Tag: ಸಂಜೆ

  • ಕಾಂತಾರ ಕ್ರಾಂತಿ: ರಿಷಬ್ ಜೊತೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಮೆಗಾ ಮಾತುಕತೆ

    ಕಾಂತಾರ ಕ್ರಾಂತಿ: ರಿಷಬ್ ಜೊತೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಮೆಗಾ ಮಾತುಕತೆ

    ದೇಶಾದ್ಯಂತ ಈಗ ಕಾಂತಾರದ್ದೇ (Kantara) ಮಾತು. ಇನ್ನೇನು ಈ ವಾರ ಕಳೆದರೆ ಕನ್ನಡದ ಮತ್ತೊಂದು ಸಿನಿಮಾ 200 ಕೋಟಿ ಕ್ಲಬ್ ಸೇರಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಹೊತ್ತಿನಲ್ಲಿ ಚಿತ್ರದ ಮತ್ತಷ್ಟು ನಿಗೂಢಗಳನ್ನು ಬಿಚ್ಚಿಡುವ ಮೂಲಕ ಕಾಂತಾರ ಕ್ರಾಂತಿಗೆ ಮುಂದಾಗಿದ್ದಾರೆ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್.ಆರ್.ರಂಗನಾಥ್ (HR Ranganath). ರಿಷಬ್ (Rishabh Shetty) ಈವರೆಗೂ ಆಡದೇ ಇರುವಂತಹ ಸಾಕಷ್ಟು ಮಾತುಗಳನ್ನು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

    ಸಂಜೆ 7 (Evening) ಗಂಟೆಗೆ ಪಬ್ಲಿಕ್ ಟಿವಿಯಲ್ಲಿ ‘ಕಾಂತಾರ ಕ್ರಾಂತಿ’  ಮೆಗಾ ಸಂದರ್ಶನ (Interview) ಪ್ರಸಾರವಾಗಲಿದ್ದು, ಸಿನಿಮಾ ಮೇಕಿಂಗ್, ಕಥೆ ಹುಟ್ಟಿಕೊಂಡ ರೀತಿ, ವಿವಾದ ಸೇರಿದಂತೆ ಚಿತ್ರದ ಸಾಕಷ್ಟು ವಿಷಯಗಳನ್ನು ರಿಷಬ್ ಹಂಚಿಕೊಂಡಿದ್ದಾರೆ. ಕೇವಲ ಸಿನಿಮಾ ಬಗ್ಗೆ ಮಾತ್ರವಲ್ಲ, ತಮ್ಮ  ಬದುಕಿನ ಅನೇಕ ಸಂಗತಿಗಳನ್ನೂ ಹೇಳುತ್ತಾ ಹೋಗಿದ್ದಾರೆ ರಿಷಬ್. ರಂಗನಾಥ್ ಅವರು ನಡೆಸಿದ ಸಂದರ್ಶನದಲ್ಲಿ ಇದೇ ಮೊದಲ ಬಾರಿಗೆ ರಿಷಬ್ ಚಿತ್ರ ಬದುಕಿನ ಸಾಕಷ್ಟು ಸಂಗತಿಗಳನ್ನು ನೋಡಬಹುದಾಗಿದೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಈ ಹಿಂದೆ ‘ಕೆಜಿಎಫ್ 2’ ಬಿಡುಗಡೆಯ ಹೊತ್ತಿನಲ್ಲಿ ಯಶ್ ಅವರನ್ನು ಸಂದರ್ಶಿಸಿದ್ದ ಹೆಚ್.ಆರ್. ರಂಗನಾಥ್ ಸಾಕಷ್ಟು ಎಕ್ಸ್ ಕ್ಲೂಸಿವ್ ವಿಷಯಗಳನ್ನು ಹೆಕ್ಕಿ ತಗೆದಿದ್ದರು. ರಿಷಬ್ ಸಂದರ್ಶನದಲ್ಲೂ ಅಂತಹ ಸಾಕಷ್ಟು ಸಂಗತಿಗಳನ್ನು ನೋಡಬಹುದಾಗಿದೆ. ಒಂದು ಗಂಟೆಯ ಈ ಸಂದರ್ಶನ ಇದಾಗಿದ್ದು, ರಿಷಬ್ ಬದುಕಿನ ಹೊಸ ಹೊಸ ವಿಷಯಗಳನ್ನು ಇದು ಹೊತ್ತು ತರಲಿದೆ.

    Live Tv
    [brid partner=56869869 player=32851 video=960834 autoplay=true]