Tag: ಸಂಪುಟ ವಿಸ್ತರಣೆ

  • ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಕಸರತ್ತು- 10 ದಿನದೊಳಗೆ ಮತ್ತೆ ಸಂಪುಟ ವಿಸ್ತರಣೆ

    ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಕಸರತ್ತು- 10 ದಿನದೊಳಗೆ ಮತ್ತೆ ಸಂಪುಟ ವಿಸ್ತರಣೆ

    ಬೆಂಗಳೂರು: ಕಾಂಗ್ರೆಸ್ ನಲ್ಲಿರುವ ಭಿನ್ನಮತ ಶಮನಕ್ಕೆ ಫುಲ್ ಸ್ಟಾಫ್ ಹಾಕಲು ಕಾಂಗ್ರೆಸ್ ಮುಂದಾಗಿದೆ.

    ರಾಜ್ಯ ಸಚಿವ ಸಂಪುಟ ಇನ್ನು ಹತ್ತು ದಿನಗಳೊಳಗೆ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಇನ್ನು ಹತ್ತು ದಿನಗಳ ಒಳಗೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ನವದೆಹಲಿಯಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಸದ್ಯ ನಾಲ್ಕು ಸ್ಥಾನಗಳನ್ನು ವಿಸ್ತರಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಮತ್ತೆ ಎರಡು ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ 10-18 ರ ಪಾಲಿಸಿ ಅನುಕರಿಸಲು ನಿರ್ಧರಿಸಲಾಗಿದ್ದು, ಕಾಂಗ್ರೆಸ್ 18 ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ 10 ಕ್ಷೇತ್ರಗಳ ಸ್ಪರ್ಧಿಸುವ ಕುರಿತು ಚರ್ಚೆ ನಡೆದಿದೆ.

    ನೀತಿ ಆಯೋಗ ಸಭೆ ಹಿನ್ನೆಲೆ ನವದೆಹಲಿಗೆ ತೆರಳಿರುವ ಸಿಎಂ ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಲಿದ್ದಾರೆ. ಕಾಂಗ್ರೆಸ್‍ನಲ್ಲಿ ಇನ್ನು ಆರು ಸ್ಥಾನಗಳು ಭರ್ತಿಯಾಗಬೇಕಿದ್ದು, ಈ ಪೈಕಿ ಅತೃಪ್ತರ ಮನವೊಲಿಸಲು ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಕುಮಾರಸ್ವಾಮಿ ದೆಹಲಿಯಲ್ಲಿರುವ ಹಿನ್ನೆಲೆ ರಾಹುಲ್ ಗಾಂಧಿ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್ ಮಾಡಲಾಗುತ್ತೆ ಎನ್ನಲಾಗಿದೆ. ಇನ್ನು ಇದೇ ವೇಳೆ ಲೋಕಸಭೆ ಚುನಾವಣೆ ಮೈತ್ರಿ ಕುರಿತು ಚರ್ಚೆ ನಡಯುವ ಸಾಧ್ಯತೆ ಇದ್ದು, ಸೀಟು ಹಂಚಿಕೆ ಕುರಿತು ರಾಹುಲ್ ಜೊತೆ ಎಚ್‍ಡಿಕೆ ಮಾತುಕತೆ ನಡೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಚಡ್ಡಿ ಹಾಕೋರಿಂದ ಹಿಡಿದು ಪ್ಯಾಂಟ್, ಕಚ್ಚೆ ತೊಡುವವರು ನನ್ನ ಕಚೇರಿಗೆ ಬರಬಹುದು: ಸಿದ್ದರಾಮಯ್ಯ

    ಚಡ್ಡಿ ಹಾಕೋರಿಂದ ಹಿಡಿದು ಪ್ಯಾಂಟ್, ಕಚ್ಚೆ ತೊಡುವವರು ನನ್ನ ಕಚೇರಿಗೆ ಬರಬಹುದು: ಸಿದ್ದರಾಮಯ್ಯ

    ಬಾಗಲಕೋಟೆ: ಸತತ ಮೂರನೇ ದಿನವೂ ಕ್ಷೇತ್ರ ಪ್ರವಾಸದಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರು ಸಂಕೋಚ ಪಡದೆ ತಮ್ಮ ಬಳಿ ಊರಿನ ಸಮಸ್ಯೆ ಹೇಳಿಕೊಳ್ಳಬಹುದು. ಚಡ್ಡಿ ಹಾಕೋರಿಂದ ಹಿಡಿದು ಪ್ಯಾಂಟ್, ಕಚ್ಚೆ ತೊಡುವವರು ನನ್ನ ಕಚೇರಿಗೆ ಬರಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ.

    ಕ್ಷೇತ್ರ ಪ್ರವಾಸದ ವೇಳೆ ಮಾತನಾಡಿದ ಅವರು, ಸದ್ಯ ನಾನು ಈ ಕ್ಷೇತ್ರದ ಪ್ರತಿನಿಧಿ. ಮತ ಹಾಕಿದವರು ಹಾಕದೇ ಇರುವವರು ಸಹ ತಮ್ಮ ಕೆಲಸಕ್ಕಾಗಿ ನನ್ನ ಬಳಿ ಬರಬಹುದು. ಸದ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರವಾಸ ನಡೆಸುತ್ತಿದ್ದು. ಮುಂದಿನ ದಿನಗಳಲ್ಲಿ ಹಳ್ಳಿಗೆ ಭೇಟಿ ನೀಡುತ್ತೇನೆ ಎಂದರು.

    ಕ್ಷೇತ್ರ ಪ್ರವಾಸದ ಭಾಗವಾಗಿ ಮಂಗಳೂರು ಗ್ರಾಮ ಪಂಚಾಯಿತಿ, ಹೊಸೂರು ಗ್ರಾಮಕ್ಕೆ ಮಾಜಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡಿ, ಈ ಬಾರಿ ಆತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಅದಕ್ಕಾಗಿ ಜೆಡಿ ಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆ ಮಾಡಲಾಯಿತು. ನಮ್ಮ ಸರ್ಕಾರದ ವೇಳೆ ಜಾರಿಗೆ ಮಾಡಲಾಗಿರುವ ಯೋಜನೆಗಳನ್ನು ನಿಲ್ಲಿಸದೆ ಮುಂದುವರೆಸಲಾಗುವುದು. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಿದ್ದು, ನಮ್ಮ ಎಲ್ಲ ಯೋಜನೆಗಳು ಸಮ್ಮಿಶ್ರ ಸರಕಾರದಿಂದ ಜಾರಿಯಾಗಲಿದೆ. ಪಕ್ಷ ಸೋತರೂ ಬಡವರಿಗೆ ಕೆಲಸ ಮಾಡಿದೆ ತೃಪ್ತಿ ಇದೆ ಎಂದು ತಿಳಿಸಿದರು.

    ನಮಗೆ ಚಿಕ್ಕವರಿದ್ದಾಗ ಅನ್ನ ಸಿಗುತ್ತಿರಲಿಲ್ಲ. ಬರಿ ಮುದ್ದೆ ತಿಂದು ಬದುಕಿದ್ದೇವೆ. ಬೀಗರು ಬಂದರೆ ಮಾತ್ರ ಅನ್ನ ಸಿಗುತ್ತಿತ್ತು. ಆದ್ದರಿಂದ ಭಾಗ್ಯ ಯೋಜನೆ ಜಾರಿ ಮಾಡಿದೆ. ಮುಂದೆ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತೇನೆ. ಚುನಾವಣೆ ನಂತರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

    ಸದ್ಯ ಸಿದ್ದರಾಮಯ್ಯ ಪ್ರವಾಸದ ವೇಳೆ ಮಾಜಿ ಸಚಿವರಾದ ಎಸ್ ಆರ್ ಪಾಟಿಲ್, ಆರ್ ಬಿ ತಿಮ್ಮಾಪುರ, ಮಾಜಿ ಶಾಸಕರಾದ ಹೆಚ್ ವೈ ಮೇಟಿ, ಬಿಬಿ ಚಿಮ್ಮನಕಟ್ಟಿ, ಮುಖಂಡ ದೇವರಾಜ ಪಾಟಿಲ್ ಸಾಥ್ ನೀಡಿದರು. ಕ್ಷೇತ್ರ ಪ್ರವಾಸದ ವೇಳೆ ಎಂಬಿ ಪಾಟಿಲ್ ಸಚಿವ ಸ್ಥಾನಕ್ಕೆ ಹೆಚ್ಚಿದ್ದು, ಹಲವು ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು.

    ಸಮ್ಮಿಶ್ರ ಸರ್ಕಾರದಲ್ಲಿ ಹಲವು ಶಾಸಕರು ಸಚಿವ ಸ್ಥಾನ ಹಂಚಿಕೆ ಕುರಿತು ರಾಜ್ಯ ರಾಜಧಾನಿಯಲ್ಲಿ ಬಿರುಸಿನ ಚಟುವಟಿಕೆ ನಡೆಸುತ್ತಿದ್ದರೆ ಇತ್ತರ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಕ್ಷೇತ್ರ ಪ್ರವಾಸದಲ್ಲಿ ತೊಡಗಿದ್ದಾರೆ. ಆದರೆ ಇದೇ ವೇಳೆ ಕ್ಷೇತ್ರ ಪ್ರವಾಸದಲ್ಲಿದ್ದರು ಅವರ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿದದ್ದು ಕಂಡು ಬಂತು.

    https://www.youtube.com/watch?v=hXCaa3lu7ho

  • ಸಂಪುಟ ವಿಸ್ತರಣೆಗೆ ಗೈರಾಗಿದ್ದು ಯಾಕೆ: ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದ್ರು

    ಸಂಪುಟ ವಿಸ್ತರಣೆಗೆ ಗೈರಾಗಿದ್ದು ಯಾಕೆ: ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದ್ರು

    ಬೆಂಗಳೂರು: ಶುಕ್ರವಾರ ತುರ್ತಾಗಿ ದೆಹಲಿಗೆ ಹೋಗಬೇಕಿತ್ತು. ಸಿಎಂಗೆ ಮೊದಲೇ ನಾನು ದೆಹಲಿಗೆ ಹೋಗೋ ವಿಚಾರ ತಿಳಿದಿತ್ತು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಭಿನ್ನಮತ, ಅಸಮಾಧಾನ ಯಾವುದು ಇಲ್ಲ. ದೆಹಲಿಗೆ ಹೋಗುವ ವಿಚಾರವನ್ನು ಮೊದಲೇ ತಿಳಿಸಿದ್ದೆ. ಸಿಎಂ ಹೋಗಿ ಬನ್ನಿ ಎಂದು ತಿಳಿಸಿದ್ದರು. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ನಾನೊಬ್ಬ ಸ್ಟ್ರೀಟ್ ಫೈಟರ್, ನಾನು ಎದುರಿಗೆ ಹೋರಾಟ ಮಾಡುವ ವ್ಯಕ್ತಿ. ನಾನು ಹಿಂದಿನಿಂದ ಹೋರಾಟ ಮಾಡುವ ವ್ಯಕ್ತಿಯಲ್ಲ. ನನಗೆ ಯಾಕೆ ಅಸಮಾಧಾನ ಆಗಬೇಕು ಎಂದು ಅವರು ಪ್ರಶ್ನಿಸಿದರು.

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಅಸಮಾಧಾನ ಆಗಿದ್ಯಾ ಎನ್ನುವ ಪ್ರಶ್ನೆಗೆ, ನಾನು ಪರಮೇಶ್ವರ್‍ಗೆ ವಕ್ತಾರ ಅಲ್ಲ. ನನಗೆ ನಾನೇ ವಕ್ತಾರ. ಅಸಮಾಧಾನದ ಬಗ್ಗೆ ಪರಮೇಶ್ವರ್ ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

  • ಇನ್ನೊಂದು ವಾರದಲ್ಲಿ ಕೇಂದ್ರ ಸಚಿವಸಂಪುಟ ವಿಸ್ತರಣೆ ಸಾಧ್ಯತೆ- ಕರ್ನಾಟಕದ ಇಬ್ಬರು ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ?

    ಇನ್ನೊಂದು ವಾರದಲ್ಲಿ ಕೇಂದ್ರ ಸಚಿವಸಂಪುಟ ವಿಸ್ತರಣೆ ಸಾಧ್ಯತೆ- ಕರ್ನಾಟಕದ ಇಬ್ಬರು ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ?

    ನವದೆಹಲಿ: ಕೇಂದ್ರ ಸಚಿವ ಸಂಪುಟ ಇನ್ನೊಂದು ವಾರದೊಳಗೆ ಪುನಾರಚನೆಯಾಗುವ ಸಾಧ್ಯತೆ ಹೆಚ್ಚಿದೆ. 2019ರ ಲೋಕಸಭೆ ಚುನಾವಣೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಪುನಾರಚನೆ ನಡೆಯಲಿದೆ.

    ಮೊನ್ನೆಯಷ್ಟೇ ಎನ್‍ಡಿಎ ಸೇರಿದ ಜೆಡಿಯು ಮತ್ತು ಅಣ್ಣಾಡಿಎಂಕೆ ಪಕ್ಷಗಳ ತಲಾ ಇಬ್ಬರು ಸಂಸದರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಶಿವಸೇನೆಯ ಒಬ್ಬರಿಗೆ ಮಂತ್ರಿಸ್ಥಾನ ನೀಡುವ ಮೂಲಕ ಅವರ ಕೋಪ ತಣ್ಣಗಾಗಿಸುವ ಪ್ರಯತ್ನ ಕೂಡ ನಡೆದಿದೆ. ಇನ್ನು ಕರ್ನಾಟಕದ ಇಬ್ಬರು ಸಂಸದರು ಮೋದಿ ಸಂಪುಟ ಸೇರುವ ನಿರೀಕ್ಷೆ ಇದೆ.

    ಯಡಿಯೂರಪ್ಪ ಆಪ್ತರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಶಿವಕುಮಾರ್ ಉದಾಸಿ, ಸುರೇಶ್ ಅಂಗಡಿ ಪೈಕಿ ಇಬ್ಬರಿಗೆ ಮಂತ್ರಿಗಿರಿಯ ಯೋಗವಿದೆ ಎನ್ನಲಾಗ್ತಿದೆ. ಕರಂದ್ಲಾಜೆ ಸೇರ್ಪಡೆ ಮೂಲಕ ಕರಾವಳಿ ಜಿಲ್ಲೆಗಳ ಮೇಲೆ ಮತ್ತಷ್ಟು ಹಿಡಿತ ಸಾಧಿಸಬಹುದು. ಶ್ರೀರಾಮುಲು ಮೂಲಕ ಎಸ್‍ಟಿ ಮತಗಳನ್ನು ಗಟ್ಟಿ ಮಾಡಿಕೊಳ್ಳಬಹುದು. ಶಿವಕುಮಾರ್ ಉದಾಸಿ ಅಥವಾ ಸುರೇಶ್ ಅಂಗಡಿ ಮೂಲಕ ಲಿಂಗಾಯತ ಮತಗಳ ಕ್ರೋಢೀಕರಣ ಮಾಡಬಹುದು ಎಂಬ ಲೆಕ್ಕಾಚಾರ ಮೋದಿ ಪಾಳಯದಲ್ಲಿ ನಡೆಯುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರ್ತಿವೆ.

    ಪುನಾರಚನೆ ವೇಳೆ ಕಲ್‍ರಾಜ್ ಮಿಶ್ರಾ ಸೇರಿದಂತೆ ಹಲವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಈ ನಡುವೆ ರೈಲ್ವೆ ದುರಂತಗಳ ಬಳಿಕ ನೈತಿಕ ಹೊಣೆ ಹೊತ್ತು ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಹೆದ್ದಾರಿ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿಗೆ ರೈಲ್ವೆ ಖಾತೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.

  • ರಾಜ್ಯ ಸಂಪುಟ ವಿಸ್ತರಣೆಗೆ ಎಡ-ಬಲ ವಿಘ್ನ: ಗಣೇಶ ಚತುರ್ಥಿ ಬಳಿಕ ವಿಸ್ತರಣೆ?

    ರಾಜ್ಯ ಸಂಪುಟ ವಿಸ್ತರಣೆಗೆ ಎಡ-ಬಲ ವಿಘ್ನ: ಗಣೇಶ ಚತುರ್ಥಿ ಬಳಿಕ ವಿಸ್ತರಣೆ?

    ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ಎಡ-ಬಲ ವಿಘ್ನ ಎದುರಾಗಿದೆ. ಗೌರಿ ಗಣೇಶ ಹಬ್ಬದ ಬಳಿಕ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡೋ ಸಾಧ್ಯತೆಯಿದೆ.

    ನೂತನ ಮಂತ್ರಿಗಳಾಗಿ ಹೆಚ್‍ಎಂ ರೇವಣ್ಣ ಹಾಗೂ ಷಡಕ್ಷರಿ ಓಕೆ ಆಗಿದ್ದಾರೆ. ಆದ್ರೆ ಎಸ್‍ಸಿ ಕೋಟಾದಲ್ಲಿ ನೂತನ ಸಚಿವರು ಯಾರಾಗ್ತಾರೆ ಎಂಬ ಪ್ರಶ್ನೆ ಎದ್ದಿದೆ. ಆರ್‍ಬಿ ತಿಮ್ಮಾಪುರ ಹೆಸರು ಫೈನಲ್ ಆಗಿದ್ರೂ ಲಾಬಿ ನಡೆದಿದೆ. ಮಂತ್ರಿಗಿರಿ ಗಿಟ್ಟಿಸಲು ಎಸ್‍ಸಿ ಸಮುದಾಯದ ಎಡ-ಬಲ ಬಣಗಳ ನಡುವೆ ಪೈಪೋಟಿ ಜೋರಾಗಿದೆ.

    ಎಡಗೈ ಪರ ಮುನಿಯಪ್ಪ ಹಾಗೂ ಬಲಗೈ ಪರ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಎಂಎಲ್‍ಸಿ ಮೋಟಮ್ಮರಿಂದಲೂ ಪ್ರಬಲ ಪೈಪೋಟಿ ಇದೆ.

    ಪ್ರಬಲ ಲಾಬಿ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಬಳಿಕ ಸಂಪುಟ ವಿಸ್ತರಣೆಗೆ ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.