Tag: ಸಂಪುಟ ರಚನೆ

  • ರಾಜೀನಾಮೆ ಹೇಳಿಕೆಗೆ ನಾನು ಬದ್ಧ- ರಮೇಶ್ ಜಾರಕಿಹೊಳಿ

    ರಾಜೀನಾಮೆ ಹೇಳಿಕೆಗೆ ನಾನು ಬದ್ಧ- ರಮೇಶ್ ಜಾರಕಿಹೊಳಿ

    ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುತ್ತಾರೆ ಎಂದು ಆಪ್ತರೊಬ್ಬರು ತಿಳಿಸಿದ್ದರು. ಆದರೆ ಈ ವಿಚಾರದ ಬಗ್ಗೆ ರಮೇಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದೇನೆ. ನಿನ್ನೆಯೂ ರಾಜೀನಾಮೆ ಹೇಳಿಕೆ ಕೊಟ್ಟಿದ್ದೆ. ಆದ್ದರಿಂದ ನಾನು ಹೇಳಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ವೇಣುಗೋಪಾಲ್ ಭೇಟಿ ಮಾಡಿಲ್ಲ. ನನಗೆ ನಾಲ್ಕು ದಿನ ಸಮಯ ಬೇಕು. ಬಳಿಕ ರಾಜೀನಾಮೆ ಕೊಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿದ್ದಾರೆ. ವಿಲನ್ ನ ಹೀರೋ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಲಾಗುತ್ತಿದೆ. ನಾನು ನಿಮ್ಮ ಜೊತೆ ಬಹಳಷ್ಟು ಮಾತನಾಡಬೇಕು. ಸಮಯ ಬೇಕು ಎಂದು ಮತ್ತೆ ಮಾಧ್ಯಮಗಳ ಮೇಲೆ ರಮೇಶ್ ಕಿಡಿಕಾರಿದ್ದಾರೆ.

    ನನ್ನ ಜೊತೆ ಎಷ್ಟು ಶಾಸಕರಿದ್ದಾರೆ ಅಂತ ನಿಮಗೆ ಯಾಕೆ ಹೇಳಬೇಕು? ಮುಂದಿನ ದಿನಗಳಲ್ಲಿ ಎಲ್ಲ ಬಹಿರಂಗಪಡಿಸುತ್ತೇನೆ. ಹೈಕಮಾಂಡ್ ನೂ ಭೇಟಿ ಮಾಡಲ್ಲ, ಯಾರನ್ನೂ ಭೇಟಿ ಮಾಡಲ್ಲ ಎಂದ್ರು. ಇನ್ನೂ ಬಿಜೆಪಿಗೆ ಹೋಗುವ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ನೀವೇ ಹೋಗಿ ಎಂದು ಮಾಧ್ಯಮದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಎರಡು ದಿನಗಳ ಹಿಂದೆ ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದರು.

    ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿದ್ದ ಆಡಿಯೋ ಧ್ವನಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಆಡಿಯೋದಲ್ಲಿ ರಾಜೀನಾಮೆ ನಿರ್ಧಾರ ಮಾಡಿರುವುದು ನಿಜ, ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಈ ವಾರ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್‍ನಲ್ಲಿ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್!

    ಕಾಂಗ್ರೆಸ್‍ನಲ್ಲಿ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದೆ. ಮೊದಲ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ತಪ್ಪಿದ ನಾಯಕರ ಅಸಮಾಧಾನವು ಮೇಲ್ನೋಟಕ್ಕೆ ಕಡಿಮೆಯಾದಂತೆ ಕಾಣುತ್ತಿದೆ. ಆದರೆ ಕಾಂಗ್ರೆಸ್ಸಿನಲ್ಲಿ ಮಾತ್ರ ಹಾಲಿ ವರ್ಸಸ್ ಮಾಜಿ ಸಚಿವರ ನಡುವೆ ಫುಲ್ ಫೈಟ್ ಜೋರಾಗಿದೆ.

