Tag: ಸಂಬರಗಿ

  • ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 12 ಮಂದಿ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡಿರುವ ಸ್ಪರ್ಧಿಗಳಿಗೆ ಇಂದು ಎಲಿಮಿನೇಷನ್ ಭಯ ಶುರುವಾಗಿದೆ.

    ಇಂದು ಬಿಗ್‍ಬಾಸ್ ಮನೆಯ ಜರ್ನಿಯನ್ನು ಮುಗಿಸಿ ಒಬ್ಬ ಸ್ಪರ್ಧಿ ಆಚೆ ಹೋಗಲಿದ್ದಾರೆ. ಯಾರು ಹೋಗಲಿದ್ದಾರೆ ಎನ್ನುವುದರ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್ ಆಗಿದ್ದಾರೆ.

    ಮಂಜು ಪಾವಗಡ ಹೋದವಾರ ಕ್ಯಾಪ್ಟನ್ ಆಗಿದ್ದರಿಂದ ಅವರಿಗೆ ಎಲಿಮಿನೇಷನ್ ಅನ್ವಯ ಆಗುವುದಿಲ್ಲ. ಹೀಗಾಗಿ ಈ ವಾರ ಅವರು ಸೇಫ್. ರಘು ಗೌಡ ಹಾಗೂ ದಿವ್ಯಾ ಸುರೇಶ್ ಅತ್ಯುತ್ತಮವಾಗಿ ಆಟವಾಡಿ ಮನೆಯವರ ಮೆಚ್ಚುಗೆ ಪಡೆದಿದ್ದಾರೆ. ಹೀಗಾಗಿ ಅವರು ಹೊರ ಹೋಗೋದು ಬಹುತೇಕ ಅನುಮಾನ ಆದರೂ ಬಿಗ್‍ಬಾಸ್ ವೀಕ್ಷಕರು ಈ ಇಬ್ಬರಲ್ಲಿ ಇಬ್ಬರನ್ನು ಕೈ ಹಿಡಿಯುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

    ನಿಧಿ, ಪ್ರಶಾಂತ್ ಸಂಬರಗಿ ವೀಕ್ಷಕರನ್ನು  ಎಂಟರ್​ಟೇನ್ ಮಾಡುತ್ತಿದ್ದಾರೆ. ಈವಾರ ನಿಧಿ ತಮ್ಮ ನೇರವಾದ ಮಾತಿನಿಂದ, ಜಗಳ, ಮುನಿಸಿನಿಂದ ಹೆಚ್ಚಾಗಿ ಸುದ್ದಿಯಾಗಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಸಂಬರಗಿ ಮಧ್ಯೆ ನಡೆದಿರುವ ಜಗಳ ಈ ವಾರದ ಹೈಲೇಟ್ ಆಗಿತ್ತು. ಆದರೆ ಚಕ್ರವರ್ತಿಯ ವರ್ತನೆ ಸಾಕಷ್ಟು ಜನರಿಗೆ ಇಷ್ಟವಾಗಿಲ್ಲ. ಹಲವು ಸ್ಪಧಿಘಳ ಜೊತೆಗೆ ಜಗಳ ಮಾಡಿದ್ದಾರೆ. ಪ್ರಶಾಂತ್ ಗೇಮ್ ಬಿಟ್ಟ್ರೆ ಬೇರೆಯಾವುದೇ ರೀತಿಯಿಂದಲೂ ಸುದ್ದಿಯಾಗಿಲ್ಲ. ಪ್ರಿಯಾಂಕಾ ತಮ್ಮ ಆಟವನ್ನು ಆಡುತ್ತಿದ್ದಾರೆ. ಆದರೆ ಇವರ ಆಟ ಬಿಗ್‍ಬಾಸ್ ವೀಕ್ಷಕರಿಗೆ ಇಷ್ಟವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

