Tag: ಸಂಬಂಧಿಗಳು

  • ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ಲಕ್ನೋ: ಕೊಡಲಿ (Axe) ಬಳಸಿ ವ್ಯಕ್ತಿಯೋರ್ವ ತನ್ನ ಐವರು ಸಂಬಂಧಿಗಳನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ (Uttar Prdesh) ಮೈನ್‌ಪುರಿ (Mainpuri) ಜಿಲ್ಲೆಯಲ್ಲಿ ನಡೆದಿದೆ.

    ಗೋಕುಲಪುರ (Gokulpur) ಅರ್ಸರಾ ಹಳ್ಳಿಯಲ್ಲಿ ಮುಂಜಾನೆ ಸುಮಾರು 4:30ಯಿಂದ 5 ಗಂಟೆಯ ಒಳಗಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿವವೀರ್ ಯಾದವ್ (30) ಎಂಬಾತ ತನ್ನ ಇಬ್ಬರು ತಮ್ಮಂದಿರಾದ ಬುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21) ಎಂಬವರನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಅಲ್ಲದೇ ಸೋನು ಯಾದವ್‌ನ ಹೆಂಡತಿ ಸೋನಿಯನ್ನೂ (20) ಕೊಲೆ ಮಾಡಿದ್ದು, ಬಳಿಕ ಬಾಮೈದುನ ಸೌರಭ್ (23) ಮತ್ತು ಆತನ ಸ್ನೇಹಿತ ದೀಪಕ್ (20) ಎಂಬವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!

    ಇಷ್ಟು ಮಾತ್ರವಲ್ಲದೇ ಆರೋಪಿ ತನ್ನ ಹೆಂಡತಿ ಡಾಲಿ (24) ಮತ್ತು ಭರ್ತನ ಜಿಲ್ಲೆಯ ನಾಗ್ಲ ರಾಮ್‌ಲಾಲ್ ಪೊಲೀಸ್ ಠಾಣೆಯ ಇಟವಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಂಬಂಧಿಯಾದ ಸುಷ್ಮಾ (35) ಎಂಬವರನ್ನು ಗಾಯಗೊಳಿಸಿದ್ದಾನೆ. ಬಳಿಕ ದೇಶೀಯವಾಗಿ ತಯಾರಿಸಿದ ಪಿಸ್ತೂಲ್ (Pistol) ಒಂದರ ಸಹಾಯದಿಂದ ತನ್ನನ್ನು ತಾನು ಶೂಟ್ (Shoot) ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಗೋಕುಲಪುರ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಸಹೋದರ ಸೋನು ಯಾದವ್ ಮತ್ತು ಆತನ ಹೆಂಡತಿ ಸೋನಿ ಘಟನೆಯ ಹಿಂದಿನ ದಿನವಷ್ಟೇ ಮದುವೆಯಾಗಿದ್ದರು. ವಿವಾಹದ (Marriage) ನಂತರ ನವಜೋಡಿ ತಮ್ಮ ಮನೆಗೆ ಬಂದ ಬಳಿಕ ಹತ್ಯೆ ಮಾಡಲಾಗಿದೆ. ನವಜೋಡಿಗಳ ಕೊಲೆಯ ಬಳಿಕ ಬಾಮೈದುನ ಮತ್ತು ಆತನ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದು ಮೈನ್‌ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ

    ಆರೋಪಿಯ ಈ ಕೃತ್ಯಕ್ಕೆ ಯಾವುದೇ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆಯಲ್ಲಿ ಹತ್ಯೆಯಾದ ಸಂಬಂಧಿಗಳ ಮೃತದೇಹವನ್ನು ಮೈನ್‌ಪುರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡ ಆರೋಪಿಯ ಹೆಂಡತಿ ಡಾಲಿ ಮತ್ತು ಸಂಬಂಧಿ ಸುಷ್ಮಾ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

  • ಮದ್ವೆ ಮಾಡದ್ದಕ್ಕೆ ನಾಲ್ವರು ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ

    ಮದ್ವೆ ಮಾಡದ್ದಕ್ಕೆ ನಾಲ್ವರು ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ

    – ನೆರೆ ಮನೆಗೆ ಓಡಿ ಹೋಗಿ ತಾಯಿ ಬಚಾವ್
    – ಅರ್ಧ ಕಿ.ಮೀ ದೂರ ಓಡಿ ಪರಾರಿಯಾಗಲು ಯತ್ನ

    ಮಂಗಳೂರು: ಮಾನಸಿಕ ಅಸ್ವಸ್ಥನೊಬ್ಬ ತನ್ನ ನಾಲ್ವರು ರಕ್ತ ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿ ನಡಿದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾದ ಕಾಸರಗೋಡಿನ ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ಈ ಬರ್ಬರ ಹತ್ಯೆ ನಡೆದಿದೆ. ಇಲ್ಲಿನ ಕೃಷಿ ಕೂಲಿ ಕಾರ್ಮಿಕ ಸಹೋದರರಾದ ಬಾಬು (65), ವಿಠಲ (60), ಸದಾಶಿವ (55) ಮತ್ತು ಈ ಮೂವರು ಸೋದರಿ ದೇವಕಿ (58) ಕೊಲೆಯಾದ ದುರ್ದೈವಿಗಳು.

    ಕೊಲೆಯಾದ ದೇವಕಿ ಆರೋಪಿ ಉದಯ್‍ನ ಚಿಕ್ಕಮ್ಮನಾಗಿದ್ದು, ಉಳಿದ ಮೂವರು ಆರೋಪಿಯ ಮಾವಂದಿರಾಗಿದ್ದಾರೆ. ಆರೋಪಿ ಉದಯ್ ಅವಿವಾಹಿತನಾಗಿದ್ದು, ಕಳೆದ ಕೆಲ ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತನಗೆ ಮದುವೆ ಮಾಡಿಸಿಲ್ಲ ಎಂದು ತನ್ನ ಸಂಬಂಧಿಗಳೊಂದಿಗೆ ಆಗಾಗ ಆರೋಪಿ ಜಗಳ ಮಾಡುತ್ತಿದ್ದ.

    ಕೆಲವು ದಿನಗಳ ಹಿಂದೆ ಆರೋಪಿ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಆದರೆ ಸೋಮವಾರ ರಾತ್ರಿ ಮನೆಗೆ ಬಂದ ಆರೋಪಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದು ಮನೆಯಲ್ಲಿದ್ದವರ ಮೇಲೆ ದಾಳಿ ಮಾಡಿದ್ದಾನೆ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ತನ್ನ ತಾಯಿಯನ್ನೂ ಕೊಲೆ ಮಾಡಲು ಹೋಗಿದ್ದಾನೆ. ಅದೃಷ್ಟವಶಾತ್ ಆರೋಪಿಯ ತಾಯಿ ನೆರೆಮನೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

    ನೆರೆಮನೆಯವರು ಆಗಮಿಸುವಷ್ಟರಲ್ಲಿ ಆರೋಪಿ ಸುಮಾರು ಅರ್ಧ ಕಿಲೋಮೀಟರ್ ದೂರ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಸ್ಥಳೀಯರು ಕಟ್ಟತ್ತಾರಿನಿಂದ ಆತನನ್ನು ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆ ತಂದಿದ್ದಾರೆ. ಆರೋಪಿ ಮತ್ತೆ ಪರಾರಿಯಾಗಲೆತ್ನಿಸಿದಾಗ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಸಂಬಂಧಿಗಳನ್ನು ಸೇರಲು ಕಣ್ಣೀರಿಟ್ಟು, ಅಂಗಲಾಚುತ್ತಿರುವ ಕೂಲಿ ಕಾರ್ಮಿಕರು

    ಸಂಬಂಧಿಗಳನ್ನು ಸೇರಲು ಕಣ್ಣೀರಿಟ್ಟು, ಅಂಗಲಾಚುತ್ತಿರುವ ಕೂಲಿ ಕಾರ್ಮಿಕರು

    ಮಡಿಕೇರಿ: ಕೊರೊನಾ ಮಹಾಮಾರಿ ಕೇವಲ ಜೀವಗಳನ್ನು ಅಷ್ಟೇ ಹಿಂಡುತ್ತಿಲ್ಲ, ಜೊತೆಗೆ ಸಂಬಂಧಿಗಳನ್ನು ದೂರ ಮಾಡಿದೆ. ಹೌದು ದೇಶದ ಕೂಲಿ ಕಾರ್ಮಿಕರು, ಬಡವರು ಕೂಲಿ ಹರಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಿದ್ದರು. ಆದ್ರೆ ಕೊರೊನಾ ತಡೆಗಟ್ಟೆಲು ದೇಶವೇ ಲಾಕ್‍ಡೌನ್ ಆದ ಬಳಿಕ ತಮ್ಮ ಕರುಳ ಬಳ್ಳಿ ಸಂಬಂಧಿಗಳನ್ನೆಲ್ಲಾ ಬಿಟ್ಟು ದೂರದ ಊರುಗಳಿಗೆ ಹೋಗಿದ್ದ ಕೂಲಿ ಕಾರ್ಮಿಕರು ಅಲ್ಲಲ್ಲೇ ಬಂಧಿಗಳಾಗಿದ್ದಾರೆ.

    ಹೀಗೆ ರಾಜ್ಯದ ಗದಗ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಕ್ಕದ ಕೇರಳ ರಾಜ್ಯಕ್ಕೆ ಕೂಲಿ ಹರಸಿ ಹೋಗಿದ್ದ ಕಾರ್ಮಿಕರು ಕೊಡಗಿನ ವಿರಾಜಪೇಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಬಂಧಿಗಳಾಗಿ 27 ದಿನಗಳೇ ಕಳೆದಿವೆ. ದೇಶವೇ ಲಾಕ್‍ಡೌನ್ ಆಗುತ್ತಿದ್ದಂತೆ ಹೇಗಾದರೂ ಮಾಡಿ ತಮ್ಮ ಸೂರು ಸೇರಿದರೆ ಸಾಕು ಎಂದು ಹತ್ತಾರು ಕಿಲೋಮೀಟರ್ ನಡೆದೇ ಕೇರಳದಿಂದ ಹೊರಟ್ಟಿದ್ದ ಕಾರ್ಮಿಕರು ರಾಜ್ಯದ ಗಡಿ ಪ್ರವೇಶಿಸುತ್ತಿದ್ದಂತೆ ಬಂಧಿಯಾಗಿದ್ದರು. ಕೊರೊನಾ ವೈರಸ್ ಇರಬಹುದು, ಇಲ್ಲವೇ ಇವರಿಂದ ರಾಜ್ಯದ ಜನರಿಗೂ ಹರಡಬಹುದು ಎಂಬ ಉದ್ದೇಶದಿಂದ ರಾಜ್ಯದ ಗಡಿಭಾಗ ಕೊಡಗು ಜಿಲ್ಲೆಯ ವಿರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಅಂದಿನಿಂದ 27 ದಿನಗಳಿಂದಲೂ ಇವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಇಂದಿಗೂ ಕ್ವಾರಂಟೈನ್‍ನಿಂದ ಬಿಡುಗಡೆ ಸಿಗದೇ ತಮ್ಮ ಸ್ವಂತ ಊರು ತಲುಪಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಹೀಗಾಗಿ ಊರಿನಲ್ಲಿರುವ ತಮ್ಮ ಸಂಬಂಧಿಗಳು ಕರುಳಬಳ್ಳಿಗಳಿಂದ ದೂರವಾಗಿ ಬದುಕು ದೂಡುತ್ತಿದ್ದಾರೆ.

    ಮತ್ತೊಂದೆಡೆ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ತಮ್ಮ ಹೊಲಗದ್ದೆಗಳ ಹಸನು ಮಾಡಿಕೊಂಡು ಬೆಳೆ ಬಿತ್ತಬೇಕಾಗಿದೆ. ಆದ್ದರಿಂದ ತಮ್ಮನ್ನು ಊರುಗಳಿಗೆ ಕಳುಹಿಸಿಕೊಡಿ ಎಂದು ಬಂಧಿಯಾಗಿರುವ 75 ಮಂದಿ ಕಾರ್ಮಿಕರು ಅಂಗಲಾಚುತ್ತಿದ್ದಾರೆ.