Tag: ಸಂಬಂಧ

  • ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    – ಸಿಎಂ, ಪೊಲೀಸರಿಗೆ ವಿಡಿಯೋ ಟ್ಯಾಗ್

    ಜೈಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಸ್ಥಳೀಯ ಗುಂಪೊಂದು ಯುವಕನಿಗೆ ಬಲವಂತವಾಗಿ ಮೂತ್ರ ಕುಡಿಸಿ, ಥಳಿಸಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯುವಕನನ್ನು ಸಿರೋಹಿ ಜಿಲ್ಲೆಯ ಭೇವ್ ಪಲಾಡಿ ಗ್ರಾಮದ ನಿವಾಸಿ ಕಲುರಾಮ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಶಿಕ್ಷೆಯನ್ನು ವಿಧಿಸಿದ್ದಾರೆ. ಅದರಂತೆಯೇ ಶಿಕ್ಷೆಯ ಭಾಗವಾಗಿ ಜನಸಮೂಹದ ಮುಂದೆ ಮೂತ್ರ ಮತ್ತು ಶೂನಿಂದ ನೀರನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಮೇರ್ ಪುರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ತನ್ನ ಗ್ರಾಮದ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ. ಎಫ್‍ಐಆರ್ ಪ್ರಕಾರ, ಜೂನ್ 11ರಂದು ನಾನು ನನ್ನ ಚಿಕ್ಕಪ್ಪನನ್ನು ಭೇವ್‍ನಿಂದ ಭರೋಂಡಾ ಗ್ರಾಮಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ಪುರುಷರ ಗುಂಪೊಂದು ನನ್ನನ್ನು ಅಪಹರಿಸಿ ಬಲವಂತವಾಗಿ ಮದ್ಯದ ಬಾಟಲಿನಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆರೋಪಿಗಳು ನನಗೆ ಥಳಿಸಿದ್ದು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ಕಲುರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಎಸ್‍ಪಿ ರಾಹುಲ್ ಕೊಟೆಕಿ ಮಾತನಾಡಿ, ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಗ್ರಾಮದ ಕೆಲ ಜನರು ಕೋಪಗೊಂಡು ಆತನನ್ನು ಅಪಹರಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಾವು ಈ ಕುರಿತು ಎಫ್‍ಐಆರ್ ದಾಖಲಿಸಿದ್ದೇವೆ. 8 ಪ್ರಮುಖ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಕಲುರಾಮ್‍ಗೆ ಬಲವಂತವಾಗಿ ಮೂತ್ರ ಕುಡಿಯುವ ವಿಡಿಯೊಗಳನ್ನು ಯುವರಾಜ್ ರಾಕೇಶ್ ಎಂಬಾತ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಈ ವಿಡಿಯೋವನ್ನು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸ್ , ಅನೇಕ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿರೋಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರಾಜಸ್ಥಾನ ಗೃಹ ಇಲಾಖೆ ಆದೇಶಿಸಿದೆ.

  • ಅಪರೂಪದ ಬಾಂಧವ್ಯ- ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ಶ್ವಾನ

    ಅಪರೂಪದ ಬಾಂಧವ್ಯ- ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ಶ್ವಾನ

    ಮಡಿಕೇರಿ: ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ ಅವರ ಮನೆಯಲ್ಲಿ ಈ ಅಪರೂಪದ ದೃಶ ಕಂಡು ಬಂದಿದೆ. ಈ ನಾಯಿ ಪ್ರತಿನಿತ್ಯ ಬೆಕ್ಕಿನಮರಿಗೆ ಹಾಲು ನೀಡುತ್ತಿದೆ.

    ಈ ನಾಯಿ ಬೆಕ್ಕಿನ ಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ಬೆಕ್ಕಿನ ಮರಿಗೆ ತಾಯಿಯ ಪ್ರೀತಿ ತೋರಿಸುತ್ತಾ, ಬೆಕ್ಕಿನ ಮರಿ ಹತ್ತಿರ ಬಂದ ತಕ್ಷಣ ಮಲಗಿ ಹಾಲನ್ನು ನೀಡುತ್ತದೆ. ಈ ನಾಯಿ ಹಾಲಿಗಾಗಿ ಬರುವ ಬೆಕ್ಕಿನ ಮರಿಗಳನ್ನು ಎಂದಿಗೂ ದೂರ ಮಾಡಿಲ್ಲ. ಸದ್ಯ ಈ ಬೆಕ್ಕು ಮತ್ತು ನಾಯಿಯ ಸಂಬಂಧವನ್ನು ನೋಡಿ ಮನೆಯವರಿಗೂ ಅಚ್ಚರಿಯಾಗಿದೆ.

  • ಇನಿಯನೊಂದಿಗೆ ಪತ್ನಿ ಎಸ್ಕೇಪ್- ಒಂಟಿಯಾಗಿದ್ದ ಆಂಟಿಯ ಜೊತೆ ಜಂಟಿಯಾದ!

