Tag: ಸಂಪ್

  • ಆಟವಾಡುತ್ತಾ ಸಂಪಿನೊಳಗೆ ಬಿದ್ದು ಬಾಲಕಿ ಸಾವು

    ಆಟವಾಡುತ್ತಾ ಸಂಪಿನೊಳಗೆ ಬಿದ್ದು ಬಾಲಕಿ ಸಾವು

    ಮೈಸೂರು: ಆಟವಾಡುತ್ತಾ ಸಂಪಿನೊಳಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಛಾಯ(3) ಎಂದು ಗುರುತಿಸಲಾಗಿದೆ. ಈಕೆ ಮಹೇಶ್ ಕುಮಾರ್ ಎಂಬವರ ಪುತ್ರಿಯಾಗಿದ್ದಾಳೆ.

    ಗ್ರಾಮದ ನೂತನ ಗೃಹ ನಿರ್ಮಾಣಕ್ಕೆ ಸಂಪ್ ನಿರ್ಮಿಸಲಾಗಿತ್ತು. ಆದರೆ ಇಂದು ಬಾಲಕಿ ಆಟವಾಡುತ್ತಾ ಆಯತಪ್ಪಿ ಸಂಪಿನೊಳಗೆ ಬಿದ್ದಿದ್ದಾಳೆ.

    ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ನೆಲಮಂಗಲ: ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ರಕ್ಷಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಒಟ್ಟು ಒಬ್ಬರು ಪೇಂಟರ್ಸ್ ಸಂಪ್‍ಗೆ ಇಳಿದಿದ್ದರು. ಒಬ್ಬರು ಹೇಗೋ ಮೇಲಕ್ಕೆ ಬಂದಿದ್ದಾರೆ. ಆದರೆ ಓರ್ವ ಸಂಪ್‍ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಪೇಂಟರ್ ಅಸ್ವಸ್ಥರಾಗಿದ್ದಾರೆ. ಪೇಂಟರ್ ರಕ್ಷಣೆ ಮಾಡಲು ಇಬ್ಬರು ಸಂಪ್‍ಗೆ ಇಳಿದಿದ್ದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಹ ರಕ್ಷಣೆಗಾಗಿ ಇಳಿದಿದ್ದ ಇಬ್ಬರ ಪೈಕಿ ಒಬ್ಬರು ಸಂಪ್ ನಲ್ಲಿ ಸಿಲುಕಿದ್ದರು. ಮತ್ತೊಬ್ಬರು ಮೇಲಕ್ಕೆ ಬಂದಿದ್ದರು.

    ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ನೀರಿನ, ಸಂಪ್‍ಗೆ ಹಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಿರಿದಾದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಹೀರೋ ಹಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೇವಣ್ಣ, ಆಕ್ಸಿಜನ್ ಅಳವಡಿಸಿಕೊಂಡು ಧೈರ್ಯದಿಂದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

    ರಕ್ಷಿಸಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಬೆಂಗಳೂರು: ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆ ಮಾಡಿದ ಮನಕಲುಕುವ ಘಟನೆ ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

    ಚಂದನ್(7) ಹಾಗೂ ಯುವರಾಣಿ(5) ತಾಯಿಯ ಕೃತ್ಯಕ್ಕೆ ಬಲಿಯಾದ ಮಕ್ಕಳು. ಮುನಿರತ್ನಮ್ಮ ಎಸಗಿದ ತಾಯಿ. ಮುನಿರಾಜು ಹಾಗೂ ಮುನಿರತ್ನಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ನಿತ್ಯವೂ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರು ಜಗಳವಾಡುತ್ತಿದ್ದರು.

    ಕೌಟುಂಬಿಕ ಕಲಹದ ಹಿನ್ನೆಲೆ ಮುನಿರತ್ನಮ್ಮ ಗುರುವಾರ ಯಾರು ಮನೆಯಲ್ಲಿ ಇಲ್ಲದಿದ್ದಾಗ ಮಕ್ಕಳನ್ನು ಮನೆಯ ಮುಂದಿನ ಸಂಪ್‍ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ಕೂಡ ಸಂಪ್‍ನಲ್ಲಿ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸಂಪ್‍ನಲ್ಲಿ ನೀರು ಕಡಿಮೆ ಇದ್ದಿದ್ದರಿಂದ ಮೇಲೆ ಬಂದು ಮನೆಯಲ್ಲಿ ನೇಣು ಹಾಕಿಕೊಳ್ಳಲು ಮುಂದಾಗಿದ್ದಳು. ಇದನ್ನು ನೋಡಿದ ಸ್ಥಳೀಯರು ಮುನಿರತ್ನಮ್ಮಳನ್ನು ರಕ್ಷಣೆ ಮಾಡಿದ್ದಾರೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೋಲಿಸರು, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು, ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ಮುನಿರತ್ನಮ್ಮ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.

  • ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಜನ ಸಾವನ್ನಪ್ಪಿರುವ ಘಟನೆ ವಡೋದರದಲ್ಲಿ ಶನಿವಾರ ನಡೆದಿದೆ.

    ಗುಜರಾತ್‍ನ ವಡೋದರಾ ಹತ್ತಿರದ ದಾಭೋಯಿ ತೆಹಸಿಲ್‍ನ ಫರ್ಟಿಕುಯಿ ಗ್ರಾಮದ ದರ್ಶನ್ ಹೋಟೆಲ್‍ನಲ್ಲಿ ಘಟನೆ ನಡೆದಿದ್ದು, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಪೌರ ಕಾರ್ಮಿಕನೊಬ್ಬ ಹೋಟೆಲ್‍ನ ಸಂಪ್‍ಗೆ ಇಳಿದಿದ್ದು, ಈ ವೇಳೆ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮೃತ ನಾಲ್ಕು ಜನ ಪೌರ ಕಾರ್ಮಿಕರನ್ನು ಮಹೇಶ್ ಪಟಾನ್‍ವಾಡಿಯಾ, ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್, ಮಹೇಶ್ ಹರಿಜನ್ ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ದಾಭೋಯಿನ ಥುವವಿಯಿಂದ ಕೆಲಸಕ್ಕಾಗಿ ಕರೆಸಿದ್ದರು ಎನ್ನಲಾಗಿದೆ. ಉಳಿದ ಮೂವರಾದ ಅಜಯ್ ವಾಸವ(24), ವಿಜಯ್ ಚೌಹಾಣ್(22) ಹಾಗೂ ಸಹದೇವ್ ವಾಸವ(22) ಅವರು ಹೋಟೆಲ್‍ನ ಕೆಲಸಗಾರರಾಗಿದ್ದಾರೆ.

    ಈ ಕುರಿತು ದಭೋಯ್ ವಿಭಾಗದ ಡಿಎಸ್‍ಪಿ ಕಲ್ಪೇಶ್ ಸೊಳಂಕಿ ಅವರು ಪ್ರತಿಕ್ರಿಯಿಸಿ, ಘಟನೆ ವಿವರ ಪಡೆಯಲಾಗಿದ್ದು, ಹೇಗೆ ನಡೆಯಿತು. ಘಟನೆಗೆ ನಿರ್ಧಿಷ್ಟ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮಹೇಶ್ ಪಟಾನ್‍ವಾಡಿಯಾ ಎಂಬ ಪೌರ ಕಾರ್ಮಿಕ ಮೊದಲು ಸಂಪ್‍ಗೆ ಇಳಿದು ಕೆಲಸ ಪ್ರಾರಂಭಿಸಿದ್ದಾನೆ, ಮಹೇಶ್ ಪ್ರತಿಕ್ರಿಯಿಸದ್ದನ್ನು ಕಂಡು ಕೆಲ ಹೊತ್ತಿನ ನಂತರ ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್ ಹಾಗೂ ಮಹೇಶ್ ಹರಿಜನ್ ಅವರು ಟ್ಯಾಂಕ್‍ಗೆ ಇಳಿದು ಹಿಂಬಾಲಿಸಿದ್ದಾರೆ. ನಾಲ್ಕೂ ಜನ ಪೌರ ಕಾರ್ಮಿಕರು ಹೊರಗೆ ಬಾರದಕ್ಕೆ ಮೂವರು ಹೋಟೆಲ್ ಕಾರ್ಮಿಕರು ಟ್ಯಾಂಕ್‍ಗೆ ಧುಮುಕಿದ್ದಾರೆ. ಟ್ಯಾಂಕ್‍ಗೆ ಇಳಿಯುತ್ತಿದ್ದಂತೆ ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ದಾಭೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ಹಾಗೂ ಕೊಲೆಗೆ ಕಾರಣೀಕರ್ತರಾಗಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಪ್ರತಿ ವರ್ಷ ಹಲವಾರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನುಪ್ಪುತ್ತಿದ್ದು, ಒಳಚರಂಡಿಗಳನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸದೆ, ಯಂತ್ರಗಳಿಂದ ಸ್ವಚ್ಛಗೊಳಿಸುವಂತೆ ಕಾನೂನು ರೂಪಿಸಲಾಗಿದ್ದರೂ, ಗಂಭೀರವಾಗಿ ಪರಿಗಣಿಸದೆ, ಕೆಲವರು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅನಾಹುತಗಳಿಗೆ ಕೊನೆಯೇ ಇಲ್ಲದಂತಾಗಿದೆ.

    ಸರ್ಕಾರದ ಮಾಹಿತಿಯನ್ವಯ ಸುಮಾರು 14 ಸಾವಿರದಿಂದ 31 ಸಾವಿರ ಜನ ಮಾತ್ರ ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ. ಆದರೆ, ಸಫಾಯಿ ಕರ್ಮಚಾರಿ ಆಂದೋಲನದ ಪ್ರಕಾರ ಸುಮಾರು 7.7 ಲಕ್ಷ ಪೌರ ಕಾರ್ಮಿಕರಿದ್ದು, ಕಳೆದ ದಶಕದಲ್ಲಿ ಒಟ್ಟು 1,800 ಕಾರ್ಮಿಕರು ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಬಹುತೇಕ ಪೌರ ಕಾರ್ಮಿಕರು ತಲೆ ಮಾರಿನ ಹಿಂದೆಯೇ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸವನ್ನು ಬಿಟ್ಟಿದ್ದಾರೆ. ಕೆಲವರು ಬೇರೆ ಕೆಲಸ ಸಿಗದಿದ್ದರಿಂದ ಹಾಗೂ ಜಾತಿಯ ಆಧಾರದಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಪೌರ ಕಾರ್ಮಿಕರ ಜೀವನವನ್ನು ಸುಧಾರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಬಾರಿ ಮಾತನಾಡಿದ್ದು, ಇದರ ಸಂಕೇತವಾಗಿ ಇತ್ತೀಚೆಗೆ ಅಲಹಬಾದ್‍ನಲ್ಲಿ ನಡೆದ ಕುಂಭ ಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಿದ್ದರು.

  • ಕೂಲಿ ಕೆಲ್ಸ ಮಾಡ್ತಿದ್ದ ಪೋಷಕರು – ಸಂಪ್‍ನಲ್ಲಿ ಮುಳುಗಿ ಮಕ್ಕಳಿಬ್ಬರು ದುರ್ಮರಣ

    ಕೂಲಿ ಕೆಲ್ಸ ಮಾಡ್ತಿದ್ದ ಪೋಷಕರು – ಸಂಪ್‍ನಲ್ಲಿ ಮುಳುಗಿ ಮಕ್ಕಳಿಬ್ಬರು ದುರ್ಮರಣ

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಂಪ್‍ನಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

    ನವೀನ್(5) ಮತ್ತು ಬಸಮ್ಮ(1) ಮೃತ ಮಕ್ಕಳು. ಯಾದಗಿರಿ ಮೂಲದ ಮಲ್ಲಪ್ಪ ಹಾಗೂ ಕಾಶಮ್ಮ ದಂಪತಿ ಮಕ್ಕಳು.

    ದಂಪತಿ ಕೊಡಗಿಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಕಟ್ಟಡದಲ್ಲಿ ಆಟವಾಡಿಕೊಂಡಿದ್ದ ಮಕ್ಕಳು ಸಂಪ್‍ನಲ್ಲಿ ಬಿದ್ದಿದ್ದಾರೆ. ಮಕ್ಕಳ ಚೀರಾಟದ ಸದ್ದು ಕೇಳಿ ಕೂಡಲೇ ಇವರನ್ನು ರಕ್ಷಿಸಿ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿ ರಂಗಪ್ಪ ತಿಳಿಸಿದ್ದಾರೆ.

    ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರಿಯಾಗಿ ಮಾತು ಬರದೇ ಇದ್ರು ಸ್ನೇಹಿತೆಯ ರಕ್ಷಿಸಿದ ಬಾಲಕರು

    ಸರಿಯಾಗಿ ಮಾತು ಬರದೇ ಇದ್ರು ಸ್ನೇಹಿತೆಯ ರಕ್ಷಿಸಿದ ಬಾಲಕರು

    ಚಿಕ್ಕಬಳ್ಳಾಪುರ: ಸರಿಯಾಗಿ ಮಾತು ಬಾರದ 6 ವರ್ಷದ ಬಾಲಕರಿಬ್ಬರು ಸಂಪ್‍ಗೆ ಬಿದ್ದು ಸಾವಿನಂಚಿನಲ್ಲಿದ್ದ 5 ವರ್ಷದ ಸ್ನೇಹಿತೆಯನ್ನ ರಕ್ಷಿಸಿದ್ದಾರೆ.

    ಈ ಇಬ್ಬರು ಪುಟಾಣಿಗಳೇ ನಮ್ಮ ಇವತ್ತಿನ ಪಬ್ಲಿಕ್ ಹೀರೋಗಳು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ನಿವಾಸಿಗಳಾದ ಐದು-ಐದೂವರೆ ವರ್ಷದವರಾದ ಸಾತ್ವಿಕ್ ಮತ್ತು ದೀಪಕ್, ಕಳೆದ ಬುಧವಾರ ತಮ್ಮ ಸ್ನೇಹಿತೆ 5 ವರ್ಷದ ಪೂರ್ವಿಕಾ ಜೊತೆ ಆಟ ಆಡೋಕೆ ಅಂತ ಹೊರಟಿದ್ದರು.

    ದಾರಿ ಮಧ್ಯೆ ಗಣೇಶಪ್ಪ ಎಂಬವವರಿಗೆ ಸೇರಿದ ನಿರ್ಮಾಣ ಹಂತದ ಮನೆಯ ಸಂಪ್ ಗೆ ಕಲ್ಲು ಹಾಕಲು ಪೂರ್ವಿಕಾ ಮುಂದಾಗಿದ್ದಾಳೆ. ಆ ವೇಳೆ ಆಯಾ ತಪ್ಪಿ, ಕಾಲುಜಾರಿ ಸಂಪ್‍ಗೆ ಬಿದ್ದಿದ್ದಳು. ಭೀತಿಗೊಳಗಾದ ಸಾತ್ವಿಕ್, ದೀಪಕ್ ಇಬ್ಬರೂ ತಡಮಾಡದೇ ಪೂರ್ವಿಕಾಳ ಕಾಲು ಹಿಡಿದು ಮೇಲೆ ಎತ್ತಿದ್ದಾರೆ. ಸಾತ್ವಿಕ್ ಎಂಬ ಬಾಲಕ ಪೂರ್ವಿಕಾಳನ್ನ ಮೇಲೆತ್ತಿದ ಪೋರ.

    ನೀರು ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಪೂರ್ವಿಕಾಳನ್ನು ಕಂಡ ದೀಪಕ್ ಕಿರುಚಿಕೊಂಡಿದ್ದಾನೆ. ಅಲ್ಲೆ ಕುರಿ ಮೇಯಿಸುತ್ತಿದ್ದ ಮಹಿಳೆಯೊಬ್ಬರು ನೋಡಿ ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೂರ್ವಿಕಾ ಅಜ್ಜಿ ಉಮಾ ಹಾಗೂ ಸಾತ್ವಿಕ್ ತಾಯಿ ಮಂಜುಳಾ ಅವರಿಗೆ ಪುಟಾಣಿಗಳು ನಡೆದ ನೈಜ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ಪೂರ್ವಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆರಾಮಾಗಿದ್ದಾಳೆ.

    ಸಾತ್ವಿಕ್, ದೀಪಕ್, ಮತ್ತು ಪೂರ್ವಿಕಾ ಮೂವರು ಅಕ್ಕಪಕ್ಕದ ಮನೆಯವರಾಗಿದ್ದು, ಒಂದೇ ಅಂಗನವಾಡಿಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಸದಾ ಒಟ್ಟಿಗೆ ಆಟ ಆಡ್ತಿದ್ದ ಇವರು ಈಗ ಸ್ನೇಹಿತೆಗೆ ಮರುಜನ್ಮ ನೀಡಿದ್ದಾರೆ. ಬಾಲಕರ ಸಮಯಪ್ರಜ್ಞೆಗೆ ಇಡೀ ಗ್ರಾಮಸ್ಥರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=3AAGAaq-4KU

  • ಸಂಪಿಗೆ ಬಿದ್ದ ಗೆಳತಿಯನ್ನು ರಕ್ಷಿಸಿದ 6 ವರ್ಷದ ಬಾಲಕರು

    ಸಂಪಿಗೆ ಬಿದ್ದ ಗೆಳತಿಯನ್ನು ರಕ್ಷಿಸಿದ 6 ವರ್ಷದ ಬಾಲಕರು

    ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಸಂಪ್ ಗೆ ಬಿದ್ದಿದ್ದ 5 ವರ್ಷದ ಬಾಲಕಿಯನ್ನ 6 ವರ್ಷದ ಇಬ್ಬರು ಬಾಲಕರು ಸೇರಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರವಿಪ್ರಸಾದ್ ಅನಿತಾ ದಂಪತಿಯ ಪುತ್ರಿ ಪೂರ್ವಿಕಾ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ಈ ವೇಳೆ 6 ವರ್ಷದ ಸಾತ್ವಿಕ್ ಹಾಗೂ ದೀಪಕ್ ಸಂಪಿನಿಂದ ಆಕೆಯನ್ನು ಮೇಲೆ ಎಳೆದು ರಕ್ಷಣೆ ಮಾಡಿದ್ದಾರೆ. ಗಣೇಶಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಮೂವರು ಕೂಡ ಆಟ ಆಡಲು ಕಾಲು ದಾರಿ ಮೂಲಕ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೂರ್ವಿಕಾ ಕಾಲು ಜಾರಿ ಆಕಸ್ಮಿಕ ಸಂಪಿಗೆ ಬಿದ್ದಿದ್ದಳು. ತಕ್ಷಣ ದೀಪಕ್ ಕಿರುಚಿಕೊಂಡು ಅಕ್ಕ ಪಕ್ಕದವರನ್ನ ಕೂಗಿದ್ದಾನೆ. ಅಷ್ಟರಲ್ಲೇ ಸಾತ್ವಿಕ್ ಪೂರ್ವಿಕಾಳ ಕೈ ಹಿಡಿದು ಮೇಲೆಳಿದಿದ್ದಾನೆ.

    ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಸಂಪಿನಲ್ಲಿದ್ದ ಗಲೀಜು ನೀರು ಕುಡಿದು ಅರೆ ಪ್ರಜ್ಞಾವಸ್ಥೆಗೆ ಜಾರಿದ್ದ ಪೂರ್ವಿಕಾ ಕೂಡ ಸದ್ಯ ಚೇತರಿಸಿಕೊಂಡಿದ್ದಾಳೆ. ಈ ಸಂಬಂಧ ಸಂಪು ಮುಚ್ಚುವಂತೆ ಪಂಚಾಯತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಸಂಪ್‍ಗೆ ಬಿದ್ದು 3 ವರ್ಷದ ಬಾಲಕ ಸಾವು- ಮಗು ಬಿದ್ದಿರುವುದು ತಿಳಿಯದೆ ಮುಚ್ಚಳ ಮುಚ್ಚಿದ್ದ ಪೋಷಕರು!

    ಸಂಪ್‍ಗೆ ಬಿದ್ದು 3 ವರ್ಷದ ಬಾಲಕ ಸಾವು- ಮಗು ಬಿದ್ದಿರುವುದು ತಿಳಿಯದೆ ಮುಚ್ಚಳ ಮುಚ್ಚಿದ್ದ ಪೋಷಕರು!

    ಮೈಸೂರು: ತೆರೆದಿದ್ದ ನೀರಿನ ಸಂಪ್‍ಗೆ ಬಿದ್ದು ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶ್ರೇಯಸ್(3) ನೀರಿನ ಸಂಪ್‍ಗೆ ಬಿದ್ದು ಮೃತಪಟ್ಟ ಬಾಲಕ. ಶ್ರೇಯಸ್ ಮನೆಯ ಮುಂದಿದ್ದ ಸಂಪ್‍ಗೆ ಬಿದಿದ್ದಾನೆ. ಆದ್ರೆ ಪೋಷಕರು ಮಗು ಬಿದ್ದಿರುವುದು ತಿಳಿಯದೆ ಸಂಪ್ ಮುಚ್ಚಳ ಮುಚ್ಚಿದ್ದಾರೆ.

    ಇತ್ತ ಮಗ ಕಾಣೆಯಾದ್ದನ್ನು ಮನಗಂಡ ಪೋಷಕರು ಬಾಲಕನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಸಂಪ್ ಮುಚ್ಚಳ ತೆರೆದು ನೋಡಿದಾಗ ಶ್ರೇಯಸ್ ಮೃತದೇಹ ಸಂಪ್ ನಲ್ಲಿ ಪತ್ತೆಯಾಗಿದೆ.

    ಸದ್ಯ ಈ ಬಗ್ಗೆ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಲೆಯಲ್ಲಿ ಸಂಪ್ ಗೆ ಬಿದ್ದು 4ರ ಬಾಲಕ ದಾರುಣ ಸಾವು

    ಶಾಲೆಯಲ್ಲಿ ಸಂಪ್ ಗೆ ಬಿದ್ದು 4ರ ಬಾಲಕ ದಾರುಣ ಸಾವು

    ಹೈದರಾಬಾದ್: ನರ್ಸರಿ ಶಾಲೆಯಲ್ಲಿ ತೆರೆದ ಸಂಪ್ ಗೆ ಆಯತಪ್ಪಿ ಬಿದ್ದು 4 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಈ ಘಟನೆ ಮಲ್ಕಾಜ್ಗಿರಿಯ ಬಾಚ್ಪಾನ್ ಶಾಲೆಯಲ್ಲಿ ಇಂದು ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ಶಿವರಚಿತ್ ಎಂದು ಗುರುತಿಸಲಾಗಿದೆ.

    ಪುಟ್ಟ ಬಾಲಕ ತನ್ನ ಶಾಲೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಯ್ದೆರೆದಿದ್ದ ಸಂಪ್ ಗೆ ಬಿದ್ದಿದ್ದಾನೆ. ಕೆಲ ಗಂಟೆಗಳ ಬಳಿಕ ಶಾಲೆಯಲ್ಲಿ ಶಿವರಚಿತ್ ಕಾಣದಿರುವುದನ್ನು ಕಂಡ ಶಾಲಾ ಸಿಬ್ಬಂದಿ ಬಾಲಕನ್ನು ಹುಡುಕುವಾಗ ಆತ ಸಂಪ್ ಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಆದ್ರೆ ಬಾಲಕ ಅದಾಗಲೇ ಮೃತಪಟ್ಟಿದ್ದನು.

    ಕೆಲ ತಿಂಗಳಿಂದ ಈ ಸಂಪ್ ಬಾಯ್ದೆರೆದಿದ್ದು, ಈ ಕುರಿತು ಆಡಳಿತ ಮಂಡಳಿ ಗಮನಹರಿಸಿರಲಿಲ್ಲ. ಇದರಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಸದ್ಯ ಮೃತ ಬಾಲಕನ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

  • ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

    ಹುಬ್ಬಳ್ಳಿ: 18 ತಿಂಗಳ ಮಗುವೊಂದು ಆಟವಾಡಲು ಹೋಗಿ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ಎಂಬುವರ ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಆ ಮಗು ಸಾವನ್ನಪ್ಪಿದ ದುಃಖದಲ್ಲಿಯೂ ಕೂಡ ನೇತ್ರದಾನ ಮಾಡಿ ತಂದೆ ತಾಯಿಗಳು ಮಾನವೀಯತೆ ಮೆರೆದಿದ್ದಾರೆ.

    ಗುರುವಾರ ಸಂಜೆ ನೀರು ಬಂದ ಹಿನ್ನೆಲೆಯಲ್ಲಿ ಮನೆಮಂದಿಯಲ್ಲ ನೀರು ತುಂಬುವ ಕೆಲಸದಲ್ಲಿ ಮಗ್ನರಾಗಿದ್ದರು. ಆ ವೇಳೆ ನಿಶಾನ್ ಆಟವಾಡುತ್ತಾ ಮನೆ ಮುಂದೆ ಇರೋ ನೀರಿನ ಸಂಪಿಗೆ ಬಿದ್ದಿದ್ದಾನೆ.

    ಕುಟುಂಬಸ್ಥರು ಎಲ್ಲಾ ಕಡೇ ಹುಡುಕಾಡಿದರೂ ನಿಶಾನ್ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಸಂಪ್ ನೋಡಿದಾಗ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲೇ ನಿಶಾನ್ ಪ್ರಾಣ ಪಕ್ಷಿ ಹೋಗಿತ್ತು.