Tag: ಸಂದೀಪ್ ಸಿಂಗ್

  • ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ

    ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ

    ಟಿಪ್ಪು ಸುಲ್ತಾನ್ (Tippu Sultan) ಅವರ ಜೀವನಾಧಾರಿತ ಸಿನಿಮಾ ಮಾಡುವ ಬಗ್ಗೆ ಬಾಲಿವುಡ್ ನಿರ್ಮಾಪಕ ಸಂದೀಪ್ ಸಿಂಗ್ (Sandeep Singh) ಅವರು ಅನೌನ್ಸ್ ಮಾಡಿದ್ದರು. ಈಗ ಟಿಪ್ಪು ಕಥೆ ಹೇಳೋದಕ್ಕೆ ಅವರು ಹಿಂದೆ ಸರಿದಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿನಿಮಾ ಅರ್ಧಕ್ಕೆ ಕೈ ಬಿಟ್ಟಿರುವ ಬಗ್ಗೆ ನಿರ್ಮಾಪಕ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಲೋಕಸಭೆ ಚುನಾವಣಾ ಕಣಕ್ಕೆ ನಟ ಕಮಲ್ ಹಾಸನ್

    ಬಾಲಿವುಡ್‌ನಲ್ಲಿ(Bollywood) ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸಂಜು, ಎಂ.ಎಸ್ ಧೋನಿ, ಗಾಂಧಿ, ತಲೈವಿ ಹೀಗೆ ಸಾಕಷ್ಟು ಸಿನಿಮಾಗಳು ಜೀವನ ಆಧರಿಸಿದ ಸಿನಿಮಾಗಳು ಬಂದಿದೆ. ಅದರಂತೆಯೇ ಟಿಪ್ಪು ಸುಲ್ತಾನ್ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಮಾಡಿದ್ದರು. ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸಿನಿಮಾವನ್ನು ನಿರ್ಮಾಪಕ ಕೈಬಿಟ್ಟಿದ್ದಾರೆ. ಯಾವುದೇ ಧರ್ಮದವರ ಭಾವನೆಗೆ ನೋವು ಉಂಟುಮಾಡುವ ಉದ್ದೇಶ ತಮಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಲೋಕಸಭೆ ಚುನಾವಣಾ ಕಣಕ್ಕೆ ನಟ ಕಮಲ್ ಹಾಸನ್

    ನನಗೆ, ನನ್ನ ಕುಟುಂಬದವರಿಗೆ, ನನ್ನ ಸ್ನೇಹಿತರಿಗೆ ಬೆದರಿಕೆ ಹಾಕುವುದನ್ನು ಮತ್ತು ನಿಂದಿಸುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರದ್ದಾದರೂ ಧಾರ್ಮಿಕ ಭಾವನೆಗೆ ನಾನು ಧಕ್ಕೆ ತಂದಿದ್ದರೆ ಕ್ಷಮೆ ಕೇಳುತ್ತೇನೆ. ಆ ಉದ್ದೇಶ ನನಗೆ ಇಲ್ಲ. ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ ಎಂದು ಸಂದೀಪ್ ಸಿಂಗ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಟಿಪ್ಪು ಸುಲ್ತಾನ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂಬುದು ನಿರ್ಮಾಪಕರ ಪ್ಲ್ಯಾನ್ ಆಗಿತ್ತು. ಬಹುಭಾಷೆಗಳಲ್ಲಿ ಸಿನಿಮಾ ಬರುವ ಬಗ್ಗೆ ನಿರೀಕ್ಷೆಯಿತ್ತು. ಈ ಮೇ 4ರಂದು ಈ ಎಲ್ಲ ಭಾಷೆಗಳಲ್ಲಿ ಟಿಪ್ಪು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆಗಲೇ ಈ ಸಿನಿಮಾದ ಬಗ್ಗೆ ವಿರೋಧ ಕೇಳಿಬಂದಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ಬಾಲಿವುಡ್ (Bollywood) ಕ್ವೀನ್  ಕಂಗನಾ ರಣಾವತ್ (Kangana Ranaut) ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ, ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದರೆ ಮತ್ತೊಂದು ಚಿತ್ರದಲ್ಲಿ ಕೇವಲ ನಟಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ನಡುವೆ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.

    ಎಮರ್ಜೆನ್ಸಿ (Emergency) ಹೆಸರಿನ ಸಿನಿಮಾಗೆ ಕಂಗನಾ ಅವರೇ ನಿರ್ದೇಶಕಿ. ನಿರ್ಮಾಣದ ಜೊತೆಗೆ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಜೊತೆಗೆ ತೆಲುಗಿನ ಚಂದ್ರಮುಖಿ 2 (Chandramukhi 2) ಚಿತ್ರದಲ್ಲೂ ಅವರು ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಎಮರ್ಜೆನ್ಸಿ ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಲಿರುವ, ಸಂದೀಪ್ ಸಿಂಗ್ (Sandeep Singh) ನಿರ್ಮಾಣದ ಹೊಸ ಸಿನಿಮಾದಲ್ಲಿ ಅವರು ನಟಿಸಲಿದ್ದಾರಂತೆ. ಈ ಮಾಹಿತಿಯನ್ನು ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತನ್ನ ಅವಳಿ ಮಕ್ಕಳಿಗೆ ‘ಪಠಾಣ್’ ಮತ್ತು ‘ಜವಾನ್’ ಹೆಸರಿಡುವೆ ಎಂದ ಶಾರುಖ್ ಅಭಿಮಾನಿ

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

    ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಜವಾಬ್ದಾರಿ ಜಾಸ್ತಿ ಮಾಡಿಕೊಂಡಿದ್ದಾರೆ. ಮೂರು ಜವಾಬ್ದಾರಿ ಹೊತ್ತುಕೊಂಡಿರುವ ಕಾರಣಕ್ಕಾಗಿ ಅವರು ತಮ್ಮ ಆಸ್ತಿಯನ್ನು ಅಡವಿಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರವನ್ನು ನಿರ್ವಹಿಸಿದ್ದು, ಕೆಲ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಬಿಗ್ ಬಾಸ್ ಮಹಿಳಾ ಸ್ಪರ್ಧಿ ಗಂಭೀರ ಆರೋಪ

    ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಬಿಗ್ ಬಾಸ್ ಮಹಿಳಾ ಸ್ಪರ್ಧಿ ಗಂಭೀರ ಆರೋಪ

    ಬಿಗ್ ಬಾಸ್ (Bigg Boss) ಹಿಂದಿ ಸೀಸನ್ 16ರ ಟಾಪ್ ಕಂಟೆಸ್ಟಂಟ್ ಅರ್ಚನಾ ಗೌತಮ್ (Archana Gautam) , ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪಿಎ ಸಂದೀಪ್ ಸಿಂಗ್ (Sandeep Singh) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅರ್ಚನಾ ಗೌತಮ್, ತಮ್ಮ ಪಕ್ಷದವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಪ್ರಿಯಾಂಕಾ ಅವರ ಪಿಎ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿದೆ.

    ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಿಸಿದಂತೆ ಅರ್ಚನಾಗೆ ಭೇಟಿಯಾಗುವಂತೆ ಪ್ರಿಯಾಂಕಾ ಗಾಂಧಿ ಆಹ್ವಾನ ನೀಡಿದ್ದರಂತೆ. ಈ ಆಹ್ವಾನದ ಹಿನ್ನೆಲೆಯಲ್ಲಿ ಅರ್ಚನಾ ರಾಯಪುರಕ್ಕೆ ತೆರಳಿದ್ದಾರೆ. ಪ್ರಿಯಾಂಕಾ ಅವರನ್ನು ಭೇಟಿ ಮಾಡಿಸಲು ಅವರ ಪಿಎಗೆ ಅರ್ಚನಾ ಕೇಳಿಕೊಂಡರಂತೆ. ಅವಕಾಶ ನೀಡಲಿಲ್ಲ ಎಂದು ಅರ್ಚನಾ ಅಸಮಾಧಾನಗೊಂಡಿದ್ದರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಪ್ರಿಯಾಂಕಾ ಪಿಎ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರಂತೆ. ಅಲ್ಲದೇ, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅರ್ಚನಾ. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ಈ ಕುರಿತು ಅರ್ಚನಾ ತಂದೆ ಗೌತಮ್ ಬುದ್ಧ ದೂರು ನೀಡಿದ್ದು, ಆ ದೂರಿನಲ್ಲಿ ‘ನನ್ನ ಮಗಳ ವಿರುದ್ಧ ಜಾತಿನಿಂದನೆ ಮಾಡಲಾಗಿದೆ. ಕೆಟ್ಟ ಶಬ್ದಗಳಲ್ಲೂ ಸಂದೀಪ್ ಬೈದಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತಾಗಿ ಮೀರತ್ ನಲ್ಲಿ ದೂರು ದಾಖಲಿಸಿದ್ದೇವೆ’ ಅಂದಿದ್ದಾರೆ. ದೂರನ್ನು ಸ್ವೀಕರಿಸಿರುವ ಎಸ್‍.ಪಿ ಪಿಯುಷ್ ಸಿಂಗ್ ಎಫ್.ಐ.ಆರ್ ದಾಖಲಿಸಿದ್ದಾರೆ.

    ಅರ್ಚನಾ ಗೌತಮ್ ಒಬ್ಬ ಪ್ರತಿಷ್ಠಿತ ಮಾಡಲ್. ಈಗಾಗಲೇ ಮಿಸ್ ಬಿಕಿನಿ ಇಂಡಿಯಾ, ಮಿಸ್ ಉತ್ತರ ಪ್ರದೇಶ ಕಿರೀಟ ತೊಟ್ಟವರು. ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 16ರಲ್ಲಿ ಟಾಪ್ ಲಿಸ್ಟ್ ನಲ್ಲೂ ಕಾಣಿಸಿಕೊಂಡಿದ್ದರು. ಮೂರನೇ ರನ್ನರ್ ಅಪ್ ಆದವರು. ಅಲ್ಲದೇ, ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಸ್ಪರ್ಧೆ ಮಾಡಿದ್ದರು.

  • ಲೈಂಗಿಕ ಕಿರುಕುಳ ಕೇಸ್‌ ದಾಖಲು- ಹರಿಯಾಣದ ಕ್ರೀಡಾ ಸಚಿವ ಸ್ಥಾನಕ್ಕೆ ಸಂದೀಪ್ ಸಿಂಗ್ ರಾಜೀನಾಮೆ

    ಲೈಂಗಿಕ ಕಿರುಕುಳ ಕೇಸ್‌ ದಾಖಲು- ಹರಿಯಾಣದ ಕ್ರೀಡಾ ಸಚಿವ ಸ್ಥಾನಕ್ಕೆ ಸಂದೀಪ್ ಸಿಂಗ್ ರಾಜೀನಾಮೆ

    ಚಂಡೀಗಢ: ಜ್ಯೂನಿಯರ್ ಅಥ್ಲೆಟಿಕ್ಸ್ ಕೋಚ್ ನೀಡಿದ ದೂರಿನ ಆಧಾರದ ಮೇಲೆ ಹರಿಯಾಣದ (Haryana) ಕ್ರೀಡಾ ಸಚಿವ ಸಂದೀಪ್ ಸಿಂಗ್ (Sandeep Singh) ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕೊಲೆ ಬೆದರಿಕೆ ಪ್ರಕರಣವನ್ನು ಚಂಡೀಗಢ ಪೊಲೀಸರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡಿದರು.

    ಈ ಬಗ್ಗೆ ಮಾತನಾಡಿದ ಅವರು, ತಮ್ಮ ಹೆಸರನ್ನು ಹಾಳು ಮಾಡುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ ಹೊರಿಸಲಾಗಿರುವ ಸುಳ್ಳು ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಈ ತನಿಖೆಯ ವರದಿ ಬರುವವರೆಗೆ ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸುತ್ತೇನೆ ಎಂದು ತಿಳಿಸಿದರು.

    ಈ ಮೊದಲು ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‍ಎಲ್‍ಡಿ) ಕಚೇರಿಯಲ್ಲಿ ಸಂತ್ರಸ್ತೆ ಪತ್ರಿಕಾಗೋಷ್ಠಿ ನಡೆಸಿ, ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಸಂದೀಪ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದರು.

    ಕಳೆದ ವರ್ಷ ಫೆಬ್ರವರಿಯಿಂದ ನವೆಂಬರ್‌ವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಅಶ್ಲೀಲ ಮೆಸೇಜ್‍ಗಳನ್ನು ಕಳುಹಿಸುವ ಮೂಲಕ ಸಚಿವರು ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರು ತನ್ನನ್ನು ಅನುಚಿತವಾಗಿ ಮುಟ್ಟಿದ್ದರು. ನಿರಂತರ ಕಿರುಕುಳದಿಂದಾಗಿ ಸಾಮಾಜಿಕ ಜಾಲತಾಣವನ್ನು ತೊರೆಯಬೇಕಾಯಿತು ಎಂದು ಆರೋಪಿಸಿದರು. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ

    ದೂರು ನೀಡಿರುವ ಮಹಿಳೆ, ಸಂದೀಪ್ ಸಿಂಗ್ ತನ್ನನ್ನು ಮೊದಲಿಗೆ ಜಿಮ್‍ವೊಂದರಲ್ಲಿ ನೋಡಿದ್ದರು ಹಾಗೂ ಬಳಿಕ ಇನ್‍ಸ್ಟಾಗ್ರಾಮ್‍ನಲ್ಲಿ ಸಂಪರ್ಕಿಸಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲದೇ ಸಚಿವರು ಭೇಟಿಯಾಗುವಂತೆ ಆಗಾಗ್ಗೆ ಕೇಳುತ್ತಿದ್ದರು. ನನಗೆ ಇನ್‍ಸ್ಟಾಗ್ರಾಮ್‍ನಲ್ಲಿ ಸಂದೇಶ ಕಳುಹಿಸಿದ್ದ ಅವರು, ನನ್ನ ನ್ಯಾಷನಲ್ ಗೇಮ್ಸ್ ಸರ್ಟಿಫಿಕೇಟ್ ಬರಬೇಕಿದ್ದು, ಆ ಸಂಬಂಧ ಭೇಟಿ ಮಾಡಬೇಕು ಎಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ವೇಳೆ ಕಿರಿಕ್ – ಸ್ನೇಹಿತರಿಂದಲೇ ಯುವಕನ ಕೊಲೆ

    Live Tv
    [brid partner=56869869 player=32851 video=960834 autoplay=true]

  • ‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲ್ಲುವುದಾಗಿ ನಿರ್ಮಾಪಕನಿಗೆ ಬೆದರಿಕೆ

    ‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲ್ಲುವುದಾಗಿ ನಿರ್ಮಾಪಕನಿಗೆ ಬೆದರಿಕೆ

    ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾಗಿ ಬಾಲಿವುಡ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ಮಾಣ ಮಾಡುತ್ತಿದ್ದು, ಅದ್ಧೂರಿಯಾಗಿಯೇ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ವೀರ ಸಾವರ್ಕರ್ ಸಿನಿಮಾ ಮಾಡಿದರೆ, ಕೊಲ್ಲುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರಂತೆ. ಈ ಕುರಿತು ಅವರು ಅಂಬೋಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    ಈಗಾಗಲೇ ಸಿನಿಮಾದ ಸಿದ್ಧತೆ ನಡೆಸಿದ್ದೇವೆ. ನಾಯಕರ ಆಯ್ಕೆಯಾಗಿದೆ. ವೀರ ಸಾವರ್ಕರ್ ಹುಟ್ಟು ಹಬ್ಬದ ದಿನದಂದು ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನೇನು ಶೂಟಿಂಗ್ ಗೆ ಹೊರಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ತಮಗೆ ರಕ್ಷಣೆ ಬೇಕೆಂದು ಸಂದೀಪ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತಗೆದುಕೊಂಡಿದ್ದಾರಂತೆ.  ಇದನ್ನೂ ಓದಿ:ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಸಂದೀಪ್ ಸಿಂಗ್ ಅವರ ಫೇಸ್ ಬುಕ್ ನಲ್ಲಿ ಸಿಧು ಮೂಸೆ ವಾಲ ಹತ್ಯೆಯನ್ನು ನೆನಪಿಸಿಕೊಳ್ಳಿ. ಅದೇ ರೀತಿಯಲ್ಲೇ ನಿನ್ನನ್ನೂ ಕೊಲೆ ಮಾಡಲಾಗುವುದು. ಸ್ವಲ್ಪ ದಿನ ಕಾಯಿರಿ ಎಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರಂತೆ. ಇದು ಫೇಸ್ ಬುಕ್ ಮಸೇಜ್ ಮೂಲಕ ಬಂದ ಕೊಲೆ ಬೆದರಿಕೆ ಎಂದು ಸಿಂಗ್ ತಿಳಿಸಿದ್ದಾರೆ. ಈ ಪ್ರಕರಣವನ್ನೂ ಗಂಭೀರವಾಗಿ ಪೊಲೀಸ್ ಇಲಾಖೆ ತಗೆದುಕೊಂಡಿದ್ದು, ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಗಾಗಿ ಬಲೆ ಬೀಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    -ಗೆದ್ದ ಹಾಕಿ ಆಟಗಾರ ಸಂದೀಪ್ ಸಿಂಗ್

    ಚಂಡೀಗಢ: ಈ ಬಾರಿ ಬಿಜೆಪಿ ಹರ್ಯಾಣದಲ್ಲಿ ಮೂರು ಕ್ರೀಡಾಪಟುಗಳಿಗೆ ಬಿ ಫಾರಂ ನೀಡಿತ್ತು. ಕುಸ್ತಿಪಟುಗಳಾದ ಬಬಿತಾ ಪೋಗಾಟ್, ಯೋಗೇಶ್ವರ್ ದತ್ ಮತ್ತು ಹಾಕಿ ಆಟಗಾರ ಸಂದೀಪ್ ಸಿಂಗ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಬಿತಾ ಮತ್ತು ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಸೋಲಿನ ರುಚಿ ನೀಡಿದರು. ಇತ್ತ ಸಂದೀಪ್ ಸಿಂಗ್ ಗೆದ್ದು ಜಯದ ನಗೆ ಬೀರಿದ್ದಾರೆ.

    ಬದೌಡಾ ವಿಧಾನಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ದತ್ ಕಣದಲ್ಲಿದ್ದು, ಕಾಂಗ್ರೆಸ್‍ನ ಶ್ರೀಕೃಷ್ಣ ಹೂಡಾಗೆ ನೇರ ಪೈಪೋಟಿ ನೀಡಿದ್ದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತ ಬಂದ ಶ್ರೀಕೃಷ್ಣ ಗೆಲುವಿನ ಕೇಕೆ ಹಾಕಿದರು. 2014ರ ಚುನಾವಣೆಯಲ್ಲಿಯೂ ಶ್ರೀಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು.

    ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಬಿಜೆಪಿಯಿಂದ ಪೆಹೊವಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆರಂಭದಿಂದಲೂ ಕಾಂಗ್ರೆಸ್ ನ ಮನ್ದೀಪ್ ಸಿಂಗ್ ಗೆ ಟಕ್ಕರ್ ನೀಡುತ್ತಾ ಬಂದಿದ್ದರು.

    ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಬಬಿತಾ ಫೋಗಾಟ್ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಸೋಮ್‍ವೀರ್ ಸಂಗ್ವಾನ್ ವಿರುದ್ಧ ಬಬಿತಾ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋಮ್ ವೀರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಮಲ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

  • ತಾಯಿಯಿಂದ ಮೋದಿಗೆ ಜೈಕಾರ-ಮಗನಿಂದ ರಾಹುಲ್ ಪರ ಘೋಷಣೆ

    ತಾಯಿಯಿಂದ ಮೋದಿಗೆ ಜೈಕಾರ-ಮಗನಿಂದ ರಾಹುಲ್ ಪರ ಘೋಷಣೆ

    ಬಳ್ಳಾರಿ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಮುಖಾಮುಖಿಯಾಗುವುದು ಸಾಮಾನ್ಯ. ಒಂದು ವೇಳೆ ಎರಡು ಪಕ್ಷಗಳ ನಾಯಕರು ಮತ್ತು ಬೆಂಬಲಿಗರು ಮುಖಾಮುಖಿಯಾದಾಗ ಘೋಷಣೆ, ಜೈಕಾರಗಳು ಮತ್ತಷ್ಟು ಜೋರಾಗುತ್ತದೆ. ಬಳ್ಳಾರಿಯ ಕಣದಲ್ಲಿ ತಾಯಿ ಮೋದಿ ಪರ ಪ್ರಚಾರ ಮಾಡಿದ್ರೆ, ಪುತ್ರ ರಾಹುಲ್ ಗಾಂಧಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

    ಹೊಸಪೇಟೆಯ ಗಣಿ ಉದ್ಯಮಿಯಾಗಿರುವ ರಾಣಿ ಸಂಯುಕ್ತಾ ಸಿಂಗ್ ಬಿಜೆಪಿ ಪಕ್ಷದಲ್ಲಿದ್ದಾರೆ. ರಾಣಿ ಅವರ ಸಹೋದರನಾಗಿರುವ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಶಾಸಕರಾಗಿದ್ರೆ, ಇನ್ನೊಂದೆಡೆ ಆನಂದ್ ಸಿಂಗ್ ಸೋದರಳಿಯ ಸಂದೀಪ್ ಸಿಂಗ್ ಮಾವನೊಂದಿಗೆ ಕಾಂಗ್ರೆಸ್ ನಲ್ಲೆ ಗುರುತಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹೀಗಾಗಿ ತಾಯಿ-ಮಗ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡು ಸದ್ಯ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

    ಹೊಸಪೇಟೆ ನಗರದಲ್ಲಿ ಪ್ರಚಾರ ನಡೆಸುವ ವೇಳೆ ತಾಯಿ- ಮಗ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬಿಜೆಪಿ ಬೆಂಬಲಿಗರು ಒಂದೆಡೆ ಚೌಕಿದಾರ ಮೋದಿಗೆ ಜೈ ಅಂದ್ರೆ ಕಾಂಗ್ರೆಸ್ ನಲ್ಲಿರುವ ಸಂದೀಪ್ ಸಿಂಗ್ ಹಾಗೂ ಅವರ ಬೆಂಬಲಿಗರು ಚೌಕಿದಾರ ಚೋರ ಹೈ ಎಂದು ಘೋಷಣೆ ಕೂಗುತ್ತಾ ಕೆಲ ಕಾಲ ಶಕ್ತಿ ಪ್ರದರ್ಶನ ನಡೆಸಿದರು.

  • ಬ್ಯೂಟಿ ತಾಪ್ಸಿಯ `ಸೂರ್ಮಾ’ವತಾರ!

    ಬ್ಯೂಟಿ ತಾಪ್ಸಿಯ `ಸೂರ್ಮಾ’ವತಾರ!

    ಮುಂಬೈ: ‘ಸೂರ್ಮಾ’ – ಹಿಂದಿ ಚಿತ್ರ ನಿರ್ದೇಶಕ ಶಾದ್ ಆಲಿಯ ಪ್ರಥಮ ಜೀವಿತಗಾಥೆ ಆಧಾರಿತ ಚಿತ್ರ. ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದ ಸೂರ್ಮಾ ಚಿತ್ರ, ನಮ್ಮ ಖ್ಯಾತ ಹಾಕಿ ಆಟಗಾರ ಸಂದೀಪ್ ಸಿಂಗ್ ಕುರಿತ ಬಯೋಪಿಕ್ ಆಗಿ ಮೂಡಿದೆ. ಫ್ಲಿಕರ್ ಸಿಂಗ್ ಎಂದೇ ಪ್ರಸಿದ್ಧಿ ಪಡೆದ ಸಂದೀಪ್ ಹಾಕಿ ಅಂಗಳದಲ್ಲಿ ಗರಿಷ್ಠ ಮಟ್ಟದ (145 ಕಿಮೀ.) ಡ್ರ್ಯಾಗ್ ಫ್ಲಿಕಿಂಗ್ ಮಾಡಬಲ್ಲ ಕೆಲವೇ ಅಂತರಾಷ್ಟ್ರೀಯ ಹಾಕಿ ಪಟುಗಳಲ್ಲಿ ಒಬ್ಬರು.

    ಸೂರ್ಮಾ ಚಿತ್ರದ ನಾಯಕ ದಿಲ್ಜಿತ್ ದೊಸಾಂಜ್ ಹಾಗೂ ನಾಯಕಿ ತಾಪ್ಸಿ ಪನ್ನು ಹಾಗೂ ಅಂಗದ್ ಬೇಡಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಚಿತ್ರೀಕರಣದ ವೇಳೆ ಖುದ್ದು ಸಂದೀಪ್ ಸಿಂಗ್ ಹಾಗೂ ಸಹೋದರ ಬಿಕ್ರಮ್ ಜಿತ್ ಸಿಂಗ್ ಹಾಜರಿದ್ದು, ನಟ-ನಟಿಯರಿಗೆ ಹಾಕಿ ಕುರಿತು ಟಿಪ್ಸ್ ನೀಡಿದ್ದಾರೆ. 2018ರ ಉತ್ತರಾರ್ಧದಲ್ಲಿ ತಾಪ್ಸಿಯ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ತಾಪ್ಸಿ ಸೌತ್ ಸಿನಿಮಾದ ‘ಮೋಸ್ಟ್ ವಾಂಟೆಡ್’ ಹೀರೋಯಿನ್ ಆದರೂ ಅಚ್ಚರಿ ಇಲ್ಲ!

    ತಾಪ್ಸಿ ಸದ್ಯಕ್ಕೆ ಹಿಂದಿಯಲ್ಲಿ ಮುಲ್ಕ್, ತಡ್ಕಾ, ಬದ್ಲಾ, ಮನ್ ಮರ್ಜಿಯಾ ಚಿತ್ರಗಳಲ್ಲಿ ನಟಿಸಿದ್ದು, ತೆಲುಗಿನ ನೀವೆವರೋ, ತಮಿಳಿನ ಕಾನ್ ಚಿತ್ರಗಳು ಕೂಡ ಬಿಡುಗಡೆಗೆ ಸಿದ್ಧವಾಗುತ್ತಿವೆ. ಸೂರ್ಮಾದಲ್ಲಿ ತನ್ನ ಪಾತ್ರ ಬಹಳ ಚಾಲೆಂಜಿಂಗ್ ಆಗಿದ್ದು, ಬಾಕ್ಸಾಫೀಸಿನಲ್ಲಿ ಹಿಟ್ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾಳೆ ಬ್ಯೂಟಿ ತಾಪ್ಸಿ!