Tag: ಸಂತಾ

  • ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್‍ಗೆ ಸಾಂತಾ ಕ್ಲಾಸ್‌ ಗಿಫ್ಟ್ ನೀಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.

    ಪ್ರತಿ ಬಾರಿ ಕ್ರಿಸ್‍ಮಸ್ ಹಬ್ಬ ಬಂದಾಗ ಮಕ್ಕಳು ಈ ಬಾರಿ ಸಂತಾ ನಮಗೆ ಏನು ಗಿಫ್ಟ್ ಕೊಡುತ್ತಾರೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಎಕ್ಸ್‌ಪೆಕ್ಟ್ ಕೂಡ ಮಾಡಿರದ ವಿಹಾನ್‍ಗೆ ಸಾಂತಾ ಕ್ಲಾಸ್‌ ಆಗಮಿಸಿ ಗಿಫ್ಟ್ ಮೇಲೆ ಗಿಫ್ಟ್ ನೀಡಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಈ ವೀಡಿಯೋವನ್ನು ಗಣೇಶ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

    ವೀಡಿಯೋದಲ್ಲಿ ಗಣೇಶ್ ಅವರು ಸೆಲ್ಫಿ ವೀಡಿಯೋ ಮಾಡುತ್ತಿದ್ದ ವೇಳೆ ಬಂದು ಅಪ್ಪನನ್ನು ಬಿಗಿದಪ್ಪಿಕೊಂಡ ವಿಹಾನ್ ಬೆನ್ನ ಹಿಂದಿನಿಂದ ಸಾಂತಾ ಕ್ಲಾಸ್‌ ಆಗಮಿಸುತ್ತಾರೆ. ಇದನ್ನು ಕಂಡು ವಿಹಾನ್ ಫುಲ್ ಶಾಕ್ ಆಗುತ್ತಾನೆ. ನಂತರ ಸಾಂತಾ ಕ್ಲಾಸ್‌ ವಿಹಾನ್‍ಗೆ ಹ್ಯಾಪಿ ಕ್ರಿಸ್‍ಮಸ್ ಎಂದು ವಿಶ್ ಮಾಡಿ, ಪಕ್ಷಿಯ ಪಂಜರವನ್ನು ಗಿಫ್ಟ್ ಆಗಿ ನೀಡಿ, ವಿಹಾನ್ ಕಣ್ಣನ್ನು ಮುಚ್ಚಿಸಿ, ಲಾಲಿಪಾಪ್ ನೀಡಿ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

     

    View this post on Instagram

     

    A post shared by Ganesh (@goldenstar_ganesh)

    ಗಿಫ್ಟ್ ಸ್ವೀಕರಿಸಿದ ವಿಹಾನ್ ಸಂತಾಗೆ ಧನ್ಯವಾದ ತಿಳಿಸಿ ಗಿಫ್ಟ್ ಇಷ್ಟ ಆಗಿದ್ದು, ಫುಲ್ ಖುಷ್ ಆಗಿರುವುದಾಗಿ ಗಣೇಶ್‍ಗೆ ತಿಳಿಸಿದ್ದಾನೆ. ಈ ಎಲ್ಲಾ ದೃಶ್ಯವನ್ನು ಹಿಂದಿನಿಂದ ಗಮನಿಸುತ್ತಿದ್ದ ಗಣೇಶ್ ಪುತ್ರಿ ಚಾರಿತ್ರ್ಯ ಕೂಡ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಒಟ್ಟಾರೆ ಶನಿವಾರ ಕ್ರಿಸ್‍ಮಸ್ ಹಬ್ಬವನ್ನು ರಾಧಿಕಾ ಪಂಡಿತ್, ಮೇಘನಾ ಸರ್ಜಾ ಸೇರಿದಂತೆ ಹಲವಾರು ತಾರೆಗಳು ತಮ್ಮ ಮಕ್ಕಳೊಂದಿಗೆ ಆಚರಿಸಿದ್ದು, ಕ್ರಿಸ್‍ಮಸ್ ಸಡಗರ ಚಂದನವನದ ತಾರೆಯರ ಮನೆಯಲ್ಲೂ ಮನೆಮಾಡಿತ್ತು ಎಂದರೆ ತಪ್ಪಾಗಲಾರದು.