Tag: ಸಂತ್ರಸ್ತ

  • ಸಂತ್ರಸ್ತರಿಂದ ಹಣ ಪೀಕುತ್ತಿದ್ದ ನಗರಸಭೆ ಬಿಲ್‍ಕಲೆಕ್ಟರ್ ಎಸಿಬಿ ಬಲೆಗೆ

    ಸಂತ್ರಸ್ತರಿಂದ ಹಣ ಪೀಕುತ್ತಿದ್ದ ನಗರಸಭೆ ಬಿಲ್‍ಕಲೆಕ್ಟರ್ ಎಸಿಬಿ ಬಲೆಗೆ

    ಮಡಿಕೇರಿ: ಮನೆ ಕೊಡಿಸುವುದಾಗಿ ಹೇಳಿ 2018ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದಲೂ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮಡಿಕೇರಿ ನಗರ ಸಭೆಯ ಬಿಲ್ ಕಲೆಕ್ಟರ್ ಲೋಹಿತ್ ಎಸಿಬಿ ಬಲೆಗೆ ಬಿದ್ದ ಆರೋಪಿ.

    ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ನಿವಾಸಿ ಗಣೇಶ್ ಎಂಬವರ ಮನೆ 2018 ರ ಭೀಕರ ಭೂಕುಸಿತದಲ್ಲಿ ಬಿದ್ದು ಹೋಗಿತ್ತು. ಸಂತ್ರಸ್ತರ ಮನೆ ಫಲಾನುಭವಿಗಳ ಎರಡನೇ ಪಟ್ಟಿಯಲ್ಲಿ ಗಣೇಶ್ ಅವರ ಹೆಸರಿತ್ತು. ಆದರೆ ಕೆಲವೇ ದಿನಗಳಲ್ಲಿ ಎರಡನೇ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿತ್ತು. ಈ ವಿಷಯ ತಿಳಿದ ಬಿಲ್ ಕಲೆಕ್ಟರ್ ಲೋಹಿತ್, ಗಣೇಶ್ ಅವರನ್ನು ಭೇಟಿಯಾಗಿ ನಿಮಗೆ ಮನೆಯನ್ನು ಕೊಡಿಸುತ್ತೇನೆ. ಆದರೆ 50 ಸಾವಿರ ಕೊಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಆದರೆ ಅದಕ್ಕೆ ಗಣೇಶ್ ಒಪ್ಪದಿದ್ದಾಗ 25 ಸಾವಿರ ರೂಪಾಯಿಗೆ ಫೈನಲ್ ಮಾಡಿದ್ದನಂತೆ.

    ಸಂತ್ರಸ್ತ ಗಣೇಶ್, ಆಗಲಿ ಎಂದು ಹೇಳಿ ಮನೆಯ ಬೆಲೆಬಾಳುವ ವಸ್ತುಗಳನ್ನು ಮಾರಿ ಮೊನ್ನೆಯಷ್ಟೇ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ನೀಡಿದ್ದರು. ಬಳಿಕ ಲೋಹಿತ್ ಗುರುವಾರ ಉಸ್ತುವಾರಿ ಸಚಿವರು ಜಂಬೂರಿನಲ್ಲಿ ಮನೆಗಳ ಹಕ್ಕುಪತ್ರ ನೀಡಿದ್ದಾರೆ. ನಂತರ ಶುಕ್ರವಾರ ಉಳಿದ 20 ಸಾವಿರ ಹಣವನ್ನು ಚುಪ್ತಾ ಮಾಡುವಂತೆ ಹೇಳಿದ್ದ. ಆಗಲಿ ಎಂದು ಮತ್ತೆ ಒಪ್ಪಿಕೊಂಡಿದ್ದ ಗಣೇಶ್, ನಿನ್ನೆಯಷ್ಟೇ ಜಂಬೂರಿನಲ್ಲಿ ಮನೆ ಪಡೆದುಕೊಂಡು ಇಂದು ಹಣ ನೀಡಲು ಮಡಿಕೇರಿ ನಗರ ಸಭೆ ಬಳಿಗೆ ಬಂದಿದ್ದಾರೆ.

    ಈ ವೇಳೆ ಗಣೇಶ್‍ನನ್ನು ನಗರಸಭೆಯಿಂದ ಎಪಿಎಂಸಿ ಮಾರುಕಟ್ಟೆ ಬಳಿಗೆ ಬರುವಂತೆ ಲೋಹಿತ್ ಹೇಳಿದ್ದಾನೆ. 2018ರ ಭೂಕುಸಿತದಲ್ಲಿ ಮನೆ ಕಳೆದುಕೊಂಡಿದ್ದ ಗಣೇಶ್ ತಾನು ನ್ಯಾಯಯುತವಾಗಿ ಮನೆ ಪಡೆದುಕೊಳ್ಳಲು ಇಷ್ಟೊಂದು ಕಷ್ಟ ಪಡಬೇಕೆ ಎಂದು ಯೋಚಿಸಿ ಇದೆಲ್ಲವನ್ನೂ ಇಂದು ಬೆಳಗ್ಗೆಯೇ ಎಸಿಬಿ ಪೊಲೀಸರಿಗೆ ದೂರು ನೀಡಿ ಬಂದಿದ್ದಾರೆ. ದೂರು ಆಧರಿಸಿದ ಎಸಿಬಿ ಪೊಲೀಸರು ಡಿವೈಎಸ್‍ಪಿ ತಿಪ್ಪಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಿ ಬಿಲ್ ಕಲೆಕ್ಟರ್ ಲೋಹಿತ್ ನನ್ನು 20 ಸಾವಿರ ಹಣದ ಸಹಿತ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • ನಕಲಿ ಐಟಿ ಅಧಿಕಾರಿಗಳ ವೇಷದಲ್ಲಿ ವಂಚನೆ- ಸಂತ್ರಸ್ತನ ಮನೆಯಲ್ಲಿ ಹಣ ಪೀಕಲು ನಡೆಸಿದ್ರು ಮಸಲತ್ತು

    ನಕಲಿ ಐಟಿ ಅಧಿಕಾರಿಗಳ ವೇಷದಲ್ಲಿ ವಂಚನೆ- ಸಂತ್ರಸ್ತನ ಮನೆಯಲ್ಲಿ ಹಣ ಪೀಕಲು ನಡೆಸಿದ್ರು ಮಸಲತ್ತು

    ಬಾಗಲಕೋಟೆ: ಪ್ರವಾಹ ಸಂತ್ರಸ್ತನ ಮನೆ ಮೇಲೆ ನಕಲಿ ಐಟಿ ದಾಳಿ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಕ್ಷ್ಮಣ ಸರೆನ್ನವರ್ (ಅಲಗೂರು) ಎಂಬವರು ನಕಲಿ ಐಟಿ ಅಧಿಕಾರಿಗಳ ವಂಚನೆಗೆ ಒಳಗಾದವರು. ಡಿಸೆಂಬರ್ 23ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮಣ್ ಅವರ ಮನೆಗೆ ಡಿಸೆಂಬರ್ 23ರಂದು ಬೆಳಗ್ಗೆ ನಾಲ್ಕು ಗಂಟೆಗೆ ಗೋವಾ ಪಾಸಿಂಗ್ ಇರುವ ಎರ್ಟಿಗಾ ಕಾರಿನಲ್ಲಿ ಓರ್ವ ಮಹಿಳೆ ಸೇರಿದಂತೆ ಏಳು ಜನ ಬಂದಿದ್ದರು.

    ಲಕ್ಷ್ಮಣ್ ಮನೆಯವರಿಗೆ ತಾವು ಐಟಿ ಅಧಿಕಾರಿಗಳೆಂದು ಹೇಳಿ, ಮನೆಯ ಹಾಲ್ ನಲ್ಲಿನ ಹಾಸುಕಲ್ಲು, ಬ್ಯಾಗ್, ಪೆಟ್ಟಿಗೆ ಕಿತ್ತು ಜಾಲಾಡಿದ್ದಾರೆ. ಸೀಜ್ ಮಾಡುವ ನೆಪದಲ್ಲಿ 12,500 ರೂ. ಮೂರು ಮೊಬೈಲ್ ಹೊತ್ತೊಯ್ದಿದ್ದಾರೆ.

    ಇತ್ತೀಚೆಗೆ ಪ್ರವಾಹದ ವೇಳೆ ಲಕ್ಷ್ಮಣ್ ಮನೆಗೆ ಕೋಟಿ ಕೋಟಿ ಹಣ ಬಂದಿದೆ ಎಂದು ಸುದ್ದಿ ಹಬ್ಬಿತ್ತು. ಈ ಸುದ್ದಿ ತಿಳಿದು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಂಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ವಂಚಕರು ಬೆಳಗಾವಿಗೆ ಬಂದು ಭೇಟಿಯಾಗಿ ಎಂದು ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು ಹೋಗಿದರು. ವಂಚಕರ ಮಾತು ಕೇಳಿ ಲಕ್ಷ್ಮಣ ಅಲಗೂರ ಬೆಳಗಾವಿಗೆ ಹೋದಾಗ ಮೋಸ ಹೋಗಿದ್ದಾಗಿ ತಿಳಿದುಬಂದಿದೆ.

    ಈ ನಕಲಿ ಐಟಿ ದಾಳಿ ಹಿಂದೆ ಗ್ರಾಮಸ್ಥರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಸದ್ಯ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪ್ರವಾಹ ಸಂತ್ರಸ್ತರಿಗೆ ನಟ ಪುನೀತ್‍ರಿಂದ 5 ಲಕ್ಷ ರೂ. ನೆರವು

    ಪ್ರವಾಹ ಸಂತ್ರಸ್ತರಿಗೆ ನಟ ಪುನೀತ್‍ರಿಂದ 5 ಲಕ್ಷ ರೂ. ನೆರವು

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಂದು ಪ್ರವಾಹ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಅವರು ಸಂತ್ರಸ್ತರಿಗಾಗಿ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಬಳಿಕ ಯಡಿಯೂರಪ್ಪ ಅವರು ಪುನೀತ್ ರಾಜ್‍ಕುಮರ್ ಅವರಿಗೆ ಬಿಳ್ಕೊಟ್ಟರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪುನೀತ್ ಅವರು, “ಚೆಕ್ ಕೊಡಲು ಎಂದು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬಂದು ಹೇಳಿದ ಮೇಲೆ ಎಲ್ಲ ಕಡೆ ಅಭಿಮಾನಿಗಳು ಹಾಗೂ ಜನರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿ ತುಂಬಾ ಖುಷಿ ಆಗುತ್ತಿದೆ. ಆದರೂ ಈಗ ಆಗಿರುವಂತಹ ನಷ್ಟಗಳನ್ನು ಪರಿಹಾರಕ್ಕೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೇವೆ” ಎಂದರು.

    ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದರು. ಈ ಬಗ್ಗೆ ಉಪೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದರು.

  • ಕೊಡಗು ಸಂತ್ರಸ್ತ ನೀರಾವರಿ ನಾಲೆಗೆ ಹಾರಿ ಆತ್ಮಹತ್ಯೆ!

    ಕೊಡಗು ಸಂತ್ರಸ್ತ ನೀರಾವರಿ ನಾಲೆಗೆ ಹಾರಿ ಆತ್ಮಹತ್ಯೆ!

    ಮಡಿಕೇರಿ: ಮನನೊಂದು ಕೊಡಗು ಸಂತ್ರಸ್ತರೊಬ್ಬರು ನೀರಾವರಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗುಡ್ಡೆ ಹೊಸೂರಿನಲ್ಲಿ ನಡೆದಿದೆ.

    ಮೂಲತಃ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ನಿವಾಸಿಯಾದ ವಿಜು ಭೀಮಯ್ಯ(42) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಇವರ ಮನೆಯೂ ಹಾನಿಯಾಗಿದ್ದು, ಆ ಕಾರಣದಿಂದಾಗಿ ಇತ್ತೀಚೆಗೆ ಗುಡ್ಡೆಹೊಸೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.

    ಗುಡ್ಡೆ ಹೊಸೂರಿನ ಬಿಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ವಿಜು ಭೀಮಯ್ಯ 2 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು.

    ಭಾನುವಾರ ರಾತ್ರಿ ಪತ್ನಿ ಜಾನಕಿ ಹಾಗೂ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು. ಪತ್ನಿ ಮಕ್ಕಳು ನಿದ್ದಗೆ ಜಾರಿದ ಬಳಿಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಳ್ಯದ ಆಶ್ರಯ ಕೇಂದ್ರದಲ್ಲಿದ್ದ ಜೋಡುಪಾಲ ಸಂತ್ರಸ್ತ ಸಾವು

    ಸುಳ್ಯದ ಆಶ್ರಯ ಕೇಂದ್ರದಲ್ಲಿದ್ದ ಜೋಡುಪಾಲ ಸಂತ್ರಸ್ತ ಸಾವು

    ಮಂಗಳೂರು: ಆಶ್ರಯ ಕೇಂದ್ರದಲ್ಲಿ ಜೋಡುಪಾಲ ಸಂತ್ರಸ್ತ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡುವಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದಿದೆ.

    ಅಂಗಾರ(60) ಮೃತಪಟ್ಟ ಸಂತ್ರಸ್ತ. ಇವರು ಕೊಡಗು ಜಿಲ್ಲೆಯ ಮೊಣ್ಣಂಗೇರಿ ಗ್ರಾಮದ ನಿವಾಸಿಯಾಗಿದ್ದಾರೆ. ಇವರಿಗೆ ರಾತ್ರಿ 1 ಗಂಟೆ ಸುಮಾರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅಂಗಾರ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಅಂಗಾರ ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇತ್ತು. ಕೊಡಗಿನಲ್ಲಿ ಆದ ಘಟನೆಯಿಂದ ಅವರು ಸಾಕಷ್ಟು ನೊಂದಿದ್ದರು. ಕೊಡಗಿನಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಜನರಲ್ಲಿ ಈ ಸಮಸ್ಯೆಯಾಗುತ್ತಿತ್ತು. ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಅಂಗಾರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv