Tag: ಸಂದೀಪ್ ಯಾದವ್

  • ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ

    ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ

    ಪಾಟ್ನಾ: 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ನಾಯಕ ಸಂದೀಪ್ ಯಾದವ್ ಬಿಹಾರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಮಾವೋವಾದಿಗಳ ಉನ್ನತ ನಾಯಕ ಮತ್ತು ಸಿಪಿಐ(ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ ಸಂದೀಪ್ ಅಲಿಯಾಸ್ ವಿಜಯ್ ಯಾದವ್ ಬುಧವಾರ ಸಂಜೆ ಗಯಾದ ಲುಟುವಾ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಎಸ್‍ಪಿ) ಹರ್‌ಪೀತ್ ಕೌರ್ ಅವರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿ ಕೈಕೊಟ್ಟ ಯುವಕ – ಲವ್‍ಜಿಹಾದ್‍ಗೆ ಯುವತಿ ಬಲಿ? 

    ಯಾದವ್ ಮೃತದೇಹವನ್ನು ಸಿಆರ್‌ಪಿಎಫ್ ತಂಡ ಪತ್ತೆ ಮಾಡಿದ್ದು, ಆತ ಹೇಗೆ ಸಾವನ್ನಪ್ಪಿದ್ದಾನೆ ಎಂಬುದರ ಕುರಿತು ಯಾವುದೇ ಮಾಹಿತಿ ಕೊಟ್ಟಿಲ್ಲ. ಪ್ರಸ್ತುತ ಯಾದವ್ ಮೃತದೇಹವನ್ನು ಗಯಾದ ಅನುಗ್ರಹ ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯಾರಿದು?
    ಮೃತ ಯಾದವ್ ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್‍ಗಢ ಸೇರಿದಂತೆ ಐದು ರಾಜ್ಯಗಳಿಗೆ ಬೇಕಾದ ಆರೋಪಿಯಾಗಿದ್ದನು. ಯಾದವ್ 1990ರ ದಶಕದಿಂದಲೂ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದು, ಸಿಪಿಐ(ಮಾವೋವಾದಿ) ಕೇಂದ್ರ ವಲಯದ ಉಸ್ತುವಾರಿ ವಹಿಸಿದ್ದ. ಇದನ್ನೂ ಓದಿ:  ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಕ್ಲಾಸ್ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    KILLING CRIME

    ಯಾದವ್ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 27 ವರ್ಷಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆ ಬಿಹಾರ ಸರ್ಕಾರ ಯಾದವ್‍ನನ್ನು ಹುಡುಕಿಕೊಟ್ಟರೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಜಾರ್ಖಂಡ್ ಸರ್ಕಾರ ಯಾದವ್‍ನನ್ನು ಜೀವಂತವಾಗಿ ಅಥವಾ ಶವವಾಗಿ ಹುಡುಕಿ ಕೊಟ್ಟರೆ ಅವರಿಗೆ 25 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.