Tag: ಸಂಪುಟ ರಚನೆ

  • ಗ್ಯಾರಂಟಿಗಳನ್ನು ಕದ್ದುಮುಚ್ಚಿ ತೀರ್ಮಾನ ಮಾಡಿಲ್ಲ, ಸಂಪುಟ ಪುನಾರಚನೆ ಸಿಎಂ- ಡಿಸಿಎಂಗೆ ಬಿಟ್ಟಿದ್ದು: ಪರಮೇಶ್ವರ್

    ಗ್ಯಾರಂಟಿಗಳನ್ನು ಕದ್ದುಮುಚ್ಚಿ ತೀರ್ಮಾನ ಮಾಡಿಲ್ಲ, ಸಂಪುಟ ಪುನಾರಚನೆ ಸಿಎಂ- ಡಿಸಿಎಂಗೆ ಬಿಟ್ಟಿದ್ದು: ಪರಮೇಶ್ವರ್

    ಬೆಂಗಳೂರು: ಸಚಿವ ಸಂಪುಟ ಪುನಾರಚನೆ (Cabinet Reshuffle) ವಿಚಾರ ಸಂಪೂರ್ಣವಾಗಿ ಮುಖ್ಯಮಂತ್ರಿಗಳಿಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡುವ ಪದ್ಧತಿ ಇದೆ. ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ, ಅವರಿಬ್ಬರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ – ಯುವಕನ ಕೊಲೆಯಲ್ಲಿ ಜಗಳ ಅಂತ್ಯ

    ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಆಶಯಗಳು, ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯಗಳಿಗೆ ಮತ್ತು ಧರ್ಮಗಳಿಗೆ ಕೊಟ್ಟಿರುವ ಹಕ್ಕು ಮತ್ತು ಅವಕಾಶಗಳನ್ನು ಅವರು ಸರಿಯಾಗಿ ನೋಡಿಕೊಂಡಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ನಾವು ಮಾತನಾಡುವುದಾಗಲಿ ಅಥವಾ ಕ್ರಮ ಮಾಡುವುದು ಸರಿಯಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರು ಮಾತನಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಭೇಟಿ ಮಾಡಿದ ಮುನಿಯಪ್ಪ – ಕೋಲಾರದಲ್ಲಿ ಕೌಶಲ್ಯ ಆಧಾರಿತ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆಗೆ ಮನವಿ

    ಎರಡು ಗ್ಯಾರಂಟಿ ಯೋಜನೆ (Guarantee Scheme) ನಿಲ್ಲಿಸುವಂತೆ ಶಾಸಕ ಗವಿಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ. ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಕರ್ತವ್ಯ. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ ಎಂದರು. ಇದನ್ನೂ ಓದಿ: ನವವೃಂದಾವನ ಗಡ್ಡೆಯ ಪದ್ಮನಾಭ ತೀರ್ಥರ ಆರಾಧನೆ ರಾಯರಮಠಕ್ಕೆ – ಸುಪ್ರೀಂ

    ಅದಾನಿ ವಿಷಯ ರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿದ್ದು. ಅಮೆರಿಕನ್ ಎಸ್ಟಬ್ಲಿಷ್‌ಮೆಂಟ್ಸ್ ಯಾವ ರೀತಿ ಅವರ ಕಂಪನಿ ನಡೆದುಕೊಳ್ಳುತ್ತಿದೆ ಎಂಬುದನ್ನು ತೋರಿಸಿದೆ. ಈ ಬಗ್ಗೆ ಅದಾನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡುವುದರಲ್ಲಿ ತಪ್ಪೇನಿದೆ? ರಾಹುಲ್ ಗಾಂಧಿಯವರು ಪ್ರತಿಯೊಂದು ಭಾಷಣದಲ್ಲಿ ಹೇಳಿಕೊಂಡು ಬಂದಿದ್ದಾರೆ. ಅದಾನಿ ಅವರು ಅನೇಕ ಅವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸುತ್ತಿದ್ದೀರಿ ಎಂದು ಪ್ರಧಾನಿಯವರಿಗೆ ನೇರವಾಗಿ ಹೇಳಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಕಾಂಗ್ರೆಸ್ ಪಕ್ಷ ಚರ್ಚಿಸಲು ಅವಕಾಶ ಕೇಳುವುದು ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದ ಆರೋಪಿ ಬಂಧನ

    ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹಿಂದಿನ ಸರ್ಕಾರ ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿತ್ತು. ಅದನ್ನೆಲ್ಲ ನಾವು ಭರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ. ಬಜೆಟ್ ಅಮೌಂಟ್ 3.27 ಲಕ್ಷ ಕೋಟಿಯಿಂದ, 3.75 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟರು, ಹೆಚ್ಚಿನ ಹಣ ದೊರಕುತ್ತದೆ ಎಂದರು. ಇದನ್ನೂ ಓದಿ: ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ದಂಪತಿ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌ – ಸ್ಥಳದಲ್ಲೇ ಸಾವು

    ಕೇಂದ್ರ ಸರ್ಕಾರ ನಮಗೆ ಬರಬೇಕಾದ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ಒತ್ತಾಯ ಮಾಡಿ ಹಣ ತಂದು, ಸಂಪನ್ಮೂಲ ಕ್ರೂಢೀಕರಣವನ್ನು ಜಾಸ್ತಿ ಮಾಡಲಾಗಿದೆ. ಹಣಕಾಸಿನ ಸ್ಥಿತಿಗತಿಯನ್ನು ಬ್ಯಾಲೆನ್ಸ್ ಮಾಡಲು ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎರಡು ಬಾರಿ ನಮಗೆಲ್ಲ ಹೇಳಿದ್ದಾರೆ. ಯಾವುದೂ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮರಿ ಸಾವು

    ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವ್ಯವಸ್ಥೆ ಸರಿ ಇಲ್ಲದಿರುವ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಎರಡು ಬಾರಿ ಜೈಲುಗಳ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ

    ಭೋವಿ ನಿಗಮದಲ್ಲಿನ ಅವ್ಯವಹಾರ ಪ್ರಕರಣದ ಕುರಿತು ಮಾತನಾಡಿ, ಸಿಐಡಿ, ಎಸ್‌ಐಟಿ ತನಿಖೆ ಮಾಡುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಹೆಚ್ಚಿಗೆ ಏನು ಹೇಳಲು ಆಗುವುದಿಲ್ಲ. ಹಣ ಕೇಳಿರುವ ಆರೋಪಕ್ಕೆ ಸಬಂಧಿಸಿದಂತೆ ಸಿಐಡಿ ಅಧಿಕಾರಿಗಳ ಮೇಲೆ ಬೇರೆ ರೀತಿಯಲ್ಲಿ ತನಿಖೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಖಂಡನೆ, ಮಂಡನೆ, ಎಚ್ಚರಿಕೆ ಸಾಕು, ಬಾಂಗ್ಲಾದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿ: ಮುತಾಲಿಕ್‌

  • 35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ

    35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ

    ಹುಬ್ಬಳ್ಳಿ: ನಾಯಕತ್ವದ ಬದಲಾವಣೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಭಯ ನೀಡಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಸಿಎಂ ಮಧ್ಯೆ ಸುಮಾರು 35 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳಂಕರಹಿತ, ಜನಪರ ಆಡಳಿತ ಕೊಡಿ. ನಾಯಕತ್ವದ ಬದಲಾವಣೆ ಬಗ್ಗೆ ಚಿಂತಿಸದಿರಿ. ಮುಂದಿನ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬರುವುದರ ಬಗ್ಗೆ ನಿಮ್ಮ ಲಕ್ಷ್ಯ ಆಗಿರಲಿ ಎಂದು ಸಲಹೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೆಹಲಿಗೆ ಹೋದ ಬಳಿಕ ಸಂಪುಟ ಪುನಾರಚನೆಗೆ ಮುಹೂರ್ತ ತಿಳಿಸುತ್ತೇನೆ. ಈ ಬಾರಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಆಗುತ್ತದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಹೈಕಮಾಂಡ್ ಒಲವು ತೋರಿದ್ದು, ಬಹುತೇಕ ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದು ಎಂದು ಸುಳಿವು ನೀಡಿದ್ದಾರೆ. ಮಂಗಳೂರಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ – ಮೂವರು ಕಾರ್ಮಿಕರ ಸಾವು

    ನಾಯಕತ್ವ ವಿರುದ್ಧ ಮಾತಾಡುವವರಿಗೆ ಎಚ್ಚರಿಕೆ ನೀಡಿದ ಅವರು, ನಾಯಕತ್ವದ ವಿರುದ್ಧ ಗುಸುಗುಸು ಮಾತನಾಡುವವರ ಬಗ್ಗೆ ಮಾ ಹಿತಿ ಕೊಡಿ. ಅಂತಹವರನ್ನು ಈಗಲೇ ಮಟ್ಟ ಹಾಕಬೇಕು. ಚುನಾವಣಾ ವರ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ ಸೂಚಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

  • ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ, ನನಗೆ ಯಾವುದೇ ಆಸೆಯಿಲ್ಲ: ಬಿ.ವೈ.ವಿಜಯೇಂದ್ರ

    ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ, ನನಗೆ ಯಾವುದೇ ಆಸೆಯಿಲ್ಲ: ಬಿ.ವೈ.ವಿಜಯೇಂದ್ರ

