Tag: ಸಂಪತ್

  • ಮೊಟ್ಟೆ ಎಸೆದ ಪ್ರಕರಣಕ್ಕೆ- ಮದುವೆಯ ಫೋಟೋನಾ ಬಿಜೆಪಿಯವ್ರು ಎಡಿಟ್ ಮಾಡಿದ್ದಾರೆ: ಜೀವಿಜಯ

    ಮೊಟ್ಟೆ ಎಸೆದ ಪ್ರಕರಣಕ್ಕೆ- ಮದುವೆಯ ಫೋಟೋನಾ ಬಿಜೆಪಿಯವ್ರು ಎಡಿಟ್ ಮಾಡಿದ್ದಾರೆ: ಜೀವಿಜಯ

    ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಸಹೋದರರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯೆ ನೀಡಿ, ಸಂಪತ್ ತಮ್ಮನ ಮದುವೆಯ ಫೋಟೋ ಬಿಜೆಪಿ ಅವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

    ಸೋಮವಾರಪೇಟೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಊರಿನವರು ಮದುವೆಗೆ ಕರೆದರೆ ಹೋಗುತ್ತೇನೆ. ಹಾಗೆ ಸಂಪತ್ ತಮ್ಮನ ಮದುವೆಗೆ ಹೋಗಿರಬಹುದು ಅಥವಾ ಹೋಗದೇ ಇರುವುದು ಈ ಬಗ್ಗೆ ನನಗೆ ನೆನಪಿಲ್ಲ ಎಂದರು.

    ಬಿಜೆಪಿ ಅವರು ಕುತಂತ್ರ ಮಾಡಿದ್ದಾರೆ. ಸಂಪತ್ ಇದುವರೆಗೂ ನನಗೆ ಪರಿಚಯ ಇಲ್ಲ. ಫೋಟೋದಲ್ಲಿ ಈಗಿನ ತಂತ್ರಜ್ಞಾನ ಬಳಿಸಿ ನನ್ನ ಫೋಟೋ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ

    ಇತ್ತೀಚೆಗಷ್ಟೇ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಮಾತನಾಡಿ, ಮಾಜಿ ಸಚಿವ ಕೈ ನಾಯಕ ಜೀವಿಜಯ ಫಾಲೋವರ್ ಎಂದು ಹೇಳಿಕೊಂಡಿದ್ದ. ಈತನ ಹೇಳಿಕೆಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯಿಸಿದ್ದ, ಸಂಪತ್ ಯಾರೆಂದು ನನಗೆ ಗೊತ್ತಿಲ್ಲ. ಸಂಪತ್ ಜೊತೆ ಇರುವ ಫೋಟೋ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಅದಾದ ಬಳಿಕ ಸಂಪತ್ ಸಹೋದರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ರಿಲೀಸ್ ಆಗಿ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಇದನ್ನೂ ಓದಿ:

    ಸಂಪತ್ ಯಾರು ಎನ್ನವುದರ ಬಗ್ಗೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಗಳ ನಡೆಯುತ್ತಿದೆ. ಕಾಂಗ್ರೆಸ್‍ನವರು ಆತ ಬಿಜೆಪಿ ಕಾರ್ಯಕರ್ತ ಎಂದಿದ್ದರೆ ಬಿಜೆಪಿಯವರು ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಮೊಟ್ಟೆ ಎಸೆದದ್ದು ಕಾಂಗ್ರೆಸ್ ಕಾರ್ಯಕರ್ತ. ಹೀಗಾಗಿ ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಮೊಟ್ಟೆ ಕೇಸ್‌ – ಸಿದ್ದರಾಮಯ್ಯಗೆ ಈಗ ಝಡ್‌ ಶ್ರೇಣಿಯ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ

    ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ

    ಮಡಿಕೇರಿ: ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಇದೀಗ ಸಂಪತ್ ಸಹೋದರನ ಮದುವೆಯಲ್ಲಿ ಮಾಜಿ ಸಚಿವ ಜೀವಿಜಯ ಭಾಗಿಯಾಗಿದ್ದ ಫೋಟೋ ರಿಲೀಸ್ ಆಗಿದೆ.

    ಇತ್ತೀಚೆಗಷ್ಟೇ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಮಾತನಾಡಿ, ತಾನು ಮೊದಲು ಜೆಡಿಎಸ್ ಮೆಂಬರ್ ಆಗಿದ್ದೆ, ಆನಂತರ ಕಾಂಗ್ರೆಸ್ ಕಾರ್ಯಕರ್ತನಾದೆ. ಅಲ್ಲದೆ ಮಾಜಿ ಸಚಿವ ಕೈ ನಾಯಕ ಜೀವಿಜಯ ಫಾಲೋವರ್ ಎಂದು ಹೇಳಿಕೊಂಡಿದ್ದ.

    ಈತನ ಹೇಳಿಕೆಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯಿಸಿ, ಸಂಪತ್ ಯಾರೆಂದು ನನಗೆ ಗೊತ್ತಿಲ್ಲ. ಸಂಪತ್‍ನನ್ನು ನೋಡೇ ಇಲ್ಲ. ಸಂಪತ್ ಜೊತೆ ಇರುವ ಫೋಟೋ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಇದೀಗ ಸಂಪತ್ ಸಹೋದರರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ರಿಲೀಸ್ ಆಗಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ: ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

    ಸಂಪತ್ ಯಾರು ಎನ್ನವುದರ ಬಗ್ಗೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಗಳ ನಡೆಯುತ್ತಿದೆ. ಕಾಂಗ್ರೆಸ್‍ನವರು ಆತ ಬಿಜೆಪಿ ಕಾರ್ಯಕರ್ತ ಎಂದಿದ್ದರೆ ಬಿಜೆಪಿಯವರು ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಮೊಟ್ಟೆ ಎಸೆದದ್ದು ಕಾಂಗ್ರೆಸ್ ಕಾರ್ಯಕರ್ತ. ಹೀಗಾಗಿ ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

    Live Tv
    [brid partner=56869869 player=32851 video=960834 autoplay=true]

  • ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?

    ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?

    ಮಡಿಕೇರಿ: ನಾನು ಕಾಂಗ್ರೆಸ್ ಕಾರ್ಯಕರ್ತ. ಮಾಜಿ ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದಿದ್ದರು. ಈ ರೀತಿ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಹಾಗಾಗಿ ನಾನು ಅವರ ಕಾರಿಗೆ ಮೊಟ್ಟೆ ಎಸೆದಿದ್ದೇನೆ ಎಂದು ಮೊಟ್ಟೆ ಎಸೆದ ಸಂಪತ್ ಸ್ಪಷ್ಟನೆ ನೀಡಿದ್ದಾರೆ.

    ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಕಾರ್ಯಕರ್ತ. ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ಮಾಜಿ ಸಚಿವ ಜೀವಿಜಯ ಅವರ ಅಭಿಮಾನಿ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಟಿಪ್ಪು ವಿಷಯದಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಇದು ನನಗೆ ಇಷ್ಟವಾಗಿಲ್ಲ ಹಾಗಾಗಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ನಾನು ಸೋಮವಾರಪೇಟೆ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಆದರೆ ಪಕ್ಷ ಹೊರತುಪಡಿಸಿ ಮೊದಲು ನಾನೊಬ್ಬ ಹಿಂದೂ. ಸಿದ್ದರಾಮಯ್ಯ ಹಿಂದೂಗಳ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ ಅಪ್ಪಚ್ಚು ರಂಜನ್ ಅವರೊಂದಿಗೆ ಫೋಟೋ ವೈರಲ್ ವಿಚಾರವಾಗಿ ಮಾತನಾಡಿ, ಯಾವುದೋ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಫೋಟೋ ತೆಗೆದುಕೊಂಡಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ಸಿಗರೇ – ಅಪ್ಪಚ್ಚು ರಂಜನ್

    ಆಗಸ್ಟ್‌ 18 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು. ಅಲ್ಲದೇ ಇದೇ ವೇಳೆ ವ್ಯಕ್ತಿಯೊಬ್ಬ ಕಾರಿಗೆ ಮೊಟ್ಟೆ ಎಸೆದಿದ್ದ.

    Live Tv
    [brid partner=56869869 player=32851 video=960834 autoplay=true]

  • ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    ಮಡಿಕೇರಿ: ಸಂಪತ್ ಬಿಜೆಪಿ ಕಾರ್ಯಕರ್ತನಲ್ಲ. ಬಿಜೆಪಿ ಕಾರ್ಯಕರ್ತರಿಗೂ ಮೊಟ್ಟೆ ಎಸೆದಿದ್ದಕ್ಕೂ ಸಂಬಂಧವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

    ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಸಿದ್ದರಾಮಯ್ಯನವರ ಸ್ಥಾನ ಮಾನ ನಮಗೂ ತಿಳಿದಿದೆ. ಅವರು ವಿರೋಧ ಪಕ್ಷದ ನಾಯಕರು, ಅವರನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಕೂಡ ಕರೆಯುತ್ತೇವೆ. ಅವರಿಗೆ ಪ್ರೋಟೋಕಾಲ್ ಇದೆ. ಅಂತಹ ದೊಡ್ಡ ವ್ಯಕ್ತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತರಲ್ಲ ಎಂದು ಹತ್ತು ಬಾರಿ ಬೇಕಾದರೂ ಹೇಳುತ್ತೇನೆ ಎಂದಿದ್ದಾರೆ.

    ಶಾಸಕ ಅಪ್ಪಚ್ಚು ರಂಜನ್ ಜೊತೆಗಿರುವ ಸಂಪತ್ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಎಲ್ಲಾ ಮೆಂಬರ್ ಶಿಪ್ ಡಿಜಿಟಲ್ ಆಗಿದೆ. ಅದರಲ್ಲಿ ಸಂಪತ್ ಹೆಸರಿಲ್ಲ ಎಂದು ನಮ್ಮ ಜಿಲ್ಲಾಧ್ಯಕ್ಷರು ಪರಿಶೀಲನೆ ನಡೆಸಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ

    ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರೇ, ಆದರೆ ಅದರ ಮಧ್ಯೆ ಯಾರೋ ಬಂದು ಮೊಟ್ಟೆ ಎಸೆದಿರುವುದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಯಾವ ಬಿಜೆಪಿ ಕಾರ್ಯಕರ್ತರು ಹಾಗೇ ಮಾಡುವುದಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಶಾಸಕ ಅಪ್ಪಚ್ಚು ರಂಜನ್ ಆಪ್ತ ಹಾಗೂ ಬಿಜೆಪಿ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದನು. ಈ ಪ್ರಕರಣ ಎಕ್ಸ್‍ಕ್ಲೂಸಿವ್ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ಮಡಿಕೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಶಾಸಕ ಅಪ್ಪಚ್ಚು ರಂಜನ್ ಆಪ್ತ ಎಂದು ತಿಳಿದುಬಂದಿದೆ.

    ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದನು. ಈ ಪ್ರಕರಣ ಎಕ್ಸ್‌ಕ್ಲೂಸಿವ್ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ಸಿಗರೇ – ಅಪ್ಪಚ್ಚು ರಂಜನ್

    ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯುತ್ತಿದ್ದಂತೆಯೇ ಹಲವಾರು ಪ್ರತಿಭಟನೆಕಾರರನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್ ಸ್ಥಳದಲ್ಲಿಯೇ ಬಂಧಿಸಿದ್ದರು. ಆದರೆ ಅಂದೇ ರಾತ್ರಿ ಜಾಮೀನು ನೀಡಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಿದ್ದರು. ಅಲ್ಲದೇ ಕಾಂಗ್ರೆಸ್ ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪ ಹೊರಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಮೊಟ್ಟೆ ಎಸೆದವನು ಕಾಂಗ್ರೆಸ್ ಪಕ್ಷದವನೇ. ಆದರೆ ಸ್ಥಳದಿಂದ ಆತ ಪರಾರಿಯಾಗಿದ್ದ ಎಂದು ಆರೋಪಿಸಿದ್ದರು.

    ಇದೀಗ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಸಂಪತ್ ಎಂಬ ಸತ್ಯ ಬಯಲಾಗಿದ್ದು, ಸಂಪತ್ ಹಾಗೂ ಅಪ್ಪಚ್ಚು ರಂಜನ್ ಜೊತೆಗೆ ಇರುವ ಫೋಟೋಗಳು ವೈರಲ್ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸಂಪತ್ ಸೋಮವಾರಪೇಟೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದನು. ನಂತರ ಗುತ್ತಿಗೆ ಕೆಲಸಗಳಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದನು. ಈ ಹಿಂದೆ ಸಂಪತ್ತು ಕಾಂಗ್ರೆಸ್‌ನಲ್ಲಿದ್ದ ಫೋಟೋಗಳು ಕೂಡ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ

    ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು. ಅಲ್ಲದೇ ಇದೇ ವೇಳೆ ವ್ಯಕ್ತಿಯೊಬ್ಬ ಕಾರಿಗೆ ಮೊಟ್ಟೆ ಎಸೆದಿದ್ದನು. ಈ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ವಾಮನ ಸಿನಿಮಾಗೆ ಎಂಟ್ರಿ ಕೊಟ್ಟ ಸಂಪತ್: ಮೂರು ಶೇಡ್ ಪಾತ್ರದಲ್ಲಿ ಖಳನಟ

    ನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗ್ಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇದೀಗ ವಾಮನ ಬಳಗಕ್ಕೆ ಮತ್ತೊಬ್ಬ ಸದಸ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟ, ಖಳನಾಯಕನ ಪಾತ್ರಧಾರಿ ಸಂಪತ್ ವಾಮನ ತಂಡ ಸೇರಿಕೊಂಡಿದ್ದಾರೆ.

    ವಾಮನ ಪಾತ್ರದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇಡೀ ಮಾಫಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಕ್ರೂರಿಯಾಗಿ ಬದುಕುವ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಶೇಡ್ ನಲ್ಲಿ ಸಂಪತ್ ಅಬ್ಬರಿ ಬೊಬ್ಬಿರಿಯಲಿದ್ದು, ಅವರ ಪಾತ್ರಕ್ಕಾಗಿಯೇ ಪ್ರತ್ತೇಕ್ಷವಾಗಿ ಕಾಸ್ಟ್ಯೂಮ್ ಡಿಸೈನ್ ಎನ್ನುತ್ತಾರೆ ನಿರ್ದೇಶಕ ಶಂಕರ್. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರನಾಗಿ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್ ಎಸ್ ವಾಮನ ಸಿನಿಮಾ ಮೂಲಕ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿದ್ದು, ಶಂಕರ್ ಕನಸಿಗೆ ಫ್ಯಾಷನೇಟೇಡ್ ಪ್ರೊಡ್ಯೂಸರ್ ಚೇತನ್ ಗೌಡ ಸಾಥ್ ಕೊಟ್ಟಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್ ಆಕ್ಷನ್ ಎಂಟರ್ಟೇನರ್ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ಜೋಡಿಯಾಗಿ ರಚನಾ ರೈ ನಟಿಸ್ತಿದ್ದು, ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಃ ಸಂಕಲನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸಸಿನಿಮಾಕ್ಕಿದೆ.

    ಲೈವ್ ಲೋಕೇಷನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ಸ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ವಾಮನ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಚೇತನ್ ಗೌಡ, ದೊಡ್ಡ ಮಟ್ಟದ ಸಿನಿಮಾ ಮಾಡುವ ಆಸಕ್ತಿ-ಶಕ್ತಿ ಎರಡು ಅವರಲಿದೆ ಎನ್ನುತ್ತಾರೆ ನಿರ್ದೇಶಕ ಶಂಕರ್.