Tag: ಸಂತೋಷ್ ಆನಂದರಾಮ್

  • ಹೊಸಪೇಟೆಯಲ್ಲಿ ‘ಯುವ’ ಚಿತ್ರದ 2ನೇ ಸಾಂಗ್ ರಿಲೀಸ್

    ಹೊಸಪೇಟೆಯಲ್ಲಿ ‘ಯುವ’ ಚಿತ್ರದ 2ನೇ ಸಾಂಗ್ ರಿಲೀಸ್

    ಯುವರಾಜಕುಮಾರ್ ನಟನೆಯ ಯುವ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. 2ನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದ್ಧೂರಿ ಇವೆಂಟ್ ಮಾಡಿ, ಅಲ್ಲಿ 2ನೇ ಹಾಡನ್ನು ಬಿಡುಗಡೆ ಮಾಡುವ ಚರ್ಚೆ ನಡೆದಿದೆ ಎನ್ನುತ್ತಿವೆ ಬಲ್ಲ ಮೂಲಗಳು. ಯುವ (Yuva) ಅಶ್ವಮೇಧಯಾಗಕ್ಕೆ ಸಜ್ಜಾಗಿದ್ದಾರೆ. ಕುದುರೆ ಏರಿ ಯುದ್ಧಕ್ಕೆ ಹೊರಡಲಿದ್ದಾರೆ. ಅದಕ್ಕೂ ಮುನ್ನ ಕರುನಾಡಿನ ಮುಂದೆ ಮಂಡಿ ಊರಿದ್ದಾರೆ. ನನ್ನನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಅ ಕಾರಣಕ್ಕಾಗಿಯೇ ಯುವ ಸಿನಿಮಾದ ಮೊದಲ ಹಾಡನ್ನು ಜನರ ಮುಂದೆ ಈಗಾಗಲೇ ಇಟ್ಟಿದ್ದಾರೆ.

    ಯುವ ಕಣ್ಣಲ್ಲಿ ಜನರು ಏನು ನೋಡಲು ಕಾಯುತ್ತಿದ್ದರೊ ಅದನ್ನೇ ಯುವ ತೋರಿಸಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನದಲ್ಲಿ ನೀನೇ ಕೂಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ತಕ್ಕಂತಿದೆ ಯುವ ಹಾಡು. ಒಬ್ಬನೇ ಶಿವ ಒಬ್ಬನೇ ಯುವ. ಇದನ್ನು ಕೇಳುತ್ತಾ ಕೇಳುತ್ತಾ ನೀವು ಮೈಮರೆಯುತ್ತೀರಿ. ಎಲ್ಲವನ್ನೂ ಅಲ್ಲಲ್ಲೇ ಬಿಟ್ಟು ಎದ್ದು ನಿಲ್ಲುತ್ತೀರಿ. ಕಾರಣ ಹಾಡು ಹಾಗಿದೆ. ಕರುನಾಡನ್ನು ಹುಚ್ಚೆಬ್ಬಿಸಿದೆ.

    ಅದೇನು ಕುಣಿತ. ಯುವರಾಜ್‌ಕುಮಾರ್ (Yuvarajkumar) ಸುಮ್ಮನೆ ಆಗಿಲ್ಲ. ಸುಮ್ಮನೆ ಬಂದಿಲ್ಲ. ಏನಾದರೂ ಮಾಡಿ ಹೋಗಬೇಕು. ಏನಾದರೂ ಸಾಧಿಸಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಚಿಕ್ಕಪ್ಪ ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಸಕೊಳ್ಳಬೇಕು. ಅದೊಂದೇ ಉದ್ದೇಶ. ಅದೇ ಕಾಯಕ. ಹೀಗಂದುಕೊಂಡು ಯುವ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಯುವ ಹಾಡು ನೋಡಿದ ಜನರು ಕೇಕೆ ಹಾಕುತ್ತಿದ್ದಾರೆ.

    ಚಾಮರಾಜನಗರ ಅದು ಅಣ್ಣಾವ್ರು ಹುಟ್ಟಿದ ಮಣ್ಣು. ಅದೇ ಮಣ್ಣಿನಲ್ಲಿ ನಿಂತು ಯುವ ಕರುನಾಡಿಗೆ ತಲೆ ಬಾಗಿದ್ದಾರೆ. ನನ್ನನ್ನು ಹರಸಿ, ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ರಾಜ್‌ಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ಅಷ್ಟೇ ಅಲ್ಲ. ಅಪ್ಪು ಮಗ ಎನ್ನುವ ಕಾರಣಕ್ಕೂ ಅಲ್ಲ. ಅದೆಲ್ಲ ಮೀರಿದ್ದು ಕಲೆ. ಅದನ್ನು ಯುವ ರಕ್ತದಲ್ಲೇ ಬಸಿದುಕೊಂಡು ಬಂದಿದ್ದಾರೆ.

     

    ಒಬ್ಬನೇ ಶಿವ ಒಬ್ಬನೇ ಯುವ ಈ ಹಾಡನ್ನು ಸಂತೋಷ್ ಆನಂದ್ ರಾಮ್ (Santhosh Anandram) ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ‘ರಾಜಕುಮಾರ’ ಸಿನಿಮಾದಲ್ಲಿ ಬೊಂಬೆ ಹೇಳುತ್ತೈತೆ ಹಾಡನ್ನು ಬರೆದಿದ್ದು ಇವರೇ. ಅದೇ ಸಂತೋಷ್ ಈಗ ಈ ಗೀತೆಗೆ ಸಾಲು ಹೆಣೆದಿದ್ದಾರೆ. ಒಬ್ಬ ನಯಾ ಹುಡುಗನನ್ನು ಹೇಗೆ ತೆರೆ ಮೇಲೆ ತೋರಿಸಬೇಕೆಂದು ಅವರಿಗೆ ಗೊತ್ತು. ಅದನ್ನು ನಿಯತ್ತಾಗಿ ಪಾಲಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಯುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹಾಡಿಗೆ ಯುವನ ಖದರ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನು ಇದೇ ಮಾ.29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ರಾಘವೇಂದ್ರ ಸ್ಟೋರ್ಸ್ : ಹೋಟೆಲ್ ಮಾಲಿಕನಾದ ಜಗ್ಗೇಶ್

    ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ರಾಘವೇಂದ್ರ ಸ್ಟೋರ್ಸ್ : ಹೋಟೆಲ್ ಮಾಲಿಕನಾದ ಜಗ್ಗೇಶ್

    ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಬಹುತೇಕ ಮುಗಿದಿದೆ. ಕೊನೆಯ ದಿನದ ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದುಕೊಂಡು ವಾಪಸ್ಸು ಬೆಂಗಳೂರಿಗೆ ಬಂದಿರುವ ಚಿತ್ರತಂಡ, ಡಬ್ಬಿಂಗ್ ಕೆಲಸಕ್ಕೂ ಕೈ ಹಾಕಿದೆ. ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡ ಮುಗಿಸಿರುವ ಜಗ್ಗೇಶ್, ಇದೀಗ ಮತ್ತೊಂದು ಸಿನಿಮಾದ ಶೂಟಿಂಗ್ ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊದಲ ಬಾರಿಗೆ ಜಗ್ಗೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಸಂತೋಷ್ ಆನಂದ್ ರಾಮ್. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಈ ಸಿನಿಮಾದಲ್ಲಿ ಜಗ್ಗೇಶ್ ಹೋಟೆಲ್ ಮಾಲೀಕನ ಪಾತ್ರ ಮಾಡುತ್ತಿದ್ದಾರಂತೆ. ಹೋಟೆಲ್ ಗೂ ನಾಯಕನ ಬದುಕಿಗೂ ಇರುವ ಸಂಬಂಧವನ್ನು ಈ ಸಿನಿಮಾ ಹೇಳಲಿದೆಯಂತೆ. ಇದೇ ಮೊದಲ ಬಾರಿಗೆ ಇಥಂದ್ದೊಂದು ಪಾತ್ರವನ್ನು ನಿರ್ವಹಿಸಿರುವ ಜಗ್ಗೇಶ್, ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರಂತೆ. ಇದನ್ನೂ ಓದಿ : ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ನಾಯಕನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡರೆ, ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಪಾತ್ರ ನಿರ್ವಹಿಸಿದ್ದಾರೆ. ಕೆಜಿಎಫ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಕೆಜಿಎಫ್ ನಂತರ ಈ ಸಿನಿಮಾ ತೆರೆ ಕಾಣಲಿದೆ.

  • ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಮಾ.3 ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು ಪುನೀತ್ ರಾಜ್ ಕುಮಾರ್ ಗಾಗಿಯೇ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಪುನೀತ್ ಸ್ಮರಣೆಯ ಜತೆಗೆ ಪುನೀತ್ ಅವರ ಜತೆ ಕೆಲಸ ಮಾಡಿದ ನಿರ್ದೇಶಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗಿತ್ತು. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಚೇತನ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಭಗವಾನ್, ಪುನೀತ್ ಅವರ ಜತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟರು. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಭಾವುಕತೆಯಿಂದಲೇ ಶುರುವಾಗಿ, ಭಾವುಕತೆಯಿಂದಲೇ ಮುಕ್ತಾಯವಾಯಿತು. ಇದನ್ನೂ ಓದಿ : ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಪುನೀತ್ ನಟನೆಯ ಚಿತ್ರಗಳನ್ನು ವಿಶ್ಲೇಷಿಸುವುದರ ಜತೆಗೆ ಅವರು ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿದ್ದ ತಯಾರಿ, ಅವರಿಗಾಗಿಯೇ ಪಾತ್ರಗಳನ್ನು ಬರೆಯುತ್ತಿದ್ದ ರೀತಿ ಮತ್ತು ಅವರು ಶೂಟಿಂಗ್ ಸೆಟ್ ನಲ್ಲಿ ಹೇಗೆಲ್ಲ  ಇರುತ್ತಿದ್ದರು ಎನ್ನುವ ಕುರಿತು ನಿರ್ದೇಶಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕೂಡ ಉಪಸ್ಥಿತರಿದ್ದರು.

  • ಯುವರತ್ನನ ‘ಪವರ್ ಆಫ್ ಯುಥ್’ ಆರ್ಭಟಕ್ಕೆ ನಿಗದಿಯಾಯ್ತು ಮುಹೂರ್ತ

    ಯುವರತ್ನನ ‘ಪವರ್ ಆಫ್ ಯುಥ್’ ಆರ್ಭಟಕ್ಕೆ ನಿಗದಿಯಾಯ್ತು ಮುಹೂರ್ತ

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ತಂಡದಿಂದ ಹೊಸ ಅಪ್‍ಡೇಟ್ ಹೊರ ಬಂದಿದ್ದು, ಡಿಸೆಂಬರ್ 2, 2020ರಂದು ಯುವರತ್ನ ಸಿನಿಮಾದ ಹಾಡು ರಿಲೀಸ್ ಆಗಲಿದೆ.

    ಇಂದು ಬೆಳಗ್ಗೆ 11 ಗಂಟೆಗೆ ಟ್ವೀಟ್ ಮೂಲಕ ಚಿತ್ರದ ಮಾಹಿತಿ ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಸಾಂಗ್ ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ. ಭಾನುವಾರ ಟ್ವೀಟ್ ಮಾಡಿದ್ದ ಸಂತೋಷ್ ಆನಂದರಾಮ್, ನಾಳೆ ಅಭಿಮಾನಿಗಳಿಗೆ ಅಭಿಮಾನದ ಸುದ್ದಿಗಳು. ಯುವರತ್ನ ನಿಮ್ಮ ಸ್ವತ್ತು ಬೆಳೆಸಿ ಹರಿಸಿ. ಸೋಮವಾರ ಬೆಳಗ್ಗೆ 11 ಗಂಟೆಗೆ ಗುಡ್ ನ್ಯೂಸ್ ನೀಡೋದಾಗಿ ಬರೆದುಕೊಂಡಿದ್ದರು.

    ಪುನೀತ್ ರಾಜ್‍ಕುಮಾರ್ ಸಹ ಸಂತೋಷ್ ಆನಂದರಾಮ್ ಟ್ವೀಟ್ ನ್ನು ರಿಟ್ವೀಟ್ ಮಾಡಿಕೊಂಡಿದ್ದರು. ರಿಲೀಸ್ ಜೊತೆಗೂ ಮತ್ತೊಂದು ಸಿಹಿಯನ್ನ ಚಿತ್ರತಂಡ ನೀಡಿದೆ. ಡಿಸೆಂಬರ್ ಎರಡರಂದೇ ಯುವರತ್ನ ತೆಲಗು ಭಾಷೆಯಲ್ಲಿಯೂ ರಿಲೀಸ್ ಆಗಲಿದೆ.

    `ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  • ಖುಷಿ ತರದ ಈ ಬಾರಿಯ ‘ಯುವರತ್ನ’ನ ಅಪ್‍ಡೇಟ್

    ಖುಷಿ ತರದ ಈ ಬಾರಿಯ ‘ಯುವರತ್ನ’ನ ಅಪ್‍ಡೇಟ್

    ಬೆಂಗಳೂರು: ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಚಿತ್ರದ ಕಲಾವಿದರು, ತಂತ್ರಜ್ಞರು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ಕುಂಟುತ್ತಾ ಸಾಗುತ್ತಿವೆ. ಚಂದನವನದ ಬಹು ನಿರೀಕ್ಷಿತ ಯುವರತ್ನ ಚಿತ್ರ ತಂಡದಿಂದ ಸುದ್ದಿಯೊಂದು ಹೊರ ಬಂದಿದ್ದು, ಪವರ್ ಸ್ಟಾರ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

    ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಕೆಲಸಗಳು ನೆಡೆಯುತ್ತಿಲ್ಲ. ಚೆನ್ನೈ ಮತ್ತು ಮುಂಬೈ ಲಾಕ್‍ಡೌನ್ ನಲ್ಲಿವೆ.ಪರಿಸ್ಥಿತಿ ಹದವಾಗುವವರೆಗೂ ಯುವರತ್ನ ಹಾಡುಗಳು ಬರುವುದು ಕಷ್ಟ. ಸಂಗೀತ ನಿರ್ದೇಶಕ ಥಾಮನ್ ಅವರು ಚೆನ್ನೈನ ಲಾಕ್‍ಡೌನ್ ನಲ್ಲಿ ಸಿಲುಕಿದ್ದಾರೆ. ಹಾಗಾಗಿ ಅಭಿಮಾನಿಗಳು ದಯವಿಟ್ಟು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಯುವರತ್ನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿನಗರದಲ್ಲಿ ಸದ್ದು ಮಾಡುತ್ತಾ ಬಂದಿರುವ ಸಿನಿಮಾ. ಕೊರೊನಾ ಆತಂಕದಿಂದ ಸಿನಿಮಾದ ಚಿತ್ರೀಕರಣಕ್ಕೂ ಚಿತ್ರತಂಡ ಬ್ರೇಕ್ ಹಾಕಿದೆ. ಇದೀಗ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೂ ಕಲಾವಿದರು ನೆರೆಯ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ‘ಯುವರತ್ನ’ ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.

    ಯುವರತ್ನ ಚಿತ್ರತಂಡ ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು. 3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ ‘ಯುವರತ್ನ’ನ ಯುರೋಪ್ ಪ್ರವಾಸ ರದ್ದು ಮಾಡಿದೆ. ಹಣ ಹೋದರೆ ಹೋಗಲಿ ಕೊರೊನಾ ಸಹವಾಸ ಬೇಡಪ್ಪ ಎಂದು ಚಿತ್ರತಂಡ ಸುಮ್ಮನಾಗಿದೆ.

