತ ವ್ಯಕ್ತಿ ಎಲೆಕ್ಟ್ರಿಷಿಯನ್ ಆಗಿದ್ದು, ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಿಕೃತ ಕೃತ್ಯ ಎಸಗಿದ್ದಾರೆ. ದಾಳಿ ಮಾಡಿದವರಲ್ಲಿ ಒಬ್ಬ ಇದರ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ದಲಿತ ವ್ಯಕ್ತಿ ತನ್ನನ್ನು ಥಳಿಸದಂತೆ ಬೇಡಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ದಾಳಿಕೋರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿ ಭರತ್ ಕುಮಾರ್ (28) ನವೆಂಬರ್ 23ರಂದು ಪೊಲೀಸರಿಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಅವರು ಕೆಲವು ಎಲೆಕ್ಟ್ರಿಷಿಯನ್ ಕೆಲಸ ಮಾಡಿದ್ದು, 21,100 ರೂ. ಬಿಲ್ ಮಾಡಿದ್ದಾರೆ. ಕೆಲಸ ಮಾಡಿಸಿಕೊಂಡ ವ್ಯಕ್ತಿ ತಕ್ಷಣಕ್ಕೆ ಅವರಿಗೆ 5,000 ರೂ. ನೀಡಿ, ಉಳಿದ ಹಣವನ್ನು ನವೆಂಬರ್ 19ರಂದು ಡಾಬಾವೊಂದಕ್ಕೆ ಹೋಗಿ ಪಡೆಯಲು ತಿಳಿಸಿದ್ದಾನೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    ಅದರಂತೆ ಭರತ್ ಕುಮಾರ್ ಡಾಬಾಗೆ ತೆರಳಿ ಉಳಿದ ಹಣ ಕೇಳಿದ್ದಾರೆ. ಈ ವೇಳೆ ಅವರನ್ನು ರಾತ್ರಿ 9 ಗಂಟೆ ವೇಳೆಗೆ ಬರುವಂತೆ ಸೂಚಿಸಲಾಗಿದೆ. ಭರತ್ ಮತ್ತೆ 9 ಗಂಟೆಗೆ ಡಾಬಾ ಬಳಿ ಬಂದಿದ್ದು, 9:10ರ ವರೆಗೆ ಕಾದು ಕುಳಿತರೂ ಹಣ ನೀಡದಿದ್ದಾಗ ಪೊಲೀಸರಿಗೆ ದುರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಈ ವೇಳೆ ಆರೋಪಿಗಳು ಭರತ್ ಅವರನ್ನು ಹಿಡಿದು ಥಳಿಸಿದ್ದಾರೆ. ಅಮಾನುಷವಾಗಿ ಹೊಡೆದಿದ್ದಲ್ಲದೇ ಚಪ್ಪಲಿಯ ಮಾಲೆ ಹಾಕಿದ್ದಾರೆ. ಆರೋಪಿಗಳಲ್ಲೊಬ್ಬ ಕೃತ್ಯದ ವೀಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ಆರೋಪಿಗಳು ತಮ್ಮ ಮೇಲೆ ಸುಮಾರು 5 ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ ಎಂದು ಭರತ್ ಆರೋಪಿಸಿದ್ದಾರೆ. ಇದನ್ನೂ ಓದಿ: ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ

    ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ

    ಮುಂಬೈ: ಟೀಂ ಇಂಡಿಯಾದ(Team India) ಮಹಿಳಾ ಕ್ರಿಕೆಟ್‌(Cricket) ಆಟಗಾರ್ತಿಯರಿಗೆ ಪಂದ್ಯಗಳಿಗೆ ಪುರುಷರಷ್ಟೇ ಸಮಾನ ಶುಲ್ಕ ನೀಡುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(BCCI) ಘೋಷಿಸಿದೆ.

    ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ(Jay Shah) ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ತಾರತಮ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಬಿಸಿಸಿಐ ಮೊದಲ ಹೆಜ್ಜೆಯನ್ನು ಇಟ್ಟಿದ್ದು, ಈ ನಿರ್ಧಾರವನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಬಿಸಿಸಿಐ ಜೊತೆಗೆ ಒಪ್ಪಂದ ಮಾಡಿಕೊಂಡ ಮಹಿಳಾ ಕ್ರಿಕೆಟಿಗರಿಗೆ ನಾವು ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಭಾರತೀಯ ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ನಾವು ಸಾಗುತ್ತಿದ್ದೇವೆ. ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕ ಒಂದೇ ಆಗಿರುತ್ತದೆ ಎಂದು ಹೇಳಿದ್ದಾರೆ.

    ಪುರುಷರಿಗೆ ನೀಡುವಂತೆ ಟೆಸ್ಟ್‌ ಪಂದ್ಯಕ್ಕೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ., ಟಿ 20 ಪಂದ್ಯಕ್ಕೆ 3 ಲಕ್ಷ ರೂ. ನೀಡಲಾಗುತ್ತದೆ ಎಂದು ಜಯ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ಭಾರತದ ಮಹಿಳೆಯರ ಪಂದ್ಯದ ಶುಲ್ಕ ಜಾಸ್ತಿ ಮಾಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಕೇಳಿ ಬಂದಿತ್ತು. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳಾ ಕ್ರಿಕೆಟ್‌ ಪಂದ್ಯಗಳು ಕಡಿಮೆ ನಡೆಯುತ್ತಿರುವ ಕಾರಣ ಆದಾಯ ಕಡಿಮೆ ಎಂಬ ಕಾರಣ ನೀಡಿ ಇಲ್ಲಿಯವರೆಗೆ ಶುಲ್ಕ ಏರಿಕೆಯ ಪ್ರಸ್ತಾಪವನ್ನು ತಡೆ ಹಿಡಿಯಲಾಗಿತ್ತು.

    ಈ ಜುಲೈನಲ್ಲಿ ನ್ಯೂಜಿಲೆಂಡ್‌ ತಂಡ ಪುರುಷರಷ್ಟೇ ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ನೀಡುವುದಾಗಿ ಘೋಷಿಸಿತ್ತು.

    Live Tv
    [brid partner=56869869 player=32851 video=960834 autoplay=true]