    ಹಿಂದಿನ ವಾರ ಎಲಿಮಿನೇಷನ್ ಇರಲಿಲ್ಲ. ಈ ವಾರ ಮನೆಯಿಂದ ಒಬ್ಬರು ಹೊರಗೆ ಹೋಗುವುದು ಪಕ್ಕಾ ಆಗಿದೆ. ಯಾರು ಮನೆಯಿಂದ ಆಚೆಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ವಾರ ಕಿಚ್ಚ ಸ್ಪರ್ಧಿಗಳಿಗೆ ಯಾವೆಲ್ಲ ವಿಚಾರವಾಗಿ ಕಿವಿಮಾತು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಬಿಗ್‍ಬಾಸ್ ಮನೆಯಲ್ಲಿ ಸಂಬಂಧಿಕರಿಬ್ಬರ ವಾರ್

    ಬಿಗ್‍ಬಾಸ್ ಮನೆಯಲ್ಲಿ ಸಂಬಂಧಿಕರಿಬ್ಬರ ವಾರ್

    ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗಿ ದಿನಗಳು ಕಳೆಯುತ್ತಿರುವ ನಡುವೆ. ಮನೆಯಲ್ಲಿ ಇಬ್ಬರು ಸಂಬಂಧಿಕರ ನಡುವೆ ತಮ್ಮ ಕುಟುಂಬದ ಬಗ್ಗೆ ಸಣ್ಣಮಟ್ಟದ ಹೆಲ್ದಿ ವಾರ್ ನಡೆದಿದೆ.

    ಬಿಗ್‍ಬಾಸ್ ನೀಡಿರುವ ಟಾಸ್ಕ್ ನಲ್ಲಿ ಕೂತು ಕಾಲ ಕಳೆಯುತ್ತಿರುವ 6 ಜನ ಸ್ಪರ್ಧಿಗಳಲ್ಲಿ ಇಬ್ಬರು ಸ್ಪರ್ಧಿಗಳು ನಿಜ ಜೀವನದಲ್ಲಿ ಸಂಬಂಧಿಕರಾಗಿದ್ದಾರೆ. ಮೊದಲ ಇನ್ನಿಂಗ್ಸ್ ಕೊರೊನಾದಿಂದಾಗಿ ನಿಂತ ಮೇಲೆ ಮನೆಗೆ ತೆರಳಿದ ಬಳಿಕ ಶಮಂತ್ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರಗಿ ಸಂಬಂಧಿಕರೆಂಬ ವಿಷಯ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ರಾಖಿ ಇಲ್ಲ ಮಂಜಣ್ಣ ಇದನ್ನೇ ಕಟ್ತೀನಿ: ವೈಷ್ಣವಿ

    ಈ ವಿಷಯವಾಗಿ ಟಾಸ್ಕ್ ವೇಳೆ ಶಮಂತ್ ಗೌಡ, ಸಂಬಂಧಿಕರೆಲ್ಲ ಬಿಗ್‍ಮನೆಯ ಹೊರಗೆ ಮನೆಯ ಒಳಗಲ್ಲ ಎಂದು ಸಂಬರಗಿಗೆ ಹೇಳಿದ್ದಾರೆ. ಇದನ್ನು ಕೇಳಿದ ಮಂಜು ಯಾರು ಸಂಬಂಧಿಕರು ಎಂದು ಕೇಳಿದ್ದಾರೆ. ಇದಕ್ಕೆ ಚಕ್ರವರ್ತಿ, ಶಮಂತ್ ಮತ್ತು ಸಂಬರಗಿ ಅವರು ನಿಜವಾಗಿಯೂ ಸಂಬಂಧಿಕರು ಎಂದು ವಿವರಿಸಿದ್ದಾರೆ.