    ‘ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.

  • ಮೇ 21ಕ್ಕೆ ಯುವರತ್ನ ಬಿಡುಗಡೆ- ನಿರ್ದೇಶಕ ಆನಂದರಾಮ್ ಸ್ಪಷ್ಟನೆ

    ಮೇ 21ಕ್ಕೆ ಯುವರತ್ನ ಬಿಡುಗಡೆ- ನಿರ್ದೇಶಕ ಆನಂದರಾಮ್ ಸ್ಪಷ್ಟನೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆ ಕುರಿತು ಭಾರೀ ಕುತೂಹಲ ಮೂಡಿದ್ದು, ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿತ್ತು. ಆದರೆ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.

    ಹಲವು ದಿನಗಳಿಂದ ಯುವರತ್ನ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ಸಿನಿಮಾದ ನಿರ್ದೇಶಕ ಸಂತೋಶ್ ಆನಂದರಾಮ್ ಟ್ವೀಟ್ ಮೂಲಕ ಮಾಹಿತಿ ನೀಡಿ ಬಿಡುಗಡೆ ದಿನಾಂಕದ ಕುರಿತು ಸುಳಿವು ನೀಡಿದ್ದರು. ಆದರೆ ಈ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ ಎಂಬುದು ನಂತರ ತಿಳಿದಿದೆ. ನಂತರ ಸಂತೋಷ್ ಅವರು ಇದಕ್ಕೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಹೀಗಾಗಿ ಯುವರತ್ನ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

    ಸಿನಿಮಾ ಬಿಡುಗಡೆ ಕುರಿತು ಸಂತೋಷ್ ಆನಂದರಾಮ್ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಯುವರತ್ನನಿಗಾಗಿ ಕಾಯುತ್ತಿರುವ ಎಲ್ಲ ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಸರ್‍ಪ್ರೈಸ್. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಇದರಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದರೆ ಈ ಸುದ್ದಿ ಸುಳ್ಳು ಎಂಬುದು ನಂತರ ತಿಳಿದಿದೆ. ಸ್ವತಃ ಸಂತೋಷ್ ಆನಂದರಾಮ್ ಅವರೇ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಇದು ತಪ್ಪು ಮಾಹಿತಿ ಇನ್ನೂ 2 ಹಾಡುಗಳ ಚಿತ್ರೀಕರಣವಿದೆ. ಅಲ್ಲದೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕಾ ಮುಗಿದ ಮೇಲೆ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು, ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ಪ್ಲಾನ್ ಇದೆ. ಹೀಗಾಗಿ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಟ್ವೀಟ್ ಮಾಡಿದ್ದು, ಯುವರತ್ನ ಬಳಸಿಕೊಂಡು ಕೆಲವರು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಪ್ರತಿಕ್ರಿಯಿಸಿದೆ. ಯುವರತ್ನ ನಮ್ಮೆಲ್ಲರಿಗೂ ದೊಡ್ಡಮಟ್ಟದ್ದಾಗಿದೆ ಎಂದು ಮೂರನೇ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ಕುರಿತು ಹೊಂಬಾಳೆ ಫಿಲಂಸ್ ಆಗಲಿ ಅಥವಾ ಪುನೀತ್ ರಾಜ್‍ಕುಮಾರ್ ಆಗಲಿ ಮಾಹಿತಿ ಖಚಿತಪಡಿಸಿಲ್ಲ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಪುನೀತ್ ರಾಜ್‍ಕುಮಾರ್ ಸಹಾಯ ಹಸ್ತ ಚಾಚಿದ್ದು, ಇತ್ತೀಚೆಗಷ್ಟೇ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ.ಗಳ ಚೆಕ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದರು.

    ಇತ್ತೀಚೆಗೆ ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಚಿತ್ರ ತಂಡ ಡೈಲಾಗ್ ಟೀಸರ್‍ನ್ನು ಉಡುಗೊರೆಯಾಗಿ ನೀಡಿತ್ತು. ಯುವರತ್ನ ಚಿತ್ರತಂಡ ಡೈಲಾಗ್ ಟೀಸರ್ ಬಿಡುಗಡೆ ಮಾಡಿದರೆ, ಜೇಮ್ಸ್ ಚಿತ್ರತಂಡ ಸಹ ಮೋಷನ್ ಪೋಸ್ಟರ್ ರಿಲೀಸ್ ಮಾಡಿತ್ತು. ಯುವರತ್ನದ ಡೈಲಾಗ್ ಟೀಸರ್ ಯುವ ಸಮೂಹವನ್ನು ಸೆಳೆದಿತ್ತು. ಹೀಗಾಗಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಂಡಿದೆ.

  • ಯುವರತ್ನಕ್ಕೆ ಮಿಲ್ಕಿ ಬ್ಯೂಟಿಯ ಹೊಳಪು ಸಿಗೋ ಮುನ್ಸೂಚನೆ!

    ಯುವರತ್ನಕ್ಕೆ ಮಿಲ್ಕಿ ಬ್ಯೂಟಿಯ ಹೊಳಪು ಸಿಗೋ ಮುನ್ಸೂಚನೆ!

    ಬೆಂಗಳೂರು: ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ತಮನ್ನಾ ಮಿಂಚಲಾರಂಭಿಸಿದ ಘಳಿಗೆಯಿಂದಲೇ ಅವರು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾತೂ ಕೇಳಿ ಬರಲಾರಂಭಿಸಿತ್ತು. ಇದರ ಸುತ್ತ ಹರಡಿಕೊಂಡಿದ್ದ ರೂಮರುಗಳೂ ಸಾಕಷ್ಟಿವೆ. ಆದರೆ ಅದೇಕೋ ಈವರೆಗೂ ಅದಕ್ಕೆ ಕಾಲ ಮಾತ್ರ ಕೂಡಿ ಬಂದಿರಲಿಲ್ಲ. ಆದರೀಗ ಆ ಕಾಲ ಸನ್ನಿಹಿತವಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

    ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಎರಡನೇ ಬಾರಿ ಯುವರತ್ನ ಚಿತ್ರದ ಮೂಲಕ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಈ ಟೈಟಲ್ಲು ಅನಾವರಣಗೊಂಡಿತ್ತು. ಆದರೆ ಆ ಕ್ಷಣದಿಂದಲೇ ಈ ಚಿತ್ರಕ್ಕೆ ಯಾರು ನಾಯಕಿಯಾಗಲಿದ್ದಾರೆಂಬ ಬಗ್ಗೆಯೂ ಕುತೂಹಲವಿತ್ತು. ಇದೀಗ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಲಿದ್ದಾರೆಂಬ ರೂಮರ್ ಹರಡಿಕೊಂಡಿದೆ.

    ತಮನ್ನಾ ಈ ಹಿಂದೆ ನಿಖಿಲ್ ಕುಮಾರ್ ನಟನೆಯ ಜಾಗ್ವಾರ್ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರು. ಪುನೀತ್ ರಾಜ್ ಕುಮಾರ್ ಅವರ ಜೊತೆ ಜಾಹೀರಾತಿನಲ್ಲಿಯೂ ನಟಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್ ಚಿತ್ರದಲ್ಲಿನ ವಿಶೇಷ ಹಾಡೊಂದರಲ್ಲಿಯೂ ತಮನ್ನಾ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿಯೇ ಅವರು ತಾನು ಕನ್ನಡ ಚಿತ್ರದಲ್ಲಿ ನಟಿಸಲು ತಯಾರಿರೋದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಪುನೀತ್ ನಟನೆಯ ಯುವರತ್ನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews