Tag: ಸಂತೋಷ್ ಕುಮಾರ್

  • ಅಂದು ಸಂತೋಷ್ ಕುಮಾರ್ ಆತ್ಮಹತ್ಯೆ ವಿಷಯ ಕೇಳಿ ಆಶ್ಚರ್ಯ ಆಗಿತ್ತು: ಕೆ.ಎಸ್ ಈಶ್ವರಪ್ಪ

    ಅಂದು ಸಂತೋಷ್ ಕುಮಾರ್ ಆತ್ಮಹತ್ಯೆ ವಿಷಯ ಕೇಳಿ ಆಶ್ಚರ್ಯ ಆಗಿತ್ತು: ಕೆ.ಎಸ್ ಈಶ್ವರಪ್ಪ

    ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಕುಮಾರ್ ವಿನಾಃ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಯ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ನಾಯಿ ಅವರೇ ನನಗೆ ತಿಳಿಸಿದ್ರು. ಆತ್ಮಹತ್ಯೆ ವಿಷಯ ಕೇಳಿ ನನಗೆ ಆಶ್ಚರ್ಯ ಆಗಿತ್ತು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಟ್ಸಾಪ್‍ನಲ್ಲಿ ಟೈಪ್ ಮಾಡಿರುವ ಡೆತ್ ನೋಟ್ ಹರಿದಾಡ್ತಿದೆ ಅಂದ್ರು. ವರ್ಕ್ ಆರ್ಡರ್ ಕೊಡದೇ ನಾನು ಕೆಲಸ ಮಾಡಿ ಬಿಟ್ಟಿದ್ದೀನಿ ಎಂಬ ಅಂಶ ಗೊತ್ತಾಯ್ತು. ಮುಖ್ಯಮಂತ್ರಿ ಅವರಿಗೆ ತಕ್ಷಣ ನಾನು ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದೆ. ನನಗೂ ಸಂತೋಷ್ ಎಂಬಾತನಿಗೂ ಸಂಬಂಧ ಇಲ್ಲ ಅಂತಾ ನಾನು ಯಾರು ಯಾರಿಗೆ ಹೇಳಬೇಕು ಎಲ್ಲರಿಗೂ ಹೇಳಿದ್ದೀನಿ. ಆತ್ಮಹತ್ಯೆ ಏಕೆ ಮಾಡಿಕೊಂಡ ಎಂಬುದು ತನಿಖಾ ವರದಿಯಲ್ಲಿದೆ. ಈ ಬಗ್ಗೆ ಹೆಚ್ಚಿನ ವಿವರ ನನಗೆ ಗೊತ್ತಿಲ್ಲ ಎಂದರು.

    ಆತ್ಮಹತ್ಯೆ ಮಾಡಿಕೊಂಡಿದ್ದು ಹೌದು. ನನ್ನ ಹೆಸರು ಪ್ರಸ್ತಾಪ ಆಗಿದ್ದಕ್ಕೆ ನಾನು ರಾಜೀನಾಮೆ ಕೊಡಬೇಕಾಯ್ತು. ತನಿಖೆ ನಂತರ ಕ್ಲೀನ್ ಚಿಟ್ ಸಿಕ್ಕಿ ನಾನು ಮುಕ್ತವಾಗಿ ಹೊರಗೆ ಬಂದಿದ್ದೇನೆ. ಈಗ ಅವರು ಕೋರ್ಟ್ ಗೆ ಹೋಗುವ ಅಧಿಕಾರ ಇದೆ. ಕೋರ್ಟ್ ಗೆ ಹೋಗಿದ್ದಾರೆ. ಎಷ್ಟೇ ವರ್ಷ ನಡೆದರೂ ಅದರಲ್ಲಿಯೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ ಎಂಬ ನೂರಕ್ಕೆ ನೂರು ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ

    ಕ್ಲೀನ್ ಚಿಟ್ ಸಿಗುವ ಮೊದಲು ಬೇರೆ ಆಪಾದನೆ ಮಾಡ್ತಿದ್ದರು. ಈಗ ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಬೇರೆ ಆಪಾದನೆ ಮಾಡ್ತಿದ್ದಾರೆ. ಅವರು ಏನೇ ಆಪಾದನೆ ಮಾಡಿದ್ರೂ ಕೋರ್ಟ್ ಪರಿಶೀಲನೆ ಮಾಡುತ್ತದೆ. ಅಲ್ಲಿಯೂ ಕ್ಲೀನ್ ಚಿಟ್ ಸಿಗುವ ವಿಶ್ವಾಸ ಇದೆ. ಕೋರ್ಟ್ ನ ಅಧಿಕಾರಿಗಳಿಗೆ ಪ್ರಾರ್ಥನೆ ಮಾಡ್ತೇನೆ. ಸುಮ್ಮನೆ ಎಳೆದುಕೊಂಡು ಹೋದ್ರೆ ನನಗೂ ಸಮಾಧಾನ ಇರಲ್ಲ. ಅವರಿಗೂ ಸಮಾಧಾನ ಇರಲ್ಲ. ಹೀಗಾಗಿ ಕೋರ್ಟ್ ಬೇಗ ಜಡ್ಜ್ ಮೆಂಟ್ ಕೊಡಬೇಕು ಅಂತಾ ಪ್ರಾರ್ಥನೆ ಮಾಡ್ತೇನೆ ಎಂದು ತಿಳಿಸಿದರು.

    ವೀರ ಸಾವರ್ಕರ್ ಬಗ್ಗೆ ಚರ್ಚೆ ಮಾಡೋದೇ ರಾಷ್ಟ್ರ ದ್ರೋಹ. ಅಂಡಮಾನ್ ಜೈಲಿನ ಸೆಲ್ ಅನ್ನು ನೋಡಿಕೊಂಡು ಬರಲಿ ಅವರಿಗೆ ಗೊತ್ತಾಗುತ್ತದೆ. ವೋಟಿಗೋಸ್ಕರ ಸಾವರ್ಕರ್ ಬಗ್ಗೆ ಆಪಾದನೆ ಮಾಡ್ತಿದ್ದಾರೆ. ಕಾಂಗ್ರೆಸ್ ನವರಿಗೆ ಹೇಳ್ತೀನಿ ಸಾವರ್ಕರ್ ಬಗ್ಗೆ ಟೀಕೆ ಮಾಡಿದರೆ ಅದಕ್ಕಿಂತ ಘೋರ ಅಪರಾಧ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಭೂಕಂಪನ ಪೀಡಿತ ಪ್ರದೇಶಗಳಿಗೆ ಹಿರಿಯ ವಿಜ್ಞಾನಿಗಳ ಭೇಟಿ ಅಧ್ಯಯನ

    ಭೂಕಂಪನ ಪೀಡಿತ ಪ್ರದೇಶಗಳಿಗೆ ಹಿರಿಯ ವಿಜ್ಞಾನಿಗಳ ಭೇಟಿ ಅಧ್ಯಯನ

    ಚಿಕ್ಕಬಳ್ಳಾಪುರ: ನಗರದ ಭೂಕಂಪನ ಪೀಡಿತ ಪ್ರದೇಶಗಳಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವಿಜ್ಞಾನಿಗಳಾದ ರಮೇಶ್ ದಿಕ್ಪಾಲ್ ಮತ್ತು ಸಂತೋಷ್ ಕುಮಾರ್ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.

    ಡಿಸೆಂಬರ್ ೨೩ ರಂದು ಮಧ್ಯಾಹ್ನ ೨:೧೬ ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ೩.೬ ರಷ್ಟು ತೀವ್ರತೆ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ವಿಜ್ಞಾನಿಗಳು ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿ, ಗುಂಡ್ಲ, ಮಂಡಿಕಲ್ಲು, ಜೊನ್ನಲಕುಂಟೆ, ಪಿಲ್ಲಗುಂಡ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ:  ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಈ ವೇಳೆ ರಮೇಶ್ ದಿಕ್ಪಾಲ್ ರವರು ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಸುರಿದ ಅತಿವೃಷ್ಟಿ ಧಾರಾಕಾರ ಮಳೆಯು ಕಳೆದ ೫೦ ವರ್ಷಗಳಲ್ಲಿಯೇ ಆಗಿರುವುದಿಲ್ಲ. ಈ ಮಹಾಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಹೀಗಾಗಿ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಸಂಭವಿಸಿವೆ. ಇಂತಹ ಭೂಕಂಪನ ಅಲೆಗಳು ಬಾರಿ ಸದ್ದಿನೊಂದಿಗೆ ಮುಂದಿನ ಒಂದು ತಿಂಗಳವರೆಗೂ ಬರುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

    ಜಿಲ್ಲೆಯು ಭೂಕಂಪದ ವಲಯದಿಂದ ಬಹುದೂರವಿದ್ದು, ಸುರಕ್ಷಿತ ವಲಯದಲ್ಲಿದೆ. ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳಾತೀತವಾಗಿರುತ್ತದೆ. ಜೊತೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ ಹಾಗೂ ಜಿಲ್ಲಾಡಳಿತವು ಸಹ ನಿಗಾವಹಿಸಿದೆ. ಆದ್ದರಿಂದ ಜನರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಹಾಗೂ ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದರು.

    ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಗಳನ್ನು ಅವಲೋಕಿಸಲಾಗಿ ಇದರ ತೀವ್ರತೆಯ ನಕಾಶೆಯನ್ವಯ ಈ ಭೂಕಂಪನಗಳ ತೀವ್ರತೆಯು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಸುಮಾರು ೨೦ ರಿಂದ ೩೦ ಕಿಮೀ ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ. ಇದನ್ನೂ ಓದಿ:  ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    ಇದರ ಪರಿಣಾಮದಿಂದಾಗಿ ಭೂಮಿಯು ಅಲುಗಾಡಿದ ಅನುಭವವಾಗಿದ್ದರೂ ಸಹ ಈ ಪ್ರಮಾಣದ ಭೂಕಂಪನವು ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯ ಅಪಾಯಕಾರಿಯಲ್ಲ. ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲವೆಂದು ಭೇಟಿ ನೀಡಿದ ಸ್ಥಳೀಯರಿಗೆ ವಿಜ್ಞಾನಿಗಳು ಮನೋಸ್ಥೈರ್ಯ ತುಂಬಿದರು.

    ೨.೯, ೩.೦ ಮತ್ತು ೩.೬ ತೀವ್ರತೆಯ ಮೂರು ಭೂಕಂಪನಗಳು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಡಿಸೆಂಬರ್ ೨೨ ಮತ್ತು ೨೩ ರಂದು ಸಂಭವಿಸಿವೆ. ಡಿಸೆಂಬರ್ ೨೨ ರಂದು ಸಂಭವಿಸಿರುವ, ಒಂದು ಭೂಕಂಪನದ ಕೇಂದ್ರಸ್ಥಾನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಗ್ರಾಮ ಪಂಚಾಯತಿಯಿAದ ಸುಮಾರು ೧.೪ ಕಿಮೀ ದೂರದಲ್ಲಿ ದಾಖಲಾಗಿದೆ.

    ಇದು ಸುಮಾರು ೨.೯ರ ತೀವ್ರತೆಯನ್ನು ಹೊಂದಿದ್ದು ೧೧ ಕೀಮೀ ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ. ಮತ್ತೊಂದು ಭೂಕಂಪನವು ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಭೋಗಪರ್ತಿ ಗ್ರಾಮಕ್ಕೆ ೧.೨೩ ಕಿಮೀ ದೂರದಲ್ಲಿ ಮುಂಜಾನೆ ೭.೧೫ಕ್ಕೆ ಸಂಭವಿಸಿದ್ದು, ಇದರ ತೀವ್ರತೆಯು ೩.೦೦ರಷ್ಟಿದ್ದು ಇದು ಭೂಗರ್ಭದ ಸುಮಾರು ೨೩ ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.

    ಡಿಸೆAಬರ್ ೨೩ ರಂದು ಸಂಭವಿಸಿರುವ ಭೂಕಂಪನವು ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾದೆನಹಳ್ಳಿ ಗ್ರಾಮಕ್ಕೆ ೧.೨ ಕಿಮೀ ದೂರದಲ್ಲಿ ಮಧ್ಯಾಹ್ನ ೨:೧೬ಕ್ಕೆ ಸಂಭವಿಸಿದೆ. ಇದರ ತೀವ್ರತೆಯು ೩.೬ ರಷ್ಟಿದ್ದು, ಇದು ಭೂಗರ್ಭದ ಸುಮಾರು ೧೮ ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.

    ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ, ಕಿರಿಯ ಭೂವಿಜ್ಞಾನಿ ಕೃಷ್ಣಮೂರ್ತಿ.ಬಿ.ಎನ್, ಚಿಕ್ಕಬಳ್ಳಾಪುರ ತಾಲೂಕಿನ ತಹಸಿಲ್ದಾರ್ ಗಣಪತಿಶಾಸ್ತ್ರೀ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

    ಈ ಸಂದರ್ಭದಲ್ಲಿ ಭೂವಿಜ್ಞಾನಿ ಸಂತೋಷ್ ಕುಮಾರ್ ರವರು ಮಾತನಾಡಿ, ಭೂಕಂಪನದ ಮೊದಲು ಮತ್ತು ಭೂಕಂಪನದ ಸಮಯದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಕರಪತ್ರಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.

  • ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

    ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಫೇಸ್‍ಬುಕ್ ಪೋಸ್ಟ್ ಹಾಕುವ ಮೂಲಕ ಡ್ರಗ್ಸ್ ಜಾಲಕ್ಕೆ ಸಂಬಂಧಿಸದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ಐಂದ್ರಿತಾ ರೈ ಮತ್ತು ನಟ ಸಂತೋಷ್ ಕುಮಾರ್ ಅವರ ಕಾಲೆಳೆದಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕನ್ನಡದ ಸ್ಟಾರ್ ನಟ-ನಟಿಯರು ಸಿಲುಕಿ ಹಾಕಿಕೊಂಡಿದ್ದಾರೆ. ಇಂದು ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ಅವರನ್ನು ಸಿಸಿಬಿ ವಿಚಾರಣೆ ಮಾಡಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ.

    https://www.facebook.com/VS.Prashanth.Sambargi/posts/10159025108850712

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿಯವರು ಒಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದು, ನೂರೂ ಜನ್ಮಕು ಚಿತ್ರದ ನಾಯಕ ಹಾಗೂ ನಾಯಕಿ, ಇಬ್ಬರೂ ಡ್ರಗ್ಸ್ ಜಾಲದಲ್ಲಿ ಆರೋಪ ಎದುರಿಸುತ್ತಿರುವುದು ಏಳೇಳು ಜನುಮದ ವಿಪರ್ಯಾಸ. ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್, ಕಿವಿ, ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವಿರಾ ಎಂದು ವ್ಯಂಗ್ಯವಾಡಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ್ದ ಸಂಬರಗಿ, ಸೋಮವಾರ ಮತ್ತಿಬ್ಬರ ಸ್ಟಾರ್ ನಟರ ಹೆಸರು ಬಹಿರಂಗ ಮಾಡುತ್ತೇನೆ. ಸದ್ಯ ಆ ಬಗ್ಗೆ ಯಾವೂದೇ ಕ್ಲೂ ಕೊಡಲ್ಲ. 48 ಗಂಟೆ ಕಾದರೇ ಎಲ್ಲ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುತ್ತೇನೆ. ಇದು ಊಹಾಪೋಹಾದ ಕತೆಯಲ್ಲ ದಾಖಲೆ ಸಮೇತ ಹೆಸರು ಹೇಳುತ್ತೇನೆ. ನಾನು ಹೇಳುವ ಹೆಸರು ವಿಧಾನಸೌಧದ ಪಡಸಾಲೆಯಲ್ಲಿ ಸದ್ದು ಮಾಡುತ್ತೆ. ಈ ಹೋರಾಟಕ್ಕೆ ಹಲವರು ನನ್ನ ಬೆನ್ನುತಟ್ಟಿದ್ದಾರೆ. ಈ ಹೋರಾಟದಲ್ಲಿ ನನಗೆ ಯಾವುದೇ ಭಯ ಇಲ್ಲ ಎಂದು ಹೇಳಿದ್ದರು.

  • ಪಾರ್ವತಮ್ಮನ ತಂಗಿ ಮಗನ ಹಾರರ್ ಗೂಗ್ಲಿ!

    ಪಾರ್ವತಮ್ಮನ ತಂಗಿ ಮಗನ ಹಾರರ್ ಗೂಗ್ಲಿ!

    ಬೆಂಗಳೂರು: ಈ ಹಿಂದೆ ಬಿಂದಾಸ್ ಗೂಗ್ಲಿ ಎಂಬ ಚಿತ್ರ ನಿರ್ದೇಶನ ಮಾಡಿದ್ದವರು ಸಂತೋಷ್ ಕುಮಾರ್. ಕಾಲೇಜ್ ಕಾರಿಡಾರಿನಲ್ಲಿ ನಡೆಯುವ ಯೂಥ್‍ಫುಲ್ ಕಥೆ ಹೇಳಿದ್ದ ಅವರೀಗ ಪಕ್ಕಾ ಹಾರರ್ ಥ್ರಿಲ್ಲರ್ ಕಥೆಯೊಂದನ್ನು ಎರಡೆರಡು ಭಾಷೆಗಳಲ್ಲಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

    ಪಾರ್ವತಮ್ಮನವರ ತಂಗಿ ಮಗ ಈ ಸಂತೋಷ್ ಕುಮಾರ್. ಏಕಕಾಲದಲ್ಲಿಯೇ ಹಿಂದಿ ಮತ್ತು ಕನ್ನಡದಲ್ಲಿ ನಿರ್ದೇಶನ ಮಾಡಲು ಮುಂದಾಗಿರೋ ಹೊಸ ಚಿತ್ರಕ್ಕೆ ಮೃತ್ಯುಲಿಪಿ ಪುರಾಣಂ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.

    ಈ ಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರೋ ತಂತ್ರಜ್ಞರೇ ಕಾರ್ಯ ನಿರ್ವಹಿಸಲಿದ್ದಾರಂತೆ. ಬಾಲಿವುಡ್ ನ ನಟ ನಟಿಯರೇ ಮುಖ್ಯ ಪಾತ್ರವನ್ನೂ ನಿರ್ವಹಿಸಲಿದ್ದಾರಂತೆ. ಇದೀಗ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ.

    ಇದು ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಲೇ ಕಗ್ಗಂಟಾಗುಳಿದಿರುವ ಬರ್ಮುಡಾ ಟ್ರಯಾಂಗಲ್ ನಿಂದ ಸ್ಫೂರ್ತಿಗೊಂಡು ರಚಿಸಲ್ಪಟ್ಟಿರೋ ಕಥೆಯನ್ನು ಹೊಂದಿದೆ. ಮೀಡಿಯಾದಲ್ಲಿ ಕೆಲಸ ಮಾಡೋ ಹುಡುಗರು ಅಸೈನ್‍ಮೆಂಟ್ ಕಾರಣದಿಂದ ಒಂದು ಪ್ರದೇಶಕ್ಕೆ ತೆರಳುತ್ತಾರೆ. ಅದು ಹೋದವರನ್ನೆಲ್ಲ ಕಣ್ಮರೆ ಮಾಡುವ ವಿಚಿತ್ರ ಪ್ರದೇಶ. ಇಂಥಲ್ಲಿಗೆ ಈ ಹುಡುಗರ ಟೀಮು ಹೋದ ನಂತರ ಆಗೋ ಕಥನ ಹಾರರ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತದೆಯಂತೆ.

    ಇದೀಗ ಈ ಚಿತ್ರಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿರೋ ಸಂತೋಷ್ ಬೇಗನೆ ಚಿತ್ರೀಕರಣ ಮುಗಿಸಿಕೊಂಡು ವಿಶ್ವಾಧ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv