Tag: ಸಂಪುಟ ಸಚಿವರು

  • ಕೇಂದ್ರ ಸಚಿವರಾಗಿ ಮೊದಲ ಕಡತಕ್ಕೆ ಹೆಚ್‌ಡಿಕೆ ಸಹಿ!

    ಕೇಂದ್ರ ಸಚಿವರಾಗಿ ಮೊದಲ ಕಡತಕ್ಕೆ ಹೆಚ್‌ಡಿಕೆ ಸಹಿ!

    ನವದೆಹಲಿ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಬುಧವಾರ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.

    ಉದ್ಯೋಗ ಭವನದ ಉಕ್ಕು ಸಚಿವಾಲಯದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ, ಕರ್ನಾಟಕದ ದೇವದಾರಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆ ಸಂಬಂಧಿಸಿದ ಕಡಿತಕ್ಕೆ ಹೆಚ್‌ಡಿಕೆ ಸಹಿ ಹಾಕಿದ್ದಾರೆ. ನಂತರ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆಗೆ ಕಳುಹಿಸಲಾಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಿತ ಗಣಿಗಾರಿಕೆ ಯೋಜನೆ ಇದಾಗಿದ್ದು, ಕುದುರೆಮುಖ ಕಬ್ಬಿಣ ಅದಿರು ಕಂಪನಿ (KIOCL Limited) ಈ ಯೋಜನೆಯನ್ನು ನಿರ್ವಹಿಸಲಿದೆ. ಹಲವು ದಿನಗಳಿಂದ ಈ ಕಡರ ಬಾಕಿ ಉಳಿದಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಅನ್ನೋದೇ ತಪ್ಪು: ಆರ್.ಅಶೋಕ್

    ಮಂಗಳವಾರವಷ್ಟೇ ಕೇಂದ್ರ ಸಚಿವರಾಗಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ 

  • ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟದಲ್ಲಿ (Modi Cabinet) ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂಪುಟ ದರ್ಜೆ ಸಚಿವರಾದ ಪ್ರಲ್ಹಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ರಾಜ್ಯಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಖಾತೆ ಹಂಚಿಕೆ ಬಳಿಕ ತಮ್ಮ ಕಚೇರಿಗಳಲ್ಲಿ ಅಧಿಕಾರ ಸ್ವೀಕರಿಸಿದರು.

    ಹೆಚ್.ಡಿ ಕುಮಾರಸ್ವಾಮಿ (HD Kumaraswamy)ಅವರು ಉದ್ಯೋಗ ಭವನದಲ್ಲಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. ಪೂಜೆ ಸಲ್ಲಿಸಿ ಬಳಿಕ ಕಡತಕ್ಕೆ ಸಹಿ ಹಾಕುವ ಮೂಲಕ ಹೆಚ್‌ಡಿಕೆ ಅಧಿಕಾರ ಸ್ವೀಕರಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಕೃಷಿ ಮತ್ತು ಊರ್ಜಾ ಭವನದಲ್ಲಿ ಪ್ರಲ್ಹಾದ್ ಜೋಶಿ (Pralhad Joshi) ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ವಿ. ಸೋಮಣ್ಣ (V Somanna) ರೈಲ್ವೆ ಹಾಗೂ ಜಲಶಕ್ತಿ ಭವನದಲ್ಲಿ ಜಲಶಕ್ತಿ ರಾಜ್ಯಖಾತೆಯನ್ನು ವಹಿಸಿಕೊಂಡರು. ಶೋಭಾ ಕರಂದ್ಲಾಜೆ (Shobha Karandlaje) ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಸಿಎಂ

    ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಹೊಸ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನನ್ನ ಪಕ್ಷಕ್ಕೆ ಧನ್ಯವಾದಗಳು. ಕಳೆದ ಹತ್ತು ವರ್ಷದಲ್ಲಿ ಮೋದಿ ಅವರ ನಾಯಕತ್ವ, ದೂರದೃಷ್ಟಿ ಚಿಂತನೆ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ. ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು 140 ಕೋಟಿ ಜನರಿಗೆ ಮುಟ್ಟಿಸಬೇಕು. ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಹತ್ತು ವರ್ಷದಲ್ಲಿ ಹಲವು ಕೊಡುಗೆ ನೀಡಿದೆ. ಅಶ್ವಿನಿ ವೈಷ್ಣವ್ ಜೊತೆಗೆ ಕೆಲಸ ಮಾಡಲು ಆನಂದವಾಗುತ್ತದೆ. ವಿಕಸಿತ್ ಭಾರತ್ ಯಶಸ್ಸಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮಾನ್ಯ ಪ್ರಧಾನಿಗಳು ನನಗೆ ಈ ಖಾತೆ ನೀಡಿದ್ದಾರೆ. ನನಗೆ ಈ ಜವಾಬ್ದಾರಿ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು. ನಾನು ನಮ್ಮ ಕ್ಷೇತ್ರ, ರಾಜ್ಯ, ದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ, ಮುಂದಿನ 125 ದಿನಗಳ ಕಾರ್ಯ ಹೇಗಿರಬೇಕು ಎಂಬುದಕ್ಕೆ ಮೊದಲೇ ಹೇಳಿದ್ದಾರೆ. ಪೀಯುಶ್ ಗೋಯಲ್ ಕೂಡ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. 80 ಕೋಟಿ ಜನರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ಭದ್ರತಾ ಕಾರ್ಯಕ್ರಮ ಮಾಡಿದ್ದಾರೆ. ಇಂತಹ ಸ್ಕೀಮ್ ನಡೆಸುವ ಇಲಾಖೆಯಲ್ಲಿ ಮೋದಿಯವರು ನನಗೆ ಸ್ಥಾನ ನೀಡಿದ್ದಾರೆ. ನಂಬಿಕೆ ಇಟ್ಟು ನನಗೆ ಈ ಖಾತೆ ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