    ಹುಬ್ಬಳ್ಳಿ: ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ. ನಾನು ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಕೆಲಸ ಮಾಡ್ತೆನೆ. ನಾನು ಯಾವುದೇ ಆಸೆಯಿಂದ ಕೆಲಸ ಮಾಡ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ಕೊಟ್ಟರು.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯ, ಕೇಂದ್ರನಾಯಕರ ಹತ್ತಿರ ಈ ಕುರಿತು ಯಾವುದೇ ಚರ್ಚೆ ಆಗಿಲ್ಲ. ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದು, ನನ್ನ ವೈಯಕ್ತಿಕ ಕೆಲಸಕ್ಕೆ. ಇದರ ಜೊತೆಗೆ ಪಕ್ಷದ ಸಂಘದ ವಿಚಾರವಾಗಿ ಚರ್ಚೆ ನಡೆಸಿದ್ದೇನೆ ಎಂದರು. ಇದನ್ನೂ ಓದಿ: ರಾಯಚೂರಿನಲ್ಲಿ ‘ಅಪ್ಪು ಅಂಗನವಾಡಿ ಕೇಂದ್ರ’ ಲೋಕಾರ್ಪಣೆ – ಶಿವಣ್ಣನಿಂದ ಮೆಚ್ಚುಗೆ

    ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದರು. ಅವರಿಗೆ ಆಘಾತವಾಗಿದೆ. ಬಿಜೆಪಿ ಗೆಲುವು ಕಾಂಗ್ರೆಸ್ ನಿದ್ದೆಗೆಡಿಸಿದ್ರೆ, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತರಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಸಂಪುಟ ಕಗ್ಗಂಟು – ಬಿಎಸ್‍ವೈಗೆ ಸಮಯ ನೀಡದ ಅಮಿತ್ ಶಾ

    ಸಂಪುಟ ಕಗ್ಗಂಟು – ಬಿಎಸ್‍ವೈಗೆ ಸಮಯ ನೀಡದ ಅಮಿತ್ ಶಾ

    ನವದೆಹಲಿ: ರಾಜ್ಯ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯ ನೀಡಿಲ್ಲ. ಗುರುವಾರ ಮಧ್ಯಾಹ್ನದಿಂದ ಭೇಟಿಗಾಗಿ ಕಾಯುತ್ತಿದ್ದು, ಚರ್ಚೆಗೆ ಇನ್ನೂ ಸಮಯ ಸಿಕ್ಕಿಲ್ಲ.

    ಗುರುವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ರಾತ್ರಿ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಅಮಿತ್ ಶಾ ಚರ್ಚೆಗೆ ಉತ್ಸುಕತೆ ತೋರದೆ ಇಂದು ಭೇಟಿಗೆ ಸಮಯ ನೀಡುವುದಾಗಿ ಹೇಳಿದ್ದರು. ಆದರೆ ಇಂದು ಮೂರು ಗಂಟೆ ಸಮಯವಾದರೂ ಕೇಂದ್ರ ಗೃಹ ಕಚೇರಿಯಿಂದ ಫೋನ್ ಕಾಲ್ ಬಂದಿಲ್ಲ. ಅಮಿತ್ ಶಾ ಕಚೇರಿ ಫೋನ್‍ಗಾಗಿ ಕಾಯುತ್ತಿರುವ ಸಿಎಂ ದೆಹಲಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಎರಡು ಗಂಟೆಯ ಬಳಿಕ ಅಮಿತ್ ಶಾ ನಿರಂತರವಾದ ಕಾರ್ಯಕ್ರಮಗಳಿದ್ದು, ಬಿಎಸ್‍ವೈ ಭೇಟಿ ಅನುಮಾನ ಎನ್ನಲಾಗುತ್ತಿದೆ. ಮಧ್ಯಾಹ್ನ 2 ಗಂಟೆಗೆ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದು, 3:30 ರ ವೇಳೆಗೆ ಎನ್‍ಡಿಎ ಒಕ್ಕೂಟ ಪಕ್ಷಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ಚುನಾವಣಾ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದು, ರಾತ್ರಿ 10 ಗಂಟೆವರೆಗೂ ಬ್ಯುಸಿಯಾಗಲಿದ್ದಾರೆ.

    ಶನಿವಾರ ಕೇಂದ್ರ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ನಾಳೆಯೂ ಅನುಮಾನ ಎನ್ನಲಾಗುತ್ತಿದ್ದು, ಇಂದೇ ಹೇಗಾದರೂ ಮಾಡಿ ಅಮಿತ್ ಶಾ ಭೇಟಿ ಮಾಡುವ ಪ್ರಯತ್ನವನ್ನು ಬಿಎಸ್ ಯಡಿಯೂರಪ್ಪ ಮಾಡುತ್ತಿದ್ದಾರೆ.

  • ಸಿಎಂ ಮುಂದೆ ಕತ್ತಿ ಸಚಿವ ಸ್ಥಾನಕ್ಕೆ, ಸವದಿ ಪರಿಷತ್ ಲಾಬಿ

    ಸಿಎಂ ಮುಂದೆ ಕತ್ತಿ ಸಚಿವ ಸ್ಥಾನಕ್ಕೆ, ಸವದಿ ಪರಿಷತ್ ಲಾಬಿ

    ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಲಾಬಿಗಳು ಜೋರಾಗಿಯೇ ನಡೆಯುತ್ತಿವೆ. ಮೊದಲ ಅವಧಿಯಲ್ಲಿ ಸ್ಥಾನ ಸಿಗದ ಬೆಳಗಾವಿ ಶಾಸಕ ಉಮೇಶ್ ಕತ್ತಿ ಶತಾಯಗತಾಯ ಈ ಬಾರಿ ಸಚಿವ ಆಗಲೇಬೇಕು ಅಂತ ದೊಡ್ಡ ಮಟ್ಟದಲ್ಲೇ ಲಾಬಿ ಮಾಡುತ್ತಿದ್ದಾರೆ. ಇಂದು ಸಿಎಂ ನಿವಾಸಕ್ಕೆ ಆಗಮಿಸಿದ ಅವರು, ನಂಗೂ ಮಂತ್ರಿ ಸ್ಥಾನ ಕೊಡಿ ಸರ್ ಅಂತ ಯಡಿಯೂರಪ್ಪ ಮೇಲೆ ಮತ್ತೆ ಒತ್ತಡ ಹಾಕಿದ್ದಾರೆ.

    ಉಮೇಶ್ ಕತ್ತಿ ಕೇವಲ ಸಿಎಂ ಬಳಿ ಮಾತ್ರ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಜೊತೆಯೂ ದೊಡ್ಡದಾಗಿಯೇ ಲಾಬಿ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ದೆಹಲಿಗೆ ಹೋಗಿ ಕೇಂದ್ರದ ಹಲವು ನಾಯಕರನ್ನ ಭೇಟಿಯಾಗಿ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಹೈಕಮಾಂಡ್ ಯಾವ ಸಂದೇಶ ಕೊಡುತ್ತೋ ಗೊತ್ತಿಲ್ಲ. ಆದರೆ ತಮ್ಮ ಪ್ರಯತ್ನ ಮಾತ್ರ ತಾವು ಬಿಡದೇ ಸಚಿವ ಸ್ಥಾನಕ್ಕೆ ಲಾಬಿ ಮುಂದುವರಿಸುತ್ತಲೇ ಇದ್ದಾರೆ.

    ಬೆಳಗಾವಿಯ ಕತ್ತಿ ಸ್ಥಿತಿ ಹೀಗಾದರೆ ಮತ್ತೊಬ್ಬ ನಾಯಕ ಡಿಸಿಎಂ ಲಕ್ಷ್ಮಣ ಸವದಿರದ್ದು ಇನ್ನೊಂದು ತಲೆ ನೋವು. ತಾನು ಡಿಸಿಎಂ ಆಗಿ ಉಳಿಯಬೇಕಾದರೆ ಫೆಬ್ರವರಿಯಲ್ಲಿ ನಡೆಯಲಿರೋ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು. ಹೀಗಾಗಿ ಟಿಕೆಟ್ ನನಗೆ ನೀಡಬೇಕು ಅಂತ ಸವದಿ ಲಾಬಿ ಪ್ರಾರಂಭ ಮಾಡಿದ್ದಾರೆ. ಇಂದು ಕೂಡ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟು ನನಗೆ ಸ್ಥಾನ ಕೊಡಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ.

    ಸಂಖ್ಯಾಬಲದ ಪ್ರಕಾರ ಫೆಬ್ರವರಿಯಲ್ಲಿ ನಡೆಯೋ ಒಂದು ಸ್ಥಾನ ಬಿಜೆಪಿಗೆ ಸಿಗಲಿದೆ. ಸವದಿಗೆ ಅಡ್ಡಲಾಗಿರೋದು ಮಾಜಿ ಸಚಿವ ಆರ್.ಶಂಕರ್. ಪರಿಷತ್ ಸದಸ್ಯನ್ನಾಗಿ ಮಾಡಿ ಸಚಿವರಾಗಿ ಮಾಡೋದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ರು. ಹೀಗಾಗಿ ನನಗೆ ಸ್ಥಾನ ಕೊಟ್ಟು ಮಾತು ಉಳಿಸಿಕೊಳ್ಳಿ ಅಂತ ಆರ್ ಶಂಕರ್ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಶಂಕರ್ ಒತ್ತಡವೇ ಸವದಿಗೆ ದೊಡ್ಡ ತಲೆ ನೋವಾಗಿದೆ. ಶಂಕರ್‍ಗೆ ಒಂದೊಮ್ಮೆ ಸ್ಥಾನ ಕೊಟ್ರೆ ನನ್ನ ಸ್ಥಾನ ಹೋಗೋದು ಗ್ಯಾರಂಟಿ ಅಂತ ತಿಳಿದುಕೊಂಡಿರೋ ಸವದಿ ಹೇಗಾದ್ರು ಮಾಡಿ ಪರಿಷತ್ ಟಿಕೆಟ್ ಗಿಟ್ಟಿಸೋಕೆ ಪ್ರಯತ್ನ ಮಾಡ್ತಾನೇ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಸಿಎಂ ಆಗಿ ಸಚಿವನಾಗಿದ್ದಕ್ಕೆ ನನಗೆ ಬೇಸರವಿಲ್ಲ: ಜಗದೀಶ್ ಶೆಟ್ಟರ್

    ಸಿಎಂ ಆಗಿ ಸಚಿವನಾಗಿದ್ದಕ್ಕೆ ನನಗೆ ಬೇಸರವಿಲ್ಲ: ಜಗದೀಶ್ ಶೆಟ್ಟರ್

    ಕಾರವಾರ: ಮುಖ್ಯಮಂತ್ರಿಯಾಗಿ ನಂತರ ಸಚಿವನಾಗಿದ್ದಕ್ಕೆ ಬೇಸರವಿಲ್ಲ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಇಂದು ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶವಾದ ಅಂಕೋಲದ ಡೋಂಗ್ರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಕ್ಕೆ ಟೀಕೆ ಮಾಡಲು ಯಾವುದೇ ವಿಷಯವಿಲ್ಲ. ಅವರಂತೂ ಯಾವ ಪ್ರದೇಶಕ್ಕೂ ಹೋಗಿ ಸಾಂತ್ವನ ಹೇಳಲಿಲ್ಲ. ಆದರೆ ನಮ್ಮಲ್ಲಿ ಮುಖ್ಯಮಂತ್ರಿಯವರೇ ಸ್ವತಃ ಹೋಗಿದ್ದಾರೆ. ಈಗ ಸಚಿವನಾಗಿ ಹೋಗುತ್ತಿದ್ದೇನೆ ಎಂದು ತಿಳಿಸಿದರು.

    ಈ ವೇಳೆ ಮುಖ್ಯಮಂತ್ರಿಯಾಗಿ ನಂತರ ಸಚಿವನಾಗಿದ್ದಕ್ಕೆ ಬೇಸರವಿಲ್ಲ. ಪಕ್ಷ ಯಾವ ಜವಾಬ್ದಾರಿ ನಿಬಾಯಿಸಬೇಕು ಎಂದು ಹೇಳಿದೆಯೋ ಆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಇದರಲ್ಲಿ ಮುಜುಗರ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ನಾನು ಯಾರ ಕೆಳಗೆ ಕೆಲಸ ಮಾಡುತ್ತೇನೆ ಎನ್ನುವುದು ಮುಖ್ಯ. ಪಕ್ಷದ ಹಿರಿಯ ನಾಯಕರ ಕೈ ಕೆಳಗೆ ಕೆಲಸ ಮಾಡಲು ಮುಜುಗರವಿಲ್ಲ ಎಂದರು.

    ಹೊಸ ಸರ್ಕಾರದ ಸಂಪುಟ ರಚನೆಯಾದಾಗ ಅಸಮಧಾನ ಇರುವುದು ಸಹಜವಾದಂತಹದ್ದು, ಹೀಗಾಗಿ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರು ಮತ್ತು ಮುಖ್ಯಮಂತ್ರಿ ಯವರು ಅವರನ್ನು ಸಂಪರ್ಕ ಮಾಡಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸುಭದ್ರವಾಗಿರುತ್ತದೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

    ಜಗದೀಶ್ ಶೆಟ್ಟರ್ ಅವರು ಜುಲೈ 12, 2012 ರಿಂದ 2013 ಮೇ 8ರ ಕರ್ನಾಟಕ ರಾಜ್ಯದ 21 ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಆದರೆ ಕಳೆದ ಮಂಗಳವಾರ ರಚನೆಯಾದ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವನಾಗಿ ಆಯ್ಕೆ ಆಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕೆ ಮಾಡಿದ್ದರು.

  • ಇಂದು ಕೊನೆಯಾಗುತ್ತಾ ಬಿಎಸ್‍ವೈ ಒಂಟಿ ಸಚಿವ ಸಂಪುಟ?

    ಇಂದು ಕೊನೆಯಾಗುತ್ತಾ ಬಿಎಸ್‍ವೈ ಒಂಟಿ ಸಚಿವ ಸಂಪುಟ?

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ 11 ದಿನಗಳು ಕಳೆದಿವೆ. ಸಚಿವ ಸಂಪುಟ ವಿಸ್ತರಣೆ ಮಾಡಲು ಇದೂವರೆಗೆ ಸಿಎಂ ಯಡಿಯೂರಪ್ಪ ಅವರಿಂದ ಸಾಧ್ಯವಾಗಿಲ್ಲ. ಏಕಚಕ್ರಧಿಪತಿಯಾಗಿ ಈಗಾಗಲೇ ಸಾಕಷ್ಟು ನಿರ್ಣಯಗಳನ್ನು ಸಿಎಂ ತೆಗದುಕೊಂಡಿದ್ದು, ಸಂಪುಟ ವಿಸ್ತರಣೆ ಯಾವಗ ಅನ್ನೋ ಪ್ರಶ್ನೆ ಶುರುವಾಗಿದೆ.

    ದೆಹಲಿಗೆ ತೆರರುವ ಬಿಎಸ್ ಯಡಿಯೂರಪ್ಪನವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಬೇಕು. ಆದರೆ ಅಮಿತ್ ಶಾ ಸಿಗೋದು ಅನುಮಾನ ಎನ್ನಲಾಗುತಿದೆ. ಲೋಕಸಭೆಯಲ್ಲಿ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಬಿಲ್ ಮಂಡನೆ ಆಗಲಿದ್ದು, ಇಂದು ದಿನವಿಡೀ ಲೋಕಸಭೆ ಕಲಾಪದಲ್ಲಿ ಅಮಿತ್ ಶಾ ಬ್ಯುಸಿ ಇರಲಿದ್ದಾರೆ. ಹಾಗಾಗಿ ಯಡಿಯೂರಪ್ಪ ಮತ್ತು ಅಮಿತ್ ಶಾ ಭೇಟಿ ಅನುಮಾನ ಎನ್ನಲಾಗಿದ್ದು, ಇಂದು ರಾತ್ರಿ ಅಥಾವ ಬುಧವಾರ ಭೇಟಿಯಾಗುವ ಸಾಧ್ಯತೆಗಳಿವೆ.

    ಸಿಎಂ ಆಗಿರುವ ಯಡಿಯೂರಪ್ಪ ತಮ್ಮ ಜೊತೆಯಲ್ಲಿ ತಮ್ಮದೇಯಾದ ಸಚಿವ ಆಕಾಂಕ್ಷಿಗಳ ಪಟ್ಟಿ ಹೊತ್ತು ತಂದಿದ್ದಾರೆ. ಜಾತಿ, ಜಿಲ್ಲೆ, ಪ್ರಾದೇಶಿಕ ,ಅತೃಪ್ತರ ಖೋಟಾ ಎಲ್ಲವನ್ನು ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದ್ದಾರೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡಾ ಪ್ರತ್ಯೇಕ ಪಟ್ಟಿಕೊಟ್ಟಿದ್ದು, ಆರ್.ಎಸ್.ಎಸ್ ಕೂಡಾ ಒಂದು ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದೆ ಎನ್ನಲಾಗಿದೆ.

    ಇಂದು ಬೆಳಗ್ಗೆ 9:30ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಯಡಿಯೂರಪ್ಪ ಭೇಟಿಯಾಗಿಲಿದ್ದು. ಸಂಜೆ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಾದ ಕೆಲಸ, ಬರಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

  • ಪ್ರತಿಪಕ್ಷದವರನ್ನು ಕೇಳಿ ಸಂಪುಟ ರಚಿಸಬೇಕಾ- ಬಿಎಸ್‍ವೈ ಗುಡುಗು

    ಪ್ರತಿಪಕ್ಷದವರನ್ನು ಕೇಳಿ ಸಂಪುಟ ರಚಿಸಬೇಕಾ- ಬಿಎಸ್‍ವೈ ಗುಡುಗು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಒನ್ ಮ್ಯಾನ್ ಶೋ ಎಂದು ಟೀಕಿಸಿದ ಬೆನ್ನಲ್ಲೇ ಮುಖ್ಯಮಂತ್ರಗಳು ಕೆಂಡಾಮಂಡಲರಾಗಿದ್ದು, ವಿರೋಧ ಪಕ್ಷದವರನ್ನು ಕೇಳಿ ಸಂಪುಟ ರಚಿಸಬೇಕೇ ಎಂದು ಕಿಡಿ ಕಾರಿದ್ದಾರೆ.

    ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ಮಾಡಲು ನಾನು 24 ಗಂಟೆಯೂ ಸಿದ್ಧನಿದ್ದೇನೆ. ಆದರೆ, ಕೇಂದ್ರದ ನಾಯಕರು ತೀರ್ಮಾನ ಮಾಡಬೇಕಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಹೀಗಾಗಿ ಪ್ರಧಾನಿ ಮೋದಿ ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಸಂಪುಟ ರಚನೆಯಾದಲ್ಲಿ ನನಗೂ ಕೆಲಸ ಮಾಡಲು ಸುಲಭವಾಗಲಿದೆ. ಹೀಗಾಗಿಯೇ ಇಂದು ಉತ್ತರ ಕರ್ನಾಟಕದ ಪ್ರವಾಸ ಮುಗಿಸಿ ದೆಹಲಿಗೆ ತೆರಳುತ್ತಿದ್ದೇನೆ. ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

    ನೆರೆ ಹಾವಳಿ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದ್ದು, ವೈಮಾನಿಕ ಸಮೀಕ್ಷೆ ಮೂಲಕ ನೆರೆಯನ್ನು ಪ್ರತ್ಯಕ್ಷವಾಗಿ ನೋಡಲು ತೆರಳುತ್ತಿದ್ದೇನೆ. ಈಗಾಗಲೇ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಬೆಂಬಲಿಗರು ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಮಾಡಿದರು. ರವೀಂದ್ರನಾಥ್ ಮೂರ್ನಾಲ್ಕು ಬಾರಿ ಜಯ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಮನವಿ ಮಾಡಿದರು.

  • ಬಿಎಸ್‍ವೈ ಕ್ಯಾಬಿನೆಟ್-ಅಮಿತ್ ಶಾ ಕೈ ಸೇರಿದ ಮೂರನೇ ಲಿಸ್ಟ್

    ಬಿಎಸ್‍ವೈ ಕ್ಯಾಬಿನೆಟ್-ಅಮಿತ್ ಶಾ ಕೈ ಸೇರಿದ ಮೂರನೇ ಲಿಸ್ಟ್

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ವಾರವೇ ಕಳೆದ್ರೂ, ಸಂಪುಟ ರಚನೆಯಾಗಿಲ್ಲ. ಆಗಸ್ಟ್ 7ರ ನಂತರವೇ ಸಂಪುಟ ರಚನೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೆ ಮೂರನೇ ಲಿಸ್ಟ್ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಪ್ರತ್ಯೇಕವಾಗಿ ಸಚಿವ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದ್ದರು. ಎರಡು ಪಟ್ಟಿಯಲ್ಲಿ ಕೆಲ ನಾಯಕರ ಹೆಸರಿತ್ತು, ಆದ್ರೆ ಕೆಲವರದ್ದು ಇರಲಿಲ್ಲ. ಇದೀಗ ಅಮಿತ್ ಶಾ ತಮ್ಮ ಆಪ್ತ ಮೂಲಗಳಿಂದ ಸಿದ್ಧಪಡಿಸಿಕೊಂಡಿರುವ ಮೂರನೇ ಪಟ್ಟಿಯನ್ನು ತರಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

     

    ಓರ್ವ ನಾಯಕ ಸಚಿವ ಆಗಬೇಕೆಂದ್ರೆ ಮೂರರ ಪೈಕಿ ಎರಡು ಪಟ್ಟಿಯಲ್ಲಿ ಹೆಸರು ಇರಬೇಕು ಎಂಬ ತೀರ್ಮಾನಕ್ಕೆ ಅಮಿತ್ ಶಾ ಬಂದಿದ್ದಾರಂತೆ. ಬುಧವಾರ ಈ ಮೂರು ಲಿಸ್ಟ್ ಜೊತೆ ಅಮಿತ್ ಶಾ ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ.

    ಬಿ.ಎಸ್.ಯಡಿಯೂರಪ್ಪ ಲಿಸ್ಟ್!:
    ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ, ಅಶ್ವಥ್ ನಾರಾಯಣಗೌಡ, ಅರವಿಂದ್ ಲಿಂಬಾವಳಿ, ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್,ಬಾಲಚಂದ್ರಜಾರಕಿಹೊಳಿ, ಶಿವನಗೌಡ ನಾಯಕ್, ಎನ್.ರವಿಕುಮಾರ್, ಸುರೇಶ್‍ಕುಮಾರ್, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ

    ಬಿ.ಎಲ್. ಸಂತೋಷ್ ಲಿಸ್ಟ್!:
    ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ,1 ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ನಾಗೇಶ್, ಶಶಿಕಲಾ ಜೊಲ್ಲೆ, ಮಾಧುಸ್ವಾಮಿ, ಉಮೇಶ್ ಕತ್ತಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್, ಬಾಲಚಂದ್ರ ಜಾರಕಿಹೊಳಿ, ಸಿ.ಟಿ.ರವಿ, ಎಸ್.ಎ.ರವೀಂದ್ರನಾಥ್, ಸಿ.ಎಂ.ಉದಾಸಿ, ಎಂ.ಪಿ.ಕುಮಾರಸ್ವಾಮಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್

  • ಸಮ್ಮಿಶ್ರ ಸರ್ಕಾರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಕಟ-ಕಂಟಕ!

    ಸಮ್ಮಿಶ್ರ ಸರ್ಕಾರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಕಟ-ಕಂಟಕ!

    ಚಿಕ್ಕಬಳ್ಳಾಪುರ: ಸಂಪುಟ ವಿಸ್ತರಣೆ ಮಾಡಿ ಸಮ್ಮಿಶ್ರ ಸರ್ಕಾರ ಮುಂದುವರಿಸೋಕೆ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ನಡುವೆ ಮಂತ್ರಿಗಿರಿಗಾಗಿ ನಾನಾ-ನೀನಾ ಅನ್ನೋ ಫೈಟ್ ಶುರುವಾಗಿದೆ. ಒಂದೇ ಜಿಲ್ಲೆಯ ಒಂದೇ ಜಾತಿಯ ಇಬ್ಬರು ಶಾಸಕರು ಮಂತ್ರಿ ಪದವಿಯ ಪಟ್ಟು ಹಿಡಿದಿದ್ದು, ಸ್ವತಃ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಂಕಟದ ಜೊತೆಗೆ ಕಂಟಕನೂ ತಂದೊಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೆ, ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ಐವರು ಶಾಸಕರು ಒಕ್ಕಲಿಗ-ರೆಡ್ಡಿ ಸಮಯದಾಯದವರೇ ಎಂಬುದು ವಿಶೇಷ. ಹೀಗಾಗಿ ಈಗಾಗಲೇ ಒಕ್ಕಲಿಗ ಕೋಟಾದಡಿ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾದಾಗ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರಿಗೆ ಕೃಷಿ ಮಂತ್ರಿ ಪದವಿ ಸಿಕ್ಕಿದೆ. ತಮ್ಮದೇ ಕಾಂಗ್ರೆಸ್ ಪಕ್ಷದ ಶಾಸಕರಾದರೂ ರಾಜಕೀಯ ವಿರೋಧಿಗೆ ಸಚಿವ ಸ್ಥಾನ ಸಿಕ್ಕಿದ್ದು ಅರಗಿಸಿಕೊಳ್ಳದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸೆಟೆದು ನಿಂತರು. ಅಂದಿನಿಂದ ಇದುವರಗೂ ಸಚಿವ ಸ್ಥಾನಕ್ಕಾಗಿ ಸರ್ಕಸ್ ಮಾಡುತ್ತಲೇ ಇದ್ದಾರೆ.

    ಇತ್ತ ಲೋಕ ಚುನಾವಣೆಯ ಸೋಲಿನಿಂದ ನಿರಾಶೆಗೊಂಡಿರುವ ಮೈತ್ರಿ ನಾಯಕರು ಆಪರೇಷನ್ ಕಮಲ ತಪ್ಪಿಸಿ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳೋಕೆ ಮುಂದಾಗಿದ್ದಾರೆ. ಅತೃಪ್ತರಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೂ ಸಚಿವ ಸ್ಥಾನ ನೀಡಲಿದ್ದಾರೆ ಎನ್ನಲಾಗಿದೆ. ಇದು ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ ಮುನಿಯಪ್ಪ ನವರನ್ನು ಕೆರಳುವಂತೆ ಮಾಡಿದೆ.

    ಎರಡು ಬಾರಿ ಶಾಸಕರಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ನಡೆಸಿ ಸಮ್ಮಿಶ್ರ ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡೋವರಿಗೆ ಸಚಿವ ಸ್ಥಾನ ಕೊಡೋದಾದ್ರೆ, 6 ಬಾರಿ ಶಾಸಕರು ಈ ಹಿಂದೆ ಸಚಿವರೂ ಅಗಿದ್ದ ತಮಗೆ ಯಾಕೆ ಸಚಿವ ಸ್ಥಾನ ಕೊಡಬಾರದು. ಹಿರಿತನದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಕೊಡಿ ಅಂತಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಮುನಿಯಪ್ಪ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ನಡೆ ಸರ್ಕಾರಕ್ಕೆ ತಲೆನೋವಾಗಿದೆ. ಈಗ ಶಿಡ್ಲಘಟ್ಟ ಶಾಸಕ ಸಹ ಸುಧಾಕರ್ ಗೆ ಮಂತ್ರಿ ಪದವಿ ಕೊಡೋದಾದ್ರೆ ತಮಗೆ ಮಂತ್ರಿಗಿರಿ ಕೊಡಿ ಅಂತಿರೋದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸಂಕಟ ತಂದಿದೆ. ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಮತ್ತೊಬ್ಬರು ರೆಬೆಲ್ ಆಗುತ್ತಾರೆ. ಒಂದೇ ಜಿಲ್ಲೆಯ ಒಂದೇ ಸಮುದಾಯದ ಮೂವರಿಗೆ ಸಚಿವ ಸ್ಥಾನ ಕೊಡೋದು ಕಷ್ಟ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಈ ಎಲ್ಲಾ ಕಾರಣಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಲಿದೆಯಾ ಅನ್ನೋ ಪ್ರಶ್ನೆ ಕಾಡುತ್ತಿದೆ.