Tag: ಸಂತಾಕ್ಲಾಸ್

  • ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾಕ್ಲಾಸ್ ಡ್ರೆಸ್ ಧರಿಸಿ ಅನಾಥ ಮಕ್ಕಳೊಡನೆ ಮಗುವಾಗಿ ಸಂಭ್ರವಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಸಂತಾಕ್ಲಾಸ್ ವೇಷ ಧರಿಸಿ ಮುಂಬೈನಲ್ಲಿರುವ ಆಶ್ರಯ ಚೈಲ್ಡ್  ಕೇರ್‌ಲ್ಲಿ  ಅನಾಥ ಮಕ್ಕಳೊಂದಿಗೆ ಈ ಬಾರಿ ಕ್ರಿಸ್ಮಸ್ ಆಚರಿಸಿದ್ದಾರೆ.

    ಮಕ್ಕಳೊಂದಿಗೆ ಮಗುವಾದ ಸಚಿನ್ ಮಕ್ಕಳ ಆಸೆಯಂತೆ ಅವರೊಂದಿಗೆ ಕ್ರಿಕೆಟ್ ಆಟವಾಡಿ ಖುಷಿಪಟ್ಟರು. ಅಲ್ಲದೆ ಮಕ್ಕಳ ಜೊತೆ ತಾವು ಮಕ್ಕಳಾಗಿ ಸಂತೋಷವಾಗಿ ಎಲ್ಲರೊಡನೆ ಬೆರೆತರು. ಬಳಿಕ ಎಲ್ಲಾ ಮಕ್ಕಳಿಗೂ ಉಡುಗೊರೆಯನ್ನು ಕೊಟ್ಟು ಸಂಭ್ರಮಿಸಿದ್ದಾರೆ.

    ಮಕ್ಕಳೊಡನೆ ಕಳೆದ ಕ್ಷಣವನ್ನು, ಅವರ ಸಂಭ್ರಮದ ಕ್ರಿಸ್ಮಸ್ ಆಚರಣೆಯ ವೀಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿನ್ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಎಲ್ಲರಿಗೂ ಮೇರಿ ಕ್ರಿಸ್ಮಸ್. ಆಶ್ರಯ ಚೈಲ್ಡ್ ಕೇರ್‌ ಮಕ್ಕಳೊಂದಿಗೆ ಕಳೆದ ಸಮಯ ತುಂಬಾ ಅದ್ಭುತವಾಗಿತ್ತು. ಮಕ್ಕಳ ಮುಗ್ಧ ಮುಖಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv