Tag: ಸಂತೋಷ್ ಪಾಟೀಲ್

  • ಸಂತೋಷ್‌ ಪಾಟೀಲ್‌ ಕೇಸ್‌ಗೆ ಟ್ವಿಸ್ಟ್‌ – 2021ರಲ್ಲಿ ಬೆಳಗಾವಿ ZP ಅಧ್ಯಕ್ಷೆ ಬರೆದ ಪತ್ರ ಔಟ್‌

    ಸಂತೋಷ್‌ ಪಾಟೀಲ್‌ ಕೇಸ್‌ಗೆ ಟ್ವಿಸ್ಟ್‌ – 2021ರಲ್ಲಿ ಬೆಳಗಾವಿ ZP ಅಧ್ಯಕ್ಷೆ ಬರೆದ ಪತ್ರ ಔಟ್‌

    ಬೆಳಗಾವಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ, ಕಾಂಗ್ರೆಸ್‌ ನಾಯಕಿ ಆಶಾ ಐಹೊಳೆ ಪತ್ರ ಬರೆದಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    5 ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಉಡುಪಿ ಪೊಲೀಸರು ಬುಧವಾರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌ ಅವರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

    ಪತ್ರದಲ್ಲಿ ಏನಿದೆ?
    ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಆಶಾ ಐಹೊಳೆ 2021ರ ಫೆಬ್ರವರಿ 15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

    ʼಅನುಮೋದನೆಗಾಗಿ ಆದೇಶಿಸಲಾಗಿದೆʼ ಎಂದು ಫೆಬ್ರವರಿ 26ರಂದು ಸಹಿ ಮಾಡಲಾಗಿದೆ. ಆದೇಶದ ಪ್ರತಿಗಳನ್ನು ಮಾರ್ಚ್ 5ರಂದು ನೀಡಲಾಗುವುದು’ ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಕಾರ್ಯದರ್ಶಿ ಸಹಿ ಮತ್ತು ಸೀಲ್‌ ಹಾಕಲಾಗಿದೆ.

  • ನಾವು ಅಣ್ಣ-ತಮ್ಮಂದಿರಂತೆ ಇರಲು ಬಿಜೆಪಿ, ಆರ್‌ಎಸ್‌ಎಸ್ ಬಿಡುತ್ತಿಲ್ಲ: ಸಿದ್ದರಾಮಯ್ಯ

    ನಾವು ಅಣ್ಣ-ತಮ್ಮಂದಿರಂತೆ ಇರಲು ಬಿಜೆಪಿ, ಆರ್‌ಎಸ್‌ಎಸ್ ಬಿಡುತ್ತಿಲ್ಲ: ಸಿದ್ದರಾಮಯ್ಯ

    ಚಾಮರಾಜನಗರ: ನಾವು ಅಣ್ಣ-ತಮ್ಮಂದಿರಂತೆ ಇರಬೇಕು. ಆದರೆ ಹಾಗೆ ಇರಲು ಬಿಜೆಪಿ, ಆರ್‌ಎಸ್‌ಎಸ್ ಬಿಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾತೆತ್ತಿದ್ದರೆ ನಾವು ರಾಷ್ಟ್ರಭಕ್ತರು ಎನ್ನುತ್ತಾರೆ. ಆದರೆ ಇವರು ರಾಷ್ಟ್ರದ್ರೋಹಿಗಳು. ಸಂವಿಧಾನ ಉಳಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹಿಜಾಬ್, ಹಲಾಲ್, ಆಜಾನ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ಇವರ ವೈಫಲ್ಯ ಮುಚ್ವಿಕೊಳ್ಳಲು ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ಹಿಂದೂ ಓಟನ್ನು ಕೇಂದ್ರೀಕೃತ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನಮ್ಮದು ಒಂದು ಧರ್ಮದ ರಾಷ್ಟ್ರವಲ್ಲ. ನಾವು ಅಣ್ಣ-ತಮ್ಮಂದಿರ ರೀತಿ ಇರಬೇಕು. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಹಾಗೆ ಇರಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾವ ರಾಜ್ಯದಲ್ಲಿ 150 ಸೀಟು ಗೆಲ್ತೀರಾ – ಕಾಂಗ್ರೆಸ್‍ಗೆ ಕುಟುಕಿದ ಕೋಟ ಶ್ರೀನಿವಾಸ ಪೂಜಾರಿ

    ಹುಬ್ಬಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂದು ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿ, ಹುಬ್ಬಳಿಯಲ್ಲಿ ಪೋಸ್ಟ್ ಮಾಡಿದವನು ಯಾರು? ಆತ ಈಗ ಅರೆಸ್ಟ್ ಆಗಿದ್ದಾನೆ. ಆತ ಭಜರಂಗದಳದ ಕಾರ್ಯಕರ್ತ. ಆ ಗಲಾಟೆಯನ್ನು ಮೊದಲು ಹುಟ್ಟಾಕಿದ್ದು ಯಾರು? ಆ ಮೇಲೆ ಗಲಾಟೆಯಾಗಿದೆ. ಗಲಾಟೆ ಹುಟ್ಟಾಕಿದ್ದು ಭಜರಂಗದಳವನು. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಗಲಾಟೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲ್ಲಿ, ಶಿಕ್ಷೆ ಕೊಡಲಿ. ಆದರೆ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸುಳ್ಳು ಹೇಳುತ್ತಿದೆ. ಅವರ ಭ್ರಷ್ಟಾಚಾರ ಹಾಗೂ ತಪ್ಪುಗಳನ್ನು ಮುಚ್ವಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರು. ಅವರಿಬ್ಬರು ನಮ್ಮ ಪಕ್ಷದವರ? ಇವುಗಳನ್ನ ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ನಾನು 45 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನೋಡಿದ ಭ್ರಷ್ಟ ಸರ್ಕಾರ, ವಿಷ ಬೀಜ ಬಿತ್ತುವಂತ ಸರ್ಕಾರ ಇದು. ಇಂತಹ ಸರ್ಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ. ಕಂಟ್ರಾಕ್ಟರ್ ಅಸೋಸಿಯೇಷನ್ ಅವರು ಪತ್ರ ಬರೆದಿದ್ದು ಇದೇ ಮೊದಲು. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ನಮ್ಮದು 10 ಪರ್ಸೆಂಟ್ ಸರ್ಕಾರ ಅಂತ ಪ್ರಧಾನಿ ಇಲ್ಲಿ ಬಂದು ಆರೋಪ ಮಾಡಿದ್ದರು. ದಾಖಲಾತಿ ಇದ್ದರೆ ತನಿಖೆ ಮಾಡಿಸಿ ಅಂತ ಹೇಳಿದ್ದೆ. ಕೆಂಪಣ್ಣ ಬರೆದಿರುವ ಪತ್ರ ವಿಚಾರವಾಗಿ ಪ್ರಧಾನಿಗೆ ಧಮ್ ಇದ್ರೆ ತನಿಖೆ ಮಾಡಿಸಲಿ. ಇವರು ಸುಮ್ಮನೆ ಕುಳಿತಿದ್ದಾರೆ ಅಂದರೆ, ಇವರ ಕುಮ್ಮಕ್ಕು ಇದೆ ಅಂತ ಅರ್ಥ ಎಂದು ಆರೋಪಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನೂ ಬಿಚ್ಚಿಡಲಿ: ಡಿಕೆಶಿ

    ಆಂಟಿ ಕರಪ್ಷನ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿ ಈಶ್ವರಪ್ಪನನ್ನು ಜೈಲಿಗೆ ಕಳುಹಿಸಬೇಕು. ಈಶ್ವರಪ್ಪರಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನು. ಬೇರೆಯವರು ಈ ಕೆಲಸ ಮಾಡಿದ್ದರೆ ಬಿಡ್ತಿದ್ರಾ? ಅವರನ್ನು ಒಳಗೆ ಹಾಕುತ್ತಿದ್ದರು. ನಾವು ಬೇರೆ ಏನನ್ನೂ ಕೇಳುತ್ತಿಲ್ಲ, ಕಾನೂನು ಕ್ರಮವನ್ನಷ್ಟೆ ಕೇಳುತ್ತಿದ್ದೇವೆ. ಸಂತೋಷ್ ಪಾಟೀಲ್ ಹೆಂಡತಿಗೆ ಒಂದು ಕೋಟಿ ಪರಿಹಾರ ಕೊಡಬೇಕು. ಆಕೆ ಬಿಎ ಓದಿದ್ದಾಳೆ. ಆಕೆಗೆ ಸರ್ಕಾರಿ ಕೆಲಸ ಕೊಡಬೇಕು. ಇದು ನಮ್ಮ ಡಿಮ್ಯಾಂಡ್ ಎಂದು ಸ್ಪಷ್ಟಪಡಿಸಿದರು.

  • ಸಂತೋಷ್ ಪಾಟೀಲ್ ಪತ್ನಿಗೆ 11 ಲಕ್ಷ ರೂ. ಚೆಕ್ ವಿತರಿಸಿದ ಡಿಕೆಶಿ

    ಸಂತೋಷ್ ಪಾಟೀಲ್ ಪತ್ನಿಗೆ 11 ಲಕ್ಷ ರೂ. ಚೆಕ್ ವಿತರಿಸಿದ ಡಿಕೆಶಿ

    ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ(ಇಂದು) ಬೆಳಗಾವಿ ತಾಲೂಕಿನ ಬಡಸ್ ಗ್ರಾಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ಸಂತೋಷ್ ಕುಟುಂಬಸ್ಥರಿಗೆ 11 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.

    ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಬಡಸ ಗ್ರಾಮದಲ್ಲಿರುವ ಸಂತೋಷ್ ಅವರ ಮನೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಮೃತ ಸಂತೋಷ್ ಪತ್ನಿ ಮತ್ತು ಆತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಇದನ್ನೂ ಓದಿ:  ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ?: ಸಿದ್ದರಾಮಯ್ಯ ಕಿಡಿ

    ಈ ವೇಳೆ ಡಿಕೆಶಿಗೆ ಶಾಸಕ ಮಹಾಂತೇಶ್ ಕೌಜಲಗಿ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದರು. ಬಳಿಕ ಮೃತ ಸಂತೋಷ್ ಕುಟುಂಬಕ್ಕೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ವತಿಯಿಂದ 11 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಇದೇ ವೇಳೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಇದರ ಜೊತೆಗೆ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವುದಾಗಿ ಡಿಕೆಶಿ ಭರವಸೆ ನೀಡಿದರು.

  • ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ?: ಸಿದ್ದರಾಮಯ್ಯ ಕಿಡಿ

    ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ?: ಸಿದ್ದರಾಮಯ್ಯ ಕಿಡಿ

    ಹುಬ್ಬಳ್ಳಿ: ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ? ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನ್ಯಾಯಬೇಕೆಂದು ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈ ನಡುವೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು, ಸಣ್ಣ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ? ಶಿವಮೊಗ್ಗದಲ್ಲಿ ಹರ್ಷನ ಶವ ಇಟ್ಟುಕೊಂಡು ನಿಷೇಧಾಜ್ಞೆ ಇದ್ದಾಗಲು ಶವಯಾತ್ರೆ ಮಾಡಿದ್ರು. ಬೆಳ್ತಂಗಡಿಯಲ್ಲಿ ದಿನೇಶ್ ಸತ್ತಾಗ ಅವನಿಗೆ ಯಾಕೆ ಪಾದಯಾತ್ರೆ ಮಾಡಲಿಲ್ಲ. ನರಗುಂದ ಮುಸ್ಲಿಂ ವ್ಯಕ್ತಿ ಸತ್ತಾಗ ಯಾಕೆ ಪಾದಯಾತ್ರೆ ಮಾಡಲಿಲ್ಲ ಎಂದು ಪ್ರಶ್ನೆಗಳನ್ನು ಸುರಿಸಿದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ

    ಮಾತೆತ್ತಿದ್ದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ. ಹರ್ಷನಿಗೆ 25 ಲಕ್ಷ ಕೊಟ್ರು. ಆದ್ರೆ ದಿನೇಶ್‍ಗೆ ಯಾಕೆ ಕೊಡಲಿಲ್ಲ. ಬಿಜೆಪಿ ಅವರು ದ್ವೇಷದ ರಾಜಕಾರಣ ಮಾಡಲು ಶುರುಮಾಡಿದ್ದಾರೆ. ಜನರ ಮಧ್ಯ ಬೆಂಕಿ ಹಚ್ಚಲು ಶುರು ಮಾಡಿದ್ದಾರೆ. ಬೆಲೆ ಏರಿಕೆ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

    ಹುಬ್ಬಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂದು ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಹುಬ್ಬಳಿಯಲ್ಲಿ ಪೋಸ್ಟ್ ಮಾಡಿದವನು ಯಾರು? ಆತ ಈಗ ಅರೆಸ್ಟ್ ಆಗಿದ್ದಾನೆ. ಆತ ಭಜರಂಗದಳದ ಕಾರ್ಯಕರ್ತ. ಆ ಗಲಾಟೆಯನ್ನು ಮೊದಲು ಹುಟ್ಟಾಕಿದ್ದು ಯಾರು? ಆ ಮೇಲೆ ಗಲಾಟೆಯಾಗಿದೆ. ಗಲಾಟೆ ಹುಟ್ಟಕ್ಕಿದ್ದು ಭಜರಂಗದಳವನು. ಬಿಜೆಪಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

    Hubballi Riot

    ಗಲಾಟೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲ್ಲಿ, ಶಿಕ್ಷೆ ಕೊಡಲಿ. ಆದ್ರೆ ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸುಳ್ಳು ಹೇಳುತ್ತಿದ್ದಾರೆ. ಅವರ ಭ್ರಷ್ಟಾಚಾರ ಹಾಗೂ ತಪ್ಪುಗಳನ್ನು ಮುಚ್ವಿಕೊಳ್ಳಲು ಕಾಂಗ್ರೆಸ್ ಮೇಲೆ ಹೇಳುತ್ತಾರೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ರು. ಅವರಿಬ್ಬರು ನಮ್ಮ ಪಕ್ಷದವರ? ಇವುಗಳನ್ನ ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.

  • ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ

    ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ

    ಚಿಕ್ಕೋಡಿ: ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸದಲಗಾ ಚಿಕ್ಕೋಡಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಆಶಯ ವ್ಯಕ್ತಪಡಿಸಿದರು. ಈ ಹಿನ್ನೆಲೆ ಸ್ಥಳೀಯ ಶಾಸಕ ಗಣೇಶ್ ಹುಕ್ಕೇರಿ ವತಿಯಿಂದ 5 ಲಕ್ಷ ರೂ. ನೆರವು ನೀಡಲಾಗುವುದು ಎಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದರು.

    ಚಿಕ್ಕೋಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಮೃತ ಸಂತೋಷ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಬಾಕಿಯಿರುವ ಕಾಮಗಾರಿ ಯೋಜನಾ ಮೊತ್ತ ಪಾವತಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

    ಜೊತೆಗೆ ವೈಯಕ್ತಿಕವಾಗಿ ಸಂತೋಷ್ ಪಾಟೀಲ್ ಪುತ್ರನ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂ. ಹಣ ನೀಡುತ್ತೇವೆ. ಈ ಹಣವನ್ನು ಮೃತನ ಮಗನಿಗೆ 18 ವರ್ಷವಾಗುವವರೆಗೆ ತಾಯಿ ಹಾಗೂ ಮಗನ ಹೆಸರಿನಲ್ಲಿ ಬ್ಯಾಂಕ್‍ನಲ್ಲಿ ಇಡಲಾಗುವುದು ಎಂದು ಹೇಳಿದರು.

  • ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ

    ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ

    ಚಿಕ್ಕಬಳ್ಳಾಪುರ: ಬಿಜೆಪಿ ಸರ್ಕಾರ ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡುತ್ತೆ. ಆದರೆ ಪಾಪ ಗುತ್ತಿಗೆದಾರ ಸಂತೋಷ್ ಪಾಟೀಲ್‍ಗೆ ಯಾಕೆ ಪರಿಹಾರ ಕೊಟ್ಟಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದರು.

    ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಗ್ರಾಮದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ರಾಜೀನಾಮೆ ತಗೊಂಡು ಸಿಎಂ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದೀರಿ. ಆದ್ರೆ ಸತ್ತ ಸಂತೋಷ್ ಪಾಟೀಲ್‍ಗೆ ಯಾಕೆ ಪರಿಹಾರ ಕೊಟ್ಟಿಲ್ಲ. ರೌಡಿಗಳು ಸತ್ರೆ 25 ಲಕ್ಷ ರೂ. ಕೊಡ್ತೀರಿ. ಸಂತೋಷ್ ಪಾಟೀಲ್ ಅವರಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್ 

    ಕಂಟ್ರಾಕ್ಟರ್ ವಿಷ ಸೇವಿಸಿ ಸತ್ತಿದ್ದಾನೆ. ಅವನಿಗ್ಯಾಕೆ ಪರಿಹಾರ ಕೊಡಲಿಲ್ಲ. ಆದಷ್ಟು ಬೇಗ ಪರಿಹಾರ ಕೊಡಿ. ಇನ್ನೂ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಕಮೀಷನರ್ ಬಹಳ ತಾಳ್ಮೆಯಿಂದ ಉತ್ತಮ ಕೆಲಸ ಮಾಡಿದ್ದಾರೆ. ತಪ್ಪಿತಸ್ಥರು ಯಾರೇ ಇದ್ರೂ ಪೊಲೀಸರು ಅವರ ಮೇಲೆ ಕ್ರಮಕೈಗೊಳ್ಳಬೇಕು. ನಿರಪರಾಧಿಗಳನ್ನ ವಿಚಾರಣೆ ಮಾಡಿ ಆದಷ್ಟು ಬೇಗ ಬಿಟ್ಟು ಕಳುಹಿಸಿ ಎಂದು ತಿಳಿಸಿದರು.

  • ಸಂತೋಷ್ ಪಾಟೀಲ್ ಕೆಲಸ ಮಾಡಿಲ್ಲ, ನಾವು ಕೆಲಸ ಮಾಡಿದ್ದೇವೆ: ರಾಜು ಜಾಧವ್

    ಸಂತೋಷ್ ಪಾಟೀಲ್ ಕೆಲಸ ಮಾಡಿಲ್ಲ, ನಾವು ಕೆಲಸ ಮಾಡಿದ್ದೇವೆ: ರಾಜು ಜಾಧವ್

    ಬೆಳಗಾವಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಹಣ ಹಾಕಿಲ್ಲ. ನಾವು ಹೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಸಂತೋಷ್ ಕಡೆಯಿಂದ ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಜಾಧವ್ ಹೇಳಿದರು.

    ಗೋಕಾಕ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಮತ್ತು ಸಂತೋಷ್ ನಮಗೆ ಕೆಲಸ ಮಾಡಿ ಅಂತಾ ಹೇಳಿದ್ದರು. ಈ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ನಾವು ವರ್ಕ್ ಆರ್ಡರ್ ಕೇಳಿದಾಗ ನನ್ನ ಬಳಿ ವರ್ಕ್ ಆರ್ಡರ್ ಇದೆ ಅಂತಾ ಹೇಳಿದ್ದಲ್ಲದೇ ನೀವು ಕಾಳಜಿ ಮಾಡಬೇಡಿ ಕೆಲಸ ಮಾಡಿ ಅಂತಾ ಹೇಳಿದ್ದರು. ನಾವು ಯಾರು ಕೂಡ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    BRIBE

    ನಾನು ಒಬ್ಬನೇ 27 ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದೇನೆ. ನನ್ನ ಜೊತೆಗೆ ಹನ್ನೆರಡು ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದಾರೆ. ನಾವು ಹಣ ಹಾಕಿ ಕೆಲಸ ಮಾಡಿದ್ದಕ್ಕೆ ಸಂತೋಷ್ ಹಣ ಹಾಕಿರುವುದಾಗಿ ಹೇಳಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ

    ಇದಕ್ಕೂ ಮುಂಚೆ ಗೋಕಾಕ್‍ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಗೌಪ್ಯವಾಗಿ ಭೇಟಿಯಾಗಿದ್ದರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕಡೆಯಿಂದ ತುಂಡು ಗುತ್ತಿಗೆದಾರಿಕೆ ಪಡೆದಿದ್ದ ಹನ್ನೆರಡ ಜನ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

  • ಈ ಘಟನೆ ಆಗಿದ್ದೇ ಒಳ್ಳೆದಾಯ್ತು ಸ್ವಾಮೀಜಿ: ಈಶ್ವರಪ್ಪ

    ಈ ಘಟನೆ ಆಗಿದ್ದೇ ಒಳ್ಳೆದಾಯ್ತು ಸ್ವಾಮೀಜಿ: ಈಶ್ವರಪ್ಪ

    ಶಿವಮೊಗ್ಗ: ಈ ಘಟನೆ ಆಗಿದ್ದೇ ಒಳ್ಳೆಯದಾಯ್ತು ಅನ್ಸುತ್ತೆ ಸ್ವಾಮೀಜಿ, ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಹೀಗೆ ಒಟ್ಟಿಗೆ ನಮ್ಮ ಮನೆಯಲ್ಲಿ ಕಾಣುವ ಭಾಗ್ಯ ಸಿಗುತ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯದ ಹಲವು ಮಠಾಧೀಶರು ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಧೈರ್ಯ ತುಂಬುತ್ತಿದ್ದಾರೆ. ಇದನ್ನೂ ಓದಿ:  ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಶನಿವಾರವೂ ರಾಜ್ಯದ ಹಲವು ಮಠಗಳ ಸುಮಾರು 10 ಕ್ಕೂ ಹೆಚ್ಚು ಮಠಾಧೀಶರು ಭೇಟಿ ನೀಡಿ, ಈಶ್ವರಪ್ಪ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಭಾನುವಾರ ಕೇದಾರನಾಥ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸುಮಾರು 8 ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ

    ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಕೇದಾರನಾಥ ಮಠದ ಸ್ವಾಮೀಜಿ ಅವರಿಗೆ ಕುಟುಂಬ ಸಮೇತರಾಗಿ ಈಶ್ವರಪ್ಪ ಪಾದಪೂಜೆ ಸಲ್ಲಿಸಿದರು. ಬಳಿಕ ಕುಟುಂಬ ಸದಸ್ಯರು ಶ್ರೀಗಳ ಜೊತೆ ಪೋಟೋ ತೆಗೆಸಿಕೊಂಡರು. ಈ ವೇಳೆ ಈಶ್ವರಪ್ಪ ಶ್ರೀಗಳೊಂದಿಗೆ ಮಾತನಾಡುವಾಗ, ರಾಜೀನಾಮೆ ನೀಡಿದ್ದೇ ನನಗೆ ಒಳ್ಳೆಯದಾಯ್ತು ಅನಿಸುತ್ತಿದೆ. ಇದರಿಂದ ಆದರೂ ನೀವುಗಳು ನಮ್ಮ ಮನೆಗೆ ಒಟ್ಟಿಗೆ ಬರುವಂತೆ ಆಯಿತು ಎಂದು ಮಾತನಾಡಿದ್ದಾರೆ.

  • ಮಿಸ್ಟರ್ ಈಶ್ವರಪ್ಪ, ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದಪ್ಪಾ: ಸಿದ್ದು ಪ್ರಶ್ನೆ

    ಮಿಸ್ಟರ್ ಈಶ್ವರಪ್ಪ, ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದಪ್ಪಾ: ಸಿದ್ದು ಪ್ರಶ್ನೆ

    ಚಿಕ್ಕಮಗಳೂರು: ಮಿಸ್ಟರ್ ಈಶ್ವರಪ್ಪ ಸಂತೋಷ್ ಪಾಟೀಲ್ ಯಾರೆಂದು ಗೊತ್ತಿಲ್ಲ ಅಂದ ಮೇಲೆ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದ್ದಪ್ಪಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಈಶ್ವರಪ್ಪನವರನ್ನ ಪ್ರಶ್ನಿಸಿದ್ದಾರೆ.

    ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೇ ಇಲ್ಲ ಎಂದರು. ಹಾಗಾದರೆ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಲ್ಲ ಯಾರ ಮೇಲೆ ಹಾಕಿದಪ್ಪಾ? ಹೇಗೆ ಹಾಕಿದಪ್ಪಾ ಎಂದು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

    ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೆ ಇಲ್ಲ ಎಂದಿದ್ದರು. ಆಗ ಮಾಧ್ಯಮ ಮಿತ್ರರು ಅವರ ಫೋಟೋವನ್ನು ಹಾಕಿ-ಹಾಕಿ ತೋರಿಸಿದ್ದರು. ಸಂತೋಷ್ ಪಾಟೀಲ್ ಯಾರೆಂದು ಗೊತ್ತೆ ಇಲ್ಲ ಎಂದ ಮೇಲೆ ಅವರ ಮೇಲೆ ಡಿಫಾರ್ಮೇಷನ್ ಕೇಸ್ ಹೇಗೆ ಹಾಕಿದ್ದಪ್ಪಾ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ. ಈ ಸಿ.ಟಿ. ರವಿ, ಆ ಈಶ್ವರಪ್ಪನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು. ಜೊತೆಗೆ ನಾನು ಜಿಲ್ಲೆಯಲ್ಲಿ ಕೇಳಿದ್ದೇನೆ. ಅವನ್ಯಾರೋ ಸುದರ್ಶನ್ ಅಂತೆ. ಅಧಿಕಾರಿಗಳು ಅವನ ಮನೆ ಬಾಗಿಲಿಗೆ ಹೋಗಬೇಕಂತೆ ಎಂದು ಶಾಸಕ ಸಿ.ಟಿ. ರವಿ ಸಂಬಂಧಿ ಹಾಗೂ ಕಂಟ್ರಾಕ್ಟರ್ ಸುದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯನಗರ ಕಾರ್ಯಕಾರಿಣಿಯಲ್ಲಿ ಹಿಂದುತ್ವ ಅಜೆಂಡಾ ಜಪ

    ಸಭೆಯಲ್ಲಿ ಇಂದು ಕಂಟ್ರಾಕ್ಟರ್ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಇಂತಹ ಭ್ರಷ್ಟ ಹಾಗೂ ಪರ್ಸೆಂಟೇಜ್ ಸರ್ಕಾರ ಬೇಕಾ ಎಂದು ಪ್ರಶ್ನಿಸಿ, ಮುಂದಿನ ಚುನಾವಣೆಯಲ್ಲಿ ಇಂತಹ ಭ್ರಷ್ಟ ಹಾಗೂ ಪರ್ಸೆಂಟೇಜ್ ಸರ್ಕಾರವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯೋ? ಕೊಲೆಯೋ: ಈಶ್ವರಪ್ಪ ಅನುಮಾನ

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯೋ? ಕೊಲೆಯೋ: ಈಶ್ವರಪ್ಪ ಅನುಮಾನ

    ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಕರಣದ ಬಗ್ಗೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ? ಸಂತೋಷ್ ಪಾಟೀಲ್ ಯಾರದ್ದೋ ಕುತಂತ್ರಕ್ಕೆ ಬಲಿಯಾದನೋ ಎಂಬ ಬಗ್ಗೆ ಅನುಮಾನ ಇದೆ. ಹಾಗಾಗಿ ಶೀಘ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

    DK SHIVAKUMAR

    ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬುದು ಅನೇಕರ ಅಭಿಪ್ರಾಯ. ಈ ಬಗ್ಗೆ ಬೇರೆಯವರ ಜೊತೆ ಮಾತನಾಡಿದಾಗ ಅವರು ಸಹ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಪ್ರಕರಣದಲ್ಲಿ ಸಂತೋಷ್ ಪಾಟೀಲ್ ಅವನನ್ನು ಯಾರೋ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಶೀಘ್ರ ಮುಗಿದು ಇದರ ಹಿಂದೆ ಯಾರಿದ್ದಾರೆ ಎಂಬ ಅಂಶ ಬಹಿರಂಗ ಆಗಬೇಕಿದೆ ಎಂದರು. ಇದನ್ನೂ ಓದಿ: ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು: ನಂಜೇಗೌಡ

    ಪ್ರಕರಣ ಕುರಿತು ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಈ ಘಟನೆ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೋ, ಇಲ್ಲವೋ ಎಂಬುದರ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ತನಿಖೆ ಮುಗಿಯಲಿ, ಸತ್ಯಾಂಶ ಹೊರ ಬರಲಿ. ತನಿಖೆ ವೇಳೆ ಡಿಕೆಶಿ ಹೆಸರು ಪ್ರಸ್ತಾಪಿಸಲು ಹೋಗುವುದಿಲ್ಲ. ತನಿಖೆ ಮುಗಿದು ವರದಿ ಬರಲಿ. ಏನಾದರೂ ಡಿಕೆಶಿ ಕೈವಾಡ ಇದೆ ಅಂತಾದರೆ ಈ ಬಗ್ಗೆ ನಂತರ ಮಾತನಾಡುತ್ತೇನೆ ಎಂದರು.  ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