Tag: ಸಂಪುಟ ವಿಸ್ತರಣೆ

  • ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡದೇ ಬಾಯಿಮುಚ್ಚಿಕೊಂಡು ಇರ್ಬೇಕು: ಬೋಸರಾಜು

    ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡದೇ ಬಾಯಿಮುಚ್ಚಿಕೊಂಡು ಇರ್ಬೇಕು: ಬೋಸರಾಜು

    – ಸ್ವಪಕ್ಷದವರ ವಿರುದ್ಧ ಸಚಿವ ಬೋಸರಾಜು ಕಿಡಿ

    ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ (Cabinet Reshuffle) ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತಾಡದೇ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು ಎಂದು ಸ್ವಪಕ್ಷದವರ ವಿರುದ್ಧವೇ ಸಚಿವ ಬೋಸರಾಜು (NS Boseraju) ಆಕ್ರೋಶ ಹೊರಹಾಕಿದ್ದಾರೆ.

    ನಾಯಕತ್ವ ಬದಲಾಣೆ ಮತ್ತು ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನೇ ಹೇಳಿದ್ರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು 25 ವರ್ಷ ಕಾಂಗ್ರೆಸ್‌ನಲ್ಲಿ (Congress) ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಯಾವತ್ತು ನಾನು ಅಧಿಕಾರ ಕೇಳಿಲ್ಲ. ಅಧಿಕಾರ ಬೇಕು ಅಂತ ಬಯೋಡಾಟಾ ರೆಡಿ ಮಾಡಿಲ್ಲ. ಮಂತ್ರಿ ಆಗಬೇಕು ಅಂತ ನಾನು ಶಾಸಕ, ಎಂಎಲ್‌ಸಿ ಆಗಲಿಲ್ಲ. ಫೋನ್ ಮಾಡಿದ್ರು ಬಂದು ಮಂತ್ರಿಯಾದೆ. ಒಂದು ಪಕ್ಷ ಶಿಸ್ತಿನ ರೀತಿ ಇರಬೇಕು. 100 ವರ್ಷದ ಇತಿಹಾಸದ ಪಕ್ಷ. ನಾವು ಮಾತಾಡಿದ ಕೂಡಲೇ ಮಾಧ್ಯಮಗಳು ಕೇಳುತ್ತಾರೆ. ಪರಮೇಶ್ವರ್, ಮುನಿಯಪ್ಪ ಯಾರಿಗೆ ಪ್ರಶ್ನೆ ಕೇಳಿದ್ರು ಒಂದೊಂದು ಹೇಳಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಸಿಎಂ ಅವರು ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಹೇಳಿದ್ದಾರೆ. ಡಿಸಿಎಂ ಅವರು ಸಿಎಂ ಹೇಳಿದ ಮೇಲೆ ಮುಗೀತು ಅಂದಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು ಎಂದು ಸ್ವಪಕ್ಷದವರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ಹೈಕಮಾಂಡ್ ಇದೆ ಎಲ್ಲವನ್ನು ನೋಡಿಕೊಳ್ಳುತ್ತದೆ. ಎಲ್ಲರು ಮಾತಾಡೋದು ಸರಿಯಲ್ಲ. ಶಾಸಕರಾಗಿ ಶಾಸಕರ ಕೆಲಸ, ಮಂತ್ರಿಯಾಗಿ ಮಂತ್ರಿ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಬಿಜೆಪಿ ತರಹ ಕಾಂಗ್ರೆಸ್ ಕೂಡಾ 4 ಬಾಗಿಲು ಆಗುತ್ತದೆ. ಅಶೋಕ್, ವಿಜಯೇಂದ್ರ, ಜೋಷಿ ಬಣ ಆದ ಹಾಗೆ ಕಾಂಗ್ರೆಸ್‌ನಲ್ಲೂ ಆಗಬೇಕಾ? ಹೈಕಮಾಂಡ್, ಸಿಎಂ, ಡಿಸಿಎಂ ಹೇಳಿದಾಗೆ ಕೇಳಬೇಕು. ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು. ಜನರು ನಮಗೆ ಅಧಿಕಾರ ಕೊಟ್ಟಿರೋದು ಜನ ಸೇವೆ ಮಾಡಲು. ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಸಮಯ ಬಂದಾಗ ಹೇಳುತ್ತಾರೆ. ಹೈಕಮಾಂಡ್ ಈಗಾಗಲೇ ಮಾಡಿ ತೋರಿಸಿದೆ. ಅದೇ ರೀತಿ ಕಾದು ಕಾದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ಯಾವುದೇ ನಾಯಕರು ಮಾತಾಡೋದು ಸರಿಯಲ್ಲ. ನಾವೆಲ್ಲರು ಬಾಯಿ ಮುಚ್ಚಿಕೊಂಡು ಇರಬೇಕು. ಯಾವುದೇ ಆದರು ಹೈಕಮಾಂಡ್ ಸಮಯ ಬಂದಾಗ ಏನು ಮಾಡಬೇಕೋ ಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾಡಲು ಆಗಿಲ್ಲ. ಮೋದಿ, ಅಮಿತ್ ಶಾ ಇದ್ದರು ಮಾಡಲು ಆಗಿಲ್ಲ. ಇಲ್ಲ ವಿಜಯೇಂದ್ರ ಮುಂದುವರೆತ್ತಾರೆ ಅಂತ ಹೇಳೋರು ಇಲ್ಲ. ಯತ್ನಾಳ್, ಈಶ್ವರಪ್ಪ ಒಂದೊಂದು ಮಾತನಾಡುತ್ತಾರೆ. ಅವರು ನಮ್ಮ ಪಕ್ಷದ ಬಗ್ಗೆ ಮಾತಾಡೋದು ಬೇಡ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

    ಡಿಕೆಶಿ ಸಿಎಂ ಆದರೆ ಕೆಪಿಸಿಸಿ ಕಚೇರಿ ಬಾಗಿಲು ಹಾಕಬೇಕು ಎಂದ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ವೈಯಕ್ತಿಕ ಅಭಿಪ್ರಾಯ ಹೇಳೋಕೆ ಎಲ್ಲರಿಗೂ ಅವಕಾಶ ಇದೆ. ಮೋದಿ, ಅಮಿತ್ ಶಾ ಬಗ್ಗೆಯೂ ಅವರ ಪಕ್ಷದಲ್ಲಿ ಮಾತಾಡಿದ್ದಾರೆ ತೊರಿಸಲಾ? ಹಾಗೆ ನಮ್ಮಲ್ಲು ಮಾತನಾಡುತ್ತಾರೆ. ಪರಮೇಶ್ವರ್ ಹೇಳಿಕೆ ಕೂಡಾ ಅವರ ಅಭಿಪ್ರಾಯವೇ ಎಂದರು. ಇದನ್ನೂ ಓದಿ: ʼಪಾಕ್‌ ಸೆರೆ ಹಿಡಿದʼ ರಫೇಲ್‌ ಪೈಲಟ್‌ ಜೊತೆ ಫೋಟೋ ಕ್ಲಿಕ್ಕಿಸಿದ ದ್ರೌಪದಿ ಮುರ್ಮು!

    ಹೈಕಮಾಂಡ್ ಹೇಳಿದ್ರೆ ಇವತ್ತೆ ನಾವು ಸಚಿವ ಸ್ಥಾನ ಬಿಟ್ಟು ಕೊಡೋಕೆ ನಾವೆಲ್ಲರು ತಯಾರಿದ್ದೇವೆ. ನಾವು ಯಾರು ವಿಸ್ತರಣೆ ಬಗ್ಗೆ ಮಾತನಾಡುತ್ತಿಲ್ಲ. ಆದ್ರು ಪೇಪರ್, ಚಾನಲ್‌ನಲ್ಲಿ ಬರೋದೆ ಭಯ ಆಗುತ್ತಿದೆ. ನಾವು ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ ನಮ್ಮನ್ನ ಹರಾಜು ಹಾಕಿದ್ರೆ ಹೇಗೆ? ಪರಮೇಶ್ವರ್ ಅಭಿಪ್ರಾಯ ಅವರದ್ದು. ನಮ್ಮದು ಹೈಕಮಾಂಡ್ ತೀರ್ಮಾನ ಅಂತಿಮ. ಹೈಕಮಾಂಡ್ ಮಾತು ಕೇಳಿದವರು ಮಾತ್ರ ಈ ಪಕ್ಷದಲ್ಲಿ ಇರಬೇಕು. 2.5 ವರ್ಷ ಆಗಿದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ಗೆ ಹೇಳ್ತೀನಿ, ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಸಿಎಂ ಹೇಳಿದ್ದಾರೆ ಅದು ಸರಿ ಇದೆ. ಅದು ಬಿಟ್ಟು ಎಲ್ಲರು ಒಂದೊಂದು ಮಾತಾಡೋದು ಸರಿಯಲ್ಲ. ಬಾಯಿಮುಚ್ಚಿಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ ಎಫ್‌ಐಆರ್

  • ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ರಾಮನಗರ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ. ನಾವು ಮಾತನಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಸೇರಿ ಹೇಳ್ತೀನಿ, ಮಾತನಾಡಿದಷ್ಟು ಪಕ್ಷಕ್ಕೆ ಹಾನಿ. ಸಾಧ್ಯವಾದಷ್ಟು ಎಲ್ಲರೂ ಸೈಲೆಂಟ್ ಆಗಿ ಇರಿ. ಬಿಜೆಪಿಯಲ್ಲಿರುವಷ್ಟು (BJP) ಬಣ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು. ಮಾಧ್ಯಮಗಳ ಮುಂದೆ ಮಾತನಾಡಿದ್ರೆ ವಿಪಕ್ಷಗಳಿಗೆ ಆಹಾರ ಆಗುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ (Congress) ನಾಯಕರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ಇನ್ನೂ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಹೈಕೋರ್ಟ್ ತಡೆ ವಿಚಾರ ಕುರಿತು ಮಾತನಾಡಿ, ಸರ್ಕಾರದ ಸರ್ಕ್ಯುಲರ್ ಮೇಲೆ ಕೋರ್ಟ್ ಆದೇಶ ಮಾಡಿದೆ. ಮುಖ್ಯಮಂತ್ರಿಗಳು ಅಪೀಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇದು ಹೊಸದಾಗಿ ನಾವು ಮಾಡಿರುವ ಕಾನೂನು ಅಲ್ಲ. ಹಿಂದೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಮಾಡಿದ್ದ ಆದೇಶ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದು ಅಂತ ಮಾಡಿದ್ದರು. ಇದು ಎಲ್ಲಾ ಪಕ್ಷಗಳು, ಎಲ್ಲಾ ಸಂಘಸಂಸ್ಥೆಗಳಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

  • ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್- 18 ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಫೈನಲ್

    ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್- 18 ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಫೈನಲ್

    ನವದೆಹಲಿ: ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಕೊನೆಗೊಂಡಿಲ್ಲ. ಬುಧವಾರ ರಾತ್ರಿಯಿಂದ ದೆಹಲಿಯಲ್ಲಿ ಸಭೆ ಮೇಲೆ ಸಭೆಗಳು ನಡೆದ್ರೂ ಒಮ್ಮತಾಭಿಪ್ರಾಯ ಮೂಡಿಲ್ಲ.

    18 ಶಾಸಕರ ಹೆಸರು ಹೆಚ್ಚುಕಡಿಮೆ ಫೈನಲ್ ಆಗಿದ್ದು, ಇನ್ನುಳಿದವರ ಆಯ್ಕೆಗೆ ಕಸರತ್ತು ನಡೆದಿದೆ. ಇತರೆ ಪ್ರಮುಖ ಸಮುದಾಯಗಳಿಗೂ ಡಿಸಿಎಂ ಹುದ್ದೆ ಕೊಡಬೇಕು ಎನ್ನುವ ಮೂಲಕ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಇಕ್ಕಟ್ಟಿಗೆ ಸಿಲುಕಿಸಲು ನೋಡಿದ್ದಾರೆ. ಈ ಬಾರಿ ಪ್ರಮುಖ ಸಮುದಾಯಗಳೆಲ್ಲಾ ಪಕ್ಷವನ್ನು ಬೆಂಬಲಿಸಿವೆ. ಹೀಗಾಗಿ ಎಸ್‍ಸಿ, ಎಸ್‍ಟಿ ಹಾಗೂ ಲಿಂಗಾಯತ ಸಮುದಾಯಗಳು ಕೂಡ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿವೆ ಎಂಬ ದಾಳವನ್ನು ಸಿಎಂ ಉರುಳಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಬಯಸಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಬಿಬಿಎಂಪಿ ಚುನಾವಣೆ ಆಗೋವರೆಗೆ ತನ್ನ ಬಳಿಯೇ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

    ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) , ಲಕ್ಷ್ಮಣ ಸವದಿ (Laxman Savadi) ಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಡಿಸಿಎಂ ಬೇಡಿಕೆಗೆ ಆಗಲ್ಲ, ಇಬ್ಬರಲ್ಲಿ ಒಬ್ಬರ ಹೆಸರನ್ನು ಹೇಳಿ ಎಂದು ಸಿಎಂ ನೇರವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಬಯಸಿ 30ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಲಾಬಿ ನಡೆಸಿದ್ದಾರೆ. ಬಿಕೆ ಹರಿಪ್ರಸಾದ್, ಟಿಬಿ ಜಯಚಂದ್ರ, ಆರ್ ಬಿ ತಿಮ್ಮಾಪುರ, ಪುಟ್ಟರಂಗಶೆಟ್ಟಿ, ನಾಗೇಂದ್ರ ಸೇರಿ ಹಲವರು ಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದು ಕುಳಿತಿದ್ದಾರೆ. ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಲೇಬೇಕು ಎಂದು ಶಾಸಕ ಪೊನ್ನಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಅಸ್ತಿತ್ವವೇ ಹೊರಟೋಗಿದೆ, ನಾನೇನು ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ – HDK ಪ್ರಶ್ನೆ

    ಇವರು ಸಿದ್ದರಾಮಯ್ಯ ಸಂಪುಟ ಸೇರ್ತಾರಾ?
    * ಈಶ್ವರ ಖಂಡ್ರೆ – ಭಾಲ್ಕಿ – ಲಿಂಗಾಯತ
    * ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ – ಲಿಂಗಾಯತ
    * ಶರಣಬಸಪ್ಪ ದರ್ಶನಾಪುರ – ಶಹಾಪುರ – ಲಿಂಗಾಯತ
    * ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ ಉತ್ತರ – ಲಿಂಗಾಯತ
    * ಚೆಲುವರಾಯಸ್ವಾಮಿ – ನಾಗಮಂಗಲ – ಒಕ್ಕಲಿಗ
    * ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ


    * ವೆಂಕಟೇಶ್ – ಪಿರಿಯಾಪಟ್ಟಣ – ಒಕ್ಕಲಿಗ
    * ಎಂ ಸಿ ಸುಧಾಕರ್ – ಚಿಂತಾಮಣಿ – ಒಕ್ಕಲಿಗ
    * ಶಿವಲಿಂಗೇಗೌಡ – ಅರಸೀಕೆರೆ – ಒಕ್ಕಲಿಗ
    * ಬೈರತಿ ಸುರೇಶ್ – ಹೆಬ್ಬಾಳ – ಕುರುಬ
    * ನರೇಂದ್ರ ಸ್ವಾಮಿ – ಮಳವಳ್ಳಿ – ಎಸ್‍ಸಿ
    * ರಹೀಂ ಖಾನ್ – ಬೀದರ್ ಉತ್ತರ – ಮುಸ್ಲಿಂ
    * ಪುಟ್ಟರಂಗ ಶೆಟ್ಟಿ – ಚಾಮರಾಜನಗರ – ಉಪ್ಪಾರ
    * ಮಧು ಬಂಗಾರಪ್ಪ – ಸೊರಬ – ಈಡಿಗ
    * ಸುಧಾಕರ್ – ಹಿರಿಯೂರು – ಜೈನ್
    * ಮಂಕಾಳ ವೈದ್ಯ – ಭಟ್ಕಳ – ಮೊಗೆರಾ

  • ಮಹಾರಾಷ್ಟ್ರದಲ್ಲಿ 50:50 ಅಧಿಕಾರ – 18 ಶಾಸಕರು ಸಚಿವರಾಗಿ ಪ್ರಮಾಣ ವಚನ

    ಮಹಾರಾಷ್ಟ್ರದಲ್ಲಿ 50:50 ಅಧಿಕಾರ – 18 ಶಾಸಕರು ಸಚಿವರಾಗಿ ಪ್ರಮಾಣ ವಚನ

    ಮುಂಬೈ: ಏಕನಾಥ್‌ ಶಿಂಧೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂಬತ್ತು ಬಿಜೆಪಿ ನಾಯಕರು ಮತ್ತು ಒಂಬತ್ತು ಶಿವಸೇನೆ ನಾಯಕರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಬಿಜೆಪಿ ನಾಯಕರು
    ಚಂದ್ರಕಾಂತ್‌ ಪಾಟೀಲ್‌, ಸುಧೀರ್‌ ಮುಂಗನ್‌ತಿವಾರ್‌, ಗಿರೀಶ್‌ ಮಹಾಜನ್‌, ಸುರೇಶ್‌ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್‌, ರವೀಂದ್ರ ಚೌಹಾಣ್‌, ಮಂಗಲ್‌ ಪ್ರಭಾತ್‌ ಲೋಧಾ, ವಿಜಯಕುಮಾರ್‌ ಗವಿತ್‌, ಆತುಲ್‌ ಸವೆ. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    ಶಿವಸೇನಾ ನಾಯಕರು
    ದಾದಾ ಭುಸೆ, ಶಂಭುರಾಜ್‌ ದೇಸಾಯಿ, ಸಂದೀಪನ್‌ ಭುಮ್ರೆ, ಉದಯ್‌ ಸಮಂತ್‌, ತಾನಜಿ ಸಾವಂತ್‌, ಅಬ್ದುಲ್‌ ಸತ್ತಾರ್‌, ದೀಪಕ್‌ ಕೇಸಾರ್ಕರ್‌, ಗುಲಬ್‌ರಾವ್‌ ಪಾಟೀಲ್‌, ಸಂಜಯ್‌ ರಾಥೋಡ್‌. ಮುಂಬೈ ರಾಜಭವನದಲ್ಲಿ ಒಟ್ಟು 18 ಶಾಸಕರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಶಿವಸೇನಾದ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್‌ ಅಘಾಡಿ ಮೈತ್ರಿಕೂಟದ ವಿರುದ್ಧ ಏಕನಾಥ ಶಿಂಧೆ ಬಂಡಾಯವೆದ್ದಿದ್ದರು. ನಂತರ ಶಿವಸೇನಾದಲ್ಲಿ ಉದ್ಧವ್‌ ಮತ್ತು ಶಿಂಧೆ ಬಣ ರೂಪುಗೊಂಡಿತು. ಶಿಂಧೆ ಬಣದಲ್ಲಿ ಶಿವಸೇನಾದ ಹೆಚ್ಚಿನ ಶಾಸಕರು ಸೇರಿದ್ದರು. ಈ ಹಿನ್ನೆಲೆಯಲ್ಲಿ ಶಿಂಧೆ ಬಣ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತು. ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಸರ್ಕಾರ ರಚನೆಯಾಗಿ 40 ದಿನಗಳ ನಂತರ ಇಂದು ಸಂಪುಟ ವಿಸ್ತರಣೆ ಮಾಡಲಾಗಿದೆ. ಬಿಜೆಪಿ ಹಾಗೂ ಶಿಂಧೆ ಬಣದ ತಲಾ 9 ನಾಯಕರಿಗೆ ಇಂದು ಪ್ರಮಾಣ ವಚನ ಬೋಧಿಸಲಾಗುವುದು. ಆ ಮೂಲಕ ಮೈತ್ರಿ ಸರ್ಕಾರ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೊಂಡು ಆಡಳಿತ ನಡೆಸಲು ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ ವಿಭಜನೆ: ಕರ್ನಾಟಕ, ಜಿಲ್ಲೆಯ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡುತ್ತೇನೆ: ಸಿಎಂ

    ಬೆಳಗಾವಿ ವಿಭಜನೆ: ಕರ್ನಾಟಕ, ಜಿಲ್ಲೆಯ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡುತ್ತೇನೆ: ಸಿಎಂ

    ಬೆಳಗಾವಿ: ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಯಾವಾಗ ಚರ್ಚೆಗೆ ಕರೆಯುತ್ತೋ ಅಂದು ಹೋಗಿ ಈ ಕುರಿತು ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ನಾಳೆಗೆ ದೆಹಲಿಗೆ ಹೋಗುತ್ತಿದ್ದೇನೆ. ಚೀಫ್ ಜಸ್ಟಿಸ್ ಕಾನ್ಫರೆನ್ಸ್ ಪಾಲ್ಗೊಂಡು ವಾಪಸ್ ಬರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಯಾವಾಗ ಚರ್ಚೆಗೆ ಕರೆಯುತ್ತೋ ಅಂದು ಹೋಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ:  ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    ಬೆಳಗಾವಿ ಜಿಲ್ಲೆ ವಿಭಜನೆ ವಿಚಾರಕ್ಕೆ, ಬೆಳಗಾವಿ ಜಿಲ್ಲೆಯ ವಿಭಜನೆಗೆ ಇನ್ನೂ ಯಾವುದೇ ನಿರ್ಣಯ ಮಾಡಿಲ್ಲ. ಬೆಳಗಾವಿ ವಿಭಜನೆ ಅನೇಕ ವರ್ಷಗಳಿಂದ ಚರ್ಚೆಯಲ್ಲಿದೆ. ಎರಡು, ಮೂರು ಜಿಲ್ಲೆಗಳ ಬಗ್ಗೆ ಪ್ರಸ್ತಾಪವಿದೆ. ಗಡಿಭಾಗದ ಜಿಲ್ಲೆ ಇದ್ದು ಬೇಡ ಎಂದು ಅಂದಿನಿ ಸಿಎಂ ಜೆ.ಎಚ್.ಪಟೇಲ್ ಇದ್ದಾಗ ಹೇಳಿದ್ರು. ಈಗ ಮತ್ತೆ ಜನರ ತಮ್ಮ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಜಿಲ್ಲೆ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದರು.

    ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರ ವಿಚಾರಕ್ಕೆ, ಇದನ್ನು ಸಾರಿಗೆ ಸಚಿವರು ನೋಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರು ಇಡೋ ವಿಚಾರಕ್ಕೆ ಮಾತನಾಡಿದ ಅವರು, ಇಲ್ಲಿಯ ಎಲ್ಲ ನಾಯಕರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ:  ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

  • ಫೆ.7ರಂದು ಸಿಎಂ ದೆಹಲಿ ಪ್ರವಾಸ

    ಫೆ.7ರಂದು ಸಿಎಂ ದೆಹಲಿ ಪ್ರವಾಸ

    ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಮಾಡಲಿದ್ದಾರೆ.

    ಮೂರು ದಿನಗಳ ದೆಹಲಿ ಪ್ರವಾಸಕ್ಕೆ ಯೋಜಿಸಿರುವ ಸಿಎಂ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಸಂಸದರ ಸಭೆ ಬಳಿಕ ವರಿಷ್ಠರನ್ನು ಸಿಎಂ ಭೇಟಿಯಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

    ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ಸಜ್ಜಾಗಿದ್ದಾರೆ. ಆದರೆ ಈವರೆಗೂ ಭೇಟಿಗೆ ಹೈಕಮಾಂಡ್‌ ಸಮಯ ನೀಡಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಈವರೆಗೂ ವರಿಷ್ಠರು ಸಮಯ ನಿಗದಿ ಮಾಡಿಲ್ಲ. ಗೊಂದಲದ ನಡುವೆಯೂ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ.

    ಪಂಚರಾಜ್ಯಗಳ ಚುನಾವಣೆ ಸಮೀಪಿಸಿದ್ದು, ಮೊದಲೆರಡು ಹಂತಗಳ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದಾರೆ. ವರಿಷ್ಠರು ಉತ್ತರ ಪ್ರದೇಶ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಭೇಟಿಗೆ ಇನ್ನೂ ಸಮಯ ನಿಗದಿ ಮಾಡಿಲ್ಲ. ಒಂದು ವೇಳೆ ಸಮಯ ಸಿಕ್ಕರೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವುದು ಅನುಮಾನ. ಚುನಾವಣೆ ಫಲಿತಾಂಶದ ಬಳಿಕ ಈ ಬಗ್ಗೆ ವಿಸ್ತೃತ ಚರ್ಚೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ

  • ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ : ಸಚಿವ ಶಿವರಾಮ್ ಹೆಬ್ಬಾರ್

    ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ : ಸಚಿವ ಶಿವರಾಮ್ ಹೆಬ್ಬಾರ್

    ಕಾರವಾರ: ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ, ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

    ಶಿರಸಿ ನಗರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸಕ್ಕರೆ ಖಾತೆ ಹಿಂಪಡೆದಿದ್ದಕ್ಕೆ ಬೇಸರವಿಲ್ಲ. ಖಾತೆ ನೀಡುವುದು, ಹಿಂಪಡೆಯುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರಿಗೆ ಪರಮಾಧಿಕಾರವಿದೆ ಎಂದರು.

    ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ. ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದವರಲ್ಲೂ ಬೇಸರವಿಲ್ಲ ಎಂದರು. ಮುಖ್ಯಮಂತ್ರಿ ಜೊತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಯತ್ನಾಳ್ ಹಾಗೂ ವಿಶ್ವನಾಥ ಅವರ ಹೇಳಿಕೆಯ ಕುರಿತು ಹೈಕಮಾಂಡ್ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.

  • ಸಿಎಂ ಬಿಎಸ್‌ವೈ ಪರ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್‌

    ಸಿಎಂ ಬಿಎಸ್‌ವೈ ಪರ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್‌

    ಚಿಕ್ಕಮಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಹೋರಾಟ, ಹುದ್ದೆ, ವಯಸ್ಸು, ನಡೆದು ಬಂದ ದಾರಿಗೆ ಬೆಲೆ ಕೊಡಬೇಕು ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ. ಪಿ.ಕುಮಾರಸ್ವಾಮಿ ಬಿಎಸ್‌ವೈ ಪರ ಬ್ಯಾಟ್ ಬೀಸಿದ್ದಾರೆ.

    ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸಾಮಾಜಿಕ ನ್ಯಾಯ ಕಡಿಮೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಸರಿಪಡಿಸಿದರೆ ಪಕ್ಷ ಸೇರಿದಂತೆ ಎಲ್ಲರಿಗೂ ಒಳ್ಳೆಯದು. ಸರಿಪಡಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

    ಬಹಳ ಜನ ಮಂತ್ರಿ ಆಗಿಲ್ಲ. ಅವಕಾಶ ಸಿಕ್ಕಿಲ್ಲ. ಆ ನೋವು ಎಲ್ಲರಿಗೂ ಇದೆ. ಹಾಗಂತ ಖಾಸಗಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾಯಕರ ಬಗ್ಗೆ ಮಾತನಾಡಿದರೆ ಪಕ್ಷದ ಬಗ್ಗೆ ಮಾತನಾಡಿದಂತೆ ಅದು ಕಾರ್ಯಕರ್ತರಿಂದ ಹಿಡಿದು ಶಾಸಕರು, ಸಂಸದರು, ಮಂತ್ರಿಗಳು ಎಲ್ಲರಿಗೂ ಡ್ಯಾಮೇಜ್ ಆಗುತ್ತೆ ಅದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

    ನಮ್ಮ ಪಕ್ಷದ ನಾಯಕರೇ ಸಿಡಿ ಬಗ್ಗೆ ಮಾತನಾಡುತ್ತಿದ್ದಾರೆ. ನಾಯಕರು ಸಿಡಿ ವಿಚಾರ ಮಾತನಾಡುವುದನ್ನ ಕೂಡಲೇ ನಿಲ್ಲಿಸಬೇಕು. ಖಾಸಗಿ ವಿಚಾರದಲ್ಲಿ ಹಿರಿಯ ನಾಯಕರು ಸಿಡಿ ಅದು-ಇದು ಅಂತ ಮಾತನಾಡುತ್ತಾರೆ ಕೂಡಲೇ ಅದನ್ನ ನಿಲ್ಲಿಸಬೇಕು. ಈ ರೀತಿ ಖಾಸಗಿ ವಿಚಾರದಲ್ಲಿ ರಾಜಕೀಯ ಮಾಡುವುದು ಯಾರಿಗೂ ಸರಿಯಲ್ಲ. ಪಕ್ಷದ ವರಿಷ್ಠರು ಅದಕ್ಕೆ ನಿರ್ಬಂಧ ಹೇರಬೇಕು ಎಂದಿದ್ದಾರೆ.

    ಶಾಸಕ ಕುಮಾರಸ್ವಾಮಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸರ್ಕಾರ ರಚನೆಯಾದಾಗಿನಿಂದ ಮೂರು ಬಾರಿಯೂ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮೊದಲ ಬಾರಿ ಸಚಿವರ ಪ್ರಮಾಣ ವಚನಕ್ಕೂ ಗೈರಾಗಿದ್ದರು. ಮೂರನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಮಧ್ಯೆಯೂ ಸಿಎಂ ಪರ ಬ್ಯಾಟ್ ಬೀಸಿರೋದು ಕುತೂಹಲ ಮೂಡಿಸಿದೆ.

  • ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

    – ವಿಜಯೇಂದ್ರನಿಂದ ಬಿಜೆಪಿಗೆ ಸನ್ ಸ್ಟ್ರೋಕ್
    – ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್ ಆಗುತ್ತೆ

    ರಾಯಚೂರು: ಈ ಹಿಂದೆ ಕಾಂಗ್ರೆಸ್, ಜನತಾದಳದ ರೀತಿಯಲ್ಲಿಯೇ ಬಿಜೆಪಿ ಸಹ ಸನ್ ಸ್ಟ್ರೋಕ್ ಮತ್ತು ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಾಳಾಗುತ್ತಿದೆ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

    ಇಂದು ರಾಯಚೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್, ಈ ಸನ್ ಸ್ಟ್ರೋಕ್‍ಗೆ ಹಿಂದೆ ಜನತಾ ಪರಿವಾರ ಮುಳುಗಿತು. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್ ನಲ್ಲಿ ಹಾಳಾಗಿ ಹೋಗಿದೆ. ಇದೀಗ ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಸಿಎಂ ಪುತ್ರ ವಿಜಯೆಂದ್ರನಿಂದ ಈಗ ಬಿಜೆಪಿಗೆ ಸನ್ ಸ್ಟ್ರೋಕ್ ಆವರಿಸಿದೆ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದಿರಾ ಯೋಚಿಸಿ ಎಂದು ಪ್ರಶ್ನಿಸಿದರು.

    ಭಷ್ಟನಿಗೆ ಮಂತ್ರಿ ಸ್ಥಾನ: ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಹಲವು ಒತ್ತಾಯಗಳು ಬರುವುದು ಸಹಜ. ಆದರೆ ಆದ್ರೆ ಭ್ರಷ್ಟರನ್ನು ಮಂತ್ರಿ ಮಾಡುವ ಒತ್ತಾಯ ಸಾಮಾನ್ಯವಾಗಿ ಬರುವುದಿಲ್ಲ. ಭ್ರಷ್ಟನನ್ನು, ದಲ್ಲಾಳಿಯನ್ನು ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಯೋಗೇಶ್ವರ್ ಭ್ರಷ್ಟಾಚಾರವನ್ನು ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾ ಸಿಟಿಗೆ ನೂರಾರು ಕೋಟಿ ದುಡ್ಡು ತೆಗೆದುಕೊಂಡಿದ್ದಾನೆ. ಭ್ರಷ್ಟನ ವಿರುದ್ಧ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಗೆ ರೆಫರ್ ಮಾಡಿದೆ. ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇಷ್ಟೆಲ್ಲಾ ಮಾಡಿರುವ ಆತನಿಗೆ ನಿನ್ನೆ ಬಾಯಿ ತಪ್ಪಿ ಸೈನಿಕ ಎಂದೆ ಹಾಗೆ ಕರೆದರೆ ಅದು ನಿಜವಾದ ಸೈನಿಕನಿಗೂ ಅವಮಾನ ಎಂದು ಯೋಗೇಶ್ವರ್ ವಿರುದ್ಧ ಗುಡುಗಿದರು.

    ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. ಬಿಎಸ್‍ವೈರವರಿಗೆ ಒಳ್ಳೆಯದಾಗಲಿ ಎಂದು 17 ಜನ ಕ್ಷಿಪ್ರ ಕ್ರಾಂತಿಗೆ ಬಂದಿದ್ದೇವು. ಆದರೆ ಸಂಪುಟದಿಂದ ದಲಿತ ನಾಗೇಶ್ ರನ್ನು ಕಿತ್ತು ಹಾಕಿದ್ದಿರಾ, ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ಹೊರಹಾಕಿದರು.

    ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್: ಈ ಬಾರಿ ಸಂಕ್ರಮಣಕ್ಕೆ ಹೋರಿ ಹಿಡಿದಾಗೆ ಹಿಡಿಯಲಾಗುತ್ತದೆ. ಸಿಡಿ ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ್ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಈಗಲೂ ಯಡಿಯೂರಪ್ಪರವರ ಬಗ್ಗೆ ಅಭಿಮಾನವಿದೆ. ಆದರೆ ಅವರು ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. ಹಾಗಾಗಿ ಇಂದು ನಾಲಿಗೆ ಇಲ್ಲದ ನಾಯಕರೂ ಆಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ, ನಾವು ಸದ್ಯ ಪರಿಸ್ಥಿತಿಯಲ್ಲಿ ಶಿಶುಗಳಂತಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಾರಾ ಮಹೇಶ್ ಕೊಚ್ಚೆಗುಂಡಿ: ಅಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇಂದು ಇದೆಲ್ಲಾ ಆಗುತ್ತಿರಲಿಲ್ಲ ಎಂದರು. ಇನ್ನೂ ಸಾರಾ ಮಹೇಶ್ ಕೊಚ್ಚೆಗುಂಡಿ. ಅವನ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನನ್ನು ನಮ್ಮವರು ನಡುನೀರಲ್ಲಿ ಬಿಟ್ಟಿಲ್ಲ, ಇಲ್ಲಿ ಯಾವ ನೀರೇ ಇಲ್ಲಾ. ನಾನೇನಾದರೂ ಅಸಂಬದ್ಧವಾಗಿ ಮಾತನಾಡಿದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ವಾಗ್ದಾಳಿ ತಿಳಿಸಿದರು.

     

     

  • ಅಸಮಾಧಾನ ಇದ್ದವರು ದೆಹಲಿಯ ವರಿಷ್ಠರ ಜೊತೆ ಮಾತಾಡಲಿ: ಸಿಎಂ ಬಿಎಸ್‍ವೈ

    ಅಸಮಾಧಾನ ಇದ್ದವರು ದೆಹಲಿಯ ವರಿಷ್ಠರ ಜೊತೆ ಮಾತಾಡಲಿ: ಸಿಎಂ ಬಿಎಸ್‍ವೈ

    – ಹಗುರುವಾಗಿ ಮಾತಾಡಬೇಡಿ ಸಿಎಂ ವಾರ್ನಿಂಗ್

    ಬೆಂಗಳೂರು: ಅಸಮಾಧಾನ ಇದ್ದವರು ಬೇಕಾದ್ರೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡೋದಕ್ಕೆ ನನ್ನ ಅಭ್ಯಂತರವಿಲ್ಲ. ಸಚಿವ ಸ್ಥಾನ ವಂಚಿತರು ಹಗುರವಾಗಿ ಮಾತನಾಡೋದು ಬೇಡ ಎಂದು ಅತೃಪ್ತರಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

    ಇಂದು ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಯಾವುದೇ ಶಾಸಕರು ವಿರೋಧ ಇದ್ರೆ ದೆಹಲಿಗೆ ಹೋಗಲಿ. ವರಿಷ್ಠರಿಗೆ ದೆಹಲಿಗೆ ಹೋಗಿ ದೂರು ಕೊಡಲಿ. ಇಲ್ಲಿ ಮಾತಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಶಾಸಕರು ಮಾಡೋದು ಬೇಡ. ವರಿಷ್ಠರು ಸರಿ ತಪ್ಪು ಯಾವುದು ಅಂತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.

    ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಳ್ಳುವದರ ಜೊತೆ ಸಿಡಿ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ, ಅರವಿಂದ್ ಬೆಲ್ಲದ್, ರೇಣುಕಾಚಾರ್ಯ, ಸಿದ್ದು ಸವದಿ, ಎಸ್.ಎ.ರಾಮದಾಸ್ ಸೇರಿದಂತೆ ಹಲವರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಈ ನಡುವೆ ಎಂಎಲ್‍ಸಿ ಹೆಚ್. ವಿಶ್ವನಾಥ್, ಸಿಎಂ ಕೊಟ್ಟ ಮಾತು ತಪ್ಪುವ ಮೂಲಕ ವಚನಭ್ರಷ್ಟರಾಗಿದ್ದಾರೆ. 17 ಜನರ ಭಿಕ್ಷೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರೋದನ್ನ ಮರೆತ ಹಾಗೆ ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.