Tag: ಸಂಪುಟ ಸಭೆ

  • ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    – ದೇವಾಲಯದ ಕುಂಭಾಭಿಷೇಕದಲ್ಲಿ ಡಿಕೆ ಶಿವಕುಮಾರ್‌ ದಂಪತಿ ಭಾಗಿ, ಹೋಮ-ಹವನ ನೆರವೇರಿಕೆ

    ರಾಮನಗರ: ಕನಕಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಯ್ಯಪ್ಪಸ್ವಾಮಿ ದೇವಾಲಯದ (AyyappaSwamy Temple) ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ದಂಪತಿ ಭಾಗಿಯಾಗಿದ್ದಾರೆ.

    ಗುರುವಾರ ರಾತ್ರಿ ಸ್ವಕ್ಷೇತ್ರ ಕನಕಪುರಕ್ಕೆ (Kanakapura) ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ತಮ್ಮ ಆಪ್ತನ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಳಿಕ ಅಯ್ಯಪ್ಪಸ್ವಾಮಿ ದೇವಾಲಯದ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸಿ ಹೋಮ-ಹವನ ನೆರವೇರಿಸಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

    ನಂತರ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ದೇವಾಲಯದಲ್ಲೇ ಪ್ರಸಾದ ಸೇವಿಸಿದ್ದಾರೆ. ಶುಕ್ರವಾರ (ಜೂ.2) ಸಚಿವ ಸಂಪುಟ ಸಭೆ (Cabinet Meeting) ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ವಾಪಸ್ಸ್ ಆಗಿದ್ದಾರೆ. ಜೂ.3ರಂದು ಕನಕಪುರ ಕ್ಷೇತ್ರದ ಮತದಾರರಿಗೆ ಅಭಿನಂದನೆ ತಿಳಿಸಲು ವಿಶೇಷ ಸಭೆಗಳನ್ನ ಹಮ್ಮಿಕೊಂಡಿದ್ದು ಇಡೀ ದಿನ ಕ್ಷೇತ್ರದೆಲ್ಲೆಡೆ ಡಿಸಿಎಂ ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

  • ಕಾವೇರಿ ರೈತರು ಸೇರಿ 51 ಕ್ರಿಮಿನಲ್ ಕೇಸ್ ವಾಪಸ್- ರಾಘವೇಶ್ವರ ಸ್ವಾಮೀಜಿಗಳ ಸಿಡಿ ಪ್ರಕರಣ ರೀ ಓಪನ್

    ಕಾವೇರಿ ರೈತರು ಸೇರಿ 51 ಕ್ರಿಮಿನಲ್ ಕೇಸ್ ವಾಪಸ್- ರಾಘವೇಶ್ವರ ಸ್ವಾಮೀಜಿಗಳ ಸಿಡಿ ಪ್ರಕರಣ ರೀ ಓಪನ್

    ಬೆಂಗಳೂರು: ಕಾವೇರಿ, ಎತ್ತಿನಹೊಳೆ, ಕಳಸಾ ಬಂಡೂರಿ ಹೋರಾಟಗಾರರು ಸೇರಿದಂತೆ ಹಲವು ರೈತರ ಮೇಲೆ ದಾಖಲಾಗಿದ್ದ 51 ಕ್ರಿಮಿನಲ್ ಕೇಸ್‍ಗಳನ್ನು ಕೈಬಿಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

    51 ಕೇಸ್‍ಗಳ ಪೈಕಿ ಮಂಡ್ಯ ಜಿಲ್ಲೆಯ ಕಾವೇರಿ ಹಿತರಕ್ಷಣಾ ಸಮಿತಿ ಹೋರಾಟಗಾರರ ಮೇಲೆಯೇ 35 ಕೇಸ್‍ಗಳಿವೆ. ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ವಿರುದ್ಧ ದಾಖಲಾಗಿದ್ದ ಕೇಸನ್ನು ಸಹ ಸರ್ಕಾರ ಹಿಂಪಡೆದಿದೆ. ಈ ಮಧ್ಯೆ 2010ರಲ್ಲಿ ರಾಘವೇಶ್ವರ ಸ್ವಾಮೀಜಿಗಳ ಸಿಡಿಯನ್ನು ತಯಾರಿಸಿ ಹಂಚಿಕೆ ಮಾಡಿದ್ದ 12 ಮಂದಿ ವಿರುದ್ಧ 2015ರಲ್ಲಿ ಕೈಬಿಡಲಾಗಿದ್ದ ಪ್ರಕರಣವನ್ನು ರೀ ಓಪನ್ ಮಾಡಲು ಸರ್ಕಾರ ನಿರ್ಧರಿಸಿದೆ.

    ಮಾಹಿತಿ:
    2010ರಲ್ಲಿ ಗೋಕರ್ಣ ಠಾಣೆಯಲ್ಲಿ ಸ್ವಾಮೀಜಿಯ ನಕಲಿ ಸೆಕ್ಸ್ ಸಿ.ಡಿ ಮಾಡಿದ ಕುರಿತು ಹಾಗೂ ಗೋಕರ್ಣದಲ್ಲಿ ಹಂಚಿಕೆ ಮಾಡಿದ ಆರೋಪದ ಮೇಲೆ 12 ಜನರ ಮೇಲೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಮಟಾ ಕೋರ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಆದರೆ 2015ರಲ್ಲಿ ಅಂದಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆದಿತ್ತು.

    ಜನಸೇವೆಗಳನ್ನು ಮನೆ ಮನೆಗೆ ತಲುಪಿಸುವ ಜನಸೇವಕ ಯೋಜನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸರ್ಕಾರಿ ಸೇವೆ ಬೇಕಾದರೆ ಜನಸೇವಕ ಕೇಂದ್ರದ ಸಂಖ್ಯೆ 080-44554455ಗೆ ಕರೆ ಮಾಡಿದರೆ 53 ಸೇವೆಗಳು ಲಭ್ಯ ಆಗಲಿವೆ. ಪ್ರಾಯೋಗಿಕವಾಗಿ ಈಗ ಬೆಂಗಳೂರಿನ ರಾಜಾಜಿನಗರ, ಮಹಾದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಐಟಿಐನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಆಕಾಶದೀಪ ಜನಸ್ನೇಹಿ ಸಹಾಯವೇದಿಕೆ, ಕಾರ್ಮಿಕ ಸಹಾಯವಾಣಿಗಳಿಗೆ ಸಹ ಸಂಪುಟ ಒಪ್ಪಿಗೆ ನೀಡಿದೆ.

  • 10 ಕೋಟಿ ರೂ. ಕೊಟ್ಟರೆ ಗ್ರಾಮಕ್ಕೆ ದಾನಿಗಳ ಹೆಸರು ನಾಮಕರಣ: ಬಿಎಸ್‍ವೈ

    10 ಕೋಟಿ ರೂ. ಕೊಟ್ಟರೆ ಗ್ರಾಮಕ್ಕೆ ದಾನಿಗಳ ಹೆಸರು ನಾಮಕರಣ: ಬಿಎಸ್‍ವೈ

     -ಮನೆ ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರೂ.

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಸಿಎಂ ಮಹತ್ವದ ನಿರ್ಧಾರವನ್ನು ತಿಳಿದಿದ್ದು, 10 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

    ನೆರೆ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಇತ್ತ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸಿಎಂ ಅವರು ಮಾಡಿದ್ದ ಮನವಿಗೆ ಸಹಾಯದ ಹಸ್ತಚಾಚಿರುವ 60ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಸಿಎಂ ಅವರಿಗೆ ನೆರವಿನ ಭರವಸೆಯನ್ನು ನೀಡಿದ್ದಾರೆ.

    ಪ್ರಮುಖವಾಗಿ ಬ್ರಿಟಾನಿಯಾ ಕಂಪನಿಯು ಆಹಾರ ಪದಾರ್ಥಗಳ ಕೊಡುಗೆ. ಟಿವಿಎಸ್ ಮೋಟಾರು ಸಂಸ್ಥೆ 1 ಕೋಟಿ ರೂ., ಜಿಎಸ್‍ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡುವ ಭರವಸೆಯನ್ನು ನೀಡಿದೆ. ಶಾಹಿ ಎಕ್ಸ್ ಪೋಟ್ರ್ಸ್ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು. ಕಾರ್ಪೋರೇಷನ್ ಬ್ಯಾಂಕ್ ಒಂದು ವಾರದಲ್ಲಿ ದೇಣಿಗೆ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ತೀರ್ಮಾನ ಮಾಡಿದೆ. ಟಯೋಟ ಸಂಸ್ಥೆಯಿಂದ 2 ಕೋಟಿ ರೂ., ಲೋಗೋಸ್‍ಗ್ರೂಪ್ 25 ಲಕ್ಷ ರೂ., ಕ್ರೆಡಾಯ್ ಸಂಸ್ಥೆಯಿಂದ 3 ಕೋಟಿ ರೂ. ಹಾಗೂ ವೋಲ್ವೋ ಗ್ರೂಪ್‍ನ ನೌಕರರ ಒಂದು ದಿನದ ಸಂಬಳ ಕೊಡಲು ನಿರ್ಧಾರ ಮಾಡಲಾಗಿದೆ. ಯುನೈಟೆಡ್ ಟೆಕ್ನಾಲಜಿಯಿಂದ ಅಗತ್ಯ ಮೂಲಸೌಕರ್ಯ ಪೂರೈಕೆ, ಜೆಕೆ ಸಿಮೆಂಟ್, ಆಹಾರ ಪದಾರ್ಥಗಳ ನೆರವು ನೀಡುವ ಭರವಸೆ ನೀಡಿದೆ ಎಂಬ ಮಾಹಿತಿ ಲಭಿಸಿದೆ.

    ಮಾಸಿಕ 5 ಸಾವಿರ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಮಾಡಿರುವ ಸರ್ಕಾರ, ಪ್ರವಾಹದಲ್ಲಿ ಸಂಪೂರ್ಣ ಮನೆಯನ್ನು ಕಳೆದುಕೊಂಡವರಿಗೆ ಮಾಸಿಕ 5 ಸಾವಿರ ರೂ.ಗಳನ್ನು 10 ತಿಂಗಳ ಅವಧಿಗೆ ನೀಡಲು ಒಪ್ಪಿಗೆ ನೀಡಲಾಗಿದೆ. ಆಯಾ ಜಿಲ್ಲೆಯಗಳ ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿ ನೆರವು ಪಡೆಯಲು ಸೂಚಿಸಲಾಗಿದೆ.

    ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದ್ದು, 20.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ತಕ್ಷಣ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿದೆ. ಎನ್.ಡಿ.ಆರ್.ಎಫ್.ನಿಂದ ಲಭಿಸುವ 6,200 ರೂ.ಗಳೊಂದಿಗೆ ರಾಜ್ಯ ಸರ್ಕಾರದ 3,800 ರೂ.ಗಳನ್ನು ಸೇರಿಸಿ ಒಟ್ಟು 10 ಸಾವಿರ ರೂ.ಗಳ ಪರಿಹಾರವಾಗಿ ನೀಡಲಾಗುತ್ತದೆ.

  • ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ – ಕೃಷ್ಣ ಬೈರೇಗೌಡ ಸವಾಲು

    ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ – ಕೃಷ್ಣ ಬೈರೇಗೌಡ ಸವಾಲು

    ಬೆಂಗಳೂರು: ಪ್ರತಿಪಕ್ಷ ಬಿಜೆಪಿಗೆ ವಿಶ್ವಾಸ ಇದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ ಎಂದು ಕೃಷ್ಣ ಬೈರೇಗೌಡ ಅವರು ಸವಾಲು ಎಸೆದಿದ್ದಾರೆ.

    ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದುವರೆಗೆ ಮೈತ್ರಿ ಸರ್ಕಾರ ಮೇಲೆ ಬಿಜೆಪಿ ನಡೆಸುತ್ತಿರುವ 7ನೇ ದಾಳಿ ಇದಾಗಿದೆ. ಇದುವರೆಗೂ ಎಲ್ಲಾ ದಾಳಿಗಳನ್ನು ಮೆಟ್ಟಿ ನಿಂತಿದ್ದೇವೆ. ಈ ಬಾರಿ ಹೆಚ್ಚಿನ ಮಟ್ಟದಲ್ಲಿ ದಾಳಿ ಆಗಿದೆ. ಒಗ್ಗಟ್ಟಿನಿಂದ ಏನೆಲ್ಲಾ ಅವಕಾಶಗಳಿದೆ ಅವುಗಳನ್ನು ಬಳಕೆ ಮಾಡಿಕೊಂಡು ಸರ್ಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಲಾಯಿತು ಎಂದರು.

    ಬಿಜೆಪಿ ಅವರು ಸಂಖ್ಯಾಬಲ ಇಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಅವರಿಗೆ ಅಷ್ಟು ವಿಶ್ವಾಸ ಇದ್ದರೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಿ ಎಂದರು. ಅಲ್ಲದೇ ರಾಜ್ಯ ಸರ್ಕಾರ ರಾಜ್ಯಪಾಲರ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸುತ್ತದೆ. ನಾಳೆಯಿಂದ ಸದನ ಆರಂಭ ಆಗಲಿದ್ದು, ಸರ್ಕಾರ ಹಣಕಾಸು ವಿಧೇಯಕವನ್ನು ಮತಕ್ಕೆ ಹಾಕಲಿದೆ. ಆಗ ನಮಗೆ ಬಹುಮತ ಇದೆಯೋ ಇಲ್ವೋ ಗೊತ್ತಾಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆ ಮಸೂದೆ ಹಿಂಪಡೆಯುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಬಿ.ಎಸ್ ಪಾಟೀಲ್ ಕಮಿಟಿ ವರದಿ ತಿರಸ್ಕಾರ ಮಾಡಿಲ್ಲ, ಬೇರೆ ರೀತಿ ಅನುಷ್ಠಾನ ಗೊಳಿಸುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆಯನ್ನು ನೀಡಿದರು.

    ನಗರಾಭಿವೃದ್ಧಿ ಇಲಾಖೆ ವತಿಯಿಂದ ಕುಷ್ಟಗಿ ತಾಲ್ಲೂಕಿನ ತಾವರಗೆಡ ಗ್ರಾಮಕ್ಕೆ ನೀರಾವರಿಗೆ 88 ಕೋಟಿ ರೂ. ಮೇಲುಕೋಟೆಯ ಎಲ್ಲಾ ಕಲ್ಯಾಣಿಗಳ ಅಭಿವೃದ್ಧಿಗೆ 32 ಕೋಟಿ, ಮಂಡ್ಯದಲ್ಲಿ ಲೋಕ ಪಾವನ ನದಿಯಿಂದ ಕೆರೆ ತುಂಬಲು 30 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.

  • ಗುರುವಾರ ಸಚಿವ ಸಂಪುಟ ಸಭೆ – ರಾಜೀನಾಮೆ ನೀಡ್ತಾರಾ ಸಿಎಂ?

    ಗುರುವಾರ ಸಚಿವ ಸಂಪುಟ ಸಭೆ – ರಾಜೀನಾಮೆ ನೀಡ್ತಾರಾ ಸಿಎಂ?

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಂದುವರಿದ ರಾಜಕೀಯ ಕ್ಷೀಪ್ರ ಬೆಳವಣಿಗೆಗಳ ನಡುವೆಯೇ ಸಿಎಂ ಅವರು ನಾಳೆ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಗುರುವಾರ ನಡೆಯಲಿರುವ ಸಂಪುಟ ಸಭೆ ಕುತೂಹಲ ಮೂಡಿಸಿದ್ದು, ಬೆಳಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ಆರಂಭವಾಗಲಿದೆ.

    ಇಂದು ಅತೃಪ್ತ ಶಾಸಕರ ಮನವೊಲಿಕೆ ಕಾರ್ಯ ಹಾಗೂ ಮತ್ತೆ ಇಬ್ಬರು ಕಾಂಗ್ರೆಸ್ ಶಾಸಕ ರಾಜೀನಾಮೆಗೆ ಕಾರ್ಯ ನಡೆಯಿತು. ಈ ಹಿನ್ನೆಲ್ಲೆಯಲ್ಲಿ ಸಿಎಂ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಪ್ರಮುಖವಾಗಿದೆ. ಇತ್ತ ಸಿಎಂ ಅವರು ಇಂದು ಸಂಜೆ ವೇಳೆಗೆ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವ ಚರ್ಚೆ ನಡೆಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಈ ಚರ್ಚೆಯಲ್ಲಿ ಮುಂದಿನ ನಡೆಯ ಕುರಿತ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಇಂದು ರಾಜೀನಾಮೆ ನೀಡಿದ್ದ ಶಾಸಕ ಸುಧಾಕರ್ ಅವರ ಮನವೊಲಿಕೆ ಮಾಡುವ ಸಿದ್ದರಾಮಯ್ಯ ಅವರ ಪ್ರಯತ್ನ ವಿಫಲವಾಗಿದೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಶಾಸಕ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಅತ್ತ ಮುಂಬೈಗೆ ತೆರಳಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ವಿಫಲವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಬಂಡಾಯ ಶಾಸಕ ರಾಜೀನಾಮೆ ವಾಪಸ್ ಪಡೆಯುವ ಕುರಿತು ಮನವೊಲಿಸಲು ಮೈತ್ರಿ ನಾಯಕರಿಗೆ ಆಗಿಲ್ಲ. ಸದ್ಯ ದೋಸ್ತಿ ನಾಯಕರು ಸರ್ಕಾರ ಉಳಿಸುವ ಕಾರ್ಯವನ್ನು ಕೈ ಬಿಟ್ಟಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ರಾಜೀನಾಮೆಗೆ ಮುಂದಾಗಲಿದ್ದಾರಾ ಎಂಬ ಅನುಮಾನ ಮೂಡಿದೆ.

  • ಚುನಾವಣೆ ಬಳಿಕ ಮೊದಲ ಸಂಪುಟ ಸಭೆ – ವಿವಾದಕ್ಕೀಡಾಯ್ತು ಸರ್ಕಾರದ ನಿರ್ಣಯ

    ಚುನಾವಣೆ ಬಳಿಕ ಮೊದಲ ಸಂಪುಟ ಸಭೆ – ವಿವಾದಕ್ಕೀಡಾಯ್ತು ಸರ್ಕಾರದ ನಿರ್ಣಯ

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ಸಭೆಯ ನಿರ್ಣಯ ವಿವಾದಕ್ಕೀಡಾಗಿದೆ.

    ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಮತ್ತು ಕೇರೆಕೊಪ್ಪ ಗ್ರಾಮಗಳಲ್ಲಿ 3,666 ಎಕರೆ ಗಣಿ ಭೂಮಿಯನ್ನು ಜಿಂದಾಲ್ ಕಂಪನಿಗೆ ಕ್ರಯ ಮಾಡಿಕೊಡಲು ಸಂಪುಟ ಸಮ್ಮತಿ ನೀಡಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೊಂದು ಹಗರಣ ಆಗುತ್ತೆ. ಸರ್ಕಾರದ ಪತನಕ್ಕೆ ಅಂತಿಮ ಕ್ಷಣ ಬಂದಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕ್ಯಾಬಿನೆಟ್ ನಿರ್ಣಯ ಕೈಬಿಟ್ಟು, ಯೋಜನೆಯ ಷರತ್ತುಗಳನ್ನು ಬಹಿರಂಗ ಮಾಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

    ಇತ್ತ ಮಾಜಿ ಸಿಎಂ ಮಾತಿಗೆ ತಿರುಗೇಟು ಕೊಟ್ಟಿರುವ ಸಚಿವ ಕೃಷ್ಣಭೈರೇಗೌಡ, 10 ವರ್ಷ ಭೂಮಿ ಗುತ್ತಿಗೆ ನೀಡಿ ನಂತರ ಕ್ರಯ ಮಾಡಿಕೊಡುವ ಒಪ್ಪಂದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿದೆ. ಇದರಲ್ಲಿ ಅಕ್ರಮ ನಡೆದಿರುವುದಾದರೆ ಜಗದೀಶ್ ಶೆಟ್ಟರ್ ಕಾಲದಲ್ಲೇ ನಡೆದಿರಬೇಕು ಎಂದಿದ್ದಾರೆ.

    ಈ ನಡುವೆ ಸರ್ಕಾರ ನಡೆ ವಿರೋಧಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್.ಕೆ ಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಜಿಂದಾಲ್ ಕಂಪನಿ ಮೇಲೆ ಅಕ್ರಮ ಗಣಿಗಾರಿಕೆಯ ಹಲವಾರು ಆರೋಪಗಳಿವೆ. ಜೊತೆಗೆ ಜಿಂದಾಲ್‍ನಿಂದ ಎಂಎಸ್‍ಐಎಲ್‍ಗೆ 1,200 ಕೋಟಿ ಬಾಕಿ ಉಳಿಸಿಕೊಂಡಿದೆ. ಇಂಥ ಸಂಸ್ಥೆಯಿಂದ ಸರ್ಕಾರ ಬಾಕಿ ವಸೂಲು ಮಾಡಲಿ. ಅದು ಬಿಟ್ಟು ಇಷ್ಟು ದೊಡ್ಡ ಪ್ರಮಾಣದ ಸರ್ಕಾರಿ ಭೂಮಿ ಕ್ರಯ ನೀಡಲು ಮುಂದಾಗಿದ್ದು ಸರಿಯಲ್ಲ. ಇದರಿಂದ ಕೈಗಾರಿಕಾ ನೀತಿಗೂ ಅಡಚಣೆಯಾಗಲಿದೆ. ತಕ್ಷಣವೇ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯಿರಿ ಅಂತ ಎಚ್‍ಕೆ ಪಾಟೀಲರು ಆಗ್ರಹಿಸಿದ್ದಾರೆ.

  • ಕ್ಯಾಬಿನೆಟ್ ಇನ್‍ಸೈಡ್ ಸ್ಟೋರಿ- ತುರ್ತು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗರಂ!

    ಕ್ಯಾಬಿನೆಟ್ ಇನ್‍ಸೈಡ್ ಸ್ಟೋರಿ- ತುರ್ತು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗರಂ!

    ಬೆಂಗಳೂರು: ಬರಗಾಲ ಕುರಿತು ಕರೆದಿದ್ದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಸಿಎಂ ದೋಸ್ತಿ ನಾಯಕರ ನಡೆಯ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಹಾಗೂ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರ ಅಸಹಕಾರ ವಿಷಯಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಹೇಳಿಕೆಗಳನ್ನು ಕೊಡುತ್ತಿರುವ ಕಾಂಗ್ರೆಸ್ ಸಚಿವರು, ಶಾಸಕರ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದರು ಎಂಬ ಮಾಹಿತಿ ಲಭಿಸಿದೆ.

    ಮೈತ್ರಿ ಧರ್ಮದಂತೆ ಐದು ವರ್ಷ ಸಿಎಂ ಬದಲಾವಣೆ ಇಲ್ಲ. ಕಾಂಗ್ರೆಸ್ ನಾಯಕರು ವರಿಷ್ಠರ ನಿರ್ಧಾರಕ್ಕೆ ಸೆಡ್ಡು ಹೊಡೆದು ಸಿದ್ದರಾಮಯ್ಯ ಸಿಎಂ ಆಗಲಿ ಅಂತಿರೋದು ಎಷ್ಟು ಸರಿ ಎಂದು ಕುಮಾರಸ್ವಾಮಿ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರಂತೆ. ಸರ್ಕಾರಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನಿಲ್ಲಿಸುವಂತೆ ನಿಮ್ಮವರಿಗೆ ತಾಕೀತು ಮಾಡಿ ಎಂದು ಡಿಸಿಎಂ ಪರಮೇಶ್ವರ್ ಗೆ ಸಿಎಂ ಸಿಟ್ಟಿನಲ್ಲೇ ಸೂಚಿಸಿದರು ಎಂದು ತಿಳಿದು ಬಂದಿದೆ.

    ಮಂಡ್ಯ, ತುಮಕೂರುಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡದ ಸ್ಥಳೀಯ ಕೈಮುಖಂಡರ ವಿರುದ್ಧವೂ ಸಿಎಂ ಸಂಪುಟ ಸಭೆಯಲ್ಲಿ ಕಿಡಿಕಾರಿದ್ದಾರಂತೆ. ಮಂಡ್ಯದಲ್ಲಿ ರೆಬೆಲ್ ಕಾಂಗ್ರೆಸ್ ಮುಖಂಡರ ವಿರುದ್ಧ ಖುದ್ದು ವೇಣುಗೋಪಾಲ್ ಅವರಿಗೇ ದೂರು ಕೊಟ್ರೂ ಪ್ರಯೋಜನ ಆಗಿಲ್ಲ. ಮಂಡ್ಯ ವಿಚಾರವನ್ನು ಸಿಎಂ ಎತ್ತುತ್ತಿದ್ದ ಹಾಗೆ ಕಾಂಗ್ರೆಸ್ ಸಚಿವರು ಮೌನಕ್ಕೆ ಜಾರಿದರು. ಪರಮೇಶ್ವರ್ ಅವರು ತುಮಕೂರು ವಿಚಾರದಲ್ಲಿ ಸಮರ್ಥನೆ ಮಾಡ್ಕೊಂಡಿದ್ದು ಬಿಟ್ಟರೆ ಉಳಿದ ಯಾವುದೇ ವಿಚಾರಕ್ಕೂ ಯಾವ ನಾಯಕರು ಸಮರ್ಥನೆಗೆ ಮುಂದಾಗಿಲ್ಲ ಎನ್ನಲಾಗಿದೆ.

  • ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!

    ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!

    ಹುಬ್ಬಳ್ಳಿ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿಗೆ ಆಗಮಿಸುವಂತೆ ಕರೆ ಬಂದಿದ್ದು, ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕುಂದಗೋಳ ಉಪಚುನಾವಣೆ ಜವಾಬ್ದಾರಿಯನ್ನ ವಹಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಿಕೆ ಶಿವಕುಮಾರ್ ಅವರು, ದೂರವಾಣಿ ಮೂಲಕ ಮಾತನಾಡಿದ ಹೈಕಮಾಂಡ್‍ಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದು, ಅನಾರೋಗ್ಯ ಸಮಸ್ಯೆ ಇರುವ ಕಾರಣ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.

    ಇತ್ತ ಗುರುವಾರ ನಡೆಯಲಿರುವ ಸಂಪುಟ ಸಭೆಗೂ ಡಿಕೆ ಶಿವಕುಮಾರ್ ಅವರು ಗೈರು ಹಾಜರಿ ಆಗಲಿದ್ದು, ಹುಬ್ಬಳ್ಳಿಯಲ್ಲಿಯೇ ಉಳಿಯಲಿದ್ದಾರೆ. ಹುಬ್ಬಳ್ಳಿಯ ಕಾಟನ್ ಕೌಂಟಿ ರೆಸಾರ್ಟಿನಲ್ಲಿ ಅವರು ತಂಗಲಿದ್ದು, ಅಲ್ಲಿಯೇ ಕುಂದಗೋಳದ ಪ್ರಮುಖ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಪುನಃ ಕುಂದಗೋಳ ಉಪಚುನಾವಣೆ ಬಹಿರಂಗ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

  • ಬಡ್ತಿ ಮೀಸಲಾತಿಗೆ ಸಂಪುಟ ಸಮ್ಮತಿ – ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ

    ಬಡ್ತಿ ಮೀಸಲಾತಿಗೆ ಸಂಪುಟ ಸಮ್ಮತಿ – ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕ ಜಾರಿಗೆ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದಲ್ಲಿ ಆರಂಭವಾದ ಕ್ಯಾಬಿನೆಟ್ ಸಭೆ 3 ಗಂಟೆಗೂ ಹೆಚ್ಚು ಕಾಲ ನಡೆಯಿತು. 60 ವಿಷಯಗಳಿಗೆ ಮತ್ತೆ 40 ಹೊಸ ವಿಷಯ ಅಜೆಂಡಕ್ಕೆ ಸೇರ್ಪಡೆಯಾಯ್ತು.

    ಸದನದಲ್ಲಿ ಅಂಗೀಕಾರಗೊಂಡ ಬಡ್ತಿ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ತಕ್ಕಂತೆ ಮಾರ್ಗಸೂಚಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕೆಲ ತಿದ್ದುಪಡಿಗಳೊಂದಿಗೆ ಬಡ್ತಿ ಮೀಸಲಾತಿ ವಿಧೇಯಕ ಅಂಗೀಕಾರವಾಗಿತ್ತು. ವಿಧೇಯಕ ಅಂಗೀಕಾರವಾಗಿದ್ದರೂ, ಜಾರಿಗೆ ಸಿಎಂ ಮುಂದಾಗಿರಲಿಲ್ಲ. ಸಂಪುಟ ಸಭೆಯಲ್ಲಿ ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆಯಿತು.

    ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವಿಧೇಯಕ ಜಾರಿಗೆ ದಲಿತ ಸಚಿವರ ಒತ್ತಾಯ ಮಾಡಿದರು. ಸಚಿವರ ಆಗ್ರಹಕ್ಕೆ ಮಣಿದ ಸಿಎಂ ಕುಮಾರಸ್ವಾಮಿ, ವಿಧಾನಸಭೆ ಅಂಗೀಕಾರ ಮಾಡಿದ ವಿಧೇಯಕಕ್ಕೆ ತಕ್ಕಂತೆ ಪರಿಶಿಷ್ಟ ಜಾತಿಯ ನೌಕರರಿಗೆ ಆದ ಹಿನ್ನಡೆ ಸರಿಪಡಿಸಲು ತೀರ್ಮಾನ ಮಾಡಲಾಯ್ತು. ಇದಲ್ಲದೆ ಕೆಲವು ಮಹತ್ವದ ನಿರ್ಣಯಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

    ಕ್ಯಾಬಿನೆಟ್ ಹೈಲೈಟ್ಸ್:
    * 1 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ
    * 126 ಕೋಟಿ ವೆಚ್ಚದಲ್ಲಿ 44.57 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ
    * ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ
    * ಭದ್ರಾವತಿಯಲ್ಲಿ ಹೊಸ ಸಿಆರ್ ಪಿಎಫ್ ಬೆಟಾಲಿಯನ್ ಸ್ಥಾಪನೆಗೆ 50 ಎಕರೆ ಜಮೀನು
    * ಅರಸೀಕೆರೆ ಕೋರ್ಟ್ ಕಟ್ಟಡಕ್ಕೆ 13 ಕೋಟಿ ಅನುದಾನ
    * ಬಳ್ಳಾರಿಯಲ್ಲಿ 15 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರಿಗೆ ವಸತಿ ಕಟ್ಟಡ
    * ಕರ್ನಾಟಕ ಆಯುಷ್ ನೇಮಕಾತಿ ತಿದ್ದುಪಡಿಗೆ ಒಪ್ಪಿಗೆ
    * ನೂತನ ಪ್ರವಾಸೋದ್ಯಮ ನೀತಿಗೆ ಸಂಪುಟ ನಿರ್ಧಾರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಸರ್ಕಾರ ನಡೆಸಬೇಕೇ? ಬೇಡವೇ? – ಸಂಪುಟ ಸಭೆಯಲ್ಲಿ ಸಿಎಂ ಕೆಂಡಾಮಂಡಲ

    ನಾನು ಸರ್ಕಾರ ನಡೆಸಬೇಕೇ? ಬೇಡವೇ? – ಸಂಪುಟ ಸಭೆಯಲ್ಲಿ ಸಿಎಂ ಕೆಂಡಾಮಂಡಲ

    ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ನಾಯಕರ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳೆದ ಒಂದು ವಾರದಿಂದ ಸರ್ಕಾರದ ವಿರುದ್ಧ ನಿಮ್ಮ ಮುಖಂಡರು ಮಾತನಾಡುತ್ತಿದ್ದಾರೆ. ನಾನು ಸರ್ಕಾರ ನಡೆಸಬೇಕೋ? ಬೇಡವೇ? ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಸಿಎಂ ಕಾಂಗ್ರೆಸ್ ಸಚಿವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ನನ್ನನ್ನು ಸಿಎಂ ಮಾಡಿ ಎಂದು ನಾನು ಯಾರ ಮನೆ ಹತ್ತಿರ ಹೋಗಿರಲಿಲ್ಲ. ಸಮಸ್ಯೆಗಳು ಯಾವುದೇ ಇದ್ದರೂ ನೇರವಾಗಿ ಬಂದು ನನ್ನ ಬಳಿ ಬಂದು ಮಾತನಾಡಲಿ. ಅದನ್ನ ಬಿಟ್ಟು ಹಾದಿಬೀದಿಯಲ್ಲಿ ನನ್ನ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ ಎಂದು ಸಿಎಂ ಗರಂ ಆಗಿಯೇ ಹೇಳಿದ್ದಾರೆ.

    ನೀವು ನಿಮ್ಮ ಮುಖಂಡರನ್ನು ಹದ್ದುಬಸ್ತಿನಲ್ಲಿಡಿ ಎಂದು ಕೈ ನಾಯಕರಿಗೆ ಸಿಎಂ ಈ ವೇಳೆ ತಾಕೀತು ಮಾಡಿದ್ದಾರೆ. ಸಿಎಂ ಕೋಪಕ್ಕೆ ಸಭೆಯಲ್ಲಿದ್ದ ಕಾಂಗ್ರೆಸ್ ಸಚಿವರು ಗಪ್ ಚುಪ್ ಆಗಿ ಕುಳಿತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv