Tag: ಸಂತೆ

  • ಕುರಿ, ಮೇಕೆ ಸಂತೆ ನಡೆಸದಂತೆ ಆದೇಶದ ಮೇರೆಗೆ ತಡೆ – ಪೊಲೀಸರ ಮೇಲೆ ಹಲ್ಲೆ

    ಕುರಿ, ಮೇಕೆ ಸಂತೆ ನಡೆಸದಂತೆ ಆದೇಶದ ಮೇರೆಗೆ ತಡೆ – ಪೊಲೀಸರ ಮೇಲೆ ಹಲ್ಲೆ

    ತುಮಕೂರು: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಕ್ರಾಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ನಾಗರಾಜು ಮೇಲೆ ಏಕಾಏಕಿ 6 ಜನ ಆರೋಪಿಗಳು ಹಲ್ಲೆ ಮತ್ತು ಪೊಲೀಸ್ (Police) ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

    ಅಕ್ಕಿರಾಂಪುರ ಕುರಿ, ಮೇಕೆ ಸಂತೆಯು (Market) ಜಿಲ್ಲಾಧಿಕಾರಿಗಳ (DC) ಆದೇಶದ ಮೇರೆಗೆ ಶನಿವಾರದ ಸಂತೆಯನ್ನು ನಡೆಸದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿತ್ತು. ಅದರೆ ಎಂದಿನಂತೆ ಕುರಿ ಮೇಕೆ ವ್ಯಾಪಾರಸ್ಥರು ಬೊಲೆರೋ ವಾಹನದಲ್ಲಿ ಕುರಿ, ಮೇಕೆಗಳನ್ನು ಸಂತೆ ವ್ಯಾಪಾರಕ್ಕೆ ವಾಹನದಲ್ಲಿ ತುಂಬಿಕೊಂಡು ಅರಸಾಪುರ ಗ್ರಾಮದ ಕಡೆಯಿಂದ ಬೈಚಾಪುರ ಕಡೆಗೆ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ವಾಪಸ್ ಕಳುಹಿಸಲು ಮುಂದಾದಾಗ ಏಕಾಏಕಿ 6 ಜನ ಆರೋಪಿಗಳು ಮುಖ್ಯಪೇದೆ ನಾಗರಾಜುರವರ ಮೇಲೆ ಹಲ್ಲೆಗೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕೊನೆಗೂ ದರ ಇಳಿಸಿದ ಓಲಾ – ಕಿ.ಮೀಗೆ ಈಗ 35 ರಿಂದ 45 ರೂ.!

    ಆರೋಪಿಗಳು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರು ಅರಸಾಪುರ ಅಗ್ರಹಾರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಾದ ಚನ್ನಪ್ಪ (54), ನರಸಿಂಹರಾಜು (28), ನವೀನ್ ಕುಮಾರ್ (28), ಲಕ್ಷ್ಮೀ ಪತಿ (26), ನಾಗೇಶ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಎ1 ಆರೋಪಿ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಪಟಾಕಿ ತಂದ ಆಪತ್ತು – ಮಕ್ಕಳ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ, 78 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕುರಿ ವ್ಯಾಪಾರಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು

    ಕುರಿ ವ್ಯಾಪಾರಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು

    ಕೋಲಾರ:  ಬೊಲೆರೊ, ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊದಲ್ಲಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ   ಘಟನೆ ಕೋಲಾರದ ಮಾಲೂರು ತಾಲ್ಲೂಕಿನ ಹುಳದೇನಹಳ್ಳಿಯಲ್ಲಿ ನಡೆದಿದೆ.  

