Tag: ಸಂಧಾನ ಸಭೆ

  • ಸುದೀಪ್-ಕುಮಾರ್ ಸಂಧಾನ ಸಭೆ ನಡೆಯೋದು ಅನುಮಾನ

    ಸುದೀಪ್-ಕುಮಾರ್ ಸಂಧಾನ ಸಭೆ ನಡೆಯೋದು ಅನುಮಾನ

    ಅಂದುಕೊಂಡಂತೆ ಆಗಿದ್ದರೆ ರವಿವಾರವೇ ಕಿಚ್ಚ ಸುದೀಪ್ (Kiccha Sudeep) ಮತ್ತು ನಿರ್ಮಾಪಕ ಎನ್.ಕುಮಾರ್ (N. Kumar) ನಡುವಿನ ಗಲಾಟೆಗೆ ಅಂತ್ಯ ಸಿಗಬೇಕಿತ್ತು. ಆದರೆ, ರವಿವಾರವೂ ಸಂಧಾನ ಸಭೆ ನಡೆದಿಲ್ಲ. ಇಂದು ಕೂಡ ನಡೆಯುವುದು ಬಹುತೇಕ ಅನುಮಾನ ಎನ್ನುವ ಮಾಹಿತಿ ಸಿಕ್ಕಿದೆ. ರವಿಚಂದ್ರನ್ (Ravichandran) ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಶಿವರಾಜ್ ಕುಮಾರ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಇಂದು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

    ಬಲ್ಲ ಮೂಲಗಳು ಮಾಹಿತಿಯಂತೆ ಬುಧವಾರ ಅಥವಾ ಗುರುವಾರ ಸಭೆ ನಡೆಯುವ ಸಾಧ್ಯತೆ ಇದೆ. ಹಾಗಂತ ಸ್ವತಃ ರವಿಚಂದ್ರನ್ ಅವರೇ ಸುದೀಪ್ ಮತ್ತು ಕುಮಾರ್ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಚಿತ್ರರಂಗದ ಸಮನಸ್ಕರರು ಸೇರಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಲಿದ್ದಾರಂತೆ.

    ಮೊನ್ನೆಯಷ್ಟೇ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ ಎಂದು ಹೇಳಲಾಗುತ್ತಿದೆ. ಸುದೀಪ್, ಕುಮಾರ್, ರಾಕ್ ಲೈನ್ ವೆಂಕಟೇಶ್, ಭಾ.ಮಾ ಹರೀಶ್, ಉಮೇಶ್ ಬಣಕಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಮೊನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂದ್ದಾರೆ.

    ಎನ್.ಕುಮಾರ್ ಈ ಹಿಂದೆ ಪ್ರತ್ಯೇಕವಾಗಿ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಸುದೀಪ್ ಮತ್ತು ತಮ್ಮ ನಡುವಿನ ಮನಸ್ತಾಪವನ್ನು ಬಗೆ ಹರಿಸುವಂತೆ ವಿನಂತಿಸಿಕೊಂಡಿದ್ದರು. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಈ ನಡುವೆ ಕುಮಾರ್ ವಿರುದ್ಧ ಸುದೀಪ್ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ತಾವು ಯಾವುದೇ ಸಂಧಾನಕ್ಕೆ ಬರುವುದಿಲ್ಲ ಕೋರ್ಟ್ ನಲ್ಲೇ ನ್ಯಾಯ ಸಿಗಲಿ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಈ ಮಾತಿನ ಬೆನ್ನಲ್ಲೇ ಕುಮಾರ್ ವಾಣಿಜ್ಯ ಮಂಡಳಿಯ ಮುಂದೆ ಧರಣೆಗೆ ಕೂತಿದ್ದರು.

     

    ರವಿಚಂದ್ರನ್ ಅವರ ಮಾತಿನಂತೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಕುಮಾರ್, ಆನಂತರ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. ಇದೀಗ ರವಿಚಂದ್ರನ್ ಇಬ್ಬರನ್ನೂ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಸಭೆಗಳ ನಂತರ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಧಾನ ಸಭೆ ನಡೆಸಿದ್ದಾರೆ ಅಂದ್ರೆ ಅಲ್ಲಿ ಏನೋ ನಡೆದಿದೆ: ಡಿಕೆಶಿ

    ಸಂಧಾನ ಸಭೆ ನಡೆಸಿದ್ದಾರೆ ಅಂದ್ರೆ ಅಲ್ಲಿ ಏನೋ ನಡೆದಿದೆ: ಡಿಕೆಶಿ

    – ಜಗ್ಗೇಶ್, ಕೋಮಲ್ ಬಗ್ಗೆ ಮಾತಾಡಲ್ಲ

    ಬೆಂಗಳೂರು: ಸ್ವೆಟರ್ ಹಗರಣದಲ್ಲಿ ಹೆಸರು ಕೇಳಿಬರುತ್ತಿರುವ ಜಗ್ಗೇಶ್ ಅಥವಾ ಕೋಮಲ್ ಬಗ್ಗೆ ಮಾತನಾಡಲ್ಲ. ಅವರು ಇನ್ವಾಲ್ ಆಗಿದಾರೋ ಇಲ್ವೋ ಗೊತ್ತಿಲ್ಲ. ಅದು ಅವರ ವೈಯುಕ್ತಿಕ ವಿಚಾರ. ಆದರೆ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅಲ್ಲಿ ಏನೋ ನಡೆದಿದೆ, ಏನೋ ಫೈಲೂರ್ ಆಗಿದೆ ಅಂತ ಅರ್ಥ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಸ್ವೆಟರ್ ಹಗರಣದಲ್ಲಿ ಸರ್ಕಾರ ಮತ್ತು ಒಂದು ಕಾರ್ಪೊರೇಷನ್ ಏನು ಮಾಡಿದೆ? ಸ್ವೆಟರ್ ಕೊಡೋದು ಸಂತೋಷ, ಟೆಂಡರ್ ಕರೆದಿದ್ದು ಸಂತೋಷ, ದುಡ್ಡು ಕೊಟ್ಟಿದ್ದು ಸಂತೋಷ. ಆದರೆ ಯಾರಿಗೆ ಸ್ವೆಟರ್ ಕೊಟ್ಟಿದ್ದಾರೆ? ಸ್ವೆಟರ್ ಎಲ್ಲಿದೆ? ಶಾಲೆ ಎಲ್ಲಿ ಆರಂಭವಾಗಿತ್ತು? ಇದಕ್ಕೆ ಕಾರ್ಪೊರೇಷನ್, ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿಗಳು ಇದಕ್ಕೆ ಜವಬ್ದಾರಿ. ಸಂಧಾನ ಸಭೆ ಯಾಕೆ ನಡೆಸುತ್ತಾರೆ. ಈ ಸಭೆಗೆ ಕಮೀಷನರ್ ಹೋಗಬಾರದು. ಸಂಧಾನ ಸಭೆ ನಡೆಸುತ್ತಿದ್ದಾರೆ ಎಂದರೆ ಏನೋ ಹೆಚ್ಚುಕಮ್ಮಿ ಆಗಿದೆ ಅಂತ ಅರ್ಥ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ

    ಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಯಾರೇ ಹೇಳಿಕೆ ಕೊಟ್ಟರು ನಮ್ಮ ಕಾರ್ಯಕರ್ತರು ಹೋರಾಟ ಮಾಡುತ್ತಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಎಷ್ಟು ಬೇಕಾದರು ಕೇಸ್ ಹಾಕಲಿ ಇದಕ್ಕೆಲ್ಲಾ ಹೆದರಲ್ಲ ಮುಂದೆಯು ಹೋರಾಟ ಮಾಡುತ್ತೇವೆ ಎಂದು ಗುಡುಗಿದರು. ಇದನ್ನೂ ಓದಿ: 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್

  • ದೇವೇಗೌಡರ ಸಮ್ಮುಖದಲ್ಲಿ ಎಚ್‍ಡಿಕೆಗೆ ಸ್ವಪಕ್ಷೀಯರಿಂದಲೇ ಕ್ಲಾಸ್

    ದೇವೇಗೌಡರ ಸಮ್ಮುಖದಲ್ಲಿ ಎಚ್‍ಡಿಕೆಗೆ ಸ್ವಪಕ್ಷೀಯರಿಂದಲೇ ಕ್ಲಾಸ್

    – ನಾವು ಪಕ್ಷಕ್ಕಾಗಿ ದುಡಿದಿಲ್ಲವೇ?
    – ಹೊರಟ್ಟಿ ನೇತೃತ್ವದ  ಸಭೆಯಲ್ಲಿ ತರಾಟೆ

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಪಕ್ಷೀಯರೇ ತರಾಟೆ ತಗೆದುಕೊಂಡಿದ್ದಾರೆ.

    ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ, ಕಾಂತರಾಜು, ಅಪ್ಪಾಜಿಗೌಡ, ಮರಿ ತಿಬ್ಬೇಗೌಡ, ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕರು ಶಾಸಕರ ಭವನದಿಂದ ಒಟ್ಟಾಗಿ ಆಗಮಿಸಿದ್ದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ದೇವೇಗೌಡರ ನಿವಾಸಕ್ಕೆ ಬಂದಿದ್ದರು. ಆದರೆ ಸಭೆಗೆ 17 ಮೇಲ್ಮನೆಯ ಜೆಡಿಎಸ್ ಸದಸ್ಯರ ಪೈಕಿ ರಮೇಶ್ ಗೌಡ ಮತ್ತು ಬಿ.ಎಂ.ಫಾರೂಕ್ ಗೈರಾಗಿದ್ದರು.

    ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ಹೊರ ಹಾಕಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ಇದ್ದಾಗಲೂ ಸರಿಯಾಗಿ ನಡೆಸಿಕೊಂಡಿಲ್ಲ. ಸರ್ಕಾರ ಹೋದ ಮೇಲೂ ಸರಿಯಾಗಿ ನಡೆಸಿಕೊಂಡಿಲ್ಲ. ಕಳೆದ ವಾರ ನಡೆದ ಮಾಧ್ಯಮ ಸಂವಾದದಲ್ಲಿ, ಅವರ ರೋಗ ಏನು ಅಂತ ಹೇಳಿಕೊಂಡರೆ ತಾನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯ ಅಂತ ಕಿಚಾಯಿಸಿದ್ದರು. ಇಂತಹ ಹೇಳಿಕೆ ಕೊಟ್ಟರೆ ಹೇಗೆ ಎಂದು ಗುಡುಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನೀವು ಸಮಾಧಾನ ಮಾಡುತ್ತೀರಾ. ಎಚ್.ಡಿ.ಕುಮಾರಸ್ವಾಮಿ ಬೈತಾರೆ. ಹೀಗಿದ್ದರೆ ನಾವು ಹೇಗೆ ನಿಮ್ಮ ಜೊತೆ ಇರುವುದು ಎಂದು ಪರಿಷತ್ ಸದಸ್ಯರು ದೇವೇಗೌಡ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಗಮ ಮಂಡಳಿ ಸ್ಥಾನ ಕೇಳಿದ್ದೇವು. ಆದರೆ ಅವರು ಕೊಡಲಿಲ್ಲ. ವರ್ಗಾವಣೆಗಾಗಿ ನಾವು ಮಾಡಿದ್ದ ಶಿಫಾರಸುಗಳನ್ನ ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಈ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿ ಅವರು ನಮಗೆ ಸಮಯನ್ನೇ ಕೊಡಲಿಲ್ಲ. ನಾವು ಪಕ್ಷಕ್ಕಾಗಿ ದುಡಿದಿಲ್ಲವೇ? ಸರ್ಕಾರ ಇದ್ದಾಗ ನಮ್ಮನ್ನ ದೂರ ಇಟ್ಟರು, ನಮ್ಮ ಸಮಸ್ಯೆಯನ್ನೆ ಕೇಳಿಲ್ಲ. ಕಾಂಗ್ರೆಸ್ ಸಚಿವರು ನಮ್ಮ ಕೆಲಸಗಳನ್ನ ಮಾಡಿಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದರೂ ಏನು ಪ್ರಯೋಜನವಾಗಲಿಲ್ಲ. ಹೀಗಿದ್ದರೆ ನಾವು ಹೇಗೆ ಪಕ್ಷದ ಜೊತೆ ಇರಬೇಕು ಹೇಳಿ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಹುದ್ದೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ವಿಧಾನ ಪರಿಷತ್ ಸದಸ್ಯರ ತರಾಟೆಯಿಂದ ಹೆಚ್ಚೆತ್ತುಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು, ನನ್ನಿಂದ ತಪ್ಪು ಆಗಿದ್ದರೆ, ನಿಮ್ಮ ಮನಸ್ಸು ನೊಂದಿದ್ದರೆ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿದ್ದಾಗ 24 ಗಂಟೆಯೂ ಒತ್ತಡದಲ್ಲಿ ಇರುತ್ತಿದ್ದೆ. ಶಾಸಕರು, ಸಚಿವರು ಮತ್ತು ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಮ್ಮನ್ನು ಕಡೆಗಣನೆ ಮಾಡಿದ್ದರೆ ಇದಕ್ಕೆ ಕ್ಷಮೆ ಕೋರುತ್ತೇನೆ. ಮುಂದೆ ಎಚ್.ಡಿ.ದೇವೇಗೌಡರ ಅಣತಿಯಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಅಂತ ಕೇಳಿದರು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಈ ವೇಳೆ ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಕೈ ಮುಗಿದು ಕೇಳಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಣ್ಣ ಮನಸ್ತಾಪದಿಂದ ನಾವು ಪ್ರಾದೇಶಿಕ ಪಕ್ಷವನ್ನು ಹಾಳು ಮಾಡುವುದು ಬೇಡ. ನಮ್ಮನ್ನು ನಂಬಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಆಗದಂತೆ ನಾನು ಭಾಷೆ ಕೊಡುತ್ತೇನೆ ಎಂದು ಸಭೆಯಲ್ಲಿ ಭಾವುಕರಾದರು.

    ಎಚ್.ಡಿ.ದೇವೇಗೌಡ ಅವರ ಮಾತಿಗೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಕ್ಷಮೆಗೆ ಬೆಲೆ ನೀಡಿ ಪಕ್ಷದ ಸಂಘಟನೆಗೆ ಮುಂದಾಗುತ್ತೇವೆ ಎಂದು ವಿಧಾನಸಭೆಯ ಜೆಡಿಎಸ್ ಸದಸ್ಯರು ಪ್ರಮಾಣ ಮಾಡಿದರು. ಈ ಮೂಲಕ ಸಂಧಾನ ಸಭೆ ಸಫಲವಾಗಿದೆ.

  • ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

    ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

    ಬೆಂಗಳೂರು: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಇಂದು ಒಂದೆಡೆ ಲಾರಿ ಮಾಲೀಕರು ವಿಮಾ ಪ್ರಾಧಿಕಾರದ ಜೊತೆ ಸಂಧಾನಕ್ಕೆ ಕೂತ್ರೆ, ಇನ್ನೊಂದಡೆ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊನೆಗೂ ಲಾರಿ ಮಾಲೀಕರ ಬೇಡಿಕೆಗೆ ಆಸ್ತು ಎಂದಿದ್ದಾರೆ.

    ಹೈದರಾಬಾದಿನಲ್ಲಿ ಐಎಆರ್‍ಡಿಎ ಜೊತೆ ಶನಿವಾರದಂದು ಸಂಧಾನ ವಿಫಲವಾಗಿತ್ತು. ಇದ್ರಿಂದ ಲಾರಿ ಮಾಲೀಕರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದಾಗ ಇಂದು ಮತ್ತೆ ಸಭೆ ಕರೆದು ಶೇ 50.ರಷ್ಟಿದ್ದ ವಿಮೆ ಪ್ರೀಮಿಯಮ್ ದರವನ್ನು ಶೇ 23. ರಷ್ಟು ಇಳಿಕೆ ಮಾಡಲು ನಿರ್ಧರಿಸಲಾಗಿದೆ.

    ಇನ್ನೊಂದೆಡೆ ಶಾಂತಿನಗರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ರಾಮಲಿಂಗಾ ರೆಡ್ಡಿ ಟೋಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಜೊತೆ ಭೇಟಿಗೆ ಅವಕಾಶ ಮಾಡಿಕೊಡೋದಾಗಿ ಬೇಡಿಕೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದ್ರು. ಅಲ್ಲದೇ ಆರ್‍ಟಿಓ ದಂಡದ ಬಗ್ಗೆಯೂ ಚರ್ಚೆ ಮಾಡುವ ಭರವಸೆ ನೀಡಿದ್ರು. ಇದ್ರಿಂದ ಲಾರಿಮಾಲೀಕರು ಮುಷ್ಕರ ಕೈಬಿಟ್ಟಿದ್ದಾರೆ.