Tag: ಸಂತ್ರಸ್ಥೆ

  • ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಬೆಂಗಳೂರು: ಬಳ್ಳಾರಿ (Bellary) ಸಂಸದ ದೇವೇಂದ್ರಪ್ಪ (MP Devendrappa) ಪುತ್ರನಿಂದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ (Physical Contact) ಬೆಳೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ (Victim Woman) ಆರೋಪಿಸಿದ್ದಾರೆ.

    ಮದುವೆಯಾಗುವುದಾಗಿ ನಂಬಿಸಿ ನನಗೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ (Ranganath) ವಿರುದ್ಧ ಮಹಿಳೆ ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಾಗಿದೆ. ಒಂದೂವರೆ ವರ್ಷದ ಹಿಂದೆ ಉಪನ್ಯಾಸಕ ರಂಗನಾಥ್ ಅವರ ಪರಿಚಯವಾಗಿದ್ದು, ಲೈಂಗಿಕ ಸಂಪರ್ಕ ಬಳಿಕ ಮದುವೆ ಆಗಲ್ಲ ಅಂತ ವಂಚನೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಬೆಂಗಳೂರಿನ (Bengaluru) ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಸಂತ್ರಸ್ತೆ ಪಬ್ಲಿಕ್ ಟಿವಿ ಜೊತೆ ನೇರ ಮಾತುಕತೆ ನಡೆಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದು ಬಿಜೆಪಿ ಶಾಸಕಾಂಗ ಸಭೆ – ಕುತೂಹಲ ಮೂಡಿಸಿದ ಯತ್ನಾಳ್‌, ಬೆಲ್ಲದ್‌ ನಡೆ

    ಸಂತ್ರಸ್ತೆ ಹೇಳಿದ್ದೇನು?
    ನನ್ನ ಹಾಗೂ ರಂಗನಾಥ್ ಅವರ ಮೊದಲ ಭೇಟಿ ಜನವರಿಯಲ್ಲಿ ಆಗಿತ್ತು. ಅದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತರ ಮೂಲಕ ನಮ್ಮಿಬರಿಗೆ ಪರಿಚಯವಾಗಿತ್ತು. ನಾನು ನಿನಗೆ ಜೀವನ ಕೊಡುತ್ತೇನೆ, ನಿನ್ನನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ, ನಾನು ಕೈತುಂಬಾ ಸಂಬಳ ತೆಗೆದುಕೊಳ್ಳುತ್ತೇನೆ. ನನಗೆ ಮಗು ಇಲ್ಲ. ನಾವಿಬ್ಬರು ರಹಸ್ಯವಾಗಿರೋಣ ಎಂದೆಲ್ಲಾ ಹೇಳಿದ್ದರು.

    ಅದಾದ ಬಳಿಕ ಒಂದು ಸಲ ಅಪ್ಪ ಅಮ್ಮನಿಗೆ ಪರಿಚಯ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ನನ್ನನ್ನು ಭೇಟಿ ಮಾಡಿಸದೇ ಖಾಸಗಿ ಹೋಟೆಲ್ ಒಂದರಲ್ಲಿ ಉಳಿಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಬಳಿಕ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಎಷ್ಟು ಪೀಡಿಸಿದರೂ ಅವರು ಮದುವೆ ಮಾಡಿಕೊಳ್ಳದೇ ದುಡ್ಡುಕೊಟ್ಟು ಬಿಟ್ಟುಬಿಡು ಎಂದು ಹೇಳಿದ್ದರು. ಅದಾದ ಬಳಿಕವೂ 2-3 ಬಾರಿ ಕೂತು ಮಾತನಾಡಿದ್ದೇವೆ. 6 ತಿಂಗಳ ಬಳಿಕ ನಾನು ಬರುತ್ತೇನೆ, ದಸರಾ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಬೆಂಗಳೂರು, ಮೈಸೂರಿನಲ್ಲಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ, ಸೆಕ್ಸ್‌ ಹೆಸರಲ್ಲಿ ವಂಚನೆ

    ಅವರಿಗೆ ಮೊದಲೇ ಮದುವೆಯಾಗಿತ್ತು ಎನ್ನುವುದು ಗೊತ್ತಿರಲಿಲ್ಲ. ಜಾತಿ ನಿಂದನೆ ಆರೋಪ ಸುಳ್ಳು. ದುಡ್ಡು ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. 15 ಲಕ್ಷ ಹಣ ಕೇಳಿರುವುದು ಸತ್ಯ. ಆದರೆ ಅದು ಬ್ಲ್ಯಾಕ್‌ಮೇಲ್ ಅಲ್ಲ. ನಾನು ದುಡ್ಡಿಗಾಗಿ ಅವರ ಸ್ನೇಹ ಬೆಳೆಸಿಲ್ಲ. ಮನೆ ಬಾಡಿಗೆಗಾಗಿ ನಾನು ಹಣ ಕೇಳಿದ್ದೆ.

    ಮದುವೆಯಾಗುವುದಾಗಿ ಪ್ರಾಮಿಸ್ ಮಾಡಿದ್ದರು. ಅವರಿಗೆ ಮದುವೆಯಾಗಿದೆ ಅಂತ ಇತ್ತೀಚಿಗೆ ಗೊತ್ತಾಯಿತು. ವಂಚನೆ ಬಳಿಕ ರಂಗನಾಥ್ ತಂದೆ ದೇವೇಂದ್ರಪ್ಪರನ್ನು ಸಂಪರ್ಕಿಸಿದ್ದೆ. ಎಫ್‌ಐಆರ್ ಆದ ಬಳಿಕ ಅವರ ಬಳಿ ಮಾತನಾಡಿದ್ದೆ. ಅವರ ತಂದೆ ಕಾನೂನು ಹೋರಾಟ ಮಾಡಿ ಅಂತ ಹೇಳಿದರು. ಮೋಸ ಮಾಡುತ್ತಿರುವವರು ಅವರೇ. ಹನಿಟ್ರ್ಯಾಪ್ ಅಂತ ಆರೋಪ ಮಾಡಿದರು. ಅದಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

  • ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

    ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

    ಬೆಂಗಳೂರು: ದೊಡ್ಡ ಸುದ್ದಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ರಮೇಶ್ ಜಾರಕಿಹೊಳಿ ಬಚಾವ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಕೂಡ ಸಮ್ಮತಿಯ ಮೇಲೆ ಸೆಕ್ಸ್ ನಡೆಸಿದ್ದಾರೆ. ಹಾಗಾಗಿ ಎಸ್‍ಐಟಿ ಶೀಘ್ರದಲ್ಲೇ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಲು ಮುಂದಾಗಲಿದೆ. ಹಾಗಾದ್ರೆ ಎಸ್‍ಐಟಿ ಪರಿಗಣಿಸಿರುವ ಅಂಶಗಳೇನು ಅನ್ನೋದರ ಮಾಹಿತಿ ಇಲ್ಲಿದೆ.

    ಎಸ್‍ಐಟಿ ಪರಿಗಣಿಸಿದ ಅಂಶಗಳೇನು?
    ಇಬ್ಬರು ಕೂಡ ಸಾಕಷ್ಟು ದಿನಗಳಿಂದ ಪರಿಚಯ ಇಟ್ಟುಕೊಂಡಿದ್ದವರು. ಇಬ್ಬರೂ ಸಮ್ಮತಿಯಿಂದ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಯುವತಿ ಆರೋಪ ಮಾಡಿದಂತೆ ಇಲ್ಲಿ ಯಾವುದೇ ಬಲತ್ಕಾರವೂ ನಡೆದಿಲ್ಲ. ಮಾಜಿ ಸಚಿವರು ಯುವತಿಗೆ ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಅನ್ನೋದು ಆಧಾರ ರಹಿತ. ಯುವತಿಗೆ ಕೆಲಸ ಕೊಡಿಸೋದಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯವೂ ಇಲ್ಲ. ಟೆಕ್ನಿಕಲ್ ಎವಿಡೆನ್ಸ್ ಗಳು ಇಲ್ಲ.

    ಇಬ್ಬರು ನಿರಂತರವಾಗಿ ದೂರವಾಣಿಯ ಮೂಲಕ ತುಂಬಾ ಸಲಿಗೆಯಿಂದಲೇ ಮಾತನಾಡಿದ್ದಾರೆ. ಇಬ್ಬರೂ ಕೂಡ ಲೈಂಗಿಕ ಪ್ರಚೋದನೆಯ ಮಾತುಗಳನ್ನಾಡಿದ್ದಾರೆ. ಒಬ್ಬರ ಮೇಲೆ ಒಬ್ಬರು ಒತ್ತಡ ಹೇರಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ. ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೆ ಸಂಬಂಧಪಟ್ಟ ಪೂರಕ ಸಾಕ್ಷ್ಯಗಳು ಇಲ್ಲ. ನ್ಯಾಯಾಧೀಶರ ಮುಂದೆ ಹೇಳಿದ ಹೇಳಿಕೆಗೂ ಪೊಲೀಸರ ಮುಂದೆ ಹೇಳಿದ ಹೇಳಿಕೆಗೂ ವ್ಯತ್ಯಾಸಗಳು ಕಂಡು ಬಂದಿವೆ. ಆರೋಪಿ ಮತ್ತು ಸಂತ್ರಸ್ಥೆಯ ಮನೆಯನ್ನು ಮಹಜರು ಮಾಡಿದಾಗ ಪೂರಕ ಸಾಕ್ಷ್ಯಗಳು ಇಲ್ಲ. ಸಂತ್ರಸ್ಥ ಯುವತಿ ಹೇಳಿದಂತೆ ಅಪಾಟ್ರ್ಮೆಂಟ್ ನಲ್ಲಿ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ.

    ವೈರಲ್ ಆಗಿರೋದು ಎಡಿಟೆಡ್ ವರ್ಸನ್ ವೀಡಿಯೋ. ವಿಧಿವಿಜ್ಞಾನ ಪ್ರಯೋಗಾಲಯ ಸಹ ವಿಡಿಯೋ ತುಣುಕುಗಳಿಗೆ ಸಂಬಂಧಿಸಿದ ಸ್ಪಷ್ಟವಾದ ವರದಿಯನ್ನು ನೀಡಿಲ್ಲ. ವೀಡಿಯೋ ತುಣುಕುಗಳನ್ನು ಯುವತಿ ಉದ್ದೇಶ ಪೂರಕವಾಗಿ ಮಾಡಿದ್ದಾಳೆ ಎಂಬ ಅನುಮಾನ ಇದೆ. ಯುವತಿ ಎರಡು ಬಾರಿ ವೀಡಿಯೋವನ್ನು ಮಾಡಿದ್ದಾಳೆ. ಒಮ್ಮೆ ಕಪ್ಪು ಬಣ್ಣದ ಟೀ ಶರ್ಟ್, ಮತ್ತೊಮ್ಮೆ ಕಾಫಿ ಕಲರ್ ಟೀ ಶರ್ಟ್ ಹಾಕಿರೋದು ವೀಡಿಯೋದಲ್ಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸಲ್ಲಿ ಕೋರ್ಟಿಗೆ 3 ಪ್ರತ್ಯೇಕ ವರದಿ 

    ಸಂತ್ರಸ್ತೆ ಎರಡು ಬಾರಿ ವೀಡಿಯೋ ರೆಕಾರ್ಡ್ ಮಾಡಿರೋದು ಬೇರೊಂದು ಉದ್ದೇಶ ಇರಬಹುದು ಎಂದು ಅನಿಸಿದೆ. ಎರಡು ಕ್ಯಾಮೆರಾಗಳನ್ನು ಯುವತಿ ಬಳಸಿದ್ದು ಒಂದು ವ್ಯಾನಿಟಿ ಬ್ಯಾಗ್ ನಲ್ಲಿತ್ತು ಎಂಬುದು ಸ್ಪಷ್ಟವಾಗಿದೆ. ವ್ಯಾನಿಟಿ ಬ್ಯಾಗ್ ನಲ್ಲಿದ್ದ ಕ್ಯಾಮೆರಾವನ್ನು ಬೇರೊಬ್ಬ ಯುವಕನ ಸಹಾಯದಿಂದ ಆಫ್ ಮಾಡಿದ್ದಾರೆ. ಕ್ಯಾಮೆರಾ ಆಫ್ ಮಾಡುವಾಗ ಯುವತಿ ಬೇರೊಂದು ಪ್ರಕರಣದ ಶಂಕಿತ ಆರೋಪಿಯ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಆರೋಪಿಯೂ ಕೂಡ ತನ್ನನ್ನು ಹೆದರಿಸುತ್ತಾ ಇದ್ದರು. ತನ್ನ ಮೊಬೈಲ್ ಗೆ ಎರಡು ಬಾರಿ ವಿಡಿಯೋ ಕಳುಹಿಸಿದ್ರು ಹಣಕ್ಕೆ ಬೇಡಿಕೆ ಇಟ್ಟಿದ್ರು ಅಂತ ಹೇಳಿದ್ದಾರೆ. ಆರೋಪಿ ಹೇಳಿಕೆಗೆ ಪೂರಕವಾದ ಕೆಲವೊಂದು ಸಾಕ್ಷ್ಯಗಳು ಸಿಕ್ಕಿವೆ. ಬೇರೊಂದು ಪ್ರಕರಣದ ಶಂಕಿತ ಆರೋಪಿಗಳು ಹಣವನ್ನು ಬ್ಲಾಕ್ ಅಂಡ್ ವೈಟ್ ಮಾಡಿರೋದು ಸಾಬೀತಾಗಿದೆ. ಆರೋಪಿ ರಮೇಶ್ ಜಾರಕಿಹೊಳಿ ಹಣ ನೀಡಿದ್ದಕ್ಕೂ ಈ ಯುವಕರು ಬ್ಲಾಕ್ ಅಂಡ್ ವೈಟ್ ಮಾಡಿದ್ದಕ್ಕೂ ತಾಳೆ ಆಗುತ್ತಿದೆ. ಅಲ್ಲದೇ ಯುವತಿಯ ಮೇಲೆ ಒಂದಷ್ಟು ಗಂಭೀರವಾದ ಆರೋಪಗಳು ಕೇಳಿ ಬಂದಿವೆ. ಆರೋಪಗಳಿಗೆ ಪ್ರಬಲ ಸಾಕ್ಷ್ಯ ಇಲ್ಲದೇ ಇದ್ದರೂ ಅನುಮಾನ ಹೆಚ್ಚಿದೆ. ಇಬ್ಬರೂ ಪ್ರಾಪ್ತರೂ ಆಗಿರೋದ್ರಿಂದ ಸಮ್ಮತಿಯ ಮೇಲೆ ಲೈಂಗಿಕ ಸಂಪರ್ಕವಾಗಿದೆ. ಇಲ್ಲಿ ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಅತ್ಯಾಚಾರ ಆಗಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇದನ್ನೂ ಓದಿ: ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