Tag: ಸಂದೀಪ್ ಶರ್ಮಾ

  • ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ

    ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ

    ರ್ನಾಟಕದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಕುರಿತಾಗಿ ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಪರ ಸಂಘಟನೆಗಳು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಅದ್ಭುತ ಆಡಳಿತಗಾರ ಎಂದು ಬಣ್ಣಿಸುತ್ತಿದ್ದರೆ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಟಿಪ್ಪುವನ್ನು ಮತಾಂಧ ಎಂದು ಬಿಂಬಿಸುತ್ತಿವೆ. ಈ ವಾದ ವಿವಾದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಸಮಯದಲ್ಲಿ ಟಿಪ್ಪು ಕುರಿತಾಗಿ ಸಿನಿಮಾವೊಂದು (Cinema) ಮೂಡಿ ಬರುತ್ತಿದೆ.

    ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ‘ಟಿಪ್ಪು’ ಎಂದೇ ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಮೋಷನ್ ಪೋಸ್ಟರ್ ವಿಡಿಯೋದಲ್ಲಿ ಹಲವಾರು ವಿಷಯಗಳನ್ನು ಹೇಳಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ‘8 ಸಾವಿರ ದೇವಾಲಯಗಳ ನಾಶ, 27 ಚರ್ಚ್‍ ಗಳ ಧ್ವಂಸ, 50 ಲಕ್ಷ ಹಿಂದೂಗಳ ಮತಾಂತರ, ಅಲ್ಲದೇ ಗೋಮಾಂಸ ತಿನ್ನುವಂತೆ ಒತ್ತಾಯ ಸೇರಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಟಿಪ್ಪು ಕಾಲದಲ್ಲೇ ಅತೀ ಹೆಚ್ಚು ಮತಾಂತರ ನಡೆದಿದೆ ಎಂದು ಬಿಂಬಿಸಲಾಗಿದೆ.

    ಪವನ್ ಶರ್ಮಾ (Pawan Sharma) ಎನ್ನುವವರು ಈ ಸಿನಮಾವನ್ನು ನಿರ್ದೇಶನ ಮಾಡುತ್ತಿದ್ದು,  ಈಗಾಗಲೇ ಟಿಪ್ಪು ಕುರಿತಾಗಿ ಅವರು ಸಂಶೋಧನೆಯನ್ನೂ ಮಾಡಿದ್ದಾರಂತೆ. ತಾರಾಗಣದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದ ಪವನ್, ಈ ಸಿನಿಮಾವನ್ನು ಈಗಾಗಲೇ ಸಾವರ್ಕರ್, ಅಟಲ್ ಸಿನಿಮಾವನ್ನು ಮಾಡಿದ್ದ ಸಂದೀಪ್ ಶರ್ಮಾ (Sandeep Sharma) ಇದರ ನಿರ್ಮಾಪಕರು.

  • ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ನವದೆಹಲಿ: ರಾಜಸ್ಥಾನದ (Rajasthan Royals) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಧೋನಿಯ ಅಬ್ಬರದ ಬ್ಯಾಟಿಂಗ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಮೂರು ರನ್‍ಗಳ ಅಂತರದಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಒಂಬತ್ತು ವರ್ಷಗಳ ಹಿಂದೆ ಧೋನಿ (MS Dhoni) ಪ್ರಕಟಿಸಿದ್ದ ಟ್ವೀಟ್ ವೃರಲ್ ಆಗುತ್ತಿದೆ.

    ಟ್ವೀಟ್‍ನಲ್ಲಿ ಧೋನಿ ಯಾವ ತಂಡ ಗೆದ್ದರೂ ಪರವಾಗಿಲ್ಲ. ನಾನಿಲ್ಲಿ ಮನರಂಜನೆಗಾಗಿ ಇದ್ದೇನೆ ಎಂದು ಬರೆದಿದ್ದರು. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಕಳೆದ ಪಂದ್ಯಕ್ಕೂ ಈ ಟ್ವೀಟ್‍ಗೂ ಹೊಂದಿಕೊಳ್ಳುತ್ತದೆ. ಏಕೆಂದರೆ ಧೋನಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು.

    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 175 ರನ್ ಹೊಡೆದಿತ್ತು. ನಂತರ ಬ್ಯಾಟ್ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿತ್ತು. ಧೋನಿ ಮತ್ತು ಜಡೇಜಾ (Jadeja) ಕ್ರೀಸ್‍ನಲ್ಲಿದ್ದರು. 18ನೇ ಓವರ್‍ನಲ್ಲಿ 14 ರನ್ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್ ಬಂದಿತ್ತು. ಈ ಓವರ್‍ನಲ್ಲಿ ಜಡೇಜಾ 2 ಸಿಕ್ಸ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ನೀಡಿದರು.

    ಕೊನೆಯ ಓವರ್‍ನಲ್ಲಿ 21 ರನ್ ಬೇಕಿತ್ತು. ಸಂದೀಪ್ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‍ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್ ರನ್ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

  • ರಾಜ್ಯಪಾಲರ ಎಡಿಸಿ (ಮಿಲಿಟರಿ)ಯಾಗಿ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ

    ರಾಜ್ಯಪಾಲರ ಎಡಿಸಿ (ಮಿಲಿಟರಿ)ಯಾಗಿ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ

    ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಎಡಿಸಿ(ಮಿಲಿಟರಿ) ಆಗಿ ಸಂದೀಪ್ ಶರ್ಮಾ ಅಧಿಕಾರ ವಹಿಸಿಕೊಂಡಿದ್ದಾರೆ.

    ರಾಜಭವನದಲ್ಲಿ ಇಂದು ಅವರು ಎಡಿಸಿ( ಮಿಲಿಟರಿ) ಯಾಗಿ ವಹಿಸಿಕೊಂಡಿದ್ದಾರೆ. ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಆಗಿರುವ ಸಂದೀಪ್ ಶರ್ಮಾ, ರಾಜ್ಯಪಾಲರು ಇಬ್ಬರು ಎಡಿಸಿ ಗಳ ಪೈಕಿ ಮಿಲಿಟರಿ ಪ್ರತಿನಿಧಿಯಾಗಿರುತ್ತಾರೆ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಸಂದೀಪ್ ಶರ್ಮಾ ಅವರಿಗೆ ಕರ್ತವ್ಯಕ್ಕೆ ನಿಯೋಜಿಸಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    ರಾಜ್ಯಪಾಲರ ಭದ್ರತೆ, ಎಲ್ಲ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂದೀಪ್‌ ಅವರದ್ದಾಗಿದೆ. ಇಂದಿನಿಂದ ಅವರು ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ.

    ರಾಜ್ಯಪಾಲರ ಭದ್ರತೆ, ಎಲ್ಲಾ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಇವರದ್ದಾಗಿದೆ. ಇಂದಿನಿಂದ ಸಂದೀಪ್ ಶರ್ಮಾ ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

    ನವದೆಹಲಿ: ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿದರು ಕೆಲ ಆಟಗಾರರು ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಮಾತ್ರ ಉತ್ತಮವಾಗಿ ಆಡಿಕೊಂಡು ಬರುತ್ತಿದ್ದಾರೆ.

    ಈ ಪಟ್ಟಿಯಲ್ಲಿ ನಮಗೆ ಮೊದಲು ಸಿಗುವುದು ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕಿಂಗ್ಸ್ ಇಲೆವೆನ್ ತಂಡದ ಸಂದೀಪ್ ಶರ್ಮಾ, ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಮತ್ತು ಶ್ರೇಯಸ್ ಗೋಪಾಲ್. ಈ ಎಲ್ಲರೂ ಉತ್ತಮವಾಗಿ ಆಡಿದರೂ ಕೂಡ ಟೀಂ ಇಂಡಿಯಾಗೆ ಸೆಲೆಕ್ಟ್ ಆಗುವಲ್ಲಿ ವಿಫಲರಾಗಿದ್ದಾರೆ.

    ಸೂರ್ಯ ಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

    ಇಶಾನ್ ಕಿಶನ್: 22 ವರ್ಷದ ಈ ಮುಂಬೈ ಇಂಡಿಯನ್ಸ್ ಆಟಗಾರ ಈ ಬಾರಿಯ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದರು. ತಮಗೆ ನೀಡಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಿಶನ್ 14 ಪಂದ್ಯಗಳನ್ನಾಡಿ ನಾಲ್ಕು ಅರ್ಧಶತಕದ ಜೊತೆಗೆ 516 ರನ್‍ಗಳಿಸಿದರು. ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ 30 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

    ಸಂದೀಪ್ ಶರ್ಮಾ: ಐಪಿಎಲ್ ಟೂರ್ನಿಯಲ್ಲಿ ಸಂದೀಪ್ ಶರ್ಮಾ ಬುಮ್ರಾ ಅವರಷ್ಟೇ ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಸಂದೀಪ್ ಇನ್ನು ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ. ಪವರ್ ಪ್ಲೇನಲ್ಲಿ ಸೂಪರ್ ಆಗಿ ಬೌಲ್ ಮಾಡುವ ಶರ್ಮಾ ಪವರ್ ಪ್ಲೇನಲ್ಲಿ 53 ವಿಕೆಟ್ ಪಡೆದು ಮೊದಲ ಆರು ಓವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್-2020ಯಲ್ಲಿ 13 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಮಿಂಚಿದರು.

    ರಾಹುಲ್ ತೆವಾಟಿಯಾ: ಈ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ತನ್ನ ಅಬ್ಬರ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದರು. ಜೊತೆಗೆ ಡೆತ್ ಓವರಿನಲ್ಲಿ ಒಳ್ಳೆಯ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿ ಕ್ರೀಡಾಭಿಮಾನಿಗಳನ್ನು ಇಂಪ್ರೆಸ್ ಮಾಡಿದರು. ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳನ್ನಾಡಿದ ರಾಹುಲ್ 255 ರನ್ ಸಿಡಿಸಿ 10 ವಿಕೆಟ್ ಪಡೆದು ಮಿಂಚಿದರು. ಇವರ ಜೊತೆಗೆ ರಾಜಸ್ಥಾನ್ ತಂಡ ಶ್ರೇಯಸ್ ಗೋಪಾಲ್ ಸತತ ಎರಡು ಅವೃತ್ತಿಯಲ್ಲೂ 10 ವಿಕೆಟ್ ಪಡೆದರೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ.

  • ಜಹೀರ್ ಖಾನ್ ಹಿಂದಿಕ್ಕಿ ಐಪಿಎಲ್‍ನಲ್ಲಿ ದಾಖಲೆ ಬರೆದ ಸಂದೀಪ್ ಶರ್ಮಾ

    ಜಹೀರ್ ಖಾನ್ ಹಿಂದಿಕ್ಕಿ ಐಪಿಎಲ್‍ನಲ್ಲಿ ದಾಖಲೆ ಬರೆದ ಸಂದೀಪ್ ಶರ್ಮಾ

    ಶಾರ್ಜಾ: ಅನುಭವಿ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಹಿಂದಿಕ್ಕಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಫಾಸ್ಟ್ ಬೌಲರ್ ಸಂದೀಪ್ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಇಂದು ನಡೆಯುತ್ತಿರುವ ಐಪಿಎಲ್-2020 56ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ದಾಳಿಗೆ ತತ್ತರಿಸಿ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಗುರಿ ನೀಡಿದೆ.

    ಸಂದೀಪ್ ಶರ್ಮಾ ದಾಖಲೆ
    ಇಂದು ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಸಂದೀಪ್ ಶರ್ಮಾ 34 ರನ್ ನೀಡಿ 3 ವಿಕೆಟ್ ಕಿತ್ತು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಪವರ್ ಪ್ಲೇ ಸಮಯದಲ್ಲೇ ಸಂದೀಪ್ ಶರ್ಮಾ ತನ್ನ ಸ್ವಿಂಗ್ ಮೂಲಕ ಬರೋಬ್ಬರಿ 55 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ 52 ವಿಕೆಟ್ ಕಿತ್ತಿರುವ ಜಹೀರ್ ಖಾನ್ ಮತ್ತು 48 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದ್ದಾರೆ.

    ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇಷ್ಟು ದಿನ ವಿಶ್ರಾಂತಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಇಂದು ಮೈದಾನದಲ್ಲಿ ಕಮಾಲ್ ಮಾಡಲಿಲ್ಲ. ಕೇವಲ 4 ರನ್‍ಗಳಿಸಿ ಔಟ್ ಆದರು. ನಂತರ 25 ರನ್ ಗಳಿಸಿ ಕ್ವಿಂಟನ್ ಡಿ ಕಾಕ್ ಸಂದೀಪ್ ಶರ್ಮಾ ಅವರಿಗೆ ಬೌಲ್ಡ್ ಆದರು. 29 ಬಾಲಿಗೆ 36 ರನ್ ಸಿಡಿಸಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ನದೀಮ್‍ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಬಂದ ಕ್ರುನಾಲ್ ಪಾಂಡ್ಯ ಶೂನ್ಯ ಸುತ್ತಿದರೆ, ಸೌರಭ್ ತಿವಾರಿ ಒಂದು ರನ್ ಹೊಡೆದು ವಿಕೆಟ್ ಒಪ್ಪಿಸಿದರು. 33 ರನ್ ಗಳಿಸಿದ್ದ ಇಶಾನ್ ಕಿಶನ್ ಅವರು ಔಟ್ ಆದರು. ಅವರ ಬೆನ್ನಲ್ಲೇ ನಾಥನ್ ಕೌಲ್ಟರ್-ನೈಲ್ ಅವರು ನಿರ್ಗಮಿಸಿದರು. ನಂತರ ಕೊನೆಯ ಓವರಿನಲ್ಲಿ 41 ರನ್ ಗಳಸಿದ್ದ ಕೀರನ್ ಪೊಲಾರ್ಡ್ ಔಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಟಾರ್ಗೆಟ್ ನೀಡಿದೆ.

  • ಹೈದರಾಬಾದ್ ದಾಳಿಗೆ ಮಂಕಾದ ಆರ್‌ಸಿಬಿ – ವಾರ್ನರ್ ಪಡೆಗೆ 121 ರನ್‍ಗಳ ಟಾರ್ಗೆಟ್

    ಹೈದರಾಬಾದ್ ದಾಳಿಗೆ ಮಂಕಾದ ಆರ್‌ಸಿಬಿ – ವಾರ್ನರ್ ಪಡೆಗೆ 121 ರನ್‍ಗಳ ಟಾರ್ಗೆಟ್

    – 7 ಬಾರಿ ಕೊಹ್ಲಿ ವಿಕೆಟ್ ತೆಗೆದು ದಾಖಲೆ ಬರೆದ ಸಂದೀಪ್ ಶರ್ಮಾ

    ಶಾರ್ಜಾ: ಇಂದು ಸಖತ್ ಶನಿವಾರದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಹೈದರಾಬಾದ್ ತಂಡಕ್ಕೆ ಕೇವಲ 121 ರನ್‍ಗಳ ಗುರಿ ನೀಡಿದೆ.

    ಇಂದು ಶಾರ್ಜಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 52ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಯ್ತು. ಪರಿಣಾಮ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿ 20 ಓವರಿನಲ್ಲಿ ಕೇವಲ 120 ರನ್‍ಗಳನ್ನು ಪೇರಿಸಿತು.

    ಸಂದೀಪ್ ಶರ್ಮಾ ಬೌಲಿಂಗ್ ದಾಳಿ
    ಇಂದು ಆರಂಭದಿಂದಲೇ ಹೈದರಾಬಾದ್ ಬೌಲರ್‍ಗಳು ಕೊಹ್ಲಿ ಪಡೆಯ ಮೇಲೆ ಸವಾರಿ ಮಾಡಿದರು. ಇದರಲ್ಲಿ ಉತ್ತಮವಾಗಿ ಬೌಲ್ ಮಾಡಿದ ಸಂದೀಪ್ ಶರ್ಮಾ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಅದರಲ್ಲಿ ಕೊಹ್ಲಿಯನ್ನು ಔಟ್ ಮಾಡಿ ಐಪಿಎಲ್ ಇತಿಹಾಸದಲ್ಲಿ ಕೊಹ್ಲಿಯನ್ನು ಏಳು ಬಾರಿ ಔಟ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಜೊತೆಗೆ ಐಪಿಎಲ್‍ನಲ್ಲಿ ಪವರ್ ಪ್ಲೇ ಹಂತದಲ್ಲಿ 51 ವಿಕೆಟ್ ಪಡೆಯುವ ಮೂಲಕ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ. 52 ವಿಕೆಟ್ ಪಡೆದ ಜಹೀರ್ ಖಾನ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್‍ರೈಸರ್ಸ್ ಹೈದರಾಬಾದ್ ತಂಡ ಬೌಲರ್ ಸಂದೀಪ್ ಶರ್ಮಾ ಆರಂಭಿಕ ಆಘಾತ ನೀಡಿದರು. ಎರಡನೇ ಓವರ್ 5ನೇ ಬಾಲಿನಲ್ಲಿ ಐದು ರನ್‍ಗಳಿಸಿ ಆಡುತ್ತಿದ್ದ ಇನ್ ಫಾರ್ಮ್ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಶರ್ಮಾ ಬೌಲ್ಡ್ ಮಾಡಿದರು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 7 ಬಾಲಿಗೆ ಏಳು ರನ್ ಸಿಡಿಸಿ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು.

    ಪವರ್ ಪ್ಲೇ ಹಂತದಲ್ಲಿ ಎರಡು ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡ ಆರನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 30 ರನ್ ಪೇರಿಸಿತು. ನಂತರ ಜೊತೆಯಾದ ಜೋಶ್ ಫಿಲಿಪ್ ಮತ್ತು ಎಬಿ ಡಿವಿಲಿಯರ್ಸ್ 38 ಬಾಲಿನಲ್ಲಿ 43 ರನ್‍ಗಳ ಜೊತೆಯಾಟವಾಡಿದರು. ಆದರೆ 24 ಬಾಲಿಗೆ 24 ರನ್ ಗಳಿಸಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಅವರು ಶಹಬಾಜ್ ನದೀಮ್‍ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ವಿಲಿಯರ್ಸ್ ನಂತರ ಆರಂಭದಿಂಲೂ ತಾಳ್ಮೆಯಿಂದ ಆಡಿಕೊಂಡು ಬಂದಿದ್ದ ಜೋಶ್ ಫಿಲಿಪ್ ಅವರು 32 ರನ್ ಹೊಡೆದು ರಶೀದ್ ಖಾನ್ ಅವರ ಬೌಲಿಂಗ್ ಮೋಡಿಗೆ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಗುರ್ಕೀರತ್ ಸಿಂಗ್ ಮನ್ ಮತ್ತು ವಾಷಿಂಗ್ಟನ್ ಸುಂದರ್ ತಾಳ್ಮೆಯಿಂದ ರನ್ ಕಲೆಹಾಕಿ 16ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ ವಾಷಿಂಗ್ಟನ್ ಸುಂದರ್ ಅವರು ಔಟ್ ಆದರು.

    ಇದಾದ ನಂತರ ಮೂರು ರನ್‍ಗಳಿಸಿದ್ದ ಕ್ರಿಸ್ ಮೋರಿಸ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನೆಡೆದರು. ನಂತರ ಬಂದ ಇಸುರು ಉದಾನಾ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • ಅಕ್ರಮ ಮರಳು ದಂಧೆ ಬಗ್ಗೆ ತನಿಖೆ ಮಾಡ್ತಿದ್ದ ಪತ್ರಕರ್ತನ ಮೇಲೆ ಲಾರಿ ಹರಿದು ಸಾವು

    ಅಕ್ರಮ ಮರಳು ದಂಧೆ ಬಗ್ಗೆ ತನಿಖೆ ಮಾಡ್ತಿದ್ದ ಪತ್ರಕರ್ತನ ಮೇಲೆ ಲಾರಿ ಹರಿದು ಸಾವು

    ಭೋಪಾಲ್: ಅಕ್ರಮ ಮರಳು ದಂಧೆ ಬಗ್ಗೆ ತನಿಖೆ ಮಾಡುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    35 ವರ್ಷದ ಸಂದೀಪ್ ಶರ್ಮಾ ಮೃತ ಪತ್ರಕರ್ತ. ಸಂದೀಪ್ ಅವರು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸಂದೀಪ್ ಮೃತಪಟ್ಟಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

    ಪೊಲೀಸ್ ಠಾಣೆಯ ಬಳಿಯೇ ಅಪಘಾತ ಸಂಭವಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಸಂದೀಪ್ ಅವರನ್ನು ಆಸ್ಪತ್ರೆಗೆ ರವಾನಿಸಿದರು ಎಂದು ವರದಿಯಾಗಿದೆ. ಆದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಂದೀಪ್ ಸಾವನ್ನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆ. ಅಪಘಾತದ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋವನ್ನ ಸುದ್ದಿಸಂಸ್ಥೆ ಹಂಚಿಕೊಂಡಿದೆ.

    ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಶರ್ಮಾ ಈ ಹಿಂದೆ ನಡೆಸಿದ ಕುಟುಕು ಕಾರ್ಯಾಚರಣೆಯಿಂದಾಗಿ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ. ಸಂದೀಪ್ ಅವರು ಮಾಡಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಫಿಯಾದವರಿಂದ ಲಂಚ ಪಡೆಯುತ್ತಿರುವುದನ್ನು ತೋರಿಸಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಎಸ್‍ಪಿ ವಿಶೇಷ ತನಿಖಾ ತಂಡವನ್ನ ರಚಿಸಿದ್ದಾರೆ.