    ಕಾಂಗ್ರೆಸ್ ಮುಸ್ಲಿಂ ನಾಯಕರ ನಡುವೆ ಶೀತಲ ಸಮರ ಮುಂದುವರಿದಿದ್ದು, ಯಾವುದೇ ಕಾರಣಕ್ಕೂ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬಾರದೆಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

     

    ಶುಕ್ರವಾರ ಆಹಾರ ಇಲಾಖೆಯ ಸಮಾವೇಶ ನೆಪದಲ್ಲಿ ದೆಹಲಿ ತೆರಳಿ ಜಮೀರ್ ಅಹ್ಮದ್ ಹೈಕಮಾಂಡ್ ಮುಸ್ಲಿಂ ನಾಯಕರೊಂದಿಗೆ ಚರ್ಚಿಸಿ, ರೋಷನ್ ಬೇಗ್ ಸಂಪುಟ ಸೇರದಂತೆ ತಂತ್ರ ರಚಿಸಿದ್ದಾರೆ. ಒಂದು ವೇಳೆ ಎರಡನೇ ಬಾರಿಯ ಸಂಪುಟ ರಚನೆಯಲ್ಲಿ ಮತ್ತೋರ್ವ ಮುಸ್ಲಿಂ ನಾಯಕರಿಗೆ ಸ್ಥಾನ ನೀಡುವುದಿದ್ದರೆ ಬೀದರ್ ಶಾಸಕ ರಹೀಂ ಖಾನ್ ಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರಂತೆ. ಹಾಗಾದ್ರೆ ಸಂಪುಟ ವಿಸ್ತರಣೆಯಲ್ಲಿ ರೋಷನ್ ಬೇಗ್ ಸಚಿವ ಸ್ಥಾನ ಸಿಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಯಾಕೆ ಈ ರಣತಂತ್ರ: ಹಜ್ ಖಾತೆ ಅನ್ನುವುದು ಯಾತ್ರಿಕರನ್ನು ಕಳುಹಿಸಿ ಕೊಡುವುದು. ಕೆಲವು ಮುಸ್ಲಿಂ ಸಮುದಾಯದ ದುರ್ಬಲ ವರ್ಗದವರಿಗೆ ನೆರವಾಗುತ್ತದೆ. ಈ ಖಾತೆಯ ಮೂಲಕ ಜಮೀರ್ ಸಮುದಾಯ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಜಮೀರ್ ಬಳಿ ಈ ಖಾತೆ ಇರುವುದು ಬೇಡ ಎಂದು ರೋಷನ್ ಬೇಗ್ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಮತ್ತು ಸಚಿವ ಯು.ಟಿ.ಖಾದರ್ ಜೊತೆ ರೋಷನ್ ಬೇಗ್ ಮಾತನಾಡಿ ಹಜ್ ಖಾತೆಯನ್ನು ಜಮೀರ್ ಅವರಿಂದ ಹಿಂಪಡೆದು ಬೇರೆ ಯಾರಿಗಾದ್ರೂ ನೀಡಿ ನಮ್ಮ ಅಭ್ಯಂತರವಿಲ್ಲ ಅಂತಾ ಹೇಳಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

  • ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಬೆಂಗಳೂರು: ಸಂಪುಟ ರಚನೆಯ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ ಅಂತಾ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭರವಸೆಯನ್ನು ನೀಡಿದ್ದಾರೆ.

    ಸಚಿವ ಸ್ಥಾನ ಸಿಗದ ನಾಯಕರನ್ನು ಸಮಾಧಾನಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನಿರಾಸಕ್ತಿ ತೋರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ವಿಚಾರ ನನಗೆ ಗೊತ್ತಿಲ್ಲ. ಸದ್ಯ ಅವರು ಗೆಲ್ಲಿಸಿರುವ ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾರೆ. ಹೈಕಮಾಂಡ್ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ನೀಡಿದ್ದು, ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಬೇರೆ ನಾಯಕರು ಏನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಅಂತಾ ತಿಳಿಸಿದರು.

    ಎಲ್ಲ ನಾಯಕರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ. ಮಾಜಿ ಸಿಎಂ ಧರಂಸಿಂಗ್ ಅವರ ಕಾಲದಲ್ಲಿ ನನ್ನನ್ನು ಆರು ತಿಂಗಳು ಸುಮ್ಮನೆ ಕೂರಿಸಿದ್ದರು. ಈ ಹಿಂದೆ ಪರಮೇಶ್ವರ್ ಸಹ ಕೆಲವು ದಿನ ಸುಮ್ಮನೆ ಕುಳಿತಿದ್ದರು. ಅಂದು ನಾವು ತಾಳ್ಮೆಯಿಂದ ಇರಲಿಲ್ವಾ..? ಹಾಗೆ ಇಂದು ಸಹ ಸಚಿವ ಸ್ಥಾನ ವಂಚಿತ ನಾಯಕರು ತಾಳ್ಮೆಯಿಂದ ಇರಬೇಕು ಅಂತಾ ಸಲಹೆ ನೀಡಿದ್ರು.

  • ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ

    ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ

    ಪಬ್ಲಿಕ್ ಟಿವಿ
    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಖಾರದ ಸಂಪುಟ ರಚನೆ ಫೈನಲ್ ಆಗುತ್ತಿದಂತೆ ಜೆಡಿಎಸ್ ಪಕ್ಷದ ಶಾಸಕರಲ್ಲಿ ಅಸಮಾಧಾನದ ಸ್ಫೋಟಗೊಂಡಿದ್ದು, ಅಧಿಕಾರ ಇಲ್ಲದಿದ್ದಾಗ ಬಾಚಿ ತಬ್ಬಿಕೊಳ್ಳುವ ಅಪ್ಪ-ಮಕ್ಕಳು, ಅಧಿಕಾರ ಬಂದಾಗ ಕನಿಷ್ಠ ಕಣ್ಣೆತ್ತು ನೋಡ್ತಾಯಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

    ಜೆಡಿಎಸ್ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಹಾಗೂ ರೆಡ್ಡಿ ಸಮುದಾಯ ಏಕೈಕ ಶಾಸಕರಾಗಿದ್ದ ಜೆ ಕೆ ಕೃಷ್ಣಾರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಇಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೇವಲ ಕೆಲವೇ ಗಂಟೆಗಳು ಬಾಕಿ ಉಳಿದಿದ್ದರೂ ಇದುವರೆಗೂ ಜೆಡಿಎಸ್ ವರಿಷ್ಠರು ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಗೆ ಒಂದು ಹಾಗೂ ಸಮುದಾಯ ಒಬ್ಬ ಶಾಸಕರಂತೆ ಸಚಿವ ಸ್ಥಾನದ ಭರವಸೆ ನೀಡಿದ್ದ ವರಿಷ್ಠರು ಸಾಮಾಜಿಕ ನ್ಯಾಯವನ್ನು ಮರೆತ್ತಿದ್ದಾರೆ. ಹಣವಂತರಿಗೆ ಮಣೆ ಹಾಕಿರುವ ವರಿಷ್ಠರು, ರೆಡ್ಡಿ ಸಮುದಾಯವನ್ನ ಕಡೆಗಣಿಸಿದ್ದಾರೆ, ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕನಾಗಿದ್ದು, ಸರಿ ಸುಮಾರು ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚು ಜೆಡಿಎಸ್ ಮತ ಹಾಕಿದ ಮತದಾರರಿಗೆ ಅನ್ಯಾಯ ಮಾಡಿದ್ದಾರೆ. ಪಕ್ಷ ಸಂಘಟನೆಗೆ ಅವಕಾಶವಿಲ್ಲದಂತೆ ಮಾಡಿದ್ದಾರೆ. ಎಲ್ಲರೂ ಅಪ್ಪ-ಮಕ್ಕಳ ಪಕ್ಷ ಅಂತಿದ್ದರು. ಆದರೆ ಅದು ಈಗ ಅರಿವಿಗೆ ಬರುತ್ತಿದೆ. ಮುಂದೆ ಕ್ಷೇತ್ರದಲ್ಲಿ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೆನೆ ಎಂದು ಪಬ್ಲಿಕ್ ಟಿವಿ ಬಳಿ ದೂರವಾಣಿ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

    ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

    ಬೆಂಗಳೂರು: ನಾನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಸಚಿವ ಸ್ಥಾನ ಕೋಳೋದು ಸರಿಯಲ್ಲ. ಒಂದು ವೇಳೆ ನಾನು ಜಯ ಸಾಧಿಸಿದ್ದರೆ ಖಂಡಿತಾ ಸಚಿವ ಸ್ಥಾನದ ಆಕಾಂಕ್ಷಿಯಾಗಿರುತ್ತಿದ್ದೆ ಎಂದು ಮಾಜಿ ಸಚಿವ ಹೆಚ್.ವೈ.ಮೇಟಿ ಹೇಳಿದ್ದಾರೆ.

    ಬಬಲೇಶ್ವರ ಕ್ಷೇತ್ರದಲ್ಲಿ ಜಯ ಸಾಧಿಸಿರುವ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಅಂತಾ ಎಂ.ಬಿ.ಪಾಟೀಲರ ಪರವಾಗಿ ಬ್ಯಾಟ್ ಬೀಸಿದ್ರು. ಇದನ್ನೂ ಓದಿ: ಕೈ ಶಾಸಕ ಎಂ.ಬಿ ಪಾಟೀಲ್ ರಾಜೀನಾಮೆ?