    ಹನುಮಂತು(45), ಭುವನ್(12) ಮೃತರಾಗಿದ್ದಾರೆ. ಇವರು ಚಿಕ್ಕಬಳ್ಳಾಪುರ ಮೂಲದವರಗಿದ್ದಾರೆ. 14 ವರ್ಷದ ಮತ್ತೊಬ್ಬ ಮಗ ಸೇರಿ 3 ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಎರಡು ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

    ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ಬಳಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತೊರಹಳ್ಳಿಯ ಮಾವನ ಮನೆಗೆ ಬಂದು ಬೆಳಗ್ಗೆ ಬಂಗಾರಪೇಟೆ ಶುಕ್ರವಾರದ ಸಂತೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಮಗ ಹಾಗೂ ಜೊತೆಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ. ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೃಷ್ಣಾ ಪ್ರವಾಹಕ್ಕೆ ರೈತರು ತತ್ತರ- ಲಕ್ಷಾಂತರ ರೂ. ಬೆಳೆ ಹಾನಿ

  • ಸಂತೆಗಳ ವ್ಯಾಪಾರಿಗಳಿಂದಲೇ  ಕೋವಿಡ್ ಸೇಲ್

    ಸಂತೆಗಳ ವ್ಯಾಪಾರಿಗಳಿಂದಲೇ ಕೋವಿಡ್ ಸೇಲ್

    ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸುನಾಮಿ ತಾಂಡವಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಹ ಕಳೆದ ಒಂದು ವಾರದಿಂದ ಶತಕದ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಿದ್ದರೂ ಸಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾಗೆ ಡೋಂಟ್ ಕೇರ್ ಎನ್ನುತ್ತಿದ್ದು, ವ್ಯಾಪಾರಿಗಳು ಮಾಸ್ಕ್ ಧರಿಸದೆ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.

    ವ್ಯಾಪಾರಿಗಳು ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣು ತರಕಾರಿಗಳ ಜೊತೆಗೆ ಕೊರೊನಾ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜಿಲ್ಲೆಯಲ್ಲಿ ನಡೆಯುವ ಮಡಿಕೇರಿ, ಕುಶಾಲನಗರ ಮತ್ತು ಸುಂಟಿಕೊಪ್ಪದ ಪ್ರಮುಖ ಮೂರು ಸಂತೆಗಳಲ್ಲಿ ಈ ವ್ಯಾಪಾರಿಗಳು ಇರುತ್ತಾರೆ. ಆದರೆ ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಸಂತೆಗಳಿಗೆ ಬರುವ ನೂರಾರು ಗ್ರಾಹಕರಿಗೆ ಹಣ್ಣು, ತರಕಾರಿ ಮತ್ತು ದಿನಸಿ ವಸ್ತುಗಳ ಜೊತೆಗೆ ವ್ಯಾಪಾರಿಗಳು ಕೊರೊನಾ ವೈರಸ್ ನ್ನೂ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

    ವ್ಯಾಪಾರಿಗಳು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿರುವುದು ನಮಗೂ ಆತಂಕವಿದೆ ಎಂದು ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಸಂತೆಗಳತ್ತ ತಿರುಗಿ ನೋಡುತ್ತಿಲ್ಲ.

  • ಕೊರೊನಾ ರೂಲ್ಸ್ ಗ್ರಾಮೀಣ ಪ್ರದೇಶದಲ್ಲಿ ಮಾಯ

    ಕೊರೊನಾ ರೂಲ್ಸ್ ಗ್ರಾಮೀಣ ಪ್ರದೇಶದಲ್ಲಿ ಮಾಯ

    ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಸ್ಫೋಟಗೊಳ್ಳುತ್ತಿದೆ. ಆದರೆ ಜನರಿಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪ್ರತಿನಿತ್ಯ ಕೋವಿಡ್ ಪ್ರಕರಣಗಳು ಅರ್ಧ ಶತಕ ದಾಟುತ್ತಿವೆ. ಈ ಹಿನ್ನೆಲೆ ನಗರದ ನಿವಾಸಿಗಳು ಸ್ವಲ್ಪ ಎಚ್ಚೆತ್ತುಕೊಂಡು ನಗರದ ಪ್ರದೇಶಗಳಿಗೆ ಬರುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ. ಅದರೆ ಗ್ರಾಮೀಣ ಭಾಗದ ಜನರು ಮಾತ್ರ ಎಲ್ಲಾ ಮರೆತು. ಎಂದಿನಂತೆ ಓಡಾಟ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೆ ಸಂತೆಗಳಲ್ಲಿ ಮಾತ್ರ ಜನರು ಜಾತ್ರೆಯಲ್ಲಿ ಸೇರುವಂತೆ ಸೇರುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ಜನಜಂಗುಳಿಯೇ ಸೇರಿತ್ತು. ಆದರೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸಿದ್ದವರು ಸರಿಯಾಗಿ ಧರಿಸಿರಲಿಲ್ಲ. ಸಂತೆಯಲ್ಲಿ ಕೇವಲ ಗ್ರಾಹಕರಷ್ಟೇ ಅಲ್ಲ, ವ್ಯಾಪಾರಿಗಳು ಕೂಡ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ. ಯಾವುದಕ್ಕೂ ಕೇರ್ ಜನರು ಮುಗಿಬಿದ್ದು ಸಂತೆ ವ್ಯಾಪಾರದಲ್ಲಿ ತೊಡಗಿದ್ದರು.

    ಇಷ್ಟೊಂದು ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಪಂಚಾಯಿತಿ ಪಿಡಿಓ ಆಗಲಿ, ಸುಂಟಿಕೋಪ್ಪದ ಪೊಲೀಸರಾಗಲೀ ಯಾರೊಬ್ಬರೂ ಅಲ್ಲಿ ಸುಳಿದಾಡುತ್ತಿಲ್ಲ. ಜಿಲ್ಲಾಡಳಿತ ಮಾತ್ರ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಯಿಗೊಂಡಿದ್ದೇವೆ ಎನ್ನುತ್ತಿರುವಾಗ ಗ್ರಾಮೀಣ ಭಾಗದಲ್ಲೇ ಈ ರೀತಿಯಲ್ಲಿ ಪಂಚಾಯತಿಯ ಅಧಿಕಾರಿಗಳು ದಂಡ ಹಾಕುವುದನ್ನು ಬಿಟ್ಟಿರುವುದರಿಂದ ಜನರಿ ಮೈಮರೆತು ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲೇ ಮುಂದಿನ ದಿನಗಳಲ್ಲಿ ಕೊರೊನಾ ಸ್ಫೋಟ ಅಗುತ್ತೆ ಎನ್ನುವುದು ಸಾರ್ವಜನಿಕರ ಅತಂಕಕ್ಕೆ ಕಾರಣವಾಗಿದೆ.

  • ಯುಗಾದಿ ಹಬ್ಬಕ್ಕೆ ಕುರಿ, ಮೇಕೆ ವ್ಯಾಪಾರ ಜೋರು – ಕೊರೊನಾ ಮರೆತ ಜನ

    ಯುಗಾದಿ ಹಬ್ಬಕ್ಕೆ ಕುರಿ, ಮೇಕೆ ವ್ಯಾಪಾರ ಜೋರು – ಕೊರೊನಾ ಮರೆತ ಜನ

    ನೆಲಮಂಗಲ: ಯುಗಾದಿ ಹಬ್ಬ ಹತ್ತಿರವಾಗುತ್ತಿದ್ದಂತೆ ಹಬ್ಬದ ನೆಪದಲ್ಲಿ ಮಹಾಮಾರಿ ಕೊರೊನವನ್ನು ಜನ ಮರೆತ್ತಿದ್ದಾರೆ. ನಗರದ ವಾರದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರು ಕೊರೊನಾ ಎರಡನೇ ಅಲೆ ಮೆರೆತು ಬಿಂದಾಸ್ ವ್ಯಾಪಾರ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುರಿ, ಮೇಕೆ ಸಂತೆಯಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಇಲ್ಲದೆ ಜನರು ತಮ್ಮ ತಮ್ಮ ವ್ಯಾಪಾರದಲ್ಲಿ ತೊಡಗಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಕೊರೊನಾ ಭೀತಿ ನಡುವೆಯು ರಸ್ತೆಯಲ್ಲಿ ಮತ್ತು ವಾರದ ಸಂತೆಯಲ್ಲಿ ಜನಜಂಗುಳಿ ಮಾತ್ರ ಅಪಾರ ಪ್ರಮಾಣದಲ್ಲಿ ಕಂಡುಬಂದಿದೆ.

    ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರ ಮೇಲೆ ನಿಯಂತ್ರಣ ಹೇರಲು ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಸುಳಿವೇ ಇಲ್ಲದಂತಾಗಿದೆ. ಇತ್ತ ನೆಲಮಂಗಲ ತಾಲೂಕಿನಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ.

    ವಾರದ ಸಂತೆ ನಡೆಸಲು ಸೂಕ್ತ ವ್ಯವಸ್ಥೆಯಿಲ್ಲದೆ ರೈತರ ಪರದಾಟದ ಜೊತೆ ಸಾರ್ವಜನಿಕರು ಕೊರೊನಾ ಮರೆತ್ತಿದ್ದಾರೆ. ಜನರನ್ನು ನಿಯಂತ್ರಿಸದ ನಗರಸಭೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.

  • ಸಂತೆ ವ್ಯಾಪಾರಿಗಳಿಗೆ ಪೊಲೀಸರಿಂದ ಲಾಠಿ ಏಟು

    ಸಂತೆ ವ್ಯಾಪಾರಿಗಳಿಗೆ ಪೊಲೀಸರಿಂದ ಲಾಠಿ ಏಟು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಸಂತೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಸೋಮವಾರಪೇಟೆಯಲ್ಲಿ ಇಂದು ವ್ಯಾಪಾರಿಗಳು ಸಂತೆಯಲ್ಲಿ ಅಂಗಡಿ ಹಾಕಿದ್ದರು. ವಿಷಯ ತಿಳಿದ ಪೊಲೀಸರು ಅಂಗಡಿಗಳನ್ನು ತೆರವು ಮಾಡುವಂತೆ ಖಡಕ್ಕಾಗಿ ಹೇಳಿದರೂ, ಕ್ಯಾರೆ ಎನ್ನಲಿಲ್ಲ. ಆಗ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಎಷ್ಟೇ ಎಚ್ಚರಿಕೆ ನೀಡಿದರೂ ಕೇಳದ ಹಿನ್ನೆಲೆ ಪೊಲೀಸರಿಗೆ ಬೇರೆ ದಾರಿಯಿಲ್ಲದೆ ಲಾಠಿ ರುಚಿ ತೋರಿಸಿದರು. ಎಷ್ಟೇ ಹೇಳಿದರೂ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಲೇ ಇದ್ದರು. ಇದರಿಂದ ಬೇಸತ್ತ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಆಗ ವ್ಯಾಪಾರಸ್ಥರು ಅಂಗಡಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಟ್ಯ್ರಾಕ್ಟರ್ ಮೂಲಕ ಹಣ್ಣು ತರಕಾರಿಗಳನ್ನು ತುಂಬಿಕೊಂಡು ಹೋಗಲು ಮುಂದಾದರು. ಇದರಿಂದ ಎಚ್ಚೆತ್ತ ವ್ಯಾಪಾರಿಗಳು, ಅಂಗಡಿಗಳ ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದ್ದಾರೆ.

    ಸಂತೆ ನಡೆಸದಂತೆ ನಿಷೇಧಿಸಿದ್ದರೂ ಅದನ್ನು ಉಲ್ಲಂಘಿಸಿ ಸಂತೆಗೆ ಬಂದಿದ್ದ ವ್ಯಾಪಾರಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಬೆಳಗಾವಿ(ಚಿಕ್ಕೋಡಿ): ಕೊರೊನಾ ವೈರಸ್ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಗೂ ಕೊರೊನಾ ಬಿಸಿ ತಟ್ಟಿದೆ.