    ನಿಮ್ಮಿಬ್ಬರ ಸಂಬಂಧ ಹೇಗೆ ಎಂದು ಶಮಂತ್ ಮತ್ತು ಚಕ್ರವರ್ತಿ ಬಳಿ ಕೇಳಿದ್ದಾರೆ. ಇದಕ್ಕೆ ಸಂಬರಗಿ ನಮ್ಮಿಬ್ಬರ ಕಡೆಯಿಂದ ಒಬ್ಬರ ಕುಟುಂಬಕ್ಕೆ ಒಬ್ಬರು ಗಂಡು, ಹೆಣ್ಣು ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಶಮಂತ್ ಒಂದು ಮದುವೆಯನ್ನು ಇಷ್ಟು ಕೇವಲವಾಗಿ ಮಾತನಾಡುತ್ತಾರಾ ಎಂದು ಸಂಬರಗಿ ಮೇಲೆ ಗರಂ ಆಗಿದ್ದಾರೆ.

    ಇದನೆಲ್ಲ ಗಮನಿಸಿದ ಚಕ್ರವರ್ತಿ ನಿಮ್ಮ ಕುಟುಂಬ ವಿಷಯ ನೀವೆ ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಶಮಂತ್ ಹೆಲ್ದಿಯಾಗಿ ಕುಟುಂಬ ವಿಷಯವನ್ನು ಮನೆಯಿಂದ ಹೊರಗೆ ಹೋದ ಮೇಲೆ ಇಟ್ಟುಕೊಳ್ಳೋಣ ಎಂದು ಸುಮ್ಮನಾಗಿದ್ದಾರೆ.

  • ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್

    ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್

    – ಕರ್ನಾಟಕ ಪೊಲೀಸ್ ನಂಬರ್ ಒನ್, ಅವರ ಮೇಲೆ ವಿಶ್ವಾಸ ಇದೆ
    – ಕಳ್ಳನ ಜೊತೆ ಫೋಟೋ ತೆಗೆಸಿಕೊಂಡ್ರೆ ನಾನು ಕಳ್ಳ ಅನ್ನೋಕೆ ಆಗುತ್ತಾ

    ಬೆಂಗಳೂರು: ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಇದನ್ನೂ ಓದಿ: ಕ್ಯಾಸಿನೋಗೆ ಹೋದ್ರು ಅನ್ನೋದು ತಪ್ಪಲ್ಲ: ಜಮೀರ್ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

    ವರದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್, ಕೊರೊನಾದಿಂದಾಗಿ ನಾನು ಏನೂ ಮಾತನಾಡಲಿಲ್ಲ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ಕಾನೂನಿನ ಮೂಲಕ ಹೋರಾಟ ಮಾಡುತ್ತಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ. ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

    ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ಜಮೀರ್ ಮುಗಿಸುವುದು ಅಷ್ಟು ಸುಲಭ ಅಲ್ಲ. ನಾನು ಯಾವುದೇ ತಪ್ಪು ಮಾಡಲು ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

    ನನಗೂ ಫಾಝಿಲ್‍ಗೂ ಪರಿಚಯ ಇಲ್ಲ. ಕಳ್ಳ ನನ್ನ ಜೊತೆ ನಿಂತು ಫೋಟೋ ತೆಗೆಸಿಕೊಂಡರೆ ನಾನು ಕಳ್ಳ ಅನ್ನೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಆದ್ದರಿಂದ ನಾನು ಭಾಗಿಯಾಗಿರುತ್ತೀನಾ ಎಂದು ಪ್ರಶ್ನೆ ಮಾಡಿದರು. ಡ್ರಗ್ಸ್ ದಂಧೆಯಲ್ಲಿ ಫಾಝಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಝಿಲ್‍ಗೂ ನನಗೂ ಯಾವುದೇ ಸಂಬಂಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ ಎಂದು ಜಮೀರ್ ಹೇಳಿದರು.

    ವರ್ಷಕ್ಕೆ ಒಮ್ಮೆ ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರುತ್ತಾರೆ, ಅವನೂ ಬಂದಿರಬಹುದು. ಉಮ್ರಾಗೆ ರಾಜ್ಯದಿಂದ ಸಾವಿರಾರು ಜನ ಬರುತ್ತಾರೆ. ನಾನು 23 ವರ್ಷದಿಂದ ಉಮ್ರಾಗೆ ಹೋಗುತ್ತಿದ್ದೇನೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ ಫಾಝಿಲ್‍ಗೆ ಗಲ್ಲು ಶಿಕ್ಷೆ ಆಗಬೇಕು, ಅದೇ ರೀತಿ ನಾನು ಭಾಗಿಯಾಗಿದ್ದರೆ ನನಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಈ ಹಿಂದೆಯೇ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ ಎಂದರು.

    ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ ಜಮೀರ್, ಕೊಲಂಬೋಗೆ ಹೋಗುವುದು ತಪ್ಪಾ. ನಾನು ನನ್ನ ಫ್ಯಾಮಿಲಿ ಜೊತೆ ಎರಡು ಭಾರಿ ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಹೋಗಿದ್ದೇವೆ. ಕೊಲಂಬೋಗೆ ಪ್ರವಾಸಕ್ಕೆ ಹೋಗಿದ್ದು, ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂಗೆ ಅಂದುಕೊಳ್ಳೋದಾ. ನಾವು ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹೋಗಿರುತ್ತೇವೆ ಎಂದು ಜಮೀರ್ ಸ್ಪಷ್ಟಪಡಿಸಿದರು.

    ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಸಂಜನಾ ನನ್ನ ಜೊತೆ ಹೋಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರ, ಈಗ ಸಂಜನಾ ಬಿಟ್ಟು ಫಾಝಿಲ್ ಇಟ್ಟುಕೊಂಡಿದ್ದೀರ, ನಾನು ಎಲ್ಲೂ ತಪ್ಪು ಮಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಜನಾ ಜೊತೆ ಜಮೀರ್ ಹೋಗಿದ್ದರೂ ಅಂತ ಸಂಬರಗಿ ಹೇಳಿದ್ದು, ಹೀಗಾಗಿ ಅವರನ್ನೇ ಕೇಳಿ. ಸಂಜನಾ ಜೊತೆ ನಾನು ಹೋಗಿರೋ ಒಂದು ಫೋಟೋ ತೋರಿಸಲಿ ಎಂದು ಹೇಳಿದರು.

  • ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    – ಎರಡು ಒಗಟುಗಳು ಶೀಘ್ರವೇ ಸ್ಫೋಟ
    – ದಾಖಲೆ ಇಲ್ಲದೇ ನಾನು ಮಾತನಾಡಲ್ಲ
    – ಜಮೀರ್‌ ಪಾಸ್‌ಪೋರ್ಟ್‌ ತೋರಿಸಿದ್ರೆ ಉತ್ತರ ಸಿಕ್ಕುತ್ತೆ

    ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ಹೇಳಿದ ಮೂರು ಸ್ಫೋಟಕ ಒಗಟುಗಳು ಎಲ್ಲ ಸತ್ಯವಾಗಿದೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.

    ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರಿಂದ ನೋಟಿಸ್‌ ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು ಬೆಳಗ್ಗೆ 10 ಗಂಟೆಗೆ ನಾನು ಸಿಸಿಬಿ ಕಚೇರಿಗೆ ತೆರಳಿ ನನ್ನಲ್ಲಿರುವ ಪ್ರಮುಖ ಸಾಕ್ಷ್ಯಗಳನ್ನು ನೀಡುತ್ತೇನೆ. ನಾನು ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿಯಲ್ಲ. ನಾನು ಈ ಹಿಂದೆ ಹೇಳಿದ ಎಲ್ಲ ಒಗಟುಗಳು ಸತ್ಯವಾಗಿದೆ ಎಂದು ತಿಳಿಸಿದರು.

    ಕರ್ನಾಟಕದ ಮುಂಬೈಗೆ ಸೊಸೆಯಾಗಿ ಒಬ್ಬರು ತೆರಳಿರುವ ಕುಟುಂಬದ ವ್ಯಕ್ತಿಯ ಬಗ್ಗೆ ಹೇಳಿದ್ದೆ. ಇದು ನಿಜವಾಗಿದ್ದು ಜೀವರಾಜ್ ಆಳ್ವಾ ಮಗ ಆದಿತ್ಯಾ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಮನೆ ಮಗಳು ಮುಂಬೈಯಲ್ಲಿರುವ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಸುಶಾಂತ್‌ ಸಿಂಗ್‌ ಪ್ರಕರಣಕ್ಕೂ ಬೆಂಗಳೂರಿಗೂ ಸಂಬಂಧ ಇದೆ ಎಂದು ತಿಳಿಸಿದ್ದು ಅದು ಕೂಡ ನಿಜವಾಗಿದ್ದು ಎನ್‌ಸಿಬಿಯಿಂದ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯ ಕೇಶವ್ ಮೂರ್ತಿ ಮಗನಿಗೆ ನೋಟಿಸ್ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

     

    ಡ್ರಗ್ಸ್‌ ದಂಧೆಯಲ್ಲಿ ಬಾಲಿವುಡ್‌ಗೂ ಸ್ಯಾಂಡಲ್‌ವುಡ್‌ಗೂ ಸಂಬಂಧ ಇದೆ. ಅದರಲ್ಲಿ ಇಮ್ತಿಯಾಸ್ ಖಾತ್ರಿ ಇದ್ದಾನೆ ಅಂತ ಹೇಳಿದ್ದೆ. ಅದು ಕೂಡ ನಿಜವಾಗಿದೆ. ನಾನು ಮಾಡಿದ ಎಲ್ಲಒಗಟುಗಳು ನಿಜವಾಗಿದ್ದು ಇನ್ನು ಎರಡು ಒಗಟುಗಳು ಶೀಘ್ರವೇ ಸ್ಫೋಟಗೊಳ್ಳಲಿದೆ ಎಂದು ಹೇಳಿದರು.

    ಈ ವೇಳೆ ಇನ್ನು ಎರಡು ವಿಚಾರ ಯಾವುದು ಎಂದು ಕೇಳಿದ್ದಕ್ಕೆ ಈಗ ನಾನು ಹೇಳುವುದಿಲ್ಲ ಮುಂದೆ ತಿಳಿಸುತ್ತೇನೆ ಎಂದು ಉತ್ತರಿಸಿದರು.

    ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್‌ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8,‌ 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್‌ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‌ಪೋರ್ಟ್‌ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದರು.

    ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್‌ ಹಾಕಿದ್ದಾರೆ. ಈ ರೀತಿ ಕೇಸ್‌ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರು.

    ತನ್ನ ಬಗ್ಗೆ ಬಂದಿರುವ ಬಿಜೆಪಿ ಏಜೆಂಟ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೆ. ಅವರ ಕನ್ನಡ ಪರ ನಿಲುವು ನನಗೆ ಬಹಳ ಇಷ್ಟವಾಗಿತ್ತು. ಅವರ ಕೆಳಗಡೆ ಕುಳಿತಿದ್ದ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಕುಮಾರಸ್ವಾಮಿಯವರ ಜೊತೆಯಲ್ಲೂ ನಾನು ಮಾತನಾಡಿದ್ದೇನೆ. ನಾನು ಯಾರ ಏಜೆಂಟ್‌ ಅಲ್ಲ. ನಾನೊಬ್ಬ ಕನ್ನಡಿಗ. ಕನ್ನಡಕ್ಕಾಗಿ ಹೋರಾಡುವ ವ್ಯಕ್ತಿ ಎಂದು ತಿಳಿಸಿದರು.