    ಇತ್ತ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಈಗಾಗಲೇ ಎಂ.ಬಿ.ಪಾಟೀಲ್ ಸಾರ್ವಜನಿಕವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಶಾಸಕರ ನಿವಾಸ ಮುಂದೆ ಎಂ.ಬಿ ಪಾಟೀಲ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದಾರೆ. ಮನೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಪಾಟೀಲ್ ಅಭಿಮಾನಿಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

    ರಾಜೀನಾಮೆ ಸಂಬಂಧ ಎಂಬಿ ಪಾಟೀಲ್ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷಕ್ಕಾಗಿ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದಾನೆ. ಈಗ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ತಮ್ಮ ಆಪ್ತರ ಜೊತೆ ಬೇಸರವನ್ನು ಪಾಟೀಲ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್

     ಇದನ್ನೂ ಓದಿ: ನನಗೆ ಸ್ಥಾನ ಕೊಡದಿರುವುದು ಕಾಂಗ್ರೆಸ್ಸಿಗೆ ಅತೀ ದೊಡ್ಡ ನಷ್ಟವಾಗಲಿದೆ: ಬಿ.ಸಿ. ಪಾಟೀಲ್ ಅಸಮಾಧಾನ

  • ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

    ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

    ತುಮಕೂರು: ಸಚಿವ ಸ್ಥಾನ ಸಿಗದೇ ಹೋದ್ರೆ ಬೇಜಾರು ಆಗೇ ಆಗುತ್ತದೆ. ನಾನು ಮನುಷ್ಯ ತಾನೇ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಎರಡು ವಾರ ಕಳೆದ ನಂತರ ಸಂಪುಟ ರಚನೆ ಇಂದು ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತುರ್ತು ಕರೆ ಮಾಡಿ 10 ಗಂಟೆಯೊಳಗೆ ಬೆಂಗಳೂರಿಗೆ ಆಗಮಿಸುವಂತೆ ಶಾಸಕ ಶ್ರೀನಿವಾಸ್ ಅವ್ರಿಗೆ ಸೂಚನೆ ನೀಡಿದ್ದಾರೆ.

    ಬೆಂಗಳೂರಿನತ್ತ ಪ್ರಯಾಣಿಸುವ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಕಳೆದ ನಾಲ್ಕು ಬಾರಿ ಗೆದ್ದು ಕೆಲಸ ಮಾಡಿದ್ದೇನೆ. ಸಚಿವ ಸ್ಥಾನಕ್ಕಾಗಿ ಕೊನೆ ಕ್ಷಣದವರೆಗೂ ಹೋರಾಟ ಮಾಡುತ್ತೇನೆ. ಕುಮಾರಸ್ವಾಮಿ ಅವರು ಸಹ ನನ್ನನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದಾರೆ. ಆ ಮಾತನ್ನ ಸಿಎಂ ಉಳಿಸಿಕೊಳ್ತಾರೆ ಎಂದು ಭಾವಿಸುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಇಂದು ಮಧ್ಯಾಹ್ನ 02-12ಕ್ಕೆ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ. ಜೆಡಿಎಸ್‍ನಿಂದ 8 ಜನ, ಕಾಂಗ್ರೆಸ್‍ನಿಂದ 15 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಎರಡೂ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ದಟ್ಟವಾಗಿರುವ ಕಾರಣ, ಪರಿಸ್ಥಿತಿ ಅವಲೋಕಿಸಿ 2ನೇ ಹಂತದ ವಿಸ್ತರಣೆಗೆ ಮೈತ್ರಿಕೂಟ ಸರ್ಕಾರ ನಿರ್ಧರಿಸಿದೆ.

    ಜೆಡಿಎಸ್‍ಗೆ ಹೋಲಿಸಿದರೆ, ಕಾಂಗ್ರೆಸ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆದಿವೆ. ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಅಂತಿಮ ಪಟ್ಟಿ ಹೊರಬೀಳಲಿದೆ. ಇನ್ನು, ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ 1500 ಜನರಿಗೆ ರಾಜಭವನಕ್ಕೆ ಪ್ರವೇಶ ಪಡೆಯಲು ಪಾಸ್ ವಿತರಿಸುವಂತೆ ಸರ್ಕಾರದಿಂದ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ. ಹೀಗಾಗಿ 300ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಖಾತೆ ಹಂಚಿಕೆ ಬಗ್ಗೆ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೂತು ಅದನ್ನೆಲ್ಲಾ ತೀರ್ಮಾನ ಮಾಡುತ್ತಾರೆ. ಅದಕ್ಕೆ ಶಾಸಕರಾದ ನಾವೆಲ್ಲ ಒಟ್ಟಾಗಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಸಂಪುಟ ರಚನೆಯನ್ನು ಸಿಎಂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅವರು ಯಾವ ಖಾತೆ ಕೊಟ್ರೂ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಜೆಡಿಎಸ್ ನಲ್ಲಿ ಅಂತಹ ಯಾವುದೇ ಅಸಮಾಧಾನವಿಲ್ಲ. ಹೀಗಾಗಿ ಎಲ್ಲರೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಕುಮಾರಣ್ಣ ಏನ್ ಹೇಳ್ತಾರೋ ಅದನ್ನು ಕೇಳಲು ರೆಡಿಯಾಗಿದ್ದೇವೆ ಅಂತಾ ಜೆಡಿಎಸ್ ಹಿರಿಯ ಮುಖಂಡ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

  • ಇನ್ನು ಸ್ವಲ್ಪ ಹೊತ್ತು ಕಾಯಿರಿ, ಎಲ್ಲವೂ ಗೊತ್ತಾಗುತ್ತೆ: ಸಿಎಂ

    ಇನ್ನು ಸ್ವಲ್ಪ ಹೊತ್ತು ಕಾಯಿರಿ, ಎಲ್ಲವೂ ಗೊತ್ತಾಗುತ್ತೆ: ಸಿಎಂ

    ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿ ಎರಡು ವಾರ ಕಳೆದಿದೆ. ಆದ್ರೆ ಸಂಪುಟ ರಚನೆಯ ಬಿಕ್ಕಟ್ಟು ಮಾತ್ರ ಕಗ್ಗಂಟಾಗಿದೆ. ಇಂದು ಮಧ್ಯಾಹ್ನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ದೇವೇಗೌಡರು ಪುತ್ರ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದಾರೆ.

    ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿಎಂ, ಇನ್ನು ಸ್ವಲ್ಪ ಹೊತ್ತು ಕಾಯಿರಿ, ಎಲ್ಲವೂ ಗೊತ್ತಾಗುತ್ತೆ, ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಪಟ್ಟಿ ಇನ್ನು ದೆಹಲಿಯಿಂದ ಬರಬೇಕಿದೆ. ಬಂದ ತಕ್ಷಣ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸುತ್ತೇವೆ ಅಂದ್ರು.

    ಜೆಡಿಎಸ್ ಪಟ್ಟಿ ಕೂಡ ಬಹುತೇಕ ಅಂತಿಮವಾಗಿದೆ. ಇಂದು ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬುದರ ಸಂಭಾವ್ಯ ಪಟ್ಟಿ ಹೀಗಿದೆ.
    ಒಕ್ಕಲಿಗ ಕೋಟಾ – 4 ಸಚಿವ ಸ್ಥಾನ
    * ಎಚ್.ಡಿ. ರೇವಣ್ಣ, ಹೊಳೆನರಸೀಪುರ
    * ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ
    * ಸಿ.ಎಸ್. ಪುಟ್ಟರಾಜು, ಮೇಲುಕೋಟೆ
    * ಸತ್ಯನಾರಾಯಣ, ಶಿರಾ

    ಕುರುಬ ಕೋಟಾ – 1 ಸ್ಥಾನ
    ಬಂಡೆಪ್ಪ ಕಾಶೆಂಪುರ್, ಬೀದರ್ ದಕ್ಷಿಣ

    ಲಿಂಗಾಯತರ ಕೋಟಾ – 1 ಸ್ಥಾನ
    * ವೆಂಕಟರಾವ್ ನಾಡಗೌಡ- ಸಿಂಧನೂರು

    ಎಸ್‍ಸಿ ಕೋಟಾ – 1 ಸ್ಥಾನ
    ಎನ್. ಮಹೇಶ್- ಕೊಳ್ಳೇಗಾಲ

    ಇಂದು ಮಧ್ಯಾಹ್ನ 02-12ಕ್ಕೆ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಬಾಯ್ ವಾಲಾ ಪ್ರಮಾಣವಚನ ಬೋದಿಸಲಿದ್ದಾರೆ. ಜೆಡಿಎಸ್‍ನಿಂದ 8 ಜನ, ಕಾಂಗ್ರೆಸ್‍ನಿಂದ 14-17 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.

  • ಬುಧವಾರ ಶಾಸಕರ ಪ್ರಮಾಣ ವಚನ – ಸಂಪುಟಕ್ಕೆ ಯಾರು ಇನ್?

    ಬುಧವಾರ ಶಾಸಕರ ಪ್ರಮಾಣ ವಚನ – ಸಂಪುಟಕ್ಕೆ ಯಾರು ಇನ್?

    ಬೆಂಗಳೂರು: ಸರ್ಕಾರ ರಚನೆಯಾಗಿ ಎರಡು ವಾರವಾದರೂ ಇನ್ನೂ ಗಜ ಪ್ರಸವದಂತಾಗಿರೋ ರಾಜ್ಯ ಸಚಿವ ಸಂಪುಟ ಬುಧವಾರ ರಚನೆಯಾಗಲಿದೆ. ರಾಜಭವನದ ಗಾಜಿನ ಮನೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ.

    ಕಾಂಗ್ರೆಸ್‍ನಿಂದ ಕನಿಷ್ಠ 14 ಶಾಸಕರು ಹಾಗೂ ಜೆಡಿಎಸ್‍ನಿಂದ 8 ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಎರಡೂ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ದಟ್ಟವಾಗಿರುವ ಕಾರಣ, ಪರಿಸ್ಥಿತಿ ಅವಲೋಕಿಸಿ 2ನೇ ಹಂತದ ವಿಸ್ತರಣೆಗೆ ಮೈತ್ರಿಕೂಟ ಸರ್ಕಾರ ನಿರ್ಧರಿಸಿದೆ. ಜೆಡಿಎಸ್‍ಗೆ ಹೋಲಿಸಿದರೆ, ಕಾಂಗ್ರೆಸ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆದಿವೆ. ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಅಂತಿಮ ಪಟ್ಟಿ ಹೊರಬೀಳಲಿದೆ. ಕಾಂಗ್ರೆಸ್ ಜೊತೆಗೆ ಜೆಡಿಎಸ್ ಪಟ್ಟಿ ಕೂಡ ಬಹುತೇಕ ಅಂತಿಮವಾಗಿದೆ.

    ಕಾಂಗ್ರೆಸ್ ಸಂಭಾವ್ಯ ಪಟ್ಟಿ :
    ಒಕ್ಕಲಿಗ ಕೋಟಾ – 3 ಸ್ಥಾನ
    * ಡಿ.ಕೆ. ಶಿವಕುಮಾರ್, ಕನಕಪುರ
    * ಎಂ. ಕೃಷ್ಣಪ್ಪ, ವಿಜಯನಗರ
    * ಕೃಷ್ಣ ಬೈರೇಗೌಡ, ಬ್ಯಾಟರಾಯನಪುರ

    ಲಿಂಗಾಯತರ ಕೋಟಾ – 3 ಸ್ಥಾನ
    * ಎಂ.ಬಿ. ಪಾಟೀಲ್, ಬಬಲೇಶ್ವರ
    * ರಾಜಶೇಖರ ಪಾಟೀಲ್, ಹುಮ್ನಾಬಾದ್
    * ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ

    ಎಸ್‍ಸಿ ಕೋಟಾ – 2 ಸ್ಥಾನ
    * ಪ್ರಿಯಾಂಕ ಖರ್ಗೆ, ಚಿತ್ತಾಪುರ
    * ರೂಪಾ ಶಶಿಧರ್, ಕೆಜಿಎಫ್

    ಎಸ್‍ಟಿ ಕೋಟಾ – 2 ಸ್ಥಾನ
    * ಸತೀಶ್ ಜಾರಕಿಹೊಳಿ, ಯಮಕನಮರಡಿ
    * ಟಿ. ರಘುಮೂರ್ತಿ, ಚಳ್ಳಕೆರೆ

    ಹಿಂದುಳಿದ ವರ್ಗ ಕೋಟಾ – 2 ಸ್ಥಾನ
    * ಹೆಚ್.ಎಂ. ರೇವಣ್ಣ, ಮೇಲ್ಮನೆ ಸದಸ್ಯ
    * ಪ್ರತಾಪ್‍ಚಂದ್ರ ಶೆಟ್ಟಿ, ಮೇಲ್ಮನೆ ಸದಸ್ಯ

    ಅಲ್ಪಸಂಖ್ಯಾತರ ಕೋಟಾ – 2 ಸ್ಥಾನ
    * ರೋಷನ್ ಬೇಗ್, ಶಿವಾಜಿನಗರ
    * ಕೆ.ಜೆ. ಜಾರ್ಜ್, ಸರ್ವಜ್ಞನಗರ

    ಜೆಡಿಎಸ್ ಸಂಭಾವ್ಯ ಪಟ್ಟಿ
    ಒಕ್ಕಲಿಗ ಕೋಟಾ – 4 ಸಚಿವ ಸ್ಥಾನ
    * ಎಚ್.ಡಿ. ರೇವಣ್ಣ, ಹೊಳೆನರಸೀಪುರ
    * ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ
    * ಸಿ.ಎಸ್. ಪುಟ್ಟರಾಜು, ಮೇಲುಕೋಟೆ
    * ಸತ್ಯನಾರಾಯಣ, ಶಿರಾ

