Tag: ಸಂಜು

  • ‘ಸಂಜು’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಪ್ರಜ್ವಲ್

    ‘ಸಂಜು’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಪ್ರಜ್ವಲ್

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಟ್ರೇಲರ್ (Trailer) ಬಿಡುಗಡೆ ಮಾಡಿ ಶುಭ ಕೋರಿದರು. ಹಿರಿಯ ನಿರ್ಮಾಪಕ‌ ಸಾ ರಾ ಗೋವಿಂದು, ಕೆ.ಮಂಜು, ನಿರ್ದೇಶಕ ಎಂ.ಡಿ.ಕೌಶಿಕ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಸಂಜು (Sanju) ನನ್ನ ನಿರ್ದೇಶನದ ಆರನೇ ಚಿತ್ರ. ಈ ಚಿತ್ರಕ್ಕೆ “ಅಗಮ್ಯ ಪಯಣಿಗ” ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ‌. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ ಹಾಗೂ ನಮ್ಮ ಆಹ್ವಾನವನ್ನು ಮನ್ನಿಸಿ ಬಂದಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಯತಿರಾಜ್ ತಿಳಿಸಿದರು.

    ಚಿತ್ರದ ನಾಯಕ ಮನ್ವೀತ್ ಮಾತನಾಡಿ, ದಯವಿಟ್ಟು ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ. ಹೊಸ ತಂಡಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. ನಾನು ಸಾಮಾನ್ಯ ರೈತನ ಮಗ. ನನ್ನ ಮೊದಲ ಚಿತ್ರವನ್ನು ಇಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದರು.

     ನಾಯಕಿಯಾಗಿ ನಟಿಸಿರುವ ರೇಖಾದಾಸ್ ಪುತ್ರಿ ಶ್ರಾವ್ಯ ಮಾತನಾಡುತ್ತಾ, ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸರಸ್ವತಿ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅಂದ ಹಾಗೆ ಎಲ್ಲರಲ್ಲೂ ಒಂದು ಮನವಿ. ನಾನು ಶ್ರಾವ್ಯ ಎಂಬ ಹೆಸರನ್ನು ಸಾತ್ವಿಕ ಎಂದು ಬದಲಿಸಿಕೊಂಡಿದ್ದೇನೆ.‌ ಎಲ್ಲರೂ ನನ್ನ ಹೆಸರನ್ನು ಸಾತ್ವಿಕ ಎಂಬ ಹೆಸರಿನಿಂದಲೇ ಎಂದು ಕರೆಯಬೇಕೆಂದು ವಿನಂತಿಸಿದರು.

    ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಚಿತ್ರದಲ್ಲಿ ನಟಿಸಿರುವ ಸುಂದರಶ್ರೀ, ತೇಜಸ್ವಿನಿ, ಬಲ ರಾಜವಾಡಿ, ಮಹಾಂತೇಶ್, ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • ಶ್ರಾವ್ಯ ನಟನೆಯ ‘ಸಂಜು’ ಸಿನಿಮಾದ ಹಾಡುಗಳು ರಿಲೀಸ್

    ಶ್ರಾವ್ಯ ನಟನೆಯ ‘ಸಂಜು’ ಸಿನಿಮಾದ ಹಾಡುಗಳು ರಿಲೀಸ್

    ಟನಾಗಿ ಈಗ ನಿರ್ದೇಶಕನಾಗಿಯೂ ಜನಪ್ರಿಯರಾಗಿರುವ ಯತಿರಾಜ್ (Yathiraj) ನಿರ್ದೇಶನದ ಸಂಜು (Sanju) ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ನಿರ್ದೇಶಕರಾದ ಯೋಗರಾಜ್ ಭಟ್, ಮಠ ಗುರುಪ್ರಸಾದ್, ಗುರು ದೇಶಪಾಂಡೆ, ರವಿ.ಆರ್.ಗರಣಿ, ಪಿ.ಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಸಂಜು ಚಿತ್ರಕ್ಕೆ ಶುಭ ಕೋರಿದರು. ವಿಜಯ್ ಹರಿತ್ಸ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಸಂಜು ಚಿತ್ರದ ಕುರಿತು ಮಾತನಾಡಿದರು.

    ಸಂಜು ಚಿತ್ರಕ್ಕೆ ಅಗಮ್ಯ ಪಯಣಿಗ ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ.  ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿಗಳಿದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ.  ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ‌. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ, ನನ್ನ ಇಡೀ ತಂಡಕ್ಕೆ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿದ ಸಮಸ್ತ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಯತಿರಾಜ್.

    ಚಿತ್ರದ ನಾಯಕ ಮನ್ವೀತ್ ಮಾತನಾಡುತ್ತಾ, ನಾನು ಯಾವುದೇ ಸಿನಿಮಾ ಅಥವಾ ರಾಜಕೀಯ ಕುಟುಂಬದಿಂದ ಬಂದವನಲ್ಲ. ಸಾಮಾನ್ಯ ರೈತನ ಮಗ. ನನ್ನನ್ನು ಹೀರೋ ಮಾಡುವುದಕ್ಕಾಗಿ ಇಷ್ಟು ದುಡ್ಡು ಹಾಕಿರುವ ನಿರ್ಮಾಪಕರಿಗೆ ನಾನು ಆಬಾರಿ. ನನಗೆ ಮೊದಲು ನಿರ್ಮಾಪಕರು ಸಿಕ್ಕಿದ್ದರು. ಆನಂತರ ನಿರ್ದೇಶಕ ಯತಿರಾಜ್ ಅವರ ಪರಿಚಯವಾಯಿತು.‌ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಪಕರು ಚಿತ್ರವನ್ನು ಆರಂಭಿಸಿದ್ದರು ಎಂದು ನಾಯಕ ಮನ್ವಿತ್ ತಿಳಿಸಿದರು.

    ನಾಯಕಿಯಾಗಿ ನಟಿಸಿರುವ ರೇಖಾದಾಸ್ ಪುತ್ರಿ ಶ್ರಾವ್ಯ (Shravya)’ ಚಿತ್ರದಲ್ಲಿ ಸರಸ್ವತಿ(ಸರಸು)ಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ.  ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನನಗೆ ಯತಿರಾಜ್ ಅವರು ಹೇಳಿದ ಹಾಗೆ ಚಿತ್ರ ಮಾಡಿದ್ದಾರೆ.‌ ಎಲ್ಲರ ಸಹಕಾರದಿಂದ ಸಂಜು ಚಿತ್ರ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ತೆರೆಗೆ ತರುವುದಾಗಿ ನಿರ್ಮಾಪಕ ಸಂತೋಷ್ ಡಿ.ಎಂ ತಿಳಿಸಿದರು.

    ಚಿತ್ರದಲ್ಲಿ ಎರಡು ಹಾಡುಗಳಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್ ಹಾಗೂ ನವೀನ್ ಸಜ್ಜು ಹಾಡಿದ್ದಾರೆ ಎಂದು ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮಾಹಿತಿ ನೀಡಿದರು. ಛಾಯಾಗ್ರಾಹಕ ವಿದ್ಯಾ ನಾಗೇಶ್, ನೃತ್ಯ ನಿರ್ದೇಶಕರಾದ ಮದನ್ – ಹರಿಣಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹಾಗೂ ಚಿತ್ರದಲ್ಲಿ ನಟಿಸಿರುವ ಸಂಗೀತ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗರಾಜನ್ ಕಂಠದಲ್ಲಿ ‘ಸಂಜು’ ಸಾಂಗ್

    ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗರಾಜನ್ ಕಂಠದಲ್ಲಿ ‘ಸಂಜು’ ಸಾಂಗ್

    ತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿಯೂ‌ ಗುರುತಿಸಿಕೊಂಡಿರುವ ಯತಿರಾಜ್ (Yathiraj) ನಿರ್ದೇಶಿಸಿರುವ ಸಂಜು (Sanju) ಚಿತ್ರ ಸಿದ್ದವಾಗಿದೆ. ಪ್ರೀತಿ ಮತ್ತು ಭಾವನೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.‌ ಯತಿರಾಜ್ ಅವರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ.

    ವಿಜಯ್ ಹರಿತ್ಸ ಸಂಗೀತ ನಿರ್ದೇಶಿಸಿರುವ ಎರಡು ಹಾಡುಗಳು ಈ ಚಿತ್ರದಲ್ಲಿದ್ದು, ಎರಡೂ ಹಾಡುಗಳನ್ನು (Song) ಆಕಾಶ್ ಹಾಸನ್ ಬರೆದಿದ್ದಾರೆ. ಡ್ಯುಯೆಟ್ ಹಾಡನ್ನು ಖ್ಯಾತ ಗಾಯಕ ವಾಸುಕಿ ವೈಭವ್ (Vasuki Vaibhav)  ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ (Aishwarya Rangarajan) ಹಾಡಿದ್ದಾರೆ. ಮತ್ತೊಂದು ವಿಭಿನ್ನ ಶೈಲಿಯ ಗೀತೆಯನ್ನು ಹೆಸರಾಂತ ಗಾಯಕ ನವೀನ್ ಸಜ್ಜು(Naveen Sajju)  ಹಾಡಿದ್ದಾರೆ. ಈ ಎರಡು ಹಾಡುಗಳನ್ನು ರೇಣು ಸ್ಟುಡಿಯೋ ಹಾಗೂ ಪಾರೇಕ್ ಸ್ಟುಡಿಯೋದಲ್ಲಿ ಇತ್ತೀಚೆಗೆ ರೆಕಾರ್ಡ್ ಮಾಡಿಕೊಳ್ಳಲಾಗಿದೆ.‌ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂದು ಗಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು

    ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಮನ್ವಿತ್ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಶ್ರಾವ್ಯ ನಾಯಕಿಯಾಗಿದ್ದಾರೆ. ಯತಿರಾಜ್, ಸುಂದರಶ್ರೀ, ಬಾಲ ರಾಜ್ವಾಡಿ, ಮಹಂತೇಶ್, ಅಪೂರ್ವ, ಚಂದ್ರಪ್ರಭ, ಪ್ರಕಾಶ್ ಶೆಣೈ, ವಿನೋದ್, ಬೌ ಬೌ ಜಯರಾಂ, ಬೇಬಿಶ್ರೀ, ರಾಜೇಗೌಡ, ನಾಗರತ್ನ, ಚೇತನ್, ಕುರಿ ರಂಗ, ಕಾತ್ಯಾಯಿನಿ‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಮಡಿಕೇರಿಯ ಮೂರ್ನಾಡು ಎಂಬ ಅದ್ಭುತ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಅಲ್ಲಿ ಬಸ್ ನಿಲ್ದಾಣದ ಸೆಟ್ ಸಹ ಹಾಕಲಾಗಿತ್ತು. ಈ ಬಸ್ ನಿಲ್ದಾಣ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸಿದೆ. ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಯತಿರಾಜ್ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಂಜು’ ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ಶ್ರಾವ್ಯ

    ‘ಸಂಜು’ ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ಶ್ರಾವ್ಯ

    ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ. ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ- ಹೀಗೆಂದವರು ನಿರ್ದೇಶಕ ಯತಿರಾಜ್ . ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿ ಹೆಚ್ಚು ಚಾಲ್ತಿಯಲ್ಲಿರುವ ಅವರು ತಮ್ಮ ಹೊಸ ಚಿತ್ರ ‘ಸಂಜು’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ ‘ಸಂಜು’ ಅಗಮ್ಯ ಪಯಣಿಗ.. ಇದೇ ತಿಂಗಳ 14 ರಿಂದ ಚಿತ್ರೀಕರಣ ಆರಂಭಿಸಲಿದೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ . ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪಿನ ಸೆಟ್ ಕೂಡ ಹಾಕಲಾಗುತ್ತಿದೆ ಎಂದು ಚಿತ್ರದ ಕುರಿತು ಯತಿರಾಜ್ ಹೇಳಿದರು.

    ಇನ್ನೂ ಚಿತ್ರದ ನಾಯಕನಾಗಿ ಮನ್ವೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಅ್ಯಂಗರ್’ ಅನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ ‘ಸಂಜು’ ಎರಡನೇ ಚಿತ್ರ. ರಂಗಭೂಮಿಯ ನಂಟಿದ್ದರೂ ಪಾತ್ರದ ಪರಕಾಯ ಪ್ರವೇಶ ಪಡೆಯಲು ನಿರ್ದೇಶಕ ಜೊತೆಗೆ ಸತತ ತಾಲೀಮು ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಆರಂಭದಲ್ಲಿ ನಾಟಕವೊಂದರ ಡೈಲಾಗ್ ಮೂಲಕ ವೇದಿಕೆ ಏರಿದ ಮನ್ವೀತ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ನಾಯಕಿಯಾಗಿ ನಟಿಸುತ್ತಿರುವ ರೇಖಾದಾಸ್ ಪುತ್ರಿ ಶ್ರಾವ್ಯ ‘ ಚಿತ್ರದಲ್ಲಿ ಸರಸ್ವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ.  ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ ‘ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು. ನಾಯಕನ ತಾಯಿಯಾಗಿ ಸಂಗೀತಾ,  ನಾಯಕಿಯ ತಂದೆಯಾಗಿ ಬಲರಾಜವಾಡಿ ಹಾಗೂ ಕಾಮಿಡಿ ಕಿಲಾಡಿಗಳು ಸಂತು, ಕುರಿ ರಂಗ, ಬೌ ಬೌ ಜಯರಾಮ್, ಶಂಕರ್ ಭಟ್,  ಕಾತ್ಯಾಯಿನಿ, ಮಿಥಾಲಿ, ಪ್ರಕಾಶ್ ಶಣಯ್, ಚೇತನ್ ರಾಜ್, ಮಂಜು ಕವಿ, ನಾಗರತ್ನ, ಫ್ರೆಂಚ್ ಬಿರಿಯಾನಿ,ಫ್ರೆಂಚ್ ಬಿರಿಯಾನಿ ಖ್ಯಾತಿಯ ಜೂ.ಯೋಗಿಬಾಬು  ಮಹಂತೇಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಮಂಜು ಎರಡು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.

    ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ‘ ಪ್ರೇಮ ಗೀತೆಯೊಂದನ್ನು ಜನಪದ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆಯುತ್ತಿದೆ’ ಎಂದರೆ, ಛಾಯಾಗ್ರಾಹಕ ವಿದ್ಯಾನಾಗೇಶ್ ನೆರೆದಿದ್ದವರ ಆಶೀರ್ವಾದ ಬೇಡಿದರು. ನಿರ್ಮಾಪಕರ ಪರವಾಗಿ ವೇದಿಕೆಯಲ್ಲಿದ್ದ ಅನಿಲ್ ಮತ್ತು ಪ್ರದೀಪ್ ‘ ನಿರ್ದೇಶಕರು ಹೇಳಿದ್ದನ್ನು ಕೊಡುವುದೇ ನಮ್ಮ ಕರ್ತವ್ಯ’ ಎಂದರು.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕಲು ಮತ್ತೊಂದು ತಂತ್ರ ಹೆಣೆದ ‘ಜೊತೆ ಜೊತೆಯಲಿ’ ಟೀಮ್

    ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕಲು ಮತ್ತೊಂದು ತಂತ್ರ ಹೆಣೆದ ‘ಜೊತೆ ಜೊತೆಯಲಿ’ ಟೀಮ್

    ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಅನಿರುದ್ಧ ಮತ್ತು ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರ. ಸೀರಿಯಲ್ ಟೀಮ್ ಮತ್ತು ಅನಿರುದ್ಧ (Aniruddha) ಅವರ ಹೊಂದಾಣಿಕೆ ಕಾರಣದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಏನೆಲ್ಲ ಬದಲಾವಣೆ ಆಗಿವೆ. ಮೊದಲು ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಯಿತು. ಆ ಪಾತ್ರವನ್ನು ಕೊಲ್ಲುವ ಪ್ರಯತ್ನ ಮಾಡಲಾಯಿತು. ಹೊಸ ಕಲಾವಿದನನ್ನು ಆಯ್ಕೆ ಮಾಡಿ, ಹೈಡ್ರಾಮಾ ಮೂಲಕ ಅನಿರುದ್ಧ ಅವರ ಮುಖಕ್ಕೆ ಹರೀಶ್ ರಾಜ್  (Harish Raj) ತರಲಾಯಿತು.

    ಈ ಡ್ರಾಮಾ ಅಲ್ಲಿಗೆ ಮುಗಿಯಲಿಲ್ಲ. ಮನೆಯಲ್ಲಿ ಹಾಕಲಾಗಿದ್ದ ಆರ್ಯವರ್ಧನ್(ಅನಿರುದ್ಧ) ಫೋಟೋವನ್ನು ತಗೆಸಿ ಹಾಕಲು ಮತ್ತೊಂದು ತಂತ್ರವನ್ನು ಹೂಡಲಾಯಿತು. ಅಲ್ಲಿಗೆ ಮನೆಯಲ್ಲಿದ್ದ ಅನಿರುದ್ಧ ಫೋಟೋವನ್ನು ತೆಗೆಸುವ ಮೂಲಕ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಸಂಪೂರ್ಣ ಕೈ ಬಿಡಲಾಯಿತು. ಇದೀಗ ಆರ್ಯವರ್ಧನ್ ಅಂದಾಕ್ಷಣ ಥಟ್ಟನೆ ಅನಿರುದ್ಧ ನೆನಪಾಗುವುದರಿಂದ  ಆ ಹೆಸರನ್ನೂ ಕೈ ಬಿಡುವ ಮತ್ತೊಂದು ತಂತ್ರಕ್ಕೆ ಟೀಮ್ ಮೊರೆ ಹೋಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಆರ್ಯವರ್ಧನ್ (Aryavardhan) ಹೆಸರಿನ ಬದಲು ಈ ಪಾತ್ರಕ್ಕೆ ಸಂಜು ಎಂದು ಮರುನಾಮಕಾರಣ ಮಾಡಲಾಗುತ್ತಿದೆ. ಸ್ವತಃ ಆರ್ಯವರ್ಧನ್ ತಾಯಿಯೇ ಮನೆಯವರಿಗೆ ಇವನ ಮೂಲ ಹೆಸರು ಸಂಜು. ನನಗೆ ಸಂಜು ಹೆಸರು ತುಂಬಾ ಇಷ್ಟ. ಹಾಗಾಗಿ ಈತನಿಗೆ ಸಂಜು ಅಂತಾನೇ ಹೆಸರಿಟ್ಟಿದ್ದೆ ಎಂದು ಎಲ್ಲರಿಗೂ ಪರಿಚಯಿಸುತ್ತಾಳೆ. ಈ ಹೆಸರು ಕೇಳಿ ಅನು ಶಾಕ್ ಆಗುತ್ತಾಳೆ. ನಾನು ಇವನನ್ನು ಸಂಜು (Sanju) ಅಂತಾನೇ ಕರೀತೀನಿ ಎಂದು ತಾಯಿಯ ಮೂಲಕ ಹೇಳಿಸಿ, ಆರ್ಯವರ್ಧನ್ ಹೆಸರನ್ನೂ ಅಳಿಸಿ ಹಾಕುವಂತಹ ಪ್ರಯತ್ನವು ನಡೆದಿದೆಯಾ ಎನ್ನುವ ಅನುಮಾನ ಮೂಡದೇ ಇರದು.

    ಕೇವಲ ತಾಯಿ ಮಾತ್ರ ಸಂಜು ಅನ್ನುತ್ತಾಳಾ ಅಥವಾ ಇಡೀ ಕುಟುಂಬವೇ ಆರ್ಯವರ್ಧನನ್ನು ಸಂಜು ಎಂದು ಕರೆಯುತ್ತಾ ಗೊತ್ತಿಲ್ಲ. ಸದ್ಯಕ್ಕಂತೂ ಪ್ರೇಕ್ಷಕರಿಗೆ ಇಂಥದ್ದೊಂದು ಅನುಮಾನ ಮೂಡಿದ್ದು ಸುಳ್ಳಲ್ಲ. ಇದು ತಂತ್ರವಾ? ಅಥವಾ ಕಥೆಯಲ್ಲಿ ಮತ್ತೇನೋ ಹೇಳುವ ಪ್ರಯತ್ನವಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಕೆಟ್ಟ ಚಟದ ಬಗ್ಗೆ ರಣ್‍ಬೀರ್ ಓಪನ್ ಮಾತು

    ತನ್ನ ಕೆಟ್ಟ ಚಟದ ಬಗ್ಗೆ ರಣ್‍ಬೀರ್ ಓಪನ್ ಮಾತು

    ಮುಂಬೈ: ಬಾಲಿವುಡ್ ನಟ ರಣ್‍ಬೀರ್ ಕಪೂರ್ ‘ಸಂಜು’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿ ತನಗಿರುವ ಕೆಟ್ಟ ಚಟದ ಬಗ್ಗೆ ಹೇಳಿಕೊಂಡಿದ್ದಾರೆ.

    ಹೆಲ್ತ್ ಆಂಡ್ ನ್ಯೂಟ್ರಿಶೀಯನ್ ಗೆ ನೀಡಿದ ಸಂದರ್ಶನದಲ್ಲಿ ರಣ್‍ಬೀರ್ ತಮ್ಮ ಹೆಲ್ತ್ ಹಾಗೂ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ. ನಾನು ಫಿಟ್ ಇರುವುದ್ದನ್ನು ನನ್ನ ಅಮ್ಮನಿಂದ ಕಲಿತೆ. ಅವರು ನನಗೆ ಹಾಗೂ ನನ್ನ ಸಹೋದರಿಗೆ ಫಿಟ್ ಇರಲು ಪ್ರೇರೇಪಿಸುತ್ತಿದ್ದರು. ನಂತರ ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಹಾಗೂ ಜೀವನ ವಿಧಾನವನ್ನು ಬೆಳೆಸಿಕೊಂಡೆ ಎಂದರು.

    ಸಿನಿಮಾಗೆ ತಕ್ಕಂತೆ ನನ್ನ ಫಿಟ್ನೆಸ್ ಬದಲಾಗುತ್ತಿರುತ್ತದೆ. ಕೆಲವೊಂದು ಸಿನಿಮಾಗೆ ನಾನು ಆ ಪಾತ್ರಕ್ಕೆ ತಕ್ಕಂತೆ ಸಣ್ಣ ಹಾಗೂ ದಪ್ಪ ಆಗುತ್ತಿರಬೇಕು. ಈ ಹಿಂದೆ ‘ಜಗ್ಗಾ ಜಾಸೂಸ್’ ಸಿನಿಮಾದಲ್ಲಿ ನಾನು ಸ್ಕೂಲ್ ಹುಡುಗನ ಪಾತ್ರವನ್ನು ನಿರ್ವಹಿಸಿದೆ. ಆ ಪಾತ್ರಕ್ಕಾಗಿ ನಾನು ತುಂಬಾ ಸಣ್ಣ ಆಗಬೇಕಿತ್ತು ಎಂದು ರಣ್‍ಬೀರ್ ವಿವರಿಸಿದರು.

    ನನಗೆ ಮದ್ಯ ಕುಡಿಯುವ ಚಟ ಇದೆ. ಮದ್ಯ ಸೇವಿಸಿ ನನ್ನ ಕುಟುಂಬದವರ ಮೇಲಾದ ಪರಿಣಾಮವನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಎಚ್ಚರದಿಂದ ಇರುತ್ತೇನೆ. ನಾನು ಶೂಟಿಂಗ್ ಹಾಗೂ ಕೆಲಸದಲ್ಲಿದ್ದಾಗ ಮಾತ್ರ ಮದ್ಯ ಸೇವಿಸಲ್ಲ ಎಂದು ಹೇಳಿದರು.

    ನಾನು ಕುಡಿತಕ್ಕೆ ದಾಸನಾಗಿಲ್ಲ. ಆದರೆ ನಾನು ತುಂಬಾ ಮದ್ಯ ಸೇವಿಸುತ್ತೇನೆ. ನಾನು ಕುಡಿಯುವುದನ್ನು ಶುರು ಮಾಡಿದರೆ, ನಿಲ್ಲಿಸುವುದೇ ಇಲ್ಲ. ಬಹುಶಃ ಇದು ನನ್ನ ರಕ್ತದಲ್ಲೇ ಇದೆ ಎಂದು ಅನಿಸುತ್ತದೆ. ನನ್ನ ಕುಟುಂಬದ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಕುಡಿಯುವ ಅಭ್ಯಾಸವಿದೆ ಎಂದು ರಣ್‍ಬೀರ್ ಹೇಳಿದರು.

  • ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗ ಈ ಚಿತ್ರ ‘ಬಾಹುಬಲಿ- 2’ ಚಿತ್ರದ ಒಂದು ದಾಖಲೆಯನ್ನು ಮುರಿದು ಸೂಪರ್ ಹಿಟ್ ಆಗಿ ಓಡುತ್ತಿದೆ.

    ಸಂಜು ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ 120.06 ಕೋಟಿ ರೂ. ಗಳಿಸಿದೆ. ಸಲ್ಮಾನ್ ಖಾನ್ ನಟಿಸಿದ ‘ರೇಸ್-3’ ಚಿತ್ರ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ‘ಪದ್ಮಾವತ್’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಸಂಜು ಚಿತ್ರ ಮುರಿದಿದೆ.

    ರೇಸ್-3 ಬಿಡುಗಡೆಯಾದ ಮೊದಲನೇ ವಾರದಲ್ಲಿ 106.47 ಕೋಟಿ ರೂ. ಗಳಿಸಿದ್ದು, ಪದ್ಮಾವತ್ ಚಿತ್ರ ಬಿಡುಗಡೆಯಾಗಿ ಮೊದಲ ವಾರದಲ್ಲಿ 114 ಕೋಟಿ ರೂ. ಗಳಿಸಿತ್ತು. ಈಗ ಸಂಜು ಚಿತ್ರ ಈ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

    “ಸಂಜು ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿದ್ದಾರೆ. ಶುಕ್ರವಾರ 34.75 ಕೋಟಿ ರೂ., ಶನಿವಾರ 38.60 ಕೋಟಿ ರೂ. ಗಳಿಸಿದರೆ ಭಾನುವಾರ 46.71 ಕೋಟಿ ರೂ. ಗಳಿಸಿ ಒಟ್ಟು 120.06 ಕೋಟಿ ರೂ. ಗಳಿಸಿದೆ ಎಂದು ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

    ತರಣ್ ಆದರ್ಶ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ “ಸಂಜು ಚಿತ್ರ ಮೂರನೇ ದಿನದಲ್ಲಿ ಅತಿ ಹೆಚ್ಚು ಹಣಗಳಿಸಿ ಇತಿಹಾಸವನ್ನು ಬರೆದಿದೆ. ಅಲ್ಲದೇ ಬಾಹುಬಲಿ-2 ಚಿತ್ರದ ದಾಖಲೆಗಳನ್ನು ಮುರಿದಿದೆ. ಬಾಹುಬಲಿ-2 ಹಿಂದಿ ಚಿತ್ರ ಮೂರನೇ ದಿನ 46.50 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಸಂಜು ಮೂರನೇ ದಿನ 46.71 ಕೋಟಿ ರೂ. ಗಳಿಸಿ ಭಾರತದ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಟ ರಣ್‍ಬೀರ್ ಕಪೂರ್, ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದಾರೆ. ರಣ್‍ಬೀರ್ ಜೊತೆ ಸೋನಂ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ರಣ್‍ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!

    ರಣ್‍ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!

    ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್ ಜೀವನಾಧಾರಿತವಾದ ಈ ಚಿತ್ರದಲ್ಲಿ ಸಂಜಯ್ ಪಾತ್ರ ಮಾಡಿರುವ ರಣ್‍ಬೀರ್ ಕಪೂರ್ ನಟನೆಯ ಬಗ್ಗೆ ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದರಲ್ಲಿನ ಮುಖ್ಯವಾದ ಇತರೆ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

    ಅದರಲ್ಲಿಯೂ ವಿಶೇಷವಾಗಿ ಸಂಜಯ್ ದತ್ ತಂಗಿ ಪ್ರಿಯಾ ಪಾತ್ರವನ್ನೂ ಕೂಡಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಿರುವಾಕೆ ಅದಿತಿ ಸಿಯಾ. ರಣ್‍ಬೀರ್ ಕಪೂರ್ ಜೊತೆ ನಟಿಸಿದ್ದಕ್ಕಾಗಿ ಖುಷಿಗೊಂಡಿರುವ ಆದಿತಿ ಆತನ ನಟನೆ ಮತ್ತು ವ್ಯಕ್ತಿತ್ವವನ್ನು ಕೊಂಡಾಡಿದ್ದಾಳೆ!

    ತಾನೋರ್ವ ಸ್ಟಾರ್ ನಟ ಎಂಬ ಸಣ್ಣ ಅಹಂ ಇಲ್ಲದೆ ಓರ್ವ ಕಲಾವಿದನಾಗಿ ಮಾತ್ರವೇ ವರ್ತಿಸುವ ರಣ್‍ಬೀರ್ ಒಬ್ಬ ಒಳ್ಳೆತನದ ವ್ಯಕ್ತಿ ಅಂದಿರುವ ಅದಿತಿ, ಆತ ಒನ್ ಟೇಕ್ ಸ್ಪೆಷಲಿಸ್ಟ್ ಅಂತಲೂ ಹೇಳಿಕೊಂಡಿದ್ದಾಳೆ. ರಣ್‍ಬೀರ್ ಪ್ರತೀ ದೃಶ್ಯಗಳನ್ನೂ ಒಂದೇ ಟೇಕಿಗೆ ಓಕೆ ಮಾಡಿಸಿಕೊಳ್ಳುತ್ತಿದ್ದುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ.

    ಸಂಜಯ್ ದತ್ ತಂಗಿ ಪ್ರಿಯಾ ಪಾತ್ರಕ್ಕೆ ನಿರ್ದೇಶಕರು ಸಾಕಷ್ಟು ಹುಡುಕಾಟ ನಡೆಸಿ ಕಡೆಗೆ ಅದಿತಿಯನ್ನು ಆಯ್ಕೆ ಮಾಡಿದ್ದರು. ಆದರೆ ಕಥೆಯನ್ನಷ್ಟೇ ಕೇಳಿಕೊಂಡಿದ್ದ ಅದಿತಿ ಪ್ರಿಯಾಳ ಹಾವಭಾವಗಳನ್ನು ನೇರವಾಗಿ ಅಭ್ಯಸಿಸಿರಲಿಲ್ಲವಂತೆ. ಆದರೂ ಕೂಡಾ ಎಲ್ಲರೂ ಮೆಚ್ಚುವಂತೆ ಆ ಪಾತ್ರವನ್ನು ಮಾಡಲು ರಣ್‍ಬೀರ್ ಕಪೂರ್ ಕೊಟ್ಟ ಸಲಹೆಗಳೇ ಕಾರಣ ಎಂದೂ ಅದಿತಿ ಹೇಳಿಕೊಂಡಿದ್ದಾಳೆ.

  • ಸಂಜಯ್ ದತ್ 308 ಹುಡ್ಗೀರನ್ನು ಬಲೆಗೆ ಬೀಳಿಸಿಕೊಂಡಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಹಿರಾನಿ

    ಸಂಜಯ್ ದತ್ 308 ಹುಡ್ಗೀರನ್ನು ಬಲೆಗೆ ಬೀಳಿಸಿಕೊಂಡಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಹಿರಾನಿ

    ಮುಂಬೈ: ರಾಜ್‍ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಚಿತ್ರದ ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ನಟ ಸಂಜಯ್ ದತ್ ರವರ ನಿಜ ಜೀವನ ಚರ್ಚೆಯಲ್ಲಿದೆ.

    ಇತ್ತೀಚೆಗೆ ಸಂಜು ಚಿತ್ರದ ನಿರ್ದೇಶಕ ಸಂಜು ಬಾಬಾ ತಮ್ಮ ನಿಜ ಜೀವನದಲ್ಲಿ ಸುಮಾರು 308 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರೆಂಬ ರಹಸ್ಯ ಟ್ರೇಲರ್ ನಲ್ಲಿ ರಿವೀಲ್ ಆಗಿತ್ತು. ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಹಿರಾನಿ, ಸಂಜಯ್ ದತ್ ಹೇಗೆ ಯುವತಿಯರನ್ನು ಬಲೆಗೆ ಬೀಸಿಕೊಳ್ಳುತ್ತಿದ್ದರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಸಂಜಯ್ ದತ್ ಹುಡುಗಿಯರನ್ನ ತನ್ನ ತಾಯಿಯ ಸಮಾಧಿಯೆಂದು ಇನ್ಯಾರದೊ ಸಮಾಧಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಾನು ನನ್ನ ತಾಯಿಯನ್ನು ನಿನಗೆ ಪರಿಚಯಿಸಲು ಇಲ್ಲಿಗೆ ಕರೆ ತಂದಿದ್ದೇನೆ. ಹೀಗೆ ಭಾವನಾತ್ಮಕ ಮಾತುಗಳನ್ನಾಡುವ ಮೂಲಕ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಹಿರಾನಿ ಸತ್ಯವೊಂದನ್ನು ತೆರೆದಿಟ್ಟಿದ್ದಾರೆ.

    ಇದೇ ಸಂದರ್ಶನದಲ್ಲಿ ಹಿರಾನಿ, ಸಂಜಯ್ ದತ್‍ಗೆ ಸಂಬಂಧಪಟ್ಟ ಇನ್ನೊಂದು ರಹಸ್ಯವನ್ನ ಹೊರಹಾಕಿದ್ದಾರೆ. ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಬ್ರೇಕಪ್ ಆದ ನಂತರ ಸಂಜು ತನ್ನ ಸ್ನೇಹಿತನ ಕಾರನ್ನು ತೆಗೆದುಕೊಂಡು ತನ್ನ ಎಕ್ಸ್ ಗೆಳೆತಿಯ ಮನೆ ಹೊರಗೆ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದರು. ಅದು ತನ್ನ ಗೆಳತಿಯ ಹೊಸ ಬಾಯ್ ಫ್ರೆಂಡ್‍ನದ್ದಾಗಿದ್ದು ಎರಡು ಕಾರುಗಳು ಹಾನಿಗೊಳಗಾಗಿದ್ದವು.

    ಜೂನ್ 29 ಕ್ಕೆ ಸಂಜು ಚಿತ್ರ ಬಿಡುಗಡೆಯಾಗಲಿದ್ದು, ಸಂಜಯ್ ದತ್‍ರವರ ಜೀವನ ಚರಿತ್ರೆಗೆ ಸಂಬಂಧಪಟ್ಟ ರಹಸ್ಯಗಳು ಈ ಸಂಜು ಚಿತ್ರದಲ್ಲಿ ನಿಮಗೆ ಕಾಣಲು ಸಿಗುತ್ತದೆ. ಚಲನಚಿತ್ರದಲ್ಲಿ ರಣ್‍ಬೀರ್ ಕಪೂರ್ ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದು, ಜೊತೆ ಸೋನಮ್ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಸಂಜಯ್ ಜೈಲಿನ ನೆನಪು ತೆರೆದಿಟ್ಟ ಸಂಜು ಸಿನಿಮಾ ಪೋಸ್ಟರ್

    ಸಂಜಯ್ ಜೈಲಿನ ನೆನಪು ತೆರೆದಿಟ್ಟ ಸಂಜು ಸಿನಿಮಾ ಪೋಸ್ಟರ್

    ನವದೆಹಲಿ: ಚಿತ್ರನಟ ಸಂಜಯ್ ದತ್ತಾ ಜೀವನಾಧಾರಿತ ಸಂಜು ಸಿನಿಮಾ ನಿರ್ಮಾಗೊಳ್ಳುತ್ತಿದೆ. ಇದರಲ್ಲಿ ಟ್ಯಾಲೆಂಟೆಡ್ ಸ್ಟಾರ್ ಖ್ಯಾತಿಯ ನಟ ರಣಬೀರ್ ಕಪೂರ್ ಅವರು ದತ್ತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸಂಜಯ್ ದತ್ತಾ ಅವರ ಖಾಸಗಿ ಹಾಗೂ ವೃತ್ತಿ ಜೀವನ ತಿಳಿಸಲು ಸಂಜು ಸಿನಿಮಾ ತಂಡ ಮುಂದಾಗಿದೆ. ಹೀಗಾಗಿ ಸಂಜಯ್ ಜೈಲಿನ ದಿನಗಳ ಪೋಸ್ಟರ್ ಹಾಗೂ ಟ್ರೇಲರ್ ಅನ್ನು ನಿರ್ದೇಶಕ ರಾಜ್‍ಕುಮಾರ ಹಿರಾನಿ ಬಿಡುಗಡೆ ಮಾಡಿದ್ದಾರೆ. ಇವು ದತ್ತಾ ಪುಣೆಯ ಯರವಾಡ ಜೈಲಿನಲ್ಲಿರುವಾಗಿನ ದೃಶ್ಯಗಳನ್ನು ಬಿಂಬಿಸುವಂತಿವೆ.

    ಇತ್ತೀಚೆಗೆ ಬಿಡುಗಡೆ ಮಾಡಲಾದ ಟ್ರೇಲರ್‍ಗಳಲ್ಲಿ ಸಂಜಯ್ ದತ್ತ ಅವರ ಪ್ರತಿಬಿಂಬದಂತೆ ರಣಬೀರ್ ಕಾಣುತ್ತಿದ್ದಾರೆ. ಸಿನಿಮಾದ ಪ್ರತಿ ಹಂತದಲ್ಲಿಯೂ ಸಂಜಯ್ ಅವರನ್ನೇ ಹೋಲುವ ಅವರು, ನಟನೆ, ಕೇಶವಿನ್ಯಾಸ, ಉಡುಗೆಯಿಂದ ಪ್ರೇಕ್ಷಕರಲ್ಲಿ ಸಂಜಯ್ ಅವರನ್ನೇ ಹೋಲುವಂತಿದೆ.

    ಈ ಸಿನಿಮಾದಲ್ಲಿ ಸೋನಂ ಕಪೂರ್, ದಿಯಾ ಮಿರ್ಜಾ, ಪರೇಶ್ ರಾವಲ್, ಮನೀಶಾ ಕೊಯಿರಾಲಾ, ಅನುಷ್ಕಾ ಶರ್ಮಾ, ಕರಿಷ್ಮಾ ತಾನ್ನಾ, ಜಿಮ್ ಸರ್ಬ್ ಮೊದಲಾದ ತಾರಾಗಣ ಕಾಣಿಸಿಕೊಳ್ಳಲಿದೆ. ಚಿತ್ರವು ಈ ವರ್ಷದ ಜೂನ್ 29 ರಂದು ಬಿಡುಗಡೆಯಾಗಲಿದೆ.