Tag: ಸಂತನು

  • ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶೃತಿ ಹಾಸನ್

    ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶೃತಿ ಹಾಸನ್

    ಮುಂಬೈ: ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

    ಸದಾ ಡೇಟಿಂಗ್, ಔಟಿಂಗ್, ಶಾಪಿಂಗ್, ಪಾರ್ಟಿ ಎಂದು ಸುತ್ತಾಡುತ್ತಾ ಬಾಯ್ ಫ್ರೆಂಡ್ ಸಂತನು ಜೊತೆ ಸಖತ್ ಎಂಜಾಯ್ ಮಾಡುತ್ತಿರುವ ಶೃತಿ ಹಾಸನ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್‍ಆರ್ ಪಾಟೀಲ್

    shruthi hassan

    ಹೌದು ಶೃತಿ ಹಾಸನ್ ಹಾಗೂ ಸಂತನು ಮುಂಬೈನ ಬಾಸ್ತಿನದ ಬಳಿ ಬಾಂದ್ರದಲ್ಲಿ ಡಿನ್ನರ್‌ಗೆ ಬಂದಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಶೃತಿ ಹಾಸನ್ ಬ್ಲಾಕ್ ಆ್ಯಂಡ್ ಬ್ಲಾಕ್ ಕಲರ್ ಡ್ರೆಸ್ ತೊಟ್ಟು ಮಿಂಚಿದ್ದರೆ, ಸಂತನು ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದರು. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ

    shruthi hassan

    ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು ಸಂತುನು ಜೊತೆ ಬಂದ ಶೃತಿ ಹಾಸನ್ ರೆಸ್ಟೋರೆಂಟ್ ಮುಂಭಾಗ ಕ್ಯಾಮೆರಾಗೆ ತಮ್ಮ ಬಾಯ್ ಫ್ರೆಂಡ್ ಜೊತೆ ಪೋಸ್ ನೀಡಿದ್ದಾರೆ. ಅಲ್ಲದೇ ಕ್ಯಾಮೆರಾದತ್ತ ಕೈ ಬೀಸಿ ಮುಂದೆ ಹೋಗುತ್ತಿದ್ದ ಶೃತಿ ಹಾಸನ್ ಮತ್ತೆ ಸಿಂಗಲ್ ಆಗಿ ನಿಂತು ಸೊಂಟದ ಮೇಲೆ ಕೈ ಇರಿಸಿಕೊಂಡು ಫೋಟೋಗೆ ಪೋಸ್ ನೀಡಿದರು. ಇದನ್ನೂ ಓದಿ:  ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ

    shruthi hassan

    ನಂತರ ಕೈ ಮುಗಿದು ಧನ್ಯವಾದ ತಿಳಿಸಿ ಸಂತನು ಅವರೊಂದಿಗೆ ರೆಸ್ಟೋರೆಂಟ್ ಒಳಗೆ ಹೋದರು. ಸಂತನು ಹಜರಿಕ್ ಒಬ್ಬ ಡೂಡಲ್ ಆರ್ಟಿಸ್ಟ್ ಮತ್ತು ಚಿತ್ರಗಾರ ಆಗಿದ್ದು, ಶೃತಿ ಹಲವು ತಿಂಗಳಿನಿಂದ ಡೇಟಿಂಗ್‍ನಲ್ಲಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಶೃತಿ ಹಾಸನ್ ಈ ವೇಳೆ ಬಾಯ್ ಫ್ರೆಂಡ್ ಸಂತನುಗೆ ಇಟ್ಟಿದ್ದ ಆಲೂಗಡ್ಡೆ ಎಂಬ ನಿಕ್ ನೇಮ್ ಅನ್ನು ರಿವೀಲ್ ಮಾಡಿದ್ದರು.

  • ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್

    ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್

    ಮುಂಬೈ: ಟಾಲಿವುಡ್ ನಟಿ ಶ್ರುತಿ ಹಾಸನ್ ಬಾಯ್‍ಫ್ರೆಂಡ್‍ಗೆ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಿದ್ದಾರೆ. ಸ್ವತಃ ಶ್ರುತಿ ಹಾಸನ್ ಅವರು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಯ್‍ಫ್ರೆಂಡ್ ಜೊತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಅವರು ಶೇರ್ ಮಾಡುತ್ತಾರೆ. ಈಗ ಅವರು ಸಾರ್ವಜನಿಕವಾಗಿ ಕಿಸ್ ಮಾಡಿದ್ದಾರೆ. ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ

    ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್‍ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ. ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್ ಮಾಡುವಾಗ ಮಾಸ್ಕ್ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್‍ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ ಎಂದು ಶ್ರುತಿ ಇತ್ತೀಚೆಗೆ ಹೇಳಿದ್ದರು.

    ಶ್ರುತಿ ಹಾಸನ್ 35ನೇ ವರ್ಷದ ಜನ್ಮದಿನದ ಸಂಭ್ರಮವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಸೆಲೆಬ್ರೆಟ್ ಮಾಡಿದ್ದರು. ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಜೊತೆಗೆ ಫೋಸ್ಟ್‌ನಲ್ಲಿ ಬಾಯ್ ಫ್ರೆಂಡ್ ನಿಕ್ ನೇಮ್ ಅನ್ನು ಶೃತಿ ರಿವೀಲ್ ಮಾಡಿದ್ದರು. ಸಂತನುರನ್ನು ಶೃತಿ ಪ್ರೀತಿಯಿಂದ ಆಲೂಗಡ್ಡೆ ಎಂಬ ನಿಕ್ ನೇಮ್‍ನಿಂದ ಕರೆಯುತ್ತೇನೆ ಎಂದು ಈ ಹಿಂದೆ ತಿಳಿಸಿದ್ದರು.