Tag: ಸಂಪುಟ ಸಭೆ

  • ಸಂಪುಟ ಸಭೆಯ ವೇಳೆ ಅರ್ಧಕ್ಕೆ ಹೊರ ನಡೆದ ರಮೇಶ್ ಜಾರಕಿಹೊಳಿ!

    ಸಂಪುಟ ಸಭೆಯ ವೇಳೆ ಅರ್ಧಕ್ಕೆ ಹೊರ ನಡೆದ ರಮೇಶ್ ಜಾರಕಿಹೊಳಿ!

    ಬೆಂಗಳೂರು: ಸಂಪುಟ ಸಭೆಯ ವೇಳೆ ಅರ್ಧಕ್ಕೆ ಎದ್ದು ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ. ಇವರ ಈ ನಡೆ ಈಗ ಮೈತ್ರಿ ಸರ್ಕಾರದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಕಬ್ಬು ಬೆಳೆಗಾರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಿಎಂ ಕೇಳಿದ ಪ್ರಶ್ನೆಯಿಂದ ಅಸಮಾಧಾನಗೊಂಡು ಹೊರನಡೆದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಸಭೆಯಲ್ಲಿ ನಿಮ್ಮ ಕಾರ್ಖಾನೆಯಿಂದಲೇ ರೈತರಿಗೆ ಸಾಕಷ್ಟು ಹಣ ಬಾಕಿ ಇದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ನೀವೇ ಮಾತನಾಡುತ್ತಿಲ್ಲ. ನಿಮ್ಮ ನಿಮ್ಮ ಜಿಲ್ಲೆಯಲ್ಲಿ ರೈತ ಮುಖಂಡರ ಜೊತೆ ಮಾತನಾಡಬೇಕಿತ್ತು. ಮಾತನಾಡದ ಕಾರಣ ಈಗ ಇಲ್ಲಿಯವರೆಗೆ ತಲುಪಿದೆ ಎಂದು ಸಿಎಂ ಖಾರವಾಗಿ ಪ್ರಶ್ನೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

    ಎಚ್.ಡಿ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಚಿವ ರಮೇಶ್ ಜಾರಕಿಹೊಳಿ ಸಭೆಯಿಂದ ಹೊರ ನಡೆದಿದ್ದಾರೆ. ಅಷ್ಟೇ ಅಲ್ಲದೆ ವಿಧಾನ ಸೌಧದ ಉತ್ತರ ಬಾಗಿಲಿನಲ್ಲಿ ಮಾಧ್ಯಮದವರು ಇರುತ್ತಾರೆ ಎನ್ನುವ ಕಾರಣಕ್ಕೆ ಮಾರ್ಗ ಬದಲಿಸಿ ಪಶ್ಚಿಮ ಬಾಗಿಲಿನ ಮೂಲಕ ಹೊರ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ಸಭೆ ಇಂದು ನಡೆಯಲಿದ್ದು, ಸಭೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆ ಬರುವ ಸಾಧ್ಯತೆಗಳಿವೆ. ಅಲ್ಲದೇ ರಾಜ್ಯದ ರೈತರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ.

    ಈಗಾಗಲೇ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲಮನ್ನಾ ಮಾಡಿರುವ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾಕ್ಕೆ ಸಮ್ಮತಿ ಸಿಗಲಿದೆ ಎನ್ನಲಾಗಿದೆ. ಇದರ ಜೊತೆಗೆ, ಕೊಡಗಿನ ನೆರೆ ಸಂತ್ರಸ್ತರಿಗೆ ಪರಿಹಾರ, ಪುನರ್ ನಿರ್ಮಾಣದ ಅನುದಾನದ ಬಗ್ಗೆಯೂ ಘೋಷಣೆಯಾಗುವ ಸಾಧ್ಯತೆ ಇದೆ.

    ಇತ್ತ ಕೇರಳ ರಾಜ್ಯ ಸರ್ಕಾರ ಪ್ರವಾಹದಲ್ಲಿ ಸಿಲುಕಿರುವ ಅಲ್ಲಿನ ಸಂತ್ರಸ್ತರ ಸಹಾಯಕ್ಕೆ ಬಂದಿದ್ದು, ಸಿಎಂ ಪಿಣರಾಯಿ ವಿಜಯನ್ ಪ್ರವಾಹ ಸಂತ್ರಸ್ತರಿಗೆ 1 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. ಕುಟುಂಬದ ಒಬ್ಬರಿಗೆ 1 ಲಕ್ಷ ರೂ. ಇದು ಅನ್ವಯವಾಗಲಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಸದ್ಯ ರಾಜ್ಯ ಸರ್ಕಾರದ ಮೇಲೂ ನಿರೀಕ್ಷೆ ಹೆಚ್ಚಾಗಿದ್ದು, ಕೊಡಗಿನ ಪ್ರವಾಹ ಸಂತ್ರಸ್ತರಿಗೂ ಬಡ್ಡಿ ರಹಿತ ಘೋಷಣೆ ಮಾಡಿ ಸರ್ಕಾರ ನೆರವು ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಶಕ್ತಿಭವನಕ್ಕೆ ಪಿಡಬ್ಲ್ಯೂಡಿ ಮಿನಿಸ್ಟರ್ ಸ್ಪೆಷಲ್ ಎಂಟ್ರಿ – ಶುಕ್ರವಾರ ರೇವಣ್ಣರ ಇಲಾಖೆಗಾಗಿಯೇ ಸಂಪುಟ ಸಭೆ..?

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣ ಸೂಪರ್ ಸಿಎಂ ಅನ್ನೋ ಮಾತು ಚರ್ಚೆಯಲ್ಲಿವೆ. ಈ ಸಮಯದಲ್ಲಿಯೇ ಶುಕ್ರವಾರ ರೇವಣ್ಣರಿಗಾಗಿಯೇ ಸಿಎಂ ಕುಮಾರಸ್ವಾಮಿ ಸಂಪುಟ ಸಭೆ ಕರೆದಿದ್ದಾರೆ.

    ಮುಖ್ಯವಾಗಿ ಹೊಳೆನರಸೀಪುರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಾಸನ ಜಿಲ್ಲೆಯ ಏತ ನೀರಾವರಿ ಯೋಜನೆ, ಹೊಸ ಕಾಲೇಜಗಳ ಸ್ಥಾಪನೆ ಬಗ್ಗೆ ಚರ್ಚೆ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ರೇವಣ್ಣ ಅವರನ್ನ ಪ್ರಶ್ನಿಸಿದಾಗ, ಹಾಗೆಲ್ಲಾ ಇಲ್ಲ. ನನ್ನ ಕ್ಷೇತ್ರದಷ್ಟೇ ಅಲ್ಲ ಬೇರೆ ವಿಷಯಗಳು ಚರ್ಚೆಗೆ ಬರಲಿವೆ. ಕಾಂಗ್ರೆಸ್ ನಾಯಕರು ನನ್ನ ಸೂಪರ್ ಸಿಎಂ ಅಂದ್ರೆ ಆಶೀರ್ವಾದ ಅಂದ್ಕೋತೀನಿ ಅಂದ್ರು.

    ಡಿ.ಕೆ.ಶಿವಕುಮಾರ್ ನಾವು ಚೆನ್ನಾಗಿಯೇ ಇದೀವಿ. ಬೇರೆ ಮಾಡಬೇಕು ಅಂತ ಅಂದ್ರೆ ಏನು ಮಾಡೋದು. ಎಂಜಿನಿಯರ್‍ಗಳ ವರ್ಗಾವಣೆಯಲ್ಲಿ ಅಸಮಾಧಾನ ವಿಚಾರಗೊತ್ತಿಲ್ಲ ಅಂದ್ರು. ಇದರ ಬೆನ್ನಲ್ಲೇ ಬಜೆಟ್ ಪೂರ್ವ ಭಾವಿ ಸಭೆಗಾಗಿ ಶಕ್ತಿಭವನಕ್ಕೆ ಕಂದಾಯ ಸಚಿವ ದೇಶಪಾಂಡೆ ಅವರು ಬಂದಾಗ ಗೇಟ್ ಒಂದಕ್ಕೆ ಬೀಗ ಹಾಕಿತ್ತು. ಪೊಲೀಸರು ಇದನ್ನ ತೆಗೆಯದೇ ದೂರ ಉಳಿದಿದ್ರು. ಹಾಗಾಗಿ, ಬೇರೊಂದು ಗೇಟ್ ಮೂಲಕ ದೇಶಪಾಂಡೆ ನಡೆದುಕೊಂಡು ಹೋದ್ರು.

    ಇತ್ತ ರೇವಣ್ಣವರು ಬಂದು ಕ್ಲೋಸ್ ಆಗಿರುವ ಗೇಟ್‍ನ ಬೀಗ ತೆಗೆಸಿ ಒಳಗೆ ಹೋದ್ರು. ಈ ಮಧ್ಯೆ, ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿ ಅಂತ ಸಚಿವ ಡಿಕೆಶಿ ಕಾರನ್ನ ಎತ್ತಿಸಿದ ಘಟನೆಯೂ ನಡೆದಿದೆ. ಇನ್ನು, ಶುಕ್ರವಾರ ಕ್ಯಾಬಿನೆಟ್‍ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಫೈನಲ್ ಸಾಧ್ಯತೆ ಇದೆ.

    https://www.youtube.com/watch?v=LHr-hAmzNAw

  • ಎಲೆಕ್ಷನ್‍ಗಾಗಿ ಸಿಎಂ ಸರ್ಕಸ್- ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್

    ಎಲೆಕ್ಷನ್‍ಗಾಗಿ ಸಿಎಂ ಸರ್ಕಸ್- ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್

    ಬೆಂಗಳೂರು: ಮಹದಾಯಿ ಹೋರಾಟದ ವೇಳೆ ರೈತರ ಮೇಲೆ ಹಾಕಿದ್ದ ಕೇಸ್‍ಗಳನ್ನು ಸರ್ಕಾರ ಹಿಂಪಡೆದಿದೆ.

    ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನರಗುಂದ, ನವಲಗುಂದ, ಗದಗ ಭಾಗಗಳು ಸೇರಿದಂತೆ ವಿವಿಧ ಕಡೆ ರೈತರ ಮೇಲೆ ಹಾಕಿದ್ದ 60ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದೆ ಪಡೆದಿದೆ. ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಸರ್ಕಾರದ ಕ್ರಮ ರಾಜಕೀಯ ಬಣ್ಣ ಪಡೆದುಕೊಂಡಿದೆ.

    ರೈತರು, ವಿವಿಧ ಸಂಘಟನೆಗಳು, ಕೋಮು ಗಲಭೆಗಳಲ್ಲಿ ಭಾಗವಹಿಸಿದ್ದ ಬರೋಬ್ಬರಿ 127 ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟ ಒಪ್ಪಿಗೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

  • 60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    – 5 ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

    ಬೆಂಗಳೂರು: ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಹಾಕುವ ಕರ್ನಾಟಕ ರಿಯಲ್ ಎಸ್ಟೇಟ್ ರೂಲ್ಸ್ ಕಾಯ್ದೆಯನ್ನ ಜಾರಿಗೆ ತರಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಮೋಡ ಬಿತ್ತನೆ ಕಾರ್ಯಕ್ಕೂ ಅಸ್ತು ಎಂದಿದೆ.

    ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ 60 ದಿನಗಳೊಳಗೆ ಮೋಡ ಬಿತ್ತನೆಗೆ ಹೊಯ್ಸಳ ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಕೆಲ ಸಚಿವರು ವಿರೋಧದ ನಡುವೆಯೂ RERA(Real Estate Regulation Act) ಕಾಯ್ದೆ ಜಾರಿಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ.

    ಇದಲ್ಲದೆ ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ:
    * ರೇರಾ ಕಾಯ್ದೆ – 2016 ಜಾರಿಗೆ ಕ್ಯಾಬಿನೆಟ್ ಅಸ್ತು.
    * ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ.
    * ಕ್ಷೀರ ಭಾಗ್ಯ ಯೋಜನೆ ವಿಸ್ತರಣೆ- ವಾರದಲ್ಲಿ 5 ದಿನ ಮಕ್ಕಳಿಗೆ ಹಾಲು.
    * ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ವಿತರಣೆ.
    * ಬಿಎಸ್‍ಎನ್‍ಎಲ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವೈ-ಫೈ ಸೇವೆ.
    * ಬಳ್ಳಾರಿಯ ವಿಮ್ಸ್, ಹುಬ್ಬಳಿಯ ಕಿಮ್ಸ್‍ನಲ್ಲಿ 160 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ, ಕೋಲಾರಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ಬಿಸಿಯೂಟ ತಯಾರಿಕರು, ಅಡುಗೆ ಸಹಾಯಕರಿಗೆ 200 ಗೌರವ ಧನ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ.
    * ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ 3 ಲಕ್ಷ ರೂ ವರಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ.

    60 ದಿನದಲ್ಲಿ ಮೋಡ ಬಿತ್ತನೆ ಮಾಡ್ತೀವಿ ಅಂತಿದ್ದಾರೆ. ಆದರೆ ಮಳೆ ಅವಶ್ಯಕತೆ ಇರೋದು ಈಗ. ಈಗ ಬಿಟ್ಟು 2 ತಿಂಗಳಾದ್ಮೇಲೆ ಮೋಡ ಬಿತ್ತನೆ ಮಾಡಿದ್ರೆ ಏನ್ ಪ್ರಯೋಜನ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.