Tag: ಸಂಪ್

  • Kolar | ಶಾಲೆ ಆವರಣದಲ್ಲಿದ್ದ ಸಂಪ್‌ನಲ್ಲಿ ಬಿದ್ದು 3ನೇ ತರಗತಿ ವಿದ್ಯಾರ್ಥಿ ಸಾವು

    Kolar | ಶಾಲೆ ಆವರಣದಲ್ಲಿದ್ದ ಸಂಪ್‌ನಲ್ಲಿ ಬಿದ್ದು 3ನೇ ತರಗತಿ ವಿದ್ಯಾರ್ಥಿ ಸಾವು

    ಕೋಲಾರ: ಶಾಲೆ ಆವರಣದಲ್ಲಿದ್ದ ಸಂಪ್‌ನಲ್ಲಿ (Sump)  ಬಿದ್ದು 3ನೇ ತರಗತಿ ವಿದ್ಯಾರ್ಥಿ (Student) ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಡದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಂದ್ರ (9) ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ನರೇಂದ್ರ ಇಂದು ಬೆಳಗ್ಗೆ ಶಾಲೆಗೆಂದು ಬಂದು ಬಳಿಕ ನಾಪತ್ತೆಯಾಗಿದ್ದ. ಇದನ್ನೂ ಓದಿ: ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು

    ಗ್ರಾಮದಲ್ಲೆಲ್ಲಾ ಹುಡುಕಾಟ ನಡೆಸಿದ ಪೋಷಕರು ಆತಂಕಗೊಂಡು ಎಲ್ಲೆಡೆ ವಿಚಾರಣೆ ನಡೆಸಿದರು. ಬಳಿಕ ಶಾಲೆ ಆವರಣದಲ್ಲಿರುವ ಸಂಪ್‌ನಲ್ಲಿ ವಿದ್ಯಾರ್ಥಿ ನರೇಂದ್ರ ಶವ ಪತ್ತೆಯಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

  • ಟ್ಯೂಶನ್‍ಗೆ ಹೋಗಿದ್ದ ಬಾಲಕಿ ಸಂಪ್‍ನಲ್ಲಿ ಶವವಾಗಿ ಪತ್ತೆ

    ಟ್ಯೂಶನ್‍ಗೆ ಹೋಗಿದ್ದ ಬಾಲಕಿ ಸಂಪ್‍ನಲ್ಲಿ ಶವವಾಗಿ ಪತ್ತೆ

    ಮಂಡ್ಯ: ಟ್ಯೂಶನ್‍ಗೆ ಹೋದ ಬಾಲಕಿ ನೀರಿನ ಸಂಪ್‍ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ಜರುಗಿದೆ.

    ಮಳವಳ್ಳಿ ಪಟ್ಟಣದ ಎನ್‍ಇಎಸ್ ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ದಂಪತಿಯ ಪುತ್ರಿ ದಿವ್ಯಾ(10) ಶವವಾಗಿ ಪತ್ತೆಯಾಗಿರುವ ಬಾಲಕಿಯಾಗಿದ್ದಾಳೆ. ಇಂದು ಬೆಳಗ್ಗೆ 11 ಗಂಟೆಗೆ ಟ್ಯೂಶನ್‍ಗೆ ಎಂದು ಮನೆಯಿಂದ ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಬಾಲಕಿ ಪತ್ತೆಯಾಗಿಲ್ಲ. ಇದಾದ ಬಳಿಕ ಪೋಷಕರು ಎಲ್ಲಾ ಕಡೆ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಷ್ಟಾದರೂ ಸಹ ದಿವ್ಯಾ ಮಾತ್ರ ಪತ್ತೆಯಾಗಿಲ್ಲ.

    POLICE JEEP

    ಇದಾದ ನಂತರ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್‍ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ. ಇದನ್ನೂ ಓದಿ: IIT ಉದ್ಘಾಟನೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದೇನೆ: ಪ್ರಹ್ಲಾದ್ ಜೋಶಿ

    ಸದ್ಯ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಬಾಲಕಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಾಳದೊಂದಿಗೆ ಪರಿಶೀಲನೆ ನಡೆಸಿದರು. ಈ ಸಂಬಂಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಓಲಾ, ಊಬರ್ ಆಟೋ ಬಂದ್- ಸರ್ಕಾರದಿಂದಲೇ ಆಟೋ ದರ ನಿಗದಿ

    Live Tv
    [brid partner=56869869 player=32851 video=960834 autoplay=true]

  • ಹೆತ್ತ ಮಗುವನ್ನೇ ಕೊಂದು, ಸರಗಳ್ಳತನದ ಕಥೆ ಕಟ್ಟಿದ್ಲು

    ಹೆತ್ತ ಮಗುವನ್ನೇ ಕೊಂದು, ಸರಗಳ್ಳತನದ ಕಥೆ ಕಟ್ಟಿದ್ಲು

    ಹೈದರಾಬಾದ್: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಒಂದು ವರ್ಷದ ತನ್ನ ಪುಟ್ಟ ಮಗಳನ್ನು ಮಹಿಳೆಯೊಬ್ಬಳು ಸಂಪ್‍ಗೆ ಎಸೆದು ಹತ್ಯೆಗೈದು, ನಂತರ ಮಗುವಿನ ಸಾವಿಗೆ ಸರಗಳ್ಳರು ಕಾರಣ ಎಂದು ಕಥೆ ಕಟ್ಟಿದ್ದಾಳೆ.

    ಸರಗಳ್ಳರು ಮನೆಯ ಬಳಿ ಮಗುವಿನ ಹತ್ತಿರ ಸರ ಕದಿಯಲು ಯತ್ನಿಸಿದಾಗ, ಮಗು ಸಂಪ್‍ಗೆ ಬಿದ್ದು ಸಾವನ್ನಪ್ಪಿದೆ ಎಂದು ಮಹಿಳೆ ಆರಂಭದಲ್ಲಿ ಹೇಳಿದ್ದಳು. ಆದರೆ ತನಿಖೆ ನಡೆಸಿದ ಪೊಲೀಸರು ಸರಗಳ್ಳತನ ಮಗುವಿನ ಸಾವಿಗೆ ಕಾರಣವಲ್ಲ. ಮಗುವನ್ನು ತಾನೇ ಕೊಂದು ಹಾಕಿ ನಂತರ ಮಹಿಳೆ ನಾಟಕವಾಡಿದ್ದಾಳೆ ಎಂದು ತಿಳಿಸಿದ್ದಾರೆ.

    crime

    ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮೃತ ಮಗು ಕಿರಿಯ ಮಗುವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. ಆರೋಗ್ಯದ ದೃಷ್ಟಿಯಿಂದ ಮಗುವಿಗೆ ಮತ್ತು ತನಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮಹಿಳೆ ಮಗುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಈ ಕುರಿತಂತೆ ಮಹಿಳೆ ಕೂಡ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದೀಗ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    Live Tv
    [brid partner=56869869 player=32851 video=960834 autoplay=true]

  • ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡೆದು ವ್ಯಕ್ತಿ ಸಾವು

    ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡೆದು ವ್ಯಕ್ತಿ ಸಾವು

    ಬೆಂಗಳೂರು: ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಾಗಡಿ ರಸ್ತೆಯ ಇಟಿಎ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

    ಮೋಹನ್ ವಿದ್ಯುತ್ ತಗುಲಿ ಮೃತಪಟ್ಟ ವ್ಯಕ್ತಿ. ಮೋಹನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಟಿಎ ಅಪಾರ್ಟ್ಮೆಂಟ್‌ನ ಸಂಪ್‍ನಲ್ಲಿ ಸೋರಿಕೆಯಾಗುತ್ತಿತ್ತು. ಅದನ್ನು ದುರಸ್ತಿ ಮಾಡುತ್ತಿದ್ದರು. ಸಂಪ್‍ನಲ್ಲಿ ನೀರು ಖಾಲಿ ಮಾಡಿ ಕೆಲಸ ಮಾಡುವಾಗ ಈ ಘಟನೆ ಸಂಭವಿಸಿದೆ. ಸಂಪ್‍ನಲ್ಲಿ ಕತ್ತಲಿದ್ದ ಕಾರಣ ಹೊರಗಡೆಯಿಂದ ಲೈಟ್ ಅಳವಡಿಕೆ ಮಾಡಿಕೊಂಡಿದ್ದರು. ಈ ವೇಳೆ ಅವರಿಗೆ ವಿದ್ಯುತ್ ತಗುಲಿದ್ದು, ತಕ್ಷಣ ಜೊತೆಗಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ: ತೇಜಸ್ವಿ ಸೂರ್ಯ

    ಮೋಹನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೋಹನ್ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    – ಸಾವು ಗೆದ್ದು ಬಂದ ಪುಟ್ಟ ಕಂದ

    ಬೆಂಗಳೂರು: ಸಂಪ್‍ಗೆ ಬಿದ್ದ ಮಗುವನ್ನ ರಕ್ಷಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ. ಮಗು ರಕ್ಷಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಏಪ್ರಿಲ್ 3ರಂದು ಎಲೆಕ್ಟ್ರಾನಿಕ್ ಸಿಟಿಯ ಆಂಧ್ರ ಮೆಸ್ ಕಟ್ಟಡದ ಸಂಪಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ನೀರು ತುಂಬಿಸುವ ವೇಳೆ ಟ್ಯಾಂಕರ್ ಸಿಬ್ಬಂದಿ ಅಥವಾ ಕಟ್ಟಡದ ಮಾಲೀಕರು ಸಹ ಅಲ್ಲಿ ಇರಲಿಲ್ಲ. ಈ ವೇಳೆ ಆಟವಾಡುತ್ತಾ ಬಂದ ಮಗು ತೆರೆದ ಸಂಪ್‍ಗೆ ಬಿದ್ದಿದೆ. ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ. ಆದ್ರೆ ಮಗು ಬಿದ್ದಿರೋದು ಯಾರ ಗಮನಕ್ಕೂ ಬಂದಿಲ್ಲ.

    ಸುಮಾರು ಒಂದೂವರೆ ನಿಮಿಷದ ಬಳಿಕ ಮಗುವನ್ನ ಹುಡುಕಿಕೊಂಡ ಬಂದ ತಂದೆ ಸಂಪ್ ನಲ್ಲಿ ಇಣುಕಿ ನೋಡಿದ್ದಾರೆ. ಮಗು ಕಾಣಿಸುತ್ತಿದ್ದಂತೆ ಸಂಪ್ ಗೆ ಇಳಿದ ಕಂದನ ರಕ್ಷಣೆ ಮಾಡಿದ್ದಾರೆ. ನಂತರ ಮಗುವಿನ ತಾಯಿ ಬಂದು ಮಗುವನ್ನ ಮೇಲೆತ್ತಿಕೊಂಡಿದ್ದಾರೆ. ನಂತರ ಸೇರಿದ ಜನ ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸಹಾಯ ಮಾಡಿದ್ದಾರೆ. ಸುಮಾರು ಒಂದು ನಿಮಿಷಕ್ಕೂ ಅಧಿಕ ಕಾಲ ಸಂಪ್ ನಲ್ಲಿ ಬಿದ್ದಿದ್ದ ಮಗು ಸಾವನ್ನು ಗೆದ್ದು ಬಂದಿದೆ.

  • ಕಾಣೆಯಾಗಿದ್ದ ಮಗು ಎದುರು ಮನೆಯ ಸಂಪಿನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಮಗು ಎದುರು ಮನೆಯ ಸಂಪಿನಲ್ಲಿ ಶವವಾಗಿ ಪತ್ತೆ

    – ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಚಿಕ್ಕಬಳ್ಳಾಪುರ: ಕಾಣೆಯಾಗಿದ್ದ ಮಗು ಪಕ್ಕದ ಮನೆಯ ಸಂಪಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಪಲ್ಲಿ ಗ್ರಾಮದಲ್ಲಿ ನಡೆದಿದೆ.

    ರುಚಿತಾ(2) ಮೃತ ಮಗು. ನರಸಿಂಹಮೂರ್ತಿ ರಾಧಿಕಾ ದಂಪತಿ ಮಗಳನ್ನು ಕಳೆದುಕೊಂಡು ಇದೀಗ ದುಃಖಿತರಾಗಿದ್ದಾರೆ. ಮಗು ಕಾಣೆಯಾಗಿದೆ ಎಂದು ದಂಪತಿ ತಿಳಿದಿದ್ದರು. ಆದರೆ ಇದೀಗ ಮಗುವಿನ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ನಿನ್ನೆ ಬೆಳಗ್ಗೆ 10 ಗಂಟೆಯಿಂದಲೇ ಮಗು ಕಾಣೆಯಾಗಿತ್ತು. ಪೋಷಕರು ಗ್ರಾಮದಲ್ಲೆಲ್ಲಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇಂದು ಮಗು ನೆರೆಮನೆಯ ನ್ಯಾರಪ್ಪ ಎಂಬವರ ಸಂಪಿನಲ್ಲಿ ಶವವಾಗಿ ಪತ್ತೆಯಾಗಿದೆ.

    ಮಗು ಸಿಕ್ಕ ಸಂಪಿನಲ್ಲಿ ಮೊದಲು ನೋಡಿದಾಗ ಮಗು ಕಂಡಿಲ್ಲ. ಆದರೆ ಈಗ ನೋಡಿದರೆ ಮಗು ಶವ ಪತ್ತೆಯಾಗಿದೆ. ಸಂಪಿಗೆ ಬೃಹತ್ ಗಾತ್ರದ ಚಪ್ಪಡಿ ಕಲ್ಲು ಅಡ್ಡ ಇಡಲಾಗಿದೆ. ಅದನ್ನ ಮಗು ಎತ್ತಿ ಅದರೊಳಗೆ ಬೀಳಲು ಸಾಧ್ಯವೇ ಇಲ್ಲ ಎಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

  • ಗೋಡೆ ಕುಸಿದು ಮಹಿಳೆ ಸಾವು – ಮೂವರು ಪ್ರಾಣಾಪಾಯದಿಂದ ಪಾರು

    ಗೋಡೆ ಕುಸಿದು ಮಹಿಳೆ ಸಾವು – ಮೂವರು ಪ್ರಾಣಾಪಾಯದಿಂದ ಪಾರು

    ಚಿಕ್ಕಬಳ್ಳಾಪುರ: ಸಂಪ್ ನಿರ್ಮಾಣದ ವೇಳೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ತೌಡನಹಳ್ಳಿ-ತಿಮ್ಮನಹಳ್ಳಿ ಮಾರ್ಗ ಮಧ್ಯೆ ನಡೆದಿದೆ.

    ರೈತ ರಘು ಎಂಬವರ ಜಮೀನಿನಲ್ಲಿ ಅಂಡರ್ ಗ್ರೌಂಡ್ ನೀರಿನ ಶೇಖರಣಾ ತೊಟ್ಟಿ ನಿರ್ಮಾಣದ ವೇಳೆ ಅವಘಡ ಸಂಭವಿಸಿದೆ. ಸಿಮೆಂಟ್ ಇಟ್ಟಿಗೆಗಳಿಂದ ತೊಟ್ಟಿ ನಿರ್ಮಾಣ ಮಾಡಲಾಗುತ್ತಿತ್ತು. ನಿರ್ಮಾಣ ಮಾಡಿದ ಗೋಡೆಯ ಗ್ಯಾಪ್‍ಗೆ ಮಣ್ಣು ತುಂಬಿಸಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ಗೋಡೆ ಕಾರ್ಮಿಕರ ಮೇಲೆ ಕುಸಿದುಬಿದ್ದಿದೆ.

    ಇದರ ಪರಿಣಾಮ 55 ವರ್ಷದ ಲಕ್ಷ್ಮಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಸಿದು ಮಣ್ಣು ಇಟ್ಟಿಗೆಗಳನ್ನು ತೆಗೆದು ಉಳಿದ ಮೂವರು ಕಾರ್ಮಿಕರ ಪ್ರಾಣ ಉಳಿಸಲಾಗಿದ್ದು, ಅವರೆಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.

    ಸದ್ಯ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದುರ್ಮರಣ

    ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದುರ್ಮರಣ

    ಮೈಸೂರು: ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕು ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಮಗುವನ್ನು ಒಂದೂವರೆ ವರ್ಷದ ದಯಾನಂದ ಎಂದು ಗುರುತಿಸಲಾಗಿದೆ. ಈತ ತೆಂಕಲಕೊಪ್ಪಲಿನ ನಟರಾಜ್ ಎಂಬವರ ಪುತ್ರ. ಪುಟ್ಟ ಕಂದಮ್ಮ ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ ಬಿದ್ದು ಮೃತಪಟ್ಟಿದೆ.

    ದಯಾನಂದ ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ. ಆದರೆ ಅಕ್ಕ ಮನೆ ಒಳಗೆ ಹೋಗಿ ಬರುವಷ್ಟರಲ್ಲಿ ಮಗು ನಾಪತ್ತೆಯಾಗಿದ್ದ. ಈ ವೇಳೆ ಹುಡುಕಾಡಿದಾಗ ಮಗುವಿನ ಮೃತದೇಹ ನೀರಿನ ಸಂಪಿನಲ್ಲಿ ಪತ್ತೆಯಾಗಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂತರ್ಜಾತಿ ಯುವಕನನ್ನ ಮದುವೆಯಾದ ಮಗಳು – ಮನನೊಂದ ಪೋಷಕರು ಆತ್ಮಹತ್ಮೆ

    ಅಂತರ್ಜಾತಿ ಯುವಕನನ್ನ ಮದುವೆಯಾದ ಮಗಳು – ಮನನೊಂದ ಪೋಷಕರು ಆತ್ಮಹತ್ಮೆ

    ಬೆಂಗಳೂರು: ಮಗಳು ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ಮನನೊಂದ ಅಪ್ಪ ಅಮ್ಮ ಮನೆ ಮುಂದಿನ ನೀರಿನ ಸಂಪ್‍ಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

    ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಕೇತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗಪ್ಪ (51) ಮತ್ತು ಚಂದ್ರಕಲಾ (45) ಆತ್ಮಹತ್ಯೆಗೆ ಶರಣಾದ ದಂಪತಿ. ಪ್ರೀತಿಯಿಂದ ಬೆಳೆಸಿದ ಮಗಳು ಅಂತರ್ಜಾತಿ ವಿವಾಹವಾದ ಹಿನ್ನೆಲೆ ಮನನೊಂದ ಹೆತ್ತವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಗಳು ಗುರುವಾರ ಮತ್ತೊಂದು ಸಮುದಾಯದ ಹುಡುಗನನ್ನು ಪ್ರೀತಿಸಿ ಆತನ ಜೊತೆಯೇ ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಳು. ಮದುವೆಯ ವಿಚಾರ ತಿಳಿದು ಮನನೊಂದ ದಂಪತಿ ಮನೆಯ ಮುಂದಿನ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

    ಮಾಹಿತಿ ತಿಳಿದು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಸಂಪಿನಿಂದ ಹೊರತೆಗೆದು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಸಂಪಿನಲ್ಲಿ ಮುಳುಗಿಸಿ ಮಗನ ಕೊಲೆ – ಮನೆಗೆ ಹೋಗಿ ತಾಯಿಯೂ ಆತ್ಮಹತ್ಯೆ

    ಸಂಪಿನಲ್ಲಿ ಮುಳುಗಿಸಿ ಮಗನ ಕೊಲೆ – ಮನೆಗೆ ಹೋಗಿ ತಾಯಿಯೂ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಸಂಪಿನಲ್ಲಿ ಮಗನ ಮುಳುಗಿಸಿ ಕೊಂದು ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಶೋಭಾ ತನ್ನ 7 ವರ್ಷದ ಮಗ ವಿಶಾಲ್‍ನನ್ನ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯ ಮುಂಭಾಗದ ಸಂಪಿನಲ್ಲಿ ಮಗನನ್ನ ಮುಳುಗಿಸಿ ಕೊಲೆ ಮಾಡಿದ್ದಾಳೆ. ನಂತರ ಮನೆಗೆ ಹೋಗಿ ಮೇಲಿನ ರೂಮಿನಲ್ಲಿ ಶೋಭಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮಗ ವಿಶಾಲ್ ಮಾನಸಿಕ ಅಸ್ವಸ್ಥ ವಿಶೇಷ ಚೇತನಾಗಿದ್ದು, ನಡೆದಾಡಲು ಆಗುತ್ತಿರಲಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ ಅಂತ ಮನನೊಂದು ಈ ಕೃತ್ಯ ನಡೆಸಿದ್ದಾಳೆ ಎನ್ನಲಾಗಿದೆ.

    ಮನೆಗೆ ಪತಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.