Tag: ಸಂಬಂಧ

  • ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    – ಇಬ್ಬರಿಂದ ಅರೆಬೆತ್ತಲೆ ಫೋಟೋ ಅಪ್ಲೋಡ್

    ಕೋಲ್ಕತಾ: ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರು ಮಹಿಳೆ ಅರೆಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.

    ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ ತಿಳಿಸಿದ್ದಾರೆ.

    ಮಹಿಳೆ ಸ್ಥಳೀಯ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಮಹಿಳೆ ವ್ಯಕ್ತಿಯೊಂದಿಗೆ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಆಕೆಯ ಫೋನ್ ತೆಗೆದುಕೊಂಡು ಮಹಿಳೆಯ ಕೆಲವು ಅರೆಬೆತ್ತಲೆ, ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ನಂತರ ಸಂಬಂಧವನ್ನು ಮುಂದುವರಿಸದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್ ಮಾಡಿದ್ದಾನೆ.

    ಆರೋಪಿ ವ್ಯಕ್ತಿ ತನ್ನ ಸ್ನೇಹಿತನ ಸಹಾಯದಿಂದ ನನ್ನ ಬಳಿ ತೆಗೆದುಕೊಂಡ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಲೋಕ್ ರಾಜೋರಿಯಾ ಹೇಳಿದ್ದಾರೆ.

  • ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧಕ್ಕಾಗಿ ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ

    ಹಾವೇರಿ: ತನಗೆ ಮೂವರು ಮಕ್ಕಳಿದ್ದರೂ ಅಣ್ಣನ ಮಗನನ್ನು ತನ್ನ ಸ್ವಂತ ಮಗ ಅನ್ನೋದಕ್ಕಿಂತಲೂ ಹೆಚ್ಚಾಗಿ ಬೆಳೆಸಿದ್ದ. ಆದರೆ ಆ ಅಣ್ಣನ ಮಗ ಚಿಕ್ಕಮ್ಮನಿಗಾಗಿ ಚಿಕ್ಕಪ್ಪನನ್ನೇ ಕೊಲೆ ಮಾಡಿ ಅರೆಸ್ಟ್ ಆಗಿದ್ದಾನೆ.

    ಹತ್ಯೆಯಾದ ವ್ಯಕ್ತಿಯನ್ನು ನಾಗೇಂದ್ರಮಟ್ಟಿಯ ನಿವಾಸಿಯಾದ 40 ವರ್ಷ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಈತ ಮೂರು ಮಕ್ಕಳು ಮಡದಿ ಜೊತೆ ಆಟೋರಿಕ್ಷಾ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮತ್ತು ಅನಾಥ ಎಂದು ತನ್ನ ಅಣ್ಣನ ಮಗ ಮಂಜುನಾಥ್(20) ಜೊತೆಯಲ್ಲೇ ಬೆಳೆಸುತ್ತಿದ್ದ.

    ಚಿಕ್ಕಮ್ಮ ಉಷಾಳ ಜೊತೆ ಮಂಜುನಾಥ್ ಕದ್ದುಮುಚ್ಚಿ ಲವ್ವಿಡವ್ವಿ ಶುರುವಿಟ್ಟಕೊಂಡಿದ್ದ. ಇದು ಯಲ್ಲಪ್ಪನಿಗೆ ಗೊತ್ತಾದ ನಂತರ ಇಬ್ಬರು ಸೇರಿ ಯಲ್ಲಪ್ಪ ಕೊಲೆ ಮಾಡಿ ಹಾವೇರಿಯ ಹೆಗ್ಗೇರಿ ಕೆರೆಯ ಬಳಿ ಐದು ಲೀಟರ್ ಪೆಟ್ರೋಲ್ ಹಾಕಿ ಸುಟ್ಟು, ಮೃತ ದೇಹವನ್ನು ಬಾವಿಯಲ್ಲಿ ಹಾಕಿ ಬಂದಿದ್ದಾರೆ.

    ಡಿಸೆಂಬರ್ 10 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಯಲ್ಲಪ್ಪನನ್ನು ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅದಕ್ಕೆ ಯಲ್ಲಪ್ಪನ ಪತ್ನಿ ಚಿಕ್ಕಮ್ಮ ಉಷಾ ಸಹ ಸಾಥ್ ನೀಡಿದ್ದಾಳೆ. ನಂತರ ಕಳೆದ ಆರು-ಏಳು ತಿಂಗಳಿನಿಂದ ಗಂಡ ಮನೆ ಬಿಟ್ಟು ಹೋಗಿದ್ದಾನೆ ಎಂದು ಗ್ರಾಮಸ್ಥರ ಬಳಿ ಹೇಳಿದ್ದಳು.

    6 ತಿಂಗಳ ನಂತರ ಸ್ಥಳೀಯರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗ ಚಿಕ್ಕಮ್ಮ ಉಷಾ ಹಾಗೂ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

  • ನಂಗೆ ಅವಳೇ ಬೇಕು ಎಂದು ಠಾಣೆಯಲ್ಲೇ ಪ್ರತಿಭಟನೆ- ಇದು ಮಗಳು, ಚಿಕ್ಕಪ್ಪನ ಲವ್ ಸ್ಟೋರಿ!

    ನಂಗೆ ಅವಳೇ ಬೇಕು ಎಂದು ಠಾಣೆಯಲ್ಲೇ ಪ್ರತಿಭಟನೆ- ಇದು ಮಗಳು, ಚಿಕ್ಕಪ್ಪನ ಲವ್ ಸ್ಟೋರಿ!

    ಬಾಗಲಕೋಟೆ: ಸಂಬಂಧದಲ್ಲಿ ಮಗಳು ಮತ್ತು ಚಿಕ್ಕಪ್ಪ, ಆದರೆ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಈಗ ಯುವಕ ನಂಗೆ ಅವಳೇ ಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ನವನಗರದ 12ನೇ ಸೆಕ್ಟರ್ ನಿವಾಸಿಯಾಗಿರುವ ಸಾಗರ್ ಸುಗತೇಕರ್, ಅದೇ ಕಾಲೋನಿ ಸಂಬಂಧಿ ಯುವತಿ ಜೊತೆಗೆ ಲವ್ವಿಡವ್ವಿ ಶುರುಮಾಡಿಕೊಂಡಿದ್ದ. ಒಂದು ವರ್ಷದಿಂದ ಯಾರಿಗೂ ಗೊತ್ತಿಲ್ಲದೇ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಅಷ್ಟೇ ಅಲ್ಲದೇ ಒಂದು ವಾರದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿ ದೈಹಿಕ ಸಂಪರ್ಕವನ್ನೂ ಬೆಳೆಸಿಕೊಂಡಿದ್ದಾರೆ.

    ಇವರಿಬ್ಬರ ಪ್ರೀತಿ, ಓಡಾಟವೆಲ್ಲಾ ಮನೆಯವರಿಗೆ ತಿಳಿದಿದೆ. ಆದರೆ ಸಂಬಂಧದಲ್ಲಿ ಚಿಕ್ಕಪ್ಪ, ಮಗಳ ಸಂಬಂಧವಿದ್ದು, ಹುಡುಗಿಯ ಪೋಷಕರು ಇದನ್ನು ವಿರೋಧಿಸಿದ್ದಾರೆ. ಅಲ್ಲದೆ ಸಮಾಜದ ಮುಖಂಡರೂ ಸಮಕ್ಷಮವಾಗಿ ಪೊಲೀಸರ ನೆರವಿನಿಂದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ.

    ನಾವು ಕಾಲೇಜಿನಲ್ಲಿ ಪರಿಚಯವಾಗಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇವು. ಒಂದು ವಾರದ ಹಿಂದೆ ಆಕೆ ಕರೆ ಮಾಡಿ ಬಂದು ಕರೆದುಕೊಂಡು ಹೋಗು ಎಂದಿದ್ದಳು. ನಾನು ಕರೆದುಕೊಂಡು ಹೋಗಿದ್ದೆ. ಇಬ್ಬರು 6 ದಿನ ಒಟ್ಟಿಗೆ ಇದ್ದೆವು. ಈಗ ನಾವೇ ಪೊಲೀಸರಿಗೆ ಮಾಹಿತಿ ತಿಳಿಸೋಣ ಎಂದು ಬಂದಿದ್ದೆವು. ಆದರೆ ಪೊಲೀಸರು ಈಗ ರಾತ್ರಿ ಆಗಿದೆ. ಬೆಳಗ್ಗೆ ಮಾತನಾಡೋಣ ಎಂದು ಕಳಿಸಿದರು. ಆದರೆ ಇನ್ನು ಕರೆದುಕೊಂಡು ಬಂದಿಲ್ಲ. ಸಂಬಂಧದ ಬಗ್ಗೆ ನಮಗೇನು ಗೊತ್ತಿಲ್ಲ. ಆದರೆ ನನಗೆ ಅವಳೇ ಬೇಕು. ಒಂದು ವೇಳೆ ಪೊಲೀಸರು ಹುಡುಗಿಯನ್ನ ಕರೆ ತರದಿದ್ದರೆ ಪೊಲೀಸ್ ಸ್ಟೇಷನ್ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನವನಗರ ಠಾಣೆ ಎದುರು ಯುವಕ ಪ್ರತಿಭಟನೆ ನಡೆಸುತ್ತಿದ್ದಾನೆ.