    ಕುರುಬ ಕೋಟಾ – 2 ಸ್ಥಾನ
    ಎಚ್. ವಿಶ್ವನಾಥ್, ಹುಣಸೂರು
    ಬಂಡೆಪ್ಪ ಕಾಶೆಂಪುರ್, ಬೀದರ್ ದಕ್ಷಿಣ

    ಲಿಂಗಾಯತರ ಕೋಟಾ – 1 ಸ್ಥಾನ
    * ವೆಂಕಟರಾವ್ ನಾಡಗೌಡ – ಸಿಂಧನೂರು

    ಎಸ್‍ಸಿ ಕೋಟಾ – 1 ಸ್ಥಾನ
    ಎನ್. ಮಹೇಶ್- ಕೊಳ್ಳೇಗಾಲ

  • ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಇರ್ತೀನಿ – ಡಿಕೆಶಿ

    ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಇರ್ತೀನಿ – ಡಿಕೆಶಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‍ನ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಆದರೆ ಇಂಧನ ಖಾತೆ ಕೈ ತಪ್ಪುತ್ತಿದಂತೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಈ ಕುರಿತು ಪಕ್ಷದ ಸಭೆಯಲ್ಲಿ ಹಿರಿಯ ನಾಯಕರೊಂದಿಗೆ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಪಕ್ಷಕ್ಕಾಗಿ ದುಡಿದ ತಮಗೇ ಪ್ರಮುಖ ಸಚಿವ ಸ್ಥಾನ ನೀಡದ್ದಿದ್ದರೆ ಸಾರ್ವಜನಿಕ ವಲಯದಲ್ಲಿ ನನ್ನ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿದೆ.

    ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ನನಗೆ ಪ್ರಮುಖ ಖಾತೆ ಸಿಗದಿದ್ದರೆ ಸಹಜವಾಗಿ ಸಾರ್ವಜನಿಕ ವಲಯಗಳಲ್ಲಿ ನನ್ನ ಶಕ್ತಿಯೂ ಕಡಿಮೆಯಾಗುತ್ತದೆ. ಅತ್ತ ಕೇಂದ್ರ ಸರ್ಕಾರವೂ ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದೆ. ಇತ್ತ ಮೈತ್ರಿಕೂಟ ಸರ್ಕಾರದಲ್ಲಿ ಅಶಕ್ತನನ್ನಾಗಿ ಮಾಡಿ ಕೂರಿಸಲು ಪಕ್ಷವೇ ಸಿದ್ಧವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ, ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ನೀಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿಕೆಶಿ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

    ಇತ್ತ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿದ್ದು, ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರಲಿ. ಅದೇ ರೀತಿ ನಿಮಗೆ ಬೇಕಾದ ಖಾತೆಗಳನ್ನು ನೀವು ಇಟ್ಟುಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ ಖಾತೆಗಾಗಿ ಯಾರೂ ತಕರಾರು ಮಾಡಬೇಡಿ ಎಂದು ಕೈ ಪಾಳಯದ ವರಿಷ್ಠರು ರಾಜ್ಯದ ಪ್ರಮುಖ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಸರ್ಕಾರದಲ್ಲಿ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಪಕ್ಷದ ವರಿಷ್ಠರು ನಿರಾಸೆ ಮೂಡಿಸಿದ್ದರು. ಪಕ್ಷದ ಧೋರಣೆಯಿಂದ ಸದ್ಯ ಡಿಕೆ ಶಿವಕುಮಾರ್ ಅವರಿಗೆ ಕಸಿವಿಸಿಯಾಗಿದೆ. ಸದ್ಯ ಜೆಡಿಎಸ್ ನಾಯಕರದ ಶಾಸಕ ರೇವಣ್ಣ ಅವರು ಸಹ ಇಂಧನ ಖಾತೆಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಶಿವಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಪಕ್ಷದ ಸಭೆಯಲ್ಲಿ ಭಾವಹಿಸುವ ಮುನ್ನ ಮತನಾಡಿದ ಅವರು, ಉತ್ತರ ಕರ್ನಾಟಕ ಹಿರಿಯ ನಾಯಕರಾದ ಎಸ್‍ಆರ್ ಪಾಟೀಲ್ ರಾಜೀನಾಮೆ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಆ ಭಾಗದಿಂದ ನಮಗೇ ಹೆಚ್ಚಿನ ಸ್ಥಾನ ಲಭಿಸಿಲ್ಲ. ಪಕ್ಷ ಹಿರಿಯ ನಾಯಕರಾಗಿ ಅವರಿಗೆ ನೋವಾಗಿರುತ್ತದೆ. ಸದ್ಯ ಸಂಪುಟ ಖಾತೆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಹೇಳಿದರು.

  • ಸಂಪುಟ ರಚನೆ ಗೊಂದಲಕ್ಕೆ ಎರಡು ದಿನದಲ್ಲಿ ತೆರೆ: ಮಲ್ಲಿಕಾರ್ಜುನ ಖರ್ಗೆ

    ಸಂಪುಟ ರಚನೆ ಗೊಂದಲಕ್ಕೆ ಎರಡು ದಿನದಲ್ಲಿ ತೆರೆ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಸಂಪುಟ ರಚನೆಯ ಕಗ್ಗಂಟು ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಸಮಿಶ್ರ ಸರ್ಕಾರ ರಚನೆ ವೇಳೆ ಇಂತಹ ಗೊಂದಲ ಉಂಟಾಗುವುದು ಸಹಜ. ಆದರೆ ಈ ಎಲ್ಲಾ ಗೊಂದಲಗಳು ಎರಡು ದಿನದಲ್ಲಿ ಬಗೆ ಹರಿಯುತ್ತದೆ. ಖಾತೆ ಹಂಚಿಕೆ ಬಗ್ಗೆ ಎಲ್ಲರು ಒಟ್ಟಾಗಿ ಚರ್ಚೆ ಮಾಡುತ್ತಾರೆ. ಎಲ್ಲರ ಗುರಿ ಸರ್ಕಾರ ಉಳಿಸಿಕೊಳ್ಳುವುದು ಎಂದರು.

    ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಖಾತೆಗಾಗಿ ನಾವು ಸರ್ಕಾರ ಮಾಡಿಲ್ಲ. ಸಂವಿಧಾನದ ಮೌಲ್ಯ ಸಂರಕ್ಷಿಸಲು ಸರ್ಕಾರ ಮಾಡಿದ್ದೇವೆ ಹೊರತು ಖಾತೆಗಾಗಿ ಅಲ್ಲ. ಹಂಚಿಕೆ ವೇಳೆ ಒಂದು ಖಾತೆ ಹೆಚ್ಚು ಕಡಿಮೆ ಹಂಚಿಕೆ ಆಗಬಹುದು. ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಪಷ್ಟನೆ ನೀಡಿದರು.

    ಸಮ್ಮಿಶ್ರ ಸರ್ಕಾರ ರಚನೆ ಬಿಜೆಪಿ ಹಾಗೂ ಆರ್ ಎಸ್‍ಎಸ್ ದೂರ ಇಡಲು ಒಟ್ಟಾಗಿ ಸರ್ಕಾರ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಣಿಸಿದ್ದಾರೆ. ಸಂವಿಧಾನ ಬದಲಾಯಿಸುವ, ಸಮಾಜದ ಸಾಮರಸ್ಯ ಹಾಳು ಮಾಡುವ ಜನರಿಂದ ರಾಜ್ಯವನ್ನು ರಕ್ಷಿಸಬೇಕಿತ್ತು. ದಲಿತ ಅಲ್ಪಸಂಖ್ಯಾತರ ರೈತರ ಜನರಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಬಿಜೆಪಿಯ ತತ್ವಗಳನ್ನು ವಿರೋಧಿಸಲು ನಾವು ಸರ್ಕಾರ ಮಾಡಿದ್ದೇವೆ. ಜಾತ್ಯತೀತ ಪಕ್ಷಗಳು ಎರಡು ಸೇರಿ ಸರ್ಕಾರ ರಚನೆ ಮಾಡಿದೆ ಎಂದರು.

    ಇದೇ ವೇಳೆ ಶಾಸಕ ಸಿದ್ದು ನ್ಯಾಮಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಮಲ್ಲಿಕಾರ್ಜುನ ಖರ್ಗೆ, ನ್ಯಾಮಗೌಡ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಅಲ್ಲದೇ ರೈತರಿಗಾಗಿ ಬ್ಯಾರೇಜ್ ನಿರ್ಮಾಣ, ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಎಲ್ಲ ನಾಯಕರನ್ನು ಭೇಟಿಯಾಗಿದ್ದರು. ಸದ್ಯ ಅವರ ಸಾವು ಅಘಾತ ತಂದಿದೆ. ಅವರ ಆತ್ಮಕ್ಕೆ ಶಾತಿ ಸಿಗಲಿ, ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಹೇಳಿದರು.