Tag: ಸಂಬಂಧ

  • ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    ಕೆಟ್ಟ ಅಭಿರುಚಿಯ ಚಾಟಿಂಗ್, ವಿಡಿಯೋ ಮಾಡಿದ್ದ ಜೋಡಿ – ಹೈಕೋರ್ಟ್‌ನಲ್ಲಿ ಮಹಿಳೆಯ ರೇಪ್‌ ಕೇಸ್ ವಜಾ

    -ನಿರಾಸೆಯಲ್ಲಿ ಸಂಬಂಧ ಅಂತ್ಯಗೊಂಡರೆ ರೇಪ್ ಅಲ್ಲ

    ಬೆಂಗಳೂರು: ಆರಂಭದಲ್ಲಿ ಪರಸ್ಪರ ಸಮ್ಮತಿ ಮೇರೆಗೆ ಇಬ್ಬರ ನಡುವೆ ಸಂಬಂಧ (Relationship) ಚೆನ್ನಾಗಿದ್ದು, ಕೊನೆಗೆ ಯಾವುದೇ ಕಾರಣಕ್ಕೆ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ನೀಡಿದೆ.

    ಮಹಿಳೆಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ ಎಂಬಾತನ ಒಂದು ವರ್ಷಗಳ ಕಾಲ ಆತ್ಮಿಯವಾಗಿದ್ದರು. ಬಳಿಕ ಮಹಿಳೆ, ಸಾಂಪ್ರಸ್ ಆಂಥೋಣಿ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಕೇಸಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಾಟ್ಸಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಮಹಿಳೆ ಸಾಂಪ್ರಸ್ ಆಂಥೋಣಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ. ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಮಾತು ಮೊದಲ ಬಾರಿಗೆ ಬದಲಾಯ್ತು!

    ಇನ್‌ಸ್ಟಾಗ್ರಾಂನಲ್ಲಿ ಇಬ್ಬರು ಕೆಟ್ಟ ಅಭಿರುಚಿಯ ಚಾಟಿಂಗ್ ಮಾಡಿದ್ದರು. ಪರಸ್ಪರ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿದ್ದರು. ಆದ್ರೆ, ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್‌ಸ್ಟಾಗ್ರಾಂ ಚಾಟಿಂಗ್ ಪರಿಗಣಿಸಿರಲಿಲ್ಲ. ಇವುಗಳನ್ನು ಪರಿಶೀಲಿಸಿದರೆ ಮಹಿಳೆಯ ದೂರು ಸುಳ್ಳೆಂದು ಸಾಬೀತಾಗಿದೆ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ:  ಕರೂರಿನಲ್ಲಿ ಭೇಟಿಯಾಗದ್ದಕ್ಕೆ ಕ್ಷಮಿಸಿ – ಮೃತರ ಕುಟುಂಬಸ್ಥರನ್ನ ಭೇಟಿಯಾಗಿ 7.8 ಕೋಟಿ ಪರಿಹಾರ ವಿತರಿಸಿದ ವಿಜಯ್

  • ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನ್ನಡದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ನಗ್ಮಾ (Nagma) ಜೊತೆ ನಟ ರವಿಕಿಶನ್ (Ravikishan) ವಿವಾಹೇತರ ಸಂಬಂಧ (Relationship) ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅನೇಕ ಫೋಟೋಗಳನ್ನು ಇದಕ್ಕೆ ಸಾಕ್ಷಿಯಾಗಿ ನೀಡಲಾಗಿತ್ತು. ಈ ಜೋಡಿಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು (Gossi) ಹರಡಿದರೂ, ಈ ಕುರಿತು ಒಬ್ಬರೂ ಪ್ರತಿಕ್ರಿಯೆ ನೀಡರಲಿಲ್ಲ.

    ಹರಡಿದ ಸುದ್ದಿಗಳ ಬಗ್ಗೆ ಯಾರೂ ಮಾತನಾಡದೇ ಇರುವ ಕಾರಣದಿಂದಾಗಿ ಸಂಬಂಧ ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಈ ಕುರಿತು ಕೊನೆಗೂ ನಟ ರವಿಕಿಶನ್ ಮೌನ ಮುರಿದಿದ್ದಾರೆ. ವಿವಾಹೇತರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಎಲ್ಲದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ‘ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್’ ಎಂದಿದ್ದಾರೆ ರವಿಕಿಶನ್.

    ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹೆಂಡತಿ ಕಷ್ಟದ ಕಾಲದಲ್ಲೂ ಇದ್ದಾಳೆ, ಸುಖದಲ್ಲೂ ಜೊತೆಯಿದ್ದಾಳೆ. ನಾನು ಏನು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಹೆಂಡತಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನಗ್ಮಾ ವಿಚಾರದಲ್ಲಿ ನನ್ನ ಪತ್ನಿ ತಲೆಕೆಡಿಸಿಕೊಂಡಿಲ್ಲ. ನಾನು ಏನು ಎನ್ನುವುದು ಆಕೆಗೆ ಗೊತ್ತಿದೆ’ ಎಂದಿದ್ದಾರೆ ರವಿಕಿಶನ್.

  • ಸ್ವಲ್ಪ ನಕ್ಕುಬಿಡಿ – ಮಾ.19 ರಾಷ್ಟ್ರೀಯ ನಗುವಿನ ದಿನ; ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

    ಸ್ವಲ್ಪ ನಕ್ಕುಬಿಡಿ – ಮಾ.19 ರಾಷ್ಟ್ರೀಯ ನಗುವಿನ ದಿನ; ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

    ನಕ್ಕರೆ ಅದೇ ಸ್ವರ್ಗ.. ಅನ್ನೋದು ಸಹಜ. ಅದೆಷ್ಟೇ ಬೇಜಾರಿದ್ದರೂ ಒಂದು ಸಣ್ಣನೆಯ ನಗು ಎಲ್ಲವನ್ನೂ ದೂರಮಾಡುತ್ತದೆ. ಅದಕ್ಕಾಗಿಯೇ ʻನಗು ನಗುತಾ ನಲಿ ನಲಿ ಏನೇ ಆಗಲಿʼಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ. ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ತಾಂತ್ರಿಕ ಬದುಕಿಗೆ ಹೊಂದಿಕೊಂಡಿರುವ ಜನ ನಗುವನ್ನೇ ಮರೆತುಬಿಟ್ಟಿದ್ದಾರೆ. ಆ ನಡುವೆಯೂ ಮಾತುಗಾರ ಮಲ್ಲರು ಆಗಾಗ್ಗೆ ಹಾಸ್ಯ ಮಾಡಿ ಎಲ್ಲರನ್ನೂ ನಕ್ಕು ನಲಿಯುವಂತೆ ಮಾಡುತ್ತಾರೆ.

    ಈ ನಗುವಿನ ಮಹತ್ವ ಗಮನಿಸಿಯೇ ಕೆಲವರು ನಗುವಿಗಾಗಿಯೇ ಒಂದು ದಿನವನ್ನ ಮೀಸಲಾಗಿಟ್ಟಿದ್ದಾರೆ. ಪ್ರತಿವರ್ಷ ಮೇ ತಿಂಗಳ ಮೊದಲನೇ ಭಾನುವಾರವನ್ನ ʻವಿಶ್ವ ನಗು ದಿನʼವನ್ನಾಗಿ ಆಚರಿಸಿದರೆ, ಮಾರ್ಚ್‌ 19ರ ದಿನವನ್ನು ರಾಷ್ಟ್ರೀಯ ನಗುವಿನ ದಿನವನ್ನಾಗಿ (National Laughter Day) ಆಚರಿಸಲಾಗುತ್ತದೆ. ಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿ 10 ರಂದು ಮುಂಬೈಯಲ್ಲಿ ಆಚರಿಸಲಾಯಿತು.

    ನಗುವಿನ ದೀರ್ಘಾವಧಿ ಪ್ರಯೋಜನಗಳೇನು?

    ಮಾನಸಿಕ ಸಮಸ್ಯೆ ದೂರ:
    ಕೆಲವೊಮ್ಮೆ, ದೀರ್ಘಕಾಲದ ಆರೋಗ್ಯ (Health) ಸಮಸ್ಯೆಗಳು ಅಥವಾ ಮಾನಸಿಕ ಒತ್ತಡದಿಂದಾಗಿ ಜನರು ಖಿನ್ನತೆ ಮತ್ತು ಆತಂಕ ಅನುಭವಿಸುತ್ತಾರೆ. ಮುಖದ ಮೇಲಿನ ಸಣ್ಣ ನಗು ಈ ಮಾನಸಿಕ ಸಮಸ್ಯೆಗಳನ್ನ ದೂರ ಮಾಡುತ್ತದೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ನೋವು ನಿವಾರಕ ನಗು:
    ದೀರ್ಘಾವಧಿಯಲ್ಲಿ, ನೀವು ಅವಕಾಶ ಸಿಕ್ಕ ತಕ್ಷಣ ನಗುವ ವ್ಯಕ್ತಿಯಾಗಿದ್ದರೆ, ನಗುವು ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ದೈಹಿಕ ಸಾಮರ್ಥ್ಯ ಕುಗ್ಗುವುದು ಕಡಿಮೆಯಾಗುತ್ತದೆ. ಜೊತೆಗೆ ಅತಿಯಾದ ಆಲೋಚನೆಗಳಿಂದ ತಲೆಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಸಕಾರಾತ್ಮಕ ಆಲೋಚನೆ:
    ನಗುವಿನಿಂದ ದೇಹದಲ್ಲಿ ನ್ಯೂರೋಪೆಪ್ಟೈಡ್‌ (ರೋಗ ನಿರೋಧಕ ಅಂಶ) ಬಿಡುಗಡೆಯಾಗಿ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಕಾರಾತ್ಮಕ ಆಲೋಚನೆಗಳನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ.

    ತಕ್ಷಣದ ಪ್ರಯೋಜನಗಳು:
    ನಗು ನಿಮ್ಮ ದೇಹದಲ್ಲಿನ ಸ್ನಾಯುಗಳನ್ನು ಉಲ್ಲಾಸಗೊಳಿಸಿ, ಉದ್ವೇಗ ಹೆಚ್ಚಾಗುವುದನ್ನು ತಡೆಯುತ್ತದೆ. ದೈಹಿಕ ಒತ್ತಡ ಕಡಿಮೆ ಮಾಡಿ, ರಕ್ತ ಪರಿಚಲನೆ ಉತ್ತೇಜಿಸುತ್ತದೆ. ಜೊತೆಗೆ ಆಮ್ಲಜನಕ ಹೀರಿಕೊಳ್ಳಲು ಸಹಾಯ ಮಾಡುತ್ತದೆ. 

  • ಸದಾ ಟಚ್‍ನಲ್ಲಿರುವಂತೆ 15ರ ಬಾಲಕನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಕೊಡಿಸಿದ್ಳು!

    ಸದಾ ಟಚ್‍ನಲ್ಲಿರುವಂತೆ 15ರ ಬಾಲಕನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಕೊಡಿಸಿದ್ಳು!

    ಮುಂಬೈ: ಮಹಿಳೆಯೊಬ್ಬಳು 15ರ ಬಾಲಕನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ (Mobile) ಗಿಫ್ಟ್ ಕೊಟ್ಟು ಫಜೀತಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ಎಂಬಲ್ಲಿ ನಡೆದಿದೆ.

    ಘಟನೆ ಸಂಬಂಧ 32 ವರ್ಷದ ವಿವಾಹಿತೆಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಕುಟುಂಬದ ಜೊತೆ ಮಹಿಳೆ ವಾಸವಾಗಿದ್ದಳು. ಈ ವೇಳೆ ಆಕೆ ಅಪ್ರಾಪ್ತನೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಈ ಹಿನ್ನೆಲೆಯಲ್ಲಿ ಸದಾ ಟಚ್‍ನಲ್ಲಿರುವಂತೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಗಿಫ್ಟ್ ಕೊಟ್ಟಿದ್ದಾಳೆ. ಇದನ್ನೂ ಓದಿ: ಕುವೈತ್‍ನಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆ ಕೊನೆಗೂ ಬಂಧ ಮುಕ್ತ- ಕೊಡಗು ಜಿಲ್ಲಾಡಳಿತದ ಪ್ರಯತ್ನ ಯಶಸ್ವಿ

    ಇತ್ತ ಬಾಲಕನ ವರ್ತನೆಯಿಂದ ಆತನ ಪೋಷಕರು ಅನುಮಾನಗೊಂಡಿದ್ದಾರೆ. ಅಲ್ಲದೆ ಅವನ ಶಿಕ್ಷಕಿ ಜೊತೆ ಹೇಳಿ ಆತನ ಬಾಯಿ ಬಿಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಆಗ ಬಾಲಕ ನಡೆದ ಘಟನೆಯನ್ನು ಶಿಕ್ಷಕಿ ಮುಂದೆ ವಿವರಿಸಿದ್ದಾನೆ. ಬಾಲಕನ ಹೇಳಿಕೆಯನ್ನು ಶಿಕ್ಷಕಿ ಆತನ ಮನೆಯವರಿಗೆ ಮುಟ್ಟಿಸಿದ್ದಾರೆ. ಮಹಿಳೆ ಜೊತೆ ಬಾಲಕನಿಗೆ ಸಂಬಂಧ ಇರುವ ವಿಚಾರ ತಿಳಿಯುತ್ತಿದ್ದಂತೆಯೇ ಆತನ ಪೋಷಕರು ಮಹಿಳೆಯನ್ನು ಮನೆಯಿಂದ ಹೊರ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆಕೆ ಆತನ ಜೊತೆ ನಿರಂತವಾಗಿ ಸಂಪರ್ಕದಲ್ಲಿದ್ದಳು.

    ಸದ್ಯ ಬಾಲಕನ ಪೋಷಕರು ನಿಡಿದ ದೂರಿನ ಆಧಾರದ ಮೇಲೆ ಮಹಿಳೆ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

    ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

    ನುಷ್ಯ ಜೀವನದಲ್ಲಿ ಸಂಬಂಧಗಳಿಗೆ (Relationship) ಅದರದ್ದೇ ಆದ ಮೌಲ್ಯವಿದೆ. ಸಂಬಂಧ ಬೆಳೆಸುವುದು ಸುಲಭ. ಆದರೆ ಆ ಸಂಬಂಧ ಮುರಿದು ಹೋಗದಂತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೂ ನಾವು ಮುರಿದುಹೋದ ನಮ್ಮ ಹಿಂದಿನ ಸಂಬಂಧದಲ್ಲಿ ಏನು ತಪ್ಪಾಗಿದೆ ಎಂದು ಆಗಾಗ್ಗೆ ಯೋಚಿಸುತ್ತೇವೆ, ಆ ಬಗ್ಗೆ ಆಶ್ಚರ್ಯ ಪಡುತ್ತೇವೆ.

    ಇದು ಸಣ್ಣ ವಿಚಾರ, ಅನವಶ್ಯಕ ಎಂದು ನಾವು ಭಾವಿಸುವ ಎಷ್ಟೋ ವಿಷಯಗಳೇ ಸಂಬಂಧ ಮುರಿಯಲು ಪ್ರಮುಖ ಕಾರಣಗಳಾಗಿರುತ್ತವೆ ಎಂಬುದು ಕೆಲವೊಮ್ಮೆ ನಮಗೆ ತಿಳಿದಿರುವುದಿಲ್ಲ. ಕೆಲವು ಸಂಬಂಧಗಳು ಯಾಕೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ 5 ಕಾರಣಗಳು ಹೀಗಿವೆ ನೋಡಿ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ನಿಮಗೆ ಬೇಕಾದುದ್ದನ್ನು ನೀವು ಕೇಳುವುದಿಲ್ಲ
    ಅನೇಕರು ತಾವು ಮಾಡಬಹುದು ಎಂದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಅದನ್ನು ತಮ್ಮ ಸಂಗಾತಿ ಜೊತೆ ಹೇಳಿಕೊಳ್ಳುವುದಿಲ್ಲ. ಈ ವಿಷಯ ಹೇಳಿಕೊಂಡರೆ ಸಂಗಾತಿಯಿಂದ ಏನು ಪ್ರತಿಕ್ರಿಯೆ ಬರಬಹುದು ಎಂಬ ಬಗ್ಗೆ ಭಯ, ಮುಜುಗರ ಪಡುತ್ತಾರೆ. ನೀವು ಸುಮ್ಮನೇ ಇದ್ದು, ಯೋಚನೆಯನ್ನಷ್ಟೇ ಮಾಡಿದರೆ ಹತಾಶೆ ದಿನಗಳು ಬರುತ್ತವೆ. ಆಗ ಸಂಗಾತಿಯಿಂದ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಹೀಗಾದಾಗ ಸಂಬಂಧ ಹೇಗೆ ಉಳಿಯುತ್ತದೆ?

    ʼನೋʼ ಎಂದು ಹೇಳದಿರುವುದು
    ʻNOʼ ಎಂದು ಹೇಳುವುದು ಎಷ್ಟು ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇದು ದೈಹಿಕ ಸುರಕ್ಷತೆಗೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳಿತು. ಜನರನ್ನು ಮೆಚ್ಚಿಸಲು ʼಹೌದುʼ ಎಂದು ಹೇಳುವ ಸಂದರ್ಭಗಳುಂಟು. ನಿಮಗೆ ಇಷ್ಟವಿಲ್ಲದ್ದನ್ನು ಮಾಡಲು ಇಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೆ, ಅದು ನಿಮ್ಮನ್ನು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಅನಾವಶ್ಯಕವಾದ ಆಹಾರ ಸೇವನೆ, ನಿಮಗೆ ಬೇಡದ ಲೈಂಗಿಕತೆಗಾಗಿ ನಿಮ್ಮ ಸಂಗಾತಿಗೆ ಬೇಡ ಎಂದು ಹೇಳುವುದು, ನಿಮ್ಮ ಸಂಗಾತಿ ಅತಿಯಾದ ಕೆಲಸ ಮಾಡಲು ಬಯಸಿದಾಗ ಬೇಡ ಎಂದು ಹೇಳುವುದು ಬಹಳ ಮುಖ್ಯ. ಸಂಬಂಧದಲ್ಲಿ ಇದನ್ನು ಹೇಳಲು ನಿಮಗೆ ಸಾಧ್ಯವಾಗದಿದ್ದರೆ, ನೀವು ತುಂಬಾ ಟೊಳ್ಳಾದ ಬಂಧವನ್ನು ಹೊಂದಿದ್ದೀರಿ. ಅದು ಸಂಬಂಧ ಮುರಿಯುವ ಹಂತಕ್ಕೆ ಕೊಂಡೊಯ್ಯುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಸಂಗಾತಿಯ ಸುತ್ತವೇ ನಿಮ್ಮ ಪ್ರಪಂಚ
    ಈ ಮನೋಭಾವ ನಿಮ್ಮ ವ್ಯಕ್ತಿತ್ವದ ಅಭದ್ರತೆ ಮತ್ತು ಅವಿಶ್ವಾಸವಲ್ಲದೇ ಬೇರೇನೂ ಅಲ್ಲ. ಎಲ್ಲದಕ್ಕೂ ಸಂಗಾತಿಯ ಉಪಸ್ಥಿತಿಯನ್ನು ಬಯಸುವುದು, ಅವಲಂಬಿಸುವುದು ಸರಿಯಾದ ಕ್ರಮವಲ್ಲ. ಹೀಗೆ ಮಾಡುವುದರಿಂದ ಅವರ ಮೇಲೂ ಭಾರ ಎತ್ತಿಹಾಕಿ ಉಸಿರುಗಟ್ಟಿಸಿದಂತಾಗುತ್ತದೆ. ಕೆಲವೊಮ್ಮೆ ನಿಮ್ಮ ಭಾವನೆ, ಕಾರ್ಯಗಳ ಜವಾಬ್ದಾರಿಯನ್ನು ನೀವೇ ಹೊರಬೇಕು. ಸಂಗಾತಿ ಮೇಲೆ ಹೇರುವುದಲ್ಲ.

    ಭಾವನೆ ಇಲ್ಲದಿದ್ರೆ
    ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಭಾವನೆಗಳಿರಬೇಕು. ಕಾರ್ಯ ಕ್ಷೇತ್ರಗಳಲ್ಲಿ ಎಷ್ಟೇ ಯಶಸ್ಸು ಗಳಿಸಿದ್ದರೂ, ಭಾವನಾತ್ಮಕವಾಗಿ ಅಪಕ್ವವಾಗಿದ್ದರೆ ಅವರ ಸಂಬಂಧವು ಯಾವಾಗಲೂ ಅತೃಪ್ತಿಕರವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಪ್ರೀತಿಯ ಮಹತ್ವ ಅದನ್ನು ನಡೆಸುವವರಿಂದ ತಿಳಿಯುತ್ತದೆ. ಪರಸ್ಪರರು ತಮ್ಮ ಸಂಬಂಧದ ಅವಧಿಯಲ್ಲಿ ಪರಸ್ಪರ ಬಹಳಷ್ಟು ಕಲಿಯುತ್ತಾರೆ. ಆದರೆ ಇಬ್ಬರು ಅಪ್ರಬುದ್ಧ ವ್ಯಕ್ತಿಗಳು ಸಂಬಂಧಕ್ಕೆ ಬಂದಾಗ ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಕಾರ್ಯಗಳಿಗೆ ಜವಾಬ್ದಾರರಾಗಿರುವುದೂ ಇಲ್ಲ. ಆದರೆ ಪ್ರಬುದ್ಧ ಜನರು ಪ್ರೀತಿಯಲ್ಲಿದ್ದರೆ ಯಶಸ್ವಿ ಮತ್ತು ಸುಂದರ ಬಾಂಧವ್ಯ ಸಾಧ್ಯವಾಗುತ್ತದೆ. ಪ್ರಬುದ್ಧ ಮತ್ತು ಅಪ್ರಬುದ್ಧ ಪ್ರೀತಿಗೆ ಇರುವ ವ್ಯತ್ಯಾಸ ನಿಮಗೆ ತಿಳಿದಿದೆಯೇ?

    1)ಪ್ರಶ್ನೆಗಳನ್ನು ಕೇಳುವುದು ಮತ್ತು ಸಮಸ್ಯೆ ಬಗೆಹರಿಸಿಕೊಳ್ಳುವುದು
    ಅಪ್ರಬುದ್ಧ ಪ್ರೀತಿ: ಇವರು ತಮ್ಮ ಪ್ರೀತಿಯ ಬಗ್ಗೆ ಅನುಮಾನಗಳನ್ನು ಹೊಂದಿರುತ್ತಾರೆ. ತಮ್ಮ ಸಂಬಂಧದ ಬಗ್ಗೆ ಖಚಿತವಾಗಿರುವುದಿಲ್ಲ. ಯಾವಾಗಲೂ ಪರಸ್ಪರರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.

    ಪ್ರಬುದ್ಧ ಪ್ರೀತಿ: ಇವರು ತಮ್ಮ ಸಂಬಂಧ ವಿಚಾರವಾಗಿ ತೃಪ್ತರಾಗಿರುತ್ತಾರೆ. ಪರಸ್ಪರರು ಅವಾಸ್ತವಿಕವಾಗಿ ನಡೆದುಕೊಳ್ಳದೇ ವಸ್ತುಸ್ಥಿತಿಯನ್ನು ಅರಿತು ಜೀವನ ನಡೆಸುತ್ತಾರೆ. ಇದನ್ನೂ ಓದಿ: ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್

    2) ಸಂಬಂಧದಲ್ಲಿ ಹೆಚ್ಚಿನದನ್ನು ಬಯಸುವುದು
    ಅಪ್ರಬುದ್ಧ ಪ್ರೀತಿ: ಇವರು ಯಾವಾಗಲೂ ತಮ್ಮ ಸಂಗಾತಿಯಿಂದ ಹೆಚ್ಚಿನದನ್ನು ಬಯಸುತ್ತಾರೆ. ತಮ್ಮ ಸಂಗಾತಿಯ ವಿಚಾರವಾಗಿ ಅವರು ಎಂದಿಗೂ ತೃಪ್ತರಾಗಿರುವುದಿಲ್ಲ. ಅತೃಪ್ತ ಭಾವವನ್ನು ಹೊಂದಿರುತ್ತಾರೆ.

    ಪ್ರಬುದ್ಧ ಪ್ರೀತಿ: ಇವರು ತಮ್ಮ ಸಂಗಾತಿ ವಿಷಯದಲ್ಲಿ ತೃಪ್ತ ಮನೋಭಾವ ಹೊಂದಿರುತ್ತಾರೆ. ಸಂಗಾತಿಯನ್ನು ಇದ್ದಂತೆಯೇ ಸ್ವೀಕರಿಸುತ್ತಾರೆ. ಅವರಿಂದ ಹೆಚ್ಚಿನದನ್ನು ನಿರೀಕ್ಷಿಸದೇ ಪರಸ್ಪರ ಸ್ವತಂತ್ರ ಭಾವದಲ್ಲಿ ಸಾಗುತ್ತಾರೆ.

    3) ಸಂಬಂಧದಲ್ಲಿ ಸ್ವಂತಿಕೆ
    ಅಪ್ರಬುದ್ಧ ಪ್ರೀತಿ: ಸಂಗಾತಿ ತನ್ನಂತೆಯೇ ಇರಬೇಕು ಎಂಬ ಹಪಾಹಪಿ ಹೆಚ್ಚಿರುತ್ತದೆ. ಕೆಲವು ವಿಷಯಗಳಲ್ಲಿ ಸ್ವಂತಿಕೆ ಇರಬೇಕು ಎಂಬ ಮನೋಭಾವವನ್ನು ಒಪ್ಪುವುದಿಲ್ಲ.

    ಪ್ರಬುದ್ಧ ಪ್ರೀತಿ: ಪ್ರಬುದ್ಧರು ತಮ್ಮ ಸಂಬಂಧದಲ್ಲಿ ಎಂದಿಗೂ ಸ್ವಂತಿಕೆಯನ್ನು ಕಾಪಾಡಿಕೊಂಡಿರುತ್ತಾರೆ. ಪ್ರೀತಿಯಲ್ಲಿ ಒಗ್ಗಟ್ಟಾಗಿದ್ದರೂ, ತಮ್ಮದೇ ಅಭಿಪ್ರಾಯ, ದೃಷ್ಟಿಕೋನ ಮತ್ತು ಆಲೋಚನೆಗಳಿಗೆ ಬದ್ಧರಾಗಿರುತ್ತಾರೆ. ಅವರು ತಮ್ಮ ಅಭಿಪ್ರಾಯಗಳನ್ನು ಪರಸ್ಪರರ ಮೇಲೆ ಹೇರಲು ಪ್ರಯತ್ನಿಸುವುದಿಲ್ಲ. ಪರಸ್ಪರರನ್ನು ಗೌರವಿಸುತ್ತಾರೆ. ಇದನ್ನೂ ಓದಿ: MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

    4) ಪ್ರೇರಣೆ
    ಅಪ್ರಬುದ್ಧ ಪ್ರೀತಿ: ಸಂಗಾತಿಗಳ ಪ್ರೀತಿಯ ಭಾವ ಅಪರಿಪೂರ್ಣವಾಗಿರುತ್ತದೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಪರಸ್ಪರರಿಗೆ ಪ್ರೇರಕ ಶಕ್ತಿಯಾಗಿರಲು ಸಾಧ್ಯವಿಲ್ಲ.

    ಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರಿಗೆ ಪ್ರೇರಕ ಶಕ್ತಿಯಾಗಿರುತ್ತಾರೆ. ಎಂದಿಗೂ ತಮ್ಮ ಸಂಗಾತಿಯ ಆಸೆ, ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಾರೆ.

    5) ಅವಲಂಬನೆ
    ಅಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಬದುಕಿನ ವಿಚಾರದಲ್ಲೂ ಅವಲಂಬನೆ ಹೆಚ್ಚಿರುತ್ತದೆ. ಜೀವನದ ಪ್ರತಿಯೊಂದು ಸನ್ನಿವೇಶ ಎದುರಿಸಲು ಅವರಿಗೆ ಪರಸ್ಪರರ ಸಹಾಯ ಬೇಕಾಗುತ್ತದೆ.

    ಪ್ರಬುದ್ಧ ಪ್ರೀತಿ: ಸಂಗಾತಿಗಳು ಪರಸ್ಪರರನ್ನು ಎಂದಿಗೂ ಅವಲಂಬಿಸುವುದಿಲ್ಲ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಜೊತೆ ಇರುವಂತೆ ಅಪೇಕ್ಷೆಯನ್ನು ವ್ಯಕ್ತಪಡಿಸಬಹುದು. ಆದರೆ ಸಂಪೂರ್ಣ ಅವಲಂಬಿತರಾಗಿರುವುದಿಲ್ಲ. ಇದನ್ನೂ ಓದಿ: ಖ್ಯಾತ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    Live Tv
    [brid partner=56869869 player=32851 video=960834 autoplay=true]

  • ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ

    ಹಿಂದಿಯ ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಧಾರಾವಾಹಿಯ ಖ್ಯಾತ ನಟ ರೋಹಿತ್ ಸೇಠಿಯಾ ಮೇಲೆ ಕೊಲೆ ಬೆದರಿಕೆಗೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದೆ. ಹಿಂದಿ ಧಾರಾವಾಹಿ ಲೋಕದ ಜನಪ್ರಿಯ ನಟರಾಗಿರುವ ರೋಹಿತ್, ಅದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿಶಾ ರಾವಲ್ ಒಟ್ಟಿಗೆ ಅಕ್ರಮ ಸಂಬಂಧದಲ್ಲಿ ಇದ್ದಾರೆ ಎಂದು ಸ್ವತಃ ನಿಶಾ ಪತಿಯೇ ಆರೋಪ ಮಾಡಿದ್ದಾರೆ. ಅಲ್ಲದೇ ರೋಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ.

    ತನ್ನ ಪತ್ನಿಯೊಂದಿಗೆ ರೋಹಿತ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿ ನಡೆಸಿ, ಪತ್ನಿ ಮತ್ತು ರೋಹಿತ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ, ತನ್ನ ಸ್ವಂತ ಮನೆಯಲ್ಲೇ ತನ್ನೊಂದಿಗೆ ನಟಿಸುತ್ತಿರುವ ರೋಹಿತ್ ಜೊತೆ ಇರುತ್ತಾಳೆ. ನನ್ನನ್ನೇ ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ನನ್ನನ್ನು ನಿಶಾ ಮದುವೆ ಆಗಿದ್ದರೂ, ತಾನು ಸಿಂಗಲ್ ಮದರ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕಳೆದ ಐದಾರು ತಿಂಗಳಿಂದ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ನಿಶಾ ಮತ್ತು ರೋಹಿತ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಗುಂಡಿಟ್ಟು ಕೊಲ್ಲುವುದಾಗಿ ಪದೇ ಪದೇ ಹೇಳುತ್ತಾರೆ. ಹಾಗಾಗಿ ಸಾಕ್ಷಿ ಸಮೇತ ನಾನು ನ್ಯಾಯಾಲಯಕ್ಕೆ ಹೋಗುವೆ ಎಂದಿದ್ದಾರೆ ನಿಶಾ ಪತಿ.

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರ ಆಗುವುದಿಲ್ಲ: ಹೈಕೋರ್ಟ್

    ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರ ಆಗುವುದಿಲ್ಲ: ಹೈಕೋರ್ಟ್

    ತಿರುವನಂತಪುರಂ: ಪರಸ್ಪರ ಸಮ್ಮತಿಯೊಂದಿಗೆ ಹೊಂದಿರುವ ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯಗೊಂಡಿಲ್ಲ ಎಂಬ ಮಾತ್ರಕ್ಕೆ ಅದು ಅತ್ಯಾಚಾರವೆಂದು (ಐಪಿಸಿ ಸೆಕ್ಷನ್ 376 ಅಡಿಯಲ್ಲಿ) ಸಾಬೀತು ಮಾಡಲು ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

    court order law

    ಮೋಸದಿಂದ ಅಥವಾ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ ನಡೆಸದ ಹೊರತು ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರಕ್ಕೆ ಸಮನಾಗಿರುವುದಿಲ್ಲ. ಇಬ್ಬರ ಲೈಂಗಿಕ ಸಂಬಂಧಕ್ಕೆ ಮದುವೆಯ ಅಂಕಿತ ಬೀಳದಿದ್ದರೂ ಲೈಂಗಿಕ ಸಮ್ಮತಿಗೆ ಧಕ್ಕೆ ತರುವ ಯಾವುದೇ ಅಂಶ ಇರದಿದ್ದಾಗ ಅದು ಅತ್ಯಾಚಾರ ಆಗುವುದಿಲ್ಲ. ಇಬ್ಬರು ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರೂ ನಂತರ ಮದುವೆಗೆ ಒಪ್ಪದಿದ್ದರೆ ಅಥವಾ ಸಂಬಂಧ ಮುಂದುವರಿಸುವುದು ವಿಫಲವಾದರೆ ಆ ಅಂಶಗಳು ಅತ್ಯಾಚಾರ ಆರೋಪ ನಿಗದಿಗೆ ಒಪ್ಪುವಂತಹದ್ದಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ಅತ್ಯಾಚಾರವಾಗಿದೆ ಎಂಬುದನ್ನು ಸಾಬೀತು ಮಾಡಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದು ಪೀಠ ಪ್ರತಿಪಾದಿಸಿದೆ.

    ಮದುವೆಯಾಗುವ ಭರವಸೆ ಪಾಲಿಸಲು ವಿಫಲರಾದ ಕಾರಣಕ್ಕಾಗಿ ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿವರ್ತಿಸಬೇಕಾದರೆ ಪುರುಷನ ಭರವಸೆ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಹಿಳೆ ನಿರ್ಧರಿಸಿರಬೇಕು. ಮದುವೆ ಕುರಿತ ಸುಳ್ಳು ಭರವಸೆಯನ್ನು ಸಾಬೀತುಪಡಿಸಲು ಭರವಸೆ ನೀಡಿದವನಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಮಾತನ್ನು ಎತ್ತಿ ಹಿಡಿಯುವ ಉದ್ದೇಶ ಇರಬಾರದು. ಶಾರೀರಿಕ ಮಿಲನ ಮತ್ತು ಮದುವೆಯ ಭರವಸೆಯ ನಡುವೆ ನೇರ ಸಂಬಂಧ ಇರಬೇಕು ಆದೇಶಿಸಲಾಗಿದೆ. ಇದನ್ನೂ ಓದಿ: ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ತನ್ನ ಸಹೋದ್ಯೋಗಿ ಹಾಗೂ ವಕೀಲೆಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರಿನಡಿ ಬಂಧಿತರಾಗಿರುವ ಕೇಂದ್ರ ಸರ್ಕಾರದ ವಕೀಲ ಕೇರಳದ ನವನೀತ್ ಎನ್.ನಾಥ್ ಅವರ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಕೆಲ ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ನೀಡಿತು.

    ನವನೀತ್ ಅವರ ಪರವಾಗಿ ಹಿರಿಯ ವಕೀಲ ರಮೇಶ್ ಚಂದರ್ ಮತ್ತು ನ್ಯಾಯವಾದಿ ಸಿ.ಪಿ.ಉದಯಭಾನು, ದೂರುದಾರರ ಪರವಾಗಿ ವಕೀಲ ಜಾನ್ ಎಸ್.ರಾಲ್ಫ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಷಾದ್ ವಾದ ಮಂಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ಮುಂಬೈ: ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸಮನ್‌ ಕೆ.ಎಲ್.ರಾಹುಲ್‌ ಹಾಗೂ ನಟಿ ಆಥಿಯಾ ಶೆಟ್ಟಿ ಜೋಡಿಯ ಡೇಟಿಂಗ್‌ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಬ್ಬಿದ್ದವು. ಆಥಿಯಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಳ್ಳುವ ಮೂಲಕ ಕೆ.ಎಲ್‌.ರಾಹುಲ್‌ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.

    ಆಥಿಯಾ ಶೆಟ್ಟಿ ಜನ್ಮದಿನದಂದು ಕೆ.ಎಲ್‌.ರಾಹಲ್, ನಟಿಯೊಂದಿಗಿನ ಕೆಲವು ರೋಮ್ಯಾಂಟಿಕ್‌ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

    ಹೃದಯದ ಇಮೋಜ್‌ ಹಾಕಿ ಕೆ.ಎಲ್‌.ರಾಹುಲ್‌, ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಆಥಿಯಾ ಶೆಟ್ಟಿ ಎಂದು ವಿಶ್‌ ಮಾಡಿದ್ದಾರೆ. ಅದಕ್ಕೆ ಹೃದಯ ಮತ್ತು ಭೂಮಿಯ ಇಮೋಜ್‌ ಹಾಕಿ ರಾಹುಲ್‌ ವಿಶ್‌ಗೆ ಆಥಿಯಾ ಪ್ರತಿಕ್ರಿಯಿಸಿದ್ದಾರೆ. ಆಥಿಯಾ ತಂದೆ ಸುನಿಲ್‌ ಶೆಟ್ಟಿ ಮತ್ತು ಸಹೋದರ ಅಹಾನ್‌ ಶೆಟ್ಟಿ ಕೂಡ ಹೃದಯ ಇಮೋಜ್‌ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

    ನಟಿ ಆಥಿಯಾ ಮತ್ತು ಕೆ.ಎಲ್‌.ರಾಹುಲ್‌ ಹಲವೆಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಇಬ್ಬರೂ ಜೊತೆಯಾಗಿರುವ ಕೆಲವು ರೋಮ್ಯಾಂಟಿಕ್‌ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದರಿಂದ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ಗಾಸಿಪ್‌ಗಳಿಗೆ ಕಾರಣವಾಗಿತ್ತು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆಗೆ ರೋಗಿಗಳು ಶೇ.30 ಹೆಚ್ಚಳ

    ಕೆ.ಎಲ್.ರಾಹುಲ್‌ ಈಗ ಟಿ20 ವಿಶ್ವಕಪ್‌ ಟೂರ್ನಿಗಾಗಿ ಯುಎಯಿನಲ್ಲಿದ್ದಾರೆ.

  • ಟ್ಯೂಷನ್ ತರಗತಿ ಬಗ್ಗೆ ಕೇಳುವ ನೆಪದಲ್ಲಿ ಕರೆದು ಯುವಕನನ್ನ ಥಳಿಸಿ ಕೊಂದ್ರು

    ಟ್ಯೂಷನ್ ತರಗತಿ ಬಗ್ಗೆ ಕೇಳುವ ನೆಪದಲ್ಲಿ ಕರೆದು ಯುವಕನನ್ನ ಥಳಿಸಿ ಕೊಂದ್ರು

    – ಯುವತಿಯ ಜೊತೆ ಸಂಬಂಧ ಹೊಂದಿದ್ದಕ್ಕೆ ಸೋದರ ಕೋಪ
    – ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ಹೇಳಿಕೊಡ್ತಿದ್ದ

    ನವದೆಹಲಿ: ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ಟ್ಯೂಷನ್ ಶಿಕ್ಷಕನನ್ನು ಗುಂಪೊಂದು ಥಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ವಾಯುವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ರಾಹುಲ್ ರಜಪೂತ್ ಎಂದು ಗುರುತಿಸಲಾಗಿದೆ. ಈತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ನಡೆಸುತ್ತಿದ್ದನು. ಈತ ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸ್ನೇಹ ಬೆಳೆಸಿದ್ದನು. ಹುಡುಗಿಯ ಕುಟುಂಬವು ಇಬ್ಬರ ನಡುವಿನ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ರಾಹುಲ್ ರಜಪೂತ್‍ನಿಗೆ ಇಂಗ್ಲಿಷ್ ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಫೋನ್ ಮಾಡಿದ್ದಾರೆ. ಈ ವೇಳೆ ರಜಪೂತ್ ಮನೆಯ ಸಮೀಪದಲ್ಲೇ ಭೇಟಿಯಾಗಲು ತಿಳಿಸಿದ್ದಾರೆ. ಅಲ್ಲಿಗೆ ಹೋದ ರಜಪೂತ್ ಮೇಲೆ 7-8 ಹುಡುಗರೊಂದಿಗೆ ಯುವತಿಯ ಸಹೋದರ ಕೋಲು ಮತ್ತು ದೊಣ್ಣೆಯಿಂದ ಹೊಡೆದಿದ್ದಾನೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಜಪೂತ್‍ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಜಪೂತ್ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

    ಸುಮಾರು ಒಂದು ತಿಂಗಳ ಹಿಂದೆ ಹುಡುಗಿ ರಾಹುಲ್‍ಗೆ ಫೋನ್ ಮಾಡಿದ್ದಳು. ಆದರೆ ಆಕೆಯ ತಾಯಿ ಮತ್ತೆ ಕರೆ ಮಾಡದಂತೆ ಮಗಳಿಗೆ ಎಚ್ಚರಿಸಿದ್ದರು. ಇಬ್ಬರು ಈ ಹಿಂದೆ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರಾಗಿದ್ದರು. ಆದರೆ ಇಬ್ಬರು ಒಟ್ಟಿಗೆ ಮಾತನಾಡುವುದು ನೋಡಿದ ಆಕೆಯ ಸಹೋದರ ಕೋಪಕೊಂಡು ಈ ರೀತಿ ಮಾಡಿದ್ದಾನೆ. ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ರಾಹುಲ್ ತಂದೆ ಸಂಜಯ್ ರಜಪೂತ್ ಕಣ್ಣೀರು ಹಾಕಿದರು.

    ಯುವಕರ ಸಾವಿನ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಹುಡುಗನ ಚಿಕ್ಕಪ್ಪ ನೀಡಿದ ದೂರಿನ ನಂತರ ನಾವು ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ ಯುವತಿಯ ಸಹೋದರ ಮೊಹಮ್ಮದ್ ರಾಜ್, ಆಕೆಯ ಸಂಬಂಧಿ ಮನ್ವರ್ ಹುಸೇನ್ ಮತ್ತು ಇತರ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.