    ಇನಿಯನೊಂದಿಗೆ ಪತ್ನಿ ಎಸ್ಕೇಪ್- ಒಂಟಿಯಾಗಿದ್ದ ಆಂಟಿಯ ಜೊತೆ ಜಂಟಿಯಾದ!

    – ಅಕ್ರಮಕ್ಕೆ ಕತ್ತರಿ ಹಾಕಲು ಬಂದ ಅತ್ತೆಯನ್ನ ಚಾಕು ಇರಿದು ಕೊಂದ
    – ಆಕೆಗೆ ಗಂಡ ಇಲ್ಲ, ಇವನಿಗೆ ಹೆಂಡ್ತಿ ಇರಲಿಲ್ಲ

    ಚೆನ್ನೈ: ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧವನ್ನು ವಿರೋಧಿಸಿದಕ್ಕೆ ತಂದೆಯ ಸಹೋದರಿ (ಅತ್ತೆ)ಯನ್ನೆ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಗುಣಸುಂದರಿ ಮೃತ ಮಹಿಳೆ. ಗುಣಸುಂದರಿಯ ಹಿರಿಯ ಸಹೋದರನ ಮಗನಾದ ಆರೋಪಿ ಗಣೇಶನ್ (31) ಕೊಲೆ ಮಾಡಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಗುಣಸುಂದರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆರೋಪಿ ಗಣೇಶನ್ ಬಾಲಾಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇತ್ತೀಚೆಗೆ ಆರೋಪಿ ಗಣೇಶನ್ ಮನೆಗೆ ಹೋಗಿದ್ದ ಗುಣಸುಂದರಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಗಣೇಶನ್ ತನ್ನ ಚಿಕ್ಕಮ್ಮ ದೀಪಾ (ಮೃತ ಗುಣಸುಂದರಿಯ ಕಿರಿಯ ಸಹೋದರನ ಪತ್ನಿ) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದನ್ನು ವಿರೋಧಿಸಿದ್ದರಿಂದ ಗುಣಸುಂದರಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

    ಪೊಲೀಸ್ ತಂಡವು ಆರೋಪಿ ಗಣೇಶನ್‍ಗಾಗಿ ಶೋಧ ಕಾರ್ಯ ನಡೆಸಿ, ಬಂಧಿಸಿದ್ದಾರೆ. ಆರೋಪಿ ಗಣೇಶನ್ ಪತ್ನಿ ಮೂರು ವರ್ಷಗಳ ಹಿಂದೆಯೇ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ನಂತರ ಆರೋಪಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಏಕಾಂಗಿಯಾಗಿ ವಾಸಿಸುತ್ತಿದ್ದನು. ಇತ್ತ ಗುಣಸುಂದರಿಯ ಕಿರಿಯ ಸಹೋದರ ಲೋಗು ಆರು ತಿಂಗಳ ಹಿಂದೆ ಹೃದಯ ಕಾಯಿಲೆಯಿಂದ ಸಾವನ್ನಪ್ಪಿದ್ದನು. ಹೀಗಾಗಿ ಈತನ ಪತ್ನಿ ದೀಪಾ ಕೂಡ ಒಂಟಿಯಾಗಿದ್ದಳು. ಆರೋಪಿ ಗಣೇಶನ್ ಆಗಾಗ ದೀಪಾ ಮನೆಗೆ ಹೋಗುತ್ತಿದ್ದನು. ದಿನಕಳೆದಂತೆ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಪತ್ನಿ ಓಡಿಹೋದ ನಂತರ ಮೃತ ಗುಣಸುಂದರಿಯೇ ಆತನನ್ನು ನೋಡಿಕೊಳ್ಳುತ್ತಿದ್ದಳು. ಆದರೆ ದೀಪಾ ಜೊತೆಗೆ ಸಂಬಂಧ ಹೊಂದಿದ್ದ ಬಗ್ಗೆ ಗುಣಸುಂದರಿಗೆ ಗೊತ್ತಾಗಿದೆ. ಇದರಿಂದ ಆಗಾಗ ಗುಣಸುಂದರಿ ಆತನೊಂದಿಗೆ ಜಗಳವಾಡುತ್ತಿದ್ದಳು.

    ಒಂದು ದಿನ ಗುಣಸುಂದರಿ ಇಬ್ಬರನ್ನೂ ಮನವೊಲಿಸಲು ಗಣೇಶನ್ ಮನೆಗೆ ಹೋಗಿದ್ದಾಳೆ. ಅಲ್ಲಿ ಜಗಳ ನಡೆದಿದ್ದು, ಕೋಪದಿಂದ ಗುಣಸುಂದರಿ, ದೀಪಾಳ ಮೇಲೆ ಹಲ್ಲೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಗಣೇಶನ್ ಚಾಕುವಿನಿಂದ ಪದೇ ಪದೇ ಇರಿದು ಅತ್ತೆ ಗುಣಸುಂದರಿಯನ್ನು ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

  • ಮದ್ವೆಯಾಗಿ ಮಕ್ಕಳಿದ್ರೂ ಅನೈತಿಕ ಸಂಬಂಧ – ಪ್ರೇಮಿಯ ಜೊತೆ ಶವವಾಗಿ ಮಹಿಳೆ ಮತ್ತೆ

    ಮದ್ವೆಯಾಗಿ ಮಕ್ಕಳಿದ್ರೂ ಅನೈತಿಕ ಸಂಬಂಧ – ಪ್ರೇಮಿಯ ಜೊತೆ ಶವವಾಗಿ ಮಹಿಳೆ ಮತ್ತೆ

    ಚೆನ್ನೈ: ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಪಟ್ಟಣದಲ್ಲಿ ಭಾನುವಾರ ನಡೆದಿದೆ.

    ಮೃತರನ್ನು ಅಯ್ಯಮ್ಮಲ್ (26) ಮತ್ತು ಅನ್ಬು ನಾಥನ್ (32) ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, 8 ವರ್ಷಗಳ ಹಿಂದೆ ಮೃತ ಅಯ್ಯಮ್ಮಲ್‍ಗೆ ವಿಮಲ್ ಜೊತೆ ಮದುವೆ ಮಾಡಿದ್ದರು. ಈಕೆಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೂ ಅಯ್ಯಮ್ಮನ್, ನಾಥನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಮೃತ ನಾಥನ್ ಇನ್ನೂ ಮದುವೆಯಾಗಿರಲಿಲ್ಲ.

    ಅಯ್ಯಮ್ಮಲ್ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಕುಟುಂಬದವರಿಗೆ ಗೊತ್ತಾಗಿದೆ. ಬಳಿಕ ಮತ್ತೆ ಅನೈತಿಕ ಸಂಬಂಧ ಮುಂದುರಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ದಂಪತಿ ಸಂಬಂಧಿಕರಿಂದ ಬೆದರಿಕೆ ಇದ್ದುದ್ದರಿಂದ ಮನೆಯಿಂದ ಬೇರೆ ಊರಿಗೆ ಓಡಿ ಹೋಗಿದ್ದರು. ಆದರೆ ಭಾನುವಾರ ಇಬ್ಬರುಮೃತದೇಹಗಳು ಅಂಡಿಪಟ್ಟಿಯಲ್ಲಿ ಪತ್ತೆಯಾಗಿವೆ.

    ಭಾನುವಾರ ಅಂಡಿಪಟ್ಟಿಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಮೇಲೂರಿನ ಪೊಲೀಸ್ ತಂಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಇಬ್ಬರು ಬೈಕಿನಲ್ಲಿ ನಾಯಕಪಟ್ಟಿ ರಸ್ತೆಯ ಅಂಡಿಪಟ್ಟಿಯಲ್ಲಿ ಹೋಗುತ್ತಿದ್ದಾಗ ಗ್ಯಾಂಗ್‍ವೊಂದು ತಡೆದಿದೆ. ನಂತರ ಹಲ್ಲೆಕೋರರು ನಾಥನ್‍ನ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಅಯ್ಯಮ್ಮಲ್ ಕುಟುಂಬದವರು ನಾಥನ್ ಜೊತೆಗಿನ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವರೇ ಕೊಲೆ ಮಾಡಿಸಿರಬಹುದು ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಮೃತ ಮಹಿಳೆಯ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

  • ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೈದರಾಬಾದ್: ನಾನು ನಟಿ ಸೌಂದರ್ಯ ಅವರ ಜೊತೆ ಸಂಬಂಧ ಹೊಂದಿದ್ದೆ ಎಂದು ಟಾಲಿವುಡ್‍ನ ಖ್ಯಾತ ಖಳನಟ ಜಗಪತಿ ಬಾಬು ಅವರು ಹೇಳಿದ್ದಾರೆ.

    ಕನ್ನಡ, ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಅವರು 2004ರಲ್ಲಿ ಅಗಲಿದ್ದಾರೆ. ಆದರೆ ನಟಿ ಸೌಂದರ್ಯ ಜಗಪತಿ ಬಾಬು ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಸ್ವತಃ ಜಗಪತಿ ಬಾಬು ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಇತ್ತೀಚೆಗೆ ಮಾಧ್ಯಮಗಳ ಸಂವಾದದ ವೇಳೆ ಮಾತನಾಡಿದ ನಟ ಜಗಪತಿ, ಸೌಂದರ್ಯ ಅವರ ಜೊತೆ ಸಂಬಂಧ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

    “ಹೌದು, ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು. ನಾನು ಮತ್ತು ಸೌಂದರ್ಯ ಅವರ ಸಹೋದರ ಉತ್ತಮ ಸ್ನೇಹಿತರಾಗಿದ್ದೆವು. ಆದ್ದರಿಂದ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಈ ವೇಳೆ ಸೌಂದರ್ಯ ಅವರನ್ನ ಭೇಟಿ ಮಾಡುತ್ತಿದ್ದೆ. ಆದರೆ ಜನರು ಅವರ ಬಗ್ಗೆ ತಪ್ಪಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಸಂಬಂಧದ ಬಗ್ಗೆ ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ.

    ಸಾಮಾನ್ಯವಾಗಿ ಜನರು ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸುತ್ತಾರೆ. ಆದರೆ ನಮ್ಮಿಬ್ಬರ ಸಂಬಂಧ ವಿಭಿನ್ನವಾಗಿತ್ತು. ನಮ್ಮಿಬ್ಬರ ಮಧ್ಯೆ ಉತ್ತಮ ಭಾಂದವ್ಯವಿತ್ತು. ಅದು ಅವರೊಂದಿಗಿನ ನನ್ನ ಸಂಬಂಧ” ಎಂದು ಸ್ಪಷ್ಟ ಪಡಿಸಿದ್ದಾರೆ.

    ‘ರೈತು ಭಾರತಂ’ ಸಿನಿಮಾದ ಮೂಲಕ ಸೌಂದರ್ಯ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಸೌಂದರ್ಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಹಿಂದಿ ಸಿನಿಮಾದಲ್ಲೂ ಅಭಿನಯಸಿದ್ದಾರೆ. ಅವರು2004ರಲ್ಲಿ ಬಿಡುಗಡೆಯಾದ ‘ಆಪ್ತಮಿತ್ರ’ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಸದ್ಯಕ್ಕೆ ನಟ ಜಗಪತಿ ಬಾಬು ಸ್ಯಾಂಡಲ್‍ವುಡ್‍ನ ‘ರಾಬರ್ಟ್’ ಮತ್ತು ಉಪ್ಪಿ ರೂಪೀ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  • ಮಗಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದವನ ಬರ್ಬರ ಕೊಲೆ

    ಮಗಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದವನ ಬರ್ಬರ ಕೊಲೆ

    ಚಿಕ್ಕೋಡಿ/ಬೆಳಗಾವಿ: ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ನಡೆದಿದೆ.

    ನರಸಿಂಗಪೂರ ಗ್ರಾಮದ ನಿವಾಸಿ ಬೀರಪ್ಪ ವಿಠಲ ಕಮತಿ (27) ಕೊಲೆಯಾದ ಯುವಕ. ಬೀರಪ್ಪ ದುಂಡಪ್ಪಾ ಬಡಾಯಿ (35) ಮತ್ತು ಸತ್ತೆಪ್ಪಾ ಸಿದ್ದಪ್ಪಾ ಬಡಾಯಿ (25) ಕೊಲೆ ಮಾಡಿದ್ದು. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಕೂಡ ಅದೇ ಗ್ರಾಮದವರಾಗಿದ್ದು, ಇವರ ಮನೆಯ ಮಗಳ ಜೊತೆ ಮೃತ ಬೀರಪ್ಪ ಅನೈತಿಕ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾದ ತಕ್ಷಣ ಆರೋಪಿಗಳು ಕೋಪದಿಂದ ಕುಡಗೋಲಿನಿಂದ ಬೀರಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

    ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಂದೆ ಬಿದ್ದಿದ್ದ ಕಾಮುಕನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆಗೈದ್ಳು

    ಹಿಂದೆ ಬಿದ್ದಿದ್ದ ಕಾಮುಕನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆಗೈದ್ಳು

    – 20ಕ್ಕೂ ಅಧಿಕ ಬಾರಿ ಚುಚ್ಚಿ ಕೊಲೆ
    – ಮಕ್ಕಳಿಗಾಗಿ ಆತನಿಂದ ದೂರವಿದ್ಳು

    ಚೆನ್ನೈ: ಮಹಿಳೆಯೊಬ್ಬಳು ತನ್ನ ಹಿಂದೆ ಬಿದ್ದು ಹಿಂಸೆ ಕೊಡುತ್ತಿದ್ದ ಕಾಮುಕನ ಕಣ್ಣಿಗೆ ಖಾರದ ಪುಡಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಬೋಡಿನಾಯಕನೂರಿನಲ್ಲಿ ನಡೆದಿದೆ.

    ರಾಜನ್ (31) ಮೃತ ವ್ಯಕ್ತಿ. ಕೊಲೆ ಮಾಡಿದ ಬೋಡಿನಾಯಕನೂರಿನ ವಲರ್ಮತಿ (35)ಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ರಾಜನ್ ದೇಹದಲ್ಲಿ 20ಕ್ಕೂ ಹೆಚ್ಚು ಚಾಕುವಿನಿಂದ ಇರಿದ ಗಾಯಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಚಿನ್ನಕ್ಕನಾಲ್ ಬಿ.ಎಲ್.ರಾಮ್ ಮೂಲದ ರಾಜನ್ ಈಗಾಗಲೇ ಎರಡು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ಆರೋಪಿ ವಲರ್ಮತಿ ಈ ಹಿಂದೆ ಬಿ.ಎಲ್ ರಾಮ್‍ನಲ್ಲಿದ್ದಳು. ಈಕೆಗೂ ಪತಿ ವಿಚ್ಛೇದನ ನೀಡಿದ ನಂತರ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೋಡಿನಾಯಕನೂರಿನಲ್ಲಿ ವಾಸಿಸುತ್ತಿದ್ದಳು. ವಾಲರ್ಮತಿ ಏಲಕ್ಕಿ ಎಸ್ಟೇಟ್ ಹೊಂದಿದ್ದು, ಬಿ.ಎಲ್.ರಾಮ್ ಬಳಿ ಮನೆಯಿತ್ತು. ಈಕೆ ರಾಜನ್ ಜೀಪಿನಲ್ಲಿ ತನ್ನ ಎಸ್ಟೇಟಿಗೆ ಹೋಗುತ್ತಿದ್ದಳು. ಈ ವೇಳೆ ಇವರಿಬ್ಬರಿಗೂ ಪರಿಚಯರಾಗಿದ್ದು, ಸಂಬಂಧ ಹೊಂದಿದ್ದರು.

    ಸ್ವಲ್ಪ ದಿನಗಳ ನಂತರ ರಾಜನ್ ಜೊತೆಗೆ ಸಂಬಂಧ ತನ್ನ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ವಲರ್ಮತಿ ಅರಿತುಕೊಂಡು ರಾಜನ್‍ನಿಂದ ದೂರ ಆಗಿದ್ದಳು. ಇದರಿಂದ ಮೃತ ರಾಜನ್ ಕೋಪಗೊಂಡು ಆಕೆಗೆ ಫೋನ್ ಮಾಡಿ ಅಸಭ್ಯವಾಗಿ ಬೈಯುತ್ತಿದ್ದನು. ಅಲ್ಲದೇ ಅನೇಕ ರೀತಿಯಲ್ಲಿ ತೊಂದರೆಗಳನ್ನು ಕೊಡುತ್ತಿದ್ದನು. ಕೊನೆಗೆ ಆತನ ವಿಚಾರ ಸ್ಥಳೀಯರಿಗೆ ಗೊತ್ತಾಗಿ ಅವರು ಮತ್ತೆ ಮಹಿಳೆಗೆ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆದರೂ ರಾಜನ್ ವಲರ್ಮತಿಗೆ ತೊಂದರೆ ಕೊಡುತ್ತಿದ್ದನು. ಕೊನೆಗೆ ಮಹಿಳೆ ಬೋಡಿನಾಯಕನೂರಿಗೆ ಹೋಗಿದ್ದಳು. ಅಲ್ಲಿ ಮನೆಯ ಬಳಿಯೇ ಹೋಗಿ ಗಲಾಟೆ ಮಾಡುತ್ತಿದ್ದನು. ಕೊನೆಗೆ ಆತನ ಕಾಟದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತನ್ನ ಸಂಬಂಧಿಕರ ಮನೆಗೆ ಕಳುಹಿಸಿ, ರಾಜನ್‍ನನ್ನು ಮನೆಗೆ ಬರುವಂತೆ ಹೇಳಿದ್ದಾಳೆ.

    ರಾಜನ್ ಮನೆಗೆ ಬಂದ ತಕ್ಷಣ ಆತನ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಿ ಮನಬಂದಂತೆ ಚಾಕುವಿನಿಂದ ಸುಮಾರು 20ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾಳೆ. ಪರಿಣಾಮ ರಾಜನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ತಾನೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ರವಾನಿಸಿದ್ದಾರೆ. ಇತ್ತ ವಲರ್ಮತಿಯನ್ನು ಬಂಧಿಸಿದ್ದಾರೆ.

  • ಮಲಗಿದ್ದ ಪತಿಗೆ ಬೆಂಕಿ ಹಚ್ಚಿದ ಪತ್ನಿ – ಮಗಳು, ಅತ್ತೆ ಕೃತ್ಯದಲ್ಲಿ ಭಾಗಿ

    ಮಲಗಿದ್ದ ಪತಿಗೆ ಬೆಂಕಿ ಹಚ್ಚಿದ ಪತ್ನಿ – ಮಗಳು, ಅತ್ತೆ ಕೃತ್ಯದಲ್ಲಿ ಭಾಗಿ

    – ಪ್ರೇಯಸಿಯೊಂದಿಗೆ ಜೀವನ ಮಾಡಲು ನಿರ್ಧರಿಸಿದ್ದ

    ಚೆನ್ನೈ: ಮಹಿಳೆಯೊಬ್ಬಳು ಅನೈತಿಕ ಸಂಬಂಧ ಹೊಂದಿದ್ದ ಪತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿದ ನಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಪುಡನ್‍ಸಂಧೈನ ಜೀವನಗರ ಪ್ರದೇಶದಲ್ಲಿ ನಡೆದಿದ್ದು, ಪಿ.ಕಂದಸಾಮಿ (45) ಮೃತ ವ್ಯಕ್ತಿ. ಈ ಕೃತ್ಯದಲ್ಲಿ ಮೃತನ ಮಗಳು ಮತ್ತು ಅತ್ತೆ ಕೂಡ ಭಾಗಿಯಾಗಿದ್ದಾರೆ. ಕಂದಸಾಮಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.

    ಏನಿದು ಪ್ರಕರಣ?
    ಕಂದಸಾಮಿ ಕಟ್ಟಡ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದನು. ಈತನಿಗೆ ಅಂಗಮ್ಮಲ್ ಜೊತೆ ಮದುವೆವಾಗಿತ್ತು. ಆದರೂ ಸೇಲಂ ನಗರದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಈ ವಿಚಾರ ಪತ್ನಿಗೆ ಗೊತ್ತಾಗಿದೆ. ಹೀಗಾಗಿ ಇದೇ ವಿಚಾರವಾಗಿ ಕಳೆದ ಮೂರು ತಿಂಗಳಿಂದ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಕೊನೆಗೆ ಕಂದಸಾಮಿ ಏಪ್ರಿಲ್ ನಂತರ ಸೇಲಂ ಮಹಿಳೆಯೊಂದಿಗೆ ವಾಸಿಸಲು ನಿರ್ಧರಿಸಿದ್ದನು ಎಂದು ತಿಳಿದುಬಂದಿದೆ.

    ಇದರಿಂದ ಕೋಪಗೊಂಡ ಪತ್ನಿ ಕಂದಸಾಮಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಇದಕ್ಕಾಗಿ ತನ್ನ ಮಗಳು ಮತ್ತು ತಾಯಿ ಸಹಾಯವನ್ನು ಪಡೆದುಕೊಂಡಿದ್ದಾಳೆ. ಅದರಂತೆಯೇ ಗುರುವಾರ ಮುಂಜಾನೆ 4 ಗಂಟೆಗೆ ಪತಿ ಮಲಗಿ ನಿದ್ದೆ ಮಾಡುತ್ತಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮನೆಯಿಂದ ಪರಾರಿಯಾಗಿದ್ದಾರೆ. ಬೆಂಕಿ ಹೊತ್ತಿಕೊಂಡು ನಂತರ ಎಚ್ಚರಗೊಂಡ ಕಂದಸಾಮಿ ಕೂಗಾಡಿದ್ದಾನೆ. ಈತನ ಶಬ್ದ ಕೇಳಿ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೇಂತಮಂಗಲಂ ಹೇಳಿದರು.

    ಮಾಹಿತಿ ತಿಳಿದು ನಮಕ್ಕಲ್ ಎಸ್‍ಪಿ ಕಂದಸಾಮಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಆಗ ಸಾಯುವ ಮುನ್ನ ಕೆಲವು ಅಪರಿಚಿತ ವ್ಯಕ್ತಿಗಳು ಬಂದು ಪೆಟ್ರೋಲ್ ಸುರಿದು ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾನೆ.

    ಸಾಮುವ ಮುನ್ನ ಹೇಳಿದ ಹೇಳಿಕೆಯ ಆಧಾರದ ಮೇಲೆ ನಾವು ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ. ತನಿಖೆಯ ವೇಳೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ. ಆಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಮೂವರನ್ನು ಬಂಧಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ಸೆಲ್ವರಾಜ್ ಹೇಳಿದ್ದಾರೆ.

  • ರಹಸ್ಯ ಬಯಲಾಗುತ್ತೆಂದು ಬಾಕ್ಸ್‌ನಲ್ಲಿ ಯುವಕ ಲಾಕ್ – ಖುಷಿಯಲ್ಲಿ ಮರೆತು ಮಲಗಿದ್ಳು

    ರಹಸ್ಯ ಬಯಲಾಗುತ್ತೆಂದು ಬಾಕ್ಸ್‌ನಲ್ಲಿ ಯುವಕ ಲಾಕ್ – ಖುಷಿಯಲ್ಲಿ ಮರೆತು ಮಲಗಿದ್ಳು

    – ಸಂಬಂಧಿ ಸೋದರನೊಂದಿಗೆ ಮಹಿಳೆ ಸಂಬಂಧ
    – ಉಸಿರುಗಟ್ಟಿ ಯುವಕ ಸಾವು

    ಇಸ್ಲಾಮಾಬಾದ್: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ನಡೆದಿದೆ.

    ಅಹ್ಮದ್ (22) ಮೃತ ಯುವಕ. ಈತ ತನ್ನ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಆದರೆ ಮನೆಯವರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಮರದ ಬಾಕ್ಸ್‌ನಲ್ಲಿ ಅವಿತು ಕುಳಿತಿದ್ದನು. ಇದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    ಬೀಬಿ ಕೆಲವು ವರ್ಷಗಳ ಹಿಂದೆ ಪಂಜಾಬ್ ಪ್ರದೇಶದ ಹುಡುಗನೊಂದಿಗೆ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಉದ್ಯೋಗಕ್ಕಾಗಿ ವಿದೇಶದಲ್ಲಿದ್ದನು. ಬೇಬಿ ಮತ್ತು ಮಕ್ಕಳು ಪತಿಯ ಮನೆಯಲ್ಲಿದ್ದರು. ಅಹ್ಮದ್ ಮತ್ತು ಬೇಬಿ ಸಂಬಂಧಿಕರಾಗಿದ್ದು, ಸಂಬಂಧದಲ್ಲಿ ಸಹೋದರಿ-ಸಹೋದರ ಆಗಿದ್ದರು. ದಿನ ಕಳೆದಂತೆ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು.

    ಬೇಬಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಳು. ಹೀಗಾಗಿ ಇವರಿಬ್ಬರು ಭೇಟಿ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಅದಕ್ಕಾಗಿ ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿದ ನಂತರ ಅಹ್ಮದ್, ಬೇಬಿಯ ರೂಮಿಗೆ ಬಂದು ಅನೈತಿಕ ಸಂಬಂಧ ಹೊಂದುತ್ತಿದ್ದನು. ಪ್ರತಿದಿನ ಇದೇ ರೀತಿ ಇವರಿಬ್ಬರು ಸಂಬಂಧ ಹೊಂದುತ್ತಿದ್ದರು.

    ಒಂದು ದಿನ ಬೇಬಿಯ ರೂಮಿನಲ್ಲಿ ಏನೋ ಶಬ್ದ ಕೇಳಿಬಂದಿದೆ. ಈ ವೇಳೆ ಅಹ್ಮದ್ ಮತ್ತು ಬೇಬಿ ರೂಮಿನಲ್ಲಿದ್ದರು. ತಕ್ಷಣ ಕುಟುಂಬದ ಎಲ್ಲ ಸದಸ್ಯರು ಎಚ್ಚರಗೊಂಡು ಮನೆಯೆಲ್ಲಾ ಹುಡುಕಾಡಲು ಶುರು ಮಾಡಿದ್ದಾರೆ. ಆಗ ಬೇಬಿ ತನ್ನ ಅನೈತಿಕ ಸಂಬಂಧ ಮನೆಯವರ ಮುಂದೆ ಬಹಿರಂಗವಾಗುತ್ತದೆ ಎಂಬ ಭಯದಿಂದ ಗೆಳೆಯ ಅಹ್ಮದ್‍ನನ್ನು ಮರದ ಪೆಟ್ಟಿಗೆಯಲ್ಲಿ ಅಡಗಿಸಿದ್ದಾಳೆ. ಬೇಬಿ ರೂಮಿನಲ್ಲೂ ಹುಡುಕಾಟ ಮಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಬೇಬಿ ತನ್ನ ಅನೈತಿಕ ಸಂಬಂಧದ ಬಗ್ಗೆ ಯಾರಿಗೂ ಗೊತ್ತಾಗಿಲ್ಲ ಎಂಬ ಖುಷಿಯಲ್ಲಿ ಅಹ್ಮದ್‍ನ ಬಾಕ್ಸ್‌ನಲ್ಲಿ ಲಾಕ್ ಮಾಡಿರುವುದನ್ನು ಮರೆತು ಮಲಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆದರೆ ಆ ಮರದ ಬಾಕ್ಸ್‌ನಲ್ಲಿ ಒಂದು ಸಣ್ಣ ರಂಧ್ರವೂ ಇರಲಿಲ್ಲ. ಹೀಗಾಗಿ ಅಹ್ಮದ್‍ಗೆ ಉಸಿರಾಟಕ್ಕೆ ತೊಂದರೆಯಾಗಿದೆ. ಆಗ ಅಹ್ಮದ್ ಕಿರುಚಿಕೊಂಡಿದ್ದಾನೆ. ಆದರೆ ಆ ಶಬ್ದ ಬೇಬಿಗೆ ಕೇಳಿಸಲಿಲ್ಲ. ಕೊನೆಗೆ ಉಸಿರುಗಟ್ಟಿ ಅಹ್ಮದ್ ಬಾಕ್ಸ್‌ನಲ್ಲಿಯೇ ಮೃತಪಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ಬೇಬಿ ತಕ್ಷಣ ಬಾಕ್ಸ್‌ನಲ್ಲಿ ಅಹ್ಮದ್‍ನ ಲಾಕ್ ಮಾಡಿರುವ ಬಗ್ಗೆ ನೆನಪಾಗಿದೆ. ಓಡಿ ಹೋಗಿ ಬಾಕ್ಸ್ ಓಪನ್ ಮಾಡಿದ್ದಾಳೆ. ಅಷ್ಟರಲ್ಲಿ ಅಹ್ಮದ್ ಸಾವನ್ನಪ್ಪಿದ್ದನು.

    ಸದ್ಯಕ್ಕೆ ಈ ಕುರಿತು ಮಾಹಿತಿ ತಿಳಿದು ಪಂಜಾಬ್ ಪ್ರದೇಶದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತನ್ನ ಪ್ರಿಯಕರನ ಜೊತೆ ಮಗಳ ಮದ್ವೆ – ತಾಯಿಯ ರಹಸ್ಯ ತಿಳಿದು ಆತ್ಮಹತ್ಯೆ

    ತನ್ನ ಪ್ರಿಯಕರನ ಜೊತೆ ಮಗಳ ಮದ್ವೆ – ತಾಯಿಯ ರಹಸ್ಯ ತಿಳಿದು ಆತ್ಮಹತ್ಯೆ

    – ಅನೈತಿಕ ಸಂಬಂಧ ಮುಂದುವರಿಸಲು ಪುತ್ರಿಯ ಜೊತೆ ವಿವಾಹ
    – ಮದ್ವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ

    ಹೈದರಾಬಾದ್: ಅಳಿಯನ ಜೊತೆಯೇ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಸಹಿಸಲಾಗದೆ ಮದುವೆಯಾದ ಮೂರು ತಿಂಗಳಿನಲ್ಲೇ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೀರ್ ಪೇಟೆಯಲ್ಲಿ ನಡೆದಿದೆ.

    ವಂದನಾ (19) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆರೋಪಿ ತಾಯಿ ಅನಿತಾಳ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಅನಿತಾ ತನ್ನ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈಕೆಗೆ ವಂದನಾ (19) ಮತ್ತು ಸಂಜನಾ ಇಬ್ಬರು ಹೆಣ್ಣು ಮಕ್ಕಳಿದ್ದರು. ಅನಿತಾಗೆ ಒಂದು ವರ್ಷದ ಹಿಂದೆ ಪ್ರೇಮ್ ನವೀನ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಆಗಾಗ ನವೀನ್ ಕುಮಾರ್, ಅನಿತಾ ಮನೆಗೆ ಭೇಟಿ ನೀಡುತ್ತಿದ್ದನು.

    ತನ್ನ ಅನೈತಿಕ ಸಂಬಂಧ ಮುಂದುವರಿಸಲು ಅನಿತಾ ತನ್ನ ಹಿರಿಯ ಮಗಳು ವಂದನಾ ಜೊತೆ ಅನಿಲ್ ಕುಮಾರ್ ಮದುವೆ ಮಾಡಿಸಲು ಪ್ಲಾನ್ ಮಾಡಿದ್ದಳು. ವಂದನಾ ಹೈದರಾಬಾದ್‍ನಲ್ಲಿರುವ ಕಾಲೇಜಿನಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಳು. ಕೊನೆಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವಂದನಾಗೆ ತಾನು ಅನೈತಿಕ ಸಂಬಂಧ ಹೊಂದಿದ್ದವನ ಜೊತೆ ಮದುವೆ ಮಾಡಿಸಿದ್ದಾಳೆ. ತಾಯಿ ಮಗಳ ವಿವಾಹದ ನಂತರವೂ ನವೀನ್ ಕುಮಾರ್ ಜೊತೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಪತಿಯೊಂದಿಗೆ ತನ್ನ ತಾಯಿ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ವಂದನಾಗೆ ಗೊತ್ತಾಗಿದೆ. ಬಳಿಕ ಮಗಳು ತನ್ನ ತಾಯಿಗೆ ಪತಿಯಿಂದ ದೂರವಿರುವಂತೆ ಎಚ್ಚರಿಕೆ ಕೊಟ್ಟಿದ್ದಾಳೆ. ಇತ್ತ ಪತಿಯನ್ನು ತಾಯಿಯಿಂದ ದೂರ ಕರೆದುಕೊಂಡು ಹೋಗಲು ನಿರ್ಧರಿಸಿದ್ದಳು. ಆದರೆ ತಾಯಿ ಅನಿತಾ ಆತನನ್ನು ನನ್ನಿಂದ ದೂರ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಂದನಾಗೆ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇದೇ ವಿಚಾರವಾಗಿ ವಂದನಾ ಮತ್ತು ಪತಿ ನವೀನ್ ಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಕೊನೆಗೆ ತಾಯಿ ಮತ್ತು ಪತಿ ವರ್ತನೆಯಿಂದ ಬೇಸರಗೊಂಡಿದ್ದ ವಂದನಾ ಬೆಡ್‍ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಮೃತ ವಂದನಾ ಸಹೋದರಿ ಸಂಜನಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಸಹೋದರಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಅನಿತಾ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ವಂದನಾ ತಾಯಿ ಮತ್ತು ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.