Tag: ಸಂದೀಪ್ ರೆಡ್ಡಿ ವಂಗಾ

  • ಪ್ರಭಾಸ್ ನಟನೆಯ ‘ಸ್ಪಿರಿಟ್’ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್ ಅಪ್‌ಡೇಟ್

    ಪ್ರಭಾಸ್ ನಟನೆಯ ‘ಸ್ಪಿರಿಟ್’ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್ ಅಪ್‌ಡೇಟ್

    ಸಾಲು ಸಾಲು ಸಿನಿಮಾಗಳ ಸೋಲಿನಿಂದ ತತ್ತರಿಸಿದ್ದ ಪ್ರಭಾಸ್‌ಗೆ (Prabhas) ‘ಕಲ್ಕಿ 2898 ಎಡಿ’ ಚಿತ್ರದ ಯಶಸ್ಸಿನಿಂದ ವೃತ್ತಿರಂಗದಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಸದ್ಯ ಸಂದೀಪ್ ರೆಡ್ಡಿ ವಂಗಾ ಜೊತೆ ‘ಸ್ಪಿರಿಟ್’ (Spirit) ಸಿನಿಮಾ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಚ್ಚರಿಪಡುವಂತಹ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.

    ಸ್ಟಾರ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಹೊಸ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ತೆರೆಮರೆಯಲ್ಲಿ ಚಿತ್ರದ ತಯಾರಿ ನಡೆಯುತ್ತಿದೆ. ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ. ಇನ್ನೂ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ರಣಬೀರ್ ಕಪೂರ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಈಗಾಗಲೇ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ಸಂದೀಪ್ ನೀಡಿದ್ದಾರೆ. ಅರ್ಜುನ್ ರೆಡ್ಡಿ, ಅನಿಮಲ್, ಕಬೀರ್ ಸಿಂಗ್ ಚಿತ್ರಗಳು ಯಶಸ್ಸು ಕಂಡಿದೆ. ಅದರಲ್ಲಿ ಅರ್ಜುನ್ ರೆಡ್ಡಿ ನಟ ವಿಜಯ್, ಅನಿಮಲ್ ಹೀರೋ ರಣಬೀರ್ ಕಪೂರ್‌ಗೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸಲು ಸಂದೀಪ್‌ ಅಪ್ರೋಚ್‌ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರದ್ದು ಸಣ್ಣ ಅತಿಥಿಯ ಪಾತ್ರ ಆಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ.

    ಇನ್ನೂ ದಿ ರಾಜ ಸಾಬ್, ಸಲಾರ್‌ 2, ಹನು ರಾಘವಪುಡಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಪ್ರಭಾಸ್ ಕೈಯಲ್ಲಿವೆ.

  • ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಯಶಸ್ಸಿನಲ್ಲಿರುವ ಪ್ರಭಾಸ್ ಇದೀಗ ‘ಸ್ಪಿರಿಟ್’ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಈ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ತ್ರಿಷಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಇರುವ ನಟಿ ತ್ರಿಷಾ (Trisha) ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಜಯ ದಳಪತಿ, ಮೆಗಾಸ್ಟಾರ್ ಚಿರಂಜೀವಿ, ಅಜಿತ್ ಕುಮಾರ್‌ಗೆ ಪ್ರಸ್ತುತ ನಾಯಕಿಯಾಗಿ ಸದ್ದು ಮಾಡುತ್ತಿರುವ ತ್ರಿಷಾ ಇದೀಗ ಪ್ರಭಾಸ್ (Prabhas) ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

    ತ್ರಿಷಾರನ್ನು ಈಗಾಗಲೇ ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.

    ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ರಾಜಾ ಸಾಬ್ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ದೇಶನದ ಬಗ್ಗೆ ಕನಸು ಬಿಚ್ಚಿಟ್ಟ ಸಂದೀಪ್‌ ರೆಡ್ಡಿ ವಂಗಾ

    ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ದೇಶನದ ಬಗ್ಗೆ ಕನಸು ಬಿಚ್ಚಿಟ್ಟ ಸಂದೀಪ್‌ ರೆಡ್ಡಿ ವಂಗಾ

    ರ್ಜುನ್ ರೆಡ್ಡಿ, ಅನಿಮಲ್ (Animal) ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮೈಕಲ್ ಜಾಕ್ಸನ್ (Michael Jackson) ಜೀವನವನ್ನು ಸಿನಿಮಾ ರೂಪದಲ್ಲಿ ತೋರಿಸಲು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ನಿರ್ದೇಶಕ ಓಪನ್ ಆಗಿ ಮಾತನಾಡಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಕಥೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಸಿನಿಮಾಗಳು ಕಾಂಟ್ರವರ್ಸಿ ಮೂಲಕ ಕೂಡ ಸದ್ದು ಮಾಡಿದೆ. ಈಗ ಸಂದರ್ಶನವೊಂದರಲ್ಲಿ ಮೈಕಲ್ ಜಾಕ್ಸನ್ ಬಯೋಪಿಕ್ ಸಿನಿಮಾ ಮಾಡಿ ತೋರಿಸಬೇಕು ಎಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

    ಮೈಕಲ್ ಜಾಕ್ಸನ್ ಪಾತ್ರವನ್ನು ಯಾರು ಮಾಡ್ತಾರೆ ಎಂಬುದೇ ಪ್ರಶ್ನೆ. ಸೂಕ್ತವಾದ ನಟ ಸಿಕ್ಕರೆ ಸಿನಿಮಾ ಮಾಡಬಹುದು. ಮೈಕಲ್ ಜಾಕ್ಸನ್ ಅವರ ಜೀವನ ತುಂಬಾ ರೋಚಕವಾಗಿದೆ. ಅವರ ಬಾಲ್ಯದ ದಿನಗಳು, ಮೈ ಬಣ್ಣ ಬದಲಾಯಿಸಿಕೊಂಡಿದ್ದು ಅದೆಲ್ಲವೂ ಒಂದು ದೊಡ್ಡ ಜರ್ನಿಯಾಗಿದೆ. ಆ ಸಿನಿಮಾ ಮಾಡಿದರೆ ಎಲ್ಲರೂ ಟಿಕೆಟ್ ಖರೀದಿಸುತ್ತಾರೆ. ಯಾರೇ ನಿರ್ದೇಶನ ಮಾಡಿದರೂ ನಾನು ಕೂಡ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇನೆ. ಯಾಕೆಂದ್ರೆ ನಾನು ಕೂಡ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

    ‘ಅನಿಮಲ್’ ಸಿನಿಮಾ ಯಶಸ್ವಿಯಾಗಿದೆ. ಅನಿಮಲ್ ಪಾರ್ಕ್ ಮತ್ತು ಸ್ಪಿರಿಟ್ 2 ಚಿತ್ರಗಳು ಅವರ ಕೈಯಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.

  • ಅಲ್ಲು ಅರ್ಜುನ್ ಜೊತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್

    ಅಲ್ಲು ಅರ್ಜುನ್ ಜೊತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್

    ‘ಸೀತಾರಾಮಂ’ (Seetharamam) ಬೆಡಗಿ ಮೃಣಾಲ್ ಠಾಕೂರ್ (Mrunal Thakur ಇದೀಗ ಬಂಪರ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ‘ಹಾಯ್ ನಾನ್ನಾ’ ಚಿತ್ರದ ಸಕ್ಸಸ್ ನಂತರ ಐಕಾನ್ ಸ್ಟಾರ್ ಜೊತೆ ಮೃಣಾಲ್ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

    ‘ಪುಷ್ಪ’ ಚಿತ್ರದ ನಂತರ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಅಲ್ಲು ಅರ್ಜುನ್ ಜೊತೆ ನಟಿಸಬೇಕು ಎಂಬುದು ಎಲ್ಲಾ ನಟಿಮಣಿಯರ ಕನಸಾಗಿದೆ. ಹೀಗಿರುವಾಗ ಅಲ್ಲು ಅರ್ಜುನ್ ಜೊತೆ ನಟಿಸುವ ಗೋಲ್ಡನ್ ಚಾನ್ಸ್ ಮೃಣಾಲ್‌ಗೆ ಸಿಕ್ಕಿದೆ. ‘ಅನಿಮಲ್’ (Animal) ಚಿತ್ರದ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸಕ್ಸಸ್ ನಂತರ ಸಂದೀಪ್ ರೆಡ್ಡಿ ವಂಗಾ ಈಗ ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆ ಅಲ್ಲು ಅರ್ಜುನ್ (Allu Arjun) ಜೊತೆ ಹೊಸ ಸಿನಿಮಾ ಮಾಡಲು ಮಾತುಕತೆಯಾಗಿದೆ. ಈ ಚಿತ್ರಕ್ಕೆ ಮೃಣಾಲ್ ನಾಯಕಿ ಎಂದು ಸಂದೀಪ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ‘ಅನಿಮಲ್ ಪಾರ್ಟ್ 2’ಗೆ ಕೂಡ ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ. ಅಲ್ಲು ಅರ್ಜುನ್ ಜೊತೆ ಸಂದೀಪ್ ಕೈಜೋಡಿಸಿರೋದ್ರಿಂದ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಮೊದಲ ಬಾರಿಗೆ ಅಲ್ಲು ಅರ್ಜುನ್ ಮತ್ತು ಮೃಣಾಲ್ ಜೋಡಿಯಾಗುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ ಹುಡುಗಿಗೆ ಮೋಸ ಮಾಡಿದ ನಟ

    ಸಂದೀಪ್ ನಿರ್ದೇಶನ ಮಾಡ್ತಿದ್ದಾರೆ ಅಂದರೆ ಅಲ್ಲಿ ಆ್ಯಕ್ಷನ್ ಸೀನ್‌ಗಳಿಗೆ ಕೊರತೆ ಇರಲ್ಲ. ಅಲ್ಲು ಅರ್ಜುನ್ ಮತ್ತು ಮೃಣಾಲ್ ಕೆಮಿಸ್ಟ್ರಿ ಮತ್ತು ಕಥೆಯನ್ನು ಯಾವ ರೀತಿ ತೆರೆಯ ಮೇಲೆ ಸಂದೀಪ್ ಪ್ರಸೆಂಟ್ ಮಾಡ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.

    ‘ಪುಷ್ಪ 2’ ರಿಲೀಸ್ ಆದ್ಮೇಲೆ ಮೃಣಾಲ್ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್ ಮಾಡುತ್ತಾರೆ. ಈ ವರ್ಷದ ಕೊನೆಯಲ್ಲಿ ಈ ಸಿನಿಮಾಗೆ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾಯಬೇಕಿದೆ.

  • ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಅರ್ಜುನ್ ರೆಡ್ಡಿ’, ಇತ್ತೀಚಿನ ‘ಅನಿಮಲ್’ (Animal) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. 900 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಸಂದೀಪ್ ನಿರ್ದೇಶನದ ವೈಖರಿ ನೋಡಿ ನಮ್ಮಗೂ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗಲಿ ಎಂದು ಕೆಲವು ನಟ-ನಟಿಯರು ಕಾಯ್ತಿದ್ದಾರೆ. ಇದರ ನಡುವೆ ಸಂದೀಪ್ ಕಡೆಯಿಂದ ಸಿಕ್ಕ ಆಫರ್‌ನ್ನು ಕಂಗನಾ ರಣಾವತ್ (Kangana Ranaut) ರಿಜೆಕ್ಟ್ ಮಾಡಿದ್ದಾರೆ.

    ಇತ್ತೀಚೆಗೆ ‘ಅನಿಮಲ್’ ಚಿತ್ರವನ್ನು ನೋಡಿದ ಬಳಿಕ ಕಂಗನಾ ಅವರು ತಮ್ಮ ಅನಿಸಿಕೆ ತಿಳಿಸಿದ್ದರು. ಈ ಸಿನಿಮಾ ಸ್ತ್ರಿ ವಿರೋಧಿಯಾಗಿದೆ ಎಂದು ಅವರು ಹೇಳಿದ್ದರು. ಕಂಗನಾ ಹೇಳಿಕೆಯನ್ನು ಸಂದೀಪ್ ಅವರು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಕಂಗನಾ ಅವರ ಪ್ರತಿಭೆಯ ಬಗ್ಗೆ ಸಂದೀಪ್‌ಗೆ ಅಭಿಮಾನ ಇದೆ. ಇದನ್ನೂ ಓದಿ:‘ರಿಚರ್ಡ್ ಆಂಟನಿ’ ಕುರಿತು ಅಪ್ ಡೇಟ್ ನೀಡಿದ ರಕ್ಷಿತ್ ಶೆಟ್ಟಿ

    ಅವಕಾಶ ಸಿಕ್ಕರೆ, ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿದರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ‘ಕ್ವೀನ್’ ಮತ್ತು ಇತರೆ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಇಷ್ಟಪಟ್ಟಿದ್ದೇನೆ. ನನ್ನ ಚಿತ್ರದ ಬಗ್ಗೆ ಅವರು ನೆಗೆಟಿವ್ ಕಾಮೆಂಟ್ ಮಾಡಿದ್ದರೂ ನನಗೆ ಕೋಪ ಬರುವುದಿಲ್ಲ. ಒಟ್ಟಿನಲ್ಲಿ ಅವರ ಪರ್ಫಾರ್ಮೆನ್ಸ್ ನನಗೆ ನಿಜಕ್ಕೂ ಇಷ್ಟವಾಗಿದೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

    ಅನಿಸಿಕೆ ಮತ್ತು ಟೀಕೆ ಎರಡು ಬೇರೆ ಬೇರೆ ಆಗಿರುತ್ತವೆ. ಎಲ್ಲ ಬಗೆಯ ಕಲೆ ಕೂಡ ವಿಮರ್ಶೆಗೆ ಮತ್ತು ಚರ್ಚೆಗೆ ಒಳಪಡಬೇಕು. ಅದು ಸಹಜವಾದ ವಿಷಯ. ಸಂದೀಪ್ ಅವರು ನನ್ನ ವಿಮರ್ಶೆಗೆ ಗೌರವ ನೀಡಿದ್ದು ನೋಡಿದರೆ ತಿಳಿಯುತ್ತದೆ. ಅವರು ಕೇವಲ ಗಂಡಸುತನದ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ಆ್ಯಟಿಟ್ಯೂಡ್ ಕೂಡ ಹಾಗೆಯೇ ಇದೆ. ಧನ್ಯವಾದಗಳು ಸರ್. ಆದರೆ ನೀವು ನನಗೆ ಯಾವುದೇ ಪಾತ್ರ ನೀಡಬೇಡಿ. ನೀಡಿದರೆ ನಿಮ್ಮ ಆಲ್ಫಾ ಮೇಲ್ ಪಾತ್ರಗಳು ಸ್ತ್ರಿವಾದಿ ಆಗಿಬಿಡುತ್ತವೆ. ಆಗ ನಿಮ್ಮ ಸಿನಿಮಾಗಳು ಸೋಲುತ್ತವೆ. ನೀವು ಉತ್ತಮ ಸಿನಿಮಾ ಮಾಡುವವರು. ಇಂಡಸ್ಟ್ರಿಗೆ ನಿಮ್ಮ ಅಗತ್ಯ ಇದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಪಾರ್ಟ್ 2 ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅನಿಮಲ್ ಚಿತ್ರದಂತೆ ಪಾರ್ಟ್ 2 ಕೂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.

  • ‘ಅನಿಮಲ್’ ನಿರ್ದೇಶಕ ಸಂದೀಪ್‌ರನ್ನು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ

    ‘ಅನಿಮಲ್’ ನಿರ್ದೇಶಕ ಸಂದೀಪ್‌ರನ್ನು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ

    ಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾ ಮೇಲಿನ ಪ್ರೀತಿಗೆ ರಶ್ಮಿಕಾ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಮತ್ತೊಂದು ದಾಖಲೆ ಬರೆದ ಕಾಟೇರ: 200 ಕೋಟಿ ರೂ. ಕ್ಲಬ್ ಸೇರಿದ ಸಂಭ್ರಮ

    ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ಕಾರಣವಾದ ‘ಅನಿಮಲ್’ ಸಿನಿಮಾ ಮತ್ತು ಡೈರೆಕ್ಟರ್ ಕುರಿತು ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ. ಸಂದೀಪ್ ಅವರು (Sandeep Reddy Vanga) ಸಿನಿಮಾ ಮಾಡುವಾಗ ಭಿನ್ನವಾಗಿ ಯೋಚಿಸುತ್ತಾರೆ. ಆದರೆ ‘ಅನಿಮಲ್’ ಚಿತ್ರ ನೋಡಿದಾಗ ಈ ರೀತಿಯ ಸಿನಿಮಾ ಬೇಕು ಎನ್ನುವಂತೆ ಮಾಡಿದ್ದರು.

    ಈ ವೇಳೆ, ಅನಿಮಲ್ ಪಾರ್ಟ್ 2 ಬಗ್ಗೆ ನಟಿ ಮಾತನಾಡಿದ್ದರು. ‘ಅನಿಮಲ್ ಪಾರ್ಕ್’ ಚಿತ್ರದ ಕಥೆ ಹೇಗೆ ಬೇಕಾದರೂ ಇರಬಹುದು. ಈಗಾಗಲೇ ಚಿತ್ರದ ಸಣ್ಣ ಎಳೆಯನ್ನು ಸಂದೀಪ್ ಹೇಳಿದ್ದಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ‘ಅನಿಮಲ್’ ಪಾರ್ಟ್ 2 ಸಕ್ಸಸ್‌ ಕಾಣುವ ಭರವಸೆಯಲ್ಲಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ, ಒಂದು ಕಥೆ ರೆಡಿ ಮಾಡಿದ್ರೆ ಅದಕ್ಕೆ ಕರೆಕ್ಟ್ ಆಗಿ ನಿಲ್ಲುತ್ತಾರೆ. ಜನಕ್ಕೆ ಹೇಗೆ ಬೇಕೋ ಕಥೆ ಬದಲಾಯಿಸುವುದಿಲ್ಲ ಎಂದು ರಶ್ಮಿಕಾ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಕೊನೆಗೂ ನಿಕ್ಕಿ ಆಯಿತು ಗುರು-ಜಗ್ಗೇಶ್ ಚಿತ್ರದ ರಿಲೀಸ್ ಡೇಟ್

    ‘ಅನಿಮಲ್ ಪಾರ್ಕ್’, ಪುಷ್ಪ 2, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

  • ಮಹೇಶ್ ಬಾಬುಗೆ ಸಂದೀಪ್‌ ರೆಡ್ಡಿ ವಂಗಾ ಡೈರೆಕ್ಷನ್

    ಮಹೇಶ್ ಬಾಬುಗೆ ಸಂದೀಪ್‌ ರೆಡ್ಡಿ ವಂಗಾ ಡೈರೆಕ್ಷನ್

    ಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ರಿಲೀಸ್ ಮುನ್ನವೇ ಅಭಿಮಾನಿಗಳಿಗೆ ಸಂದೀಪ್ ರೆಡ್ಡಿ ವಂಗಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತೆಲುಗಿನ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶನ ಮಾಡಲಿದ್ದಾರೆ.

    ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ‘ಅನಿಮಲ್’ (Animal) ಸಿನಿಮಾ ಮಾಡುವಾಗಲೇ ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರ ಮಾಡೋದಾಗಿ ಅನೌನ್ಸ್ ಆಗಿದೆ. ಈ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ಕೂಡ ನೀಡಿದ್ದಾರೆ.

    ಮಹೇಶ್ ಬಾಬುಗೆ (Mahesh Babu) ಈಗಾಗಲೇ ಭೇಟಿಯಾಗಿ ಕಥೆ ಹೇಳಿದ್ದಾರೆ ಸಂದೀಪ್. ಚಿತ್ರಕಥೆ ಕೇಳಿಯೇ ಥ್ರಿಲ್ ಆಗಿ ಮಹೇಶ್ ಬಾಬು ಓಕೆ ಎಂದಿದ್ದಾರೆ. ಚಿತ್ರಕ್ಕೆ ಡೆವಿಲ್ ಎಂದು ಹೆಸರಿಟ್ಟಿದ್ದು, ಅನಿಮಲ್ ಸಿನಿಮಾದ ರೀತಿಯೇ ಇನ್ನೂ ಸಖತ್ ವೈಲೆಂಟ್ ಆಗಿ ಮೂಡಿ ಬರಲಿದೆಯಂತೆ. ಎಂದೂ ನೋಡಿರದ ಲುಕ್, ಪಾತ್ರದಲ್ಲಿ ಮಹೇಶ್ ಬಾಬು ಅವರನ್ನ ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು.‌ ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

    ಸಂದೀಪ್ ನಿರ್ದೇಶನದ ‘ಅನಿಮಲ್’ ಇದೇ ಡಿಸೆಂಬರ್ 1ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟ್ರೈಲರ್- ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಕಾದುನೋಡಬೇಕಿದೆ.

  • ರಶ್ಮಿಕಾ, ರಣ್‌ಬೀರ್ ನಟನೆಯ ‘ಅನಿಮಲ್’ ಟೀಸರ್ ಡೇಟ್ ಔಟ್- ಇಲ್ಲಿದೆ ಅಪ್‌ಡೇಟ್

    ರಶ್ಮಿಕಾ, ರಣ್‌ಬೀರ್ ನಟನೆಯ ‘ಅನಿಮಲ್’ ಟೀಸರ್ ಡೇಟ್ ಔಟ್- ಇಲ್ಲಿದೆ ಅಪ್‌ಡೇಟ್

    ಬಾಲಿವುಡ್‌ನ (Bollywood) ನಿರೀಕ್ಷಿತ ಸಿನಿಮಾ ‘ಅನಿಮಲ್’ (Animal) ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೀಗ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಅನಿಮಲ್ ಚಿತ್ರದಲ್ಲಿನ ರಣ್‌ಬೀರ್ ಖಡಕ್ ಲುಕ್ ರಿವೀಲ್ ಮಾಡಿ, ಚಿತ್ರದ ಟೀಸರ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದೇ ಸೆ.28ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣ್‌ಬೀರ್ ಕಪೂರ್ (Ranbir Kapoor) ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ರಣ್‌ಬೀರ್‌ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆಯಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ರಣ್‌ಬೀರ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕೂಲಿಂಗ್ ಗ್ಲ್ಯಾಸ್ ಧರಿಸಿ, ಸಿಗರೇಟ್ ಬಾಯಲಿಟ್ಟಿರೋ ಲುಕ್‌ನಲ್ಲಿ ನಟ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ರಣ್‌ಬೀರ್ ಕಪೂರ್ ಹುಟ್ಟುಹಬ್ಬದಂದು ಸೆ.28ಕ್ಕೆ ಬೆಳಿಗ್ಗೆ 10 ಗಂಟೆಗೆ ‘ಅನಿಮಲ್’ ಟೀಸರ್ ರಿಲೀಸ್ ಆಗಲಿದೆ. ಇನ್ನೂ ಮನಾಲಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಗುಣಮಟ್ಟದ ದೃಷ್ಟಿಯಿಂದ ರಿಲೀಸ್ ಡೇಟ್ ಮುಂದೂಡಲಾಗಿದ್ದು, ಡಿ.1ಕ್ಕೆ ಅನಿಮಲ್ ಸಿನಿಮಾ ರಿಲೀಸ್ ಆಗಲಿದೆ.

    ಬಿಗ್ ಬಿ ಜೊತೆಗಿನ ‘ಗುಡ್ ಬೈ’ (Good Bye) ಮತ್ತು ‘ಮಿಷನ್ ಮಜ್ನು’ ಬಳಿಕ ರಶ್ಮಿಕಾ ನಟನೆಯ ಬಾಲಿವುಡ್ 3ನೇ ಪ್ರಾಜೆಕ್ಟ್ ಅನಿಮಲ್ ಚಿತ್ರವಾಗಿದ್ದು, ಸಿನಿಮಾದ ಬಗ್ಗೆ ಶ್ರೀವಲ್ಲಿ ಫ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದೆ. ರಣ್‌ಬೀರ್-ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಸದ್ಯ ‘ಖುಷಿ’ (Kushi) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಬೆನ್ನಲ್ಲೇ ಹೊಸ ಸಿನಿಮಾದ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ವಿಜಯ್ ಮತ್ತೆ ಸಿನಿಮಾಗಾಗಿ ಕೈಜೋಡಿಸಿದ್ದಾರೆ.

    ಖುಷಿ (Kushi) ಚಿತ್ರದ ಮೂಲಕ ಸಮಂತಾ- ವಿಜಯ್ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ. ಹೀಗಿರುವಾಗ ಹೊಸ ಪ್ರಾಜೆಕ್ಟ್‌ಗಳತ್ತ ನಟ ಗಮನ ನೀಡುತ್ತಿದ್ದಾರೆ. ಅರ್ಜುನ್ ರೆಡ್ಡಿ ಡೈರೆಕ್ಟರ್- ಹೀರೋ ವಿಜಯ್ ಮತ್ತೆ ಒಂದಾಗುತ್ತಿದ್ದಾರೆ.

    vijaydevarakonda‘ಕಬೀರ್ ಸಿಂಗ್’ ಬಳಿಕ ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ (Animal) ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ರಿಲೀಸ್‌ಗೆ ರೆಡಿಯಿರುವ ಸಮಯದಲ್ಲೇ ವಿಜಯ್‌ಗೆ ಹೊಸ ಕಥೆ ಹೇಳಿ, ಸಿನಿಮಾ ಮಾಡುವ ಬಗ್ಗೆ ಒಂದು ಹಂತದ ಮಾತುಕಥೆ ನಡೆಸಿದ್ದಾರೆ. ಸಂದೀಪ್ ಕಥೆಗೆ ವಿಜಯ್ ಕೂಡ ಓಕೆ ಎಂದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ

    ಮೃಣಾಲ್ ಠಾಕೂರ್ (Mrunal Thakur) ಜೊತೆ ಹೊಸ ಚಿತ್ರ, ಶ್ರೀಲೀಲಾ(Sreeleela) ಜೊತೆಗಿನ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೀತಾ ಗೋವಿಂದಂ ನಿರ್ದೇಶಕ- ರಶ್ಮಿಕಾ ಮಂದಣ್ಣ ಜೊತೆ ಮತ್ತೆ ಹೊಸ ಸಿನಿಮಾ ಮಾಡುವ ಸುದ್ದಿಯಿದೆ. ಇದೆಲ್ಲದರ ನಡುವೆ ‘ಅರ್ಜುನ್ ರೆಡ್ಡಿ’ ಸಿನಿಮಾಗೂ ವಿಜಯ್ ಓಕೆ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆನ್ಸೇಷನಲ್ ಡೈರೆಕ್ಟರ್ ಜೊತೆ ರಣಬೀರ್ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾ

    ಸೆನ್ಸೇಷನಲ್ ಡೈರೆಕ್ಟರ್ ಜೊತೆ ರಣಬೀರ್ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾ

    ರ್ಜುನ್ ರೆಡ್ಡಿ ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ‘ಕಬೀರ್ ಸಿಂಗ್’ ಮೂಲಕ ಬಾಲಿವುಡ್ ಅಂಗಳದಲ್ಲೂ ಛಾಪು ಮೂಡಿಸಿದ್ದಾರೆ. ಇದೀಗ ಬಿ ಟೌನ್ ಸ್ಟಾರ್ ನಟ  ರಣಬೀರ್ ಕಪೂರ್ ಜೊತೆಗೂಡಿ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಅನಿಮಲ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದ ಮೂಲಕ ರಣಬೀರ್ ಕಪೂರ್ ಆಕ್ಷನ್ ಹೀರೋ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ‘ಅನಿಮಲ್’ ಚಿತ್ರದ ಫಸ್ಟ್ ಲುಕ್ ಚಿತ್ರತಂಡ ರಿಲೀಸ್ ಮಾಡಿದ್ದು, ರಣಬೀರ್ ನಯಾ ಅವತಾರ ಕಂಡು ಬಿಟೌನ್ ಮಂದಿ ಥ್ರಿಲ್ ಆಗಿದ್ದಾರೆ.

    ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಹಿಂದೆಂದೂ ಕಾಣದ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೊದಲ ಬಾರಿ ರಣಬೀರ್ ಕಪೂರ್ ರನ್ನು ಆಕ್ಷನ್ ಹೀರೋ ಆಗಿ ತೆರೆ ಮೇಲೆ ಡಿಫ್ರೆಂಟ್ ಆಗಿ ತೋರಿಸಲು ಸಜ್ಜಾಗಿದ್ದಾರೆ. ರಕ್ತಸಿಕ್ತವಾಗಿರೋ ದೇಹ, ಉದ್ದವಾದ ಕೂದಲು, ಕೈಯಲ್ಲಿ ಕೊಡಲಿ ಹಿಡಿದು ಸಿಗರೇಟ್ ಸೇದುತ್ತಿರುವ ರಣಬೀರ್ ರಗಡ್ ಲುಕ್ ‘ಅನಿಮಲ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರ ಎನ್ನೋದನ್ನು ಖಾತ್ರಿ ಪಡಿಸಿದೆ. ರಣಬೀರ್ ಅಭಿಮಾನಿಗಳು ಕೂಡ ಫಸ್ಟ್ ಲುಕ್ ಕಂಡು ಸಖತ್ ಥ್ರಿಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ನಾನಿ ಜೊತೆ ಡುಯೆಟ್ ಹಾಡಲು ರೆಡಿಯಾದ್ರು `ಸೀತಾರಾಮಂ’ ನಟಿ

     

    ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರ್ತಿರುವ ‘ಅನಿಮಲ್’ ಚಿತ್ರದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಿಲ್ ಕಪೂರ್ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಉಳಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿರಲಿದ್ದು ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ಫಸ್ಟ್ ಲುಕ್ ಜೊತೆಗೆ ಸಿನಿಮಾ ಬಿಡುಗಡೆ ಡೇಟ್ ಕೂಡ ರಿವೀಲ್ ಮಾಡಿರುವ ಚಿತ್ರತಂಡ ಆಗಸ್ಟ್ 11, 2023ಕ್ಕೆ ‘ಅನಿಮಲ್’ ಸಿನಿಮಾವನ್ನು ಹಿಂದಿ, ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿದ್ದವಾಗುತ್ತಿರುವ ಈ ಚಿತ್ರವನ್ನು ಟಿ ಸಿರೀಸ್, ಬದ್ರಕಾಳಿ ಪಿಕ್ಚರ್ಸ್ ನಡಿ ಭೂಷಣ್ ಕುಮಾರ್, ಪ್ರನಯ್ ರೆಡ್ಡಿ ವಾಂಗ ನಿರ್ಮಾಣ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]