Tag: ಸಂಪುಟ ವಿಸ್ತರಣೆ

  • ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ರೆ ನಮ್ಗೆ ಈ ಸ್ಥಿತಿ ಬರ್ತಿರಲಿಲ್ಲ: ಈಶ್ವರಪ್ಪ

    ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ರೆ ನಮ್ಗೆ ಈ ಸ್ಥಿತಿ ಬರ್ತಿರಲಿಲ್ಲ: ಈಶ್ವರಪ್ಪ

    – ವಿಧಾನ ಪರಿಷತ್‍ನವರು ಬಂದ್ರೆ ಭಯ ಆಗುತ್ತಪ್ಪ!
    – ದೆಹಲಿಯಿಂದ ಒಳ್ಳೆ ಸುದ್ದಿ ಬರುತ್ತೆ

    ಧಾರವಾಡ: ಸಿಎಂ ದೆಹಲಿಗೆ ಹೋಗಿದ್ದು ಯಾಕೆ ಅಂತಾ ನನಗೆ ಗೊತ್ತಿಲ್ಲ, ಆದರೆ ದೆಹಲಿಯಿಂದ ಖಂಡಿತ ಒಳ್ಳೇ ಸುದ್ದಿ ಬರುತ್ತೆ. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರು ಒಳ್ಳೆ ತೀರ್ಮಾನ ಮಾಡಿ ಕಳಿಸುತ್ತಾರೆ, ಕರ್ನಾಟಕ ರಾಜ್ಯಕ್ಕೆ ಏನು ಒಳ್ಳೆದಾಗಬೇಕೋ ಅದನ್ನೇ ಮಾಡಿ ಕಳುಹಿಸುತ್ತಾರೆ ಎಂದು ಸಿಎಂ ದೆಹಲಿಗೆ ಹೋಗಿರುವ ಕುರಿತಾಗಿ ಹೇಳಿದ್ದಾರೆ.

    ಪಕ್ಷಕ್ಕೆ ಬಂದವರ ಋಣ ತೀರಿಸಬೇಕು: ಎಲ್ಲ ಶಾಸಕರಿಗೂ ಮಂತ್ರಿ ಆಗುವ ಬಯಕೆ ಇರುತ್ತೆ, ಆದರೆ ಅದಕ್ಕೊಂದು ಲಿಮಿಟ್ ಇದೆ ಅಲ್ವಾ. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ, ಜೆಡಿಎಸ್, ಕಾಂಗ್ರೆಸ್‍ನಿಂದ ಅನೇಕರು ಬಂದಿದ್ದಾರೆ, ಅವರ ಋಣ ತೀರಿಸಬೇಕಿದೆ. ಯಾರು ಪಕ್ಷಕ್ಕೆ ಬಂದಿದ್ದಾರೋ ಅವರೆಲ್ಲ ಈಗ ಬಿಜೆಪಿ ಕಾರ್ಯಕರ್ತರಾಗಿದ್ದಾರೆ, ಅವರು ಹೊರಗಿನಿಂದ ಬಂದವರು ಅಂತಾ ನಮಗೂ ಅನಿಸುತ್ತಿಲ್ಲ, ಅವರ ಬಗ್ಗೆ ಕೇಂದ್ರದ ನಾಯಕರು ಒಳ್ಳೇ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

    ಸಂಕ್ರಾಂತಿ ಬಳಿಕ ಬದಲಾವಣೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಬೆಳಗ್ಗೆ ಯತ್ನಾಳರನ್ನು ನಾನು ಕೇಳಿದ್ದೇನೆ, ಲಿಂಗಾಯತ ಸಮಾಜದ ಮೀಸಲಾತಿ ವಿಚಾರವಾಗಿ ಅವರು ಮಾತನಾಡಿದ್ದಾರಂತೆ, ಅವರ ಈ ಹೇಳಿಕೆ ಬೇರೆ ವಿಚಾರವಾಗಿದೆ ಅಂತಾ ನನ್ನ ಜೊತೆ ಮಾತನಾಡಿದ್ದಾರೆ. ಇನ್ನು ಯತ್ನಾಳರ ಹಿಂದಿನ ಹೇಳಿಕೆಗಳ ವಿಚಾರವಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ. ಶಿಸ್ತು ಕ್ರಮಕ್ಕೆ ಕೇಂದ್ರಕ್ಕೂ ಕಳುಹಿಸಿದ್ದಾರೆ, ಕೇಂದ್ರದ ಶಿಸ್ತು ಸಮಿತಿ ಏನ ಕ್ರಮ ಕೈಗೊಳ್ಳುತ್ತದೆಯೋ ನೋಡಬೇಕಿದೆ ಎಂದು ತಿಳಿಸಿದರು.

    ನಮಗೆ ಭಯ ಆಗುತ್ತಪ್ಪ: ಎಂಎಲ್‍ಎ ಶಾಲೆ ದತ್ತು ಯೋಜನೆ ಬೇಗ ಸದುಪಯೋಗ ಪಡಿಸಿಕೊಳ್ಳಿ, ಇಲ್ಲದೇ ಹೋದಲ್ಲಿ ಅವರು ಗುಡಿ ಗೋಪುರಕ್ಕೆ ಹಣ ಕೊಡ್ತಾರೆ. ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐಗೆ ಈಶ್ವರಪ್ಪ ಸೂಚನೆ ನೀಡಿದ್ದಾರೆ. ಶಾಸಕರ ಕೈಯಲ್ಲಿನ ದುಡ್ಡು ಬೇಗ ಬಳಸಿಕೊಳ್ಳಿ, ಗುಡಿ ಗೋಪುರದಲ್ಲಿ ವೋಟ್ ಇರುತ್ತೇ. ಹಳ್ಳಿಯ ದೇವಸ್ಥಾನಕ್ಕೆ ದುಡ್ಡು ಕೊಟ್ಟರೆ 200-300 ವೋಟ್ ಸಿಗುತ್ತೆ, ಶಾಲೆಗೆ ಕೊಟ್ಟರೇ ವೋಟ್ ಎಲ್ಲಿ ಸಿಗುತ್ತೆ, ಬೇಗ ದತ್ತು ಯೋಜನೆ ಬಳಸಿಕೊಳ್ಳಿ, ಸಂಕೋಚ ಇಲ್ಲದೇ ಶಾಲೆಗಾಗಿ ಎಂಎಲ್‍ಎಗಳ ಕಡೆ ಹಣ ಕೇಳಿ ಎಂದರು. ಇದೇ ವೇಳೆ ಸಭೆಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರಗೆ ನೋಡಿ ವಿಧಾನ ಪರಿಷತ್‍ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ ಎಂದು ಈಶ್ವರಪ್ಪ ಹೇಳಿದ್ದಾರೆ.

  • ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

    ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಎಲ್ಲವೂ ಕುದಿಮೌನ. ಉಗುಳುವಂತಿಲ್ಲ, ನುಂಗುವಂತಿಲ್ಲ. ಬರೀ ಸೌಂಡ್ ಮಾಡಿ ಕೆಲಸ ಮಾಡದ ಆಡಳಿತ ಯಂತ್ರದ ರಿಪೇರಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ ಗೊಂದಲ, ನಿಗಮ ಮಂಡಳಿ ನೇಮಕಾತಿ ಗೊಂದಲ, ಸರ್ಕಾರದ ನಿರ್ಧಾರಗಳ ಗೊಂದಲಗಳ ಬಗ್ಗೆ ಇವತ್ತು ಪಕ್ಷದ ವೇದಿಕೆಯಲ್ಲಿ ಭರ್ಜರಿಯಾಗಿಯೇ ಸೌಂಡ್ ಮಾಡಿತ್ತು. ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು 6ಕ್ಕೂ ಹೆಚ್ಚು ಸಚಿಚರು, ಇಬ್ಬರು ಸಂಸದರು, ಇಬ್ಬರು ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈ ವೇಳೆ ಸರ್ಕಾರ ಟ್ರ್ಯಾಕ್‍ನಲ್ಲಿ ಇಲ್ಲ ಎಂಬ ದೂರುಗಳು ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಆದರಲ್ಲೂ ಓರ್ವ ಶಾಸಕ ಸಿಎಂ ಯಡಿಯೂರಪ್ಪ ಅವರ ಸುತ್ತಲಿನವರ ಬಗ್ಗೆಯೇ ಹೆಚ್ಚು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ.

    ಅರುಣ್ ಸಿಂಗ್ ಎದುರು ದೂರು: ನಾವು ಬಿಜೆಪಿ ನಾಯಕರನ್ನೂ ಯಾರನ್ನೂ ದೂರುವುದಿಲ್ಲ. ಆದರೆ ಸರ್ಕಾರ ಟ್ರ್ಯಾಕ್ ನಲ್ಲಿ ಇಲ್ಲ. ಸರ್ಕಾರ ಟ್ರ್ಯಾಕ್ ಗೆ ಬರಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ರಿಪೇರಿ ಕೆಲಸಕ್ಕೆ ಕೈ ಹಾಕಬೇಕು. ಆಗಿದ್ದಾಗ ಮಾತ್ರ ಬಿಜೆಪಿ ಶಕ್ತಿ ವೃದ್ಧಿಸುತ್ತೆ. ಇಲ್ಲದಿದ್ದರೆ ನಮ್ಮ ಪಕ್ಷಕ್ಕೆ ಕಷ್ಟ ಹೊರತು, ಸರ್ಕಾರ ನಡೆಸುವವರಿಗೆ ಕಷ್ಟ ಆಗಲ್ಲ. ದಯಮಾಡಿ ರಾಜ್ಯದ ಕಡೆ ಗಮನಿಸಿ, ಸರಿಪಡಿಸುವ ಕೆಲಸ ಮಾಡಿ ಎಂದು ಕೆಲ ಸಚಿವರು ಸಿಎಂ ವಿರುದ್ಧವೇ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ನಡುವೆ ದೂರುಗಳನ್ನು ಕೇಳಿಸಿಕೊಂಡ ಬಳಿಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಾಧಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಎಲ್ಲವನ್ನೂ ರಿಪೇರಿ ಮಾಡುತ್ತೆ. ನೀವು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿ ಎಂದು ಪಕ್ಷದ ಕೆಲ ಸಚಿವರು, ಶಾಸಕರಿಗೆ ಅರುಣ್ ಸಿಂಗ್ ರಿಪೇರಿ ಅಭಯ ನೀಡಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ.

    ರಿಪೇರಿ ನಮ್ಮ ಕೆಲಸ: ರಿಪೇರಿ ನಾವು ಮಾಡುತ್ತೇವೆ. ಹೈಕಮಾಂಡ್ ತನ್ನ ಕೆಲಸ ಮಾಡುತ್ತೆ. ಹೈಕಮಾಂಡ್ ಗಮನದಲ್ಲಿ ಎಲ್ಲ ಸಂಪೂರ್ಣ ಮಾಹಿತಿ ಇದೆ. ಯಾವುದನ್ನು ರಿಪೇರಿ ಮಾಡಬೇಕು, ಯಾರನ್ನು ರಿಪೇರಿ ಮಾಡಬೇಕು ಅನ್ನೋದು ಗೊತ್ತಿದೆ. ಪಕ್ಷದ ಪ್ರತಿ ನಿರ್ಧಾರಗಳು, ಸರ್ಕಾರದ ಪ್ರತಿ ನಿರ್ಧಾರಗಳು ಹೈಕಮಾಂಡ್ ಗಮನದಲ್ಲಿ ಇವೆ. ಆದಷ್ಟು ಶೀಘ್ರ ರಿಪೇರಿ ಕೆಲಸ ಪೂರ್ಣ ಆಗುತ್ತೆ. ಯಾರೂ ಬಹಿರಂಗವಾಗಿ ಮಾತಾಡಬೇಡಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ. ನನಗೆ ಏನೇ ಇದ್ದರೂ ಪತ್ರ ಬರೆಯಿರಿ, ನನ್ನ ಗಮನಕ್ಕೆ ತನ್ನಿ. ನಾನು ಯಾವುದನ್ನೂ ಮುಚ್ಚಿಡದೇ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.

    ಇನ್ನೊಂದೆಡೆ ಇವತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೇಶವಕೃಪಾಗೆ ತೆರಳಿ ಆರ್ ಎಸ್‍ಎಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಆರ್ ಸ್‍ಎಸ್ ಮುಖಂಡರು ಸಹ ಸರ್ಕಾರ ಮತ್ತು ಪಕ್ಷದ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಬಿಜೆಪಿಯಲ್ಲೀನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಗೆ ವಾಟರ್ ಸ್ಪ್ರೇ ಮಾಡಲು ಅರುಣ್ ಸಿಂಗ್‍ಗೂ ಕೂಡ ಸಾಧ್ಯವಾಗಿಲ್ಲ, ಆದರೂ ಶೀಘ್ರ ವಾಟರ್ ಸ್ಪ್ರೇ ಮಾಡದಿದ್ದರೆ ಬಿಜೆಪಿ ಸ್ಥಿತಿ ಚಿಂತಾಜನಕ ಎಂದು ಹೈಕಮಾಂಡ್‍ಗೆ ವರದಿ ಸಲ್ಲಿಸುವುದಕ್ಕಂತೂ ತಡೆ ಇಲ್ಲ ಅನ್ನೋದು ಸ್ಪಷ್ಟ.

  • ಸಂಪುಟ ಸರ್ಜರಿಗೆ ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ನೋ ಚಾನ್ಸ್..!

    ಸಂಪುಟ ಸರ್ಜರಿಗೆ ಸೋಮವಾರ ಡೆಡ್‍ಲೈನ್ – ಇಲ್ಲವಾದಲ್ಲಿ ಡಿಸೆಂಬರ್‌ವರೆಗೆ ನೋ ಚಾನ್ಸ್..!

    ಬೆಂಗಳೂರು: ಸಂಪುಟ ವಿಸ್ತರಣೆ ಇವತ್ತಾಗುತ್ತೆ, ನಾಳೆಯಾಗುತ್ತೆ ಅಂತ ಕಾಯ್ತಿರೋರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಸಂಪುಟ ಸರ್ಜರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಸಿಎಂ ದೆಹಲಿಯಿಂದ ವಾಪಸ್ಸಾಗಿ ಮೂರು ದಿನಗಳಾದರೂ ಸಿಎಂಗೆ ಇನ್ನೂ ವರಿಷ್ಠರಿಂದ ಕರೆ ಬಂದಿಲ್ಲ. ಸಿಎಂ ಮತ್ತು ಆಕಾಂಕ್ಷಿಗಳು ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಕರೆ ಬಂದ್ರೆ ಮಾತ್ರ ಸೋಮವಾರ ಸಂಪಟ ಸರ್ಜರಿ ಸಾಧ್ಯತೆಯಿದೆ.

    ಕರೆ ಬರದಿದ್ರೆ ಮತ್ತೆ ಸಂಪುಟ ಸರ್ಜರಿ ಮುಂದೂಡಿಕೆಯಾಗುವುದು ಫಿಕ್ಸ್. ಇಂದು, ನಾಳೆ ಕರೆ ಬರದಿದ್ರೆ ಸಂಪುಟಕ್ಕೆ ಸರ್ಜರಿ ಯಾವಾಗ ನಡೆಯುತ್ತೆ?, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರೋವರೆಗೂ ನಡೆಯಲ್ವಾ ವಿಸ್ತರಣೆ ಎಂಬ ಪ್ರಶ್ನೆಯೂ ಮೂಡಿದೆ.

    ಅಮಿತ್ ಶಾ ಅವರು ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿವರೆಗೂ ಸಂಪುಟ ಸರ್ಜರಿ ಅನುಮಾನ ಎಂಬಂತಾಗಿದೆ. ಈಗಾಗಲೇ ಕಮಲ ಪಾಳಯದಲ್ಲಿ ಕೂಡ ಅಮಿತ್ ಶಾ ಬರೋವರೆಗೂ ವಿಸ್ತರಣೆ ಡೌಟ್ ಅನ್ನೋ ಚರ್ಚೆ ನಡೀತಿದೆ.

    ಈ ಮಧ್ಯೆ ಅಮಿತ್ ಶಾ ಇಂದು ತಮಿಳುನಾಡಿಗೆ ಆಗಮಿಸಲಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ, ಸರ್ಕಾರದ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವ್ರಿಂದ ಮಾಹಿತಿ ಪಡೆಯುವ ಸಾಧ್ಯೆತೆಗಳಿವೆ. ಆದರೆ ಅಮಿತ್ ಶಾ, ರಾಜ್ಯ ಭೇಟಿವರೆಗೂ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡದಿರುವ ಸಾಧ್ಯತೆಯೇ ಹೆಚ್ಚಿದೆ. ಈ ಹೊಸ ಬೆಳವಣಿಗೆ ಸಚಿವಾಕಾಂಕ್ಷಿಗಳ ಟೆನ್ಷನ್ ಇನ್ನಷ್ಟು ಹೆಚ್ಚಿಸಿದೆ.

  • ನಾನು ವಲಸೆ ಬಂದ ಮನುಷ್ಯ ಅಲ್ಲ, 30 ವರ್ಷದಿಂದ ಪಕ್ಷದಲ್ಲಿದ್ದೇನೆ: ಪ್ರಭು ಚೌಹ್ಹಾಣ್

    ನಾನು ವಲಸೆ ಬಂದ ಮನುಷ್ಯ ಅಲ್ಲ, 30 ವರ್ಷದಿಂದ ಪಕ್ಷದಲ್ಲಿದ್ದೇನೆ: ಪ್ರಭು ಚೌಹ್ಹಾಣ್

    ಧಾರವಾಡ: ನಾನು ವಲಸೆ ಬಂದ ಮನುಷ್ಯ ಅಲ್ಲ. ಮೂವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

    ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ಕೈ ತಪ್ಪುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮನೆಯಿಂದ ಸೀದಾ ಬಿಜೆಪಿಗೆ ಬಂದವನು. ನನ್ನಲ್ಲಿ ಕೊರತೆ ಏನಿಲ್ಲ, ನಾನು ಕೆಲಸ ಮಾಡುತ್ತಿರುವೆ. ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಧ್ಯಮಗಳ ಮೂಲಕ ಮಾತ್ರ ನಮ್ಮನ್ನು ತೆಗೆಯುತ್ತಾರೆ ಅಂತ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಸಿಎಂ, ಹೈಕಮಾಂಡ್ ಮತ್ತು ರಾಜ್ಯಾಧ್ಯಕ್ಷರು ನಮಗೆ ಏನೂ ಹೇಳಿಲ್ಲ. ನಾನು ಪಕ್ಷದ ಕಾರ್ಯಕರ್ತ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಣಯಕ್ಕೆ ವಚನ ಬದ್ಧನಾಗಿರುವೆ ಎಂದರು.

    ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಬಿಎಸ್‍ವೈ ಹೇಳಿದ್ದಾರೆ. ಅವರು ಪುನರ್ ರಚನೆ ಅಂತ ಹೇಳಿದ್ದಾರೆ. ನಮ್ಮ ಪಕ್ಷದ ಯಾರ ಯಾರಿಗೆ ಏನು ವಾಗ್ದಾನ ಮಾಡದ್ದಾರೆ ಅದನ್ನೆಲ್ಲ ಸಿಎಂ ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆ ಎಂದು ಚೌಹ್ಹಾಣ್ ತಿಳಿಸಿದ್ದಾರೆ.

  • ಈ ವಾರ ಬಿಎಸ್‍ವೈ ಸಂಪುಟ ಸರ್ಜರಿ ಸಾಧ್ಯತೆ – ಹಾಲಿ ಮೂವರು ಸಚಿವರಿಗೆ ಕೊಕ್?

    ಈ ವಾರ ಬಿಎಸ್‍ವೈ ಸಂಪುಟ ಸರ್ಜರಿ ಸಾಧ್ಯತೆ – ಹಾಲಿ ಮೂವರು ಸಚಿವರಿಗೆ ಕೊಕ್?

    – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಸಿಟ್ಟು

    ಬೆಂಗಳೂರು: ಇಂದು ಬಿಹಾರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸಂಪುಟ ಸರ್ಜರಿ ವಿಚಾರವಾಗಿ ಚರ್ಚೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಬುಧವಾರವೇ ದೆಹಲಿಗೆ ಹಾರಲು ಸಿಎಂ ಯಡಿಯೂರಪ್ಪ ರೆಡಿ ಆಗಿದ್ದಾರೆ. ಸಿಎಂ ದೆಹಲಿಗೆ ತೆರಳುವ ಮುನ್ನ ಬುಧವಾರ ಸಂಪುಟ ಸಭೆ ಕರೆದಿದ್ದು, ಕೆಲವರ ಪಾಲಿಗೆ ಅದೇ ಕೊನೆಯ ಕ್ಯಾಬಿನೆಟ್ ಸಭೆ ಆಗುವ ಸಾಧ್ಯತೆಗಳಿವೆ.

    ಕ್ರಿಯಾಶೀಲರಲ್ಲದ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡಲು ಸಿಎಂ ಪ್ಲಾನ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಸಂಪುಟ ಲಾಬಿ ಜೋರಾಗಿದೆ. ಸಚಿವ ಸ್ಥಾನ ಪಡೆದೇ ತೀರಬೇಕೆಂದು ಪ್ರಯತ್ನ ನಡೆಸುತ್ತಿರುವ ಎಂಎಲ್‍ಸಿ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್‍ಗೆ ಮಿತ್ರಮಂಡಳಿ ಸದಸ್ಯ, ಸಚಿವ ಎಸ್‍ಟಿ ಸೋಮಶೇಖರ್ ಬಿಗ್ ಶಾಕ್ ನೀಡಿದ್ದಾರೆ.

    ಎಂಟಿಬಿ ಹಾಗೂ ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆಯೇ ಆಗಿಲ್ಲ. ಇದಕ್ಕಾಗಿ ನಾವು ಪ್ರತ್ಯೇಕವಾಗಿ ಸಿಎಂ ಭೇಟಿ ಆಗುವ ಅಗತ್ಯವೂ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಬಾಂಬ್ ಸಿಡಿಸಿದ್ದಾರೆ. ಅತ್ತ ಮಂತ್ರಿಗಿರಿ ಮೇಲೆ ಟವೆಲ್ ಹಾಕುತ್ತಿರುವ ಶಾಸಕ ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ಮಾತ್ರ ಮಂತ್ರಿಗಿರಿ ನೀಡಬೇಕು. ಜನರಿಂದ ಆಯ್ಕೆಯಾದವರನ್ನು ಮಾತ್ರ ಮಂತ್ರಿ ಮಾಡಬೇಕು. ಸೋತವರಿಗೆ ಸಚಿವ ಸ್ಥಾನ ನೀಡಬಾರ್ದು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ವಾದ ಮಂಡಿಸಿದ್ದಾರೆ.

    ಬ್ಯಾಂಡ್ ಬಾರಿಸಿ ತಮಟೆ ಹೊಡೆದು ಬಾಯಿ ಬಡ್ಕೊಂಡ್ರೆ ಸಚಿವ ಸ್ಥಾನ ಸಿಗಲ್ಲ. ಹಾದಿ ರಂಪ ಮಾಡೋದು ನನಗಿಷ್ಟವಿಲ್ಲ. ಆದ್ರೆ ರಾಜಕೀಯವಾಗಿ ಯಾರೂ ಸನ್ಯಾಸಿಗಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಈ ಮಧ್ಯೆ ಗೆಲುವಿಗೆ ಸಹಕರಿಸಿದ ಸಚಿವ ಸೋಮಣ್ಣರನ್ನು ಭೇಟಿಯಾದ ಆರ್.ಆರ್.ನಗರ ಶಾಸಕ ಮುನಿರತ್ನ ಧನ್ಯವಾದ ಹೇಳಿದ್ದಾರೆ.

  • ಸಂಪುಟ ಸರ್ಜರಿಗೆ ಸಿಎಂ ಬಳಿಯಿದೆ ಮೂರು ಸೂತ್ರ – ಯಾರು ಇನ್‌? ಯಾರು ಔಟ್‌?

    ಸಂಪುಟ ಸರ್ಜರಿಗೆ ಸಿಎಂ ಬಳಿಯಿದೆ ಮೂರು ಸೂತ್ರ – ಯಾರು ಇನ್‌? ಯಾರು ಔಟ್‌?

    ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸಿದರೂ ಈ ಗೆಲುವನ್ನು ಸಿಎಂ ಯಡಿಯೂರಪ್ಪ ಆಸ್ವಾದಿಸುವ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿಲ್ಲ. ಸಿಎಂ ಯಡಿಯೂರಪ್ಪ ಮುಂದೆ ಕ್ಯಾಬಿನೆಟ್ ಭರ್ತಿ ಮಾಡುವ ಸವಾಲಿದ್ದು ಯಾರನ್ನು ಸೇರಿಸಬೇಕು ಎನ್ನುವುದೇ ದೊಡ್ಡ ತಲೆನೋವಾಗಿದೆ.

    ಶೀಘ್ರವೇ ಸಂಪುಟಕ್ಕೆ ಸರ್ಜರಿ ನಡೆಯಲಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವೇಳೆ, ಮೂಲ ಬಿಜೆಪಿಗರನ್ನು, ಮಿತ್ರಮಂಡಳಿಯನ್ನು ಜೊತೆಜೊತೆಯಲ್ಲೇ ಕರೆದೊಯ್ಯುವ ಅನಿವಾರ್ಯತೆ ಇದೆ.

    ದೀಪಾವಳಿ ಬಳಿಕ ಅಂದರೆ ನವೆಂಬರ್ 19 ಅಥವಾ ನವೆಂಬರ್ 23ಕ್ಕೆ ಸಂಪುಟಕ್ಕೆ ಸರ್ಜರಿ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಹೈಕಮಾಂಡ್ ಜೊತೆ ಸಂಪುಟ ಸರ್ಜರಿ ಬಗ್ಗೆ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ. ಆದರೆ ಬಿಹಾರದಲ್ಲಿ ಸರ್ಕಾರ ಸ್ಥಾಪನೆ ಬಳಿಕ ಕರ್ನಾಟಕ ಸಂಪುಟ ವಿಚಾರಕ್ಕೆ ಹೈಕಮಾಂಡ್ ತಲೆ ಹಾಕುವ ಸಂಭವ ಇದೆ.

     

    ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪೈಕಿ ಹೈಕಮಾಂಡ್ ಏನು ಹೇಳಿದ್ರೂ ಅದಕ್ಕೆ ಸಮ್ಮತಿ ನೀಡಲು ಯಡಿಯೂರಪ್ಪ ಪ್ಲಾನ್ ಮಾಡ್ಕೊಂಡಿದ್ದಾರೆ. ಸದ್ಯ ಸಿಎಂ ಯಡಿಯೂರಪ್ಪ ಮುಂದೆ ಮೂರು ಆಯ್ಕೆಗಳಿವೆ.

    ಸೂತ್ರ – 1
    ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ 7 ಸ್ಥಾನಗಳ ಪೈಕಿ 6 ಸ್ಥಾನ ತುಂಬುವುದು. ಇದರಲ್ಲಿ 3 ಬಿಜೆಪಿಯ ಮೂಲ ಶಾಸಕರಿಗೆ, 3 ವಲಸೆ ಹಕ್ಕಿಗಳಿಗೆ ನೀಡುವುದು. ಮಸ್ಕಿ ಚುನಾವಣೆ ಹಿನ್ನೆಲೆಯಲ್ಲಿ 1 ಸ್ಥಾನ ಉಳಿಸಿಕೊಳ್ಳುವುದು.

    ಸೂತ್ರ – 2
    ಸಚಿವ ಸಂಪುಟ ಪುನಾರಚನೆ ಮಾಡುವುದು. ಪುನಾರಚನೆ ಮಾಡಿದರೆ ಹಾಲಿ ನಾಲ್ಕು ಸಚಿವರಿಗೆ ಕೊಕ್ ಕೊಡಬೇಕಾಗುತ್ತದೆ. ಆಗ ಒಟ್ಟು 11 ಸ್ಥಾನ ಖಾಲಿ ಉಳಿಯುತ್ತದೆ. 1 ಖಾಲಿ ಉಳಿಸಿಕೊಂಡು, 10 ಸ್ಥಾನವನ್ನು ತುಂಬುವುದು. 7 ಬಿಜೆಪಿ ಶಾಸಕರಿಗೆ, 3 ವಲಸೆ ಹಕ್ಕಿಗಳಿಗೆ ನೀಡುವುದು.  ಇದನ್ನೂ ಓದಿ: ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

    ಸೂತ್ರ – 3
    ಬಿಜೆಪಿ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದು. ಬಿಹಾರದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಕಾಯುವುದು. ಡಿಸೆಂಬರ್ ತನಕ ಸಂಪುಟ ಸರ್ಜರಿ ಮುಂದೂಡುವುದು. ವಲಸಿಗರನ್ನು ಸಮಾಧಾನ ಪಡಿಸುವ ಹೊಣೆ ಹೊರುವುದು.

     

  • ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನೊಬ್ಬ ಬಡಪಾಯಿ: ಎಸ್.ಟಿ ಸೋಮಶೇಖರ್

    ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನೊಬ್ಬ ಬಡಪಾಯಿ: ಎಸ್.ಟಿ ಸೋಮಶೇಖರ್

    ಮೈಸೂರು: ಸಂಪುಟ ವಿಸ್ತರಣೆ ವಿಚಾರ ನನ್ನ ಕೈಯಲ್ಲಿ ಇದ್ದರೆ ಅದು ಬೇರೆ ಮಾತು. ಈ ವಿಚಾರದಲ್ಲಿ ನಾನೊಬ್ಬ ಬಡಪಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನಾನೇನು ಹೇಳಲಿ. ಅದರ ಅಧಿಕಾರ ಇರುವವರನ್ನ ಕೇಳಿ ಎಂದಿದ್ದಾರೆ.

    ಇದೇ ವೇಳೆ ಆರ್ ಆರ್ ಕ್ಷೇತ್ರದಿಂದ ಮುನಿರತ್ನಗೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇವೆ. ಅಂತಿಮ ತೀರ್ಮಾನ ಪಕ್ಷದ ಕೋರ್ ಕಮಿಟಿಯಲ್ಲಿ ಆಗುತ್ತದೆ. ನಿಯಮದ ಪ್ರಕಾರದ ಎರಡು ಹೆಸರನ್ನ ರಾಜ್ಯ ಕೋರ್ ಕಮಿಟಿಯಿಂದ ಕಳುಹಿಸಲಾಗಿದೆ. ಮುನಿರತ್ನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ನಾವು ಟಿಕೆಟ್ ಕೊಡಿ ಎಂದು ಮನವಿ ಮಾತ್ರ ಮಾಡಬಹುದು. ನಿರ್ಧಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.

    ಮೈಸೂರು ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಸರ್ಕಾರದ ಆಡಳಿತಾತ್ಮಕ ನಿರ್ಧಾರ. ಇದರಲ್ಲಿ ದಿಢೀರ್ ಎಂಬುದು ಬರುವುದಿಲ್ಲ. ಈ ವಿಚಾರದಲ್ಲಿ ಆಂಧ್ರದವರು, ಕನ್ನಡಿಗರು ಅಂತ ಮಾತಾನಾಡುವುದು ಸರಿಯಲ್ಲ. ಈಗ ಜಿಲ್ಲಾಧಿಕಾರಿ ಆಗಿರೋ ರೋಹಿಣಿ ಸಿಂಧೂರಿ ದಕ್ಷರು, ಪ್ರಾಮಾಣಿಕರು. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಗರಂ ಆದರು.

  • ನಾಯಕತ್ವ ಬದಲಾವಣೆಯ ಕೂಗು – ಇಂದು ದೆಹಲಿಗೆ ಸಿಎಂ ಬಿಎಸ್‍ವೈ

    ನಾಯಕತ್ವ ಬದಲಾವಣೆಯ ಕೂಗು – ಇಂದು ದೆಹಲಿಗೆ ಸಿಎಂ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳುತ್ತಿದ್ದಾರೆ.

    ಇವತ್ತು ಮಧ್ಯಾಹ್ನ ದೆಹಲಿಗೆ ಹೋಗುತ್ತಿರುವ ಸಿಎಂ ಅಲ್ಲೇ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಪುತ್ರನ ಹಸ್ತಕ್ಷೇಪದಿಂದ ಬೇಸತ್ತಿರುವ ಕೆಲವು ಶಾಸಕರು, ಸಚಿವರು ಸಿಎಂ ತಲೆದಂಡಕ್ಕೆ ಆಗ್ರಹಿಸುತ್ತಿರುವ ಹೊತ್ತಲ್ಲಿ ಸಿಎಂ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನ ಹಿನ್ನೆಲೆ ಬಿಎಸ್‍ವೈ ಭೇಟಿ ಮಾಡಿ ಶುಭ ಕೋರುವ ಸಾಧ್ಯತೆ ಇದೆ.

    ಕೊರೊನಾ ಹಿನ್ನೆಲೆ ಗಣ್ಯರ ಭೇಟಿಗೆ ಪ್ರಧಾನಿಯವರು ನಿರಾಕರಿಸಿದ್ದು, ಒಂದು ವೇಳೆ ಅವಕಾಶ ಸಿಕ್ಕಲ್ಲಿ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿದೆ. ಮತ್ತೊಂದೆಡೆ ಸಂಪುಟ ವಿಸ್ತರಣೆ ಚಾಲೆಂಜ್ ಕೂಡ ಬಿಎಸ್‍ವೈ ಎದುರಿಗಿದೆ. ಹೈಕಮಾಂಡ್ ಭೇಟಿ ವೇಳೆ ಸಂಪುಟ ವಿಸ್ತರಣೆನಾ ಅಥವಾ ಪುನಾರಚನೆನಾ ಅನ್ನೋ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ. ಸದ್ಯ 6 ಸ್ಥಾನಗಳು ಖಾಲಿ ಇದ್ದು 4 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ.

    ಸಚಿವ ಸ್ಥಾನಕ್ಕಾಗಿ ಎಂಟಿಬಿ, ಯೋಗೇಶ್ವರ್, ವಿಶ್ವನಾಥ್, ಶಂಕರ್, ಕತ್ತಿ, ನಿರಾಣಿ, ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಯತ್ನಾಳ್, ಸುನೀಲ್ ಕುಮಾರ್, ಲಿಂಬಾವಳಿ ಸೇರಿ ಪಟ್ಟಿ ದೊಡ್ಡದಿದೆ. ಸಿಎಂ ದೆಹಲಿ ಭೇಟಿಗೂ ಮುನ್ನ ಸಚಿವ ರಮೇಶ್ ಜಾರಕಿಹೋಳಿ ಇಲಾಖೆ ಕಾರ್ಯದ ನೆಪದಲ್ಲಿ ದೆಹಲಿ ತೆರಳಿದ್ದು ಡಿಸಿಎಂ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ನಿರಾಣಿ, ರೇಣುಕಾಚಾರ್ಯ ಕೂಡ ದೆಹಲಿಯಲ್ಲೇ ಇದ್ದು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

  • ಕೊರೊನಾ ಸಂಕಷ್ಟದ ನಡುವೆ ಬಿಜೆಪಿ ನಾಯಕರಿಂದ ಸ್ಥಾನಮಾನಕ್ಕೆ ಲಾಬಿ

    ಕೊರೊನಾ ಸಂಕಷ್ಟದ ನಡುವೆ ಬಿಜೆಪಿ ನಾಯಕರಿಂದ ಸ್ಥಾನಮಾನಕ್ಕೆ ಲಾಬಿ

    ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ದೇಶದ್ಯಾಂತ ಲಾಕ್‍ಡೌನ್ ಮಾಡಲಾಗಿತ್ತು. ಲಾಕ್‍ಡೌನ್ ನಿಂದಾಗಿ ರಾಜ್ಯದಲ್ಲಿ ಅಲ್ಲ ಇಡೀ ದೇಶದ ರಾಜಕೀಯ ವಿದ್ಯಮಾನಗಳು ಸ್ತಬ್ಧವಾಗಿದ್ದವು. ಆದರೆ ಲಾಕ್‍ಡೌನ್ ಅನ್‍ಲಾಕ್ ಆಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಪುನಾರಂಭಗೊಂಡಿದೆ. ಸ್ಥಾನಮಾನದ ಲೆಕ್ಕಾಚಾರದಲ್ಲಿರುವ ಆಡಳಿತ ಪಕ್ಷದ ನಾಯಕರು ದೆಹಲಿ ದಂಡಯಾತ್ರೆ ಶುರು ಮಾಡಿದ್ದು ಹೈಕಮಾಂಡ್ ನಾಯಕರ ಮನ ಗೆಲಲ್ಲು ಪ್ರಯತ್ನ ಆರಂಭಿಸಿದ್ದಾರೆ.

    ಅನ್‍ಲಾಕ್ ಬಳಿಕ ನಾಲ್ಕನೇ ಬಾರಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ದೆಹಲಿ ದಂಡಯಾತ್ರೆ ಮಾಡುತ್ತಿದ್ದಾರೆ. ಸರ್ಕಾರ ರಚನೆ ವೇಳೆ ಕೊಟ್ಡ ಮಾತಿನಂತೆ ನನ್ನ ಡಿಸಿಎಂ ಮಾಡಿ ಎಂದು ಪಟ್ಟು ಹಿಡಿದಿದ್ದಾರಂತೆ. ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಜಾರಕಿಹೋಳಿ ಮನವಿ ಮಾಡಿದ್ದಾರೆ. ಇದೇ ವೇಳೆ ಜೊತೆಗಿದ್ದ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ತಮ್ಮ ಪಕ್ಷದ ಸೇವೆ ಆಧರಿಸಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಜೆ.ಪಿ ನಡ್ಡಾ ಜೊತೆಗೆ ರಾಜ್ಯದ ಕೇಂದ್ರ ಸಚಿವರನ್ನು ಉಭಯ ನಾಯಕರನ್ನು ಭೇಟಿ ಮಾಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ಬೆನ್ನಲ್ಲೇ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಕೂಡಾ ದೆಹಲಿಗೆ ಆಗಮಿಸಿದ್ದಾರೆ. ಇಂದು ಅವರು ಕೂಡಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಶೀಘ್ರದಲ್ಲಿ ಸಂಪುಟ ವಿಸ್ತರಣೆ ಅಥಾವ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ತಮ್ಮನ್ನ ಸಚಿವ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.

    ಕಳೆದ ಎರಡು ವಾರಗಳ ಹಿಂದಷ್ಟೇ ಡಿಸಿಎಂ ಲಕ್ಷಣ್ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ದೆಹಲಿ ಭೇಟಿ ನೀಡಿ ಹೈಕಮಾಂಡ್ ಭೇಟಿಯಾಗಿದ್ದರು. ಕೊರೊನಾ ಕೆಲಸಗಳ ಒತ್ತಡದಲ್ಲಿರುವ ಕಾರಣ ಗೃಹ ಸಚಿವ ಅಮಿತ್ ಶಾ ಯಾವ ನಾಯಕರು ಈವರೆಗೂ ಸಮಯ ನೀಡಿಲ್ಲ. ಹೀಗಾಗಿ ಅಮಿತ್ ಶಾ ನಂತರದ ನಾಯಕರ ಭೇಟಿ ಮಾಡಿ ಮನವೊಲಿಸುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.

    ಕೊರೊನಾ ಸಂಕಷ್ಟದ ನಡುವೆ ಆಡಳಿತ ಪಕ್ಷದ ನಾಯಕರ ಪೈಕಿ ಹಲವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೇ ಇನ್ನು ಕೆಲವರು ಇರೋ ಸಚಿವ ಸ್ಥಾನದಲ್ಲಿ ಮುಂದುವರಿಸಲು ಮನವಿ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೋಳಿ ಮಾತ್ರ ಇನ್ನು ಹೆಚ್ಚಿನ ಸ್ಥಾನಮಾನ ನಿರೀಕ್ಷೆಯಲ್ಲಿದ್ದು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ

  • BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!

    BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!

    – ಸಿಎಂ ವಿರುದ್ಧ ಸಿಡಿದೆದ್ದ ತ್ರಿಮೂರ್ತಿಗಳು
    – 27 ಶಾಸಕರಿಂದ 2 ಬಾರಿ ರಹಸ್ಯ ಸಭೆ

    ಬೆಂಗಳೂರು: ರಾಜ್ಯ ಬಿಜೆಲಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೂವರು ನಾಯಕರು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಕಳೆದ ಕೆಲ ದಿನಗಳಿಂದ ಸಿಎಂ ಯಡಿಯೂರಪ್ಪನವರ ವಿರುದ್ಧ ರಹಸ್ಯ ಸಭೆಗಳು ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಬಿಜೆಪಿ ಸರ್ಕಾರ ಪತನವಾಗುತ್ತಾ ಲೆಕ್ಕಾಚಾರಗಳು ರಾಜ್ಯ ರಾಜಕೀಯದಲ್ಲಿ ಆರಂಭಗೊಂಡಿವೆ. ಕೊರೊನಾ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗದರಿದ್ದು, ಉತ್ತರ ಕರ್ನಾಟಕ ಭಾಗದ ಕಮಲ ನಾಯಕರೇ ಸಿಎಂಗೆ ಮುಳುವಾಗ್ತಾರಾ ಅನ್ನೋ ಅನುಮಾನಗಳು ದಟ್ಟವಾಗ್ತಿವೆ.

    ಯಾರು ಆ ತ್ರಿಮೂರ್ತಿಗಳು?: ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವ್ಯೂಹ ರಚಿಸಿದ್ದಾರೆ. ಈ ಮೂವರ ನಾಯಕತ್ವದಲ್ಲಿ ಕಳೆದ 15 ದಿನದಲ್ಲಿ ಸುಮಾರು ಆರು ಬಾರಿ ಸಭೆ ನಡೆಸಿ, ಸಿಎಂ ವಿರುದ್ಧದ ಆಪರೇಷನ್ ವೇದಿಕೆಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.

    ಬಿಎಸ್‍ವೈ ಟಾರ್ಗೆಟ್ ಯಾಕೆ?: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಶಾಸಕರಾದ ಉಮೇಶ್ ಕತ್ತಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರು ನಾಯಕರು ಬಹಿರಂಗವಾಗಿಯೇ ತಾವು ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದುಂಟು. ಇನ್ನು ಬಿಜೆಪಿ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ, ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದರು. ಆದ್ರೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದೀಗ ಉಮೇಶ್ ಕತ್ತಿ ಮತ್ತು ಯತ್ನಾಳ್ ಇಬ್ಬರು ನಿರಾಣಿಯ ಬೆಂಬಲದೊಂದಿಗೆ ಬಂಡಾಯದ ಬಾವುಟ ಹಿಡಿಯಲು ಸಿದ್ಧರಾಗಲು ಸಭೆಯ ಮೇಲೆ ಸಭೆ ನಡೆಸುತ್ತಿರುವ ವಿಷಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೂವರು ನಾಯಕರು ತಮ್ಮದೇ ಆದ ಪ್ರತ್ಯೇಕ ಬಣ ರಚಿಸಿಕೊಂಡು ಮುಂದೆ ಏನಾಗಬಹುದು ಎಂಬುದರ ಬಗ್ಗೆ ಆಪ್ತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರಂತೆ. ಈ ನಡುವೆ ಜತೆಗೆ ಪರಮಾಪ್ತ ಶಾಸಕನ ಎರಡ್ಮೂರು ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಈ ಕಾರಣದಿಂದಾಗಿ ಯಡಿಯೂರಪ್ಪ ಆಪ್ತ ಬಣವೇ ಯಡಿಯೂರಪ್ಪ ವಿರುದ್ಧ ಕೂಟ ರಚಿಸಲು ಯತ್ನಿಸಲಾಗ್ತಿದೆ ಎಂದು ತಿಳಿದು ಬಂದಿದೆ.