Tag: ಸಂತೋಷ್ ಹೆಗ್ಡೆ

  • ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

    ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

    ಮಂಗಳೂರು: ಸಿಎಂ ಸಿದ್ದರಾಮಯ್ಯರ (Siddaramaiah) ವಿರುದ್ಧ ಇಂತಹ ಗಂಭೀರ ಆರೋಪಗಳಿರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ (Santosh Hegde) ಅಭಿಪ್ರಾಯಪಟ್ಟಿದ್ದಾರೆ.

    ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಇದೇ ರೀತಿ ರಾಜೀನಾಮೆ ಕೊಡಬೇಕೋ ಕೊಡಬೇಡವೋ ಅನ್ನೋದು ಸಿಎಂ‌ ಹಾಗೂ ಅಧಿಕಾರಿಗಳಿಗೆ ಬಿಟ್ಟಿದ್ದು. ಕೊಡದೇ ಇದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತನಿಖೆ ಎದುರಿಸಲು ಸಿದ್ಧನಿದ್ದೇನೆ: ಕೋರ್ಟ್ ಆದೇಶಕ್ಕೆ ಸಿಎಂ ಪ್ರತಿಕ್ರಿಯೆ

    ಈಗ ಅನುಮತಿ ಕೊಟ್ಟಿದ್ದು, ಮುಡಾದ ವಿಚಾರದಲ್ಲಿ ಮಾತ್ರ. ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಅಂತಾ ಹೇಳಿದೆ. ಆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕು ಅಂತಾ ನನಗೆ ಅನ್ನಿಸುತ್ತಿದೆ. ರಾಜೀನಾಮೆ ಕೊಡಬೇಕು ಅನ್ನೋದು ಈಗ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

    ಅವರು ಆರೋಪಿಯಲ್ಲ ಅಂತಾ ತೀರ್ಪು ಬಂದರೆ ಮತ್ತೆ ಹುದ್ದೆಗೆ ವಾಪಾಸ್ ಬರಬಹುದು. ಹೈಕೋರ್ಟ್ ತೀರ್ಪು ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ರು. ಹೀಗಾಗಿ ಸದ್ಯ ಅವರು ಹೇಳಿದ್ದು, ಸರಿ ಇಲ್ಲ ಅಂತಾ ಆಯ್ತಲ್ಲ ಎಂದು ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್‌ ಆದೇಶ

    ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. ಲೋಕಾಯುಕ್ತ ಪ್ರಕರಣದ ತನಿಖೆ ನಡೆಸಿ ಡಿ.24ರ ಒಳಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

  • ರೈತರ ಬೃಹತ್‌ ಪ್ರತಿಭಟನೆ – ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ

    ರೈತರ ಬೃಹತ್‌ ಪ್ರತಿಭಟನೆ – ಮೈಮೇಲೆ ಸಗಣಿ ಬಳಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ

    – ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರ ಆಗ್ರಹ

    ಬೆಂಗಳೂರು: ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು, ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರಿಂದು ಬೃಹತ್‌ ಪ್ರತಿಭಟನೆ (Farmers Protest) ನಡೆಸಿದರು.

    ನಗರದ ಕನಕಪುರ ರಸ್ತೆಯಿಂದ ಪಾದಯಾತ್ರೆ ಆರಂಭಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದರು. ಪಾದಯಾತ್ರೆಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ಚಾಲನೆ ನೀಡಿದರು. ಕೆಲ ರೈತರು ಮೈಮೇಲೆ ಸಗಣಿ ಬಳಿದುಕೊಂಡು ಆಕ್ರೋಶ ಹೊರಹಾಕಿದರು. ಆದ್ರೆ ಮಾರ್ಗಮಧ್ಯೆ ರೈತರನ್ನು ತಡೆದ ಪೊಲೀಸರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಸ್ಥಳದಲ್ಲೇ ಇರುವಂತೆ ತಡೆದರು. ಬ್ಯಾರಿಕೇಡ್ ಹಾಕಿ ಸೋಮನಹಳ್ಳಿ ಗೇಟ್ ಬಳಿಯೇ ರೈತರನ್ನು ತಡೆದರು. ಪ್ರತಿಭಟನಾ ಮಾರ್ಗವನ್ನು ಬಂದ್‌ ಮಾಡಿದರು. ಈ ವೇಳೆ ಪೊಲೀಸರು (Bengaluru Police) – ರೈತರ ನಡುವೆ ತಳ್ಳಾಟ, ನೂಕಾಟಗಳು ನಡೆಯಿತು. ಇದರಿಂದ ತೃಪ್ತರಾಗದ ರೈತರು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಂದ ಸಾಧ್ಯವಿಲ್ಲ. ಕೃಷಿ ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಇದನ್ನೂ ಓದಿ: Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    ರೈತರ ಬೇಡಿಕೆಗಳೇನು?
    1) ಬೆಂಗಳೂರು ದಕ್ಷಿಣ ತಾಲ್ಲೂಕಿನ 30 ಗ್ರಾಮಗಳಲ್ಲಿ ದಶಕಗಳಿಂದ ಉಳುಮೆ ಬಂದಿರುವ ಸಾಗುವಳಿ ಜಮೀನುಗಳನ್ನು ಪೋಡಿ, ದುರಸ್ತಿ ಮಾಡಿಕೊಟ್ಟು ರೈತರಿಗೆ ತಮ್ಮ ಜಮೀನುಗಳ ಮೇಲೆ ಸಂಪೂರ್ಣ ಹಕ್ಕನ್ನು ಕೊಡಬೇಕು.
    2) ಸೋಮನಹಳ್ಳಿ ಬಳಿ ನಿರ್ಮಿಸುತ್ತಿರುವ ಟೋಲ್‌ನಲ್ಲಿ ಸ್ಥಳೀಯ ವಾಹನ ಸವಾರರಿಗೆ ಸರ್ವಿಸ್ ರಸ್ತೆ ನೀಡಬೇಕು ಅಥವಾ ಟೋಲನ್ನು ಕಗ್ಗಲೀಪುರ ಬೈಪಾಸ್ ಗೆ ಸ್ಥಳಾಂತರಿಸಬೇಕು
    3) ಕಗ್ಗಲಿಪುರ, ಸಾಲುಹುಣಸೆ ಉದಿಪಾಳ್ಯ ಬೈಪಾಸ್ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ತಪ್ಪಿಸುವುದು
    4) ಅರಣ್ಯ ಇಲಾಖೆ ರೈತರನ್ನು ಒಕ್ಕಲೆಸಬೇಕೆಂದು ನೀಡುತ್ತಿರುವ ಕಿರುಕುಳದಿಂದ ಮುಕ್ತಿ ಕೂಡಿಸಬೇಕು
    5) 45 ವರ್ಷಗಳಿಂದ ಸಾಕಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು.
    6) ಪಟ್ಟರೆಡ್ಡಿ ಪಾಳ್ಯ ಗ್ರಾಮಕ್ಕೆ ಪರ್ಯಾಯ ರಸ್ತೆ ನಿರ್ಮಿಸಬೇಕು.
    7) 7 ತಿಂಗಳಿನಿಂದ ತಡೆ ಹಿಡಿದಿರುವ ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.
    8) ಅಗತ್ಯವಿರುವ ಕಡೆಗಳಲ್ಲಿ ಸೇತುವೆ ರಸ್ತೆಗಳನ್ನು ನಿರ್ಮಿಸಿ ಕೊಡಬೇಕು.
    9) ಹೆಚ್ಚಿನ ಮಳೆಯಾದಾಗ ನದಿಗಳಿಗೆ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ – ಪ್ರತ್ಯೇಕ ತನಿಖೆ ಆರಂಭಿಸಿದ ED

  • ಭಾರತದ ಕಿರಿಯ ಕವಯಿತ್ರಿ ಅಮನ ಬರೆದ ನಾಲ್ಕನೇ ಪುಸ್ತಕ ಬಿಡುಗಡೆ

    ಭಾರತದ ಕಿರಿಯ ಕವಯಿತ್ರಿ ಅಮನ ಬರೆದ ನಾಲ್ಕನೇ ಪುಸ್ತಕ ಬಿಡುಗಡೆ

    ಬೆಂಗಳೂರು: ಕುಮಾರಿ ಅಮನ ಜೆ.ಕುಮಾರ್ (Amana Kumar) ಅವರ ನಾಲ್ಕನೇ ಪುಸ್ತಕ Galore of Mysteries ಅನ್ನು ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ (Santosh Hegde) ಬಿಡುಗಡೆ ಮಾಡಿದರು.

    ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ರವರ ಸಂದೇಶವು ಈ ಪುಸ್ತಕದಲ್ಲಿ ಪ್ರಕಟವಾಗಿದೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಇಸ್ರೋದ ಚಂದ್ರಯಾನ 3 ಪ್ರಾಜೆಕ್ಟ್‌ ಡೈರೆಕ್ಟರ್‌ ಡಾ. ಪಿ.ವೀರ ಮುತ್ತುವೇಲ್ ಬರೆದಿದ್ದಾರೆ.

    ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್‌ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವಡ್ ವಿಶ್ವ ವಿದ್ಯಾಲಯದಿಂದ “Masterpieces of World Literature” ಕೋರ್ಸ್ ಮಾಡಿದ್ದಾರೆ.

    ಅಮಾನಾಳ Galore of Mysteries” ಪುಸ್ತಕವು, ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿರುತ್ತದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನೆಯ ಲೋಕಕ್ಕೆ ಕರೆದೊಯ್ಯುವ ಆಕರ್ಷಣೆಯನ್ನು ಹೊಂದಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಶ್ವದರ್ಜೆಯ ವಿಮಾನ, ರೈಲು ನಿಲ್ದಾಣದ ವಿಶೇಷತೆಗಳು ಏನು?

    ಡಾ. ಲತಾ ಟಿ.ಎಸ್, ಹಾಗೂ ಜೈವಂತ್ ಕುಮಾರ್ ಅವರ ಮಗಳಾದ ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲೀಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು,  ಪ್ರಥಮ ಕವನ “Echoes of Soulful Poems” ಎರಡನೇ World Amidst the Words” ಹಾಗೂ “Lafzon ki Mhfil “ ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಪ್ಲಿಫ್‌  ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿರುತ್ತವೆ. ಇಲ್ಲಿಯವರೆಗೂ ಅಮನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.

    ಅಮನಳ ದಾಖಲೆಗಳು:
    * ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಫ್‌ ರೆಕಾಡ್ಸ್ -2021
    * ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು.
    *ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021 ಗೋವಾದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
    *ನೋಬಲ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ
    *ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಯಿತ್ರಿ
    *ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ ಬರೆದಿದ್ದಾರೆ.
    * ವಂಡರ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ
    * ಇಂಟರ್ನ್ಯಾಷನಲ್ ಬುಕ್ಅಫ್‌ ರೆಕಾರ್ಡ್ಸ್ ಕಿರಿಯ ಕವಯತ್ರಿ.

  • ರಾಜಕಾರಣದಿಂದ ಹಣ ಗಳಿಸಲು ಐಎಎಸ್ ಅಧಿಕಾರಿಗಳು, ರೌಡಿಗಳು ಬರ್ತಾ ಇದ್ದಾರೆ: ಸಂತೋಷ ಹೆಗ್ಡೆ

    ರಾಜಕಾರಣದಿಂದ ಹಣ ಗಳಿಸಲು ಐಎಎಸ್ ಅಧಿಕಾರಿಗಳು, ರೌಡಿಗಳು ಬರ್ತಾ ಇದ್ದಾರೆ: ಸಂತೋಷ ಹೆಗ್ಡೆ

    ದಾವಣಗೆರೆ: ರಾಜಕೀಯದಲ್ಲಿ ಹೆಚ್ಚು ಸಂಪಾದನೆ ಮಾಡಬಹುದು ಎಂದುಕೊಂಡು ಐಎಎಸ್ ಅಧಿಕಾರಿಗಳು, ಗುಂಡಾಗಳು ರಾಜಕೀಯಕ್ಕೆ ಬರುತ್ತಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ತಿಳಿಸಿದರು.

    ದಾವಣಗೆರೆಯ (Davanagere) ಜಿಲ್ಲಾಧಿಕಾರಿಗಳ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ರಾಜಕೀಯಯಕ್ಕೆ ರೌಡಿ ಶೀಟರ್‌ಗಳು, ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವರು ಸಾಲುಗಟ್ಟಿ ಹೋಗುತ್ತಿದ್ದಾರೆ. ಯಾಕೆಂದರೆ ಇಲ್ಲಿ ಲಾಭ ಇದೆ ಎಂದು ಅವರಿಗೆ ತಿಳಿದಿದೆ. ಎಲ್ಲಿಯೂ ಇಲ್ಲದ ಸಂಪಾದನೆ ರಾಜಕೀಯದಲ್ಲಿ ಇದೆ ಎಂದು ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇದಕ್ಕೆಲ್ಲ ಕಡಿವಾಣ ಬೀಳಬೇಕು. ಈ ವ್ಯವಸ್ಥೆ ಬಹಳಷ್ಟು ಸುಧಾರಣೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು

    ಮತದಾರರ ಪಟ್ಟಿ ಅಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಈ ಅವ್ಯವಹಾರ ಸಂವಿಧಾನ ವಿರುದ್ಧವಾಗಿದೆ. ಈ ನೆಲದ ಕಾನೂನುಗಳಿಗೆ ವಿರುದ್ಧವಾಗಿದೆ. ಅಲ್ಲದೆ ಯಾರು ಇದನ್ನು ಸರಿ ಅಂತ ಒಪ್ಪಿಕೊಳ್ಳಲು ಆಗಲ್ಲ. ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಅವ್ಯವಹಾರ ಆಗ್ತಾ ಇದೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದರೆ ಪ್ರಜಾಪ್ರಭುತ್ವ ಮಟ್ಟ ಎತ್ತ ಸಾಗುತ್ತಿದೆ ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಈಗ ಲೋಕಾಯುಕ್ತ ಅಧಿಕಾರ ಕೊಟ್ಟಿದ್ದಾರೆ. ಅದು ಹೇಗೆ ಆಡಳಿತ ನಡೆಸುತ್ತದೆ ಎನ್ನುವುದು ಕಾದು ನೋಡೋಣ ಎಂದರು. ಇದನ್ನೂ ಓದಿ: ಪಂಡಿತರಿಗೆ ಕೇಂದ್ರದಿಂದ ಗುಡ್‍ನ್ಯೂಸ್ – ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ

    ಧಾರವಾಡ: ಬೆಂಗಳೂರಿನ (Bengaluru) ರಾಜಕಾಲುವೆ ಒತ್ತುವರಿಯ ಹಿಂದೆ ಐಟಿ ಕಂಪನಿಗಳ ಕೈವಾಡವೂ ಇದೆ, ಆಗರ್ಭ ಶ್ರೀಮಂತರ ಕಟ್ಟಡದಿಂದಲೂ ಒತ್ತುವರಿಯಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (Santosh Hegde) ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ರಾಜಕಾಲುವೆ (Rajakaluve) ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ ಬಡಾವಣೆಗಳೂ ಜಾಸ್ತಿಯಾಗ್ತಿವೆ. ಸುಭಾಷ್‌ನಗರ ಬಸ್ ನಿಲ್ದಾಣ ಕೆರೆಯಾಗಿತ್ತು, ಸಂಪಂಗಿಯಲ್ಲಿ ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ (stadium) ಮಾಡಿದ್ದಾರೆ. ಎಲ್ಲ ಕೆರೆಗಳನ್ನು ಬಿಡಿಎ ಮುಖಾಂತರ ಲಾಭಕ್ಕಾಗಿ ಬಳಕೆ ಮಾಡಿದ್ದಾರೆ. ಇದರಲ್ಲಿ ಜನರ ಹಾಗೂ ಅಧಿಕಾರದಲ್ಲಿ ಇದ್ದವರ, ಇಲ್ಲದವರ ದುರಾಸೆಯೂ ಇದೆ. ಐಟಿ (IT) ಕಂಪನಿಗಳ ಕೈವಾಡವೂ ಇದೆ. ಆಗರ್ಭ ಶ್ರೀಮಂತರ ಕಟ್ಟಡಗಳಿಂದಲೂ ಒತ್ತುವರಿಯಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್‍ಮ್ಯಾನ್ ಸಾವು

    ಎರಡು ವರದಿ ಕೊಟ್ಟಿದ್ದೇನೆ: ಬಹಳ ಹಿಂದೆಯೇ ನಾನು ರಾಜಕಾಲುವೆ ಒತ್ತುವರಿ ಬಗ್ಗೆ ಎರಡು ವರದಿ ಕೊಟ್ಟಿದ್ದೇನೆ. ಎನ್‌ಜಿಟಿ (NGT) (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಮಹಾರಾಜರು (King) ಹಿಂದೆ ಮಳೆ ನೀರು ಸಂಗ್ರಹಿಸುವ ಉದ್ದೇಶದಿಂದ ನೂರಾರು ಕೆರೆ ಕಟ್ಟಿದ್ರು. ಮಳೆ ಬಂದಾಗ ಅಲ್ಲಿಗೇ ನೀರು ಹರಿದು ಹೋಗುತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್‌ ಹೆಗ್ಡೆ

    ಬೆಂಗಳೂರಿನಲ್ಲಿ ಸುಮಾರು 200 ಕೆರೆಗಳಿದ್ದವು. ಭಾಷಾವಾರು ಪ್ರಾಂತ್ಯ ಆದಾಗ ಬೆಂಗಳೂರು ರಾಜಧಾನಿ ಆಯಿತು. ಅಗ ಇಲ್ಲಿ ದಿಢೀರ್ ಜನಸಂಖ್ಯೆ (Population) ಹೆಚ್ಚಾಯ್ತು. ಆದರೆ ಸರ್ಕಾರ ಯೋಜನೆ ಮಾಡಿ ಜಾಗ ಕೊಡೋದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಅವಕಾಶ ಮಾಡಿಕೊಡ್ತು. ನೀರು ಹೋಗುವ ರಾಜಕಾಲುವೆ ಈಗ ಅಲ್ಲಿ ಇಲ್ಲಾ, ಈಗ ಮಳೆ ಬಂದರೆ ನೀರು ಹೋಗಲೂ ಜಾಗ ಇಲ್ಲಾ, ಎಲ್ಲಾ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದೂ ಇದೆ ಎಂದು ಆರೋಪಿಸಿದ್ದಾರೆ.

    ಈ ಹಿಂದೆಯೂ ಬೆಂಗಳೂರಿನಲ್ಲಿ ಮಳೆಯಾಗಿದೆ. ಹಿಂದೆ ಕೆರೆ ನೀರು ಹೋಗಲು ಒಂದು ಸಿಸ್ಟಮ್ ಇತ್ತು. ಹಿಂದೆ ಬೆಂಗಳೂರಿಗೆ ಗಾರ್ಡನ್ ಸಿಟಿ, ಏರ್ ಕಂಡೊಷನ್ ಸಿಟಿ ಅಂತಿದ್ರು, 70ರ ದಶಕವರೆಗೆ ಆರ್ಮಿ ಅವರಿಗೆ ಫ್ಯಾನ್ ಇರಲಿಲ್ಲ, ಅಷ್ಟು ತಣ್ಣನೆಯ ಗಾಳಿ ಇತ್ತು. ಇವತ್ತು ಬಿಸಿಲು ಜಾಸ್ತಿಯಾಗಿದೆ, ಕೆರೆ ಇಲ್ಲದಂತಾಗಿದೆ. ಇದೆಲ್ಲವೂ ಮನುಷ್ಯನ ದುರಾಸೆಯ ಪ್ರತಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್‌ ಹೆಗ್ಡೆ

    ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್‌ ಹೆಗ್ಡೆ

    ಮೈಸೂರು: ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ ಇದರಿಂದ ನಡುಕ ಹುಟ್ಟಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

    ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಹೈಕೋರ್ಟ್‌ ರದ್ದುಪಡಿಸಿದ್ದ ಬಗ್ಗೆ ಮಾತನಾಡಿದ ಅವರು, ಮೂರು ಪಕ್ಷದಲ್ಲಿ ಕೂಡ ಈ ತೀರ್ಪನ್ನು ವಿರೋಧಿಸಬಹುದು. ಕಾರಣ ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಮೇಲೆ, ಅಧಿಕಾರಿಯ ಮೇಲೆ ಕ್ರಮ ಜರುಗಿಸಿರಲಿಲ್ಲ. ಲೋಕಾಯುಕ್ತಕ್ಕೆ ಸ್ವಾತಂತ್ರ್ಯವಾದ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಈ ಮೂಲಕ ಲೋಕಾಯುಕ್ತವನ್ನು ಬಲಪಡಿಸಬೇಕು. ಎಸಿಬಿಯಲ್ಲಿ ಈವರಗೆ ಸಾವಿರಾರು ಕೇಸ್‌ಗಳು ದಾಖಲಾಗಿವೆ. ಆದರೆ ಯಾರಿಗೂ ಶಿಕ್ಷೆ ಆಗಿಲ್ಲ ಎಂಬುದೇ ಬೇಸರ. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷೆಯೇ ಆಗಿಲ್ಲ. ಮಂತ್ರಿ ಇರಲಿ ಒಬ್ಬ ಶಾಸಕನನ್ನು ಕೂಡ ಎಸಿಬಿ ವಿಚಾರಣೆ ಮಾಡಿಲ್ಲ. ನಮ್ಮ ನಿಮ್ಮಂತವರು ತಪ್ಪು ಮಾಡಿದರೆ ಹೀಗೆ ನಡೆದುಕೊಳ್ಳುತ್ತಿದ್ದರಾ ಎಂದು ಪ್ರಶ್ನಿಸಿದರು.

    ಸರ್ಕಾರಿ ಅಧಿಕಾರಿಗಳು ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಅಂದಿನ ಬ್ರಿಟಿಷರು ತಮ್ಮ ಪ್ರಾಬಲ್ಯಕ್ಕಾಗಿ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ನಮ್ಮದೇ ಸರ್ಕಾರ ಇರುವಾಗ ಸರ್ಕಾರದ ಅನುಮತಿ ಯಾಕೆ ಬೇಕು? ಸಾಮಾನ್ಯ ಜನರನ್ನು ನೇರವಾಗಿ ತನಿಖೆ ಮಾಡುತ್ತಾರೆ. ಆದರೆ ಅಧಿಕಾರಿಗಳನ್ನು ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಏಕೆ ಎಂದು ಕೇಳಿದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ- ಎಲ್ಲರ ಮನೆ ಮೇಲೆ ತಿರಂಗಾ ಹಾರಿಸುವಂತೆ ಸಿಎಂ ಮನವಿ

    Live Tv
    [brid partner=56869869 player=32851 video=960834 autoplay=true]

  • ದೇಶದ ಆರ್ಥಿಕತೆಗೆ ನಷ್ಟ- ಉಪಕದನದ ಕುರಿತು ಸಂತೋಷ್ ಹೆಗ್ಡೆ ಗರಂ

    ದೇಶದ ಆರ್ಥಿಕತೆಗೆ ನಷ್ಟ- ಉಪಕದನದ ಕುರಿತು ಸಂತೋಷ್ ಹೆಗ್ಡೆ ಗರಂ

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ನಿರಸವಾಗಿಸಾಗಿದ್ದು, ಇದೇ ವೇಳೆ ಉಪಕದನದ ಕುರಿತು ಮಾಜಿ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶಿವಾಜಿನಗರದಲ್ಲಿ ಮತದಾನದ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಅನಾವಶ್ಯಕವಾದ ಚುನಾವಣೆಯಾಗಿದ್ದು, ಇಂತಹ ಚುನಾವಣೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಮತ್ತಷ್ಟು ಧಕ್ಕೆಯಾಗುತ್ತದೆ. ಆದ್ದರಿಂದಲೇ ಜನರು ಮತದಾನ ಧಿಕ್ಕರಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.

    ಉಪಚುನಾವಣೆಯೂ ರಾಜಕೀಯ ಲಾಭದಿಂದ ನಡೆಯುತ್ತಿದ್ದು, ಇಂತಹ ಕ್ಷೇತ್ರಗಳಲ್ಲಿ ಗೆದ್ದ ವ್ಯಕ್ತಿಗೆ ಶಾಸಕರಾಗಿ ಮುಂದುವರಿಯವುದು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡುವುದು ಸೂಕ್ತ. ಅಂತಹ ಕ್ಷೇತ್ರಗಳಿಗೆ ಮುಂದಿನ 3 ವರ್ಷಗಳ ಕಾಲ ಪ್ರತಿನಿಧಿಗಳ ಅಗತ್ಯವಿಲ್ಲ ಎಂಬುವುದು ನನ್ನ ಅನಿಸಿಕೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿಯಾದರೂ ಅವಕಾಶ ನೀಡಬಾರದು. ಜನರಿಗೆ ತಮ್ಮದೇ ಆದ ಕೆಲಸ ಕಾರ್ಯಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಅವರು ಮತದಾನ ಮಾಡಲು ಮುಂದಾಗುವುದಿಲ್ಲ. ಸರ್ಕಾರಿ ನೌಕರರಿಗೆ ಮಾತ್ರ ಇಲ್ಲಿ ರಜೆ ನೀಡಲಾಗುತ್ತದೆ. ಆದರೆ ಕೂಲಿ ಕಾರ್ಮಿಕರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ ರಾಜಕೀಯ ಕಾರಣದಿಂದ ಶಾಸಕರು ರಾಜೀನಾಮೆ ನೀಡಿದರೆ ಮರುಚುನಾವಣೆ ಮಾಡದೆ ತೀರ್ಮಾನ ಮಾಡಲು ಆ ಕ್ಷೇತ್ರದ ಜನರ ಆಯ್ಕೆಗೆ ಬಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ನಾವು ತಾನೇ ಬಿಜೆಪಿ ಸರ್ಕಾರ ಮಾಡಿರೋದು, ಎಲ್ಲರಿಗೂ ಟಿಕೆಟ್ ಕೊಡ್ಲೇಬೇಕು: ವಿಶ್ವನಾಥ್

    ನಾವು ತಾನೇ ಬಿಜೆಪಿ ಸರ್ಕಾರ ಮಾಡಿರೋದು, ಎಲ್ಲರಿಗೂ ಟಿಕೆಟ್ ಕೊಡ್ಲೇಬೇಕು: ವಿಶ್ವನಾಥ್

    ಮಡಿಕೇರಿ: ಅನರ್ಹ ಶಾಸಕರಿಂದ ತಾನೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರೋದು. ಹೀಗಾಗಿ ಎಲ್ಲರಿಗೂ ಉಪಚುನಾವಣೆಗೆ ಟಿಕೆಟ್ ಕೊಡಲೇಬೇಕು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳಗೋಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ನಮ್ಮ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆ ತೀರ್ಪಿನ ಮೇಲೆಯೇ ಎಲ್ಲವೂ ನಿಂತಿದೆ ಎಂದರು. ಇದೇ ವೇಳೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕೊಡುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾವು 17 ಶಾಸಕರು ತಾನೇ ಬಿಜೆಪಿ ಸರ್ಕಾರ ಮಾಡಿರೋದು. ಹೀಗಾಗಿ ನಮ್ಮೆಲ್ಲರಿಗೂ ಟಿಕೆಟ್ ಕೊಡಲೇಬೇಕು ಎಂದು ಕಡ್ಡಿ ಮುರಿದ ಹಾಗೆ ಹೇಳಿಕೆ ಕೊಟ್ಟರು.

    ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ. ಹಿಂದೆ ಜನರು ಮತಕೊಟ್ಟು ಗೆಲ್ಲಿಸಿದ್ದಾರೆ. ಆದರೆ ನಾನು ಗೆದ್ದು ರಾಜೀನಾಮೆ ನೀಡಿದ್ದೇನೆ. ಈಗಲೂ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. ಆದ್ದರಿಂದ ಪುನಃ ಚುನಾವಣೆಗೆ ನಿಲ್ಲುತ್ತೇನೆ ಎಂದು ಹುಣಸೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ಎಂಬುದನ್ನು ಸ್ಪಷ್ಟಪಡಿಸಿದರು.

    ಡಿಕೆ ಶಿವಕುಮಾರ್ ಅವರ ಅದ್ದೂರಿ ಸ್ವಾಗತ ವಿಚಾರವಾಗಿ ಮಾತನಾಡಿ, ಜನರು ವಿಶ್ವಾಸದಿಂದ ಅವರ ನಾಯಕನನ್ನು ಸ್ವಾಗತಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆಯವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದವರು. ಅವರ ದೃಷ್ಟಿಕೋನದಲ್ಲಿ ಡಿಕೆಶಿಯವರ ಸ್ವಾಗತವನ್ನು ವಿರೋಧಿಸಿದ್ದಾರೆ. ಆದರೆ ಅದು ಸಮಂಜಸವಲ್ಲ ಎಂದು ವಿಶ್ವನಾಥ್ ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು.

    ಜೊತೆಗೆ ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರಾಗಲಿ, ಮತದಾರರಾಗಲಿ ಒಂದು ಪಕ್ಷವನ್ನು ನಾಶ ಮಾಡಲು ಆಗಲ್ಲ. ಒಂದು ಪಕ್ಷದ ನಾಶಕ್ಕೆ ಅದರ ನಾಯಕರೇ ಕಾರಣವಾಗಿರುತ್ತಾರೆ. ಅವರ ಹೊರತಾಗಿ ಬೇರೆಯವರಿಂದ ಪಕ್ಷ ನಾಶವಾಗಲ್ಲ ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕರುನಾಡ ಸಿಂಗಂ ಮಧುಕರ್ ಶೆಟ್ಟಿಗೆ ನುಡಿ ನಮನ

    ಕರುನಾಡ ಸಿಂಗಂ ಮಧುಕರ್ ಶೆಟ್ಟಿಗೆ ನುಡಿ ನಮನ

    ಬೆಂಗಳೂರು: ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಂದು ನಗರದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಕುಟುಂಬ ಸಮೇತರಾಗಿ ಬಂದು ಪುಷ್ಪ ನಮನ ಸಲ್ಲಿಸಿದರು.

    ನಗರದ ವಿಜಯನಗರ ಬಂಟರ ಸಂಘದ ಆವರಣದಲ್ಲಿ ಡಾ. ಮಧುಕರ್ ಶೆಟ್ಟಿ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ನಿಷ್ಟಾವಂತ, ದಕ್ಷ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಇದು ಪೊಲೀಸ್ ವ್ಯವಸ್ಥೆಯ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಮಾತನಾಡಿ, ಮಧುಕರ್ ಶೆಟ್ಟಿ ಅವರು ಮಾಡಿದ ಒಳ್ಳೆಯ ಕೆಲಸ ಮುಂದೆಯೂ ಇರುತ್ತದೆ. ನಾನು ಮಾಡಿದ ಆಸ್ತಿ ಹೆಂಡತಿ ಮಕ್ಕಳು ಪಾಲು ಮಾಡುತ್ತಾರೆ. ಆದರೆ ಒಳ್ಳೆಯ ಕೆಲಸ ಮಾಡಿ ಜಗತ್ತು ಬಿಟ್ಟು ಹೋದರೆ, ಅದನ್ನು ಪಾಲು ಮಾಡಲು ಜಗಳ ಇರುವುದಿಲ್ಲ. ಅದನ್ನು ಸಮಾಜ ನಿರಂತರವಾಗಿ ನೆನಪಿಸಿಕೊಂಡು ಹೋಗುತ್ತದೆ. ಸಮಾಜಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ನೆನಪಿಸುತ್ತದೆ. ಅದಕ್ಕೆ ನಮ್ಮ ಮಧುಕರ್ ಶೆಟ್ಟಿ ನಿದರ್ಶನರಾಗಿದ್ದಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ಧಾರವಾಡ: ವಿಧಾನ ಸೌಧದ ವೆಸ್ಟ್ ಗೇಟ್ ಬಳಿಯ ರಕ್ಷಣಾ ಸಿಬ್ಬಂದಿಗೆ ತಪಾಸಣೆ ವೇಳೆ ಭಾರೀ ಮೊತ್ತದ ಹಣ ಸಿಕ್ಕಿರುವುದು ಭ್ರಷ್ಟಾಚಾರಿಗೆ ಎಷ್ಟು ಧೈರ್ಯವಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸೌಧದ ಬಳಿ ಹಣ ಸಿಕ್ಕಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. ಆದರೆ ಇದು ಭ್ರಷ್ಟಾಚಾರದ ವಿಚಾರವಲ್ಲ. ಭ್ರಷ್ಟಾಚಾರಿಗಳಿಗೆ ಎಷ್ಟು ಧೈರ್ಯವಿದೆ ಎನ್ನುವುದು ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಂತ್ರಿಗಳ ಆಪ್ತ ಸಹಾಯಕರೇ ಘಟನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು. ಇದರಲ್ಲಿ ಮಂತ್ರಿಗಳದ್ದು ಎಷ್ಟಿದೆ ಎಂಬುವುದು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಮಂತ್ರಿಗಳ ಪಿಎ ಗಳಿಗೆ ಅಷ್ಟು ಹಣ ಯಾರು ಕೊಡೋದಿಲ್ಲ. ಇದರಲ್ಲಿ ದೊಡ್ಡವರ ಕೈವಾಡವಿದೆ ಎಂದು ಅನ್ನಿಸುತ್ತದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಯಾರ ಕೈವಾಡವಿದೆ ಎನ್ನುವುದು ತಿಳಿಯಬೇಕಿದೆ ಆಗ್ರಹಿಸಿದರು. ಇದನ್ನು ಓದಿ: ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಈ ಘಟನೆಯ ಮೂಲಕ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಎಂಬುವುದು ತಿಳಿಯುತ್ತದೆ. ವಿಚಾರಣೆ ಮಾಡದೇ ಇದ್ದರೆ, ಅದು ಬೇರೆ ಆರ್ಥ ಪಡೆದುಕೊಳ್ಳುತ್ತೆ ಎಂದರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv