Tag: ಸಂಬಂಧಿ

  • ಬಿಜೆಪಿ ಶಾಸಕನ ಸಂಬಂಧಿ ಮೇಲೆ ಗುಂಡಿನ ದಾಳಿ – ಸ್ಥಳದಲ್ಲೇ ಸಾವು

    ಬಿಜೆಪಿ ಶಾಸಕನ ಸಂಬಂಧಿ ಮೇಲೆ ಗುಂಡಿನ ದಾಳಿ – ಸ್ಥಳದಲ್ಲೇ ಸಾವು

    – ವಾಕಿಂಗ್ ಹೋಗಿದ್ದಾಗ ಗುಂಡಿಕ್ಕಿ ಹತ್ಯೆ

    ಲಕ್ನೋ: ವಾಕಿಂಗ್ ಹೋಗಿದ್ದ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಶಾಸಕನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ದುರ್ದೈವಿಯನ್ನು ನರೇಶ್ ತ್ಯಾಗಿ(58) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ ಎಂದಿನಂತೆ ಮನೆಯ ಬಳಿ ವಾಕಿಂಗ್ ಹೋಗಿದ್ದರು. ಈ ವೇಳೆ ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನರೇಶ್ ಮೇಲೆ ದಾಳಿ ಮಾಡಿದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಮೃತರನ್ನು ಮುರಾದನಗರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಜಿತ್ ಪಾಲ್ ಸಂಬಂಧಿ ಎಂದು ತಿಳಿದುಬಂದಿದೆ. ಮೃತ ನರೇಶ್, ಪಿಡಬ್ಲ್ಯುಡಿ ಗುತ್ತಿಗೆದಾರರಾಗಿ ಕೆಲ ಸ ನಿರ್ವಹಿಸುತ್ತಿದ್ದರು. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ದೇವಸ್ಥಾನದ ಸಮೀಪ ನರೇಶ್ ತ್ಯಾಗಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ನರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಈಗಾಗಲೇ ಎಸ್‍ಎಸ್‍ಪಿ 4 ತಂಡಗಳನ್ನು ರಚಿಸಲಾಗಿದೆ. ಇತ್ತ ಘಟನೆ ನಡೆದಿದ್ದಲ್ಲಿನ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

  • ಅಡವಿಗೆ ಕರ್ಕೊಂಡು ಹೋಗಿ ಅಪ್ರಾಪ್ತೆ ಮೇಲೆ ಸಂಬಂಧಿಕನಿಂದ್ಲೇ ಅತ್ಯಾಚಾರ

    ಅಡವಿಗೆ ಕರ್ಕೊಂಡು ಹೋಗಿ ಅಪ್ರಾಪ್ತೆ ಮೇಲೆ ಸಂಬಂಧಿಕನಿಂದ್ಲೇ ಅತ್ಯಾಚಾರ

    ದಾವಣಗೆರೆ: ಸಂಬಂಧಿ ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    23 ವರ್ಷದ ಆರೋಪಿ ತನ್ನ ಸಂಬಂಧಿ ಅಪ್ರಾಪ್ತೆಯನ್ನು ಹುಲ್ಲು ತರಲು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಯಾರು ಇಲ್ಲದ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ.

    ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಅಪ್ರಾಪ್ತೆ ಆರೋಪಿಯ ಭಯದಿಂದ ಯಾರಿಗೂ ಹೇಳಿರಲಿಲ್ಲ. ಆದರೆ ಅಪ್ರಾಪ್ತೆ ಅನಾರೋಗ್ಯದಿಂದ ಬಳಲಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಅಪ್ರಾಪ್ತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪ್ರಾಪ್ತೆ ನೀಡಿದ ಮಾಹಿತಿ ಆಧಾರದ ಮೇರೆಗೆ ಜಗಳೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

  • ಈಶ್ವರಪ್ಪ ಸಂಬಂಧಿಗೆ ಕೊರೊನಾ- ಸಚಿವರ ಕುಟುಂಬದವರಿಗೆ ಕೋವಿಡ್-19 ಪರೀಕ್ಷೆ

    ಈಶ್ವರಪ್ಪ ಸಂಬಂಧಿಗೆ ಕೊರೊನಾ- ಸಚಿವರ ಕುಟುಂಬದವರಿಗೆ ಕೋವಿಡ್-19 ಪರೀಕ್ಷೆ

    ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹತ್ತಿರದ ಸಂಬಂಧಿಯೊಬ್ಬರಿಗೆ ಸೋಮವಾರ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇವರು ಸಚಿವರ ಮನೆಯಲ್ಲೇ ಹೆಚ್ಚು ಇರುತ್ತಿದ್ದರಿಂದ ಕುಟುಂಬಸ್ಥರಿಗೆ ಆತಂಕ ಎದುರಾಗಿದ್ದರಿಂದ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಎಲ್ಲರ ವರದಿ ನೆಗೆಟಿವ್ ಬಂದಿದೆ.

    ಸಚಿವರ ಹತ್ತಿರದ ಸಂಬಂಧಿ ಆಗಿದ್ದರಿಂದ ಸೋಂಕಿತ ವ್ಯಕ್ತಿ ಹೆಚ್ಚಾಗಿ ಸಚಿವರ ಮನೆಯಲ್ಲಿಯೇ ಇರುತ್ತಿದ್ದರು. ತಮ್ಮ ಹತ್ತಿರದ ಸಂಬಂಧಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸಚಿವ ಈಶ್ವರಪ್ಪ ಕುಟುಂಬಸ್ಥರಿಗೆ ಶಾಕ್ ಆಗಿತ್ತು. ಹೀಗಾಗಿ ಸಚಿವ ಈಶ್ವರಪ್ಪ, ಸಚಿವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಸಚಿವರ ಆಪ್ತ ಸಹಾಯಕರು ಹಾಗೂ ಮನೆ ಕೆಲಸದವರು ಸೇರಿ ಒಟ್ಟು 21 ಮಂದಿ ಕೊರೊನಾ ತಪಾಸಣೆಗೆ ಒಳಗಾಗಿದ್ದರು.

    ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಸಚಿವರ ಕುಟುಂಬ ಇದೀಗ ನಿಟ್ಟುಸಿರು ಬಿಟ್ಟಿದೆ. ಕೊರೊನಾ ವರದಿಯಲ್ಲಿ ನನ್ನದೂ ಸೇರಿದಂತೆ ನಮ್ಮ ಕುಟುಂಬಸ್ಥರು ಹಾಗೂ ಕೆಲಸದವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಯಾವುದೇ ಆತಂಕ ಇಲ್ಲ. ಜೊತೆಗೆ ಕ್ವಾರಂಟೈನ್‍ಗೆ ಒಳಗಾಗುವ ಅವಶ್ಯಕತೆ ಸಹ ಇಲ್ಲ. ನಾಳೆಯಿಂದಲೇ ಮತ್ತೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಯನ್ನು ಕೂಡಲೇ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ವಾರದಲ್ಲಿ 2 ಬಾರಿಯಂತೆ ಅಪ್ರಾಪ್ತೆ ಜೊತೆ 17ರ ಹುಡ್ಗ 100 ಬಾರಿ ಸೆಕ್ಸ್

    ವಾರದಲ್ಲಿ 2 ಬಾರಿಯಂತೆ ಅಪ್ರಾಪ್ತೆ ಜೊತೆ 17ರ ಹುಡ್ಗ 100 ಬಾರಿ ಸೆಕ್ಸ್

    – ಮಗನ ಕೃತ್ಯ ಮುಚ್ಚಿಟ್ಟ ತಂದೆ
    – ಬಾತ್‍ಟಬ್‍ನಲ್ಲಿ 11ರ ಅಪ್ರಾಪ್ತೆ ಮಗುವಿಗೆ ಜನ್ಮ

    ವಾಷಿಂಗ್ಟನ್: ಅಪ್ರಾಪ್ತ ಹುಡುಗನೊಬ್ಬ ವಾರಕ್ಕೆ ಎರಡು ಬಾರಿಯಂತೆ 100 ಬಾರಿ ಅಪ್ರಾಪ್ತೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇದೀಗ ಆಕೆ ಮಗುವಿಗೆ ಜನ್ಮ ನೀಡಿರುವ ಘಟನೆ ಅಮೆರಿಕದ ಮಿಸ್ಸೌರಿಯದಲ್ಲಿ ನಡೆದಿದೆ.

    ಮಗನ ಕೃತ್ಯಕ್ಕೆ ತಂದೆ ಸಾಥ್ ನೀಡಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡ ನಂತರ ಮಿಸ್ಸೌರಿಯ ಪೊಲೀಸರು ಮಗ ಮತ್ತು ತಂದೆ ಇಬ್ಬರನ್ನು ಬಂಧಿಸಿದ್ದಾರೆ. ನಾರ್ವಿನ್ ಲಿಯೊನಿಡಾಸ್ ಲೋಪೆಜ್ ಕ್ಯಾಂಟೆ ಮತ್ತು ತಂದೆ ಗೊನ್ಜಾಲೆಜ್ ಅಪ್ರಾಪ್ತೆ ಜನ್ಮ ನೀಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು.

    ಈ ವೇಳೆ ನಮ್ಮ ಮನೆ ಮುಂದೆ ಯಾರೋ ಮಗುವನ್ನು ಬಿಟ್ಟು ಹೋಗಿದ್ದರು ಎಂದು ಹೇಳಿದ್ದರು. ಆದರೆ ಮಗು ಆಸ್ಪತ್ರೆಗೆ ಬಂದಾಗ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ವೈದ್ಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಪೊಲೀಸರು ಎರಡು ದಿನಗಳ ನಂತರ ಗೊನ್ಜಾಲೆಜ್ ಮತ್ತು ಲೋಪೆಜ್ ಮನೆಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಆಗ ತನ್ನ ಮಗ ಮಗುವಿನ ತಂದೆ ಎಂದು ಗೊನ್ಜಾಲೆಜ್ ಹೇಳಿದ್ದಾನೆ. ಮಗುವಿನ ತಾಯಿ ಲೋಪೆಜ್ ಕ್ಯಾಂಟೆಯ ಸಂಬಂಧಿಯಾಗಿದ್ದು, ಆಕೆ 11 ವರ್ಷದ ಅಪ್ರಾಪ್ತೆಯಾಗಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಬಾಲಕಿ ಗರ್ಭಿಣಿಯಾಗಿದ್ದಾಳೆ ಅಥವಾ ಮಗ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಗೊನ್ಜಾಲೆಜ್‍ಗೆ ತಿಳಿದಿರಲಿಲ್ಲ. ಅಪ್ರಾಪ್ತೆ ಬಾತ್‍ಟಬ್‍ನಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಮಗನೇ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ತಿಳಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಆರೋಪಿ ಲೋಪೆಜ್ ಕ್ಯಾಂಟೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನನಗೆ ಆಕೆ ಗರ್ಭಿಣಿ ಎಂದು ತಿಳಿದಿರಲಿಲ್ಲ. ನಾನು ಸುಮಾರು 100 ಬಾರಿ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ವಾರಕ್ಕೆ ಎರಡು ಬಾರಿ ಸೆಕ್ಸ್ ಮಾಡುತ್ತಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿ ಲೋಪೆಜ್ ಕ್ಯಾಂಟೆ ಮತ್ತು ತಂದೆ ಗೊನ್ಜಾಲೆಜ್ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ವಾಸುಕಿ ವೈಭವ್ ಅವರ ಸಂಬಂಧಿಯೊಬ್ಬರು ನಿಧನರಾಗಿದ್ದು, ಈ ವಿಚಾರವನ್ನು ವಾಸುಕಿ ವೈಭವ್ ಅವರಿಗೆ ತಿಳಿಸಿದ್ದಾರೆ.

    ಹೌದು. ವಾಸುಕಿ ವೈಭವ್ ಅವರ ಅಪ್ಪನ ಸಂಬಂಧಿ ಶ್ರೀವಸ್ತಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಬಿಗ್‍ಬಾಸ್ ವಾಸುಕಿಯನ್ನು ರೂಮಿಗೆ ಕರೆದಿದ್ದರು. ಆಗ ವಾಸುಕಿ ನಿಮ್ಮ ಮನೆಯವರಿಂದ ಒಂದು ಸುದ್ದಿ ಬಂದಿದೆ. ಇದು ಪ್ರಮುಖವಾದ ಸುದ್ದಿಯಾಗಿದೆ. ಹಾಗಾಗಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಮಾವ ಶ್ರೀವಸ್ತಾ ಅವರು ತೀವ್ರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ.

    ಈ ಸುದ್ದಿ ತಿಳಿದು ತಕ್ಷಣ ವಾಸುಕಿ ಬಿಗ್‍ಬಾಸ್ ದಯವಿಟ್ಟು ನಾನು ಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಮುಗಿದಿವೆ ಎಂದು ಬಿಗ್‍ಬಾಸ್ ತಿಳಿಸಿದ್ದಾರೆ. ತಕ್ಷಣ ವಾಸುಕಿ ಜೋರಾಗಿ ಅಳಲು ಶುರು ಮಾಡಿದ್ದಾರೆ. ನಂತರ ನೀವು ಇಚ್ಛಿಸಿದರೆ ಶೈನ್‍ನ ಕರೆಸುವುದಾಗಿ ಕೇಳಿದ್ದಾರೆ. ವಾಸುಕಿ ಕರೆಸಿ ಎಂದ ತಕ್ಷಣ ಬಿಗ್‍ಬಾಸ್ ಶೈನ್‍ನ ರೂಮಿಗೆ ಕರೆಸಿದ್ದಾರೆ. ವಾಸುಕಿಯ ಅಳುವಿನ ಶಬ್ದ ಕೇಳಿ ಶೈನ್ ಓಡಿ ಹೋಗಿ ವಾಸುಕಿಯನ್ನು ಏನಾಯಿತು ಎಂದು ಕೇಳಿದ್ದಾರೆ.

    ಆಗ ವಾಸುಕಿ ನಮ್ಮ ಸಂಬಂಧಿಯೊಬ್ಬರು ನಿಧನರಾಗಿದ್ದಾರೆ ಎಂದು ಹೇಳಿ ಜೋರಾಗಿ ಅತ್ತಿದ್ದಾರೆ. ಆಗ ಶೈನ್ ಸಮಾಧಾನ ಮಾಡಿದ್ದಾರೆ. ಆದರೂ ವಾಸುಕಿ ಜೋರಾಗಿ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ. ನಂತರ ಮನೆಯವರ ಬಳಿ ನಮ್ಮ ಅಪ್ಪನ ಸಂಬಂಧಿ ಮಾವ ಮೃತಪಟ್ಟಿದ್ದಾರೆ. ಅವರು ತುಂಬಾ ಬೇಕಾದವರು, ಹೋಗಬೇಕು ಎಂದು ಕೇಳಿದೆ. ಆದರೆ ಈಗಾಗಲೇ ಅಂತ್ಯಸಂಸ್ಕಾರ ಮುಗಿದಿದೆ ಎಂದು ಬಿಗ್‍ಬಾಸ್ ತಿಳಿಸಿದರು ಎಂದು ಮತ್ತೆ ಕಣ್ಣೀರು ಹಾಕಿದ್ದಾರೆ. ಆಗ ಮನೆಯವರೆಲ್ಲಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳಿ ಎಂದು ಹೇಳಿ ವಾಸುಕಿಯನ್ನು ಸಮಾಧಾನ ಪಡಿಸಿದ್ದಾರೆ.

  • ನಮ್ಮ ಮನೆಯಲ್ಲಿ ಈಗ ಚಿನ್ನವಿದೆ, ನಾನು ಶ್ರೀಮಂತ: ಖುಷಿ ಹಂಚಿಕೊಂಡ್ರು ಸುದೀಪ್

    ನಮ್ಮ ಮನೆಯಲ್ಲಿ ಈಗ ಚಿನ್ನವಿದೆ, ನಾನು ಶ್ರೀಮಂತ: ಖುಷಿ ಹಂಚಿಕೊಂಡ್ರು ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಮನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದು, ಈ ಬಗ್ಗೆ ನಮ್ಮ ಮನೆಯಲ್ಲಿ ಈಗ ಚಿನ್ನವಿದೆ. ನಾನು ಶ್ರೀಮಂತನಾಗಿದ್ದೇನೆ ಎಂದು ನಟ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

    ನಟ ಸುದೀಪ್ ಮತ್ತು ಗಣೇಶ್ ಭೇಟಿಯಾಗಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, “ನಾನು ಗಣೇಶ್ ಜೊತೆ ಮಾತನಾಡುತ್ತಿದ್ದಾಗ ಗಣೇಶ್ ನಮ್ಮ ಸಂಬಂಧಿ ಎಂದು ಗೊತ್ತಾಯಿತು. ಈಗ ನಮ್ಮ ಮನೆಯಲ್ಲೂ ಚಿನ್ನ ಇದೆ. ನಾನು ಕೂಡ ಶ್ರೀಮಂತನಾಗಿದ್ದೇನೆ” ಎಂದು ಬರೆದು ಎರಡು ನಗು ಎಮೋಜಿಯನ್ನು ಹಾಕಿ ಗಣೇಶ್ ಮತ್ತು ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಕೊಡಗು ಸಂತ್ರಸ್ತರಿಗಾಗಿ ಸ್ಯಾಂಡಲ್‍ವುಡ್ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್(ಕೆಸಿಸಿ) ಕ್ರಿಕೆಟ್ ಆಟವನ್ನು ಆಡಿದ್ದರು. ಎರಡು ದಿನಗಳ ಕಾಲ ಕೆಸಿಸಿ ನಡೆದಿದ್ದು, ಸ್ಟಾರ್ ನಟರು ಭಾಗಹಿಸಿದ್ದರು. ಈ ಆಟದಲ್ಲಿ ಗಣೇಶ್ ತಂಡ ಗೆಲುವನ್ನು ಸಾಧಿಸಿತ್ತು. ಅಂದಿನಿಂದಲೂ ಗಣೇಶ್ ಮತ್ತು ಸುದೀಪ್ ನಡುವೆ ಸ್ನೇಹ ಇತ್ತು. ಆದರೆ ಕೆಸಿಸಿ ಆಟದಿಂದ ಇವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದಾರೆ.

    ಸುದೀಪ್ ಮಾಡಿರುವ ಟ್ವೀಟನ್ನೇ ಗಣೇಶ್ ಅವರು ರೀಟ್ವೀಟ್ ಮಾಡಿದ್ದಾರೆ, ಸದ್ಯಕ್ಕೆ ಸುದೀಪ್ ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಪೈಲ್ವಾನ್’ ಮತ್ತು ತೆಲುಗಿನ ‘ಸೈರಾ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಗಣೇಶ್ ‘ಆರೆಂಜ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯೊಂದಿಗೆ ಅನೈತಿಕ ಸಂಬಂಧ – ಸಂಬಂಧಿಕನನ್ನು ಕೊಂದು ಸುಟ್ಟ ಪತಿ

    ಪತ್ನಿಯೊಂದಿಗೆ ಅನೈತಿಕ ಸಂಬಂಧ – ಸಂಬಂಧಿಕನನ್ನು ಕೊಂದು ಸುಟ್ಟ ಪತಿ

    ಬೆಂಗಳೂರು: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿರುವ ಘಟನೆ ಬನ್ನೇರುಘಟ್ಟ ಬಳಿಯ ಭೂತನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಬಾಣಸವಾಡಿ ನಿವಾಸಿ ವಿಜಯಕುಮಾರ್ (29) ಕೊಲೆಯಾದ ವ್ಯಕ್ತಿ. ರುದ್ರೇಶ್ ಕೊಲೆ ಮಾಡಿದ ಆರೋಪಿ. ಐದು ದಿನಗಳ ಹಿಂದೆಯೇ ವಿಜಯ ಕುಮಾರ್ ಕಾಣೆಯಾಗಿರುವ ಕುರಿತು ಆತನ ಕುಟುಂಬದವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

    ನಡೆದದ್ದು ಏನು?: ರುದ್ರೇಶ್ ಹಾಗೂ ವಿಜಯ ಕುಮಾರ್ ಇಬ್ಬರು ಸಂಬಂಧಿಕರು, ಜೊತೆಗೆ ಸ್ನೇಹಿತರೂ ಆಗಿದ್ದರು. ಆದರೆ ರುದ್ರೇಶ್ ಪತ್ನಿಯೊಂದಿಗೆ ವಿಜಯಕುಮಾರ್ ಅನೈತಿಕ ಸಂಬಂಧ ಹೊಂದಿದ್ದನು. ವಿಷಯ ಗೊತ್ತಾಗುತ್ತಿದ್ದಂತೆ ರುದ್ರೇಶ್ ಈ ಮೊದಲು ವಿಜಯ ಕುಮಾರ್ ಕೊಲೆಗೆ ಯತ್ನಿಸಿ ವಿಫಲನಾಗಿದ್ದ. ಆದರೆ ಇತ್ತೀಚೆಗೆ ಆರೋಪಿ ರುದ್ರೇಶ್ ವಿಜಯ ಕುಮಾರ್ ಗೆ ಮದ್ಯ ಕುಡಿಸಿ, ನಗರದಲ್ಲಿಯೇ ಕೊಲೆ ಮಾಡಿ, ಬಳಿಕ ಮೃತದೇಹವನ್ನು ಬನ್ನೇರುಘಟ್ಟ ಬಳಿಯ ಭೂತನಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೊತ್ತು ತಂದಿದ್ದ. ನಿರ್ಜನ ಪ್ರದೇಶದಲ್ಲಿ ದೇಹವನ್ನು ಹಾಕಿ ಪೆಟ್ರೋಲ್ ಸುರಿದು ಸುಟ್ಟು ಪರಾರಿಯಾಗಿದ್ದನು.

    ವಿಜಯ ಕುಮಾರ್ ಕಾಣೆಯಾಗಿರುವ ಕುರಿತು ಆತನ ಕುಟುಂಬ ನೀಡಿದ್ದ ದೂರು ಪಡೆದ ಬಾಣಸವಾಡಿ ಠಾಣೆ ಪೊಲೀಸರು ತನಿಖೆ ಚುರುಗೊಳಿಸಿದ್ದರು. ವಿಜಯ ಕುಮಾರ್ ಮೊಬೈಲ್ ನಂಬರ್ ಟ್ರ್ಯಾಪ್ ಮಾಡಿದಾಗ ರುದ್ರೇಶ್ ಬಳಿ ಇರುವ ಮಾಹಿತಿ ಸಿಕ್ಕಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ವಿಜಯ ಕುಮಾರ್ ಮೃತದೇಹ ಪತ್ತೆಗಾಗಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಪೊಲೀಸರು ಸೂಚಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದಾಗ ದೇಹ ಗುರುತು ಸಿಗದ ಸ್ಥಿತಿಯಲ್ಲಿ ಸುಟ್ಟುಬಿದ್ದಿತ್ತು. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.