Tag: ಸಂದೀಪ್ ರೆಡ್ಡಿ ವಂಗಾ

  • ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟನ ಪತ್ನಿಯಾಗಿ ನಟಿಸೋದು ಪಕ್ಕಾ

    ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟನ ಪತ್ನಿಯಾಗಿ ನಟಿಸೋದು ಪಕ್ಕಾ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ. ಇವರು ನಟಿಸಿರೋ `ಮಿಷನ್ ಮಜ್ನು’, `ಗುಡ್ ಬೈ’ ರಿಲೀಸ್ ಗೂ ಮುಂಚೆನೇ ಕಿರಿಕ್ ಬೆಡಗಿ ರಶ್ಮಿಕಾ, ಬಿಟೌನ್ ಸ್ಟಾರ್ ರಣಬೀರ್ ಕಪೂರ್‌ಗೆ ನಾಯಕಿಯಾಗುವ ಅವಕಾಶವ ಗಿಟ್ಟಿಸಿಕೊಂಡಿದ್ದಾರೆ. `ಪುಷ್ಪ’ ಸಕ್ಸಸ್ ನಂತರ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ರಶ್ಮಿಕಾಗೆ ಬುಲಾವ್ ಬರುತ್ತಿದೆ. ರಣಬೀರ್ ಕಪೂರ್ ಜತೆ ನಟಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಆಗುತ್ತಿತ್ತು. ಇದೀಗ ಸುದ್ದಿ ನಿಜವಾಗಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಸದ್ಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಿರೋ ರಣಬೀರ್ ಕಪೂರ್ ಈಗ `ಅನಿಮಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಯುಗಾದಿ ಹಬ್ಬದಂದು ರಣಬೀರ್‌ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಟ್ವೀಟರ್‌ನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನೌನ್ಸ್ ಮಾಡಿದ್ದಾರೆ.

    ಫ್ರೆಶ್ ಲವ್ ಸ್ಟೋರಿ ಜೊತೆಗೆ ಫ್ರೆಶ್ ಜೋಡಿಯನ್ನು ತೋರಿಸಬೇಕು ಅಂತಾ ರಣಬೀರ್‌ಗೆ `ಪುಷ್ಪ’ ನಟಿ ರಶ್ಮಿಕಾ ಅವರನ್ನು ಫೈನಲ್ ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಶ್ಮಿಕಾ ಅವರು, ರಣಬೀರ್‌ಗೆ ಪತ್ನಿಯಾಗಿ ನಟಿಸಲಿದ್ದಾರೆ. ಅದು ಗೀತಾಂಜಲಿ ಪಾತ್ರದಲ್ಲಿ ಎನ್ನುವುದು ವಿಶೇಷ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

     

  • ರಣಬೀರ್ ಕಪೂರ್ ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್

    ರಣಬೀರ್ ಕಪೂರ್ ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್

    ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ತಮ್ಮ ಸಿನಿಜರ್ನಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಟಿಸುತ್ತಿರುವ ಈ ನಟಿಗೆ ಮತ್ತೊಂದು ಬಿಗ್ ಆಫರ್ ಸಿಕ್ಕಿದೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ವಿಶೇಷ ಸಾಂಗ್‍ವೊಂದಕ್ಕೆ ರಶ್ಮಿಕಾ ಸ್ಟೆಪ್ ಹಾಕಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದೆ.

    ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ, ತಮ್ಮ ಮುಂದಿನ ಬಾಲಿವುಡ್ ಬಿಗ್ ಸಿನಿಮಾ ‘ಅನಿಮಲ್’ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಇವರಿಬ್ಬರ ಚೊಚ್ಚಲ ಕಾಂಬಿನೇಷನ್ ಚಿತ್ರ. ಈ ಸಿನಿಮಾದಲ್ಲಿ ವಿಶೇಷ ಸಾಂಗ್‍ವೊಂದು ಬರಲಿದ್ದು, ಇದಕ್ಕೆ ದಕ್ಷಿಣದ ಬ್ಯೂಟಿ ರಶ್ಮಿಕಾ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಒಂದು ವೇಳೆ ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ರೆ ಈ ಬ್ಯೂಟಿಯನ್ನ ರಣಬೀರ್ ಜೊತೆ ನೋಡಬಹುದು. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    Ranbir Kapoor and his hot looks | IWMBuzz

    ‘ಅನಿಮಲ್’ ಸಿನಿಮಾ ಬಗ್ಗೆ ಬಾಲಿವುಡ್‍ನಲ್ಲಿ ನಿರೀಕ್ಷೆ ಇದೆ. ಇದಕ್ಕೆ ಕಾರಣವೇ ರಣಬೀರ್ ಕಪೂರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಕಾಂಬಿನೇಷನ್. ‘ಅನಿಮಲ್’ ಸಿನಿಮಾದಲ್ಲಿ ಹೆಚ್ಚು ಸ್ಟಾರ್ ನಟ, ನಟಿಯರನ್ನು ಹಾಕಬೇಕು ಎಂದು ಚಿತ್ರತಂಡ ಚಿಂತಿಸುತ್ತಿದೆ

    Photo Alert!] Rashmika Mandanna Hot Avatar - Mind Block song - RitzyStar

    ಇತ್ತೀಚೆಗೆ ತೆರೆಕಂಡ ‘ಆದವಳು ಮೀಕು ಜೋರು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಶರ್ವಾನಂದ್ ಜೊತೆ ಕಾಣಿಸಿಕೊಂಡಿದ್ದರು. ಅಲ್ಲದೆ ಬಾಲಿವುಡ್‍ನಲ್ಲಿಯೂ ಮಿಂಚಲು ರೆಡಿ ಇರುವ ರಶ್ಮಿಕಾ ‘ಪುಷ್ಪ’ ಸೀಕ್ವೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು? 

  • ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್

    ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್

    ಚೆನ್ನೈ: ಟಾಲಿವುಡ್ ನಟ ಪ್ರಭಾಸ್ ತಮ್ಮ 25 ನೇ ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಪ್ರಭಾಸ್ ಅ.23 ರಂದು 42 ನೇ ವಸಂತಕ್ಕೆ ಕಾಲಿಡುತ್ತಿದ್ದು, ಇನ್ನೂ ಹುಟ್ಟುಹಬ್ಬ ಹತ್ತಿರ ಇರುವಾಗಲೇ ಅಭಿಮಾನಿಗಳಿಗೆ ತಮ್ಮ 25ನೇ ಸಿನಿಮಾದ ನಿರ್ದೇಶಕರ ಬಗ್ಗೆ ಹೇಳಿದ್ದಾರೆ. ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಸಂದೀಪ್ ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ:  ಕೊನೆ ಕ್ಷಣದಲ್ಲಿ ಅಜಯ್ ದೇವ್‍ಗನ್ ಜೊತೆ ಶೂಟ್ ಬೇಡವೆಂದ ನಟ ಶಾರೂಖ್

    ಈ ಕುರಿತು ಪ್ರಭಾಸ್ ಇನ್‍ಸ್ಟಾಗ್ರಾಮ್ ನಲ್ಲಿ, ‘ಸ್ಪಿರಿಟ್’ ನೊಂದಿಗೆ ನನ್ನ ಪ್ರಯಾಣವನ್ನು ಆರಂಭಿಸಿದ್ದೇನೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮತ್ತು ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ #Prabhas25SandeepReddyVanga ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ತಮ್ಮ ಹೊಸ ಚಿತ್ರ ಕುರಿತು ಮಾತನಾಡಿದ ಪ್ರಭಾಸ್, ಸ್ಪಿರಿಟ್ ಕಥೆ ‘ಅದ್ಭುತ’ವಾಗಿದೆ. ಚಿತ್ರದ ಶೂಟಿಂಗ್ ಆರಂಭಿಸಲು ಕಾಯಲು ಸಾಧ್ಯವಿಲ್ಲ. ಭೂಷಣ್ ಕುಮಾರ್ ಜೊತೆ ಕೆಲಸ ಮಾಡುವುದು ಯಾವಾಗಲೂ ಸುಲಭ ಮತ್ತು ಸಂತೋಷ ನೀಡುತ್ತದೆ. ಅವರು ನಮ್ಮಲ್ಲಿರುವ ಅತ್ಯುತ್ತಮ ನಿರ್ಮಾಪಕರಲ್ಲಿ ಒಬ್ಬರು, ನಾನು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಸಂದೀಪ್ ಅವರ ಜೊತೆ ಕೆಲಸ ಮಾಡಬೇಕೆಂದು ಎಲ್ಲರಿಗೂ ಇಷ್ಟವಿರುತ್ತೆ. ಈಗ ಸ್ಪಿರಿಟ್‍ನೊಂದಿಗೆ, ಅಂತಹ ಪ್ರತಿಭೆ ಜೊತೆಗೆ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:  ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ಪ್ರಭಾಸ್ ಬಹುನಿರೀಕ್ಷಿತ ರಾಧೆ ಶ್ಯಾಮ್, ಆದಿಪುರುಷ ಮತ್ತು ಸಲಾರ್ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸಹ ಸೇರಿಕೊಂಡಿದೆ. ‘ಸ್ಪಿರಿಟ್’ ವಿಶ್ವಾದ್ಯಂತ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಜಪಾನೀಸ್, ಚೈನೀಸ್ ಮತ್ತು ಕೊರಿಯನ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಇತರ ಪಾತ್ರಗಳ ಬಗ್ಗೆ ಮತ್ತು ನಟರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.