    ಚಿಂಚಲಿಯ ಮಾಯಕ್ಕಾದೇವಿಯ ದರ್ಶನವನ್ನು ಇಂದಿನಿಂದ ಮಾರ್ಚ್ 31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು ಬಂದ್ ಮಾಡಿದೆ. ಮಾಯಕ್ಕಾದೇವಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾದ್ಯ ದೇವತೆಯಾಗಿದ್ದು, ದೇವಿಯ ದರ್ಶನ ಪಡೆಯಲು ದಿನನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತಿದ್ದರು.

    ಕೊರೊನಾ ಭೀತಿಯಿಂದ ಮಾರ್ಚ 31ರವರೆಗೆ ಮಾಯಕ್ಕಾದೇವಿ ದರ್ಶನಕ್ಕೆ ಬಾರದಂತೆ ಭಕ್ತರಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ. ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಇಂದು ದರ್ಶನ ಬಂದ್ ಮಾಡಿದ ಹಿನ್ನೆಲೆ ಭಕ್ತರಿಲ್ಲದೆ ಬಣಗುಡುತ್ತಿದೆ.

    ಇತ್ತ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರದ ಸಂತೆಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ರದ್ದು ಮಾಡಿದ್ದಾರೆ. ಸಂತೆ ನಡೆಸಬಾರದೆಂಬ ಆದೇಶವನ್ನು ಲೆಕ್ಕಸದೆ ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸಂತೆಯನ್ನ ಬಂದ್ ಮಾಡಿಸಿದ್ದಾರೆ. ಜನ ಸಂತೆಗೆ ಬರುತ್ತಾರೆ ಎಂದು ವ್ಯಾಪಾರಸ್ಥರು ತರಕಾರಿ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಮಾರಾಟಕ್ಕೆ ತಂದಿದ್ದರು. ಆದರೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸಂತೆಯನ್ನ ತೆರವುಗೊಳಿಸಲಾಯಿತು.

  • ಕುರಿ ಸಂತೆಯಲ್ಲಿ ಕಲ್ಲು ತೂರಾಟ-ರಸ್ತೆ ಬಿಡಿ ಎಂದಿದ್ದಕ್ಕೆ ಹಲ್ಲೆ

    ಕುರಿ ಸಂತೆಯಲ್ಲಿ ಕಲ್ಲು ತೂರಾಟ-ರಸ್ತೆ ಬಿಡಿ ಎಂದಿದ್ದಕ್ಕೆ ಹಲ್ಲೆ

    ಬಾಗಲಕೋಟೆ: ಕುರಿ ಸಂತೆಯಲ್ಲಿ ರಸ್ತೆ ಬಿಡಿ ಎಂದು ಕೇಳಿದ್ದಕ್ಕೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದಲ್ಲಿ ನಡೆದಿದೆ.

    ಶನಿವಾರ ಈ ಗಲಾಟೆ ನಡೆದಿದ್ದು, ಮಹಾಂತೇಶ್ ಬಾರಡ್ಡಿ ಎಂಬವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ಸದ್ಯ ಮಹಾಂತೇಶ್, ಬಾಗಲಕೋಟೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಂತೇಶ್ ಜೊತೆಯಲ್ಲಿದ್ದ ಸಂಗಪ್ಪ ಹೂಗಾರ, ಸಂಜೀವ್ ಬೇವೂರ ಎಂಬವರಿಗೂ ಸಹ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

    ಪ್ರತಿ ಶನಿವಾರ ಅಮಿನಗಡ ಪಟ್ಟಣದಲ್ಲಿ ಕುರಿ ಸಂತೆ ನಡೆಯುತ್ತದೆ ಅದಕ್ಕಾಗಿ ನಿಗದಿತ ಜಾಗವಿದ್ದರೂ, ಮುಖ್ಯರಸ್ತೆಯಲ್ಲೇ ಕುರಿ ವಹಿವಾಟು ನಡೆಸಲಾಗುತ್ತದೆ. ನಿನ್ನೆಯೂ ಹೀಗೆ ರಸ್ತೆಯ ಮೇಲೆ ಕುರಿ ವ್ಯಾಪಾರ ಜೋರಾಗಿತ್ತು, ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಇದೇ ವೇಳೆ ಅಲ್ಲಿಗೆ ಕಾರ್ ನೊಂದಿಗೆ ಆಗಮಿಸಿದ್ದ ಮಹಾಂತೇಶ್, ರಸ್ತೆ ಬಿಡಿ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕುರಿ ವಹಿವಾಟು ನಡೆಸುವವರ ಪೈಕಿ ಕೆಲ ದುಷ್ಕರ್ಮಿಗಳು ಮಹಾಂತೇಶ್ ಸೇರಿದಂತೆ ಮೂವರ ಹಲ್ಲೆ ನಡೆಸಿದ್ದಾರೆ.

    ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಮಹಾಂತೇಶ್ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿ ತಲುಪುವಂತಾಗಿದೆ. ನೆಲಕ್ಕೆ ಬೀಳಿಸಿ 8-10 ಜನ ಸೇರಿ ಹೊಡೆಯುವ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯ ಅದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದಲ್ಲದೇ ಅಲ್ಲಿದ್ದ ಮೂರ್ನಾಲ್ಕು ವಾಹನಗಳ ಗಾಜುಗಳ ಮೇಲೆ ಈ ದುಷ್ಕರ್ಮಿಗಳ ಗುಂಪು ಕಲ್ಲು ತೂರಿದ್ದಾರೆ. ಅಮಿನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ಬಾರಿ ವೈರಲ್ ಆಗಿದೆ. ವಿಷಯ ತಿಳಿದ ಡಿವೈಎಸ್.ಪಿ ನಂದರಡ್ಡಿ ದೂರು ದಾಖಲಿಸಿಕೊಂಡು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೊವ ಭರವಸೆ ನೀಡಿದ್ದಾರೆ.

  • ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆಯಲ್ಲಿ ಮಳೆಗಾಗಿ ದೇವಸ್ಥಾನದ ಮುಂಭಾಗ ಸಂತೆ

    ದಾವಣಗೆರೆ: ಮಳೆಗಾಗಿ ದೇವರ ಮೊರೆ ಹೋಗುವುದು ಹಾಗೂ ಹೋಮ ಹವನಗಳನ್ನು ಮಾಡುವುದನ್ನು ಕೇಳಿದ್ದೇವೆ ಆದರೆ, ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ವಿಶಿಷ್ಟವಾಗಿ ದೇವರ ಸಂತೆಯನ್ನು ಮಾಡುವ ಮೂಲಕ ಉತ್ತಮ ಮಳೆಯಾಗಲೆಂದು ಬೇಡಿಕೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಗುತ್ತಿದೆ. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಸಂತೆ ನಡೆಸಲಾಯಿತು.

    ಮೂರು ವಾರ ದೇವಸ್ಥಾನದ ಮುಂಭಾಗ ಸಂತೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದರೆ ಫಸಲು ಕೈ ಸೇರುತ್ತದೆ. ಹೀಗಾಗಿ ಮಳೆ ಕರುಣಿಸುವಂತೆ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡುವ ಮೂಲಕ ಬೇಡಿಕೊಳ್ಳುತ್ತಿದ್ದಾರೆ.

    ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಈ ವಾರದಿಂದ ಮೂರು ವಾರಗಳ ಕಾಲ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗ ಸಂತೆ ನಡೆಸಿದರೆ, ಮಳೆಯಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಇರುವ ನಂಬಿಕೆ. ಹೀಗಾಗಿ ಜನ ಸಂತೆಯನ್ನೂ ಮಾಡಿ ನೋಡಿಯೇ ಬಿಡೋಣ ಮಳೆ ಬರಬಹುದು ಎಂದು ನಿರ್ಧರಿಸಿದ್ದಾರೆ.