Tag: ಸಂಬಂಧ

  • ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ

    ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ

    – ಅಮ್ಮನ ಅನೈತಿಕ ಸಂಬಂಧವನ್ನ ತಂದೆಗೆ ಹೇಳಿದ್ದೆ ತಪ್ಪಾಯ್ತು

    ಗಾಂಧಿನಗರ: ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಆರು ವರ್ಷದ ಮಗನನ್ನು ಕೊಲೆ ಮಾಡಿರುವ ಘಟನೆ ಗುಜರಾತ್‍ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದೆ.

    ಜಗದೀಶ್ ಠಾಕೋರ್ ಮೃತ ಬಾಲಕ. ಈತನ ತಾಯಿ ರಾಜುಲ್ ಮತ್ತು ತನ್ನ ಪ್ರಿಯಕರ ಸಂಜಯ್ ಠಾಕೋರ್ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಈಗಾಗಲೇ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಕೋವಿಡ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ರಾಜುಲ್ ಮತ್ತು ಸಂಜಯ್ ಠಾಕೋರ್ ಹೊಲದಲ್ಲಿ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ಆರು ವರ್ಷದ ಬಾಲಕ ನೋಡಿದ್ದಾನೆ. ಆಗ ತಮ್ಮ ಅಕ್ರಮ ಸಂಬಂಧದ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾರೆ. ಆದರೂ ಬಾಲಕ ಎಲ್ಲವನ್ನೂ ತಂದೆಗೆ ತಿಳಿಸಿದ್ದಾನೆ. ಮರುದಿನ ಬಾಲಕನನ್ನು ಅಪಹರಿಸಿ, ಕೊಲೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಾಲಕ ಜಗದೀಶ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಗದೀಶ್ ತನ್ನ ತಾಯಿಯನ್ನು ಹೊಲದಲ್ಲಿ ಸಂಜಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗ ನೋಡಿದ್ದಾನೆ. ಆಗ ಸಂಜಯ್ ಇದನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು. ನನ್ನ ಹೆಂಡತಿ ಸಂಜಯ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಮೊದಲೆ ಅನುಮಾನಿಸಿದ್ದೆ ಎಂದು ಬಾಲಕನ ತಂದೆ ಲಲಿತ್ ಠಾಕೋರ್ ಹೇಳಿದ್ದಾರೆ.

    ಬಾಲಕ ಜಗದೀಶ್ ನಾಪತ್ತೆಯಾದ ತಕ್ಷಣ ತಂದೆ ಲಲಿತ್ ಆತನನ್ನು ಹುಡುಕಾಡಿದ್ದಾರೆ. ಆಗ ಬಾಲ್ಸಾಸನ್ ರಸ್ತೆ ಬಳಿಯ ಹೊಲವೊಂದರಲ್ಲಿ ರಕ್ತದ ಮಡುವಿನಲ್ಲಿ ಜಗದೀಶ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಲಲಿತ್ ಸಂತಾಲ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    ಆತನ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಜಯ್ ಮತ್ತು ರಾಜುಲ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್-19 ವರದಿಗಳು ಬಂದ ನಂತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮದ್ವೆಯಾಗಿದ್ರೂ ಅನೈತಿಕ ಸಂಬಂಧ ಮುಂದುವರಿಸಲು ಹಠ – ಒರ್ವನ ಮೇಲಿನ ಸೇಡಿಗೆ ಜೋಡಿ ಕೊಲೆ

    ಮದ್ವೆಯಾಗಿದ್ರೂ ಅನೈತಿಕ ಸಂಬಂಧ ಮುಂದುವರಿಸಲು ಹಠ – ಒರ್ವನ ಮೇಲಿನ ಸೇಡಿಗೆ ಜೋಡಿ ಕೊಲೆ

    – ಮಹಿಳೆಯರ ಜೋಡಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

    ಬೆಳಗಾವಿ: ವಾರದ ಹಿಂದೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದ್ದ ಮಹಿಳೆಯರ ಜೋಡಿ ಕೊಲೆ ಪ್ರಕರಣದ ಹಂತಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    ಮಚ್ಛೆಯ ಲಕ್ಷ್ಮಿ ನಗರದಲ್ಲಿ ವಾಯು ವಿಹಾರ ಮಾಡುತ್ತಿದ್ದ ರೋಹಿನಿ ಹುಲಮನಿ (21) ಹಾಗೂ ರಾಜಶ್ರೀ ಬನ್ನಾರ (21) ಅವರ ಬರ್ಬರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಜೋಡಿ ಕೊಲೆ ಹಿಂದೆ ಮತ್ತೋರ್ವ ಮಹಿಳೆಯ ಸಂಚು ಹಾಗೂ ಅನೈತಿಕ ಸಂಬಂಧವೇ ಪ್ರಮುಖ ಕಾರಣ ಎಂಬುವುದು ತನಿಖೆಯಿಂದ ದೃಢಪಟ್ಟಿದೆ.

    ಬಂಧಿತರನ್ನು ಕಾಳ್ಯಾನಟ್ಟಿ ಗ್ರಾಮದ ಕಲ್ಪನಾ ಮಲ್ಲೇಶ್ (35), ಸುರತೆ ಗ್ರಾಮದ ಮಹೇಶ್ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ (19) ಗಣೇಪುರದ ರೋಹಿತ್ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ಬನ್ನಾರ (18) ಎಂದು ಗುರುತಿಸಲಾಗಿದೆ.

    ಕೊಲೆ ಪ್ರಕರಣದ ಮೊದಲನೇ ಆರೋಪಿ ಕಲ್ಪನಾ ಹಾಗೂ ಮೃತ ರೋಹಿನಿ ಪತಿ ಗಂಗಪ್ಪ ಹುಲಮನಿ ಮದುವೆಗೂ ಮುನ್ನ ಮಧ್ಯೆ ಅನೈತಿಕ ಸಂಬಂಧ ಇತ್ತು. ಬಳಿಕ ಕಲ್ಪನಾಳಿಂದ ದೂರವಾಗಿದ್ದ ಗಂಗಪ್ಪ ರೋಹಿನಿ ಜೊತೆಗೆ ವಿವಾಹವಾಗಿದ್ದನು. ಅಲ್ಲದೇ ರೋಹಿನಿ ಐದು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಮದುವೆ ಮುಂಚೆ ಗಂಗಪ್ಪನಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕಲ್ಪನಾ ಅನೈತಿಕ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ರೋಹಿಣಿ ವಿವಾಹದ ಬಳಿಕ ಗಂಗಪ್ಪ ಊರು ಬಿಟ್ಟು ಮಚ್ಚೆ ಗ್ರಾಮಕ್ಕೆ ಬಂದು ನೆಲೆಸಿದ್ದನು. ಇದರಿಂದ ಗಂಗಪ್ಪ ದೂರವಾಗಿದ್ದನ್ನು ಆರೋಪಿ ಕಲ್ಪನಾಗೆ ಸಹಿಸಿಕೊಳ್ಳಲು ಆಗಿಲ್ಲ. ಈ ಹಿಂದೆ ನೀಡಲಾಗಿದ್ದ ಹಣ ಮರಳಿಸುವಂತೆ ಗಂಗಪ್ಪನಿಗೆ ಆರೋಪಿ ಕಲ್ಪನಾ ಸತಾಯಿಸುತ್ತಿದ್ದಳು. ಅಲ್ಲದೇ ಗಂಗಪ್ಪನ ಜೊತೆಯೇ ಸಂಬಂಧ ಮುಂದುವರಿಸಲು ಹಠಕ್ಕೆ ಬಿದ್ದ ಕಲ್ಪನಾ, ರೋಹಿನಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಸಹೋದರಿ ಪುತ್ರ ಮಹೇಶ್ ಕೂಡ ಇದಕ್ಕೆ ಸಾಥ್ ನೀಡಿದ್ದಾನೆ. ಈ ವಿಷಯವನ್ನು ಮಹೇಶ್ ಸಂಬಂಧಿಕರ ಬಳಿ ಹೇಳಿ ಕೊಲೆಗೆ ಸಂಚು ರೂಪಿಸಿದ್ದಳು.

    ಅದರಂತೆಯೇ ಸೆಪ್ಟೆಂಬರ್ 26 ಸಂಜೆ ಸುಮಾರು 4 ಗಂಟೆಗೆ ಗರ್ಭಿಣಿ ರೋಹಿನಿ ಸ್ನೇಹಿತೆ ಜ್ಯೋತಿ ಜೊತೆಗೆ ಮಚ್ಛೆಯ ಲಕ್ಷ್ಮಿನಗರದಲ್ಲಿ ವಾಯುವಿಹಾರ ಮಾಡುತ್ತಿದ್ದಳು. ಆಗ ಬೈಕ್ ಮೇಲೆ ಬಂದ ನಾಲ್ವರು ಮೊದಲು ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಮೊದಲು ರೋಹಿನಿಯನ್ನು ಹತ್ಯೆ ಮಾಡಿದ್ದಾರೆ. ಆದರೆ ಸಾಕ್ಷ್ಯ ನಾಶಪಡಿಸಲು ರಾಜಶ್ರೀ ಬನ್ನಾರಳನ್ನು ಹತ್ಯೆಗೈದಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳನ್ನ ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಗಂಗಪ್ಪ ಹಾಗೂ ಕಲ್ಪನಾ ಮಧ್ಯೆ ವಿವಾಹ ಪೂರ್ವ ಇದ್ದ ದೈಹಿಕ ಸಂಬಂಧ ಜೋಡಿ ಕೊಲೆಗೆ ಕಾರಣವಾಗಿದೆ ಎಂದು ಬೆಳಗಾವಿ ಡಿಸಿಪಿ ಘಟನೆಯ ವಿವರವನ್ನು ತಿಳಿಸಿದರು.

  • ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    – ಮನೆಯವರಿಗೆ ನಿದ್ದೆ ಮಾತ್ರೆ ನೀಡಿದ್ರು
    – ಸಿಸಿಟಿವಿ ನೋಡಿ ಪತಿ, ಕುಟುಂಬದವರಿಗೆ ಶಾಕ್

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಮಗನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಕೊನೆಗೆ ಸೊಸೆಯ ಜೊತೆಯೇ ಎಸ್ಕೇಪ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪಾಣಿಪತ್‍ನ ಸೋನಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಾವನನ್ನು ಸಲೀಂ ಎಂದು ಗುರುತಿಸಲಾಗಿದೆ. ಸಲೀಂ ತನ್ನ ಸೊಸೆ ಜೊತೆ ಪರಾರಿಯಾಗಿದ್ದಾನೆ. ಇಬ್ಬರೂ ಪ್ಲಾನ್ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ಮಹಿಳೆ ಸಲೀಂ ಮಗ ಅಬ್ದುಲ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗಳು ಮತ್ತು 10 ತಿಂಗಳ ಮಗ ಇದ್ದನು. ಆದರೆ ಮಾವ ಸಲೀಂ ತನ್ನ ಸೊಸೆ ಜೊತೆಯೇ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇವರ ಸಂಬಂಧದ ಬಗ್ಗೆ ಮನೆಯ ಇತರರಿಗೆ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಅನೈತಿಕ ಸಂಬಂಧಕ್ಕೆ ಮನೆಯವರು ಅಡ್ಡಿಪಡಿಸುತ್ತಾರೆಂದು ಇಬ್ಬರೂ ಓಡಿ ಹೋಗಲು ನಿರ್ಧರಿಸಿದ್ದರು.

    ಅದರಂತೆಯೇ ಒಂದು ದಿನ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದರು. ಮನೆಯವರು ಊಟ ಮಾಡಿದ ನಂತರ ಎಲ್ಲರೂ ನಿದ್ದೆಗೆ ಜಾರಿದ್ದಾರೆ. ಮನೆಯ ಸದಸ್ಯರು ನಿದ್ದೆ ಮಾಡಿದ ನಂತರ ಮೊದಲಿಗೆ ಮಾವ ಸಲೀಂ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಸೊಸೆಗಾಗಿ ಕಾಯುತ್ತಿದ್ದನು. ಸ್ವಲ್ಪ ಸಮಯದ ನಂತರ 10 ತಿಂಗಳ ಮಗುವಿನ ಜೊತೆ ಸೊಸೆ ಮಾವನ ಜೊತೆ ಓಡಿ ಹೋಗಿದ್ದಾಳೆ.

    ಫೋನ್ ತೆಗೆದುಕೊಂಡು ಹೋದರೆ ಮನೆಯವರು ಟ್ರೇಸ್ ಮಾಡುತ್ತಾರೆ ಎಂದು ಇಬ್ಬರು ಫೋನ್‍ಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಮುಂಜಾನೆ ಮನೆಯವರು ಎದ್ದು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಸಂಬಂಧಿಕರ ಬಳಿ ಇವರ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಆಗ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಇಬ್ಬರು ಓಡಿ ಹೋಗಿರುವುದು ಕಂಡುಬಂದಿದೆ. ಮಾವ, ಸೊಸೆ ಪರಾರಿಯಾಗುವವರೆಗೂ ಇಬ್ಬರ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾಗಿಲ್ಲ. ಇದರಿಂದ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಸದ್ಯಕ್ಕೆ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    – ಕೊಲೆಯ ನಂತ್ರ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಹೋದ

    ಜೈಪುರ: ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೇ ಹೆಂಡತಿಯ ವಿವಾಹೇತರ ಸಂಬಂಧಕ್ಕೆ ಆಕೆಯ ತಾಯಿ ಕೂಡ ಸಪೋರ್ಟ್ ಮಾಡಿದ್ದಾಳೆ ಎಂದು ಅತ್ತೆಯನ್ನೂ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಂಜು ಸೈನಿ ಮತ್ತು ಈಕೆಯ ತಾಯಿ ಗೌರ ದೇವಿ ಕೊಲೆಯಾವದರು. ಆರೋಪಿಯನ್ನು ರಾಮ್ ಕಿಶನ್ ಸೈನಿ ಎಂದು ಗುರುತಿಸಲಾಗಿದೆ. ಆರೋಪಿ ಕೊಲೆ ಮಾಡಿದ ನಂತರ ತನ್ನ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿ ಮಂಜು ಸೈನಿ ಜೊತೆ ಅನೇಕ ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಸೈನಿ ಮತ್ತು ಆತನ ಕುಟುಂಬವು ಚಾಂಡಲೈ ರಸ್ತೆಯ ಶಿವಂ ಕಾಲೋನಿಯಲ್ಲಿರುವ ಅತ್ತೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ನಸುಕಿನ ಜಾವ ಸುಮಾರು 1 ಗಂಟೆಗೆ ಮಲಗಿದ್ದ ಪತ್ನಿ ಮಂಜು ಅತ್ತೆ ಗೌರ ದೇವಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ಆರೋಪಿಯ ಮಕ್ಕಳು ಮಲಗಿದ್ದರು ಎಂದು ತಿಳಿದುಬಂದಿದೆ.

    ಕೊಲೆ ಮಾಡಿದ ನಂತರ ಆರೋಪಿ ಸೈನಿ ತನ್ನ ಮಕ್ಕಳೊಂದಿಗೆ ಚಕ್ಸು ಪೊಲೀಸ್ ಠಾಣೆಗೆ ಹೋಗಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ತನ್ನ ಮಕ್ಕಳ ಮುಂದೆ ತಾನು ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹೇಳಿದ ನಂತರ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು, ಮಲಗಿದ್ದ ಸ್ಥಳದಲ್ಲಿಯೇ ಮಂಜು ಮತ್ತು ಗೌರ ದೇವಿ ಶವ ಪತ್ತೆಯಾಗಿದೆ. ನಂತರ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳದ ತಂಡವೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿವೆ.

    ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು, ಅದಕ್ಕೆ ನನ್ನ ಅತ್ತೆ ಕೂಡ ಬೆಂಬಲ ನೀಡುತ್ತಿದ್ದಳು. ಇಬ್ಬರು ಮಹಿಳೆಯರು ನನ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಹೀಗಾಗಿ ನಾನು ಬದುಕುಳಿಯಲು ಅವರನ್ನು ಕೊಲೆ ಮಾಡಿದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿದ್ದಾನೆ. ಮಕ್ಕಳಿಗೂ ಈ ಕೊಲೆಗೂ ಸಂಬಂಧ ಇಲ್ಲ. ಅಲ್ಲದೇ ತಾನೇ ಕೊಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಮದುವೆಯಾಗಿದ್ದರು ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

  • ಅನೈತಿಕ ಸಂಬಂಧ – ಪತಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಪತ್ನಿ

    ಅನೈತಿಕ ಸಂಬಂಧ – ಪತಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಪತ್ನಿ

    ಹಾಸನ: ಅನೈತಿಕ ಸಂಬಂಧದ ಅನುಮಾನದಿಂದ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ವಾಗಿನಕೆರೆಕಲ್ಲ ಹಳ್ಳಿಯಲ್ಲಿ ನಡೆದಿದೆ.

    52 ವರ್ಷದ ಚಂದ್ರೇಗೌಡ ಕೊಲೆಯಾದ ವ್ಯಕ್ತಿ. ಪತ್ನಿ ಇಂದ್ರಮ್ಮ ಮಚ್ಚಿನಿಂದ ಕೊಚ್ಚಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಮೃತ ಚಂದ್ರೇಗೌಡ ಆಗಿಂದಾಗ್ಗೆ ಮನೆಗೆ ಬಾರದೆ ಹೊರಗೆ ಇರುತ್ತಿದ್ದ ಎನ್ನಲಾಗಿದೆ. ಇದರಿಂದ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಚಂದ್ರಮ್ಮ ಗಲಾಟೆ ಮಾಡುತ್ತಿದ್ದಳು.

    ಇದೇ ವಿಚಾರಕ್ಕೆ ಮಂಗಳವಾರ ರಾತ್ರಿ ಕೂಡ ಚಂದ್ರೇಗೌಡ ಮತ್ತು ಇಂದ್ರಮ್ಮ ನಡುವೆ ಜಗಳ ನಡೆದಿದೆ. ಆಗ ಕೋಪದಿಂದ ಇಂದ್ರಮ್ಮ ಪತಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ. ತೀವ್ರವಾಗಿ ಗಾಯಗೊಂಡ ಚಂದ್ರೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪತ್ನಿ ಇಂದ್ರಮ್ಮನನ್ನು ವಶಕ್ಕೆ ಪಡೆದಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    – ತನಿಖೆ ವೇಳೆ ಮಹಿಳೆಯ ರಹಸ್ಯ ಬಯಲು

    ಲಕ್ನೋ: 23 ವರ್ಷದ ಯುವಕನೊಬ್ಬ ಮತ್ತು ಬರುವ ಔಷಧಿ ನೀಡಿ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಜಹಾಂಗೀರ್‌ಪುರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಮತ್ತು ಬರುವ ಔಷಧಿ ನೀಡಿ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

    ಈ ಘಟನೆ ನಡೆದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದರು. ಆದರೆ ಏಪ್ರಿಲ್‍ನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಮಹಿಳೆಯ ಪತಿ ಅಲ್ಲಿಯೇ ಇದ್ದರು. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಹಿಳೆ ಈಗ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.

    “ಆರೋಪಿ ವಿಶಾಲ್ ಬಾಡಿಗೆ ನೀಡುವ ನೆಪದಲ್ಲಿ ನಮ್ಮ ಮನೆಗೆ ಬಂದಿದ್ದ. ನಂತರ ಇಬ್ಬರು ಚಹಾವನ್ನು ಕುಡಿದೆವು. ಚಹಾ ಕುಡಿದ ನಂತರ ನನಗೆ ತಲೆ ಸುತ್ತು ಬಂತು. ಈ ವೇಳೆ ವಿಶಾಲ್ ನನ್ನ ಬಟ್ಟೆಗಳನ್ನು ಬಿಚ್ಚಿದ್ದನು. ನಂತರ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ನಾನು ವಿರೋಧಿಸಿದಾಗ ಆರೋಪಿ ನನ್ನನ್ನು ಥಳಿಸಿ ನನ್ನ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಚಹಾದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳೆ ಜೇವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಮಹಿಳೆಯ ಅನೈತಿಕ ಸಂಬಂಧ ಬಯಲಾಗಿದೆ.

    ಮಹಿಳೆ ಆರೋಪಿ ವಿಶಾಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಸಂಬಂಧದ ಬಗ್ಗೆ ತಿಳಿದು ಪತಿ ಕೆಲವು ದಿನಗಳ ಹಿಂದೆ ಅವಳಿಂದ ದೂರವಾಗಿ ವಾಸಿಸುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಫಿರೋಜ್ ಖಾನ್ ಹೇಳಿದ್ದಾರೆ.

  • ‘ಮದ್ವೆ ನಂತರವೂ ದೈಹಿಕ ಸಂಬಂಧ ಮುಂದುವರಿಸು’ – ಚಿಕ್ಕಪ್ಪನ ವಿರುದ್ಧ ಯುವತಿ ದೂರು

    ‘ಮದ್ವೆ ನಂತರವೂ ದೈಹಿಕ ಸಂಬಂಧ ಮುಂದುವರಿಸು’ – ಚಿಕ್ಕಪ್ಪನ ವಿರುದ್ಧ ಯುವತಿ ದೂರು

    – ಖಾಸಗಿ ವಿಡಿಯೋವನ್ನ ಯುವತಿಯ ತಂದೆಗೆ ಕಳುಹಿಸಿದ

    ಗಾಂಧಿನಗರ: ಅನೈತಿಕ ಸಂಬಂಧದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಚಿಕ್ಕಪ್ಪನ ವಿರುದ್ಧ ಯುವತಿಯೊಬ್ಬಳು ದೂರು ದಾಖಲಿಸಿರುವ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

    ಸೌರಾಷ್ಟ್ರ ಮೂಲದ 25 ವರ್ಷದ ಯುವತಿ ಸೂರತ್‍ನ ಪುನಾ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಸೀರೆಗಳಿಗೆ ಕುಸುರಿ ಮತ್ತು ಲೇಸ್ ವರ್ಕ್ ಮಾಡುವ ಮೂಲಕ ಜೀವನ ನಡೆಸುತ್ತಿದ್ದಳು. ಇದೀಗ 30 ವರ್ಷದ ತನ್ನ ಚಿಕ್ಕಪ್ಪ ಕರಣ್ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾನೆ ಎಂದು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

    ಏನಿದು ಪ್ರಕರಣ?
    ಆರೋಪಿ ಕರಣ್ ಯುವತಿಯ ತಂದೆಯ ಸಂಬಂಧಿಯಾಗಿದ್ದು, ಚಿಕ್ಕಪ್ಪ ಆಗಬೇಕು. ಈತ ಪ್ರತಿದಿನ ಯುವತಿಯ ಮನೆಗೆ ಭೇಟಿ ನೀಡುತ್ತಿದ್ದನು. ಆದರೆ ಯುವತಿಗೆ ತನ್ನನ್ನು ಚಿಕ್ಕಪ್ಪ ಎಂದು ಕರೆಯಬೇಡ ಎಂದಿದ್ದನು. ಒಂದು ವರ್ಷದ ಹಿಂದೆ ಕರಣ್ ಆಕೆಗೆ ಪ್ರಪೋಸ್ ಮಾಡಿದ್ದು, ನಂತರ ಇಬ್ಬರು ಸಂಬಂಧ ಹೊಂದಿದ್ದರು. ಸಂಬಂಧ ಹೊಂದಿದ ಒಂದು ತಿಂಗಳ ನಂತರ ಆತ ಇಬ್ಬರು ಒಟ್ಟಿಗೆ ಇದ್ದಾಗ ವಿಡಿಯೋಗಳನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಮೂರು ತಿಂಗಳ ಹಿಂದೆ ಯುವತಿಯ ಕುಟುಂಬದವರು ಆಕೆಗೆ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಈ ಬಗ್ಗೆ ತಿಳಿದು ಕರಣ್ ಮದುವೆಯ ನಂತರವೂ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವಂತೆ ಕೇಳಿದ್ದಾನೆ. ಆಗ ಯುವತಿಯ ಇದಕ್ಕೆ ನಿರಾಕರಿಸಿದ್ದು, ಆತನೊಂದಿಗಿನ ಸಂಬಂಧವನ್ನು ನಿಲ್ಲಿಸಿದ್ದಾಳೆ.

    ಇದರಿಂದ ಕೋಪಗೊಂಡ ಕರಣ್ ಖಾಸಗಿ ವಿಡಿಯೋವನ್ನು ಆಕೆಯ ತಂದೆಗೆ ಕಳುಹಿಸಿದ್ದಾನೆ. ಜೊತೆಗೆ ಆಕೆಯ ಕುಟುಂಬದವರಿಗೆ ಮತ್ತು ಇತರ ಕೆಲವರಿಗೆ ಕಳುಹಿಸಿದ್ದಾನೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಪೂನಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿ ದೂರು ದಾಖಲಿಸುತ್ತಿದ್ದಂತೆ ತನ್ನ ಊರಿಗೆ ಪರಾರಿಯಾಗಿದ್ದಾನೆ. ಹೀಗಾಗಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ.

  • ಹೆಂಡ್ತಿಗೆ ಪತಿಯನ್ನ ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ

    ಹೆಂಡ್ತಿಗೆ ಪತಿಯನ್ನ ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ

    – ಮೂವರು ಮಕ್ಕಳ ತಾಯಿ ಅನೈತಿಕ ಸಂಬಂಧ ಆರೋಪ

    ಭೋಪಾಲ್: ಮೂವರು ಮಕ್ಕಳ ತಾಯಿಯೊಬ್ಬಳು ಅನೈತಿಕ ಸಂಬಂಧ ಇಟ್ಟುಕೊಂಡಿರುವ ಆರೋಪದ ಮೇಲೆ ಸಾರ್ವಜನಿಕವಾಗಿ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ನಡೆದಿದೆ.

    ಪುರುಷರ ಗುಂಪೊಂದು ಮಹಿಳೆಗೆ ರಸ್ತೆಯಲ್ಲಿ ಕೋಲುಗಳಿಂದ ಹೊಡೆಯುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ತನ್ನ ಪತಿಯನ್ನು ಭುಜದ ಮೇಲೆ ಹೊತ್ತುಕೊಳ್ಳುವಂತೆ ಪುರುಷರು ಬಲವಂತ ಮಾಡಿದ್ದಾರೆ. ಅಲ್ಲದೇ ಆಕೆಯನ್ನು ಗೇಲಿ ಮಾಡುತ್ತಾ, ಬೆದರಿಸಿರುವುದನ್ನು ಕಾಣಬಹುದಾಗಿದೆ.

    ಕೊನೆಗೆ ಮಹಿಳೆ ತನ್ನ ಗಂಡನನ್ನು ಭುಜದ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ನಂತರ ಪತಿಯನ್ನು ಹೊತ್ತುಕೊಂಡು ಹೆಚ್ಚು ಸಮಯ ನಡೆಯಲು ಆಗದಿದ್ದಾಗ ಆಕೆಯನ್ನು ಕೋಲಿನಿಂದ ಹೊಡೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯ ಪತಿ ಸೇರಿದಂತೆ ಏಳು ಪುರುಷರ ವಿರುದ್ಧ ಝಾಬುವಾ ಕೊಟ್ವಾಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಸಿಂಗ್ ಗಡಾರಿಯಾ, ಈ ಘಟನೆ ಝಾಬುವಾದ ಛಿಪ್ರಿ ರನ್ವಾಸ್ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗುಜರಾತ್‍ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ಮತ್ತು ಆಕೆಯ ಪತಿ ಇತ್ತೀಚೆಗೆ ಮನೆಗೆ ಹೋಗಿದ್ದಾರೆ. ಮಹಿಳೆಯ ಪತಿ ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ಆದ್ದರಿಂದ ಕುಟುಂಬ ಮತ್ತು ಇತರ ಗ್ರಾಮಸ್ಥರು ಮಹಿಳೆಯನ್ನು ಸಾರ್ವಜನಿಕವಾಗಿ ಶಿಕ್ಷಿಸಲು ನಿರ್ಧರಿಸಿದರು ಎಂದು  ಹೇಳಿದ್ದಾರೆ.

    ಝಾಬುವಾ, ಅಲಿರಾಜ್‍ಪುರ ಮತ್ತು ಧಾರ್ ಜಿಲ್ಲೆಯಲ್ಲಿ ಇಂತಹ ಕ್ರೂರ ಶಿಕ್ಷೆಗಳು ಹೊಸತಲ್ಲ. ಇಂತಹ ಕೃತ್ಯಗಳಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಖಂಡಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಇದರಿಂದ ತಮಗೆ ತೊಂದರೆಯಾಗುತ್ತದೆ ಎಂದು ಭಯಪಡುತ್ತಾರೆ ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

  • ಯುವಕನೊಂದಿಗೆ ಸಂಬಂಧ ಹೊಂದಿದ್ದಾಗ ರೆಡ್ ಹ್ಯಾಂಡಾಗಿ ತಂದೆ, ಮಗನಿಗೆ ಸಿಕ್ಕಿಬಿದ್ಲು- ಇಬ್ಬರ ಬರ್ಬರ ಕೊಲೆ

    ಯುವಕನೊಂದಿಗೆ ಸಂಬಂಧ ಹೊಂದಿದ್ದಾಗ ರೆಡ್ ಹ್ಯಾಂಡಾಗಿ ತಂದೆ, ಮಗನಿಗೆ ಸಿಕ್ಕಿಬಿದ್ಲು- ಇಬ್ಬರ ಬರ್ಬರ ಕೊಲೆ

    ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ತಾಲೂಕಿನಲ್ಲಿ ನಡೆದಿದೆ.

    ಅಮರನಾಥ್ ಸೊಲ್ಲಾಪುರ (25) ಮತ್ತು ಸುನಿತಾ ತಳವಾರ (35) ಕೊಲೆಯಾದವರು. ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ತೋಟದ ಮನೆಯಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕೊಡಲಿಯಿಂದ ಕೊಚ್ಚಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಸುನಿತಾ ಪತಿ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈಕೆಯ ಜೊತೆ ಯುವಕ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಮಂಗಳವಾರ ರಾತ್ರಿ ಅಮರನಾಥ್ ಮಹಿಳೆಯ ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರು ತೋಟದ ಮನೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಸುನಿತಾ ತಂದೆ ರಾಮಗೊಂಡ ಮತ್ತು ಅಪ್ರಾಪ್ತ ಮಗ ಮನೆಗೆ ಬಂದಿದ್ದಾರೆ. ಆಗ ಇವರಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿದ್ದಾರೆ.

    ಇದರಿಂದ ಸುನಿತಾ ತಂದೆ ಮತ್ತು ಅಪ್ರಾಪ್ತ ಮಗ ಕೋಪಗೊಂಡಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆಯಾದ ಕೆಲ ದಿನದಲ್ಲೇ ಬೇರೆಯವನ ಜೊತೆ ಸಂಬಂಧ- 17ರ ಮಗಳ ನಾಲಿಗೆ ಕತ್ತರಿಸಿ ಕೊಲೆ

    ಮದ್ವೆಯಾದ ಕೆಲ ದಿನದಲ್ಲೇ ಬೇರೆಯವನ ಜೊತೆ ಸಂಬಂಧ- 17ರ ಮಗಳ ನಾಲಿಗೆ ಕತ್ತರಿಸಿ ಕೊಲೆ

    – 17 ವರ್ಷದ ಅಪ್ರಾಪ್ತೆಗೆ ವಿವಾಹ ಮಾಡಿದ್ದ ತಂದೆ
    – ಕುಟುಂಬಕ್ಕೆ ಕೆಟ್ಟ ಹೆಸರು ಬರೋ ಭಯದಲ್ಲಿ ಕೊಲೆ

    ಲಕ್ನೋ: ಮದುವೆಯಾದರೂ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅಪ್ರಾಪ್ತೆ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತೆ ಕೊಲೆಯಾದ ಮಗಳು. ಆರೋಪಿ ಸುಭಾಷ್ ತನ್ನ ಮಗಳ ನಾಲಿಗೆಯನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅಪ್ರಾಪ್ತೆಗೆ ಕೆಲವು ದಿನಗಳ ಹಿಂದೆ ಮದುವೆಯಾಗಿತ್ತು. ಆದರೆ ಆಕೆ ಪತಿಯ ಮನೆಯಿಂದ ಬಂದು ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ಅಪ್ರಾಪ್ತೆ ಅದೇ ಗ್ರಾಮದ ಚೋಟ್ಕಾವ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈತನ ಚಿಕ್ಕಪ್ಪ ಇಬ್ರಾಹಿಂ ಗ್ರಾಮದ ಮುಖ್ಯಸ್ಥರಾಗಿದ್ದನು. ಮಗಳ ಅನೈತಿಕ ಸಂಬಂಧದಿಂದ ಕೋಪಗೊಂಡ ಆರೋಪಿ ಸುಭಾಷ್ ಆಕೆಯ ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.

    ಆರೋಪಿ ಸುಭಾಷ್ ನೀಡಿದ್ದ ದೂರಿನ ಅನ್ವಯ ಪೋಕ್ಸೋ ಮತ್ತು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಅಪ್ರಾಪ್ತೆಯ ಗೆಳೆಯ ಚೋಟ್ಕಾವ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ ಬಾಲ್ಯ ವಿವಾಹದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಎಸ್‍ಪಿ ಹೇಳಿದರು.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸುಭಾಷ್‍ನನ್ನು ಬಂಧಿಸಿದ್ದಾರೆ. ನನ್ನ ಮಗಳ ಅನೈತಿಕ ಸಂಬಂಧದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

    ಈ ಹಿಂದೆಯೇ ಆರೋಪಿ ಸುಭಾಷ್ ತನ್ನ ಮಗಳ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದನು. ಇಬ್ರಾಹಿಂ ಮತ್ತು ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನು.