Tag: ಸಂತೋಷ್ ಪಾಟೀಲ್

  • ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲ: ಭಾಸ್ಕರ್ ರಾವ್

    ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲ: ಭಾಸ್ಕರ್ ರಾವ್

    ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನನಗೆ ಇಲ್ಲ ಎಂದು ಆಮ್ ಆದ್ಮಿ ಮುಖಂಡ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು.

    ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ. ಜವಾಬ್ದಾರಿ ಸ್ಥಾನದಲ್ಲಿರುವ ಪಕ್ಷ ನಾಲ್ಕು ಕೋಟಿ ರೂ. ಮಾಡಿರುವ 108 ಕಾಮಗಾರಿಯನ್ನು ತನಿಖೆ ಮಾಡಿಸಿ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಲಿಲ್ಲ. ಬೇರೆ ಯಾರಾದರೂ ಈ ಪ್ರಕರಣದಲ್ಲಿ ಇದ್ದರೆ ಅವರ ಬಂಧನವಾಗುತ್ತಿತ್ತು. ಸಂತೋಷ್ ಸಾವಿಗೆ ಸರ್ಕಾರ ನ್ಯಾಯ ಕೊಡಿಸುವುದೇ ಆಗಿದ್ದರೆ ಈ ಪ್ರಕರಣ ನ್ಯಾಯಾಂಗದ ತನಿಖೆ ಮೂಲಕ ನಡೆಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದಾಗ 10% ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದರು. ಆದರೆ ಈಗ ಅವರ ಡಬಲ್ ಎಂಜಿನ್ ಸರ್ಕಾರದಲ್ಲಿ 40% ಕಮಿಷನ್ ಆರೋಪ ಕೇಳಿ ಬರುತ್ತಿದೆ. ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ. ಇದರ ವಿರುದ್ಧ ಆಮ್ ಆದ್ಮಿ ಹೋರಾಟ ನಡೆಸುತ್ತದೆ ಎಂದರು.

    ಸಂತೋಷ್ ಪಾಟೀಲ್ ಪ್ರಧಾನಿಗೆ ದೂರು ಕೊಟ್ಟಾಗ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಆ ದೂರು ಇಲ್ಲಿಯವರೆಗೂ ತನಿಖೆಯಾಗಿಲ್ಲ. ಸಚಿವ ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಿದೆ. ಈ ಕೂಡಲೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಧ್ವನಿ ಎತ್ತುತ್ತಾರೆ. ಆದರೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಇದ್ದರೂ ಜನರಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಮೇಕೆದಾಟಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ ಈಗ ಮಹದಾಯಿಗೆ ಹೊರಟಿದ್ದಾರೆ: ಪ್ರಜ್ವಲ್ ರೇವಣ್ಣ ಕಿಡಿ

    ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ 108 ಕೆಲಸಗಳನ್ನು ಮಾಡಿರುವುದಕ್ಕೆ ಯಾವುದೇ ಮಂಜೂರಾತಿ ನೀಡದೇ ಅವಮಾನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಎರಡೂ ಪಕ್ಷದವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಂತೋಷ್ ಪಾಟೀಲ್ ಮಾನವೀಯತೆಯಿಂದ ಕೆಲಸ ಮಾಡಿರುವುದು ಗ್ರಾಮದ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ರಾಜಕಾರಣಿಗಳು ಮೊಸಳೆ ಕಣ್ಣೀರು ಹಾಕಿ ಹೋಗುವುದು ಸರಿಯಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕಾರಣಿಗಳಿಗೆ ಯಾವುದೇ ನೈತಿಕತೆ ಇಲ್ಲ. ಇರುವುದು ಒಂದೇ ಪಕ್ಷ ಆಮ್ ಆದ್ಮಿಗೆ ಮಾತ್ರ ಎಂದರು.

  • ಮಂತ್ರಿಯಾಗಿದ್ದಾಗ ಕಮಿಷನ್ ಪಡೆದಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಡಿಕೆಶಿ

    ಮಂತ್ರಿಯಾಗಿದ್ದಾಗ ಕಮಿಷನ್ ಪಡೆದಿದ್ರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಡಿಕೆಶಿ

    ರಾಮನಗರ: ನಾನು ಮಂತ್ರಿಯಾಗಿದ್ದಾಗ ಯಾರ ಬಳಿಯಾದರೂ ಕಮಿಷನ್ ಪಡೆದುಕೊಂಡಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಆದರೆ ಯಾರಿಗಾದರೂ ಕಮಿಷನ್ ನೀಡಿ ಎಂದು ಕೇಳಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈಗಿನ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು 40% ಕಮಿಷನ್‌ನ್ನು ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

    Eshwarappa

    ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಆತ ಪಂಚಾಯತ್‍ನಲ್ಲಿ ಕೆಲಸ ಮಾಡಿದ್ದಾನೆ. ಪಂಚಾಯತ್ ಮಂತ್ರಿ ಹೇಳದೆ ಕೆಲಸ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು. ಸಂತೋಷ್ ಅವರು ಬೆಳಗ್ಗೆ ಮೋದಿ, ಸಂಜೆ ಬೊಮ್ಮಾಯಿ ಅಂತಿದ್ದರು. ಸಂತೋಷ್ ಪತ್ನಿ ಮಂಗಲ್ಯದ ಸರ, ಚಿನ್ನ ಅಡ ಇಟ್ಟು ಕೆಲಸ ಮಾಡಿಸಿದ್ದಾರೆ ಎಂದು ಅಳುತ್ತಿದ್ದಾಳೆ ಎಂದ ಅವರು, ಬಿಜೆಪಿ ಸರ್ಕಾರ ಕೆಲಸ ಮಾಡಿಸಿದ್ದಾರೆ ಆದರೆ ಹಣ ನೀಡಿಲ್ಲ. ಇದು ದೊಡ್ಡ ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

    ಮಾಜಿ ಸಚಿವ ಈಶ್ವರಪ್ಪನನ್ನು ಬಂಧಿಸಬೇಕು, ಬೇರೆಯವರ ಮೇಲೆ ಆರೋಪ ಬಂದಿದ್ದರೇ ಬಿಡುತ್ತಿದ್ರಾ? ಸಿಎಂ, ಗೃಹ ಮಂತ್ರಿ ಈಗೇ ನಾನಾ ಮಂತ್ರಿಗಳು ಈಶ್ವರಪ್ಪ ನಿರ್ದೋಷಿ ಅಂದಿದ್ದಾರೆ. ಇನ್ನೊಂದು ತಿಂಗಳಲ್ಲಿ ಮಂತ್ರಿ ಆಗುತ್ತಾರೆ ಎಂದಿದ್ದಾರೆ. ಸರ್ಕಾರದಲ್ಲಿರುವವರೇ ಈ ರೀತಿ ಹೇಳಿಕೆ ನೀಡಿದರೆ ತನಿಖೆ ಮಾಡಲು ಸಾಧ್ಯನಾ. ಭ್ರಷ್ಟಾಚಾರ ಸರ್ಕಾರ ಕಿತ್ತೆಸೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನಾಳೆ ಸಿಎಂ ಇಬ್ರಾಹಿಂ ಪದಗ್ರಹಣ

    ಹಿಂದೆ ನಾನು ತಪ್ಪು ಮಾಡಿದ್ದರೆ, ನಮ್ಮ ಮಕ್ಕಳೋ ಮೊಮ್ಮಕ್ಕಳೋ ಅನುಭವಿಸುತ್ತಿದ್ದರು. ಆದರೆ ಈಗ ನಾವೇ ಅನುಭವಿಸಬೇಕಾಗಿದೆ. ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಮಾಡಿದ್ದೆವು. ಆಗ ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧದ ಗೋಡೆ ತಟ್ಟಿದ್ದರೆ ಕಾಸು ಕಾಸು ಅನ್ನುತ್ತವೆ ಎಂದು ಟೀಕಿಸಿದರು.

    ನಾನು ಜೈಲಿಗೆ ಹೋಗಿದ್ದೆ, ಆದರೆ ಮಂಚದ ಕೇಸ್ ಅಥವಾ ಲಂಚದ ಕೇಸ್‍ನಲ್ಲಿ ಹೋಗಿಲ್ಲ. ನಮ್ಮ ನಾಯಕರ ಮನೆ ಮೇಲೂ ರೇಡ್ ಮಾಡಿದ್ದರು. ಇನ್ನೂ ಮುಂದಕ್ಕೂ ನನ್ನ ಬಿಡಲ್ಲ, ನನಗೂ ಗೊತ್ತಿದೆ. ನನಗೆ ಏನೇನೋ ಮಾಡ್ತಾರೆ, ಗೊತ್ತಿದೆ ಎಂದರು.

    ನಮ್ಮ ಕುಮಾರಣ್ಣ ಗೋಹತ್ಯೆಗೆ ಯಾಕೆ ಬೆಂಬಲ ನೀಡಲಿಲ್ಲ. ಮೊನ್ನೆ ಈಶ್ವರಪ್ಪ ಲಂಚ ಹೊಡೆದಾಗ ಯಾಕೆ ಮಾತನಾಡಲಿಲ್ಲ. ಆತ್ಮಸಾಕ್ಷಿ ವಿರುದ್ಧವಾಗಿ ರಾಜಕಾರಣ ಮಾಡಬಾರದು. ಈ ದ್ವಂದ್ವ ನೀತಿ ಬೇಡ. ರಾಮನಗರ ಚನ್ನಪಟ್ಟಣ ಮತದಾರರ ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡವುದು ಬೇಡ ಎಂದು ಹೆಚ್.ಡಿ. ಕುಮರಸ್ವಾಮಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಾನು ಪ್ರಧಾನಮಂತ್ರಿಗಳ ಖಾಸಗಿ ಕಾರ್ಯದರ್ಶಿ’ ಎಂದವನ ವಿರುದ್ಧ ದಾಖಲಾಯ್ತು ಎಫ್‍ಐಆರ್

  • ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

    ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

    ಮಂಗಳೂರು: ಈಶ್ವರಪ್ಪ ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ನಾನು ಕಮೀಷನ್ ತಗೆದುಕೊಂಡಿಲ್ಲ, ಪ್ರಾಮಾಣಿಕ ಇದ್ದೇನೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಪ್ರಮಾಣಿಕರಾಗಿದ್ದರೆ ಈಶ್ವರಪ್ಪ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಜೀನಾಮೆ ನೀಡಿದ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

    ಮಂತ್ರಿ ಮಂಡಲದ ಯಾವೊಬ್ಬ ವ್ಯಕ್ತಿಯೂ ಲಂಚ ಪಡೆದಿಲ್ಲ ಎಂದು ಹೇಳಲಿ. ಈ ಪ್ರಕರಣದಲ್ಲಿ 40% ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದೀರಾ? ಪ್ರಮಾಣ ಮಾಡುವ ಆ ತಾಕತ್ತು ನಿಮಗಿದೆಯಾ? ನೀವು ಧರ್ಮಸ್ಥಳ ದೇವರನ್ನು ಒಪ್ಪುತ್ತೀರಿ ಅಂತಾದರೆ ಅಲ್ಲಿಗೆ ಬನ್ನಿ ಎಂದರು. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    BRIBE

    ಅಲ್ಲಿ ನೀವು ಪ್ರಮಾಣ ಮಾಡಿದ್ರೆ ನೀವು ಪ್ರಾಮಾಣಿಕ ಅಂತಾ ಒಪ್ಪಿಕೊಳ್ಳೊಣ. ಪ್ರಮಾಣ ಮಾಡಿಯೂ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ್ರೆ ಧರ್ಮದ್ರೋಹಿ ಆಗುತ್ತೀರಿ. ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ರಿ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ರಿ. ಆದ್ರೆ ಈಗ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

  • ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂತೋಷ್ ಪಾಟೀಲ್ ವಿರುದ್ಧ ನ್ಯಾಯಾಲಯದ ಮೂಲಕ ನೋಟಿಸ್ ಕೊಟ್ಟಾಗ ಹೆದರಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆ ಅಂದುಕೊಂಡಿದ್ದೆ. ಆದರೆ ಆಮೇಲೆ ನನಗೆ ಒಂದೊಂದೇ ಅಂಶ ಅನುಮಾನ ಬರುತ್ತಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ. ಕೊಲೆ ಎನ್ನುವ ಅಂಶಗಳ ಬಗ್ಗೆ ಬೇರೆ ಬೇರೆಯವರ ಜೊತೆ ಮಾತನಾಡಿದಾಗ ಅನೇಕ ಅಂಶ ಮಾತನಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತನಿಖೆ ವರದಿ ಬರಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

    ಆ ಮೃತ ಹುಡುಗನ ಬಗ್ಗೆ ನನಗೂ ಸಹ ಒಂದು ರೀತಿಯ ಸಹಾನುಭುತಿ ಇದೆ. ಆ ಹುಡುಗನನ್ನು ಯಾರಾದರೂ ದುರುಪಯೋಗ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ತನಿಖೆ ಆದ ನಂತರವೇ ಸತ್ಯ ಹೊರಬರಲಿದೆ ಎಂದ ಅವರು ಇಡೀ ರಾಜ್ಯದಿಂದ ಎಲ್ಲರೂ ನನಗೆ ಬೆಂಬಲ ಕೊಡುತ್ತಿದ್ದಾರೆ.  ನನ್ನ ಬಗ್ಗೆ ಒಂದೇ ಒಂದು ಒಡಕು ಧ್ವನಿ ಇಲ್ಲ.  ಇದರಲ್ಲಿ ನಿಮ್ಮ ಯಾವುದೇ ತಪ್ಪು ಇಲ್ಲ. ಷಡ್ಯಂತ್ರ ಇದೆ. ಈ ಷಡ್ಯಂತ್ರದಿಂದ ನೀವು ಹೊರಗೆ ಬರುತ್ತೀರಾ ಎಂಬ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವೀರಶೈವ ಸಮಾಜದವರ ಹೋರಾಟ ವಿಚಾರವಾಗಿ ಮಾತನಾಡಿ, ವೀರಶೈವ ಸಮಾಜದ ಯಾರೋ 4 ಜನ ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ನಾನು ಒಪ್ಪಲ್ಲ. ಈ ಬಗ್ಗೆ ನ್ಯಾಯ ಹೊರಗೆ ಬರಬೇಕು. ಯಾರೂ ತಪ್ಪು ಮಾಡಿದ್ದಾರೋ, ಆ ತಪ್ಪು ಮಾಡಿದ್ದವರು ಹೊರಗೆ ಬರಬೇಕು. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಷಡ್ಯಂತ್ರದ ರೂವಾರಿಗಳು ಯಾರು? ವ್ಯಕ್ತಿನೋ, ಸಂಸ್ಥೆನೋ, ಪಕ್ಷನೋ ಎಂಬುದು ಹೊರಗೆ ಬರಬೇಕು. ಆಗ ನಿಜಕ್ಕೂ ಆತನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಮಾಜದವರು, ಕುಟುಂಬದವರು ಏನು ಮಾಡಬೇಕೋ ಮಾಡಲಿ ಅದು ಅವರ ಕರ್ತವ್ಯ ಎಂದರು. ಇದನ್ನೂ ಓದಿ: ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

    Eshwarappa

    ಸಂತೋಷ್ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಏನು ಎಂಬುದು ಗೊತ್ತಿಲ್ಲ. ಏನು ಗೊತ್ತಿಲ್ಲದೇ ಸರ್ಕಾರ ಸಹ ಏನು ಮಾಡಲು ಸಾಧ್ಯವಿಲ್ಲ. ತನಿಖೆಯ ವರದಿ ಬಂದ ನಂತರ ಸಿಎಂ ಜೊತೆ ಮಾತನಾಡುತ್ತೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಇದರ ಹಿಂದೆ ಡಿಕೆಶಿ ಇದ್ದಾರೋ, ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲ್ಲ. ತನಿಖೆಯ ವರದಿ ಬಂದ ನಂತರ ಡಿಕೆಶಿಯೇ ಇದರ ಹಿಂದೆ ಇದ್ದಾರೆ ಎಂದು ಗೊತ್ತಾದರೆ ಆಗ ಹೇಳ್ತೇನೆ. ತನಿಖೆಯ ವರದಿ ತಿಳಿದುಕೊಳ್ಳದೇ ಏನು ಹೇಳಲು ಇಷ್ಟಪಡಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭವಾಗೋದಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್

  • ನೈತಿಕ ಸ್ಥೈರ್ಯ ಕುಗ್ಗಿಸೋದು ಕಾಂಗ್ರೆಸ್ ಕನಸು: ಕೆಜಿ ಬೋಪಯ್ಯ

    ನೈತಿಕ ಸ್ಥೈರ್ಯ ಕುಗ್ಗಿಸೋದು ಕಾಂಗ್ರೆಸ್ ಕನಸು: ಕೆಜಿ ಬೋಪಯ್ಯ

    ಮಡಿಕೇರಿ: ಬಿಜೆಪಿ ಅಥವಾ ನಮ್ಮ ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ಕಾಂಗ್ರೆಸ್ಸಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯವನ್ನು ತೆಗೆದುಕೊಂಡು ಪ್ರತಿಭಟಿಸುತ್ತಿದೆ ಎಂದು ವಿರಾಜಪೇಟೆ ಬಿಜೆಪಿ ಶಾಸಕ ಕೆ ಜಿ ಬೋಪಯ್ಯ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. ಅದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಎಲ್ಲರಿಗೂ ಮರುಕವಿದೆ. ಆದರೆ ಕಾಂಗ್ರೆಸ್ ಅದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ಈ ಪ್ರತಿಭಟನೆ ಮಾಡಿ ಬಿಜೆಪಿಯನ್ನು ನೈತಿಕವಾಗಿ ಕುಗ್ಗಿಸಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಅದು ಸಾಧ್ಯವಿಲ್ಲ. ಅದೇನಿದ್ದರೂ ಕಾಂಗ್ರೆಸ್ಸಿನ ಕನಸು ಎಂದು ಲೇವಡಿ ಮಾಡಿದ್ದಾರೆ.  ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಆಗ ಗೃಹ ಸಚಿವರಾಗಿದ್ದ ಜಾರ್ಜ್ ರಾಜೀನಾಮೆಯನ್ನು ಕೊಟ್ಟಿರಲಿಲ್ಲ. ಕೊನೆ ಪಕ್ಷ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿರಲಿಲ್ಲ. ಖಾಸಗಿ ದೂರು ದಾಖಲಾದ ಮೇಲೆ ಎಷ್ಟೋ ದಿನಗಳ ನಂತರ ಜಾರ್ಜ್ ರಾಜೀನಾಮೆ ನೀಡಿದ್ದರು. ಸಚಿವ ಈಶ್ವರಪ್ಪ ವಿರುದ್ಧವೂ ಯಾವುದೇ ನೇರ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಯಾವುದೇ ಸಾಕ್ಷ್ಯ ಆಧಾರಗಳಿಲ್ಲದೆ ಹೇಗೆ ಬಂಧಿಸಲು ಸಾಧ್ಯ ಎಂದು ಪ್ರಶ್ನಿಸಿದರು.

  • ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಯತ್ನಾಳ್ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ

    ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಯತ್ನಾಳ್ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ

    ಬಾಗಲಕೋಟೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು, ಮಾಜಿ ಸಚಿವ ಈಶ್ವರಪ್ಪ ಮೇಲಿನ ಆರೋಪ ಪ್ರಕರಣವನ್ನು ಎಲ್ಲ ಆಯಾಮಾದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ‍್ಯಾರು ಹತ್ತಿರ ಏನೇನು ಮಾಹಿತಿ ಇದೆ ಅದೆಲ್ಲ ಮಾಹಿತಿ ಕಲೆ ಹಾಕಿ ತನಿಖೆ ಮಾಡಲಾಗುತ್ತದೆ. ಬರುವಂತಹ ದಿನದಲ್ಲಿ ಎಲ್ಲ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ಇಂದು ಶುಕ್ರವಾರ ಜಿಲ್ಲೆಯ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಪುತ್ರಿಯ ಮದುವೆಗೆ ಆಗಮಿಸಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್ ಗಳಿದ್ದಾರೆ. ಅವರಿಂದಲೇ ಈಶ್ವರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಈಗಾಗಲೇ ಆ ಬಗ್ಗೆ ನಿನ್ನೆಯೇ ಹೇಳಿದ್ದೇನೆ. ಈಗ ಹೇಳಿದರೆ ನೀವು ಸುದ್ದಿ ಹಾಕಲ್ಲ ಎಂದು ನಗೆ ಚಟಾಕಿಯನ್ನು ಹಾರಿಸಿದರು. ನಂತರ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಾರೆ. ಆಗ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ನುನುಚಿಕೊಂಡರು.

    ಎಸ್ ಆರ್ ಪಾಟೀಲ್‍ರ ಹೋರಾಟ ಸ್ವಾಗತಾರ್ಹ ಮಾಜಿ ಸಚಿವ ಎಸ್ ಆರ್ ಪಾಟೀಲ್‍ರ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅವರ ಸರ್ಕಾರ ಇದ್ದಾಗ ಇದನ್ನ ಮಾಡಿದರೆ ಅವರಿಗೆ ಒಳ್ಳೆಯ ಹೆಸರು ಬರ್ತಿತ್ತು. ಎಸ್ ಆರ್ ಪಾಟೀಲ್‍ರವರು ಮಂತ್ರಿ ಆಗಿದ್ದರು. ಐದು ವರ್ಷ ಸರ್ಕಾರ ಇತ್ತು. ನಂತರ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗ ಹೋರಾಟ ಮಾಡಿದರೆ, ಈಗ ಟ್ರ್ಯಾಕ್ಟರ್ ರ್‍ಯಾಲಿ ಮಾಡುವ ಅವಶ್ಯಕತೆ ಇರ್ತಿರಲಿಲ್ಲ ಎಂದು ತಿಳಿಸಿದರು.

     

  • ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?

    ಉಡುಪಿ: ನಾವೆಲ್ಲಾ ಬಾರ್ ನಲ್ಲಿ ಕುಡಿದಿದ್ದೆವು. ಸಂತೋಷ್ ಪಾಟೀಲ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು ಎಂದು ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೇದಪ್ಪ ಹೇಳಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಈ ಇಬ್ಬರು ಸದ್ಯ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಅವರು, ಶಾಂಭವಿ ಲಾಡ್ಜ್ ನಲ್ಲಿ ನಡೆದ ಘಟನೆಯನ್ನು ಹಂತಹಂತವಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಪಿ ಹೋಟೆಲ್‍ನಲ್ಲಿ ಪಂಚನಾಮೆ

    ಅಂದು ನಡೆದಿದ್ದೇನು..?: ಏಪ್ರಿಲ್ 7ರಂದು ಧಾರವಾಡದಿಂದ ಮೂವರು ಕಾರಿನಲ್ಲಿ ಪಯಣ ಮಾಡಿದೆವು. ಏಪ್ರಿಲ್ 8 ಚಿಕ್ಕಮಗಳೂರಿಗೆ ತಲುಪಿದೆವು. 4 ದಿನ ಚಿಕ್ಕಮಗಳೂರಿನ ಬಾನ್ ಆಫ್ ಬೆರ್ರಿ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದೆವು. ಏಪ್ರಿಲ್ 11ರ ಸಂಜೆ 4 ಗಂಟೆಗೆ ಉಡುಪಿಗೆ ತಲುಪಿದೆವು. ಅಲ್ಲಿ ಶಾಂಭವಿ ಲಾಡ್ಜ್‍ನಲ್ಲಿ ಸಂಜೆ 5 ಗಂಟೆಗೆ ರೂಮ್ ಪಡೆದೆವು.

    ಸಂತೋಷ್ ರೂಂ. ನಂಬರ್ 207ರಲ್ಲಿ ಇದ್ದರೆ, ನಾವಿಬ್ಬರು ರೂಂ ನಂಬರ್ 209ರಲ್ಲಿ ತಂಗಿದ್ದೆವು. ಸಂತೋಷ್ ಪಾಟೀಲ್ ಹೆಸರಲ್ಲೇ 2 ರೂಮ್ ಬುಕ್ ಆಗಿತ್ತು. ಸಂಜೆ 7 ಗಂಟೆ ನಂತರ ಡ್ರಿಂಕ್ಸ್ ಮಾಡಲು ಬಾರ್‍ಗೆ ಹೋಗಿವು. ಬಾರ್‍ನಿಂದ ಬರಬೇಕಾದರೆ ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡಿದ್ದರು. ನಾವಿಬ್ಬರೂ ಊಟಕ್ಕೆ ಹೋದೆವು. ಆದರೆ ಸಂತೋಷ್ ಮಾತ್ರ ಲಾಡ್ಜ್‍ಗೆ ಹೋದ. ರಾತ್ರಿ 9:45 ಸುಮಾರಿಗೆ ಡ್ರಿಂಕ್ಸ್ ಮಾಡಿ 209ರಲ್ಲಿ ನಾವಿಬ್ಬರೂ ಮಲಗಿದೆವು. ಇದನ್ನೂ ಓದಿ: ಎಫ್‌ಎಸ್‌ಎಲ್‌ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ: ಉಡುಪಿ ಎಸ್‌ಪಿ

    ಇತ್ತ ಏಪ್ರಿಲ್ 11ರ ರಾತ್ರಿ ಸಂತೋಷ್ ತನ್ನ ಗೆಳೆಯರಿಗೆ ಗುಡ್ ನೈಟ್ ಹೇಳಿದ್ದರು. ಬೆಳಗ್ಗೆ ಎಬ್ಬಿಸಬೇಡಿ ಎಂದಿದ್ದರು. ರಾತ್ರಿ ಮಲಗಿದ್ದ ಸಂತೋಷ್ ಏಪ್ರಿಲ್ 12 ರಂದು ಬೆಳಗ್ಗೆ ಎದ್ದಿರಲಿಲ್ಲ. ನಾವು ಕೊಠಡಿ ಸಂಖ್ಯೆ 209 ರಲ್ಲಿ ಇದ್ದೆವು. ಪಾಟೀಲ್ ಎದ್ದಿಲ್ಲ, ತಿಂಡಿಗೆ ಅಂತ ನಾವು ಇಬ್ಬರು ಹೊರಗೆ ಹೋಟೆಲ್ ಗೆ ಹೋಗಿ ಬಂದೆವು. ಬೆಳಗ್ಗೆ 9:30- 10 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗೆಳೆಯ ಸುನಿಲ್ ಪವಾರ್ ಅವರಿಂದ ಫೋನ್ ಬಂದಿದೆ. ಕರೆ ಮಾಡಿ ಸಂತೋಷ್ ಪಾಟೀಲ್ ಕಾಣೆಯಾದ ಬಗ್ಗೆ ಮೀಡಿಯಾಗಳಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ ಅಷ್ಟರವರೆಗೆ ನಾವಿಬ್ಬರೂ ಮೊಬೈಲ್ ನೋಡಿರಲಿಲ್ಲ.

    ತಕ್ಷಣ ಕೊಠಡಿ ಸಂಖ್ಯೆ 207ಕ್ಕೆ ತೆರಳಿ ಬಾಗಿಲು ಬಡಿದಿದ್ದೇವೆ. ಫೋನ್ ಮಾಡಿದ್ದೇವೆ. ಆದರೆ ಎರಡಕ್ಕೂ ಸಂತೋಷ್ ರೆಸ್ಪಾನ್ಸ್ ಮಾಡದೆ ಇದ್ದಾಗ ರಿಸೆಪ್ಷನ್ ಗೆ ಓಡಿ ಹೋದೆವು. ರೂಮ್ ನಂಬರ್ 207 ರ ಗೆಳೆಯ ಎಲ್ಲಾದರೂ ಹೋಗಿದ್ದಾರಾ ಎಂದು ಕೇಳಿದೆವು. ಇಲ್ಲ. ಕೀ ಕೊಟ್ಟು ಹೋಗಿಲ್ಲ ಎಂದು ರಿಸೆಪ್ಷನಿಸ್ಟ್ ಹೇಳಿದ್ರು. ಇದರಿಂದ ಗಾಬರಿಗೊಂಡ ನಾವು ಮತ್ತೆ ಸಂತೋಷ್ ನಂಬರಿಗೆ ಫೋನ್ ಮಾಡಿದೆವು. ಇದನ್ನೂ ಓದಿ: ಸಂತೋಷ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಕಾಂಗ್ರೆಸ್‌ ನಾಯಕರ ಸಾಂತ್ವನ

    ಮತ್ತೆ ಕೊಠಡಿಯತ್ತ ಬಂದು ಬಾಗಿಲು ಬಡಿದ್ದೇವೆ. ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಮತ್ತೆ ರಿಸೆಪ್ಷನ್ ಗೆ ಬಂದು ಡುಬ್ಲಿಕೇಟ್ ಕೀ ಯಲ್ಲಿ ಓಪನ್ ಮಾಡುವಂತೆ ಕೇಳಿಕೊಂಡೆವು. ಡೂಪ್ಲಿಕೇಟ್ ಕೀ ಬಳಸಿ ಹೋಟೆಲ್ ಸಿಬ್ಬಂದಿಯೊಂದಿಗೆ 207 ಕೋಣೆಯ ಬಾಗಿಲನ್ನು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಗಿಲು ತೆಗೆದು ನೋಡಿದಾಗ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿದೆ ಎಂದು ವಿವರಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ದೊರೆತಿದೆ.

  • ದಾಖಲೆಗಳಿದ್ರೆ ಇವತ್ತೆ ಬಿಡುಗಡೆ ಮಾಡಬೇಕು – ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲ್

    ದಾಖಲೆಗಳಿದ್ರೆ ಇವತ್ತೆ ಬಿಡುಗಡೆ ಮಾಡಬೇಕು – ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲ್

    ಬೆಳಗಾವಿ: ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯದಿಂದ ಸ್ವಾಗತ ಮಾಡುತ್ತೇನೆ. ಸೋವಾರದವರೆಗೆ ಕಾಯುವುದು ಬೇಡ ದಾಖಲೆಗಳಿದ್ದರೆ, ಇಂದೇ ಬಿಡುಗಡೆ ಮಾಡಲಿ ಎಂದು ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.

    ನಗರದಲ್ಲಿ ಸಿಡಿ ಹಿಂದೆ ಇರುವ ಮಹಾನಾಯಕ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಕಾರಣ, ಅವರ ದಾಖಲೆ ಬಿಡುಗಡೆ ಮಾಡುವುದರ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯದಿಂದ ಸ್ವಾಗತ ಮಾಡುತ್ತೇನೆ. ಸೋವಾರದವರೆಗೆ ಕಾಯುವುದು ಬೇಡ. ಧಾರವಾಹಿಯಲ್ಲಿ ಕುತೂಹಲ ಕ್ರಿಯೇಟ್ ಮಾಡುವ ರೀತಿ ಮಾಡಬೇಡಿ. ದಾಖಲೆಗಳಿದ್ದರೆ, ಇವತ್ತೆ ಬಿಡುಗಡೆ ಮಾಡಬೇಕು. ಈ ಘಳಿಗೆಯಲ್ಲಿ ಬಿಡುಗಡೆ ಮಾಡಬೇಕು. ಬೇಜವಾಬ್ದಾರಿ ಹೇಳಿಕೆಯಿಂದ ಗೊಂದಲ ಸೃಷ್ಟಿ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

    ಸಂತೋಷ್ ಪಾಟೀಲ್ ಮನೆಗೆ ನಿರಾಣಿ ಹೋಗಿ ಬಂದಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೊಳ್ಕರ್ ಎರಡು ಸಲ ಈಶ್ವರಪ್ಪ ಬಳಿ ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಕೆಲಸ ಆಗಿದೆ ಎಂದಿದ್ದಾರೆ. ಬಿಜೆಪಿ ಪದಾಧಿಕಾರಿಗಳು ಸಂತೋಷ್ ನಮ್ಮ ಕಾರ್ಯಕರ್ಯ ಅಲ್ಲ ಎಂದಿದ್ದಾರೆ. ಎಲ್ಲಾ ಗೊಂದಲ ಬಿಜೆಪಿ ಪಕ್ಷದಲ್ಲಿ ಇದೆ. ಇದನ್ನು ಮೊದಲು ಸರಿ ಮಾಡಲಿ ಎಂದಿದ್ದಾರೆ.

     

    ಸಂತೋಷ್ ಪಾಟೀಲ್ ಕೆಲಸ ಮಾಡುವಾಗ ರಮೇಶ್ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ನಾನು ಹತ್ತು ಸಾರಿ ಅವರನ್ನು ಕರೆಸುವ ಯತ್ನ ಮಾಡಿದೆ. ತಾಲೂಕು ಪಂಚಾಯತ್ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ ಅವನು ಬರಲೇ ಇಲ್ಲ. ನಾನು ಬಿಜೆಪಿ, ಬಿಜೆಪಿ ಎನ್ನುತ್ತಲೇ ಇದ್ದ. ನಾನು ರಮೇಶ್ ಜಾರಕಿಹೊಳಿ ಫಾಲೋವರ್ ಎನ್ನುತ್ತಿದ್ದ. ಯಾರು ಕೆಲಸ ಮಾಡಿಸಿದರು, ಯಾರು ಪ್ರಚೋದನೆ ಮಾಡಿದರು. ಯಾರ ಕುಮ್ಮಕ್ಕು, ಆಶ್ವಾಸನೆ ಮೇಲೆ ಸಂತೋಷ್ ಪಾಟೀಲ್ ಮಾಡಿದ್ದರು. ಬಿಜೆಪಿ ಸಂಘಟನೆ ಆಗಲಿ ಅಂತ ಕೆಲಸ ಮಾಡಿರಬಹುದು ಎಂದು ಹೇಳಿದ್ದಾರೆ.

    108 ಕಾಮಗಾರಿ ಕಳಪೆ ಎಂಬ ಹೇಳಿಕೆ ವಿಚಾರ: ಟ್ರೋಲ್ ಮಾಡಲಿ ನಾನು ಸ್ವಾಗತ ಮಾಡುತ್ತೇನೆ. ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ. ಇಲಾಖೆ ಅಧಿಕಾರಿಗಳ ಜವಾಬ್ದಾರಿ ಇದೆಯಲ್ಲ. ಜಿಲ್ಲಾ ಪಂಚಾಯತಿ ಸಿಇಓ ಅವರನ್ನು ಮೂರು ಸಲ ಭೇಟಿಯಾಗಿದ್ದೇನೆ. ನನ್ನ ಗಮನಕ್ಕೆ ಬಂದಿದ್ದರಿಂದಲೇ ನಾನು ಓಡಾಡಿದ್ದೇನೆ. ಯಾವ ಇಲಾಖೆಯಿಂದ ಕೆಲಸ ಆಗಿದೆ, ಕಾಮಗಾರಿ ಆಗಿದೆ. ಅದು ಕಳಪೆನಾ ಏನು ಅಂತ ಎಂಬುವುದು ಅವರ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈಶ್ವರಪ್ಪ ಭರವಸೆ ಮೇಲೆ ಸಂತೋಷ್ ಪಾಟೀಲ್ ಕೆಲಸ ಮಾಡಿದ್ದಾನೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧವು ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

  • ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್

    ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್

    ಬೆಂಗಳೂರು: ಗುತ್ತಿಗೆದಾರ ಸಂತೊಷ ಆತ್ಮಹಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂಬ ಆರೋಪ ಕೇಳಿ ಬಂದ ದಿನವೇ 29 PDOಗಳ ವರ್ಗಾವಣೆಯಾದ ಘಟನೆ ಸಾಕಷ್ಟು ಅನುಮಾನಗಳಿಗೆ ಈಡು ಮಾಡುಕೊಟ್ಟಿದೆ.

    ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸಪ್ ಮಾಡಿದ್ದರು. ಆ ವೇಳೆ ಸಚಿವ ಈಶ್ವರಪ್ಪ ಮೈಸೂರಿನಲ್ಲಿ ಇದ್ದರು.

    BASAVARJ BOMMAI (1)

    ಇದೀಗ ಇದೇ ದಿನದಂದು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 29 PDOಗಳ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದರಲ್ಲೂ ಮೈಸೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ PDOಗಳ ವರ್ಗಾವಣೆ ಮಾಡಿದೆ. ಇದಕ್ಕೆ ಸಿಎಂ ಅನುಮೋದನೆ ನೀಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಈಶ್ವರಪ್ಪನವರನ್ನು ಬಂಧಿಸಿ ಅನ್ನೋರಿಗೆ ನಾಚಿಕೆಯಾಗ್ಬೇಕು: ರೇಣುಕಾಚಾರ್ಯ

  • ಸಂತೋಷ್ ಪಾಟೀಲ್ ಅನ್ನೋ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ: ಡಾ. ವೇದಮೂರ್ತಿ

    ಸಂತೋಷ್ ಪಾಟೀಲ್ ಅನ್ನೋ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ: ಡಾ. ವೇದಮೂರ್ತಿ

    ಬೆಳಗಾವಿ: ಮೊನ್ನೆಯಿಂದ ನಾನು ಕೂಡ ಮಾಧ್ಯಮಗಳಲ್ಲಿ ನನ್ನ ಫೋಟೋ ನೋಡುತ್ತಿದ್ದೇನೆ. ಸಂತೋಷ್ ಪಾಟೀಲ್ ಅನ್ನುವ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ ಎಂದು ಬೈಲಹೊಂಗಲದ ಡಾ. ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಹೇಳಿದರು.

    ಸಚಿವ ಈಶ್ವರಪ್ಪ ಹಾಗೂ ಸಂತೋಷ್ ಪಾಟೀಲ್ ಭೇಟಿ ವೇಳೆ ಆರಾದ್ರಿಮಠ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2021ರ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಚಾನಕ್ ಆಗಿ ಈಶ್ವರಪ್ಪ ಭೇಟಿಯಾಗಲು ಹೋಗಿದ್ದೆ. ನೀವು ಬೈಲಹೊಂಗಲ ಸ್ವಾಮೀಜಿ ಅಲ್ವಾ ಎಂದರು. ಹೌದು ಅಂದೆ. ಒಂದು ಫೋಟೋ ತೆಗೆಸಿಕೊಳ್ಳೋಣ ಅಂತಾ ಫೋಟೋ ತೆಗೆಸಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?

    ಫೋಟೋ ತೆಗೆಸಿಕೊಂಡಿರೋದು ಮಾತ್ರ ನಮಗೆ ಗೊತ್ತು. ಅದಕ್ಕಿಂತ ಪೂರ್ವದಲ್ಲಿ ಸಂತೋಷ್ ಪಾಟೀಲ್‍ಗಾಗಲಿ ನಮಗಾಗಲಿ ಭೇಟಿ, ಸಂಭಾಷಣೆ ಇಲ್ಲ. ಮಾಧ್ಯಮಗಳಲ್ಲಿ ಒನ್‍ಸೈಡ್ ಫೋಟೋ ಮಾತ್ರ ಇದೆ. ಇನ್ನೊಂದೆಡೆ ನಮ್ಮ ಪುರೋಹಿತರು ಇರುವ ಫೋಟೋ ಕಟ್ ಮಾಡಿ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಇದಕ್ಕೂ ನಮಗೂ ಸಂಬಂಧ ಇರದ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